ಕೃಷ್ಣ ಮೂರ್ತಿ ಜರ್ನಲ್

ಕೃಷ್ಣ ಮೂರ್ತಿ ಜರ್ನಲ್

ಸದಾನಂದ ಹೆಗಡೆ, ಹರಗಿ
4-8, ಸುಬ್ಬಣ್ಣಯ್ಯ ಕಂಪೌಂಡ್,
ಹೊನ್ನಕಟ್ಟೆ, ಕುಳಾಯಿ
ಮಂಗಳೂರು-575019
ದೂರವಾಣಿ : 9343402497
ಜಿಡ್ಡು ಕೃಷ್ಣಮೂರ್ತಿ
ಜಿಡ್ಡು ಕೃಷ್ಣಮೂರ್ತಿ (1895-1986) ಜಗತ್ತು ಕಂಡ ಅತ್ಯುಚ್ಚ ದಾರ್ಶನಿಕರಲ್ಲೊಬ್ಬರು. ಥಿಯಾಸಾಫಿಕಲ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷೆಯಾಗಿದ್ದ ಸಮಾಜ ಸುಧಾರಕಿ ಅನಿಬೆಸೆಂಟ್ ಮದ್ರಾಸ್ ಸಮೀಪದ ಅಡ್ಯಾರ್‌ನಲ್ಲಿ ಬಾಲಕ ಕೃಷ್ಣಮೂರ್ತಿಯವರನ್ನು ಮೊದಲು ಗುರುತಿಸಿದರು. ಅಲ್ಲದೆ ಪಾಲನೆಗೆಂದು ಪಡೆದುಕೊಂಡಾಗ ಅವರಿಗಿನ್ನೂ 14 ವರ್ಷ ಪ್ರಾಯ. ಥಿಯಾಸಾಫಿಕಲ್ ಸೊಸೈಟಿಯ ನೇತೃತ್ವ ವಹಿಸಲಿಕ್ಕಿರುವ ಮಹಾನ್ ಸಮಾಜ ಸುಧಾರಕನೊಬ್ಬನನ್ನು ಅನಿಬೆಸಂಟ್ ಹಾಗೂ ಸಹೋದ್ಯೋಗಿ ಸಿ. ಡಬ್ಲು ಲೀಡ್ ಬಿಟರ್ ಅವರು ಬಾಲಕ ಕೃಷ್ಣಮೂರ್ತಿಯಲ್ಲಿ ಕಂಡಿದ್ದರು. ಇವರನ್ನು ಜಗದ್ಗುರು ಆಗುವವನೆಂದು ಕಲ್ಪಿಸಿ 1911ರಲ್ಲಿ ಆರ್ಡರ್ ಆಫ್ ಸ್ಟಾರ್ಸ್‌ ಇನ್ ದ ಈಸ್ಟ್ ಎಂಬ ಸಂಘಟನೆಯೊಂದನ್ನು ಕಟ್ಟಿ ಅದಕ್ಕೆ ಕೃಷ್ಣಮೂರ್ತಿಯವರನ್ನೇ ಮುಖ್ಯಸ್ಥರನ್ನಾಗಿ ಮಾಡಿದರು. ಮುಂದಿನ ದಿನಗಳ ಮಹತ್ವದ ಜವಾಬ್ದಾರಿಯ ಬಗ್ಗೆ ಪೂರ್ವಭಾವಿ ತರಬೇತಿ ಒಳಗೊಂಡಂತೆ ಉನ್ನತ ಶಿಕ್ಷಣಕ್ಕಾಗಿ ಅವರನ್ನು ಅದೇ ವರ್ಷ ಇಂಗ್ಲೆಂಡ್‌ಗೆ ಕರೆಸಿಕೊಳ್ಳಲಾಯಿತು.
ಆದರೆ 1929ರಲ್ಲಿ ಕೃಷ್ಣಮೂರ್ತಿಯವರು ಇಡೀ ಸಂಘಟನೆಯನ್ನೇ ವಿಸರ್ಜಿಸಿ ಬಿಟ್ಟರು. ಅವರ ಹೆಸರಲ್ಲಿ ಕ್ರೋಢೀಕರಣಗೊಂಡಿದ್ದ ಆಸ್ತಿಯನ್ನೆಲ್ಲ ಹಂಚಿ ಹೊರಟು ಬಂದರು. ಯಾವುದೇ ಪಂಥ ಅಥವಾ ಧರ್ಮದಿಂದ ಸತ್ಯವನ್ನು ಕಂಡುಕೊಳ್ಳಲಾಗುವುದಿಲ್ಲ. ತನ್ನಲ್ಲಿಯೇ ಇರುವ ಎಲ್ಲ ಬಗೆಯ ದಾಸ್ಯಗಳಿಂದ ಬಿಡುಗಡೆ ಹೊಂದುವುದರಿಂದ ಮಾತ್ರ ಸತ್ಯದರ್ಶನ ಸಾಧ್ಯವಾಗುತ್ತದೆ ಎಂದು ಘೋಷಿಸಿದರು. ''ನೀವು ಬೇರೊಂದು ಸಂಘಟನೆ ಸ್ಥಾಪಿಸಬಹುದು. ಬೇರೊಬ್ಬರನ್ನು ಇದಕ್ಕೆ ನಿಯುಕ್ತಿಗೊಳಿಸಬಹುದು. ಅದರಲ್ಲಿ ನನಗೆ ಆಸಕ್ತಿ ಇಲ್ಲ. ಇನ್ನೊಂದು ಪಂಜರವನ್ನು ನಿರ್ಮಿಸಿಕೊಳ್ಳುವುದು ನನಗೆ ಬೇಕಾಗಿಲ್ಲ. ನನ್ನ ಏಕೈಕ ಕಾಳಜಿ ಎಂದರೆ ಮನುಷ್ಯನನ್ನು ಸಂಪೂರ್ಣವಾಗಿ, ಶರತ್ತು ರಹಿತವಾಗಿ ಮುಕ್ತನನ್ನಾಗಿಸುವುದಾಗಿದೆ.'' ಎಂದು ಪ್ರತಿಪಾದಿಸಿದರು.
ನಂತರ ಇದೇ ಉದ್ದೇಶಕ್ಕಾಗಿ ತಮ್ಮ ಜೀವಮಾನವನ್ನೆಲ್ಲ ಮುಡಿಪಾಗಿ ಇಟ್ಟರಲ್ಲದೆ, ಜಗತ್ತಿನ ಎಲ್ಲೆಡೆ ಸಂಚರಿಸಿದರು. ತಮ್ಮ ಬದುಕಿನ ಅವಧಿಯಲ್ಲಿ ಎಲ್ಲಿಯೂ ಕೆಲವು ತಿಂಗಳಿಗಿಂತ ಹೆಚ್ಚು ಸಮಯ ನಿಲ್ಲುತ್ತಿರಲಿಲ್ಲ. ಯಾವುದೇ ದೇಶ ಅಥವಾ ಜನಾಂಗಕ್ಕೆ ಸೇರಿದವನೆಂದು ತಮ್ಮನ್ನು ಅವರು ಪರಿಗಣಿಸಲಿಲ್ಲ. ಭಾರತ, ಕ್ಯಾಲಿಫೋರ್ನಿಯಾದ ಒಜಾಯಿ, ಸ್ವಿಡ್ಜರ್‌ಲ್ಯಾಂಡಿನ ಸಾನೆನ್ ಮತ್ತು ಹೆಮಿಸ್ಪಿಯರ್‌ನ ಬ್ರೊಕ್‌ಉಡ್‌ಪಾರ್ಕ್‌ಗಳಲ್ಲಿ ನಡೆಯುತ್ತಿದ್ದ ಅವರ ವಾರ್ಷಿಕ ಕೂಡುವಿಕೆಗೆ ವಿಭಿನ್ನ ನಾಡಿಮಿಡಿತ, ಜಾತಿ, ಜನಾಂಗ ಮತ್ತು ಬೇರೆ ಬೇರೆ ರಾಷ್ಟ್ರಗಳಿಂದ ಸಾವಿರಾರು ಜನರು ಬಂದು ಸೇರುತ್ತಿದ್ದರು.


ಮುನ್ನುಡಿ

ಜಿಡ್ಡು ಕೃಷ್ಣಮೂರ್ತಿಯವರು 1873ನೇ ಇಸವಿಯ ಸೆಪ್ಟೆಂಬರ್ ತಿಂಗಳಲ್ಲಿ ಏಕಾಏಕಿಯಾಗಿ ತಮ್ಮೊಂದಿಗೆ ಡೈರಿಯನ್ನು ಇಟ್ಟುಕೊಳ್ಳತೊಡಗಿದರು. ನಿರಂತರವಾಗಿ ಬರೆಯದಿದ್ದರೂ ಸುಮಾರು ಆರು ವಾರಗಳ ಕಾಲ ಆ ಡೈರಿಯಲ್ಲಿ ದಿನವೂ ಒಂದೆರಡು ಪುಟ ಬರೆದಿದ್ದಾರೆ. ಬರೆಯಲು ಆರಂಭಿಸಿದ ಮೊದಲ ತಿಂಗಳು ಹೆಮಿಸ್ಪಿಯರ್‌ನ ಬ್ರೊಕ್‌ಉಡ್ ಪಾರ್ಕ್‌ನಲ್ಲಿ ಇರುತ್ತಿದ್ದರು. ನಂತರ ರೋಮ್‌ಗೆ ತಮ್ಮ ವಾಸ್ತವ್ಯ ಬದಲಿಸುತ್ತಾರೆ. ಆ ದಿನಗಳಲ್ಲಿ ಡೈರಿ ಬರವಣಿಗೆಗೆ ವಿರಾಮ ಹಾಕಿ ಹದಿನೆಂಟು ತಿಂಗಳ ತರುವಾಯ ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಬರೆಯಲು ಆರಂಭಿಸುತ್ತಾರೆ.
ಹಾಗೆ ನೋಡಿದರೆ ಸಾಮಾನ್ಯ ಆತ್ಮಕಥೆಗಳೊಂದಿಗೆ ಕೃಷ್ಣಮೂರ್ತಿಯವರ ಈ ಬರಹವನ್ನು ಹೋಲಿಸುವುದು ಸಾಧ್ಯವೇ ಇಲ್ಲ. 'ಸಾಕ್ಷಾತ್ಕಾರ'ಗೊಂಡವರ ಆಲೋಚನೆಯ ರೀತಿಯನ್ನು ಗೃಹಿಸುವುದು ತುಸು ಕಷ್ಟ. ಡೈರಿಯಲ್ಲಿ ಪ್ರತಿ ಬರಹವೂ ನಿಸರ್ಗದ ಬಗ್ಗೆ ವರ್ಣನೆಯೊಂದಿಗೆ ಆರಂಭವಾಗುತ್ತದೆ. ಮೂರು ಬರಹದಲ್ಲಿ ಮಾತ್ರ ಅವರು ವಾಸಿಸುತ್ತಿದ್ದ ಪ್ರದೇಶದ ಚಿತ್ರಣವನ್ನು  ಕೊಟ್ಟಿದ್ದಾರೆ. ಉಳಿದವೆಲ್ಲ ಅವರ ಮನಸ್ಸಿನಲ್ಲಿ ಯಾವುದೋ ಸಂದರ್ಭದಲ್ಲಿ  ಆವರಿಸಿ ಸ್ಮತಿಪಟಲದಲ್ಲಿ  ಉಳಿದುಕೊಂಡ ಸನ್ನಿವೇಶಗಳಾಗಿವೆ. ಮೊದಲ ಬರಹದಲ್ಲಿ ಅವರಿದ್ದ ಬ್ರೊಕ್‌ಉಡ್‌ಪಾರ್ಕ್‌ನ ಬೆಟ್ಟ ಪ್ರದೇಶದ ಚಿತ್ರ ಕಾಣಬಹುದು. ಅದೇ ಎರಡನೆ ಬರಹಕ್ಕೆ ಬಂದಾಗ ಸ್ವಿಡ್ಜರ್‌ಲ್ಯಾಂಡ್‌ನ ಕಣಿವೆಯೊಂದರ ಚಿತ್ರವನ್ನು ಸ್ಮರಿಸಿ ಬರೆದಿದ್ದಾರೆ. ಮುಂದೆ ಕ್ಯಾಲಿಫೋರ್ನಿಯಾಕ್ಕೆ ಬರುವ ತನಕ ಅವರ ಬರವಣಿಗೆ ಯಾವಾಗಲೋ ಒಮ್ಮೆ ಅವರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ನೆನಪಿನ ಚಿತ್ರಗಳಾಗಿವೆ. 1975ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಬರೆದ ಡೈರಿಯಲ್ಲಿ ಅಲ್ಲಿಯದೇ ಸುತ್ತಮುತ್ತಲಿನ ವಿವರಣೆ ಇದೆ.
ನಿಸರ್ಗದ ಮಡಿಲಿನ ವೈವಿಧ್ಯಮಯ ದೃಶ್ಯಗಳು ಅವರ ನೆನಪಿನಾಳದಲ್ಲಿ ಎಷ್ಟೊಂದು ಸುಂದರವಾಗಿ ಅಚ್ಚೊತ್ತಿದ್ದವು ಎಂಬುದನ್ನು ನಾವಿಲ್ಲಿ ಗಮನಿಸಬೇಕು ; ಅವರ ಚಿಂತನೆಯ ಮೂಲ ಸೆಲೆ ನಿಸರ್ಗದಿಂದ ತೀವ್ರವಾಗಿ ಪ್ರಭಾವಿತವಾಗಿತ್ತು ಎಂಬುದನ್ನು ಈ ಪುಸ್ತಕದಲ್ಲಿ ಕಾಣಬಹುದು.
ಉದ್ದಕ್ಕೂ ಕೃಷ್ಣಮೂರ್ತಿಯವರು ಡೈರಿಯಲ್ಲಿ ತಮ್ಮನ್ನು 'ಅವನು', 'ಆತ' ಎಂಬುದಾಗಿ ತೃತೀಯ ವಿಭಕ್ತಿಯಲ್ಲಿ ಗುರುತಿಸಿಕೊಳ್ಳುತ್ತಾರೆ.  ಸಾಂದರ್ಭಿಕವಾಗಿ ಕೆಲವೆಡೆ ಅವರ ಬಗ್ಗೆ ಬೇರೆಲ್ಲೂ ಹೇಳದ ಮಾಹಿತಿಗಳು ಡೈರಿಯಲ್ಲಿ ಕಾಣುತ್ತವೆ.\u3232?ಿಚಿಡಿ-ಎಂ. ಎಲ್.


