ದಂಗು ಬಡಿಸುವ ಕಲಾ ಅಂತಃಪುರ

ದಂಗು ಬಡಿಸುವ ಕಲಾ ಅಂತಃಪುರ
ದಿ ಆರ್ಟ ಥೀಫ್
ಶತಮಾನಗಳಿಂದ, ಪ್ರಪಂಚದಾದ್ಯಂತದ ಕಲಾಕೃತಿಗಳನ್ನು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಕದಿಯಲಾಗಿದೆ. ಆದರೆ ಖದೀಮ ಕಳ್ಳ ಸ್ಟೀವನ್ ಬ್ರೀಟ್ವೀಸರ್ ತರ ಯಾರೂ ಅದರಲ್ಲಿ ದೀರ್ಘ ಕಾಲ ಯಶಸ್ವಿಯಾಗಲಿಲ್ಲ. ಸುಮಾರು ಎಂಟು ವರ್ಷಗಳ ಕಾಲ ಇನ್ನೂರಕ್ಕೂ ಹೆಚ್ಚು ದರೋಡೆಗಳನ್ನು ನಡೆಸುತ್ತಾ-ಯುರೋಪಿನಾದ್ಯಂತ ವಸ್ತುಸಂಗ್ರಹಾಲಯಗಳು ಮತ್ತು ಕ್ಯಾಥೆಡ್ರಲ್ಗಳಲ್ಲಿ- ಬ್ರೀಟ್ವೀಸರ್, ಈತನ ಎಲ್ಲ ಅಪರಾಧಗಳಿಗೆ ಬೆಂಗಾವಲಾಗಿ ನಿಲ್ಲುವ ಗೆಳತಿ ಅನ್ನೆ ಕ್ಯಾಥರಿನ್‌ಳೊಂದಿಗೆ, ಮುನ್ನೂರಕ್ಕೂ ಹೆಚ್ಚು ಕಲಾಕೃತಿ ಕಳವು ಮಾಡುತ್ತಾನೆ. ಅಂತಿಮವಾಗಿ ಎಲ್ಲವಕ್ಕೂ ಒಂದು ಅಂತ್ಯ ಎಂಬುದು ಇರುತ್ತದೆ. ದಿ ಆರ್ಟ್ ಥೀಫ್‌ನಲ್ಲಿ ಲೇಖಕ ಮೈಕೆಲ್ ಫಿಂಕೆಲ್ ಬ್ರೀಟ್ವೀಸರ್‌ನ ವಿಚಿತ್ರ ಮತ್ತು ಆಕರ್ಷಕ ಜಗತ್ತನ್ನು ನಮ್ಮೆದುರು ತೆರೆದಿಡುತ್ತಾನೆ. ಬ್ರೀಟ್ವೀಸರ್ ಹೆಚ್ಚಿನ ಕಳ್ಳರಂತಲ್ಲ, ಎಂದಿಗೂ ಹಣಕ್ಕಾಗಿ ಕದ್ದಿಯುವುದಿಲ್ಲ. ಬದಲಾಗಿ, ಅವನಿಗೆ ಉತ್ತಮ ಕಲಾಕೃತಿಗಳ ಬಗ್ಗೆ ಇನ್ನಿಲ್ಲದ ವ್ಯಾಮೋಹವೂ ಇತ್ತು. ಚಿತ್ರಗಳ ಆಸ್ವಾದನೆಯ ಪರಿಶ್ರಮವೂ ಇತ್ತು. ತಾನು ಕಳವು ಮಾಡಿದ ಸಂಪತ್ತನ್ನು ಒಂದು ಜೋಡಿ ರಹಸ್ಯ ಕೊಠಡಿಗಳಲ್ಲಿ ಪ್ರದರ್ಶಿಸಿದ್ದ. ಅಲ್ಲಿ ಅವನು ಕಲಾಕೃತಿಗಳನ್ನು, ಶಿಲ್ಪಗಳನ್ನು ಮನಃಪೂರ್ವಕವಾಗಿ ಮೆಚ್ಚಿ ಹೆಮ್ಮೆಪಡುತ್ತಿದ್ದ. ಕದ್ದು ತಪ್ಪಿಸಿಕೊಳ್ಳಲು ಯಾವ ವೇಗದಲ್ಲಾದರೂ ಓಟ ಕೀಳುವ ನಿಪುಣ, ದೇಹ ಸೌಷ್ಟವವೂ ಆತನಿಗಿತ್ತು. ಯಾವುದೇ ಭದ್ರತಾ ವ್ಯವಸ್ಥೆಯನ್ನು ಬೇಸಿ ನುಸುಳುವ, ಎಗರಿಸಿಕೊಂಡು ಬರುವ ಸಹಜ ಸಾಮರ್ಥ್ಯವನ್ನು ಹೊಂದಿದ್ದ. ಅಷ್ಟೇ ಅಲ್ಲ, ಉಸಿರುಕಟ್ಟುವಷ್ಟು ಭಯಾನಕ ಕಳವನ್ನೂ ಅಳುಕೇ ಇಲ್ಲದೆ ನಿಭಾಯಿಸುತ್ತಿದ್ದ. ಆದರೂ ಈ ವಿಚಿತ್ರ ಪ್ರತಿಭೆ -ಸೈಕೋ ದೊಡ್ಡ ದೊಡ್ಡ ಕಳವುಗಳನ್ನು ದಕ್ಕಿಸಿಕೊಂಡು ವ್ಯಸನಿಯಾಗಿ ಬೆಳೆದುಬಿಟ್ಟ. ಕೊನೇ ಕ್ಷಣದಲ್ಲಿ ಎಚ್ಚೆತ್ತ ಗೆಳತಿ ಕೆನ್ ತನ್ನ ಇನಿಯನಿಗೆ ಎಷ್ಟೇ ಹೇಳಿದರೂ ಕಿವಿಗೊಡದೆ ಹೋದ. ಒಂದು ಅಂತಿಮ ದರೋಡೆಯು ಈತ ಕಟ್ಟಿಕೊಂಡ ಕಳವಿನ ಬೃಹತ್ ಸಾಮ್ರಾಜ್ಯವನ್ನೇ ಉರುಳಿಸಿ ಹಾಕಿತು. ಇದು ಕಲೆ, ಅಪರಾಧ, ಪ್ರೀತಿ ಮತ್ತು ಯಾವುದೇ ವೆಚ್ಚದಲ್ಲಿಯಾದರೂ ಸರಿ, ಸೌಂದರ್ಯವನ್ನು ಹೊಂದುವ ಹಪಾಪಿ ಹಸಿವಿನ ಕಥೆಯಾಗಿದೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಶಿಫಾರಸು ಮಾಡಿದ ಬೆಸ್ಟ್ ಸೆಲ್ಲರ್ ಬರಹಗಾರ ಮೈಕೆಲ್ ಫಿಂಕೆಲ್ ಅವರ, ದಿ ಆರ್ಟ್‌ ಥೀಫ್ ಕಾದಂಬರಿಯನ್ನು ಕನ್ನಡಿಗರಿಗೆದಾರಾವಾಹಿ ರೀತಿಯಲ್ಲಿ ಇಲ್ಲಿದೆ..... . . . . ಅಧ್ಯಾಯ- 2 ಯಾವುದೇ ನಗರದಲ್ಲೂ ಕೆಲವಷ್ಟು ವಸತಿಪ್ರದೇಶಗಳು ಅಕ್ಕಪಕ್ಕದ ವಾತಾವರಣದ ಪ್ರಭಾವದಿಂದ ಮುಕ್ತವಾಗಿರುವುದು ಸಾಧ್ಯವಿಲ್ಲ. ಜಗತ್ತಿನ ಸುಂದರ ದೇಶಗಳ ಪಟ್ಟಿಯಲ್ಲಿ ಇರುವ ಫ್ರಾನ್ಸ್‌ನ ಪೂರ್ವದಲ್ಲಿರುವ ಮಲ್‌ಹೌಸ್ ನಗರದ ವಿಚಾರವನ್ನೇ ತೆಗೆದುಕೊಳ್ಳಿ. ಒಂದಿಷ್ಟು ಗ್ಯಾರೇಜ್‌ಗಳು, ಹಗಲಿಡೀ ಗದ್ದಲ ಹಾಕುವ ಲೇತ್ ಯಂತ್ರಗಳು, ಸಾಬೂನು ಘಟಕ ತರದ ಔದ್ಯಮಿಕ ವಲಯ ಇದೆ. ಮದ್ಯದಲ್ಲಿ ಅಲ್ಲಲ್ಲಿ ಒಂದಿಷ್ಟು ವಸತಿಯೂ ಇರುವ ಪ್ರದೇಶವನ್ನು ಊಹಿಸಿಕೊಳ್ಳಿ. ಗಾರೆ ಕಾಂಕ್ರೀಟ್ನ ಮಸುಕಾದ ತುಸು ಹಳೆಯ ಕಾಲದ ಚೌಕಾಕಾರದ ಒಂದಿಷ್ಟು ಸಣ್ಣ ಕಿಟಕಿ, ಕಡಿದಾದ, ಕೆಂಪು ಹೆಂಚಿನ ಛಾವಣಿಯಿಂದ ಆವೃತವಾದ ಅದೊಂದು ಮನೆ ಇದೆ. ಇಲ್ಲಿ ಇರುವಿಕೆಯ ತಾವು ಬಹುಪಾಲು ನೆಲ ಮಹಡಿಯಲ್ಲಿದ್ದರೆ, ಕಿರಿದಾದ ಮೆಟ್ಟಿಲುಗಳು ಎರಡು ಬೃಹತ್ ಕೋಣೆಗಳಿರುವ ಮಹಡಿಗೆ ದಾರಿ ಮಾಡಿಕೊಡುತ್ತವೆ. ಮನೆಯ ವಾಸಿಸುವ ಪ್ರದೇಶ ಮತ್ತು ಮಲಗುವ ಕೋಣೆ, ತಗ್ಗಿ ಹೋಗಬೇಕಾದ ಕಡಿಮೆ ಎತ್ತರದ ಸೀಲಿಂಗ್ ಮತ್ತು ಇಕ್ಕಟ್ಟಾದ ಸೊಟ್ಟ ಮಹಡಿ ಅದು. ಈ ಕೋಣೆಗಳ ಬಾಗಿಲಿಗೆ ಯಾವಾಗಲೂ ಬೀಗ ಇರುತ್ತದೆ. ಇಲ್ಲಿನ ಕಿಟಕಿ ಕವಾಟುಗಳು ಶಾಶ್ವತವಾಗಿ ಮುಚ್ಚಿರುತ್ತವೆ. ಅಲ್ಲಿರುವ ಕೋಣೆಯ ಒಂದು ಗೋಡೆಗೆ ತಾಗಿದಂತೆ ಹೊಂದಿಸಿರುವ ಮಂಚದ ಕುರಿತು ತುಸು ಹೇಳಬೇಕು. ಆ ಯುವ ಜೋಡಿ ಮಲಗುವುದು, ಸುಂದರ ಕೆತ್ತನೆಯ ಮಂಚದ ತುಪ್ಪಟ ಮೃದುವಿನ ಹಾಸಿಗೆಯಲ್ಲಿ. ಅಲ್ಲಿರುವ ಕುಸುರಿಯ ದಿಂಬುಗಳಿರಬಹದು, ಪಕ್ಕದಲ್ಲಿ ಹಾಕಲಾದ ನೇರಳೆ ಪರದೆ, ಅದನ್ನು ಸರಿಸಲು ಹಾಕಿರುವ ಜರಿಯ ರಿಬ್ಬನ್ ಕೂಡ ರಾಜರ ಕಾಲದ ಒಂದು ಅಂತಃಪುರವನ್ನು ನೆನಪಿಗೆ ತರುತ್ತಿತ್ತು. ಇಲ್ಲಿ ಮಲಗಿದರೆ ಬ್ರೀಟ್ವೀಸರ್ ತನ್ನ ಕಣ್ಣುಗಳನ್ನು ತೆರೆದಾಗ, ಅವನು ನೋಡುವ ಮೊದಲ ದೃಶ್ಯವೇ ದಂತದ ಆಡಮ್ ಮತ್ತು ಈವ್. ತಾನು ಕದ್ದು ತಂದ ಅಪೂರ್ವ ಕಲಾ ಕುಸುರಿಯನ್ನು ಇಡುವುದಕ್ಕಾಗಿ ಮಂಚದ ಪಕ್ಕದಲ್ಲಿ ಒಂದು ಮೇಜನ್ನು ಜೋಡಿಸಿದ್ದ. ನಯವಾದ ಶಿಲ್ಪದ ಬಗ್ಗೆ ಎಷ್ಟೊಂದು ವ್ಯಾಮೋಹ ಎಂದರೆ, ಕೆಲವೊಮ್ಮೆ ಅದರ ಕೆತ್ತನೆಯ ಮೇಲೆ ತನ್ನ ಬೆರಳ ತುದಿಗಳನ್ನು ನೇವರಿಸುತ್ತಿದ್ದ. ಈವ್ ಮೂರ್ತಿಯ ಕೈಗಳು, ಅದರ ಅಲೆಯಾದ ಕೂದಲು ಅಥವಾ ದೇಹದ ಸುತ್ತಿದ ಹಾವು, ಜತೆಯಲ್ಲಿರುವ ಕುಳ್ಳ ಮರದ ಕಾಂಡದ ಮೇಲೆ ಗಾಗ ಹರಿದಾಡುವುದು ಹೇಗೆಂದರೆ, ಇದನ್ನು ಕೆತ್ತಿದ ಶಿಲ್ಪಿಯು ಮೇಲ್ಮೈ ನುಣುಪನ್ನು ಖಾತ್ರಿಪಡಿಸಲು ಬೆರಳು ಜಾರಿಸಿದಂತೆ. ಇದು ಆತನ ಮಟ್ಟಿಗೆ ಜೀವನದಲ್ಲೇ ಸಿಕ್ಕ ಅತ್ಯಂತ ಬೆಲೆಬಾಳುವ ವಸ್ತುವಾಗಿದ್ದರೆ, ಅದರ ಬೆಲೆಯಂತೂ, ಆ ಸಾಲಿನಲ್ಲಿರುವ ಮನೆಗಳನ್ನೆಲ್ಲ ಒಟ್ಟೂ ಸೇರಿಸಿ ಮಾರಿದರೂ, ಇದರ ಬೆಲೆಯ ಅರ್ಧ ಮೊತ್ತ ಸಿಗುವುದಿಲ್ಲ. ಇದು ಅವನ ಹಾಸಿಗೆ ಪಕ್ಕದ ಮೇಜಿನ ಮೇಲಿಟ್ಟ ಎರಡನೇ ದಂತದ ಕೆತ್ತನೆ. ಅಲ್ಲೇ ಪಕ್ಕದಲ್ಲಿ ರೋಮನ್ನರ ಬೇಟೆ ಹಾಗೂ ಸಂತಾನ ಪ್ರಾಪ್ತಿಸುವ ದೇವತೆ ಡಯನಾಳ ಮೂರ್ತಿ ಇತ್ತುಘಿ. ಡಯಾನಾ ಪ್ರತಿಮೆಯ ವಿಶೇಷ ಎಂದರೆ, ಅವಳ ಬಲಗೈ ಮೇಲಕ್ಕೆತ್ತಿದ ಸ್ಥಿತಿಯಲ್ಲಿ ಚಿನ್ನದ ಬಾಣಗಳನ್ನು ಎತ್ತಿ ಹಿಡಿದಿದ್ದಾಳೆ. ಅದಾದ ನಂತರ ಮೂರನೆಯದು ಕೂಡ ಮಹತ್ವದ್ದೇ. ಕ್ರಿಶ್ಚಿಯನ್ನರ ಆರಂಭಿಕ ಸಂತರಲ್ಲೊಬ್ಬರಾದ ಅಲೆಕ್ಸಾಂಡ್ರಿಯಾದ ಕ್ಯಾಥರೀನ್ ಅವರ ಪ್ರತಿಮೆ. ಮುಂದೆ ತನ್ನ ಪಾದವನ್ನು ತಲೆಬುರುಡೆಯ ಮೇಲೆ ಇಟ್ಟು ವಿಶ್ರಾಂತಿ ಪಡೆಯುತ್ತಿರುವ ಗುಂಗುರು ಕೂದಲಿನ ಕ್ಯುಪಿಡ್. ಹೀಗೆ ಬ್ರೀಟ್ವೀಸರ್‌ನ ದಂತದ ಬೊಂಬೆಗಳ ಸಂಗ್ರಹದ ಅಲೌಕಿಕ ಲೋಕ, ಅವುಗಳ ಹಾಲಿನ ಹೊಳಪಿನ ಪ್ರಪಂಚವು ನೀಡುವ ಸ್ಪೂರ್ತಿ ಬೇರೆಲ್ಲೂ ಸಿಗುವದು ಕಷ್ಟ ಎಂಬ ದಿವ್ಯತೆ ಅಲ್ಲಿತ್ತು. ಅದೆಲ್ಲಕ್ಕಿಂತ ಇಲ್ಲಿ ನೆಪೋಲಿಯನ್ ಬಳಸಿದ ಚಿನ್ನ ಹಾಗೂ ದಂತದ ತಂಬಾಕು ಪೆಟ್ಟಿಗೆ ಮನೋಹರವಾಗಿದೆ. ಪ್ರಕಾಶಮಾನವಾದ ನೀಲಿ ದಂತಕವಚದ ಪೆಟ್ಟಿಗೆಯನ್ನು ನಿಮ್ಮ ಅಂಗೈಯಲ್ಲಿ ಹಿಡಿದಿಟ್ಟುಕೊಳ್ಳುವುದು ಎಂದರೆ, ನೆನಪಿನ ಲೋಕಕ್ಕೆ ಜಾರಿದಂತೆ. ಅದರ ಪಕ್ಕದಲ್ಲಿ ೧೮ನೇ ಶತಮಾನದ ಉತ್ತರಾರ್ಧದಲ್ಲಿ ಫ್ರೆಂಚ್‌ನ ಪ್ರಸಿದ್ಧ ಕುಪ್ಪಿ ಕಲಾವಿದ ಎಮಿಲ್ ಗ್ಯಾಲೆ ತಯಾರಿಸಿದ ಪ್ರಿಸಂ ಪಾರದರ್ಶಕದಲ್ಲಿ ರಮ್ಯ ಬಣ್ಣಗಳ ಹೂ ಹೂದಾನಿಯಿದೆ. ನಂತರ ಹಳೆಯ ಐಟಂ, ಹೂಮಾಲೆಗಳು ಮತ್ತು ಸುರುಳಿಗಳಿಂದ ಕೆತ್ತಿದ ದೊಡ್ಡ ಬೆಳ್ಳಿಯ ಭೂಗೋಳ ಇದನ್ನೆಲ್ಲ ನೋಡಿದರೆ, ಬ್ರೀಟ್ವೀಸರ್ ಸಂಗ್ರಹದಲ್ಲಿ ಬೆಲೆಕಟ್ಟಲಾದ, ಯಾವುದೇ ಶ್ರೀಮಂತನಿಗೂ ದುಬಾರಿ ಎನಿಸುವಷ್ಟು ಶತಶತಮಾನದ ಪುರಾತನ ಚಿತ್ರ ವಿಚಿತ್ರ ಕಲೆಗಳಿವೆ. ರಾಜರು, ಸೇನಾಕಾರಿಗಳು ಬಳಸುತ್ತಿದ್ದ ಹುಕ್ಕಾಗಳು, ಎಲಡಿಕೆ ಪೆಟ್ಟಿಗೆ, ಅವುಗಳ ಸುಂದರ ಆಕಾರ, ತುಂಡಾದ ಕಂಚಿನ ಕಂಬಗಳು, ಚೀನಿ ಮೂಲದ ಹಳೆಯ ಪಿಂಗಾಣಿ ಪ್ರತಿಮೆ.. ಒಂದೆರಡೇ ಅಲ್ಲಘಿ, ಅದೊಂದು ಸುಂದರ ಕನಸುಗಳ ದ್ವೀಪದಂತೆ, ಪೋಣಿಸಿದ ಮ್ಯೂಸಿಯಂ ರೀತಿಯಲ್ಲಿದೆ ಆ ಕೋಣೆ. ಮಂಚದ ಇನ್ನೊಂದು ಪಕ್ಕ ಅಂದರೆ, ಅನ್ನೆ -ಕ್ಯಾಥರೀನ್ ಅವರ ಹಾಸಿಗೆಯ ಬದಿಯಲ್ಲಿ ರಾತ್ರಿಯ ಪರಿಕರಗಳನ್ನೊಳಗೊಂಡ ಒಂದು ಟೇಬಲ್. ಅದಕ್ಕೆ ಗಾಜಿನ ಬಾಗಿಲುಗಳಿಂದ ಆವೃತವಾದ ಮಾಟದ ದೊಡ್ಡ ಆಲಮೇರಾ ಜೋಡಿಸಿದೆ. ಅದರೊಳಗೆ ಒಂದು ರಾಶಿ ವೈವಿಧ್ಯಮಯ ಡ್ರೆಸ್. ಕೋಣೆಯ ಮೇಲ್ಮಂಟಪಕ್ಕೆ ತಾಗಿದ ನಾಗಂದಿಗೆಯಲ್ಲಿ ಬೆಳ್ಳಿಯ ತಟ್ಟೆಗಳು, ಬೆಳ್ಳಿಯ ಬಟ್ಟಲುಗಳು, ಬೆಳ್ಳಿಯ ಹೂದಾನಿಗಳು, ಚಹ ಕಪ್ಪುಗಳ ಸಹಿತ ಟ್ರೇಘಿ, ಮರದ ಗೊಂಬೆ ಚಿಕಣಿಗಳು ಜೋಡಿಸಲಾಗಿತ್ತು. ಅದೇ ಸಾಲಿನಲ್ಲಿ ಒಂದು ಲೋಹದ ಬಿಲ್ಲು, ಒಂದು ಸೇಬರ್ ಡಾಲ್, ಒಂದು ಹಳೆಯ ಭರ್ಚಿ, ಒಂದು ಗದೆ ಇದೆ. ಅಮೃತಶಿಲೆ ಮತ್ತು ಸ್ಪಟಿಕ, ಮರದ ಮುತ್ತಿಮ ತುಣುಕುಗಳು. ಚಿನ್ನದ ಪಾಕೆಟ್ ವಾಚು, ಚಿನ್ನದ ಅತ್ತರ್ ಕಲಶ, ಚಿನ್ನದ ಚೊಂಬು, ಚಿನ್ನದ ಲಾಕೆಟ್. ದಂಪತಿಗಳ ನಿಜ ಅಡಗುತಾಣವಾದ ಇದರ ಮುಂದಿನ ಕೊಠಡಿಯು ಇನ್ನಷ್ಟು ತುಂಬಿಕೊಂಡಿದೆ. ಮರದ ಬಲಿಪೀಠ, ತಾಮ್ರದ ತಟ್ಟೆ, ಕಬ್ಬಿಣದ ಭಿಕ್ಷಾ ಪೆಟ್ಟಿಗೆ, ಬಣ್ಣದ ಗಾಜಿನ ಕಿಟಕಿ, ದುಬಾರಿ ಮದ್ಯದ ಮಾಟದ ಬಾಟಲಿಗಳು, ಮತ್ತು ಪುರಾತನ ಕಾಲದ ಲೋಹದ ಚೆಸ್ ಬೋರ್ಡ್‌ಗಳು, ದಂತದ ಕೆತ್ತನೆಗಳ ಮತ್ತೊಂದಷ್ಟು ಮೂರ್ತಿ, ಪಿಟೀಲು, ಶ್ರುತಿಮೋರೆ, ಕೊಳಲು, ಕಹಳೆ. ಮತ್ತಷ್ಟು ತುಣುಕುಗಳನ್ನು ಕೆಲವು ವಿರಾಮಾಸನದ ಮೇಲೆ ಜೋಡಿಸಲಾಗಿದೆ. ಗೋಡೆಗಳಿಗೆ ಒಂದಿಷ್ಟು ಬೇಟೆ ಪರಿಕರಗಳನ್ನು ಸಾಚಿ ಆಸರೆ ಮಾಡಲಾಗಿತ್ತುಘಿ. ಕಿಟಕಿಗಳ ಮೇಲೆ ಜೋತು ಬಿಟ್ಟಿರುವ ಇನ್ನಷ್ಟು ಸರದ ತುಣುಕು. ತೊಳೆಯಲು ಹಾಕಿದ ಬಟ್ಟೆಗಳ ಮೇಲೆ ರಾಶಿಯಾಗಿ ಬಿದ್ದ ಸಮುದ್ರದ ಚಿಪ್ಪಿನ ಒಡವೆಗಳು, ಹಾಸಿಗೆಯ ಕೆಳಗೆ ಜಾರಿ ಬಿಡಲಾದ ಶಂಕದ ಹಾರಗಳು. ಕೈಗಡಿಯಾರಗಳು, ಕೈ ಗಡಗ, ಬಿಯರ್ ಮಗ್ಗುಗಳು, ಫ್ಲಿಂಟ್ಲಾಕ್ ಪಿಸ್ತೂಲ್ಗಳು, ಕೈಯಿಂದ ಬರೆದ ಪುರಾತನ ಪುಸ್ತಕಗಳು ಮತ್ತು ಒಂದಿಷ್ಟು ಬಿಡಿ ದಂತಗಳು ರಾಶಿಯಾಗಿ ಬಿದ್ದಿವೆ. ಮಧ್ಯಕಾಲೀನ ಕಮಾಂಡರ್‌ಗಳ ಶಿರಸ್ತ್ರಾಣ, ವರ್ಜಿನ್ ಮೇರಿಯ ಮರದ ಪ್ರತಿಮೆ, ವಜೃ ಖಚಿತ ಟೇಬಲ್ ಗಡಿಯಾರ, ಮಧ್ಯ ಯುಗದ ಸಚಿತ್ರ ಪ್ರರ್ಥನಾ ಹೊತ್ತಿಗೆ. ಬೆಲೆಬಾಳುವ ಕಲಾಕೃತಿಗಳಲ್ಲದೆ ಇದೆಲ್ಲವೂ ಕೊಠಡಿಯ ವೈಭವಕ್ಕೆ ಪೂರಕವಾಗಿದೆ. ಭವ್ಯವಾದ, ಅತ್ಯಮೂಲ್ಯವಾದ ವಸ್ತುಗಳು, ಗೋಡೆಗಳ ಗೂಟಕ್ಕೆ ತೂಗಾಡುತ್ತಿವೆ. ಅವುಗಳಲ್ಲಿ ಒಂದಿಷ್ಟು ತೈಲ ವರ್ಣಚಿತ್ರಗಳು, ಹದಿನಾರು ಮತ್ತು ಹದಿನೇಳನೇ ಶತಮಾನಗಳಿಂದ ಆರಂಭವಾಗಿ ನವೋದಯ ಮತ್ತು ಆರಂಭಿಕ ಬರೊಕ್ ಶೈಲಿಗಳ ದುಬಾರಿ ಪೇಂಟಿಂಗ್ ಕಲಾವಿದರ ವಿವರ ಸಹಿತ ವರ್ಣರಂಜಿತವಾಗಿವೆ. ಭಾವಚಿತ್ರಗಳು, ಭೂದೃಶ್ಯಗಳು, ಕಡಲತೀರಗಳು, ಸ್ಥಿರ ಚಿತ್ರಗಳು, ಸಾಂಕೇತಿಕ ಕಥೆಗಳು, ರೈತರು, ಹಳ್ಳಿಗರ ನಡಿಗೆಯ ದೃಶ್ಯಗಳು, ಪ್ಯಾಸ್ಟೋರಲ್ ಗಳು ಕೆಲವಷ್ಟು ಇಲ್ಲಿವೆ. ನೆಲದಿಂದ ಸೀಲಿಂಗ್ ತನಕ, ಎಡದಿಂದ ಬಲದ ತುದಿ, ಒಂದು ಕೋಣೆಯಿಂದ ಇನ್ನೊಂದು ಕೋಣೆಯ ಉದ್ದಕ್ಕೂ ಪ್ರದರ್ಶಿಸಲಾಗಿದೆ. ಅವುಗಳಲ್ಲಿ ಒಂದಿಷ್ಟು ವಿಷಯಾಧಾರಿತ ಅಥವಾ ಭೌಗೋಳಿಕವಾಗಿ ಅಥವಾ ವಿಷಮ ಆಕರ್ಷಣೆಯಲ್ಲಿ ಜೋಡಿಸಲಾಗಿದೆ. ಇಲ್ಲಿ ಹತ್ತಾರು ಕಾಲ, ಶತಮಾನದ ಶ್ರೇಷ್ಠರ ಕಲಾಕೃತಿಗಳಿವೆ. ಕ್ರಾಂಚ್, ಬ್ರೂಗಲ್, ಬ್ರೋಷರ್, ವ್ಯಾಟ್ಟೂ, ಗೊಯೆನ್, ಡ್ಯೂರರ್, - ಹೀಗೆ ಅನೇಕ ಮಾಸ್ಟರ್‌ಗಳ ಕಲಾಕೃತಿಗಳು, ಮುಖಚಿತ್ರಗಳು ಕೋಣೆಯ ಎಲ್ಲೆಡೆ ತುಂಬಿವೆ. ದಂತದ ಕಾಂತಿಯಿಂದ ಆವರಿಸಲ್ಪಟ್ಟ ಕೆಲವು, ಬೆಳ್ಳಿಯ ಹೊಳಪಿಗೆ, ಮಿರಿ ಮಿರಿ ಮಿನುಗಿಗೆ ನೂರ್ಮಡಿಯ ಚಿನ್ನದ ವಸುತಗಳಿವೆ. ಎಲ್ಲವನ್ನೂ, ಒಟ್ಟಾರೆಯಾಗಿ ಸಮೀಕರಿಸಿ ಕಲಾ ಪತ್ರಕರ್ತರು ಮಾಡಿದ ಅಂದಾಜಿನಂತೆ ಇಲ್ಲಿನ ಮೌಲ್ಯವು ಎರಡು ಶತಕೋಟಿ ಡಾಲರ್‌ಗಳಾಗಬಹುದು ಎಂದು ಅಂದಾಜಿಸಿದ್ದಾರೆ. ಇಷ್ಟೊಂದು ಬೆಲೆ ಬಾಳುವ, ಹಣ ಕೊಟ್ಟರೂ ಸಿಗದ ಕಲಾ ಬಂಡಾರವನ್ನು ಮುಲ್ ಹೌಸ್ ಉಪನಗರದ ಹಳೆಯ ಕಟ್ಟಡವೊಂದರ ಅಸಂಬದ್ದ ಎನ್ನಬಹುದಾದ ಮನೆಯಲ್ಲಿ ಇರಿಸಲಾಗಿದೆ. ಯುವ ದಂಪತಿಗಳು ಇಲ್ಲೊಂದು ವಾಸ್ತವದ ವಾಸ್ತವ್ಯವನ್ನು ಸೃಷ್ಟಿಸಿಕೊಂಡಿದ್ದು, ಅದು ಏನೆಲ್ಲ ಕಲ್ಪನೆಯನ್ನೂ ಮೀರಿಸುವ ಆಗರ್ಭ ಶ್ರೀಮಂತಿಕೆಯ ಲೋಕವಾಗಿದೆ. ಹಾಗೆ ನೋಡಿದರೆ, ಅವರು ನಿ ಪೆಟ್ಟಿಗೆಯೊಳಗೆ ವಾಸಿಸುತ್ತಾರೆ ಎಂದು ಬಣ್ಣಿಸಿದರೇ ಸರಿ.
Read More