ದಿ ಆರ್ಟ ಥೀಫ್

ದಿ ಆರ್ಟ ಥೀಫ್
ಅನುವಾದ : ಸದಾನಂದ ಹೆಗಡೆ
ಶತಮಾನಗಳಿಂದ, ಪ್ರಪಂಚದಾದ್ಯಂತದ ಕಲಾಕೃತಿಗಳನ್ನು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಕದಿಯಲಾಗಿದೆ. ಆದರೆ ಖದೀಮ ಕಳ್ಳ ಸ್ಟೀವನ್ ಬ್ರೀಟ್ವೀಸರ್ ತರ ಯಾರೂ ಅದರಲ್ಲಿ ದೀರ್ಘ ಕಾಲ ಯಶಸ್ವಿಯಾಗಲಿಲ್ಲ. ಸುಮಾರು ಎಂಟು ವರ್ಷಗಳ ಕಾಲ ಇನ್ನೂರಕ್ಕೂ ಹೆಚ್ಚು ದರೋಡೆಗಳನ್ನು ನಡೆಸುತ್ತಾ-ಯುರೋಪಿನಾದ್ಯಂತ ವಸ್ತುಸಂಗ್ರಹಾಲಯಗಳು ಮತ್ತು ಕ್ಯಾಥೆಡ್ರಲ್ಗಳಲ್ಲಿ- ಬ್ರೀಟ್ವೀಸರ್, ಈತನ ಎಲ್ಲ ಅಪರಾಧಗಳಿಗೆ ಬೆಂಗಾವಲಾಗಿ ನಿಲ್ಲುವ ಗೆಳತಿ ಅನ್ನೆ ಕ್ಯಾಥರಿನ್‌ಳೊಂದಿಗೆ, ಮುನ್ನೂರಕ್ಕೂ ಹೆಚ್ಚು ಕಲಾಕೃತಿ ಕಳವು ಮಾಡುತ್ತಾನೆ. ಅಂತಿಮವಾಗಿ ಎಲ್ಲವಕ್ಕೂ ಒಂದು ಅಂತ್ಯ ಎಂಬುದು ಇರುತ್ತದೆ. ದಿ ಆರ್ಟ್ ಥೀಫ್‌ನಲ್ಲಿ ಲೇಖಕ ಮೈಕೆಲ್ ಫಿಂಕೆಲ್ ಬ್ರೀಟ್ವೀಸರ್‌ನ ವಿಚಿತ್ರ ಮತ್ತು ಆಕರ್ಷಕ ಜಗತ್ತನ್ನು ನಮ್ಮೆದುರು ತೆರೆದಿಡುತ್ತಾನೆ. ಬ್ರೀಟ್ವೀಸರ್ ಹೆಚ್ಚಿನ ಕಳ್ಳರಂತಲ್ಲ, ಎಂದಿಗೂ ಹಣಕ್ಕಾಗಿ ಕದ್ದಿಯುವುದಿಲ್ಲ. ಬದಲಾಗಿ, ಅವನಿಗೆ ಉತ್ತಮ ಕಲಾಕೃತಿಗಳ ಬಗ್ಗೆ ಇನ್ನಿಲ್ಲದ ವ್ಯಾಮೋಹವೂ ಇತ್ತು. ಚಿತ್ರಗಳ ಆಸ್ವಾದನೆಯ ಪರಿಶ್ರಮವೂ ಇತ್ತು. ತಾನು ಕಳವು ಮಾಡಿದ ಸಂಪತ್ತನ್ನು ಒಂದು ಜೋಡಿ ರಹಸ್ಯ ಕೊಠಡಿಗಳಲ್ಲಿ ಪ್ರದರ್ಶಿಸಿದ್ದ. ಅಲ್ಲಿ ಅವನು ಕಲಾಕೃತಿಗಳನ್ನು, ಶಿಲ್ಪಗಳನ್ನು ಮನಃಪೂರ್ವಕವಾಗಿ ಮೆಚ್ಚಿ ಹೆಮ್ಮೆಪಡುತ್ತಿದ್ದ. ಕದ್ದು ತಪ್ಪಿಸಿಕೊಳ್ಳಲು ಯಾವ ವೇಗದಲ್ಲಾದರೂ ಓಟ ಕೀಳುವ ನಿಪುಣ, ದೇಹ ಸೌಷ್ಟವವೂ ಆತನಿಗಿತ್ತು. ಯಾವುದೇ ಭದ್ರತಾ ವ್ಯವಸ್ಥೆಯನ್ನು ಬೇಸಿ ನುಸುಳುವ, ಎಗರಿಸಿಕೊಂಡು ಬರುವ ಸಹಜ ಸಾಮರ್ಥ್ಯವನ್ನು ಹೊಂದಿದ್ದ. ಅಷ್ಟೇ ಅಲ್ಲ, ಉಸಿರುಕಟ್ಟುವಷ್ಟು ಭಯಾನಕ ಕಳವನ್ನೂ ಅಳುಕೇ ಇಲ್ಲದೆ ನಿಭಾಯಿಸುತ್ತಿದ್ದ. ಆದರೂ ಈ ವಿಚಿತ್ರ ಪ್ರತಿಭೆ -ಸೈಕೋ ದೊಡ್ಡ ದೊಡ್ಡ ಕಳವುಗಳನ್ನು ದಕ್ಕಿಸಿಕೊಂಡು ವ್ಯಸನಿಯಾಗಿ ಬೆಳೆದುಬಿಟ್ಟ. ಕೊನೇ ಕ್ಷಣದಲ್ಲಿ ಎಚ್ಚೆತ್ತ ಗೆಳತಿ ಕೆನ್ ತನ್ನ ಇನಿಯನಿಗೆ ಎಷ್ಟೇ ಹೇಳಿದರೂ ಕಿವಿಗೊಡದೆ ಹೋದ. ಒಂದು ಅಂತಿಮ ದರೋಡೆಯು ಈತ ಕಟ್ಟಿಕೊಂಡ ಕಳವಿನ ಬೃಹತ್ ಸಾಮ್ರಾಜ್ಯವನ್ನೇ ಉರುಳಿಸಿ ಹಾಕಿತು. ಇದು ಕಲೆ, ಅಪರಾಧ, ಪ್ರೀತಿ ಮತ್ತು ಯಾವುದೇ ವೆಚ್ಚದಲ್ಲಿಯಾದರೂ ಸರಿ, ಸೌಂದರ್ಯವನ್ನು ಹೊಂದುವ ಹಪಾಪಿ ಹಸಿವಿನ ಕಥೆಯಾಗಿದೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಶಿಫಾರಸು ಮಾಡಿದ ಬೆಸ್ಟ್ ಸೆಲ್ಲರ್ ಬರಹಗಾರ ಮೈಕೆಲ್ ಫಿಂಕೆಲ್ ಅವರ, ದಿ ಆರ್ಟ್‌ ಥೀಫ್ ಕಾದಂಬರಿಯನ್ನು ಕನ್ನಡಿಗರಿಗೆದಾರಾವಾಹಿ ರೀತಿಯಲ್ಲಿ ಇಲ್ಲಿದೆ.....