ಬ್ರೊಕ್‌ಉಡ್‌ಪಾರ್ಕ್, ಹೆಮಿಸ್ಪಿಯರ್
ಸೆಪ್ಟೆಂಬರ್ 14, 1973

ಅದೊಂದು ದಿನ ವಾಯು ವಿಹಾರ ಮುಗಿಸಿ ಶ್ವೇತ  ಕಟ್ಟಡದ  ಸಮೀಪದ ಬೆಟ್ಟವನ್ನು ದಾಟಿ ಬಂದೆವು. * ಬೆಟ್ಟದ ತೋಪುಗಳನ್ನು ಹೊಕ್ಕು  ಹೋದಾಗ  ಯಾರೊಬ್ಬರಿಗಾದರೂ ಪ್ರಶಾಂತ ಹಾಗೂ  ಸ್ತಬ್ಧತೆಯ  ತೀವ್ರ ಅನುಭವ ಆಗಿರುತ್ತದೆ. ಅಲ್ಲಿ ಯಾವೊಂದು ವಸ್ತುವು ಅಲ್ಲಾಡುತ್ತಿರಲಿಲ್ಲ. ಅಂಥ ವಾತಾವರಣದಲ್ಲಿ  ಸಾಗಿ  'ಇಬ್ಬರು' ಮಾತಾಡಿಕೊಳ್ಳುತ್ತ ಅಲ್ಲಿ ನಡೆದು ಬರುವುದೇ ಒಂದು ಸೋಜಿಗವಾಗಿತ್ತು.. ಕೆಂಪಾದ  ರೆಡ್‌ಉಡ್ ಮರಗಳು ಅಲ್ಲಿ ಏಕೋಭಾವದಿಂದ ನಿಂತಿವೆ. ಆಂಗ್ಲೋ ಇಂಡಿಯನ್ನರು ಇವುಗಳನ್ನು ಮೌನಿಗಳು ಎಂದು ಕರೆಯುವುದರಲ್ಲೂ ಮಹತ್ವ ಇದೆ. ಆಗಂತೂ  ಹೆಸರಿಗೆ ತಕ್ಕಂತೆ ಅಲ್ಲಿದ್ದ  ರೆಡ್‌ಉಡ್ ಮರಗಳೆಲ್ಲ  ಮೌನಿಗಳೇ ಆಗಿದ್ದವು. ಆ ಪರಿಸರದಲ್ಲಿ ಕನಿಷ್ಠ ಕಾಡುನಾಯಿ ಮೊಲಗಳನ್ನು ಅಟ್ಟಾಡಿಸುವ ಶಬ್ದವೂ  ಇರಲಿಲ್ಲ. ಜೋರಾಗಿ ಉಸಿರಾಡುವುದಕ್ಕೂ ಏನೋ ಒಂದು ಬಗೆಯ ಆತಂಕ. ಹರಟುತ್ತಲೇ ತೋಪಿನೊಳಗೆ ಕಾಲಿಟ್ಟ  'ಅವರಿಗೆೆ' ಒಮ್ಮೆಲೇ ಅಚ್ಚರಿ, ಆಘಾತ ಆವರಿಸಿಕೊಂಡಿತ್ತು.. ಕಾಡಿನ ಶಾಂತ ವಾತಾವರಣದಲ್ಲಿ  'ಅವನು ಅತಿಕ್ರಮಣಕಾರಿಯಂತೆ ಕಂಡುಬಂದಿದ್ದ.
ಎಲ್ಲೋ ಅನಿರೀಕ್ಷಿತ ಅಪಾಯ  ಬಂದೆರಗುವ ಭಯ. ಎದೆಯಲ್ಲಿ ಸ್ವಸ್ತಿವಾಚನ. ಹೃದಯ ಬಡಿತಗಳ ವೇಗವೇ ಕಳೆದುಹೋಗಿತ್ತು. ಇನ್ನೊಂದೆಡೆ  ಆ ಪ್ರದೇಶದ ಸೌಂದರ್ಯಕ್ಕೆ ಬೆರಗಾಗಿ ಮಾತು ಮೌನದ ಕವಾಟವನ್ನು ಸೇರಿಕೊಳ್ಳುತ್ತಿದೆ.
ಸುತ್ತಲೂ ಹಬ್ಬಿರುವ ಬೀಸಾದ ಇಡೀ ಬೆಟ್ಟ ಪ್ರದೇಶಕ್ಕೆ ಇದು ಕೇಂದ್ರ ಸ್ಥಳವಾಗಿದೆ. ಪ್ರತಿಬಾರಿ 'ಅವನು ಇದನ್ನು ಪ್ರವೇಶಿಸುವಾಗಲೂ ಅದೇ ಅನುಭವದ ಪುನರಾವರ್ತನೆಯಾಗುತ್ತಿತ್ತು. ಅದೇ ಸೌಂದರ್ಯ, ಸ್ತಬ್ಧತೆ- ಅದು ಸಾಮಾನ್ಯ ಸ್ತಬ್ಧತೆಯಲ್ಲ, ಅಚ್ಚರಿ ಹುಟ್ಟಿಸುವ ತೀವ್ರ ಸ್ತಬ್ಧತೆ. ಹೊತ್ತಲ್ಲದ ಹೊತ್ತಿಗೆ ನೀವಿಲ್ಲಿ ಬಂದರೂ ಹಾಗೆಯೇ. ಇಲ್ಲಿ ಉಂಟಾಗುವ ಅನುಭವದ ಆಳ, ಶ್ರೀಮಂತಿಕೆಯಲ್ಲಿ  ಯಾವೊಂದು ಬದಲಾವಣೆ ಇಲ್ಲ- ಇದನ್ನೆಲ್ಲ  ಒಂದು ಹೆಸರಿನಿಂದ, ನಿರ್ದಿಷ್ಟ ಶಬ್ದದಿಂದ ಬಣ್ಣಿಸುವುದೇ ಸಾಧ್ಯವಾಗುತ್ತಿಲ್ಲ.
ಯಾವುದೇ ತೆರನಾದ ಉದ್ದೇಶ ಇಟ್ಟುಕೊಂಡು ಮಾಡುವ ಧ್ಯಾನವು ನಿಜವಲ್ಲ; ಹಾಗಾಗುವುದು ಎಂದಿಗೂ ಸಾಧ್ಯ ಇಲ್ಲ. ಅಷ್ಟಕ್ಕೂ ಉದ್ದೇಶ ಪೂರ್ವಕವಾಗಿ ವಿಧಿಸಿಕೊಳ್ಳುವ ಧ್ಯಾನ ಧ್ಯಾನವೇ ಆಗಿರುವುದಿಲ್ಲ. ಧ್ಯಾನವೇನಿದ್ದರೂ ತನ್ನಿಂದ ತಾನಾಗಿಯೇ ಸಂಭವಿಸಬೇಕೇ ವಿನ: ಅದನ್ನು ಆವಾಹಿಸಿಕೊಳ್ಳುವುದು ಸಾಧ್ಯವಿಲ್ಲ. ಧ್ಯಾನ ಎಂದರೆ ಮನಸ್ಸಿನೊಳಗಿನ ಕ್ರೀಡೆಯಲ್ಲ. ಆಸೆ ಅಥವಾ ಸುಖದ ಕನವರಿಕೆಯೂ ಅಲ್ಲ. ಧ್ಯಾನವನ್ನು ವಿಧಿಸಿಕೊಳ್ಳುವುದೆಂದರೆ ಅದೊಂದು ರೀತಿಯಲ್ಲಿ ಧ್ಯಾನದ ನಿರಾಕರಣೆ.
ನೀವು ಏನು ಮಾಡುತ್ತೀರೋ.. ನಿಮ್ಮಲ್ಲಿ  ಯಾವ  ಯಾವ ಆಲೋಚನಾ ಸರಣಿ ಹರಿಯುತ್ತಿರುತ್ತದೊ ಅದರ ಮಿಡಿತವನ್ನು ತಿಳಿದುಕೊಳ್ಳುವುದೇ ಧ್ಯಾನ- ಮತ್ತೇನೂ ಅಲ್ಲ. ಹೊಗಳಿಕೆ ಅಥವಾ ಶಿಕ್ಷಿಸಿಕೊಳ್ಳುವ ಯಾವೊಂದು ಉದ್ದೇಶವಿಲ್ಲದ ನಮ್ಮೊಳಗಿನ ಪಯಣ ಅದು. ಒಳಗಿನ ಧ್ವನಿಗಳನ್ನು ಕೇಳಿಸಿಕೊಳ್ಳುವುದು. ಹುಶಾರಾಗಿ ಕೇಳಿಸಿಕೊಳ್ಳುವ, ನೋಡುವುದರಲ್ಲೇ  ಧ್ಯಾನದ ನಿಜವಾದ ಕೌಶಲ್ಯ ಅಡಗಿದೆ. ಇದನ್ನು ಬಿಟ್ಟು ಧ್ಯಾನದ ಉಳಿದೆಲ್ಲ  ವಿವರಣೆಗಳು- ತತ್ವಶಾಸ್ತ್ರವೂ  ಮಣ್ಣಂಗಟ್ಟಿ.  ಅದರಿಂದ ಆತ್ಮವಂಚನೆ,  ಭ್ರಮೆ, ಕುರುಡು ಆಸೆಗಳಿಗೆ ಬಲಿಯಾಗಬೇಕಾಗುತ್ತದೆ.
ಅದೊಂದು ಸುಂದರ ಸಂಜೆಯಾಗಿತ್ತು. ಸೂರ್ಯನ ಹೊಂಗಿರಣಗಳು ಚಳಿಗಾಲದ ಭೂಮಿಯನ್ನೇ ಆವರಿಸಿದ್ದವು.
* ಬ್ರೊಕ್‌ಉಡ್ ಪಾರ್ಕ್‌ನ ಪರಿಸರದಲ್ಲಿ ರೆಡ್‌ಉಡ್ ಸೇರಿದಂತೆ  ಅಪರೂಪದ ವೃಕ್ಷವೈವಿಧ್ಯ ವಿಪುಲವಾಗಿ ಕಂಡು ಬರುತ್ತವೆ.


ಸೆಪ್ಟೆಂಬರ್ 15, 1973
ಏಕಾಂಗಿಯಾಗಿರುವುದರಲ್ಲಿ ಖುಷಿಯಿದೆ.  ಜನ ನಿಬಿಡ  ಬೀದಿಯಲ್ಲಿ  ನಡೆದು ಹೋಗುತ್ತಿದ್ದರೂ, ಇಲ್ಲಿನ ಯಾವೊಂದು ಗೌಜು ಗದ್ದಲಗಳನ್ನು ತಲೆಗೆ ತೆಗೆದುಕೊಳ್ಳದೆ  ಇರುವ ಸ್ಥಿತಿ ಏಕಾಂಗಿತನವಾಗಿರುತ್ತದೆ.
ವಸಂತದಲ್ಲಿ ಹಿಮ ಕರಗಿ ಬೆಟ್ಟದಿಂದ ಝರಿಯೊಂದು ಧುಮುಕುತ್ತಿದೆ. ಝರಿಯ ಪಕ್ಕದಲ್ಲಿ ಏಕಾಂಗಿಯಾಗಿ  ಏರಿಹೋಗುವುದು ಎಂದರೆ  ಒಂದರ್ಥದಲ್ಲಿ ತನ್ನಷ್ಟಕ್ಕೆ ತಾನು ಸುಂದರವಾಗಿದ್ದು ಆಕರ್ಷಿಸುವ ಒಂಟಿ  ವೃಕ್ಷದಂತೆ.
ಬೀದಿ ಬದಿಯಲ್ಲಿರುವ ವ್ಯಕ್ತಿಯೊಬ್ಬನ  ಒಂಟಿತನ  ಎಂದರೆ ಜೀವನದ ಏನೆಲ್ಲ  ಕಷ್ಟ ಕೋಟಲೆಗಳ  ಸಮಾಗಮದಂತೆ ಇರುತ್ತದೆ. ಸಮಾಜದಲ್ಲಿ  ವ್ಯಕ್ತಿಯೊಬ್ಬ ಬಡವ, ಅಸ್ಪ್ರಷ್ಯನಾಗಿ ಊರಿನಿಂದ ಹೊರಕ್ಕೆ ಹಾಕಲ್ಪಟ್ಟಿದ್ದ ಎಂದಾದರೆ  ಆತ ಏಕಾಂಗಿಯಾಗಿದ್ದಾನೆ ಎಂದಲ್ಲ, ತಲೆಯಲ್ಲಿ ತಿಳಿವಳಿಕೆಗಳು ತುಂಬಿ ತುಳುಕುತ್ತಿದ್ದರೆ ಏನೆಲ್ಲ ಕಷ್ಟ ಕೋಟಲೆಗಳು ಹುಟ್ಟಿಕೊಳ್ಳುತ್ತಿರುತ್ತವೆ. ಅಭಿವ್ಯಕ್ತಿಯ ಒತ್ತಡಗಳು, ಅದರ ಹತಾಶೆ ಮತ್ತು ನೋವು ಇತ್ಯಾದಿ ತಿಳಿವಳಿಕೆಗಳನ್ನು ತುಂಬಿಕೊಳ್ಳುವ ಮನುಷ್ಯರು ಒಂಟಿಯಾಗಿ ನಡೆದು ಹೋದರೂ ಅವರಲ್ಲಿ ನೂರೆಂಟು ವಿಚಾರಗಳು ಆವರಿಸಿರುವುದರಿಂದ ಆತ ಒಂಟಿಯಾಗಿ ಇರುವುದಿಲ್ಲ. ಆತನ ಪ್ರತಿ ಹೆಜ್ಜೆಯಲ್ಲೂ ನೋವು ತುಂಬಿ ತುಳುಕುತ್ತಿರುತ್ತದೆ.
ಒಂದೆಡೆ ಮುಂಗಾರು ಮಳೆ, ಇನ್ನೊಂದೆಡೆ ಹಿಮಗಡ್ಡೆಗಳು ಕರಗಿದ ಪ್ರವಾಹ ಸೇರಿದ್ದರಿಂದ ಅಲ್ಲಿನ ಝರಿ ತುಂಬಿ ಹರಿಯುತ್ತಿತ್ತು. ಧುಮುಕುವ ಪ್ರವಾಹ  ಬಂಡೆಗಳನ್ನು ಉರುಳಿಸಿ ಬಿಡುವಂತೆ ಬೊಬ್ಬಿರಿಯುತ್ತಿತ್ತು. ಐವತ್ತೊ ಅರುವತ್ತೊ ವರ್ಷದಷ್ಟು ಹಳೆಯದಾದ ಪೈನ್ ಮರವೊಂದನ್ನು ಪ್ರವಾಹ ಕೊಚ್ಚಿಕೊಂಡು ತರುತ್ತಿದೆ. ಪಕ್ಕದ ರಸ್ತೆಗೂ ನೀರು ನುಗ್ಗಿದ್ದರಿಂದ ತೊರೆಯಲ್ಲಿ ಮಣ್ಣು ತೊಳೆದು ಹೋಗುತ್ತಿತ್ತು. ಮಣ್ಣು ಮಿಶ್ರಣವಾಗಿದ್ದರಿಂದ ಪ್ರವಾಹಕ್ಕೆ  ಕೆಂಪು ಬಣ್ಣ ಬಂದಿದೆ. ಇದಕ್ಕೂ  ಮೇಲಿನ ಬೆಟ್ಟ ಪ್ರದೇಶದಲ್ಲಿ ಏನೆಲ್ಲ ಹೂವುಗಳು ಅರಳಿದ್ದವು. ಇನ್ನೊಂದೆಡೆ ಶುದ್ಧಗಾಳಿ ಬೀಸುತ್ತಿರುವುದರಿಂದ ಸುಂಯ್ ಎಂಬ ಲಘು ಸಂಗೀತ. ಬೆಟ್ಟದ ತುದಿಯಲ್ಲಿ  ಅಲ್ಲಲ್ಲಿ  ಕಾಣುತ್ತಿದ್ದ  ಹಿಮ ರಾಶಿಗಳು ಇನ್ನಷ್ಟೇ ಕರಗಬೇಕಾಗಿದೆ. ಹಿಮದ ತುಣುಕುಗಳು, ಕರಗದೆ  ಉಳಿದ ದಿಬ್ಬಗಳು ಬೇಸಗೆ ಮುಗಿಯುವ ತನಕ ಅಲ್ಲಿಯೇ ಉಳಿದು ಬಿಳಿ ಬಿಳಿಯಾಗಿ ಎದ್ದು ಕಾಣುತ್ತಿರುತ್ತದೆ.
ಅದೊಂದು ಅದ್ಭುತ ಬೆಳಗಿನ ಜಾವ. ಗುಡ್ಡ  ಬೆಟ್ಟಗಳು ಇನ್ನೆಷ್ಟು ಇದ್ದರೂ ಆಯಾಸವಿಲ್ಲದೆ ನಡೆದುಬಿಡಬಹುದೆಂಬ ಹುಮ್ಮಸ್ಸು  ಉಂಟಾಗುತ್ತಿತ್ತು. ಶುದ್ಧವಾದ ಗಾಳಿಯಲ್ಲಿ  ಏನೋ ಒಂದು ಸುವಾಸನೆ ಇತ್ತು. ಬೆಟ್ಟ ಏರಿಳಿಯುವವರು ಯಾರೂ ಇರಲಿಲ್ಲ. ಕಪ್ಪಾದ ಪೈನ್ ಮರಗಳು, ಧುಮುಕುತ್ತಿರುವ ಝರಿ ಇವೆಲ್ಲವುಗಳ ನಡೆವೆ 'ನೀನು ಏಕಾಂಗಿಯಾಗಿದ್ದೆ. ಗುಡ್ಡಗಳ ಮೇಲ್ಚಾವಣಿಯಾಗಿ ಕೇವಲ ನೀಲಿಯ ಆಕಾಶ. ಪೈನ್ ಮರದ ಎಲೆಗಳ ಸಂದಿನಲ್ಲಿ   'ನೀನು ಏಕೋಭಾವದಿಂದ ಅದನ್ನೆಲ್ಲ ಗಮನಿಸುತ್ತಿದ್ದೆ. ಅಲ್ಲಿ ಮಾತಾಡುವುದಕ್ಕೆ ಯಾರೊಬ್ಬರೂ ಇರಲಿಲ್ಲ, ಮನಸ್ಸಿನೊಳಗೆ ಏನೊಂದು ಹರಟೆ ಇರಲಿಲ್ಲ. ಕಪ್ಪು ಬಿಳುಪಿನ ಮ್ಯಾಗ್‌ಪಿಯೊಂದು ರೆಕ್ಕೆಬಡಿಯುತ್ತ ಹಾರಿ ಕಾಡಿನೊಳಗೆ ಮರೆಯಾಯಿತು. ಝರಿಯ ಬೊಬ್ಬೆಯೊಂದಿಗೆ ದಾರಿ ಸಾಗುತ್ತ ಒಂದು ರೀತಿಯ ಮೌನ ಆವರಿಸಿತ್ತು.
ಮೌನ ಎಂದಾಕ್ಷಣ ಅಂದಿನ ಮೌನವನ್ನು ನಿರ್ಧಿಷ್ಟವಾಗಿ ಹೇಳಿದಂತಾಗುವುದಿಲ್ಲ. ಗದ್ದಲದ ನಂತರ ಕಾಣುವ ಮೌನ ಅದಲ್ಲ; ಸೂರ್ಯ ಮುಳುಗುತ್ತಲೇ ಒಂದು ರೀತಿ ಮೌನ ಕಾಣುತ್ತದಲ್ಲ, ಅದೂ ಅಲ್ಲ. ಮನಸ್ಸು ನಿರ್ಜೀವವಾದಾಗ ಕಾಣುವ ಮೌನವೂ ಅಲ್ಲ. ಚರ್ಚು ಅಥವಾ ಮ್ಯೂಜಿಯಂಗಳಲ್ಲಿ ಅನುಭವಕ್ಕೆ ಬರುವಂಥದ್ದೂ ಅಲ್ಲ; ಒಂದು ಅರ್ಥದಲ್ಲಿ ಕಾಲ, ಅವಕಾಶಗಳನ್ನು ಮೀರಿದ್ದ ಮೌನ ಅದಾಗಿತ್ತು. ಮನಸ್ಸು ತಾನೇ ಸೃಷ್ಟಿಸಿಕೊಳ್ಳುವ ಮೌನದಂತೆಯೂ ಇರಲಿಲ್ಲ.
ಕ್ರಮೇಣ ಬಿಸಿಲು ಮೈಯನ್ನು ಸುಡತೊಡಗಿದಾಗ ನೆರಳು ಹಿತವೆನಿಸುತ್ತಿತ್ತು.ನ ಜಂಗುಳಿಯ ಬೀದಿ ಅಥವಾ ಏಕಾಂಗಿಯಾದ ಹಾದಿಯನ್ನು ಸವೆಸುವ ಸನ್ನಿವೇಶದಲ್ಲೂ ಕೂಡ ತಲೆಯಲ್ಲಿ ಯಾವೊಂದು ಆಲೋಚನೆಗಳು ಆತನ ಮನಸ್ಸಿನಲ್ಲಿ ಸುಳಿಯುತ್ತಿರಲಿಲ್ಲ  ಎಂಬ ವಿಷಯ ಆತನಿಗೆ ಇತ್ತೀಚೆಗೆ ಗಮನಕ್ಕೆ ಬಂದಿದೆ. ಆತ ಬಾಲಕನಾಗಿದ್ದಾಗಿನಿಂದಲೂ ಹೀಗೆಯೇ ; ಅವನ ಮನಸ್ಸಿನಲ್ಲಿ ಆಲೋಚನೆಗಳೇ ಬರುತ್ತಿರಲಿಲ್ಲ. ಕೇವಲ ನೋಡುತ್ತಿದ್ದ, ಗಮನಿಸುತ್ತಿದ್ದ. ಮತ್ತೇನೂ ಇಲ್ಲ. ಅವುಗಳೊಂದಿಗೆ ಆಲೋಚನೆಗಳೇ ಇಣುಕುತ್ತಿರಲಿಲ್ಲ. ಮೆದುಳಿನಲ್ಲಿ ಪ್ರತಿಬಿಂಬಗಳು ಉಂಟಾಗುವ ಪ್ರಕ್ರಿಯೆಯೇ ಇರುತ್ತಿರಲಿಲ್ಲ. ಕೆಲವೊಮ್ಮೆ ಆಲೋಚಿಸುವುದಕ್ಕೆ ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ; ಇದೆಲ್ಲ ಎಷ್ಟೊಂದು ಅದ್ಬುತ ಸಂಗತಿ ಎಂಬುದು ನಂತರ ಒಂದು ದಿನ ಅಚಾನಕ್ಕಾಗಿ ಆತನ ಗಮನಕ್ಕೆ ಬಂದಿತ್ತು. ಈ ಎಲ್ಲ  ಏಕಾಂಗಿ ಸ್ತಿತಿ ಜೊತೆಯಲ್ಲಿ ಬೇರೊಬ್ಬರು ಇದ್ದಾಗಲೂ ಆತನಿಗೆ ಸಂಭವಿಸಿವೆ. ಆಲೋಚನೆಗಳೇ ಬರುತ್ತಿರಲಿಲ್ಲ. ಏಕಾಂಗಿತನ ಎಂದರೆ ಇದು.
ಹಿಮ ಗೋಪುರದ ತುದಿಯಲ್ಲಿ  ಕಾರ‌್ಮೋಡಗಳು  ಹುಟ್ಟಿಕೊಳ್ಳುತ್ತಿದ್ದವು. ಹಿಂದಿನಿಂದ ಸೂರ್ಯ ತೀಕ್ಷ್ಣವಾಗಿದ್ದರಿಂದ ನೆರಳೂ ಇತ್ತು; ಕೆಲ ಹೊತ್ತಿನ ನಂತರ ಮಳೆಯಾಗುವ ಲಕ್ಷಣ ಕಂಡಿತ್ತು. ಇನ್ನೂ ಆಹ್ಲಾದಕರ ಪರಿಮಳ ಇದೆ. ಮಳೆ ಬಿದ್ದ ನಂತರ ಬೇರೊಂದು ಪರಿಮಳ ಬರಲಿಕ್ಕಿದೆ. ಕುಟೀರವನ್ನು ಸೇರುವುದಕ್ಕೆ ಗುಡ್ಡ ಇಳಿದು ಬಹು ದೂರ ಸಾಗಿ ಹೋಗಬೇಕಾಗಿತ್ತು.


ಸೆಪ್ಟೆಂಬರ್ 16, 1973
ರಾತ್ರಿ ಮೂರನೆ  ಜಾವ ಸಮೀಪಿಸಿತ್ತು.  ಅಷ್ಟು ಹೊತ್ತಿಗೆ ಆ ಹಳ್ಳಿಯ ಬೀದಿಗಳೆಲ್ಲ ಬರಿದಾಗಿದ್ದವು. ಅದೆಲ್ಲಕ್ಕಿಂತ ಮಹತ್ವದ ವಿಷಯವೊಂದಿದೆ ;  ಇಡೀ ನಾಡೇ ಬೆಟ್ಟಗುಡ್ಡಗಳು, ಹುಲುಸಾದ ಮರಗಳಿಂದ ಕೂಡಿಕೊಂಡಿದ್ದರಿಂದ  ಕುಳಿರ್ಗಾಳಿ ಸುಳಿಯುತ್ತಿತ್ತು. ಮುಖ್ಯ ಬೀದಿಯೊಂದನ್ನು ಬಿಟ್ಟರೆ ಊರಿನ  ಬೇರೆಲ್ಲೂ  ಬೀದಿ ದೀಪಗಳು ಇರಲಿಲ್ಲ. ಸೂರ್ಯೋದಯವಾಗುವುದಕ್ಕೆ ಇನ್ನೂ ಮೂರು ತಾಸು ಬಾಕಿ ಇದೆ. ನಕ್ಷತ್ರಗಳಿಂದ ತುಂಬಿದ ಶುಭ್ರ ಆಕಾಶದ ಬೆಳಗು ಅದು. ಆ ಹೊತ್ತಿನಲ್ಲಿ  ದೂರದಲ್ಲಿದ್ದ ಮಂಜುಗಡ್ಡೆಯ ದಿಬ್ಬಗಳಾವುವೂ ಕಾಣುತ್ತಿರಲಿಲ್ಲ; ಊರಿಗೆ ಊರೇ ಮಲಗಿ ನಿದ್ದೆಯಲ್ಲಿತ್ತು. ಪರ್ವತದ ಹಾದಿಯಲ್ಲಿ ಸಾಕಷ್ಟು ತಿರುವುಗಳಿದ್ದ ಕಾರಣ ವೇಗವಾಗಿ ಹೋಗುವುದು ಸಾಧ್ಯವಾಗುತ್ತಿರಲಿಲ್ಲ. ಕಾರು ಹೊಸದಾಗಿದ್ದರಿಂದ ಇಂಜಿನ್ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದು ಸಾಧ್ಯವಾಗುತ್ತಿತ್ತು. ವೇಗವಾಗಿ ಓಡಬಲ್ಲ  ಅತ್ಯಾಧುನಿಕ ಕಾರು, ಗುಡ್ಡದ ಗಾಳಿಯನ್ನು ಸೀಳಿಕೊಂಡು ಮುಂದುವರಿಯುತ್ತಿತ್ತು. ಮೋಟಾರು ರಸ್ತೆಯಲ್ಲಿ ತಿರುವುಗಳನ್ನು ಕ್ರಮಿಸುತ್ತ ಸಾಗುವ ಕಾರಿನ ಗಮನವೇ ಸುಂದರ. ಹಾಗೇ ಹೊತ್ತು ಸರಿದು, ಇನ್ನೇನು ಬೆಳ್ಳಿ ಮೂಡುವ ಕಾಲ ಸಮೀಪಿಸುತ್ತಲೇ ಕತ್ತಲು ಸರಿಯುತ್ತಿದ್ದರಿಂದ ಮರಗಳೆಲ್ಲ ಆಕೃತಿ ಪಡೆಯತೊಡಗಿದ್ದವು. ಸುಂದರ ಬೆಳಗನ್ನು ಸೂಚಿಸುತ್ತ ತಂಗಾಳಿ ಸುಳಿಯುತ್ತಿದೆ. ಸೂರ್ಯ ಮೇಲೇರುತ್ತಿದ್ದ; ಎಲೆಗಳ ಮೇಲೆ ಮಂಜು ಆವರಿಸಿದ ದೃಶ್ಯ.
ಅವನಿಗೆ' ಯಂತ್ರೋಪಕರಣಗಳ ಬಗ್ಗೆ ಯಾವಾಗಲೂ ಕುತೂಹಲ ಇದೆ. ಕಾರನ್ನೊಮ್ಮೆ ಇಡಿಯಾಗಿ ಬಿಚ್ಚಿಹಾಕಿದ್ದ. ನಂತರ ಸಂಪೂರ್ಣ ಮರುಜೋಡಣೆ ಮಾಡಿದ್ದ ; ಬಿಚ್ಚಿ ಹೊಂದಿಸಿದ ನಂತರ ಅದು  ಹೊಸ ಕಾರಿನಂತೆ ಓಡುತ್ತಿತ್ತು.
ನೀವು ವಾಹನದಲ್ಲಿ ಹೋಗುವಾಗ ಧ್ಯಾನ ತನ್ನಿಂದ ತಾನೆ ಸನ್ನಿಹಿತವಾಗುತ್ತದೆ. ಕಾರು ಚಲಿಸುತ್ತಿರುವಾಗಲೆ ಪಕ್ಕದ ದೃಶ್ಯಗಳನ್ನು ನೋಡುತ್ತಿರುತ್ತೀರಿ. ಮನೆಗಳು, ಸಾಗಿ ಹೋಗುವ ರೈತರ ಸಮೂಹ, ಪಕ್ಕದಲ್ಲಿಯೇ ದಾಟುವ ಇನ್ನೊಂದು ಕಾರು, ಕೊಂಬೆಗಳ ನಡುವೆ ಕಾಣುವ ಆಕಾಶ... ಹೀಗೆ ಎಲ್ಲವುಗಳ ಬಗೆಗೂ ನಿಮ್ಮ ಗಮನ ಇರುತ್ತದೆ.
ನೀವು ಧ್ಯಾನಸ್ಥರಾಗಿದ್ದೀರಿ ಎಂಬ ಗಮನವೇ ನಿಮಗೆ ಇರುವುದಿಲ್ಲ..
 ಜಗತ್ತು ಧ್ಯಾನಿಸುತ್ತ ಮುಂದುವರಿದಿದೆ- ಈ ಧ್ಯಾನ ಅದೆಷ್ಟೋ ಹಿಂದೆಯೇ ಆರಂಭವಾಗಿ ಇದೇ ರೀತಿಯಲ್ಲಿ ಮುಂದುವರಿಯುತ್ತಿರುತ್ತದೆ. ಧ್ಯಾನದಲ್ಲಿ ಕಾಲ, ದೇಶಗಳು ಮಹತ್ವದ ಸಂಗತಿಯೇ ಆಗಿರುವುದಿಲ್ಲ.
ಧ್ಯಾನಿಸುವಾಗ ಧ್ಯಾನಿ ಇರುವುದಿಲ್ಲ. ಒಂದುವೇಳೆ ಧ್ಯಾನಿ ಇದ್ದ ಎಂದಾದರೆ ಅದು ಧ್ಯಾನವೇ ಅಲ್ಲ. ಧ್ಯಾನಿ ಎಂಬ ಶಬ್ದ, ಕಾಲ ಹೀಗೆ ಯಾವೊಂದೂ ನಿಜ ಧ್ಯಾನದಲ್ಲಿ  ಇರುವುದಿಲ್ಲ. ಧ್ಯಾನಿ ಎಂದರೆ, ಶಬ್ದ, ಕಾಲ, ಆಲೋಚನೆ ಎಲ್ಲದರ ಮಿಶ್ರಣ ಆಗುವುದರಿಂದ ಅದು ವ್ಯಕ್ತಿಯಿಂದ  ವ್ಯಕ್ತಿಗೆ, ವಿಷಯದಿಂದ  ವಿಷಯಕ್ಕೆ ಬದಲಾಗುವಂಥದ್ದಾಗಿ ಹೋಗುತ್ತದೆ. ಆದರೆ ನಿಜ ಧ್ಯಾನ ಹಾಗಲ್ಲ. ಅರಳಿ ಬಾಡುವುದಕ್ಕೆ  ಧ್ಯಾನ ಎಂಬುದೊಂದು ಹೂವಲ್ಲ.
ಕಾಲ ಎಂದರೆ ಚಲನೆ.
ನದಿ ದಂಡೆ ಮೇಲೆ ಕುಳಿತು ಹರಿದು ಹೋಗುವ ನದಿಯ ಪ್ರವಾಹದ ಏರಿಳಿತ, ಕೊಚ್ಚಿಹೋಗುವ ಮರಮಟ್ಟುಗಳನ್ನು 'ನೀನು' ಗಮನಿಸುತ್ತಿದ್ದೆ. 'ನೀನು' ನೀರಿನಲ್ಲಿ  ತಾದಾತ್ಮ್ಯ ನಾದಾಗ ಅಲ್ಲೊಬ್ಬ ವೀಕ್ಷಕನಿದ್ದಿರಲಿಲ್ಲ. ಸೌಂದರ್ಯ ಎಂಬುದು  ಕೇವಲ ಪುಸ್ತಕ, ಕ್ಯಾನ್‌ವಾಸ್‌ಗಳ ಮೇಲಿನ ಅಭಿವ್ಯಕ್ತಿಯಲ್ಲಷ್ಟೇ ಇರುವಂಥದ್ದಲ್ಲ.. ತ್ತಿನ ಬಗೆಗಿನ ಮೋಹದ ಪರಿತ್ಯಾಗದಲ್ಲಿ  ಸೌಂದರ್ಯ ಇದೆ. ಗುಡ್ಡ, ಗೋಮಾಳ ಮತ್ತು ಇಲ್ಲಿನ ಮರಗಳು ಎಷ್ಟೊಂದು ಪ್ರಶಾಂತವಾಗಿವೆ.; ಬೆಳಗಿನ ಬೆಳಕಿನಿಂದ ಇಡೀ ದೇಶವೇ ಮಿಂದು ಸ್ವಚ್ಛವಾದಂತೆ ಅನ್ನಿಸುತ್ತಿತ್ತು.  ಇಬ್ಬರು ಗಂಡಸರು ಮುಖ ಕೆಂಪು ಮಾಡಿಕೊಂಡು ವಿಭಿನ್ನ ವಾಗ್ವಾದದಲ್ಲಿ ಮಗ್ನರಾಗಿದ್ದರು. ಅಕ್ಕ ಪಕ್ಕದಲ್ಲಿ ಉದ್ದಾನುದ್ದಕ್ಕೆ ಇದ್ದ ಸಾಲು ಮರಗಳ ನಡುವೆ ರಸ್ತೆಯೊಂದು ಹಾಸಿಕೊಂಡಿತ್ತು- ಕ್ರಮೇಣ ಬೆಳಗಿನ  ಮಾರ್ದವತೆ ಕಳೆದಿತ್ತು.
ಸಮುದ್ರ ನಮ್ಮೆಡೆಗೆ ತೆರೆದು ಕೊಂಡಿತ್ತು. ಸುತ್ತಲೂ ನೀಲಗಿರಯ ಪರಿಮಳ ಆವರಿಸಿದೆ. ಅವರಲ್ಲೊಬ್ಬ ಕುಳ್ಳ ವ್ಯಕ್ತಿ. ದೂರ ದೇಶದಿಂದ ಬಂದವ. ಬಿಸಿಲಿನ ಝಳಕ್ಕೆ ಕ್ಕೆ ಕಪ್ಪಾಗಿದ್ದ, ಬಲವಾದ ಮಾಂಸಖಂಡಗಳ ಸಣಕಲು ಮನುಷ್ಯ. ಒಂದೆರಡು ಔಪಚಾರಿಕ ಮಾತುಗಳ ನಂತರ ಟೀಕೆಯ ಅಸ್ತ್ರವನ್ನೇ ಎಸೆಯ ತೊಡಗಿದ್ದ.
 ಸತ್ಯವೇನೆಂದು ತಿಳಿದುಕೊಳ್ಳದೆ ಟೀಕೆಗಿಳಿಯುವುದು ಎಷ್ಟೊಂದು ಸುಲಭದ ಕೆಲಸ.
' ನೀವು ಸ್ವತಂತ್ರವಾಗಿ ಯೋಚಿಸುತ್ತ ನಿಮಗಿಷ್ಟ ಬಂದಂತೆ ಬದುಕುತ್ತಿರಬಹುದು. ಆದರೆ ದೈಹಿಕವಾಗಿ ನೀವೊಬ್ಬ ಕೈದಿಯಂತೆ. ಗೆಳೆಯರ ಗುಂಪಿನ ನಡುವೆ ಕಟ್ಟಿಹಾಕಿಕೊಂಡಿದ್ದೀರಿ. ಗುಂಪಿನ ಹೊರಕ್ಕೆ ಏನಾಗುತ್ತಿದೆ ಎಂಬುದೇ ನಿಮಗೆ ತಿಳಿದಿರುವುದಿಲ್ಲ. ನೀವು ಯಾವೊಂದು ಅಧಿಕಾರ ಚಲಾವಣೆ ಮಾಡದಿದ್ದರೂ ನಿಮ್ಮ ಸುತ್ತಲಿನ ಜನರು ಅಧಿಕಾರಿಗಳಂತೆ ವರ್ತಿಸುತ್ತಾರೆ.' ಎಂದು ಆತ ದೂರಿದ.
ಈ ವಿಚಾರದಲ್ಲಿ ನೀವು ಹೇಳುತ್ತಿರುವುದರಲ್ಲಿ ಸತ್ಯ ಇದೆ ಎಂದು ಅನ್ನಿಸುವುದೇ ಇಲ್ಲ.  ಶಿಕ್ಷಣ ಸಂಸ್ಥೆಗಳು  ಅಥವಾ ಇನ್ನಾವುದೇ ವ್ಯವಸ್ಥೆಯನ್ನು ನಡೆಸುವಾಗ ಅಲ್ಲೊಂದು ಜವಾಬ್ಧಾರಿ ಇರುತ್ತದೆ. ಅಧಿಕಾರದ ಒಂದಿಷ್ಟು  ದರ್ಪ ಇಲ್ಲದೆಯೂ ಅದೆಲ್ಲ ನಡೆಯುವುದು ಸಾಧ್ಯ.  ಇಲ್ಲಿ ಅಧಿಕಾರ ಎಂಬುದನ್ನು ಪರಸ್ಪರ ಸಹಕಾರದ ರೂಪದಲ್ಲಿ ನೋಡಬೇಕು. ಪರಸ್ಪರ ಸಮಾಲೋಚನೆ ನಡೆಸಿಯೇ ಇಲ್ಲಿ ವ್ಯವಸ್ಥೆಯನ್ನು  ಮುನ್ನಡೆಸಲಾಗುತ್ತಿದೆ. ಇದು ಇಲ್ಲಿರುವ ಸತ್ಯ ಸಂಗತಿ. ಅವನ-ಇತರರ ಸಂವಹನದಲ್ಲಿ ಮೂರನೆಯ ಯಾವೊಬ್ಬ ವ್ಯಕ್ತಿಯೂ ಮಧ್ಯೆ ಪ್ರವೇಶಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳ ಬಯಸುತ್ತೇನೆ.
'ನೀವು ಏನು ಹೇಳುತ್ತೀರಿ ಎಂಬುದು ತುಂಬ ಮಹತ್ವದ ಸಂಗತಿ. ನೀವು ಹೇಳುವುದು ಹಾಗೂ ಬರೆಯುವುದನ್ನೆಲ್ಲ ನಂಬಿಕಸ್ತ ಜನರ ಗುಂಪೊಂದು  ಹೊರ ಜಗತ್ತಿಗೆ  ತಲುಪಿಸುತ್ತದೆ. ಅವರೆಲ್ಲ ನಿಸ್ವಾರ್ಥ ಹಾಗೂ ಜವಾಬ್ದಾರಿಯುತ ಜನರೇ ಇದ್ದಿರಬಹುದು ನಿಜ. ಆದರೆ  ಜಗತ್ತು  ತುಂಬಿ ಸ್ಫೊಟಿಸುತ್ತಿದೆ.  ಇದೆಲ್ಲ  ನಿಮ್ಮ ಪಕ್ಕದಲ್ಲೇ ಹಾಯ್ದು ಹೋಗುತ್ತಿದೆ'
ನನಗೆ ವ್ಯಸನವಾಗುತ್ತಿದೆ. ಇಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ನಿಮಗೆ ಸಂಪೂರ್ಣ ಅರಿವೇ ಇಲ್ಲ .  ಒಂದು ಹಂತದಲ್ಲಿ ಕೆಲವೇ ಕೆಲವರ ಗುಂಪೊಂದು ಹೇಳಿದ್ದನ್ನೆಲ್ಲ ತಲುಪಿಸುವ ಜವಾಬ್ಧಾರಿಯನ್ನು ವಹಿಸಿಕೊಂಡರು. ಈಗಲೂ ಒಂದು ಸಣ್ಣ ಗುಂಪು ಅದೇ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ.  ಮತ್ತೊಮ್ಮೆ ಹೇಳಬೇಕು ಎಂದರೆ, ಇಲ್ಲಿ ಏನೆಲ್ಲ ಆಗುತ್ತಿದೆ ಎಂಬ ಬಗ್ಗೆ ನಿಮಗೆ ಅರಿವಿಲ್ಲ.
ಹೀಗೆ ಆ ವ್ಯಕ್ತಿ ಏನೆಲ್ಲ ಟೀಕೆಯನ್ನು ಮಾಡುತ್ತಿದ್ದರು. ಅವುಗಳೆಲ್ಲ ಕಲ್ಪನೆ ಹಾಗೂ ಯಾರೋ ಹೇಳಿದ ಸಂಗತಿಗಳನ್ನು ಆಧರಿಸಿ ಇತ್ತು. ಯಾವುದನ್ನೂ ಸಮರ್ಥಿಸಿಕೊಳ್ಳದ ರೀತಿಯಲ್ಲಿ ವಾಸ್ತವ ಏನೆಂದು ಹೇಳುತ್ತಿದ್ದೆ.
ಆದರೂ ಈ ಮನುಷ್ಯ  ಜೀವಿ ಎಷ್ಟೊಂದು ವಿಚಿತ್ರವಾಗಿ ವರ್ತಿಸುತ್ತಾನೆ ಅನಿಸುತ್ತಿದೆ.
ಗುಡ್ಡಗಳು ಕಳೆಗುಂದತೊಗಿದ್ದವು. ದೈನಂದಿನ ಜೀವನದ ಗದ್ದಲ, ಬರುವವರು, ಹೋಗುವವರು, ಅವರ ಸುಖ: ದು:ಖಗಳೆಲ್ಲ  ತಲೆಯಲ್ಲಿ  ತುಂಬಿತ್ತು. ಗುಡ್ಡ ಪ್ರದೇಶದಲ್ಲಿದ್ದ ಮರವೊಂದು ಆ ಭಾಗದ ಸೌಂದರ್ಯವನ್ನು ಹೆಚ್ಚಿಸಿದೆ. ಕಣಿವೆಯ ಕೆಳ ತಗ್ಗಿನಲ್ಲಿ ಒಂದು ಹೊಳೆ ಹರಿದು  ಹೋಗುತ್ತದೆ.. ಅದಕ್ಕೂ ಮೊದಲು ಒಂದು ರೈಲು ಮಾರ್ಗವಿದೆ. ತೊರೆಯ ಸೌಂದರ್ಯ ಗಮನಿಸುವುದಕ್ಕೆ ನೀನು ಇಲ್ಲಿಂದ ಹೊರ ಹೂಗಬೇಕಾಗಿತ್ತು.


ಸೆಪ್ಟೆಂಬರ್ 17, 1973

ಅಂದು ಸಂಜೆ ಕಾಡಿನೊಳಗೆ ಹೋಗುತ್ತಿದ್ದಾಗ ಅದೇನೋ ಒಂದು ರೀತಿಯ ಅವ್ಯಕ್ತ ಭಯ ಆವರಿಸಿತ್ತು. ಪಶ್ಚಿಮದ ಆಕಾಶದಲ್ಲಿ  ಸೂರ್ಯ ಮುಳುಗುತ್ತ, ಚಿನ್ನದ ಕಿರಣಗಳನ್ನು ಹೊರಸೂಸುತ್ತಿದ್ದರೆ, ಅದಕ್ಕೆ ಎದುರಾಗಿದ್ದ ಪಾಮ್ ಮರಗಳು ಏಕಾಂಗಿಯಾಗಿ ಎದ್ದು  ಕಾಣುತ್ತಿದ್ದವು. ಆಲದ ಮರದಲ್ಲಿದ್ದ ಮಂಗಗಳು ಅಲ್ಲಿಯೇ ರಾತ್ರಿವಾಸಕ್ಕೆ ಸಜ್ಜಾಗುತ್ತಿವೆ. ಆ ಮಾರ್ಗವು ಹೆಚ್ಚಿನಂಶ ನಿರ್ಜನವಾಗಿಯೇ ಇರುತ್ತದೆ. ಸಾಕಷ್ಟು ದೂರ ಕ್ರಮಿಸಿ ಬಂದಿದ್ದರೂ ಮಾರ್ಗ ಮಧ್ಯದಲ್ಲಿ ಯಾರೊಬ್ಬರೂ ಸಿಕ್ಕಿರಲಿಲ್ಲ. ಸಾಕಷ್ಟು ಹರಿಣಗಳು ಅತ್ತ-ಇತ್ತ ಸುಳಿದಾಡುತ್ತ  ದಟ್ಟಡವಿಯಲ್ಲಿ ಮಾಯವಾಗುತ್ತಿದ್ದವು. ಅಷ್ಟಾದರೂ ಅವ್ಯಕ್ತಭಯ ಮಾತ್ರ ಒತ್ತರಿಸಿ ಬರುತ್ತಿತ್ತು;  ಆ ಪ್ರದೇಶವು ಸಮೀಪದಲ್ಲೆ ವಿಸ್ತರಿಸಿಕೊಂಡ ನಗರಕ್ಕೆ ತಾಗಿಕೊಂಡಿರುವ್ಯದರಿಂದ  ಅಲ್ಲಿ ಯಾವೊಂದು ಕ್ರೂರ ಪ್ರಾಣಿಗಳು  ಇರಲಿಲ್ಲ. ಅಷ್ಟಾದರೂ ಭಯದ ಮೂಲ ಅಲ್ಲಿಯೇ ಪಕ್ಕದಲ್ಲೆಲ್ಲೋ ಇದ್ದೀತೆಂದುಕೊಂಡ 'ನೀನುಭುಜವನ್ನು ಒಮ್ಮೆ ಎತ್ತರಿಸಿ ವೀಕ್ಷಿಸಿದ್ದೆ.  ಅಲ್ಲಿಂದ ಹೊರಟು ಬೆಳಕಿನ ಬೀದಿಗೆ ತಲುಪಿದಾಗಲೇ  ನಿರಾಳ ಎನಿಸಿತ್ತು.
ಮಾರನೆ ದಿನ ಸಂಜೆ ಬಂದಾಗಲೂ ಮಂಗಗಳು ಮೊದಲಿನ ದಿನ ಇದ್ದಲ್ಲಿಯೇ  ಇದ್ದವು. ಹರಿಣಗಳೂ ಕೂಡ. ಆದರೆ ಅವ್ಯಕ್ತ ಭಯ ಮಾತ್ರ ಇದ್ದಿರಲಿಲ್ಲ. ಬದಲಾಗಿ ಅಲ್ಲಿನ ಗಿಡ ಗಂಟಿಗಳು, ಮರಗಳು ನಿಮ್ಮನ್ನು ಸ್ವಾಗತಿಸಿದ ಅನುಭವ ಆಗುತ್ತಿತ್ತು. ಎರಡನೆ ದಿನ ಕಾಡು ನಿನ್ನನ್ನು ಸ್ವೀಕರಿಸಿದ್ದರಿಂದ ಆ ಮಾರ್ಗದ ಓಡಾಟ ಹಿತವೆನಿಸುತ್ತಿತ್ತು.
ಪ್ರದೇಶದಿಂದ ಪ್ರದೇಶಕ್ಕೆ ಕಾಡುಗಳು ಭಿನ್ನವಾಗಿರುತ್ತವೆ. ಅವುಗಳಲ್ಲಿ ವಿಷಪೂರಿತ  ಹಾವುಗಳು, ಹುಲಿ ಮತ್ತಿತರ ಪ್ರಾಣಿಗಳಿಂದ ದೈಹಿಕ ಅಪಾಯ ಇರುತ್ತದೆ ನಿಜ. ಒಂದು ಮಧ್ಯಾಹ್ನ  ಅಲ್ಲಿ ಹೋದಾಗ ಒಮ್ಮೆಲೇ ಅಲ್ಲೊಂದು ರೀತಿಯ ಮೌನ ; ಅಷ್ಟು ಹೊತ್ತಿನವರೆಗೂ ಚಿಲಿಪಿಲಿಗುಡುತ್ತಿದ್ದ  ಹಕ್ಕಿಗಳು ಕಲರವ ನಿಲ್ಲಿಸಿದವು. ಮಂಗಗಳು ಹಂದಾಡುತ್ತಿಲ್ಲ. ಎಲ್ಲೆಡೆ ಉಸಿರು ಕಟ್ಟುವ ವಾತಾವರಣ. ಒಮ್ಮೆ 'ಆತ' ಅಲ್ಲಿಯೇ ನಿಂತು ಬಿಡುತ್ತಾನೆ. ಸಾವಕಾಶವಾಗಿ  ಮತ್ತೆ ಎಲ್ಲವಕ್ಕೂ ಜೀವದ ಆವಾಹನೆಯಾಗುತ್ತದೆ. ಮಂಗಗಳು ಪರಸ್ಪರ ಕೀಚಾಯಿಸುವುದರಲ್ಲಿ  ತೊಡಗಿದವು. ಹಕ್ಕಿಗಳ ಸಂಜೆಯ ಹಾಡು ಮತ್ತೆ ಶುರುವಾಗುತ್ತದೆ. ಅಂತೂ ಅಪಾಯ ನಿರಾಳವಾದ ಅನುಭವ .
ಕಾಡು ಮೇಡುಗಳಲ್ಲಿ ಜನರು ಮೊಲ, ಪಾರಿವಾಳ, ಅಳಿಲುಗಳನ್ನು ಬೇಟೆಯಾಡುತ್ತಾರೆ. ಅಂಥ  ಕಡೆಗಳಿಲ್ಲಿ  ಒಂದು ರೀತಿಯ ಬಿಗುವಿನ ವಾತಾವರಣ ಇರುತ್ತದೆ. ಜನರು ಬಂದೂಕಿನೊಂದಿಗೆ ಬೇಟೆ, ಹಿಂಸೆ ನಡೆಸಿದ ಯುದ್ಧ  ಭೂಮಿಗೆ ನೀವು ಪ್ರವೇಶಿಸಿದಂತೆ. ಕಾಡು ಯಾವಾಗ ತನ್ನ ಸೂಕ್ಷ್ಮತೆಯನ್ನು ಕಳೆದುಕೊಳ್ಳುವುದೊ ಆಗ ಅಲ್ಲಿ  ನಮ್ಮನ್ನು ಸ್ವಾಗತಿಸುವ ವಾತಾವರಣ, ಅದರ ಸೌಂದರ್ಯಕಳೆದುಹೋಗಿರುತ್ತದೆ. ಅಂಥ ಬೆಟ್ಟದಲ್ಲಿ ಆನಂದದ ಕಲರವ ಇರುವುದಿಲ್ಲ.
ಮನುಷ್ಯನಿಗೆ ಇರುವುದು ಒಂದೇ ಒಂದು ತಲೆ. ಅದರ ಅದ್ಭುತವನ್ನು ತಿಳಿದುಕೊಂಡು ಜತನ ಮಾಡಿಕೊಳ್ಳಬೇಕು. ಯಾವುದೇ ಯಂತ್ರ, ಇಲೆಕ್ಟ್ರಾನಿಕ್ ಕಂಪ್ಯೂಟರ್‌ನ್ನೂ ಕೂಡ ಮನುಷ್ಯನ ಮೆದುಳಿಗೆ ಹೋಲಿಸುವುದು ಸಾಧ್ಯವಿಲ್ಲ. ಇದು ಅಷ್ಟೊಂದು ವಿಷಾಲ, ಸಂಕೀರ್ಣತೆ, ಸಾಮರ್ಥ್ಯದಿಂದ ಕೂಡಿದೆ. ಅಷ್ಟೊಂದು ಸೂಕ್ಷ್ಮತೆ, ಉತ್ಪಾದನಾ ಸಾಮರ್ಥ್ಯ ಇದಕ್ಕಿದೆ. ಅನುಭವಗಳ ಗೋದಾಮು, ತಿಳಿವಳಿಕೆಯ ಬಂಢಾರ, ನೆನಪು.. ಒಂದೆರಡೇ ಅಲ್ಲ. ಎಲ್ಲ ಬಗೆಯ ಆಲೋಚನೆಗಳೂ ಇದರಿಂದಲೇ ಹುಟ್ಟುತ್ತವೆ. ಮಾನವನ ಏನೆಲ್ಲ ಸಾಧನೆ ಮೆದುಳಿನಿಂದ ಸಾಧ್ಯವಾಗಿದೆ ಎಂಬುದನ್ನು ಗಮನಿಸಿದರೆ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ.
ಮನುಷ್ಯ ಮೆದುಳಿನ ಸಾಧ್ಯತೆಯನ್ನೇ ಒಮ್ಮೆ  ನೋಡಿ; ಕುಚೋದ್ಯಗಳು, ಗೊಂದಲಗಳು, ವಿಷಾದಯೋಗ, ಯುದ್ಧಗಳು, ಭ್ರಷ್ಟಾಚಾರ, ಹಗಲುಗನಸು, ಹೊಂಗನಸುಗಳು, ನೋವು ಮತ್ತು ದುರಂತ. ಇನ್ನೊಂದೆಡೆ ಅಚ್ಚರಿ ಹುಟ್ಟಿಸುವ ಇಗರ್ಜಿಗಳು, ಸುಂದರ ಮಸೀದಿಗಳು, ಪವಿತ್ರ ದೇವಾಲಯಗಳು ಒಂದೆರಡೇ ಅಲ್ಲ. ಮನುಷ್ಯನ ಮೆದುಳು ಏನೆಲ್ಲ  ಮಾಡಿತು. ಏನೇನು ಮಾಡಬಹುದೆಂಬ ಕಲ್ಪನೆಯೇ ಅದ್ಭುತವೆನಿಸುತ್ತದೆ. ಇಷ್ಟೆಲ್ಲ ಮಾಡಿದೆ ನಿಜ, ಆದರೆ ಪಕ್ಕದಲ್ಲಿಯೇ ಇರುವವನ ಜೊತೆ ಸಂಬಂಧವನ್ನು  ಸುಧಾರಿಸುವ  ವಿಷಯದಲ್ಲಿ ಮಾತ್ರ ಮನಸ್ಸು ಸಂಪೂರ್ಣ ಅಸಹಾಯಕವಾಗಿ ಬಿಡುತ್ತದೆ. ಶಿಕ್ಷೆ ಅಥವಾ ಸನ್ಮಾನದಿಂದಾಗಿ ಮಾನವ ವರ್ತನೆಗಳಲ್ಲಿ ಬದಲಾವಣೆ ಸಾಧ್ಯವಾಗುವುದಿಲ್ಲ. ತಿಳಿವಳಿಕೆಗಳು ಮೆದುಳಿನ ಗುಣದಲ್ಲಿ, ವರ್ತನೆಯಲ್ಲಿ ಏನೊಂದೂ ಬದಲಾವಣೆ ತಂದಂತೆ ಕಾಣುವುದಿಲ್ಲ. ಅದರಲ್ಲಿ 'ನೀನು' ಮತ್ತು 'ನಾನು'ಗಳು ಹಾಗೆಯೇ ಉಳಿದಿರುತ್ತವೆ. ನಾನೇ ನೀನು ಮತ್ತು ನೋಡುವಿಕೆಯೇ ನೋಡುಗ ಎಂಬ  ಮೂಲ ಸತ್ಯವನ್ನು  ಗೃಹಿಸುವುದೇ ಮೆದುಳಿಗೆ ಸಾಧ್ಯವಾಗುತ್ತಿಲ್ಲ. ತನ್ನನ್ನು ನಾಶ ಮಾಡಿಕೊಳ್ಳುವುದರಲ್ಲೇ ಇದಕ್ಕೆ  ಪ್ರೀತಿ, ತನ್ನ ನೋವೇ ಅದಕ್ಕೆ ವಿನೋದ. ಅದು ನಂಬಿದ ಆದರ್ಶಗಳ ದೈವವೇ  ಅದನ್ನು ನಾಶ ಮಾಡುತ್ತಾನೆ. ಇದು ಬಯಸುವ ಸ್ವಾತಂತ್ರ್ಯ ಎಂಬುದು ಒಂದು ಬಗೆಯ ಬಂಧನವಾಗಿದೆ. ಬಂಧನದಲ್ಲಿ ವಾಸವಾಗುವುದಕ್ಕೆಂದೇ ಇದಕ್ಕೆ ಶಿಕ್ಷಣ ನೀಡಲಾಗುತ್ತದೆ. ಅಲ್ಲಿಯೇ ಸುಖವಾಗಿರುವ ಪ್ರಯತ್ನ ಅದು. ತಿಳಿದುಕೊಳ್ಳಿ.. ನಿಮಗಿರುವುದು ಒಂದೇ ಒಂದು ತಲೆ- ಅದನ್ನು ಕಾಳಜಿಯಿಂದ ರಕ್ಷಿಸಿಕೊಳ್ಳಿ. ನಾಶಮಾಡಬೇಡಿ, ಅದಕ್ಕೆ  ವಿಷ ಉಣಿಸಬೇಡಿ.
ಆತ ಯಾವಾಗಲೂ ಮರಗಳು, ಗುಡ್ಡ, ಬೆಟ್ಟ, ಹಳ್ಳಗಳೊಂದಿಗೆ ನಿಕಟವಾಗಿ  ಇರುತ್ತಿದ್ದ.. ಇದೆಲ್ಲ ಬೆಳೆಸಿಕೊಂಡಿದ್ದಲ್ಲ; ಇದನ್ನೆಲ್ಲ ಅಳವಡಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಆ ವ್ಯಕ್ತಿ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ಗೋಡೆಯೇ ಇರುತ್ತಿರಲಿಲ್ಲ. ಇತರರು ಚುಚ್ಚಿದಾಗ ನೋವಾಗುತ್ತಿರಲಿಲ್ಲ ಅಥವಾ ಹೊಗಳಿದರೆ ಉಬ್ಬಿಹೋಗುವ ಪ್ರಮೇಯವೂ ಇದ್ದಿರಲಿಲ್ಲ. ಒಟ್ಟಾರೆ ಅವ್ಯಾವವೂ ಆತನನ್ನು ತಟ್ಟುತ್ತಲೇ ಇರಲಿಲ್ಲ. ಗುಂಪಿನಲ್ಲೂ ಆತ ಏಕಾಂಗಿಯಾಗಿ ಚಡಪಡಿಸುತ್ತಲೂ ಇರಲಿಲ್ಲ. ಒಂದರ್ಥದಲ್ಲಿ ನದಿಯ ನೀರಿನಂತೆ. ಆತ ಏಕಾಂಗಿಯಾಗಿದ್ದಾಗ ಅವನಲ್ಲಿ  ಆಲೋಚನೆಗಳೆ ಬರುತ್ತಿರಲಿಲ್ಲ. ಒಮ್ಮೆ  ಬಂದಿದ್ದರೂ ಅತ್ಯಂತ ವಿರಳ. ಬರೆಯುವಾಗ ಅಥವಾ ಮಾತನಾಡುವಾಗ ಮಾತ್ರ ಆತನ ಮೆದುಳು ಕ್ರಿಯಾಶೀಲವಾಗಿರುತ್ತಿತ್ತು. ಉಳಿದಂತೆ  ಯಾವುದೇ ಚಲನೆ ಇಲ್ಲದೆ ಎಚ್ಚರದಿಂದ ಸುಮ್ಮನೆ ಇರುತ್ತಿತ್ತು. ಚಲನೆಯೇ ಕಾಲ ಹಾಗೆಂದು ಚಟುವಟಿಕೆ ಕಾಲವಲ್ಲ.
ಮಲಗಿದ್ದಾಗ, ನಡೆಯುತ್ತಿದ್ದಾಗ ಗೊತ್ತು ಗುರಿ ಇಲ್ಲದ, ಚಲನೆ ಇಲ್ಲದ ಎಚ್ಚರಿಕೆಯ ಸ್ಥಿತಿ ಅವನಲ್ಲಿ ಮುಂದುವರಿಯುತ್ತಿತ್ತು. ಆತ ಹಲವು ಬಾರಿ ಧ್ಯಾನಸ್ಥನಾಗಿಯೇ ನಿದ್ದೆಯಿಂದ ಎಚ್ಚರಗೊಳ್ಳುತ್ತಿದ್ದ. ಹೆಚ್ಚಿನ ಸಂದರ್ಭದಲ್ಲೆಲ್ಲ ಇದೇ ಸ್ಥಿತಿಯಲ್ಲಿ  ಇರುತ್ತಿದ್ದ. ಇದನ್ನು ಆತ ಕೇಳಿ ಪಡೆದಂತದ್ದಾಗಿರಲಿಲ್ಲಅಥವಾ ನಿರಾಕರಿಸಿಯೂ ಇರಲಿಲ್ಲ. ಅದೊಂದು ರಾತ್ರಿ ಎಚ್ಚರವಾಯಿತು, ಬಹಳ ಹೊತ್ತು ಹಾಗೆಯೇ ಇದ್ದ. ಮೆದುಳಿನ ಮಧ್ಯದಲ್ಲೆಲ್ಲೊ ಬೆಂಕಿಯ ಚೆಂಡು ಚಲಿಸುತ್ತಿರುವ ಅನುಭವವಾಗುತ್ತಿತ್ತು. ಸಾಕಷ್ಟು ಹೊತ್ತು ಅದನ್ನು  ಸಾಕ್ಷಿಭಾವದಿಂದ ಗಮನಿಸಿದ್ದಾನೆ. ಇದೆಲ್ಲ  ಇನ್ನೊಬ್ಬ ವ್ಯಕ್ತಿಗೆ ಸಂಭವಿಸುತ್ತಿರುವಂತೆ.  ಅದೆಲ್ಲ ಹಗಲುಗನಸಲ್ಲ. ಮನಸ್ಸು ತಾನಾಗಿಯೇ ಬೇಡಿಕೊಂಡ ಸ್ಥಿತಿಯಂತೆ ಇತ್ತು.
ಬೆಳಗು ಸನ್ನಿಹಿತವಾಗತೊಡಗಿತು. ಕಿಟಕಿಯ ಪರದೆ ಸರಿಸಿದಾಗ ಅಲ್ಲೊಂದು ಮರ ಕಾಣುತ್ತಿತ್ತು.


ಸೆಪ್ಟೆಂಬರ್ 18, 1973
ಅಭಿವೃದ್ಧಿಯ ಹೆಸರಿನಲ್ಲಿಇಲ್ಲಿನ  ಪರಿಸರದ ಮೇಲೆ ದಾಳಿ ನಡೆದಿದೆಯಾದರೂ, ಈಗಲೂ ಕೂಡ ಇದೊಂದು ಸುಂದರ ಕಣಿವೆಯೇ. ಕಣಿವೆಯ ಇಕ್ಕೆಲದಲ್ಲಿ ಗುಡ್ಡಗಳಿವೆ-ಅವುಗಳಲ್ಲಿ ಕೇಸರಿಯಾಗಿ ಗೋಚರಿಸುವ ಮರಗಳ ತೋಪು. ದಶಕದ ಹಿಂದೆ ಈ ಭಾಗದಲ್ಲಿ ಹೆಚ್ಚು ಮನೆಗಳಿರಲಿಲ್ಲ. ಮರಗಳು, ತೋಟ, ಬೆಟ್ಟದ ನಡುವೆ ಕೆಲವೇ ಮನೆಗಳಿದ್ದವು. ಈಗ ಮನೆಗಳ ಸಂಖ್ಯೆ ಹೆಚ್ಚುತ್ತಿವೆ. ರಸ್ತೆಗಳು ಅಗಲವಾಗಿ ವಾಹನದ ಗದ್ದಲವೂ ಜೋರಾಗಿದೆ. ವಿಶೇಷವಾಗಿ ಕಣಿವೆಯ ಪಶ್ಚಿಮ ಭಾಗದಲ್ಲಿ ಬಹಳಷ್ಟು ಮನೆಗಳು ನಿರ್ಮಾಣವಾಗಿವೆ. ಅದೃಷ್ಟವಶಾತ್ ಗುಡ್ಡಗಳು, ಎತ್ತರದ ದಿನ್ನೆಗಳು ಮನುಷ್ಯನ ವಿನಾಶಕಾರಿ ಕೈಗಳಿಗೆ ನಿಲುಕಿಲ್ಲ.
ಗುಡ್ಡದ ತುದಿಯನ್ನು ತಲುಪುವುದಕ್ಕೆ  ಕೆಳಗಿನಿಂದ ಬಹಳಷ್ಟು ಕಾಲು ಹಾದಿಗಳಿವೆ. ಅವುಗಳಲ್ಲಿ ಅದೆಷ್ಟೊ ಬಾರಿ ಆತ ಸಾಗಿ ಹೋಗಿದ್ದಾನೆ. ಕರಡಿಗಳು, ಕೇರೆ ಹಾವುಗಳು, ಹರಿಣಗಳು ಆಗೀಗ ಆತನಿಗೆ ಮುಖಾಮುಖಿಯಾಗಿದ್ದಿದೆ.
ಒಮ್ಮೆ  ದೃಢ ಕಾಯದ ಹುಲಿಬೆಕ್ಕೊಂದನ್ನು ಆತ ಸಂಧಿಸಿದ್ದ. ಅಂದು ಗುಡ್ಡದಿಂದ ಇಳಿದು ಬರುವ ಕಾಲುದಾರಿಯ ಪಕ್ಕದ ತಗ್ಗಿನಲ್ಲಿ  ಹುಲಿಬೆಕ್ಕು ನಿಂತುಕೊಂಡಿತ್ತು. ಅಲ್ಲಿದ್ದ ಬಂಡೆ ಹಾಗೂ ಮರದ ಬೊಡ್ಡೆಗೆಲ್ಲ  ಬೆನ್ನು  ಉಜ್ಜಿಕೊಳ್ಳುತ್ತ ಆಚೆ, ಈಚೆ ಸರಿದಾಡುತ್ತಿದೆ. ಹುಲಿಬೆಕ್ಕು  ತನ್ನದೇ ಸ್ವರ್ಗ ಲೋಕದಲ್ಲಿ ಮಗ್ನವಾಗಿತ್ತು. ಕಣಿವೆಯ ಮೇಲ್ಭಾಗಕ್ಕೆ ಗಾಳಿ ಬೀಸುತ್ತಿದ್ದರಿಂದ  ಹುಲಿಬೆಕ್ಕಿನ ಸಮೀಪ ಇಪ್ಪತ್ತು  ಅಡಿಗಳ ಅಂತರಕ್ಕೇ ಹೋಗಿದ್ದರೂ ಅದರ ಗಮನಕ್ಕೆ ಬಂದಿರಲಿಲ್ಲ. ತನಗೆ ಬೇಕಾದ ಹಾಗೆ ಮೈ ಉಜ್ಜಿಕೊಳ್ಳುತ್ತ  ಹುಲಿಬೆಕ್ಕು  ವಿಹರಿಸುತ್ತಲೇ ಇತ್ತು.  ಚೋಟಾಗಿದ್ದ ಬಾಲವನ್ನೊಂದೆಡೆ ಮೇಲಕ್ಕೆ ಎತ್ತಿಕೊಂಡಿದೆ. ಕಿವಿಯನ್ನು ನಿಮೀರಿಸಿಯೇ  ಇತ್ತಾದರೂ ಯಾರೋ ತನ್ನ ಸಮೀಪವೇ ಬಂದಿದ್ದಾರೆ ಎಂಬುದು ಮಾತ್ರ ಅದರ ಗಮನಕ್ಕೆ ಬಂದಿರಲಿಲ್ಲ. ಸ್ವಚ್ಚವಾಗಿದ್ದು ಮಿರಿಮಿರಿ ಮಿಂಚುತ್ತಿದ್ದ ಅದರ ರೋಮಗಳು ಆಕರ್ಷಕವಾಗಿತ್ತು. ಲೋಕಾಭಿರಾಮವಾಗಿ ಹುಲಿಬೆಕ್ಕು ಹಾಗೆಯೇ ಸಾಗಿ ಹೊರಟಿತು. ಮೆಲ್ಲನೆ ಹೆಜ್ಜೆ ಹಾಕುತ್ತ  'ಆತ ಅದನ್ನು  ಹಿಂಬಾಲಿಸಿ  ಸುಮಾರು ಒಂದು ಕಿಲೋಮೀಟರ್ ದೂರ ಹೋಗಿರಬಹುದು. ತನ್ನಷ್ಟಕ್ಕೆ ಆನಂದದಿಂದ, ಕೃಪಾದೃಷ್ಟಿಯನ್ನು ಬೀರುವ ವನದೇವನಂತೆ, ಹುಲಿದೇವನಂತೆ ಹುಲಿಬೆಕ್ಕು  ಕಾಣುತ್ತಿತ್ತು. ಅಷ್ಟರಲ್ಲಿಯೇ ಇಕ್ಕಟ್ಟಾದ ತೊರೆಯೊಂದು ಎದುರಾಗಿತ್ತು. ಇದರಿಂದ ನಾವು ಪರಸ್ಪರ ಬೇರ್ಪಡಬೇಕಾಯಿತು. ಸಣ್ಣದಾಗಿ 'ಆತ ಅಭಿನಂದಿಸುತ್ತಿದ್ದಂತೆ ಅಕ್ಕಪಕ್ಕ ನೋಡುವುದಕ್ಕೂ ಸಮಯ ಇಲ್ಲದಂತೆ  ತಕ್ಷಣ ಜಿಗಿದು ಹುಲಿಬೆಕ್ಕು ಅಲ್ಲಿಂದ ಕಣ್ಮರೆಯಾುತು.
ಸ್ವಲ್ಪವೇ ಹೊತ್ತಿನ ಮಟ್ಟಿಗಾದರೂ ನಾವು ಗೆಳೆಯರಾಗಿದ್ದೆವು.
ಕಣಿವೆಯ ಮರಗಳೆಲ್ಲ ಚಿಗುರಿದ್ದರಿಂದ ಒಂದು ರೀತಿಯಲ್ಲಿ  ಕೇಸರಿಯಾಗಿ ಕಾಡು ಅರಳಿ ಆರ್ಕಸುತ್ತಿತ್ತು. ಬೆಳಗಿನ ಜಾವ ಹಾಗೂ ಸಂಜೆ ವೇಳೆ  ವಿಶೇಷವಾಗಿ ಇದೆಲ್ಲ ದರ ಪ್ರಭಾವ  ಕಾಣುತ್ತಿತ್ತು. ಎಲ್ಲೆಡೆ ಹೂವು. ಗಾಳಿಯಲ್ಲಿ ಪಸರಿಸಿದ ಪರಿಮಳ. ಬೇಸಿಗೆ ಕಾಲದಲ್ಲಿ ಇಲ್ಲಿ ಸಾಕಷ್ಟು ಸೆಖೆಯಿದ್ದರೂ  ಅದರಲ್ಲೊಂದು ವೈಶಿಷ್ಠ್ಯತೆ ಇದೆ. ಹಲವು ವರ್ಷಗಳ ಹಿಂದೆ ಅಲ್ಲಿ ಹೋಗಿದ್ದಾಗ ಅದ್ಭುತವಾದ ವಾತಾವರಣ ಇತ್ತು. ಸ್ವಲ್ಪ ಮಟ್ಟಿನ ಬದಲಾವಣೆಯಾಗಿದ್ದರೂ ಈಗಲೂ ಸರಿಸುಮಾರು ಹಾಗೆಯೇ ಇದೆ. ಹೆಚ್ಚಿನಡೆ ಪೃಕೃತಿಯನ್ನು ಹಾಳು ಮಾಡುತ್ತಿರುವ ಮನುಷ್ಯ ಇಲ್ಲಿಯೂ ಹಾಗೆಯೇ ಮಾಡಿದ್ದಾನೆ.
ಅಷ್ಟಾದರೂ ಮತ್ತೆ ಮೊದಲಿನಂತೇ ಆದೀತು. ಒಮ್ಮೆಹೂವು ಒಣಗಿ ಉದುರಬಹುದು. ಮತ್ತೆ ಮುಂದಿನ ವಸಂತದಲ್ಲಿ ತನ್ನೆಲ್ಲ ಸೌಂದರ್ಯದೊಂದಿಗೆ ಹೂವು ಮರಳಿ ಬರುತ್ತದೆ.
ಈ ಮನುಷ್ಯ ಜೀವಿ ಯಾಕಾಗಿ ಇಷ್ಟೊಂದು ಹಾಳುಗೇಡಿ ಬುದ್ಧಿ ಮಾಡುತ್ತಾನೆ ಎಂಬುದರ ಬಗ್ಗೆ   ಆಶ್ಚರ್ಯ, ಆತಂಕ ಉಂಟಾಗುವುದಿಲ್ಲವೆ. ತಪ್ಪು ಮಾಡುತ್ತಾನೆ, ಭ್ರಷ್ಟನಾಗುತ್ತಾನೆ, ದುರ್ನಡತೆ, ಆಕ್ರಮಣ, ವಂಚನೆ ಮಾಡುತ್ತಾನೆ. ಇದಕ್ಕೆಲ್ಲ ಸುತ್ತಲಿನ ಪರಿಸರ, ಪಾಲಕರು,ಸಂಸ್ಕೃತಿ ಕಾರಣ ಎಂದೆಲ್ಲ ದೂರು ಹಾಕಿದರೆ ಪ್ರಯೋಜನ ಇಲ್ಲ. ಸಮಸ್ಯೆಯ ಹೊಣೆಗಾರಿಕೆಯನ್ನುನಾವು ವ್ಯವಸ್ಥೆಯ ಅಥವಾ ಇನ್ನೊಬ್ಬರ ಮೇಲೆ ಹೊರಿಸಿಬಿಡುತ್ತೇವೆ. ವಿವರಣೆಗಳು, ಕಾರಣಗಳು ತುಂಬ ಸುಲಭವಾಗಿ ಸಿಗುವ ಪಲಾಯನಗಳಾಗಿಬಿಟ್ಟಿವೆ. ಹಿಂದಿನಿಂದಲೂ ಹಿಂದೂಗಳು ಇದನ್ನೆಲ್ಲ ಕರ್ಮಫಲ ಎಂದರು. ಬಿತ್ತಿದ್ದನ್ನು ಬೆಳೆದುಕೊಳ್ಳುತ್ತೀರಿ ಎಂದ ಹಾಗೆ. ಮನಶ್ಯಾಸ್ತ್ರಜ್ಞರು ಇದಕ್ಕೆಲ್ಲ ಪಾಲಕರೇ ಕಾರಣ ಎನ್ನುತ್ತಾರೆ. ಧಾರ್ಮಿಕ ವ್ಯಕ್ತಿಗಳು ತಮ್ಮ ಧರ್ಮದ ನೇರಕ್ಕೆ ಏನೆಲ್ಲ ವಿವರಿಸುತ್ತಾರೆ. ಆದರೆ ಪ್ರಶ್ನೆ ಮಾತ್ರ ಎಂದಿನಿಂದಲೂ ಹಾಗೆಯೇ ಇದೆ. ಇನ್ನೊಂದೆಡೆ ಹುಟ್ಟುತ್ತಲೇ ಸಜ್ಜನರಾಗುವವರು ಇಲ್ಲವೆ ? ಅವರ ಮೇಲೆ ಪರಿಸರ, ಪರಿಸ್ಥಿತಿ ಒತ್ತಡದ ಪರಿಣಾಮವೇಕಾಗಿಲ್ಲ ? ಎಲ್ಲದರ ಮಧ್ಯೆಯೂ ಅವರೆಲ್ಲ ಇದ್ದಂತೆ ಇರುತ್ತಾರಲ್ಲ . ಹಾಗಾದರೆ ಯಾಕೆ ?
ಈ ಬಗ್ಗೆ  ಮತ್ತೆ ವಿವರಣೆಯ ಮಾರ್ಗ ಬೇಡ. ಯಾವುದೇ ವಿವರಣೆ ಹೆಚ್ಚೇನೂ ಪರಿಣಾಮಕಾರಿ ಅಲ್ಲ. ಪ್ರಯೋಜನಕ್ಕೆ ಬರುವುದಿಲ್ಲ. ಎಲ್ಲ ಬಗೆಯ ವಿವರಣೆಗಳೂ ವಾಸ್ತವವನ್ನು ಮರೆಮಾಚುವ ಪಲಾಯನ ವಾದ. ವಾಸ್ತವ ಏನೆಂಬುದನ್ನು ಅರಿತುಕೊಳ್ಳುವುದಷ್ಟೇ ಮಹತ್ವದ ಸಂಗತಿ. ಅದಕ್ಕೆ ವಿವರಣೆ, ಇನ್ರ್ನೆಂದು, ಮತ್ತೊಂದು ಎಂಬುದಾಗಿ ಶಕ್ತಿಯ ಅಪವ್ಯಯ ಆಗಕೂಡದು. ಕಾರಣ ಹುಡುಕುತ್ತಲೇ ಸಮಯ ವ್ಯರ್ಥ ಮಾಡಬಾರದು.
ಪ್ರೇಮ ಎಂಬುದು ವಿಶ್ಲೇಷಣೆಯಲ್ಲ, ಪಾಪ ಪ್ರಜ್ಞೆ, ಇನ್ನೊಬ್ಬರ ಮೇಲೆ ಹೇರುವುದರಲ್ಲಿ  ಅಥವಾ ಇನ್ನಾವುದರಲ್ಲೋ ಇರುವುದಿಲ್ಲ. ಹಣಕ್ಕಾಗಿನ ಆಸೆ, ಹುದ್ದೆ ಮತ್ತು  ಆತ್ಮ ವಂಚನೆಯಲ್ಲಿ ಪ್ರೇಮ ಇರುವುದಿಲ್ಲ.


ಸೆಪ್ಟೆಂಬರ್ 19, 1973
ಆ ವರ್ಷದ ಮನ್ಸೂನ್ ಆರಂಭವಾಗಿತ್ತು. ಕಾರ್ಮೋಡ ಕವಿದಿದ್ದರಿಂದ ಸಮುದ್ರ ಕಪ್ಪಾಗಿದೆ. ಜೋರಾಗಿ ಬಡಿಯುತ್ತಿರುವ ಗಾಳಿಯಿಂದಾಗಿ ಮರದ ರೆಂಬೆ-ಕೊಂಬೆಗಳೆಲ್ಲ ಮುರಿದು ಅಪ್ಪಳಿಸುತ್ತಿವೆ. ಇನ್ನು ಕೆಲವು ದಿನ ಜೋರಾಗಿ ಮುಂಗಾರು ಮಳೆ ಸುರಿಯಲಿಕ್ಕುಂಟು. ಮತ್ತೆ ಸುರಿಯುವುದಕ್ಕಾಗಿ ಮಳೆಗಾಲ ಕೆಲವು ದಿನಗಳ ಬಿಡುವು ಕೊಡಬಹುದು. ಇಳೆಗೆ ಮಳೆ ಸುರಿದಾಗ ಎಲ್ಲೆಡೆ ವಿಶಿಷ್ಟ ಪರಿಮಳ-ರಾತ್ರಿವೇಳೆ ಕಪ್ಪೆಗಳು ಕೂಗಾಟ ಶುರುವಿಟ್ಟಿರುತ್ತವೆ. ಒಮ್ಮೆ ಭೂವಿಯ  ವರ್ಷದ ಕೊಳೆಯನ್ನೆಲ್ಲ ತೊಳೆದು ಶುಭ್ರವಾಗಿಸುತ್ತದೆ. ಕೆಲವೇ ದಿನಗಳಲ್ಲಿ ಭೂಮಿ ಹಸಿರು ಹೊದಿಕೆುಂದ ಕಂಗೊಳಿಸತೊಡಗುವುದು. ಹಚ್ಚ  ಹಸುರು ಪರಿಸರದ ಮೇಲೆ  ಸೂರ್ಯ ರಶ್ಮಿ ಬಿದ್ದು, ಇಡೀ ಭೂಮಿಯೇ ಕಂಗೊಳಿಸುವುದು. ಆಗ ಬೆಳಗಿನ ಹೊತ್ತು ಎಲ್ಲೆಲ್ಲೂ ಸೌಂದರ್ಯ.  ಅಳಿಲುಗಳಿಂದ ಎಲ್ಲೆಡೆ ನೃತ್ಯ.  ಇದಾದ ತಿಂಗಳೊಪ್ಪತ್ತಿನಲ್ಲಿ ಇನ್ನೇನು ಹೂ ಬಿಡುವ ಕಾಲ, ಒಂದೆಡೆ ಕಾಡು ಮೇಡುಗಳ ಹೂವು, ಇನ್ನೊಂದೆಡೆ ಮಲ್ಲಿಗೆ, ಸೇವಂತಿಗೆ, ಗುಲಾಬಿ.
ಒಂದು ದಿನ ಸಮುದ್ರಕ್ಕೆ ಹೋಗುವಾಗಿನ ದೃಶ್ಯ ಅದು. ಪಾಮ್ ಮತ್ತಿತರ ಮರಗಳು ಭಾರೀ ಮಳೆಯಲ್ಲಿ ನೆನೆದಿದ್ದವು. ಸುತ್ತಲಿನ ಏನೆಲ್ಲ ಸಂಗತಿಗಳನ್ನು ನೋಡುತ್ತ ಮಕ್ಕಳ ಗುಂಪೊಂದು ಹಾಡುತ್ತ ಹೊರಟಿತ್ತು. ಅವರಷ್ಟಕ್ಕೆ ಅವರು ಖುಷಿಯಲ್ಲಿ ಹಾಡುತ್ತ ಜಗತ್ತನ್ನು ಮರೆತಿದ್ದರು. ಅವರಲ್ಲೊಬ್ಬಳು ನಮ್ಮ ಗುರುತು ಹಿಡಿದು ಈಚೆ ಬಂದಳು. ನಾವು ಕೆಲಹೊತ್ತು ಒಟ್ಟಿಗೆ ಹೆಜ್ಜೆ ಹಾಕಿ ದಾರಿಯಲ್ಲಿ ಕ್ರಮಿಸಿದೆವು. ಯಾರೊಬ್ಬರೂ ಮಾತನಾಡದೆ ಅಷ್ಟೂ ದೂರ ಕ್ರಮಿಸಿದ್ದೇವೆ. ಅವರ ಮನೆ ಬರುತ್ತಲೆ ಒಂದಿಸಿ ಹೊರಟು ತನ್ನ ಮನೆಯೊಳಕ್ಕೆ ಹೋಗಿ ಕಾಣೆಯಾದಳು. ಇನ್ನೇನು ಸಮಾಜ ಹಾಗೂ ಕುಟುಂಬಗಳು ಈ ಪುಟ್ಟ ಬಾಲಕಿಯನ್ನುಹಾಳುಗೆಡಹುತ್ತವೆ. ಇವಳಿಗೂ ಒಂದಿಷ್ಟು ಮಕ್ಕಳು ಹುಟ್ಟುತ್ತವೆ. ಅವುಗಳನ್ನು ಸಾಕಿ ಬೆಳೆಸುವುದಕ್ಕಾಗಿ ಏನೆಲ್ಲ ಜಂಜಡ-ಇದರಲ್ಲಿ ಸಿಕ್ಕಿಕೊಂಡು ಜೀವನದ ವಂಚನಾ ಜಾಲದಲ್ಲಿ ಗೊತ್ತಿಲ್ಲದೆ  ಮುಗ್ಧ ಜೀವಿ ಮಾಯವಾಗಿಬಿಡುತ್ತಾಳೆ. ಆದರೆ ಆ ಸಂಜೆ ಮಾತ್ರ ಆಕೆ ಖುಯಲ್ಲಿದ್ದಳು. ಕೈ ಹಿಡಿದುಕೊಂಡು ಖುಷಿ  ಹಂಚಿಕೊಳ್ಳುವುದಕ್ಕೆ ಉತ್ಸುಕಳಾಗಿದ್ದಳು.
ಇನ್ನೇನು ಮಳೆಗಾಲ ಕಡಿಮೆಯಾಗುತ್ತಲೇ ಒಂದು ದಿನ ಅದೇ ಮಾರ್ಗದಲ್ಲಿಬರುವಾಗ ಪಶ್ಚಿಮದಲ್ಲಿ ಆಕಾಶ ಬಂಗಾರದ ಬಣ್ಣಕ್ಕೆ ತಿರುಗಿತ್ತು. ಯುವಕನೊಬ್ಬ ಮಣ್ಣಿನ ಗಡಿಗೆಯನ್ನು ಹಿಡಿದುಕೊಂಡು ಮುಂದಕ್ಕೆ ಹೋಗುತ್ತಿದ್ದ. ಅತ ಸೊಂಟಕ್ಕಷ್ಟೆ ಬಟ್ಟೆಯನ್ನು ಸುತ್ತಿಕೊಂಡಿದ್ದ. ಆತನ ಹಿಂದೆ ಇಬ್ಬರು ಮರ್ಯಾದಿತವಾಗಿ ಬಟ್ಟೆಯಲ್ಲಿಸುತ್ತಿದ ಶವವೊಂದನ್ನು ಹೊತ್ತುಕೊಂಡು ಹಿಂಬಾಲಿಸಿದ್ದರು. ಎಲ್ಲರೂ ಬ್ರಾಹ್ಮಣರು-ಸ್ನಾನ ಮಾಡಿ ಶುದ್ಧರಾಗಿದ್ದರು. ಅವರೆಲ್ಲರ ನಡಿಗೆ ಚುರುಕಾಗಿತ್ತು. ಸಮುದ್ರ ಕಿನಾರೆಯ ನಿರ್ದಿಷ್ಟ ಜಾಗವೊಂದರಲ್ಲಿ ಶವ ಸುಡುವುದಕ್ಕಿದೆ. ಒಟ್ಟಾರೆ ಘಟನೆಯೇ ಅತ್ಯಂತ ಸರಳವಾಗಿದೆ.
ಶವದ ಮೆರವಣಿಗೆ, ಹೂ ಹಾರಗಳಲ್ಲಿ ಮುಳುಗಿಸುವುದು, ಹಿಂದಿನಿಂದ ದುಬಾರಿ ಕಾರುಗಳಲ್ಲಿ ಹಿಂಬಾಲಿಸುವ ಶ್ರೀಮಂತರ ದಂಡು. ಶವ ಪೆಟ್ಟಿಗೆ ಸುತ್ತಲೂ ಧು:ಖಿಸುವವರ ಸಮೂಹ. ಇದೆಲ್ಲ ಶವದೊಂದಿಗೆ ಇರುವ ಅಂಧಕಾರದ ಪ್ರಭಾವಳಿಯಲ್ಲದೆ ಮತ್ತೇನಲ್ಲ. ಅಂಥ ಯಾವೊಂದು ಆಡಂಬರಗಳೂ ಇಲ್ಲಿ ಇರಲಿಲ್ಲ. ಹಿಂದೊಮ್ಮೆ ಕಂಡ ಘಟನೆಯೂ ಇದೇ ರೀತಿಯಲ್ಲಿ ಸರಳವಾಗಿತ್ತು. ಆಗ  ಶವವೊಂದನ್ನು  ಹೊದಿಸಿಕೊಂಡು ಸೈಕಲ್‌ನಲ್ಲಿ ನದಿ ದಡಕ್ಕೆ ಸಾಗಿಸಿ ಸರಳವಾಗಿ ಸುಡಲಾಗಿತ್ತು.
ಸಾವು ಎಲ್ಲೆಡೆ ಇದ್ದರೂ ನಾವು ಅದರೊಂದಿಗೆ ಬದುಕಲು ಕಲಿಯುತ್ತಿಲ್ಲ. ಆ ಬಗ್ಗೆ ಮಾತನ್ನು ಆಡಲಾರದಷ್ಟು ಸಾವು ಎಂಬುದು ಕರಾಳ, ಭಯದ ಸಂಗತಿಯಾಗಿಹೋಗಿದೆ. ಸಾವಿನ ಬಗ್ಗೆ ಸೊಲ್ಲೆತ್ತುವುದಕ್ಕೇ  ಭಯ. ಅದನ್ನು  ದೂರ ಹಾಕಿ ಮುಚ್ಚಿಟ್ಟಿರುತ್ತೇವೆ. ಏನೇ ಮಾಡಿದರೂ ಸಾವು ಮಾತ್ರ ಹೇಗಿರಬೇಕೊ ಹಾಗೇ ಇರುತ್ತದೆ. ನೆರಳಿನಂತೆ ಹಿಂಬಾಲಿಸುತ್ತದೆ. ಪ್ರೇಮದ ಸೌಂದರ್ಯವೇ ಸಾವಿನಲ್ಲಿ ಅಡಗಿದ್ದರೂ ಯಾರೊಬ್ಬರೂ ಇದಾವುದನ್ನೂ ತಿಳಿದುಕೊಳ್ಳುವುದಿಲ್ಲ.
ಸಾವು ಎಂದರೆ ಕಷ್ಟ, ಪ್ರೇಮ ಎಂದರೆ ಸುಖ, ಇವೆರಡನ್ನೂ ಪರಸ್ಪರ ದೂರ ಇಡಬೇಕು ಎಂದು ನಾವು ಬಯಸುತ್ತೇವೆ ; ಅವೆರಡನ್ನೂ  ದೂರ ಇಡಬೇಕೆಂಬ ಪ್ರಯತ್ನದಿಂದಲೇ ನೋವು ಯಾತನೆಗಳನ್ನು ಎಳೆದು ಹಾಕಿಕೊಳ್ಳುತ್ತೇವೆ. ಆರಂಭದಿಂದಲೂ ಇದೆಲ್ಲ ಹೀಗೆಯೇ ಇದೆ. ಇವೆರಡನ್ನೂ ಪ್ರತ್ಯೇಕಿಸುವುದರಿಂದಲೇ ಮುಗಿಯದ ಗೊಂದಲವಾಗಿದೆ. ನೋಡುವಿಕೆಯೇ ನೋಡುಗ, ಅನುಭವಿಸುವಿಕೆಯೇ ಅನುಭವಿ ಎಂಬುದನ್ನು ಯಾರು ಅರ್ಥಮಾಡಿಕೊಳ್ಳುವುದಿಲ್ಲವೊ ಅವರಿಗೆಲ್ಲ ಸಾವು ಖಚಿತ. ಆಸ್ತಿ, ಮನೆ, ಅಹಂಕಾರ, ನೋವು, ತಿಳಿವಳಿಕೆ, ಎಲ್ಲವನ್ನೊಳಗೊಂಡ ಬಹುದೊಡ್ಡ ನದಿಯ ಪ್ರವಾಹದಲ್ಲಿ ಸಿಕ್ಕಿಕೊಂಡಂತೆ-ಮನುಷ್ಯನ ಈ ಸ್ಥಿತಿಯನ್ನು ಹೋಲಿಸಬಹುದು. ತಾನು ಗಳಿಸಿದ್ದೆಲ್ಲವನ್ನೂ ಬಿಟ್ಟು, ಈ ನದಿಯಿಂದ ಈಜಿ ಆಚೆ ಬಂದರೆ ಮಾತ್ರಸಾವಿನ ಕುಣಿಕೆುಂದ ಹೊರಕ್ಕೆ ಬರಬಹುದು. ಆತ ನದಿಯನ್ನು ಬಿಟ್ಟ ತಕ್ಷಣ ಅಲ್ಲೊಂದು ದಡ ಇರುವುದಿಲ್ಲ. ನದಿಯ ದಡ ಎಂದರೆ ಮೊದಲಿನದೇ ಜಗತ್ತು; ಅದೇ  ವೀಕ್ಷಕ.
 'ಆತ  ನದಿ, ದಡ ಎಲ್ಲವನ್ನೂ  ತ್ಯಜಿಸಿಬಿಟ್ಟಿದ್ದಾನೆ. ನದಿ ಎಂದರೆ ಕಾಲದಂತೆ, ದಡ ಎಂದರೆ ಆಲೋಚನಾ ಜಾಲದಲ್ಲಿಹುದುಗಿರುವ ಕಾಲ. ನದಿ ಎಂದರೆ ಕಾಲದ ಚಲನೆಚಿಾಗಿರುತ್ತದೆ, ಅದರಿಂದ ನಿರ್ಮಾಣವಾಗುವಂಥದ್ದು ಆಲೋಚನೆ. ಯಾವಾಗ ವೀಕ್ಷಕ ತಾನೇನಾಗಿರುತ್ತಾನೋ ಅದನ್ನೆಲ್ಲ ಬಿಟ್ಟರೆ ಅಲ್ಲಿ ವೀಕ್ಷಕನೇ ಐಕ್ಯನಾಗಿರುತ್ತಾನೆ. ಈ ಸ್ಥಿತಿ ಸಾವಲ್ಲ. ಇದು ಕಾಲವನ್ನು ಮೀರಿದ ಅಸ್ತಿತ್ವ. ಆಲೋಚನೆಗಳ ಮಿತಿಯಲ್ಲಿ ಇದನ್ನೆಲ್ಲ ತಿಳಿಸುಕೊಳ್ಳುವುದು ಸಾಧ್ಯವಿಲ್ಲ. ಆಲೋಚನೆ ಎಂದರೆ ಜ್ಞಾತ- ನೀವು ಮೊದಲು ತಿಳಿದಿರುವ ಸಂಗತಿಯಾಗಿರುತ್ತದೆ. ಕಾಲವನ್ನು ಮೀರಿದ ಸ್ಥಿತಿ ಎಂದರೆ ಅದನ್ನು ಅನುಭವಿಸುವುದು ಸಾಧ್ಯವಿಲ್ಲ. ಅನುಭವ-ಗುರುತಿಸುವಿಕೆಯಲ್ಲಿ ಒಂದು ಕಾಲವು ಇರುತ್ತದೆ, ಅದೆಲ್ಲ ಆಲೋಚನೆಯ ಮುಂದುವರಿದ ಭಾಗ. ತಿಳಿವಳಿಕೆಯಿಂದ ಸ್ವಾತಂತ್ರ್ಯ ಪಡೆದರೆ, ಕಾಲದಿಂದಲೂ ಸ್ವಾಯಂತ್ರ್ಯ ಪಡೆದಂತೆ. ಚಿಂರಂಜೀವಿತ್ವ ಎಂಬುದು ಶಬ್ಧಗಳು, ವಾಕ್ಯಗಳು, ಪುಸ್ತಕ, ಚಿತ್ರಗಳನ್ನೆಲ್ಲ ಕ್ರೂಢೀಕರಿಸಿ  ಉಂಟಾಗಿರುವಂಥದ್ದಲ್ಲ.  ಆತ್ಮನ್, ಸೋಲ್ ಎಂಬುದು ಕೂಡ ಆಲೋಚನೆ ಹುಟ್ಟುಹಾಕಿದ 'ಸ್ವಯಂ ಎಂಬುದರ ಕೂಸು. ಯಾವಾಗ ಈ ಕಾಲದ ಕಟ್ಟಳೆ ಕಳಚುವುದೋ ಆಗ ಸಾವು ಎಂಬುದು ಇರುವುದಿಲ್ಲ. ಅದುವೇ ಪ್ರೇಮ.
