ದಾವಣಗೆರೆ: 10 ಸಾವಿರ ಹೊಸ ಉದ್ಯೋಗದ ಕನಸು(CompitationVK)

ದಾವಣಗೆರೆ: 10 ಸಾವಿರ ಹೊಸ ಉದ್ಯೋಗದ ಕನಸು(CompitationVK)
ಸುಂದರ ವಸತಿ ವ್ಯವಸ್ಥೆ, ಉತ್ತಮ ಹವೆಯ ದಾವಣಗೆರೆ ಸಹಜವಾಗಿ ರಾಜ್ಯದ ಎಲ್ಲೆಡೆಗೂ ಸಲ್ಲಬಲ್ಲ  ಕೇಂದ್ರ ನಗರ. ಸಾಂಪ್ರದಾಯಿಕ ಜವಳಿ ಉದ್ಯೋಗದೊಂದಿಗೆ 10 ಸಾವಿರ ಹೊಸ ಉದೋಗ ನಿರ್ಮಾಣದ ಕನಸನ್ನು ಇದೀಗ ಮೇಕ್ ಇನ್ ಇಂಡಿಯಾ ಈ ಜಾಗದಲ್ಲಿ  ಬಿತ್ತುತ್ತಿದೆ.
******
-ಸದಾನಂದ ಹೆಗಡೆ, ದಾವಣಗೆರೆ
ಕಾರ್ಮಿಕ ಮಾಲೀಕ ಸಂಘರ್ಷದ ಪರಿಣಾಮ ಮೂರು  ದಶಕದ ಹಿಂದೆ ಕುಸಿದುಬಿದ್ದ  ದಾವಣಗೆರೆಯ ಜವಳಿ ಉದ್ಯಮ ಇದೀಗ ಟೆಕ್ಸ್‌ಟೈಲ್ಸ್  ರೂಪಾಂತರದಲ್ಲಿ  ಸ್ಲಿಮ್ ಲುಕ್ ಪಡೆದು ಚಿಗುರುತ್ತಿದೆ. ಆಗಲೂ, ಈಗಲೂ ಜವಳಿಯೇ ದಾವಣಗೆರೆಯ ಉದ್ಯಮ ಹಾಗೂ ಉದ್ಯೋಗ ಸಾಧ್ಯತೆಯ ಆಕರ್ಷಣೆ. ಜವಳಿಗೆ ಇಲ್ಲಿ  ಉದ್ದ  ಅಗಲದ ಆಯಾಮ ಇದೆ. ಶತಮಾನದ ಇತಿಹಾಸದುದ್ದಕ್ಕೂ ವಿಭಿನ್ನ ಮಾರ್ಪಾಡಿನೊಂದಿಗೆ ಉಳಳಿದುಕೊಂಡ ಈ ಉದ್ಯಮ, ಪಕ್ಕದ ಆಂದ್ರದ ತನಕವೂ ವಿಸ್ತರಿಸಿಕೊಂಡಿದೆ. ಈಗಲೂ 25 ಸಾವಿರಕ್ಕೂ  ಮಿಕ್ಕ  ಕುಟುಂಬಗಳಳಿಗೆ ವಿಭಿನ್ನ ಉದ್ಯೋಗಗಳ ಮೂಲಕ ಆಶ್ರಯ ನೀಡಿದೆ. ರಾಜ್ಯದ ಹಲವು ನಗರಗಳಿಂದ ಜವಳಿ ಖರೀದಿ ಎಂದರೆ ದಾವಣಗೆರೆ ನೆನಪಾಗುತ್ತದೆ. ಇಂಥ ನಗರದಲ್ಲಿ  ಹತ್ತು ಸಾವಿರ ಹೊಸ ಉದ್ಯೋಗ ಸೃಷ್ಟಿಗೆ ಸಾರ್ವಜನಿಕ ಉದ್ದಿಮೆ ಸಚಿವರು ಕನಸು ಕಾಣುತ್ತಿದ್ದು, ಹೊಸ ಸಾಧ್ಯತೆಯನ್ನು ನೋಡುತ್ತಿದ್ದಾರೆ.