ಅಧ್ಯಾಯ- 1 ಕಳವಿನ ಸಂಚಿನೊಂದಿಗೆ ವಸ್ತುಸಂಗ್ರಹಾಲಕ್ಕೆ ಧಾವಿಸುತ್ತಿದ್ದ ಸ್ಟೀವನ್ ಬ್ರೀಟ್ವೀಸರ್ ತನ್ನ ಗೆಳತಿ ಆನ್ನೆ-ಕ್ಯಾಥರೀನ್ ಕ್ಲೀನ್ಕ್ಲಾಸ್‌ಳ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಖುಷಿಯಿಂದ ಸುತ್ತುವ ಪ್ರೇಮಿಗಳಂತೆ ಕಟ್ಟಡದ ಮುಂಭಾಗದ ಮೇಜಿನ ಬಳಿಗೆ ಹೋಗಿ ಹಲೋ ಹೇಳುತ್ತಾರೆ. ಮುದ್ದಾದ ಯುವ ಜೋಡಿಯು ಗರಿಯಾದ ನೋಟ್ ಮುಂದಿಟ್ಟು ಎರಡು ಟಿಕೆಟ್‌ಳನ್ನು ಖರೀದಿಸಿ ಒಳಗೆ ಹೋಗುತ್ತಾರೆ. ಅದು ಫೆಬ್ರವರಿ 1997, ಬೆಲ್ಜಿಯಂ ದೇಶದ ಎಂಟ್ವರ್ಪ್ ಪಟ್ಟಣದಲ್ಲಿ ಗೌಜಿನ ಒಂದು ಭಾನುವಾರ. ಆಗ ಊಟದ ಸಮಯವಾಗಿದ್ದರಿಂದ ಕದಿಯಲು ಹೇಳಿಮಾಡಿಸಿದ ಸಮಯ. ರೂಬೆನ್ಸ್ ಹೌಸ್‌ನ ವಸ್ತುಸಂಗ್ರಹಾಲಯದಲ್ಲಿ ಯುವ ಜೋಡಿಯು ಪ್ರವಾಸಿಗರ ಸೋಗಿನಲ್ಲಿ ನುಗ್ಗಿ ಒಳಕ್ಕೆ ಹೋಗುತ್ತಾರೆ. ಶಿಲ್ಪಗಳು ಮತ್ತು ತೈಲಚಿತ್ರಗಳನ್ನು ಗಮನಿಸುತ್ತ ತಲೆದೂಗುತ್ತಾರೆ. ಹುಡುಗಿ ಆನ್ನೆ-ಕ್ಯಾಥರೀನ್ ಸೆಕೆಂಡ್ ಹ್ಯಾಂಡ್ ಅಂಗಡಿಗಳಲ್ಲಿ ಖರೀದಿಸಿದ ಆಹ್ಲಾದಕರ ಶನೆಲ್ ಮತ್ತು ಡಿಯೋರ್ ಅತ್ತರ್ ಪೂಸಿಕೊಂಡು ಗಮನ ಸೆಳೆಯುತ್ತಿದ್ದಳು. ಆಕೆಯ ಭುಜದ ಮೇಲೆ ದೊಡ್ಡ ವೈವ್ಸ್ ಸೇಂಟ್ ಲಾರೆಂಟ್ ಜಂಬದ ಚೀಲವಿತ್ತು. ಜತೆಗಾರ ಬ್ರೀಟ್ವೀಸರ್ ಬೆಲ್ ಬಾಟಮ್ ಪ್ಯಾಂಟ್ಗೆ ಸಿಕ್ಕಿಸಿದ ಗುಂಡಿ -ಬಿಚ್ಚಿದ ಶರ್ಟ್ ಧರಿಸಿದ್ದ. ಅದರ ಮೇಲಿರುವ ಓವರ್ಕೋಟ್ ಸ್ವಲ್ಪ ದೊಡ್ಡದಾಗಿಯೇ ಇತ್ತು. ಸ್ವಿಸ್ ಸೇನೆಯ ಚಾಕು ಒಂದನ್ನು ತನ್ನ ಕೋಟ್ ಜೇಬಿನಲ್ಲಿ ಇರಿಸಿಕೊಂಡಿದ್ದ. ರೂಬೆನ್ಸ್ ಹೌಸ್ ಹದಿನೇಳನೇ ಶತಮಾನದ ಡಚ್ ಫ್ಲಾನಿಶ್ ಮೂಲದ ಮಹಾನ್ ವರ್ಣಚಿತ್ರಕಾರ ಪೀರ್ಟ ಪಾಲ್ ರೂಬೆನ್ಸ್ ಅವರು ಬಾಳಿದ ಮನೆ. ರೂಬೆನ್ಸ್ ಬಳಿಕ ಅವರ ನಿವಾಸವನ್ನು ಅವರ ಕೃತಿಗಳು, ಸಂಗ್ರಹವನ್ನೆಲ್ಲ ಜೋಡಿಸಿ ಸೊಗಸಾದ ವಸ್ತುಸಂಗ್ರಹಾಲಯ ಮಾಡಲಾಗಿದೆ. ಪ್ರಣಯ ಜೋಡಿಯು ಪಾರ್ಲರ್, ಅಡುಗೆಮನೆ ಮತ್ತು ಊಟದ ಕೋಣೆಯಲ್ಲಿ ಚಿತ್ರಗಳನ್ನು ನೋಡುತ್ತ ಅಲೆಯುತ್ತಾರೆ. ಬ್ರೀಟ್ವೀಸರ್ ಕಳ್ಳ ಪಕ್ಕದ ಬಾಗಿಲುಗಳನ್ನು ಪರಾಂಬರಿಸಿ ನೆನಪಿಟ್ಟುಕೊಳ್ಳುತ್ತಾನೆ ಮತ್ತು ಕಾವಲುಗಾರರ ಚಲನ-ವಲನ ಗಮನಿಸುತ್ತಾನೆ. ಹಲವಾರು ತಪ್ಪಿಸಿಕೊಳ್ಳುವ ಮಾರ್ಗಗಳು ಅವನ ಮನಸ್ಸಿನಲ್ಲಿ ರೂಪುಗೊಳ್ಳುತ್ತವೆ. ಕಳವಿಗೆ ಹೊಂಚು ಹಾಕಿದ್ದ ಬೆಲೆ ಬಾಳುವ ವಿಗ್ರಹವೊಂದು ವಸ್ತುಸಂಗ್ರಹಾಲಯದ ಹಿಂಭಾಗದಲ್ಲಿ ಹಿತ್ತಾಳೆಯ ಗೊಂಚಲು ಮತ್ತು ಎತ್ತರದ ಕಿಟಕಿಗಳೊಂದಿಗೆ ನೆಲ-ಮಹಡಿಯ ಗ್ಯಾಲರಿಯಲ್ಲಿ ಆಶ್ರಯ ಪಡೆದಿತ್ತು. ಆಗ ಮಧ್ಯಾಹ್ನದ ಪ್ರಖರ ಬಿಸಿಲಿನಿಂದ ಕೃತಿಗಳನ್ನು ರಕ್ಷಿಸಲು ಕೆಲವು ಕಿಟಕಿ ಮುಚ್ಚಲಾಗಿತ್ತುಘಿ. ಒಂದೆಡೆ ಅಲಂಕೃತವಾದ, ನಿಲುವುಗನ್ನಡಿಯೊಳಗೊಂಡ ಮರದ ಮೇಕಪ್ ಕಪಾಟಿನಲ್ಲಿ ವಿಗ್ರಹವನ್ನು ಮಜಬೂತ್ ಆಗಿ ತಳಕ್ಕೆ ಜೋಡಿಸಲಾಗಿತ್ತು. ಬ್ರೀಟ್ವೀಸರ್ ಕೆಲವು ವಾರಗಳ ಹಿಂದೆ ಕಳವಿನ ಯೋಜನೆ ರೂಪಿಸಲು ಬಂದಾಗ ವಿಗ್ರಹ ಇಟ್ಟ ಜಾಗವನ್ನೊಮ್ಮೆ ನೋಡಿಕೊಂಡಿದ್ದ. ಇಂದು ಮತ್ತದೆ ಜಾಗಕ್ಕೆ ಬಂದು ಇಬ್ಬರೂ ಒಳಗೊಳಗೆ ಸ್ಕೆಚ್ ಹಾಕಿದರು. ನಾಲ್ಕು ನೂರು ವರ್ಷಗಳ ಹಳೆಯ ಕೆತ್ತನೆಯ ನುಣುಪು ಹಾಗೇ ಹೊಳೆಯುತ್ತಿತ್ತು. ಇದು ದಂತದ ವಿಗ್ರಹಗಳ ವಿಶಿಷ್ಟ ಗುಣವಾಗಿದೆ. ಶಿಲ್ಪವು ಅವನಿಗೆ ಅತೀಂದ್ರಿಯ ಅನ್ನಿಸಿದೆ. ಒಮ್ಮೆ ನೋಡಿದ ಬಳಿಕ ಶಿಲ್ಪದ ಬಗ್ಗೆ ಕನಸು ಕಾಣುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಆತ ಗೆಳತಿ ಆನ್ನೆ-ಕ್ಯಾಥರೀನ್ ಜತೆಗೆ ಮತ್ತೊಮ್ಮೆ ರೂಬೆನ್ಸ್ ಮನೆಗೆ ಮರಳಿದ್ದ. ಎಲ್ಲಾ ರೀತಿಯ ಭದ್ರತೆಯು ಎಲ್ಲೋ ಒಂದೆಡೆ ಬಿರುಕು ಹೊಂದಿರುತ್ತದೆ. ಮರದ ಮೇಕಪ್ ಕಪಾಟಿನಲ್ಲಿ ನ್ಯೂನತೆಯನ್ನು ಅವನು ಮೊದಲ ಭೇಟಿಯಲ್ಲೇ ಗಮನಿಸದ್ದ. ಎರಡು ಮೊಳೆಯನ್ನು ಕಿತ್ತರೆ ಕಪಾಟಿನ ಮೇಲಿನ ಭಾಗವನ್ನು, ತಳದಿಂದ ಬೇರ್ಪಡಿಸಬಹುದಿತ್ತು. ತಿರುಣೆಯ ಮೊಳೆಗಳು ಕೆಲವೊಮ್ಮೆ ಹತಿಯಾರಿಗಳಿಗೆ ಕಚ್ಚಿಕೊಳ್ಳುವುದಿಲ್ಲ, ಕಪಾಟಿನ ಹಿಂಭಾಗದಲ್ಲಿ ಹತಿಯಾರ ಓಡಿಸಿ ಮೊಳೆಯನ್ನು ತಿರುಗಿಸುವುದೂ ಸವಾಲಾಗಿತ್ತು. ಆದರೆ ಭದ್ರತಾ ಸಿಬ್ಬಂದಿಯ ನ್ಯೂನತೆಯೆಂದರೆ ಅವರು ಮನುಷ್ಯರಲ್ಲವೇ. ಅವರಿಗೆ ಹಸಿವಾಗುತ್ತದೆ. ಕೆಲವೊಮ್ಮೆ ಕುಳಿತಲ್ಲೇ ತೂಕಡಿಸುತ್ತಾರೆ. ದಿನದ ಬಹುಪಾಲು ಪ್ರತಿ ಗ್ಯಾಲರಿಯಲ್ಲಿ ಒಬ್ಬ ಸಿಬ್ಬಂದಿ ಮಾತ್ರ ಇರುವುದನ್ನು ಬ್ರೀಟ್ವೀಸರ್ ಗಮನಿಸಿದ್ದ. ಕುರ್ಚಿಯಲ್ಲೇ ಕುಳಿತು ವೀಕ್ಷಿಸುತ್ತಾರೆ. ಊಟದ ಸಮಯವನ್ನು ಹೊರತುಪಡಿಸಿಯೂ ತಿಂಡಿ, ಕಾಫಿ, ಸಿಗರೇಟ್ ಎಂದು ಭದ್ರತಾ ಸಿಬ್ಬಂದಿಗಳು ಆಚೆ ಈಚೆ ಹೋಗುತ್ತಿದ್ದರು. ಆಗ ಭದ್ರತಾ ಸಿಬ್ಬಂದಿಗಳ ಕುರ್ಚಿಗಳು ಖಾಲಿಯಾಗಿ ಏನೆಲ್ಲ ನಡೆಯಲು ಅವಕಾಶ ಇರುವುದನ್ನು ಕಳ್ಳನ ಮನಸ್ಸು ಕರಾರುವಾಕ್ಕಾಗಿ ಲೆಕ್ಕ ಹಾಕಿತ್ತು. ಇಲ್ಲಿ ಗ್ಯಾಲರಿಯ ಪ್ರವಾಸಿಗರು ಹೊತ್ತು ಗೊತ್ತು ಇಲ್ಲದೆ ಕಿರಿ ಹುಟ್ಟಿಸುತ್ತಾರೆ. ಮದ್ಯಾಹ್ನದ ಹೊತ್ತಿನಲ್ಲಿಯೂ ತುಂಬಾ ಮಂದಿ, ಕಾಲಹರಣ ಮಾಡುತ್ತಿದ್ದಾರೆ. ವಸ್ತುಸಂಗ್ರಹಾಲಯದ ಹೆಚ್ಚು ಜನಪ್ರಿಯ ಕೊಠಡಿಗಳಲ್ಲಿ ರೂಬೆನ್ಸ್ ಅವರ ವರ್ಣಚಿತ್ರಗಳೇ ಪ್ರದರ್ಶನಗೊಂಡಿವೆ. ಈ ನಡುವೆ ಈ ಶಿಲ್ಪವನ್ನು ಸುರಕ್ಷಿತವಾಗಿ ಕದ್ದೊಯ್ಯಲು ತುಂಬಾ ದೊಡ್ಡದಾಗಿದೆ. ಅದಕ್ಕಿಂತ ಬ್ರೀಟ್ವೀಸರ್ ತುಂಬಾ ಧಾರ್ಮಿಕವಾಗಿದೆ ಇದನ್ನು ನೋಡುತ್ತಾನೆ. ಗ್ಯಾಲರಿಯ ಪ್ರಮುಖ ಆಕರ್ಷಣೆ ಎನ್ನಬಹುದಾದ - ಆಡಮ್ ಮತ್ತು ಈವ್ - ರೂಬೆನ್ಸ್ ತನ್ನ ಜೀವಿತಾವಯಲ್ಲಿ ಸಂಗ್ರಹಿಸಿದ ಅಪರೂಪದ ವಸ್ತುಗಳಲ್ಲಿ ಒಂದು. ರೋಮನ್ ದಾಶನಿಕರ ಅಮೃತಶಿಲೆಯ ಪ್ರತಿಮೆಗಳು, ಹರ್ಕ್ಯೂಲಸ್ ಟೆರಾಕೋಟಾ ಶಿಲ್ಪ, ಡಚ್ ಮತ್ತು ಇಟಾಲಿಯನ್ ತೈಲ ವರ್ಣಚಿತ್ರಗಳು ಇಲ್ಲಿ ಕಾಣುತ್ತವೆ. ಜರ್ಮನಿಯ ಕುಶಲಕರ್ಮಿ ಜಾರ್ಜ್ ಪೆಟೆಲ್ ಕೆತ್ತಿದ ಡಮ್- ಈವ್ ದಂತ ಶಿಲ್ಪವವು ರೂಬೆನ್ಸ್ ಅವರಿಗೆ ಉಡುಗೊರೆಯಾಗಿ ಬಂದಿತ್ತು. ಪ್ರವಾಸಿಗರು ಸುತ್ತುತ್ತಿರುವಂತೆ, ಬ್ರೀಟ್ವೀಸರ್ ತುಸು ಸರಿದು ತೈಲವರ್ಣಚಿತ್ರದ ಮುಂದೆ ಬಂದು ನಿಂತು ಚಿತ್ರಪಟ ನೋಡುವನಂತೆ ನಟಿಸುತ್ತಿದ್ದ. ಒಮ್ಮೆ ಸೊಂಟದ ಮೇಲೆ ಕೈ ಇಟ್ಟುಕೊಳೂವುದು, ಮತ್ತೊಮ್ಮೆ ಎರಡೂ ಕೈ ಜೋಡಿಸಿ, ಇನ್ನೊಮ್ಮೆ ಮಸ್ತಕ ಸವರಿಕೊಳ್ಳುತ್ತ ಏನೆಲ್ಲ ಬಂಗಿಯಲ್ಲಿ ಚಿತ್ರವನ್ನೇ ನೋಡತೊಡಗಿ. ಮೇಲ್ನೋಟಕ್ಕೆ ಏನೂ ಆಗದವನಂತೆ ಸುಭಗನಂತಿದ್ದರೂ ಆತನ ಹೃದಯವು ಉತ್ಸಾಹ ಹಾಗೂ ಒಳಗೊಳಗೆ ಭಯದಿಂದ ಕಂಪಿಸುತ್ತಿತ್ತು. ಅನ್ನೆ - ಕ್ಯಾಥರೀನ್ ಒಮ್ಮೆ ಗ್ಯಾಲರಿಯ ಬಾಗಿಲ ಬಳಿ ಸುಳಿದಾಡುತ್ತಾಳೆ. ಇನ್ನೊಮ್ಮೆ ವಿಚಿತ್ರವಾಗಿ ನಿಂತಿರುತ್ತಾಳೆ. ಕೆಲವೊಮ್ಮೆ ಬೆಂಚಿನ ಮೇಲೆ ಕುಳಿತು, ಏನನ್ನೋ ಕಾಯುತ್ತಿರುವಂತೆ, ಒಮ್ಮೆ ಉದಾಸೀನ, ಇನ್ನೊಮ್ಮೆ ಆತಂಕದ ಮನಸ್ಥಿತಿಯಲ್ಲಿ . ಆಕೆಯ ಕಣ್ಣು ಮಾತ್ರ ಆಚೆ ಹಜಾರದ ಚಲನವಲನವನ್ನು ಸ್ಪಷ್ಟವಾಗಿ ಅಳೆದು ಏನೋ ಖಚಿತಪಡಿಸಿಕೊಳ್ಳುತ್ತಿತ್ತು. ಈ ಪ್ರದೇಶದಲ್ಲಿ ಯಾವುದೇ ಭದ್ರತಾ ಕ್ಯಾಮೆರಾಗಳಿಲ್ಲ. ಹಾಗೆ ನೋಡಿದರೆ ಇಡೀ ವಸ್ತುಸಂಗ್ರಹಾಲಯದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕ್ಯಾಮೆರಾಗಳಿದ್ದವು. ಈ ಕ್ಯಾಮೆರಾಗಳ ಸ್ಥಿತಿಗತಿ, ಇವುಗಳ ಜೋಡಣೆಯ ಸ್ಥಳ, ಚಿತ್ರಗಳನ್ನಿ ತಲುಪಿಸುವ ವಯರಿಂಗ್ ವ್ಯವಸ್ಥೆಯನ್ನೆಲ್ಲ ಇವರು ನೋಡಿಕೊಂಡಿದ್ದಾರೆ. ಕೆಲವೊಮ್ಮೆ ಸಣ್ಣ ವಸ್ತುಸಂಗ್ರಹಾಲಯಗಳಲ್ಲಿ ಸಿಸಿ ಟೀವಿಗಳು ನಾಮಕೇವಾಸ್ತೆ ಎಂಬುದೂ ಇವರಿಗೆ ಗೊತ್ತು. ಜನರೆಲ್ಲ ತೆರವಾಗಿ ದಂಪತಿ ಮಾತ್ರ ಕೋಣೆಯಲ್ಲಿ ಉಳಿಯುವ ಒಂದು ಕ್ಷಣ ಅಷ್ಟರಲ್ಲೇ ಬರುತ್ತದೆ. ತಕ್ಷಣ ಚುರುಕಾದ ಕಳ್ಳರ ರಕ್ತ ಜಾಗೃತವಾಗುತ್ತದೆ. ಅಲ್ಲಿಯ ತನ ತನ್ನ ಅಧ್ಯಯನದ ಭಂಗಿಯನ್ನು ಬದಲಿಸುತ್ತಿದ್ದ ಬ್ರೀಟ್ವೀಸರ್ ಒಮ್ಮೆಲೇ ಭದ್ರತಾ ಚೌಕಿಯನ್ನು ನೋಡಿಕೊಂಡು ಇತ್ತ ದಾವಿಸುತ್ತಾನೆ. ತನ್ನ ಜೇಬಿನಿಂದ ಸ್ವಿಸ್ ಸೇನೆಯ ಚಾಕುವನ್ನು ಅಗೆಯುತ್ತಾನೆ. ಸ್ಕ್ರೂ ಡ್ರೈವರ್ ತೆಗೆದು ಮೇಕಪ್ ಕಪಾಟಿನ ಮಳೆಗಳನ್ನು ಮೆಲ್ಲನೆ ಎಬ್ಬಿಸಲು ತೊಡಗುತ್ತಾನೆ. ಸ್ಕ್ರೂವನ್ನು ನಾಲ್ಕಾರು ಸುತ್ತು ತಿರುಗಿಸಿರಬಹದು. ಕಪಾಟಿನಲ್ಲಿದ್ದ ಆ ದಿವ್ಯ ಜೋಡಿ ಮೂರ್ತಿ ಆತನನ್ನು ಆವರಿಸತೊಡಗುತ್ತದೆ. ಕೇವಲ ಹತ್ತು ಇಂಚಿನ ಆದಂ-ಈವ್ ಅದೆಷ್ಟು ಅದ್ಬುತವಾಗಿದೆ ಎಂದರೆ, ನಗ್ನ ದೇಹದ ಮೈಮಾಟಕ್ಕೆ ಸ್ನಿಗ್ಧ ಮುಖಮಾಟ ಬೆರಗುಗೊಳಿಸುವ ವಿವರವಾಗಿದೆ. ಜಗತ್ತಿನ ಮೊದಲ ಮಾನವರು ಒಬ್ಬರನ್ನೊಬ್ಬರು ನೋಡುತ್ತಿದ್ದಾರೆ. ಅವರು ಅಪ್ಪಿಕೊಳ್ಳಲು ದಾವಿಸುವಂತೆ, ಅವರ ಹಿಂದೆ ಜ್ಞಾನದ ಮರದ ಸುತ್ತ ಸುತ್ತಿಕೊಂಡ ನಾಗರಹಾವು. ತಿನ್ನಬಾರದ ಹಣ್ಣುಗಳನ್ನು ಹಿಡಿದುಕೊಂಡರೂ ಕಚ್ಚಲಿಲ್ಲ : ಮಾನವೀಯತೆ ಪಾಪದ ಪ್ರಪಾತವನ್ನು ಆವೀರ್ಭವಿಸುವ ಅನುಭವ. ಆ ಹೊತ್ತಿಗೆ ಅವನಿಗೆ ಮೃದುವಾದ ಕೆಮ್ಮಿನ ದನಿ ಕೇಳುತ್ತದೆ. ಅದು ಅನ್ನೆ ಕ್ಯಾಥರೀನ್. ಡ್ರೆಸರ್ಸ್‌ನಲ್ಲಿ ಕಾವಲುಗಾರನು ಕಾಣಿಸಿಕೊಂಡ ಎಂಬ ಎಚ್ಚರಿಸುವ ದನಿ. ಜಾಗೃತನಾದ ಬ್ರೀಟ್ವೀಸರ್ ಸ್ಕರೂ ತಿರುಗಿಸುವುದನ್ನು ತಕ್ಷಣ ಹಿಂದಕ್ಕೆ ಎಳೆದುಕೊಂಡು ಚಾಕುವನ್ನು ಕೋಟ್ ಜೇಬಿನಲ್ಲಿ ಅಡಗಿಸಿ, ಪ್ರವಾಸಿಯೊಬ್ಬ ಆದಂ- ಈವ್ ಶಿಲ್ಪವನ್ನು ಹತ್ತಿರದಿಂದ ವೀಕ್ಷಿಸುವ ಬಂಗಿಯಲ್ಲಿ ಸ್ಥಬ್ಧನಾಗಿಬಿಟ್ಟ. ಭದ್ರತಾ ಸಿಬ್ಬಂದಿ ಕೊಠಡಿಯೊಳಗೆ ಬಂದು ಇವನಿದ್ದ ಮೂರಡಿ ದೂರದಲ್ಲಿ ನಿಂತು ಒಮ್ಮೆ ಅಪಾದಮಸ್ತಕ ಗಮನಿಸಿ ಮುಂದೆ ಹೋಗುತ್ತಾನೆ. ಬ್ರೀಟ್ವೀಸರ್ ಒಳಗೆ ತಿದಿಯೊತ್ತಿದಂತೆ ಉಸಿರು ಆಚೆ ಈಚೆ ಆದರೂ ಸಿಬ್ಬಂದಿ ಆಚೆ ಹೋದ ಬಳಿಕ ಕೆಲಸ ಮುಂದುವರಿಸುತ್ತಾನೆ. ಚಾಕುವಿನ ತುದಿಯಲ್ಲಿ ಮೀಟುವಾಗ ಅದು ಜಾರದಂತೆ ನೋಡಬೇಕು, ಶಬ್ದ ಆದರೆ ಮತ್ತೆ ಭದ್ರತೆಯವರಿಗೆ ಸಂದೇಹ ಬರುತ್ತದೆ. ತುಕ್ಕು ಹಿಡಿದ ಸ್ಕರೂಗಳು ಬೇಗನೆ ತಿರುಗುವುದಿಲ್ಲ ಬೇರೆ. ಒಂದೆಡೆ ಪ್ರವಾಸಿಗರು ಇನ್ನೊಂದೆಡೆ ಕಾವಲುಗಾರರು. ಇಬ್ಬರನ್ನೂ ತಪ್ಪಿಸಿ ಒಂದೊಂದು ಸ್ಕ್ರೂ ಬಿಚ್ಚಲು ಹತ್ತು ನಿಮಿಷ ಹಿಡಿಯುತ್ತಿತ್ತು. ಇಂಥ ಕಳವಿನ ಸಂದರ್ಭದಲ್ಲಿ ಬ್ರೀಟ್ವೀಸರ್ ಕೈಗವಸುಗಳನ್ನು ಧರಿಸುವುದಿಲ್ಲ! ಬೆರಳಿನ ಅಚ್ಚುಗಳು ಸಿಗಬಾರದು ಎಂದುಕೊಂಡು, ಕೈ ಗವಸನ್ನು ಹಾಕಿಕೊಂಡರೆ, ಸ್ಕ್ರೂ ಬಿಡಿಸಲು ಹಿಡಿತ ಸಿಗುವುದಿಲ್ಲಘಿ. ಒಂದು ಮೊಳೆ ತೆಗೆಯುವಷ್ಟರಲ್ಲಿ ಒಂದಿಷ್ಟು ಸಂದರ್ಶಕರು ಆಗಮಿಸಿದರು. ತೆಗೆದ ಮೊಳೆಯನ್ನುಘಿ, ಚಾಕುವನ್ನು ಮತ್ತೊಮ್ಮೆ ಜೇಬಿನಲ್ಲಿ ಹಾಕಿಕೊಂಡ. ಅನ್ನೆ -ಕ್ಯಾಥರೀನ್ ಕೋಣೆಯ ಚಲನವಲನವನ್ನು ಕಣ್ಣಿಗೆ ಕಣ್ಣಿಟ್ಟು ಬ್ರೀಟ್ವೀಸರ್ ಗೆ ಸಂದೇಶ ಕೊಡುತ್ತಿದ್ದಳು. ಇನ್ನೆಷ್ಟು ಹೊತ್ತು, ಉಳಿದ ಸ್ಕ್ರೂಗಳ ಸಂಖ್ಯೆ, ಬಿಚ್ಚಿದ್ದೆಷ್ಟು ಎಂಬುದನ್ನು ಆತ ಸನ್ನೆ ಮೂಲಕವೇ ಆಕೆಗೆ ತಿಳಿಸುತ್ತಿದ್ದಘಿ. ಕಳವು ಮಾಲು ಸಾಗಿಸಲು ಅಂಥದ್ದೇನೂ ದೊಡ್ಡ ಚೀಲ ಬೇಡ ಇನ್ನೇನು ಮುಗಿದೇ ಹೋಯಿತು ಎಂದು ಬ್ರೀಟ್ವೀಸರ್ ಸಂದೇಶ ಕೊಟ್ಟ. ಆ ಹೊತ್ತಿಗೆ ಒಮ್ಮೆ ಅವಳು ಮ್ಯೂಸಿಯಂನ ನಿರ್ಗಮನ ದ್ವಾರದತ್ತ ಹೋಗುತ್ತಾಳೆ. ಸೆಕ್ಯುರಿಟಿ ಗಾರ್ಡ್ ಈಗಾಗಲೇ ಮೂರು ಬಾರಿ ಇಣಿಕಿದ್ದ. ಬ್ರೀಟ್ವೀಸರ್ ಮತ್ತು ಅನ್ನೆ -ಕ್ಯಾಥರೀನ್ ಇಬ್ಬರೂ ಪ್ರತಿ ಹಂತದಲ್ಲೂ ಒತ್ತಡಕ್ಕೊಳಗಾಗುತ್ತಿದ್ದಾರೆ. ಬ್ರೀಟ್ವೀಸರ್ ಪ್ರೌಢಶಾಲೆ ಮುಗಿಸಿ ಖಾಲಿ ಇದ್ದಾಗ ಮ್ಯೂಸಿಯಂ ಗಾರ್ಡ್ ಆಗಿ ಕೆಲಸ ಮಾಡಿದ್ದ. ಇಂಥ ಸಂದರ್ಭದಲ್ಲಿ ಯಾರೂ ಸಣ್ಣ ಸಣ್ಣ ವಸ್ತುಗಳನ್ನೆಲ್ಲ ಗಮನಿಸುವುದಿಲ್ಲ, ಸ್ಕ್ರೂನಷ್ಟು ಚಿಕ್ಕದಾದ ವಿವರ ಯಾರಿಗೂ ತಿಳಿದಿಲ್ಲವಾದರೂ ಬಹುತೇಕ ಭದ್ರತಾ ಸಿಬ್ಬಂದಿ ಜನರ ಮೇಲೆ ಮಾತ್ರ ಕಣ್ಣು ಇಟ್ಟೇ ಇರುತ್ತಾರೆ ಎಂಬುದು ಆತನಿಗೆ ಮೊದಲೇ ಗೊತ್ತಿತ್ತು. ಒಂದು ಕಳವು ಮಾಡಬೇಕು ಎಂದರೆ ಕೇವಲ ಎರಡು ಬಾರಿ ಸ್ಥಳನೋಡಿಕೊಂಡು ಯೋಜನೆ ರೂಪಿಸಿದರೆ ಸಾಲುವುದಿಲ್ಲ. ಕನಿಷ್ಟ ನಾಲ್ಕು ಬಾರಿಯಾದರೂ ವಸ್ತುಸಂಗ್ರಹಾಲಯಕ್ಕೆ ಹೋಗಬೇಕು, ಅಲ್ಲಿಗೆ ತಲುಪುವ ಮಾರ್ಗ, ಹೊರಬರುವ ವಿಧಾನ, ಭದ್ರತಾ ಸಿಬ್ಬಂದಿಗಳಲ್ಲಿ ಯಾರಿಗೆ ಷ್ಟು ಹೊತ್ತಿಗೆ ನಿದ್ದೆಯ ಮಂಪರು ಇರುತ್ತದೆ ಎಂಬುದನ್ನೆಲ್ಲ ತಿಳಿದು ಕಳವಿನ ಯೋಜನೆ ರೂಪಿಸುತ್ತಿದ್ದ. ನಾಲ್ಕನೆಯ ಭೇಟಿಯಲ್ಲಿ ಕಳವು ಮಾಡುವ ವೇಗವನ್ನು ತಾಲೀಮು ತರ ಮಾಡಿ ಕಳವಿಗೆ ಖಚಿತ ಯೋಜನೆ ರೂಪಿಸುತ್ತಿದ್ದ. ಸಮಸ್ಯೆಯೆಂದರೆ ನೋಡುತ್ತ ನಿಲ್ಲುವ ಸಂದರ್ಶಕರ ಗುಂಪು. ಪಕ್ಕದ ಪೇಂಟಿಂಗ್ ಒಂದರ ಬಳಿ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಪ್ರೇಕ್ಷಕರು ಗೋಲೆಯಾಗಿ ಜಮಾಯಿಸಿದ್ದರು. ಅವರು ಅಲ್ಲಿಂದ ಕದಲಿಸಲು ಬ್ರೀಟ್ವೀಸರ್ ಒಂದಿಷ್ಟು ಹೊತ್ತು ದುರು ದುರು ನೋಡುತ್ತಾನೆ. ಗೋಲೆಯಲ್ಲಿದ್ದ ಒಬ್ಬ ಪ್ರೇಕ್ಷಕ ಬ್ರೀಟ್ವೀಸರ್‌ನ ತೀಕ್ಷ್ಣ ನೋಟಕ್ಕೆ ವಿಚಲಿತನಾಗಿ ಅಲ್ಲಿಂದ ಆಚೆ ಸರಿಯುತ್ತಾನೆ. ಎಲ್ಲೋ ಜೈಲಿನಿಂದ ತಪ್ಪಿಸಿಕೊಂಡ ದುರುಳ ಕಳ್ಳನು ಇಲ್ಲಿ ಬಂದಿರಬೇಕು ಎಂಬ ಸಂದೇಹವು ಅವನಿಗಾಯಿತು. ಅಂತೂ ಆತನಿಗೆ ಅಲ್ಲಿಂದ ಕದಲುವ ಸಂದೇಶ ಹೋಗುತ್ತಿದ್ದಂತೆ ಇಡೀ ಗುಂಪು ಚದುರಿತು. ಬ್ರೀಟ್ವೀಸರ್ ಡ್ರೆಸ್ಸರ್ಸ್‌ಗೆ ಹೆಜ್ಜೆ ಹಾಕುತ್ತಾನೆ. ಮೇಕಪ್ ಕಪಾಟಿನ ಹಿಂಬಾಗವನ್ನು ಬುಡ ಸಮೇತ ಎತ್ತಿ ನಿಧಾನವಾಗಿ ಪಕ್ಕಕ್ಕೆ ಇಡುತ್ತಾನೆ. ದಂತದ ಶಿಲ್ಪವನ್ನು ನಾಜೂಕಾಗಿ ಎತ್ತಿ ಕೋಟ್ ಸರಿಸಿಕೊಂಡು ಅದನ್ನು ಒಳಕ್ಕೆ ಅಡಗಿಸುತ್ತಾನೆ. ನಿಲುವಂಗಿಯಂತಿದ್ದ ದೊಡ್ಡ ಕೋಟಿನ ಕಂಕುಳಿನಲ್ಲಿ ಅಮುಕಿಕೊಂಡ ಗಂಟೊಂದು ಪರಾಂಬರಿಸಿ ನೋಡಿದವರಿಗೆ ಕಾಣದೇ ಇರುತ್ತಿರಲಿಲ್ಲಘಿ. ಕೆತ್ತನೆಯ ಚೂಪುಗಳ ಉಬ್ಬು ಕೋಟಿನ ಹೊರಭಾಗದಲ್ಲಿ ಉಬ್ಬಿದಂತೆ ಇದ್ದರೂ ಅಲ್ಲಿ ಯಾರೂ ಕಳ್ಳನನ್ನು ಗಮನಿಸಿದಂತಿಲ್ಲ. ಮೇಕಪ್ ಕಪಾಟನ್ನು ಅಲ್ಲಿಯೇ ಪಕ್ಕಕ್ಕೆ ತಳ್ಳಿ , ಸ್ವಲ್ಪವೂ ತಡಮಾಡದೆ ಕಳ್ಳ ಚಲಿಸತೊಡಗಿದ್ದ, ಮುಂದಿನ ಇಕ್ಕಟ್ಟಿನಲ್ಲೂ ಯಾರೂ ಗಮನಿಸಲಿಲ್ಲ. ಇಂಥ ಮಹತ್ವದ ಕಳವು ತುಸುವಾದರೂ ಗಮನಕ್ಕೆ ಬಂದರೆ, ಎಲ್ಲ ಬಾಗಿಲುಗಳೂ ಮುಚ್ಚುತ್ತವೆ, ಭದ್ರಾಪಡೆಯ ಜೊತೆಗೆ ಪೊಲೀಸರೂ ಬಂದು ಸುತ್ತುಹಾಕಿ ತಕ್ಷಣವೇ ಮ್ಯೂಸಿಯಂಗೆ ಬೀಗ ಬೀಳುತ್ತದೆ ಎಂಬ ಎಚ್ಚರಿಕೆಯೊಂದು ಕಳ್ಳರಲ್ಲಿ ಇದ್ದೇ ಇತ್ತು. ಆದರೂ ಅವನು ಓಡುವುದಿಲ್ಲ. ಓಡುವುದು ಜೇಬುಗಳ್ಳರಿಗೆ ಮತ್ತು ಪರ್ಸ್ ಕಳ್ಳರಿಗೆ ಮಾತ್ರ ಸರಿ. ಮೊದಲೇ ಗುರುತಿಸಿದ್ದ ಬಾಗಿಲಿನಲ್ಲಿ ಜಾರಿಕೊಳ್ಳುತ್ತಾನೆ. ಪಕ್ಕದ ಬಾಗಿಲನ್ನು ಮ್ಯೂಸಿಯಂ ಸಿಬ್ಬಂದಿಗಳಿಗೆಂದು ಗೊತ್ತಿದ್ದರೂ, ಹಾಗೆ ಹೊರ ಬರುವುದೇ ತನ್ನ ಭದ್ರತೆ ದೃಷ್ಟಿಯಿಂದ ಒಳಿತೆಂದು ಮ್ಯೂಸಿಯಂನ ಕೇಂದ್ರ ಅಂಗಳದಲ್ಲಿ ಹೊರಬೀಳುತ್ತಾನೆ. ಹಾಗೇ ಚಲಿಸುತ್ತ ಮಸುಕಾದ ಕಲ್ಲುಗಳು, ಬಳ್ಳಿಯಿಂದ ಮುಚ್ಚಿಕೊಂಡಿದ್ದ ಗೋಡೆ ಅಂಚಿನ ಕಾಲುದಾರಿಯಲ್ಲಿ ಬರುವಾಗ ಶಿಲ್ಪವು ಅವನ ಹಿಂಭಾಗದಲ್ಲಿ ಬಡಿಯುತ್ತದೆ. ಅಲ್ಲಿಂದ ತಿರುಗಿ ಇನ್ನೊಂದು ಬಾಗಿಲನ್ನು ತಲುಪುಪಿ ಮುಖ್ಯ ದ್ವಾರದ ಮೂಲಕ ಆಂಟ್ವರ್ಪ್ ನಗರದ ಬೀದಿಗಳಲ್ಲಿ ಇಬ್ಬರೂ ಮುಂದುವರಿಯುತ್ತಾರೆ. ಪೋಲೀಸ್ ಅಕಾರಿಗಳು ಕೆಳಗಿಳಿಯುವ ಸಾಧ್ಯತೆ ಇರುವುದರಿಂದ ಪ್ರಜ್ಞಾಪೂರ್ವಕವಾಗಿ ಸಂದೇಹ ಬಾರದಂತೆ ಸಾದಾ ನಡಿಗೆಯಲ್ಲೇ ಜನರೊಂದಿಗೆ ಸೇರುತ್ತಾನೆ. ಅಲ್ಲಿದ್ದ ಅನ್ನೆ -ಕ್ಯಾಥರೀನ್ ಅನ್ನು ಗುರುತಿಸುವವರೆಗೂ ತುಸು ಆಚೆ ಈಚೆ ಹುಡುಕಿ, ಇಬ್ಬರೂ ಸೇರಿ ಕಾರನ್ನು ನಿಲ್ಲಿಸಿದ ರಸ್ತೆ ಪಾರ್ಕಿಂಗ್ ಹತ್ತಿರ ಧಾವಿಸಿದರು. ರಾತ್ರಿ ವೇಳೆಯ ಆಕಾಶದಂತೆ ಕಡು ನೀಲಯ ಒಪೆಲ್ ಟಿಗ್ರಾದ ಬಾನೆಟ್ ಕಡೆಯಿಂದ ಬಾಗಿಲು ಹತ್ತಿರ ಬಂದ ಬ್ರೀಟ್ವೀಸರ್ ಕೋಟ್ ಹಿಂದಿನಿಂದ ಹೊರತಂದು ಶಿಲ್ಪವನ್ನು ಒಳಕ್ಕೆ ಜಾರಿಸುತ್ತಾನೆ. ಪಕ್ಕದಲ್ಲಿ ಕೈ ಚಾಚಿ ಶಿಲ್ಪವನ್ನು ಹಿಡಿದುಕೊಂಡ ಅನ್ನೆಘಿ, ಪ್ಯಾಸೆಂಜರ್ ಆಸನದಲ್ಲಿ ಅದನ್ನು ಸರಿಹೊಂದಿಸಿ ಕುಳಿತರೆ , ಈತ ಬಾಗಿಲು ಎಳೆದುಕೊಂಡು ಇಗ್ನೀಶನ್ ತಿರುವಿ ಕಾರ್ ಚಾಲೂ ಮಾಡುತ್ತಾನೆ. ತನ್ನ ಕಾರನ್ನು ಶರವೇಗದಲ್ಲಿ ಓಡಿಸುವುದೂ ಆತನಿಗೆ ಗೊತ್ತುಘಿ, ಆದರೆ ಒಳಗೊಂದು ಅಮೂಲ್ಯ ವಿಗ್ರಹ ಇಟ್ಟುಕೊಂಡು ಬೇಕಾಬಿಟ್ಟಿ ವ್ಯವಹರಿಸುವುದು ಆಗ ಅವನಿಗೆ ಬೇಕಾಗಿರಲಿಲ್ಲಘಿ. ಪಟ್ಟಣದ ವರ್ತುಲ ರಸ್ತೆಗೆ ಸೇರಿಕೊಂಡು ಟ್ರಾಫಿಕ್ ದೀಪಗಳ ಪ್ರಖರತೆ ತಪ್ಪಿಸಿ ಕಾರು ಹೆದ್ದಾರಿಯನ್ನು ತಲುಪುತ್ತಲೇ ವೇಗ ಪಡೆಯುತ್ತದೆ. ಆದಂ- ಈವ್ ವಿಗ್ರಹದ ಪ್ರಭಾವವೋ, ಹೆದ್ದಾರಿಯಲ್ಲಿ ಸಿಗುವ ಓಟದ ಸ್ವಾತಂತ್ರವೋ ಅಂತೂ ೨೫ರ ಹರಯದ ಪ್ರೇಮಿಗಳು ವಾಯು ಯಾನದಲ್ಲಿ ಇರುವವರಂತೆ ವೇಗವಾಗಿ ತಮ್ಮ ಗೂಡನ್ನು ಸೇರಿಕೊಂಡರು. -- ಮುಂದುವರರಿಯುವುದು..
Read More