ಆರ್ಟ್‌ ಥೀಫ್ ಧಾರಾವಹಿ -೫

ಅದು ಅನ್ನೆ ಕ್ಯಾಥರಿನ್‌ಳ ಲಂಕೃತ ತುಪ್ಪಟ ಹಾಸಿಗೆಯ ಮಂಚ. ಕೊಂಕಿಸಿದ ಕುತ್ತಿಗೆ, ತುಸು ತಿರುಗಿಸಿದ ಭುಜ, ನಗ್ನ ತೋಳುಗಳ ತನ್ನ ರಾತ್ರಿ ಪಾರ್ಟಿಯ ಉಡುಪಿನಲ್ಲಿದ್ದಾಳೆ ಚೆಲುವೆ. ಆಕೆ ಪೂಸಿದ ಸುಂಗಂಧವು ಗಾಳಿಯಲ್ಲಿ ಪಸರಿಸಿತ್ತುಘಿ. ಚೆರ್ರಿ ಕೆಂಪಿನ ಇಳಿ ಪರದೆಯ ಮಂಚದ ಮರೆಯಿಂದ ‘ ಇದು ನನ್ನದೇ ಸಾಮ್ರಾಜ್ಯ’ ಎಂದು ಗಾಳಿಯಲ್ಲಿ ಮುತ್ತು ಹಾರಿತ್ತಿದ್ದಾಳೆ. ಆ ಮುತ್ತನ್ನು ಹಿಡಿದುಕೊಳ್ಳುವ ಸ್ಥಳದಲ್ಲಿ ನಿಂತು ವೀಡಿಯೋ ಮಾಡುತ್ತಿದ್ದಾನೆ ಪ್ರಿಯತಮ ಬ್ರೈಟ್‌ವೈಸರ್. ಆ ಪ್ರೇಮಿಗಳು ದುಬಾರಿ ಶಯ್ಯಾಗೃಹದಲ್ಲಿ ಇಬ್ಬರೇ ಇದ್ದರು. ಆಡಂ-ಈವ್ ಪ್ರತಿಮೆಯನ್ನು ರೂಬೆನ್ ಮ್ಯೂಸಿಯಂನಿಂದ ಎಗರಸಿ ತಂದ ಕಾಲ ಅದು. ಜತೆಯಾಗಿದ್ದ ಆ ಐದು ವರ್ಷ ಇವರುಗಳ ಇಂಥ ಪ್ರಣಯ ಸನ್ನಿವೇಶ ಸಾಮಾನ್ಯವಾಗಿತ್ತು. ಐದಡಿ ಮೂರು ಇಂಚು ಎತ್ತರದ ವಯ್ಯಾರದ ಅನ್ನೆ ಕ್ಯಾಥರಿನ್ ನಕ್ಕಾಗ ಗುಳಿ ಬೀಳುವ ಕೆನ್ನೆ, ದೋಣಿ ಗಲ್ಲದ ನುಣುಪು ಆಕೆಯ ಅನನ್ಯತೆ. ಮುಂಗುರುಳು ಹುಬ್ಬಿನಿಂದ ಇಳಿದು ಓಲಾಡುತ್ತಿತ್ತು. ಖಾಸಗೀ ಸನ್ನಿವೇಶದಲ್ಲಿ ಆಕೆಯನ್ನು ‘ನೇನಾ’ ಎಂದು ‘ಸ್ಟೆಪ್’ ಆತನನ್ನು ಮುದ್ದಿನಿಂದ ಪರಸ್ಪರ ಕರೆದುಕೊಳ್ಳುತ್ತಿದ್ದರೂ, ಸಾರ್ವಜನಿಕವಾಗಿ ಮಾತ್ರ ಅನ್ನೆಕ್ಯಾತರೀನ್, ಬ್ರೈಟ್‌ವೈಸರ್ ಎಂದೇ ಪರಸ್ಪರ ಪರಿಚಯಿಸುತ್ತಿದ್ದರು. ಹಾಗೆ ಕರೆದುಕೊಳ್ಳುವಲ್ಲಿ ಒಂದು ಬಗೆಯ ಪ್ರಣಯದ ಖುಷಿ ಬಿಟ್ಟರೆ ಬೇರೇನೂ ತರ್ಕ ಇರಲಿಲ್ಲ ಎಂದು ಆತನೆ ಒಮ್ಮೆ ಹೇಳಿದ್ದಾನೆ. ‘ಫೋಟೊ ಹೇಗೆ ಬಂತು, ವೀಡಿಯೊ ಚೆನ್ನಾಗಿಲ್ವ ಸ್ಟೆಪ್..’ ಎಂದು ಆತನ ಭುಜದ ಮೇಲೆ ಭಾರ ಹಾಕಿ ವೀಡಿಯೋ ನೋಡಿದ ಅನ್ನೆ, ‘‘ಇದಕ್ಕೆ ಕನಿಷ್ಠ ನೂರು ಫ್ರಾನ್ಸ್ ರೊಕ್ಕ ಖಾತೆಗೆ ಬೀಳುತ್ತ ನೋಡು’’ ಎಂದಳು. ನಮ್ಮ ಖಾಸಗೀ ಶಯ್ಯಾಗ್ರಹ ಪ್ರವೇಶದ ವೀಡಿಯೋಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ೨೦ ಡಾಲರ್ಸ್‌ ದಕ್ಕುತ್ತದೆ ಅಲ್ಲವೇ ಎಂದು, ‘ಈಗಲೇ ಕೊಡು’ ಎಂದು ಆತನ ಎದುರು ಕೈ ಚಾಚಿ ತಮಾಶೆ ಮಾಡಿದಳು. ‘‘ ಖಂಡಿತ. ಈ ಸನ್ನಿವೇಶವು ಯಾರಿಗಾದರೂ ದುಬಾರಿಯೇ’ ಎಂದು ವೀಡಿಯೋ ಮಾಡುತ್ತಲೇ ಬ್ರೈಟ್‌ವೈಸರ್ ಹೇಳಿದ. ಹಾಗೆಯೇ ಕ್ಯಾಮೆರಾದ ದಿಕ್ಕನ್ನು ಬೇರೆ ದಿಕಿಗೆ ಫೋಕಸ್ ಮಾಡಿ, ಹಾಸಿಗೆಯ ಇನ್ನೊಂದು ಗೋಡೆಯಲ್ಲಿರುವ ೧೭ನೇ ಶತಮಾನದ ಫ್ಲಾಮಿಶ್ ಲ್ಯಾಂಡ್ ಸ್ಕೇಪಿಗೆ ಎದುರಾಗಿ ನಿಲ್ಲಲು ಆಕೆಗೆ ಹೇಳಿದ. ಕೈ ಹಿಡಿದು ಸೆಳೆದುಕೊಂಡು ನಿಲ್ಲಿಸಿ ಶೂಟಿಂಗ್ ಮುಂದುವರಿಸುತ್ತಾನೆ. ‘‘ಹಾಗೆ ಮುಂದಕ್ಕೆ ಬಾಗು, ಗಾಳಿಯಲ್ಲೇಕೆ, ನಿನಗೆ, ನಿಜ ಮುತ್ತು ಕೊಡುವೆ’’ಎನ್ನುತ್ತಾಳೆ ಅನ್ನೆಘಿ. ಆಗ ಗೋಡೆಯ ಮೇಲಿನ ಚಿತ್ತಾರಗಳು, ಅವರಿಬ್ಬರ ನಡುವವಿನ ಪ್ರಣಯ ಪ್ರಕ್ರಿಯೆ ಒಂದಕ್ಕೊಂದು ಕನ್ನಡಿಯಾಗುತ್ತವೆ. ಆತ ಕ್ಯಾಮೆರಾವನ್ನು ಪಕ್ಕದಲ್ಲಿ ಇಟ್ಟು ಮುಖವನ್ನು ಮುಂದ ಚಾಚಿ ಆಕೆಯ ತುಟಿಯ ಹತ್ತಿರ ತರುತ್ತಾನೆ. ಹಾಗೆ ನೋಡಿದರೆ, ಆರಂಭದಿಂದಲೂ ಬ್ರೈಟ್‌ವೈಸರ್‌ಗೆ ಸುಂದರ ಚಿತ್ರದ ಮೇಲಿನ ಮೋಹ ಅಥವಾ ಅನ್ನೆಯೊಡನೆ ಇದ್ದ ವ್ಯಾಮೋಹದಲ್ಲಿ ಹೆಚ್ಚೇನೂ ವ್ಯತ್ಯಾಸ ಇರಲಿಲ್ಲಘಿ. ಯಾವತ್ತಿಗೂ ಒಂದು ಸುಂದರ ಚಿತ್ರವನ್ನು ನೋಡಿದಾಗ, ಅದರೊಳಗಿನ ಬಣ್ಣಘಿ, ಓರೆ ಕೋರೆಗಳು ಒಂದಾಗಿ ಒಳಕೆ ಪ್ರವಹಿಸಿ ಸಂವೇದನೆಯಾಗಿ ಇಡೀ ನರ ನಾಡಿಯ ವ್ಯಾಪಿಸಿ ಕೊನೆಗೆ ಚರ್ಮದ ರಂದ್ರದ ತನಕ ಜಾಗೃತಗೊಳಿಸುತ್ತಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಚಿತ್ರವು ಲಘುವಾದ ವಿದ್ಯುತ್ ರೂಪದಲ್ಲಿ ಆತನಲ್ಲಿ ಸಂಚರಿಸಿ, ಒಳಗಿನ ಲಹರಿಯನ್ನು ಬಡಿದೆಬ್ಬಿಸಿದಂತೆ. ಅದೆಲ್ಲ ಹೇಗೆಂದರೆ.. ಫ್ರೆಂಚ್ ಪ್ರೇಮ ಕಾವ್ಯದಲ್ಲಿ ‘ಕಪ್ ಡೇ ಕ್ವಾಯರ್’ ಎಂದು ಬಣ್ಣಿಸಿದಂತೆ. ಅಕ್ಷರ ಶಃ ಹೃದಯ ಹುಚ್ಚೆದ್ದು ಕುಣಿದು ಅದೇ ಹುಚ್ಚು ಆತನಿಗೆ,‘ ಯಾವುದೇ ಬೆಲೆ ತೆತ್ತಾದರೂ ಈ ಚಿತ್ರ ನಿನ್ನದಾಗಬೇಕು’’ ಎಂಬ ನಿರ್ಧಾರಕ್ಕೆ ಪ್ರೇರೇಪಿಸಿತು. ಇದೆಲ್ಲ ಸಂವೇದನೆಗಳ ಹಿನ್ನೆಲೆಯಲ್ಲಿ ಆತನ ಹೈಸ್ಕೂಲ್ ದಿನಗಳು, ಆಗ ಆತನಿಗಿದ್ದ ಸೀಮಿತ ಸ್ನೇಹಿತ ವಲಯದ ಪ್ರಾಚ್ಚಯ ವ್ಯಾಮೋಹಿ ಸಹಪಾಠಿಗಳು ಕಾರಣರಾಗಿದ್ದರು. ೧೯೯೧ರಲ್ಲಿ ಅಂಥ ಶ್ರೀಮಂತ ಸ್ನೇಹಿತನೊಬ್ಬ ಕರೆದುಕೊಂಡು ಹೋಗಿದ್ದ ಚಳಿಗಾಲದ ಬರ್ತ್ ಡೇ ಪಾರ್ಟಿಯಲ್ಲಿ ಅನ್ನೆ- ಕ್ಯಾಥರೀನ್ ಎಂಬ ಸುಂದರಿಯ ಮೊದಲ ದರ್ಶನವಾಯಿತು. ಈತನಂತೆ ಆಲ್‌ಸೇಶನ್ ಕುಟುಂಬಿಕ ಹಿನ್ನೆಲೆಯಲ್ಲಿ ಜನಿಸಿದ್ದ ಆಕೆ ಈತನಿಗಿಂತ ನಾಲ್ಕಾರು ತಿಂಗಳಿಗಷ್ಟೇ ಕಿರಿಯಳಾಗಿದ್ದಳು. ಆತನ ಕಣ್ಣಿಗೆ ಮೊದಲ ನೋಟದಲ್ಲೇ ಆಕೆಯು ಪರಮ ಸುಂದರಿಯಾಗಿ ಕಂಡು, ಜೀವನದಲ್ಲಿ ಮೊದಲ ಬಾರಿ ಹೃದಯ ವೀಣೆ ಜೋರಾಗಿ ಮಿಡಿಯಿತು. ಆ ಮೊದಲು ಆತನಿಗೆ ಹೇಳಿಕೊಳ್ಳುವಂತ ಯಾವುದೇ ಸ್ನೇಹಿತೆಯೂ ಇರಲಿಲ್ಲಘಿ, ‘ಆ ಕ್ಷಣದಲ್ಲೇ ಆಕೆ ನನ್ನವಳು ಎಂದು ಅನ್ನಿಸ ತೊಡಗಿತು’’ ಎಂದು ಹೇಳಿಕೊಂಡಿದ್ದಾನೆ. ಅನ್ನೆ ಕೂಡ ಬ್ರೈಟ್‌ವೈಸರ್‌ನ ಪ್ರೇಮಿಸತೊಡಗಿದಳು. ಆಕೆಯನ್ನು ಆ ಹೊತ್ತಿನಲ್ಲಿ ಬಲ್ಲ ಎಲ್ಲರೂ, ‘ಇದೇನಿದು ಹುಚ್ಚು, ಇವಳಿಗೆ ಬೇಕಿತ್ತಘಿಈ ಬೇಕಾಬಿಟ್ಟಿ ಸಂಬಂದ’ ಎನ್ನುತ್ತಾರೆ. ಆದರೆ, ‘‘ಆಕೆ ಕೂಡ ಆಗಲೇ ಆತನ ಪ್ರೇಮ ಪಾಶದಲ್ಲಿ ಸಂಪೂರ್ಣ ಬಿದ್ದುಘಿ, ಆತನಿಗೆ ಒಲಿದುಹೋದಳು’’ ಎಂದು ಅವರ ಆಪ್ತನೊಬ್ಬ ಹೇಳುತ್ತಾನೆ. ಮುಂದೆ ಆಕೆಯ ಅಟೋರ್ನಿಯಾಗಿ ಆಕೆಯನ್ನುಘಿ, ಆಕೆಯ ತುಮುಲ ಒಳತೋಟಿಗಳನ್ನುಘಿ, ಭಾಗಿಯಾದ ಪ್ರಕರಣದ ಆಳ ವಿಸ್ತಾರ ಅರಿತ ಎರಿಕ್ ಬ್ರೌನ್ ‘‘ ಹಾಗೆ ನೋಡಿದರೆ, ಆಕೆ ಯಾವತ್ತೂಘಿ, ಯಾವುದನ್ನೂ ಅರೆ ಮನಸ್ಸಿನಿಂದ ಮಾಡಿದವಳೇ ಅಲ್ಲ’’ ಅನ್ನುತ್ತಾನೆ. ತನಗೆ ಸರಿ ಅನ್ನಿಸಿದ ಅಂದರೆ, ಹಿಂದೆ ಮುಂದಿನ ಯಾವುದೇ ಯೋಚನೆಯೂ ಇಲ್ಲದೆ, ಆತನೊಂದಿಗೆ ಪ್ರಣಯದಲ್ಲಿ ತೊಡಗುವ ಹುಚ್ಚು ಹುಡುಗಿಯಾಗಿದ್ದ ಆಕೆ, ಬ್ರೈಟ್‌ವೈಸರ್ ಜತೆ ಸಂಪೂರ್ಣ ಕರಗಿದಳು ಎಂದು ಇಬ್ಬರನ್ನೂ ಬಲ್ಲ ಬ್ರೌನ್ ಹೇಳುತ್ತಾನೆ. ಇಬ್ಬರ ಮೊದಲ ಬೇಟಿ ಹೊತ್ತಲ್ಲಿಘಿ, ಆಗಿನ್ನೂ ಬ್ರೈಟ್‌ವೈಸರ್ ತನ್ನ ತಾಯಿ ತಂದೆಯೊಂದಿಗೆ ಚಿಕ್ಕಂದಿನ ಬಂಗಲೆಯಲ್ಲೇ ವಾಸಿಸುತ್ತಿದ್ದಘಿ. ‘ಮೇಲ್ಮಧ್ಯಮ ವರ್ಗದ ಆ ಮನೆ, ಸುಸಜ್ಜಿತವಾಗಿಯೇ ಇತ್ತು’ ಎಂದು ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಅನ್ನೇ ಕ್ಯಾಥರೀನ್‌ಳೆ ಹೇಳಿದ್ದಾಳೆ. ಹಾಗೆ ನೋಡಿದರೆ ಆಕೆಯದು ಅತ್ಯಂತ ಸಾಧಾರಣ ಹಿನ್ನೆಲೆ. ಅನ್ನೇ ಕ್ಯಾಥರೀನ್ ತಂದೆ ಜೊಸೆಫ್ ಕ್ಲೈನ್‌ಕ್ಲಾಸ್ ವೃತ್ತಿಪರ ಬಾಣಸಿಗನಾಗಿದ್ದರೆ, ತಾಯಿ ಜಿನೆಟ್ ಮುರಿಂಗರ್ ಓರ್ವ ಆಯಾ. ದಂಪತಿಯ ಮೂವರು ಮಕ್ಕಳಲ್ಲಿ ಅನ್ನೇ ಕ್ಯಾಥರೀನ್ ಹಿರಿಯಳಾಗಿದ್ದಳು. ಇವರಿಗೆ ಹೋಲಿಸಿದರೆ, ಬ್ರೈಟ್‌ವೈಸರ್ ಕುಟುಂಬ ಆಗ, ಕೆಳಮಹಡಿಯಲ್ಲಿ ಕಾಲುಚಾಚಿ ಮಲಗುವಷ್ಟು ವಿಶಾಲ ಬೋಟ್ ಒಂದರ ಮಾಲೀಕರು. ಸ್ವಜರ್‌ಲ್ಯಾಂಡ್ ಹಾಗು ಫ್ರಾನ್ಸ್ ನಡುವಿನಲ್ಲಿ ಗಮನ ಸೆಳೆಯುವ ಸ್ವಾ ಬ್ಲೇಡ್ ಪರ್ವತ ಶ್ರೇಣಿಯನ್ನು ಆವರಿಸಿರುವ ಜಿನೇವಾ ಸರೋವರದಲ್ಲಿ ಇಡೀ ಕುಟಂಬ ಬೇಸಿಗೆ ರಜೆಯ ವಿಹಾರ ನಡೆಸುವಷ್ಟು ಶ್ರೀಮಂತ ಹಿನ್ನೆಲೆ. ಅಷ್ಟೇ ಅಲ್ಲ ಬ್ರೈಟ್‌ವೈಸರ್ ಕುಟುಂಬ ಪಕ್ಕದ ಅಲ್ಪಾ ಪರ್ವತ ಶ್ರೇಣಿಯಲ್ಲಿ ಜಾರು ಬಂಡಿಯ ಆಟದಲ್ಲೂ ತೊಡಗುತ್ತಿತ್ತುಘಿ. ಚಳಿಗಾಲ ಬಂತೆಂದರೆ, ವರ್ಷಕ್ಕೆ ಒಂದೆರಡು ಬಾರಿಯಾದರೂ ಅಲ್‌ಸೇಶಿಯನ್ ಗುಡ್ಡದಲ್ಲಿ ಚಾರಣ ಕೈಗೊಂಡು ಅಲ್ಲಿನ ಸಾಂಪ್ರದಾಯಿಕ ಹೊಟೇಲುಗಳಲ್ಲಿ ಕುಟುಂಬ ಸಮೇತ ಉಂಡು, ಖುಷಯಾಗಿ ಬರುವುದಿತ್ತುಘಿ. ಆ ದಿನಗಳ್ಲಲಿ ಬ್ರೈಟ್ ವೈಸರ್ ಟೆನ್ನಿಸ್ ಹಾಗೂ ಸ್ಕೂಬಾ ಡ್ರೈವಿಂಗ್ ಕ್ಲಾಸುಗಳಿಗೆ ಹೋಗಿ, ಒಂದಿಷ್ಟು ಕಲಿತಿದ್ದಾನೆ. ಅದರ ಒಂದೆರಡು ಸರ್ಟಿಫಿಕೆಟ್ ಕೂಡ ಆತನಲ್ಲಿ ಇದೆ. ಇದಾವುದೂ ಅನ್ನೆ ಕ್ಯಾಥರೀನ್ ಜೀವನದಲ್ಲಿ ಸಾಧ್ಯವೇ ಇರಲಿಲ್ಲಘಿ. ಅದೇ ಕಾರಣಕ್ಕೆ ಬ್ರೈಟ್‌ವೈಸರ್ ಸಾಂಗತ್ಯ ಅಂದರೆ, ಆಕೆಗೆ ಎಲ್ಲಿಲ್ಲದ ಉನ್ನತಾನುಭವ. ಈ ವ್ಯಕ್ತಿಯ ಪರಿಚಯಕ್ಕೆ ಮುನ್ನ ಅನ್ನೆಯ ಜೀವನ ಎಂದರೆ, ಸಂಪೂರ್ಣ ನೀರಸ ಎಂದು ಬ್ರೌನ್ ಹೇಳುತ್ತಾನೆ. ಅನ್ನೆ ಕ್ಯಾಥರೀನ್ ಕುಟುಂಬ ಒಂದಾದ ನಂತರ ಇನ್ನೊಂದು ಸಾಲದ ಸುಳಿಯಲ್ಲಿ ಸಿಲುಕಿರುತ್ತಿತ್ತುಘಿ. ಆಗ ಅವರ ಮನೆಯಲ್ಲಿ ಒಂದು ಕಾರು ಕೂಡ ಇಲ್ಲದ ಕಾರಣ, ಆಕೆಗೆ ಡ್ರೈವಿಂಗ್ ಗೊತ್ತಿರಲಿಲ್ಲಘಿ. ಆಕೆಗೆ ಜೀವನದಲ್ಲಿ ಯಾವುದೇ ವಿಚಾರದಲ್ಲೂ ಆಳವಾದ ಪ್ರೀತಿಯೇ ಇರಲಿಲ್ಲಘಿ. ಆ ಹೊತ್ತಿಗೆ ಪರಿಚಿತನಾದ ಬ್ರೈಟ್‌ವೈಸರ್ ಅದೆಲ್ಲ ಗ್ಲಾಮರ್‌ನ್ನುಘಿ, ಜೀವಂತಿಕೆಯನ್ನೂ ಅನ್ನೆಯಲ್ಲಿ ಹರಿಸಿದ. ಅನ್ನೆಯ ಹಳ್ಳಿಗಾಡಿನ ಮುಗ್ಧತೆಯು, ಆತನಲ್ಲಿ ಹೊಸ ಬಗೆಯ ಸಂಸ್ಕೃತಿ ಸಂಸ್ಕಾರದತ್ತ ಕಣ್ಣು ತೆರೆಸಿತು. ಕಲೆ, ಕುಸುರಿಯ ಬಗ್ಗೆ ಬ್ರೈಟ್‌ವೈಸರ್‌ಗೆ ಸಹಜವಾಗಿ ಆಸಕ್ತಿ ಒಂದೆಡೆಯಾದರೆ, ಅನ್ನೆ ಕ್ಯಾಥರೀನ್ ಆಗಮನವು ಕ್ರೈಸ್ತ ಸಾರಸ್ವತ ದೇವತೆ ಮ್ಯೂಸ್ ಪ್ರತ್ಯಕ್ಷಳಾದಂತೆ ಆಯಿತು. ಮುನ್ನಡೆಸುವ ದೇವತೆಯಾಗಿ ಆಕೆ ಸೇರಿಕೊಂಡಳು ಎಂದು ಬ್ರೈಟ್‌ವೈಸರ್ ಒಂದೆಡೆ ಒಪ್ಪಿಕೊಳ್ಳುತ್ತಾನೆ. ಬುಟಿಕ್ ಇರಬಹದು, ಆ್ಯಂಟಿಕ್ ಅಥವಾ ಕುಸುರಿ, ಮಾಟದ ಮಂಚಗಳಿರಬಹದು, ದಾಗಿನಿ ಅಥವಾ ದಿನಬಳಕೆಯ ಮಾಟದ ಸಲಕರಣೆಯಲ್ಲೂ ಆಕೆಗೆ ನಿರ್ದಿಷ್ಟ ಆಯ್ಕೆ ಇತ್ತು. ಆಗೀಗ ಒಟ್ಟಾಗಿ ಚಿಕ್ಕ ಪುಟ್ಟ ನಗರಗಳಿಗೆ ಹೋಗಿ ಅಲ್ಲಿನ ಕರಕುಶಲರು, ಅಕ್ಕಸಾಲಿಗರ ಕುಲುಮೆಗೆ, ಕಾಷ್ಟ ಶಿಲ್ಪದ ಮಳಿಗೆಗೆ ಭೇಟಿ ನೀಡಿ, ಗ್ಯಾರೇಜಿನ ಲೋಹ ಪತ್ರಿಗಳನ್ನು ಹುಡುಕಿ ತರುತ್ತಿದ್ದೆವು ಎನ್ನುತ್ತಾನೆ ಬ್ರೈಟ್‌ವೈಸರ್. ಕುಲುಮೆಗೆ ಹೋದಾಗ, ನೇಕಾರರ ಮಳಿಗೆ ಹೊಕ್ಕಾಗ ಹೆಚ್ಚು ಮಾತಾಡದೆ ಸುತ್ತುವ ಜೋಡಿಗೆ ಅಲ್ಲಿ ಏನೋ ಒಂದು ಖುಷಿ ಆಯಿತು ಎಂದರೆ, ಚೌಕಾಶಿ ಮಾಡುತ್ತಿರಲಿಲ್ಲಘಿ. ‘ಆಕೆ ಜತೆಯಲ್ಲಿದ್ದಾಗ, ಅದೇಕೋ ವಿಚಿತ್ರ ಅನುಭವ. ಖುಷಿ. ಹೆಚ್ಚು ಮಾತಾಡಬೇಕು ಎಂದು ನನಗೆ ಅನ್ನಿಸುತ್ತಲೇ ಇರಲಿಲ್ಲಘಿ. ಮಾತಿನ ಅಗತ್ಯವೇ ಇರವುದಿಲ್ಲಘಿ.’ ಈತನ ತಂದೆ ಮನೆ ಬಿಟ್ಟು ಹೋದರು, ಏನೆಲ್ಲ ಆಗಿಹೋದರೂ, ಆಕೆ ಮಾತ್ರ ಎಲ್ಲ ಸಂದರ್ಭದಲ್ಲೂ ಜತೆಗೆ ಬೆಂಬಲವಾಗಿ ನಿಲ್ಲುತ್ತಿದ್ದಳು. ಜೋಡಿಯು ಡೇಟಿಂಗ್ ಶುರು ಮಾಡಿದ ನಾಲ್ಕಾರು ತಿಂಗಳಲ್ಲಿ ತಂದೆ ತಾಯಿ ಪ್ರತ್ಯೇಕವಾಗಿ,ತಾಯಿಯೊಂದಿಗೆ ಚಿಕ್ಕದಾದ ಇಕಾ ಬಾಡಿಗೆ ಫ್ಲಾಟಿಗೆ ಬಂದ. ಆತ ಸಮಸ್ಯೆಗೆ ಸಿಲುಕಿದಾಗಲೆಲ್ಲಘಿ, ಶ್ರೀಮಂತ ಹುಡುಗ ಮತ್ತಷ್ಟು ಹತ್ತಿರವಾಗಿ ಅನ್ನೆಗೆ ಹಿತಾನುಭವವೇ ಆಗಿತ್ತುಘಿ. ಆತನಿಗೆ ಭಾವನಾತ್ಮಕ ಬೆಂಬಲ ನೀಡುವ ಭಾಗವಾಗಿ ಆಕೆ ಆಗಾಗ ಆತನ ಅಪಾರ್ಟ್‌ಮೆಂಟ್‌ನಲ್ಲಿಯೇ ರಾತ್ರಿ ಕಳೆಯತೊಡಗಿದಳು. ಆಗ ಅವರ ಕೊಠಡಿಯಲ್ಲಿ ಇದ್ದಘಿ, ನೀಲಿ ಪ್ಲೈಉಡ್ ಮಂಚದ ಚಿಕ್ಕ ಗಾದಿಯಲ್ಲಿಯೇ ಇಬ್ಬರೂ ರಾತ್ರಿ ಕಳೆಯುತ್ತಿದ್ದರು. ಇದೆಲ್ಲಘಿ, ಅವರು, ವ್ಯವಸ್ಥಿತ ಶಯ್ಯಾಗ್ರಹಕ್ಕೆ ಸ್ಥಳಾಂತರಗೊಳ್ಳುವ ಮೊದಲಿನ ಕತೆ. ಆಗ ಇವರ ಮಂಚ ಹೊಂದಿಕೊಂಡಿದ್ದ ಗೋಡೆಗೆ ಪ್ರೀತಿ ಪ್ರಣಯದ ಸಿನಿಮಾಗಳಾದ ದುಸ್ತಾನ್ ಹಾಫ್‌ಮನ್ ನಟಿಸಿದ ‘ರೈನ್ ಮ್ಯಾನ್’’ ಸಿನಿಮಾ ಪೋಸ್ಟರ್‌ಗಳು ಅಂಟಿಸುತ್ತಿದ್ದರು ಎಂದು ಒಂದೆರಡು ಸನ್ನಿವೇಶವನ್ನು ಆತ ಸ್ಮರಿಸಿಕೊಂಡಿದ್ದಾನೆ. ‘ಆ ದಿನಗಳಲ್ಲಿ ನನ್ನ ಜೀವನದಲ್ಲಿ ಏನೆಲ್ಲ ಕುಸಿದು ಬೀಳುತ್ತಿದ್ದರೆ, ಆಕೆ ಮಾತ್ರ ‘ಎಲ್ಲ ಸರಿಹೋಗುತ್ತದೆ. ಹೆದರಬೇಡ’ ಎಂದು ಸಮಾಧಾನ ಹೇಳುವ ದೇವತೆಯಾಗಿದ್ದಳು. ವೃತ್ತಿ ವಿಚಾರದಲ್ಲಿ ಇಬ್ಬರೂ ಒಂದಿಷ್ಟು ಕಷ್ಟ ಎದುರಿಸಿದ್ದಾರೆ. ಅನ್ನೆ ಕ್ಯಾಥರೀನ್ ತನ್ನ ನರ್ಸಿಂಗ್ ಸರ್ಟಿಫಿಕೆಟ್‌ಗಾಗಿ ನೋಂದಣಿಯಾಗಿದ್ದರೆ, ಬ್ರೈಟ್‌ವೈಸರ್ ಕಾನೂನು ಕಲಿಯಲು ಸ್ಟ್ಯಾನ್ಸ್‌ಬರ್ಗ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡಿದ್ದಘಿ. ಓದಿನತ್ತ ಗಮನ ಹರಿಸಿದೆ ಏನೆಲ್ಲ ಮಾಡಿ ಬ್ರೈಟ್‌ವೈಸರ್ ಕಾನೂನು ಅಧ್ಯಯನ ಅರ್ಧದಲ್ಲೇ ಕೈ ಬಿಟ್ಟರೆ, ಅನ್ನೆ ಕ್ಯಾಥರೀನ್‌ಗೆ ನರ್ಸಿಂಗ್ ಸರ್ಟಿಫಿಕೆಟ್ ಪಡೆಯಲಾಗದೆ, ಆಸ್ಪತ್ರೆಯೊಂದರೆಲ್ಲ ಹಾಸಿಗೆ ಜೋಡಿಸುವ, ಕಸಗಳನ್ನು ಸ್ವಚ್ಛಗೊಳಿಸಿ ಕೊಠಡಿ ಸಿದ್ದಪಡಿಸುವ ನೌಕರಿಗೆ ಹೊಂದಿಕೊಳ್ಳಬೇಕಾಯಿತು. ಹೀಗಿರುತ್ತ ೧೯೯೪ರ ಚಳಿಗಾಲದ ಒಂದು ವಾರಾಂತ್ಯದಲ್ಲಿ ಇಬ್ಬರೂ ಆಲ್‌ಸೇಶಯನ್ ಕೃಷಿಕರ ಹಳ್ಳಿಗೆ ಭೇಟಿ ನೀಡುತ್ತಾರೆ. ಅಲ್ಲಲ್ಲಿ ಜೋಡಿ ಮನೆಗಳು, ಮಾಸಿದ ಕಲ್ಲುಕಂಬಗಳ ಹಳೆಯ ಗೋತಿಕ್ ಚರ್ಚ್ ಇರುವ ಆ ಹಳ್ಳಿಯಲ್ಲಿ ೧೬ನೇ ಶತಮಾನದಲ್ಲಿ ನವೀಕರಿಸಿದ ಮ್ಯೂಸಿಯಂ ಒಂದು ಗಮನ ಸೆಳೆಯುತ್ತಿತ್ತುಘಿ. ಜನ ವಿರಳತೆಯ ಆ ಮ್ಯೂಸಿಯಂನ ಎರಡನೆ ಮಹಡಿಗೆ ಹೋಗುತ್ತಲೇ ಬ್ರೈಟ್‌ವೈಸರ್‌ನ ಕಣ್ಣಿಗೆ ಮಿಂಚಿನ ಒಂದು ವಸ್ತುವು ಹೊಳೆಯುತ್ತದೆ. ಆಕೆಯನ್ನು ನೋಡಿ ‘ಇದು ಹೇಗಿದೆ ಅಲ್ಲವಾ’ ಎಂದು ತನಗಿದು ಬೇಕು ಎಂದು ಕಣ್ಣಿನಲ್ಲಿ ಸನ್ನೆ ಮಾಡಿದ. ಅಕ್ರೋಟ್ ಕಾಂಡದಿಂದ ಕೆತ್ತಿದ ಹಿಡಿಕೆ, ಬೆಳ್ಳಿಯ ಲೋಗೋ ಸಹಿತ ಟ್ರಿಗರ್‌ನ ಪ್ಲಿಂಟ್ ಲಾಕ್ ಪಿಸ್ತೂಲ್. ಹದಿನೆಂಟನೇ ಶತಮಾನದ ಆರಂಭದಲ್ಲಿ ಬಳಸಲಾಗುತ್ತಿದ್ದ ಆ ಪಿಸ್ತೂಲ್ ನೋಡಿದಾಗ, ಇದನ್ನು ತಾನು ಏಲ್ಲೋ ನೋಡಿದಂತೆ ಅನ್ನಿಸಿತು. ಆತನ ತಂದೆ ಸಂಗ್ರಹಿಸಿದ್ದ ಹಲವು ಪಿಸ್ತೂಲ್‌ಗಳು ಬಾಲಕ ಬ್ರೈಟ್‌ವೈಸರ್‌ನ ಆಪ್ತ ಆಟಿಗೆಯಾಗಿದ್ದವು. ಒಂದು ದಿನ ಮನೆಯ ಬಹುತೇಕ ಆ್ಯಂಟಿಕ್‌ಗಳನ್ನೆಲ್ಲ ಪ್ಯಾಕ್ ಮಾಡಿಕೊಂಡು ತಂದೆ, ಹೊರಟು ಹೋದ ನಂತರ ಅಂಥ ಯಾವುದೇ ಪಿಸ್ತೂಲ್‌ನ್ನು ಬ್ರೈಟ್‌ವೈಸರ್ ನೋಡಿಯೇ ಇರಲಿಲ್ಲಘಿ. ತರುವಾಯ ಕುಟುಂಬದ ಕಪಾಟಿನಲ್ಲಿ ಪ್ರದರ್ಶನಕ್ಕಿಟ್ಟ ಕೆಲವು ಪಿಸ್ತೂಲ್‌ಗಳ ಮಾದರಿ ಸಹಿತ ಆರ್ಟಿಕಲ್‌ಗಳನ್ನು ಮನೆಗೆ ತರಲು ಬ್ರೈಟ್‌ವೈಸರ್ ಪ್ರಯತ್ನಿಸಿದರೂ, ಹರಾಜಿನಲ್ಲಿ ಕೈಗೆಟುಕುತ್ತಿರಲಿಲ್ಲಘಿ. ಹರಾಜು ಪಡೆದುಕೊಂಡವರು ಹಳೆಯ ಆ್ಯಂಟಿಕ್‌ಗಳನ್ನು ಹತ್ತು ಪಟ್ಟು ದರ ಏರಿಸಿ ಮಳಿಗೆಯಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದರು. ಇದೊಂದು ಹೇಸಿಗೆಯ ಕೆಲಸ ಎಂದು ಬ್ರೈಟ್‌ವೈಸರ್ ಹೇಳುತ್ತಿದ್ದಘಿ. ಈ ಎಲ್ಲ ಕಾರಣಕ್ಕೆ ಬ್ರೈಟ್‌ವೈಸರ್ ಫ್ಲಿಂಟ್ ಲಾಕ್ ಪಿಸ್ತೂಲನ್ನು ಗುರಾಯಸಿಯೇ ನೋಡಿದ. ಇದನ್ನು ಎತ್ತಿ ಮನೆಗೆ ಒಯ್ಯಬೇಕು ಎಂಬುದು ಬಿಟ್ಟರೆ, ಬೇರೇನೂ ಆಲೋಚನೆ ಆತನಲ್ಲಿ ಹೊಳೆಯಲಿಲ್ಲಘಿ. ‘ನನ್ನ ತಂದೆಯ ಸಂಗ್ರಹದಲ್ಲಿದ್ದ ಪಿಸ್ತೂಲ್‌ಗಳಿಗೆ ಹೋಲಿಸಿದರೆ, ಒಂಭತ್ತು ವರ್ಷ ಹಳೆಯದಾಗಿರುವ ಇದು, ಆತನಿಗೆ ಹೊಟ್ಟೆ ಉರಿಸಲಿದೆ. ಹಾಗಾಗಿ ಇದು ನನ್ನದಾಗಬೇಕು ’’ಎಂದು ಅನ್ನೆ ಕ್ಯಾಥರೀನ್‌ಗೆ ಹೇಳಿದ. ತನ್ನ ಪಾಲಕರೊಂದಿಗೆ ಅನ್ನೆಯ ಸಂಬಂಧ ಚೆನ್ನಾಗಿಯೇ ಇತ್ತಾದರೂ, ಬ್ರೈಟ್‌ವೈಸರ್ ಆತನ ತಂದೆಯನ್ನು ದ್ವೇಷಿಸಿದಾಗ ಸಂತೈಸುತ್ತಿದ್ದಳು. ಒಂದೆರಡು ಬಾರಿ ಬ್ರೈಟ್‌ವೈಸರ್ ತಂದೆಯನ್ನು ಆಕೆ ಭೇಟಿಯಾಗಿದ್ದರೂ, ಅವರಲ್ಲಿ ಗೌರವವೇನೂ ಉಂಟಾಗರಲಿಲ್ಲಘಿ. ಆಕೆಯ ಬಡತನದ ಕಾರಣ ತಂದೆಯು ನಿಕೃಷ್ಟವಾಗಿ ನೋಡಿದ್ದ ಎಂದು ಬ್ರೈಟ್‌ವೈಸರ್ ನಂತರ ಆಕೆಗೆ ಹೇಳಿದ್ದಘಿ. ಪಿಸ್ತೂಲನ್ನು ಪ್ರದರ್ಶಿಸಿದ್ದ ಗಾಜಿನ ಪೆನಲ್ ಬೋರ್ಡ್‌ಗೆ ಬೀಗ ಹಾಕದೇ ಇರುವುದನ್ನು ಬ್ರೈಟ್‌ವೈಸರ್ ಅನ್ನಿ ಕ್ಯಾಥರೀನ್‌ಗೆ ತೋರಿಸಿದ. ಹೈಸ್ಕೂಲ್ ಮುಗಿಸಿ ಮ್ಯೂಸಿಯಂ ಭದ್ರತಾ ಸಿಬ್ಬಂದಿಯಾಗಿ ಬ್ರೈಟ್‌ವೈಸರ್ ಕಾರ್ಯನಿರ್ವಹಿಸಿ, ಆಗಲೆ ಮೂರು ವರ್ಷಗಳು ಕಳೆದಿದ್ದರೂ, ಅಲ್ಲಿನ ಭದ್ರತಾ ಸೂಕ್ಷ್ಮಗಳ ವಿಚಾರದಲ್ಲಿ ಆತನಿಗೆ ಚೂರೂ ಮರೆವಾಗಿರಲಿಲ್ಲಘಿ. ಆ ಹೊತ್ತಿಗೆ ಬೇರಾವುದೇ ಸಂದರ್ಶಕರು, ಭದ್ರತಾ ಸಿಬ್ಬಂದಿ, ಸಿಸಿ ಟಿವಿ ಅಥವಾ ಕ್ಯಾಮರಾ ಯಾವುದೂ ಇರಲಿಲ್ಲಘಿ. ಬೇಸಿಗೆ ರಜೆಯಲ್ಲಿ ಅರೆಕಾಲಿಕ ಭದ್ರತಾ ಕೆಲಸಕ್ಕೆ ಬಂದಿದ್ದ ವಿದ್ಯಾರ್ಥಿಕೂಡ ಕೆಳಗಿನ ಮಹಡಿಯಲ್ಲಿ ಊಟಕ್ಕೆ ಹೋಗದ್ದಘಿ. ಬ್ರೈಟ್‌ವೈಸರ್ ತಾನು ಬರುವಾಗಲೇ ಅಂದು ಚಿಕ್ಕ ಡಕ್ ಬ್ಯಾಗನ್ನು ಹಾಕಿಕೊಂಡು ಬಂದಿದ್ದುಘಿ, ಇದು ಕಾರ್ರಾಚರಣೆಗೆ ಅನುಕೂಲ ಎಂದೇ ಅನ್ನಿಸಿತು. ಆ ಹೊತ್ತಿಗೆ ಅನ್ನೆ ಕ್ಯಾಥರೀನ್ ಕೊಟ್ಟ ಹಸಿರು ನಿಶಾನೆ ಕೂಡ, ಹಿಂದೆ ಮುಂದೆ ಯೋಚನೆ ಅನಗತ್ಯ ಎಂದು ಅನ್ನಿಸಿತು. ಆಗಿನ್ನೂ ಜೋಡಿ ೨೨ರ ಹರಯದವರು, ಮೊದಲಿಗೆ ಅನ್ನೆ ಬ್ರೈಟ್‌ವೈಸರ್ ಭೇಟಿಯಾಗಿದ್ದ ಹೊತ್ತಿನಲ್ಲಿಘಿ, ಆತನ ಮೇಲೆ ಅಂಗಡಿ ಕಳವು, ಗಮನ ಬೇರೆಡೆ ಸೆಳೆದು ಅಪಹರಣ ಮತ್ತಿತರ ಪ್ರಕರಣದಲ್ಲಿ ಠಾಣೆಗೆ ಹೋಗಿ ಬರುತ್ತಿದ್ದ ದಿನಗಳು. ಅನ್ನೆ ಕ್ಯಾಥರೀನ್‌ಗೆ ಮಾತ್ರ ಚಿಕ್ಕದಾದ ಅಪರಾ ಹಿನ್ನೆಲೆ, ಸಿಕ್ಕಿಬಿದ್ದ ಪ್ರಕರಣದ ಉರುಳು ಇರಲಿಲ್ಲಘಿ. ಆದರೂ ಆತನ ಚಟುವಟಿಕೆಗೆ ಆಕ್ಷೇಪ ವ್ಯಕ್ತಮಾಡಿರಲಿಲ್ಲಘಿ. ‘ಕೆಲವೊಮ್ಮೆ ಆತನ ಕಿಡಿಗೇಡಿ ಗುಣಗಳು ಕೂಡ ಆಕೆಯನ್ನು ಕರ್ಷಿಸಿದ್ದು ಇರಬಹುದೇ’ ಎಂದು ಆಕೆಯ ಆಪ್ತ ಅಟಾರ್ನಿ ಬ್ರೌನ್ ಹೇಳುತ್ತಾರೆ. ಇದೀಗ, ಅವರು ನಿಂತಿದ್ದ ಫಿಂಟ್‌ಲಾಕ್ ಪಿಸ್ತೂಲ್ ಎದುರು ಅವರ ಪ್ರೇಮಿ ಗಟ್ಟಿಗೊಳಿಸುವ ಸಾಹಸದ ಅವಕಾಶ ತೆರೆದುಕೊಂಡಿತು. ತಮ್ಮ ಹದಿಹರಯದ ಸಾಹಸದ ಮೂಲಕ ಹುಚ್ಚು ಹಿಡಿಸಿದ್ದ‘ಬೊನ್ನಿ ಮತ್ತು ಕ್ಲೈಡ್’ ಪತ್ತೆದಾರಿ ಸಾಹಸದ ನೆನಪಾಗಿ, ತನ್ನ ಬಂಡಾಯಗಾರ ಸ್ನೇಹಿತನನ್ನು ಹುರಿದುಂಬಿಸಲು ‘ ಹೋಗು ಪ್ರಿಯಾ,. ಎತ್ತಿಕೋ, ಎಗರಿಸು ’ ಎಂದು ಕುಮ್ಮಕ್ಕು ನೀಡಿದಳು.

Related Posts
Latest