ಬ್ರಿಟೀಷ್ ಕಾಲದಲ್ಲಿ  ಹತ್ತಿ ಉತ್ಪಾದನೆ ಹಾಗೂ ಮಾರುಕಟ್ಟೆ ಕೇಂದ್ರವಾಗಿ ಕೇಂದ್ರವಾಗಿ ಹುಬ್ಬಳ್ಳಿ ಜತೆಯಲ್ಲಿ  ಗುರುತಿಸಿಕೊಂಡಿತ್ತು ದಾವಣಗೆರೆ. ಈ ಭಾಗದ ಹತ್ತಿಯನ್ನು  ನೇರವಾಗಿ ಪಾಶ್ಚಾತ್ಯ ದೇಶಗಳಿಗೆ ಸಾಗಿಸುವುದಕ್ಕಾಗಿಯೇ ಮಡ್ರಾಸ್ ಪ್ರಾವಿಯನ್ಸಿಯಲ್ಲಿದ್ದ  ಬಂದರು ನಗರ ಕಾರವಾರ ಕಾರವಾರವನ್ನು  215 ವರ್ಷಗಳ ಹಿಂದೆ ಕೆನರಾ ಜಿಲ್ಲೆಯಿಂದ ಪ್ರತ್ಯೇಕಿಸಿದ್ದರು. ಆಗಿನಿಂದಲೂ ನೂಲು ಉದ್ದಿಮೆ ಇಲ್ಲಿ  ಬೇರು ಬಿಟ್ಟು,  ಕೃಷಿ ಹೊರತಾಗಿ ಉದ್ಯೋಗದ ಹೊಸ ಸಾಧ್ಯತೆ. ಪ್ರಮುಖವಾಗಿ, ಬಿಎಸ್ ಚೆನ್ನಬಸಪ್ಪ, ಶಾಂತಲಾ, ರವಿತೇಜ ಹೀಗೆ ಸಾಲು ಸಾಲು ಜವಳಿ ಮಳಿಗೆಗಳು ರಾಜ್ಯ, ನೆರೆ ರಾಜ್ಯಗಳಿಂದ ಕಿಕ್ಕಿರಿದು ಗ್ರಾಹಕರರನ್ನು ಆಕರ್ಷಿಸುತ್ತವೆ. ಜಾಗತಿಕ ಸಂಪರ್ಕ ಹೊಂದಿದ್ದ ಬೃಹತ್ ಜವಳಿ ಉದ್ದಿಮೆಯ ಬದಲು ದಾವಣಗೆರೆ, ಹರಿಹರ ನಡುವೆ ಬೃಹತ್ ಜವಳಿ ಪಾರ್ಕ್ ಇದೀಗ ಎದ್ದು ನಿಂತು ಜನರಿಗೆ  ಉದ್ಯೋಗ ಸಾಧ್ಯತೆಯನ್ನು ತೋರುತ್ತಿದೆ.ಆಕರ್ಷಕ ರಾಷ್ಟ್ರೀಯ ಹೆದ್ದಾರಿಯ ಕಾರಣ ಇಲ್ಲಿಗೆ ಬೆಂಗಳೂರು ಮೊದಲಿಗಿಂತಲೂ ಈಗ ಹತ್ತಿರ. ಉದ್ಯೋಗದ ರಾಜಧಾನಿಯಾಗಿರುವ ಬೆಂಗಳೂರು ಆಕರ್ಷಣೆ ರಾಜ್ಯದ ಎಲ್ಲ  ನಗರಗಳಂತೆ ಇಲ್ಲಿನ ಯುವಕರನ್ನೂ ಬಿಟ್ಟಿಲ್ಲ. ಮೆಡಿಕಲ್, ಇಂಜಿನೀಯರಿಂಗ್ ಓದುವ ಯುವಕರು ಅಮೆರಿಕಾ ಆಸ್ಟ್ರೇಲಿಯಾದತ್ತ ವಲಸೆ ಹೋಗುತ್ತಾರೆ. ಈ ಬಗೆಯ ಯುವಶಕ್ತಿ ವಲಸೆ ಸ್ಥಳೀಯವಾಗಿ ಏನಾದರೂ ನಿರ್ಮಾಣ ಸಾಧ್ಯತೆಗೆ ಸವಾಲಾಗಿದೆ.  ಈ ನಡುವೆ ಹತ್ತಿಯ ಬದಲು ಜೋಳ, ಅಡಕೆಗಳು ಕೃಷಿಕರ ಹೊಸ ಆಕರ್ಷಣೆಯಾಗಿ ವ್ಯಾಪಾರ ವಹಿವಾಟಿಗೆ ಹೊಸ ಸಾಧ್ಯತೆ ನೀಡಿ ಉದ್ಯೋಗ ಸೃಷ್ಟಿಗೆ ಕಾರಣವಾಗಿವೆ. ಹರಿಹರ ಸಮೀಪದ ಬಿರ್ಲಾ ಸಂಸ್ಥೆಯ ಉದ್ದಿಮೆ ಜವಳಿ ಪೂರಕ  ಉತ್ಪಾದನೆ ಮೂಲಕ ಕಾರ್ಯ ನಿರ್ವಹಿಸುತ್ತ  ಒಂದಿಷ್ಟು ಕೈಗಳಿಗೆ ಉದ್ಯೋಗ ನೀಡಿದೆ. ಅಕ್ಕಿ ಹೊಟ್ಟಿನಿಂದ ಎಣ್ಣೆ ತೆಗೆಯುವ, ಮೆಕ್ಕೆ ಜೋಳವನ್ನು ಬಿಸ್ಕಟ್ ಮತ್ತಿತರ  ಸಿದ್ಧ  ಆಹಾರವಾಗಿ ಸಂಸ್ಕರಿಸುವು ನೂರು ಕೋಟಿ ಮೌಲ್ಯದ ಉದ್ಯಮ ಇಲ್ಲಿ  ತಲೆ ಎತ್ತುತ್ತಿದ್ದು, ಉದ್ಯೋಗ ಸಾಧ್ಯತೆಯನ್ನು ಹೆಚ್ಚಿಸಿವೆ.
ದಶಕದ ಹಿಂದೆ ಚಿತ್ರದುರ್ಗದಿಂದ ಬೇರ್ಪಟ್ಟು   ದಾವಣಗೆರೆ ಪ್ರತ್ಯೇಕ ಜಿಲ್ಲೆಯಾಯಿತು. ಜಿಲ್ಲಾ ಕೇಂದ್ರವಾಗಿ ಶಕ್ತ ಪಡೆದ ನಗರ  ಹೊಸ ಹುರುಪಿನಲ್ಲಿ  ಮುನ್ನಗ್ಗುತ್ತಿದೆ.  ವಿಶೇಷ ಎಂದರೆ  ಹತ್ತೈವತ್ತು ಹೊಸ ಶೈಕ್ಷಣಿಕ ಸಂಸ್ಥೆಗಳ ಆರಂಭಕ್ಕೂ ಇದು  ಶುಭ ಮುಹೂರ್ತವಾಯಿತು. ಇದೀಗ ಸಾವಿರಾರು ಶಿಕ್ಷಕರ ಉದ್ಯೋಗ ಕೇಂದ್ರವಾಗಿಯೂ ದಾವಣಗೆರೆ ಗುರುತಿಸಿಕೊಳ್ಳುತ್ತಿದೆ. ಇಂಗ್ಲೀಷ್ ಬಲ್ಲವರಿಗೆ ಇಲ್ಲಿದೆ ಉದ್ಯೋಗ. ಉತ್ತರ ಕರ್ನಾಟಕದ ವಿಭಿನ್ನ ನಗರಗಳ ವಿದ್ಯಾರ್ಥಿಗಳು ಇಲ್ಲಿನ ಹೈಟೆಕ್ ವಸತಿ ಶಾಲೆಯಲ್ಲಿ ಉಳಿದು ಶಿಕ್ಷಣ ಮುಂದುವರಿಸುವ ಟ್ರೆಂಡ್ ಇದೆ. ಇನ್ನೊಂದಡೆ ಮೆಡಿಕಲ್  ಇಂಜೀನೀಯರ್ ಕಾಲೇಜುಗಳು ಉತ್ತರ ಭಾರತದ ವಿದ್ಯಾರ್ಥಿಗಳನ್ನೂ ಬಹು ಸಂಖ್ಯೆಯಲ್ಲಿ ಆಕರ್ಷಿಸುತ್ತಿವೆ. ಸಮೀಪದ ಜಿಲ್ಲೆಗಳ ಗ್ರಾಮಾಂತರ ಪ್ರದೇಶದ ಶ್ರೀಮಂತರು ಬಹು ಸಂಖ್ಯೆಯಲ್ಲಿ  ನಗರದಲ್ಲಿ ಒಂದು ಮನೆ ಮಾಡಿ ತಮ್ಮ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಶಿಕ್ಷಣ ಕೊಡಿಸುತ್ತಿರುವುದು ಪೂರಕವಾಗಿ ಊಟ-ವಸತಿಯಂಥ ಪೂರಕ ಉದ್ಯೋಗಕ್ಕೆ ಅವಕಾಶ ನೀಡಿದೆ. ಆರಂಭದಿಂದಲೂ ಬಾಪೂಜಿ ಸಂಸ್ಥೆ ವಿಭಿನ್ನ ಕಾಲೇಜುಗಳನ್ನು  ಆರಂಭಿಸಿ ದಾವಣಗೆರೆಗೆ ಶೈಕ್ಷಣಿಕ ಆಕರ್ಷಣೆಯಾಯಿತು. ಅದೇರಿತಿ ಜಿಎಂಐಟಿ ಶಿಕ್ಷಣ ಸಂಸ್ಥೆ ಕೂಡ ಅದೇ ವೇಗದ ಬೆಳವಣಿಗೆ ದಾಖಲಿಸಿ ಶೈಕ್ಷಣಿಕ ಉದ್ಯೋಗಕ್ಕೆ ಸವಕಾಶವಾಗಿದೆ. ತರಳಬಾಳು ಸಂಸ್ಥೆಜತೆ, ಇದೀಗ ಟ್ರೆಂಡ್ ಆಗಿರುವ ಪಿಯು ಕಾಲೇಜುಗಳ ವಿಭಿನ್ನ ಬ್ರಾಂಡ್‌ಗಳೆಲ್ಲ ಇಲ್ಲಿ ತಮ್ಮ ಶಾಖೆ ತೆರೆದಿವೆ. ಹೀಗೆ ಬಹು ಸಾಧ್ಯತೆಯ ಶೈಕ್ಷಣಿಕ ಕೇಂದ್ರವಾಗಿ ನಗರವು  ದೊಡ್ಡ ಸಂಖ್ಯೆಯಲ್ಲಿ  ಶಿಕ್ಷಕಿಯರಿಗೆ  ಉದ್ಯೋಗ ಕೊಡುತ್ತಿದೆ.
ಕೃಷಿ ಪೂರಕವಾದ ಉದ್ದಿಮೆಗಳ ಪೈಕಿ ಮೂರು ಸಕ್ಕರೆ ಕಾರ್ಖಾನೆಗಳು ದಾವಣಗೆರೆ ನಗರವನ್ನು ಸುತ್ತುವರಿದಿವೆ. ಕೆಲಮಟ್ಟಿಗೆ ಉದ್ಯೋಗವನ್ನು ಕೊಡುತ್ತಲೇ, ಕೃಷಿಚಟುವಟಿಕೆಯನ್ನು   ಪೂರಕವಾಗಿ ಪೋಷಣೆ ಮಾಡುತ್ತಿದೆ. ಮೊದಲಿನಿಂದಲೂ ಸಗಟು ವ್ಯಾಪಾರದ ಕೇಂದ್ರವಾಗಿ ಹಳೆಯ ದಾವಣಗೆರೆ ಸಾಂಪ್ರದಾಯಿಕ ಉದ್ಯೋಗದಲ್ಲಿ ಮುಂಚೂಣಿಯಲ್ಲಿದೆ. ಇಂಜಿನೀಯರ್ ಶಿಕ್ಷಣ ಪಡೆದವರು ಪಡೆದವರು ಇಲ್ಲಿ  ಹೆಚ್ಚುಚುಕಾಲ ನಿಲ್ಲುತ್ತಿಲ್ಲ.ಬಲವಾದ ಅಭಿವೃದ್ಧಿ ಪ್ರಾಧಿಕಾರದ ಕಾರಣ ವ್ಯವಸ್ಥಿತ ಬಡಾವಣೆಗಳು ನಗರದಲ್ಲಿ  ಇತರ ಎಲ್ಲೆಡೆಗಳಿಗಳಿಗಿಂತ ಆಕರ್ಷಕ ವಸತಿ ಪ್ರದೇಶವನ್ನು ನಿರ್ಮಿಸಿರುವುದು, ಉದ್ಯೋಗಕ್ಕಾಗಿ ಬರುವವರಿಗೆ ಅನುಕೂಲ ಆಗಿದೆ.  90ರ ದಶಕದಲ್ಲಿ  ಇಲ್ಲಿನ ಪ್ರಾಪರ್ಟಿ ಖರೀದಿ ರಾಜ್ಯದಲ್ಲೇ ಹೆಸರುವಾಸಿ ಸಂಗತಿಯಾಗಿತ್ತು. ಈಗಲೂ ಇಲ್ಲಿನ ಭೂಮಿ ಹಾಗೂ ಮನೆಯ ಬೆಲೆ ಶ್ರೀಮಂತರ ಕೈಗೆಟುಕುವಂತಿದ್ದು, ಸುತ್ತುವರಿದ ನೀರಾವರಿ ಭೂಮಿ ಕೂಡ ಇಲ್ಲಿನ ಜಾಗದ ಬೆಲೆಯನ್ನು ಹೆಚ್ಚಿಸಿದೆ. ಇದೇ ಕಾರಣ ಕಟ್ಟಡ ಉದ್ದಿಮೆ ಸಾಕಷ್ಟು  ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ. ಮೈಸೂರು, ಬೆಂಗಳೂರಿನಲ್ಲಿ  ಕಾಣುವ ಪಾರ್ಕ್ ಸಮೇತ ಬಡಾವಣೆ  ಇಲ್ಲಿನ ವಿಶೇಷತೆ. ಹಾಗೆ ನೋಡಿದರೆ, ಮನೆಯ ಮೊದಲ ಮಹಿಡಿಯನ್ನು ಬಾಡಿಗೆಗಾಗಿಯೇ ಕಟ್ಟಿಸುವುದು, ದಾವಣಗೆರೆಯ ಆದಾಯ ಭದ್ರತೆಯ ದೊಡ್ಡ ಸಾಧ್ಯತೆಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಹಳೆಯ ದಾವಣಗೆರೆಗೆ ಒಂದಿಷ್ಟು ಕಾಯಕಲ್ಪ ನೀಡುವ ನಿರೀಕ್ಷೆ ಇದೆ.  ಪಕ್ಕದಲ್ಲೇ ಭದ್ರಾ ನದಿ ನಗರದ ಕುಡಿಯವ ನೀರಿನ ದಾಹ ಪೂರೈಸಿದ್ದು, ಭವಿಷ್ಯದಲ್ಲಿ ಹೊಸ ಉದ್ದಿಮೆಗಳನ್ನು, ಇನ್ನಷ್ಟು ಉದ್ಯೋಗ ಸಾಧ್ಯತೆಯನ್ನು ಜೀರ್ಣಿಸಿಕೊಳ್ಳಲು ಸಿದ್ಧವಾಗಿದೆ. ಕೇಂದ್ರದಲ್ಲಿ  ಉದ್ದಿಮೆ ಖಾತೆಯ ಸಚಿವರಾದ ದಾವಣಗೆರೆ ಮೂಲದ ಜಿಎಂ ಸಿದ್ದೇಶ್ವರ್ ದಾವಣಗೆರೆ ಕೇಂದ್ರಿತವಾಗಿ ಉದ್ದಿಮೆ ಕಾರಿಡಾರ್  ಸ್ಥಾಪನೆಯ ಕುರಿತು ಹೇಳಿದ್ದಾರೆ. ಇತ್ತೀಚೆಗೆ ಒಂದು ಬೃಹತ್ ಉದ್ಯೋಗ ಮೇಳವನ್ನೂ ಆಯೋಜಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ  ತಾವೇ ಕೆಲವು ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗ ಪೋಷಕರಾಗಿರುವುದು ದಾವಣಗೆರೆ ಭವಿಷ್ಯದ ದಿಕ್ಸೂಚಿಯಾಗಿದೆ. ಹೊಸ ಹುಮ್ಮಸ್ಸಿನ ಯುವ ಉದ್ಯಮಿಗಳ ದಂಡೊಂದು ಈ ನಗರದಲ್ಲಿಯೂ ಟೊಂಕ ಕಟ್ಟಿ ನಿಂತಿದೆ.

******
ಎಲ್ಲ  ನಗರಗಳಂತೆ ಆನ್ ಲೈನ್ ಮಾರುಕಟ್ಟೆ  ಸೃಷ್ಟಿಸಿದ ಕೆಲಸಗಳು ಪ್ರೆಶ್ ಪದವಿಧರರಿಗೆ ತಕ್ಷಣ ಸಿಗುವ ಕೆಲಸವಾಗಿದೆ. ಅದೇ ರೀತಿ ರಿಲಾಯನಸ್ ಮಾರ್ಟ್, ಬಿಗ್ ಬಜಾರ್‌ಗಳು ಸಾಮಾನ್ಯ ಜವಳಿ ಅಂಗಡಿ, ಬಂಗಾರದ ಅಂಗಡಿಗಳೊಟ್ಟಿಗೆ ಕೆಳ ಮಧ್ಯಮ ವರ್ಗದ  ಜನರಿಗೆ ತಕ್ಷಣದ ಸಾಧ್ಯತೆಗಳನ್ನು ಒದಗಿಸುತ್ತಿವೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸುತ್ತಲೇ ಜವಳಿ ಅಂಗಡಿಗಳಲ್ಲಿ  ಪಾರ್ಟ್ ಟೈಮ್ ಕೆಲಸ ಮಾಡುತ್ತ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ.

*****
ವರ್ಷಾಂತ್ಯದಲ್ಲಿ ಹೊಸ ಜಾಬ್ ನಿರೀಕ್ಷೆ
*ವಿಸ್ತರಣಾ ಹಂತದಲ್ಲಿರುವ ದಾವಣಗೆರೆ ಜವಳಿ ಪಾರ್ಕ್‌ನಲ್ಲಿ  -1000
*ಆರಾಧ್ಯ ವೈರ್ ಗ್ರೂಪ್, ದಾವಣಗೆರೆ-450
*ದಾವಣಗೆರೆ ವಿಶ್ವವಿದ್ಯಾಲಯ ನಾನಾ ಇಲಾಖೆ  - 1500
* ಖಾಸಗಿ, ಸರಕಾರಿ ಸಂಸ್ಥೆಗಳಲ್ಲಿ  ಶಿಕ್ಷಕರ ಕೊರತೆ -1500
*ಶಹ  ಇನ್‌ಫ್ರಾ ಟೆಕ್/ ಕಟ್ಟಡೋದ್ಯಮ-250
*ಕಾರ್ಗಿಲ್-ದಾವಣಗೆರೆ ಕಾರ್ನ್ ಮಿಲ್/ಮೆಕ್ಕೆ ಜೋಳ ಸಂಸ್ಕರಣಾ ಉದ್ಯಮ-500
* ನಿರೀಕ್ಷೆಯಲ್ಲಿರುವ  ಹೈಟೆಕ್ ಪೋವಾ/ ಅಟೊಮೆಟಿಕ್ ರೈಸ್ ಇಂಡಸ್ಟ್ರೀ -100

****
ಬಿರುಸಿನಲ್ಲಿ  ಹೊರಟ ಸ್ಮಾರ್ಟ್ ಸಿಟಿ
ರಾಜ್ಯದ ಆರು ಸ್ಮಾರ್ಟ್ ಸಿಟಿಗಳ ಪೈಕಿ ಒಂದಾದ ದಾವಣಗೆರೆ ಹೊಸ  ಗ್ಲಾಮರ್ ಪಡೆದುಕೊಂಡಿದೆ. ನಗರದ ಶೈಕ್ಷಣಿಕ ಹಾಗೂ ವಾಣಿಜ್ಯ ಸಂಸ್ಥೆಗಳು ಹೊಸ ಅವಕಾಶ ಸೆಳೆದುಕೊಳ್ಳಲು ಸಜ್ಜಾಗುತ್ತಿವೆ. ಇ-ಆಡಳಿತವನ್ನು ವ್ಯವಸ್ಥಿತವಾಗಿ ಅಳವಡಿಸಿದ್ದ  ಪಾಲಿಕೆ ಕೂಡ ಆಯ್ಕೆಗೆ ಕಾರಣ ಆಗಿದೆ. 5 ಲಕ್ಷ  ಮೀರಿದ ಜನಸಂಖ್ಯೆಯ ನಗರ  ಸುಗಮ ಸಾರಿಗೆ, ಸಂಪರ್ಕ, ಮಾರುಕಟ್ಟೆ, ನೈರ್ಮಲ್ಯ  ಮತ್ತಿತರ ಹೈಟೆಕ್ ಯೋಜನೆಗಳ ನರೀಕ್ಷೆಯಲ್ಲಿದೆ.  ಮುಂದಿನ ಐದು ವರ್ಷ ಅವಧಿಯಲ್ಲಿ  ಸಾವಿರ ಕೋಟಿ ರೂ. ಅನುದಾನ ಇದಕ್ಕಾಗಿ ದೊರೆಯಲಿದೆ. ಸ್ಮಾರ್ಟ್ ಯೋಜನೆಯಲ್ಲಿ  ಯಾವ ಕೆಲಸ ಕೈಗೆತ್ತಿಕೊಳ್ಳಬೇಕು ಎಂಬ ಯೋಜನೆಯ ಸಿದ್ಧತೆ ಇದೀಗ ನಡೆದಿದೆ.


ಕೋಟ್

ಮೇಕ್ ಇನ್  ಇಂಡಿಯಾ ಎಂಬ ಮೋದಿಯವರ ಘೋಷಣೆಗೆ ಪೂರಕವಾಗಿ ದಾವಣಗೆರೆಗೆ ಉದ್ದಿಮೆಗಳನ್ನು ತರುತ್ತೇವೆ. ದೊಡ್ಡ ಪ್ರಮಾಣದಲ್ಲಿ ಪದವೀಧರರು ಇಲ್ಲಿ  ಹೊರಬರುತ್ತಿದ್ದು, 10 ಸಾವಿರ  ಉದ್ಯೋಗ ಸೃಷಿಸುವ  ಕನಸು ನನ್ನದು. ಅಟೊ ಉದ್ದಿಮೆ, ಕೃಷಿ ಪೂರಕ ಉದ್ದಿಮೆಗಳು ಇಲ್ಲಿ ಗೆ ಸರಿ ಹೊಂದುತ್ತವೆ. ರಾಜ್ಯ ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಇವುಗಳನ್ನೆಲ್ಲ  ನನಸು ಮಾಡುವುದು ಸಾಧ್ಯ.-ಜಿ.ಎಂ.ಸಿದ್ದೇಶ್ವರ್,  ಕೇಂದ್ರ ಸಾರ್ವಜನಿಕ ಉದ್ದಿಮೆ ಸಚಿವ.




Read More