ಪಶ್ಚಿಮದಲ್ಲಿ ಆಕಾಶ ತನ್ನ  ಬಣ್ಣಗಳನ್ನು  ಕಳೆದುಕೊಂಡು ತಿಳಿಯಾಗುತ್ತಿದ್ದಂತೆ ಆ ದಿನ ಚಂದ್ರನ ದರ್ಶನವಾಗಿತ್ತು. ಎಳೆಯದಾಗಿ, ಸ್ನಿಗ್ಧ-ಮುಗ್ಧತೆಯ ಸಂಕೇತವಾಗಿ ಚಂದಿರ ಕಾಣುತ್ತಿದ್ದ.
ರಸ್ತೆಯಲ್ಲಿ ಏನೆಲ್ಲ ನಡೆಯುತ್ತಿದೆ. ಒಂದೆಡೆ ಮದುವೆ ಪಾರ್ಟಿ, ಅದರಲ್ಲಿ ನರ್ತಿಸುತ್ತಿರುವ ಮಕ್ಕಳು. ಇನ್ನ್ನೊಂದೆಡೆ   ಶವಚಿಾತ್ರೆ, ಅದರ ಹಿಂದೆ ಧು:ಖಿಸುವವರ ದಂಡು.
ಚಂದಿರನ ಹತ್ತಿರ ಒಂಟಿ ನಕ್ಷತ್ರ ಮಿನುಗುತ್ತಿತ್ತು.


ಸೆಪ್ಟೆಂಬರ್ 20, 1973

ಬೆಳಗ್ಗೆಆಗಷ್ಟೆ ಸೂರ್ಯ ಉದಯಿಸುತ್ತಿದ್ದ. ಊರು, ಕಣಿವೆಯಲ್ಲಿನ ಮರದ ತೋಪುಗಳೆಲ್ಲಮರೆಯಲ್ಲಿಯೇ ಇದ್ದವು ; ಈ ದಿನ ನದಿ ಮಾತ್ರ ತೀರಾ ಸುಂದರವಾಗಿ ಕಾಣುತ್ತಿತ್ತು. ಗಾಳಿ ಸ್ತಬ್ಧವಾಗಿತ್ತು. ನೀರಿನ ಮೇಲೆಲ್ಲೂ ಅಲೆಗಳು ಕಾಣುತ್ತಿರಲಿಲ್ಲ. ಹಗಲು ಹೊತ್ತು ಸೆಖೆಯ ಅನುಭವ ಆಗುತ್ತಿದ್ದರೂ ಬೆಳಗಿನ ಜಾವ ಮಾತ್ರ ಎಲ್ಲೆಲ್ಲೂ ತಂಪಾಗಿರುತ್ತಿತ್ತು. ಒಂಟಿ ಕೋಡಗವೊಂದು ಮರದ ಮೇಲೆ ಸೂರ್ಯನಿಗೆ ಮೈ ಕಾುಸುತ್ತಿತ್ತು. ಆ ಭಾಗಕ್ಕೆ ಬಂದಾಗಲೆಲ್ಲ ಒಂಟಿ-ದಡೂತಿಯಾದ ಈ ಮಂಗದ ದರ್ಶನವಾಗದೆ ಇರುತ್ತಿರಲಿಲ್ಲ. ಹಗಲಿಡೀ  ಎಲ್ಲೋ ಕಾಣೆಯಾಗಿರುತ್ತಿದ್ದರೂ ಬೆಳಗಿನ ಹೊತ್ತು ಅದೇ ಹುಣಸೆ ಮರದಲ್ಲಿ ಹಾಜರಾಗಿ,  ಬಿಸಿಲೇರುತ್ತಿದ್ದಂತೆ ಮರದ ಮರೆಯಲ್ಲಿಮಾಯವಾಗಿಬಿಡುತ್ತಿತ್ತು.  ಇನ್ನೊಂದೆಡೆ ಕೋಟೆ ಗೋಡೆಯ ಮೇಲೆ ಕೆಂಬೂತಗಳು, ಪಾರಿವಾಳಗಳು ಕುಳಿತಿದ್ದವು. ಪಕ್ಕದ ಹುಣಸೆ ಮರದ ತುದಿಯಲ್ಲಿ ರಣಹದ್ದೂ ಕೂಡ ಚಿತ್ತೈಸಿತ್ತು.
ವಿಮಾನ ನಿಲ್ದಾಣದಿಂದ ಹಿಂದಿರುಗುತ್ತಿದ್ದೆವು. ರಸ್ತೆಯುದ್ದಕ್ಕೂ  ಮರದ ನೆರಳು ಹಾಸಿ ಸ್ವಾಗತಿಸುತ್ತಿದೆ. ಕೆಂಪು, ಹಸಿರು ಬಣ್ಣದ ಪಾರಿ ವಾಳಗಳು ಅಲ್ಲಲ್ಲಿ ಮರದಲ್ಲಿ ಹಾರಾಡುತ್ತ ಗುಟುರು ಹಾಕುತ್ತಿವೆ. ಹಾಗೆ ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲೇ ದಡೂತಿ ಕಾಯವೊಂದು ಬಿದ್ದುಕೊಂಡಿದೆ. ಸಮೀಪಿಸಿ ನೋಡಿದರೆ ಕನಿಷ್ಠ ಉಡುಗೆಯಲ್ಲಿ ಠೊಣಪನೊಬ್ಬ ಉದ್ದಾಂಡ ಮಲಗಿಕೊಂಡಿದ್ದಾನೆ. ಕಾರನ್ನು ಪಕ್ಕಕ್ಕೆ ನಿಲ್ಲಿಸಿ ನಾವೆಲ್ಲ ಇಳಿದೆವು. ದೊಡ್ಡ ದೇಹ, ಸಣ್ಣ ತಲೆಯ ಆ ವ್ಯಕ್ತಿ ಆಕಾಶದತ್ತ ದೃಷ್ಟಿ ಇಟ್ಟು ಹಂದಾಡದೆ ಮಲಗಿದ್ದಾನೆ. ಆತ ನೋಡುತ್ತಿರುವ ದಿಕ್ಕಿನಲ್ಲಿ ನೋಡಿದರೆ ಶುಭ್ರ ನೀಲಾಕಾಶ ಬಿಟ್ಟರೆ ಅಲ್ಲಿ ಬೇರೇನೂ ಕಾಣುತ್ತಿರಲಿಲ್ಲ. ವಿಕರಾಳವಾಗಿ ಬೆಳೆದಿದ್ದ ಆತನೊಬ್ಬ ಊರಿನ ಬೆಪ್ಪ ಎಂದು ತಿಳಿಯಿತು.  ಕೊನೆಗೂ  ಆ ಜೀವ ರಸ್ತೆಯಿಂದ ಚಲಿಸಲೇ ಇಲ್ಲ; ಕಾರನ್ನೇ ಆತನ ಸುತ್ತುಬಳಸಿ ತಂದು ಅಲ್ಲಿಂದ ದಾಟಿ ಹೋಗಬೇಕಾಗಿ ಬಂದಿತ್ತು. ಅದೇ ಮಾರ್ಗದಲ್ಲಿ ಬರುತ್ತಿದ್ದ ಭಾರ ಹೊತ್ತ ಒಂಟೆಗಳು, ಒಂದಿಷ್ಟು ಗದ್ದಲ ಹಾಕುತ್ತಿದ್ದ ಯುವಕರ ಸಮೂಹ ಆ ವ್ಯಕ್ತಿಯನ್ನು ಹೆಚ್ಚು ಗಮನಿಸದೆ ಅಲ್ಲಿಂದ ದಾಟಿ ಹೋದವು.  ಆ ಮಾರ್ಗದಲ್ಲೇ  ಬಂದ ನಾಯಿಯೊಂದು ದೊಡ್ಡ ಸುತ್ತು ಬಳಸಿ ವ್ಯಕ್ತಿಯನ್ನು ದಾಟಿಕೊಂಡು ಹೋಯಿತು. ಪಾರಿವಾಳಗಳು ಇನ್ನೂ ತಮ್ಮದೇ ಗದ್ದಲದಲ್ಲಿ ಮುಳುಗಿದ್ದವು. ಒಣಗಿದ್ದ ಹೊಲ, ಹಳ್ಳಿಯ ಜನರು, ಮರಗಳು- ಅವುಗಳಲ್ಲಿದ್ದ ಹಳದಿ ಹೂವುಗಳೆಲ್ಲ ಅಚ್ಚಾಗಿ ಕಾಣುತ್ತಿದ್ದವು. ಜಗತ್ತಿನ ಈ ಭಾಗ ಇನ್ನೂ ಒಂದಿಷ್ಟುಹಿಂದುಳಿದಿದೆ. ಈ ಅವಸ್ಥೆಯ ಜನರನ್ನು ನೋಡಿಕೊಳ್ಳುವುದಕ್ಕೆ ಅಲ್ಲಿ ವ್ಯಕ್ತಿಗಳಾಗಲಿ, ಸಂಘಟನೆಗಳಾಗಲಿ  ಹುಟ್ಟಿಕೊಂಡಿಲ್ಲ. ಆ ಊರಿನಲ್ಲಿಇನ್ನೂ ತೆರೆದುಕೊಂಡ ಘಟಾರಗಳೆ ಇವೆ. ಕೊಳಚೆ, ಜನಜಂಗುಳಿ-ಪವಿತ್ರ ನದಿಗಳೆಲ್ಲ ತನ್ನಷ್ಟಕ್ಕೆ ಹರಿಯುತ್ತಿವೆ. ಜೀವನದ ವಿಷಾದ ಎಲ್ಲೆಡೆ ಕವಿದುಕೊಂಡಿದೆ. ನೀಲಿ ಆಕಾಶದ ಎತ್ತರದಲ್ಲಿ ರಣಹದ್ದುಗಳು ತಮ್ಮ ರೆಕ್ಕೆ ಬಡಿಯದೆ ಘಂಟೆಗಟ್ಟಲೆ ಕೆಳಕ್ಕೆ ನೋಡುತ್ತವೃತ್ತಾಕಾರವಾಗಿ ಹಾರಾಡುತ್ತಿವೆ.
ಸ್ವಸ್ತರು ಮತ್ತು ಅಸ್ವಸ್ತರು ಎನ್ನುತ್ತೇವಲ್ಲ-ಹಾಗೆಂದರೇನು ? ಯಾರು ಸ್ವಸ್ತರು, ಯಾರು ಅಸ್ವಸ್ತರು ? ನಮ್ಮ ರಾಜಕೀಯ ನೇತಾರರು ಸ್ವಸ್ತರೆ ? ದೈವ ಭಕ್ತಿಯ ಜನರು ಸ್ವಸ್ತರೆ ? ವಿಚಾರವಾದಿಗಳು ? ಇವರೆಲ್ಲರಿಂದ ಪ್ರಭಾವಿತರಾಗಿದ್ದೇವಲ್ಲ ನಾವು ಸ್ವಸ್ತರೆ ?
ಸ್ವಸ್ತತೆ ಎಂದರೇನು ? ಪರಿಪೂರ್ಣನಾಗಿರುವಂಥವ. ಜೀವನದಲ್ಲಿ, ಕ್ರಿಯೆಯಲ್ಲಿ, ಯಾವುದೇ ಸಂಬಂಧಗಳಲ್ಲಿ ಪ್ರತ್ಯೇಕವಾಗಿ, ತುಣುಕು ತುಣುಕಾಗಿ ಇರುವಂಥದ್ದಲ್ಲ. ಎಲ್ಲೆಡೆ ಸಲ್ಲುವಂಥ ಗುಣ ಪರಿಪೂರ್ಣತೆಯ ಮೂಲ ಆಶಯವಾಗಿದೆ. ಪವಿತ್ರವಾಗಿ, ಆರೋಗ್ಯವಾಗಿ ಪರಿಪೂರ್ಣನಾಗಿರುವುದೇ ಸ್ವಸ್ತತೆ. ಅಸ್ವಸ್ತನಾಗುವುದು, ಮತಿಭ್ರಮಣೆಯಾಗುವುದು, ಮನೋರೋಗಿ, ತೂಕ ತಪ್ಪಿದ ವರ್ತನೆ, ವೈರುಧ್ಯ ವರ್ತನೆಯಲ್ಲಿ ತೊಡಗುವವ, ಸ್ಕಿಜೋಫ್ರಿನಿಕ್  ಅಥವಾ ಇನ್ನಾವುದೇ ಹೆಸರಿನಿಂದ ನೀವದನ್ನು ಕರೆಯಬಹುದು; ಅಪೂರ್ಣವಾಗಿ, ಹರಕುಮುರುಕಾಗಿ ಕಾರ್ಯನಿರ್ವಹಿಸುವ ಸಂಬಂಧಗಳ ಚಲನಶೀಲತೆಯನ್ನು ಅರ್ಥವಿಸದ ಮನಸ್ಥಿತಿ ಅದು. ವೈರುಧ್ಯ ನಡವಳಿಕೆ, ಮಾಡುವ ಕ್ರಿಯಯೆಯಲ್ಲಿ ತೊಡಗಿಕೊಳ್ಳದ ಮನಸ್ಸು, ಸಂಬಂಧಗಳಲ್ಲಿ ಕದ್ದು-ಮುಚ್ಚಿ ಮಾಡುವ ಅಭಿವ್ಯಕ್ತಿಯನ್ನೇ ಅಸ್ವಸ್ತ ಎನ್ನುತ್ತೇವೆ. ಪರಸ್ಪರರಲ್ಲಿ ದ್ವೇಷ ಹುಟ್ಟುಹಾಕಿ, ಮಾನವರಲ್ಲಿ ಕಂದಕಗಳನ್ನು ಏರ್ಪಡಿಸಿ ರಾಜಕೀಯ ಬೇಳೆ ಬೇಯಿಸಿ ಆಳುತ್ತಾರಲ್ಲ; ನಿರಂಕುಶ ಆಡಳಿತಗಾರರಿರಲಿ ಅಥವಾ ಶಾಂತಿಯ ಹೆಸರಲ್ಲಿ ರಾಜಕೀಯ ಮಾಡುವುದಿರಲಿ, ಯಾವುದೋ ತತ್ವಬದ್ಧ ರಾಜಕಾರಣ ಮಾಡುವವರು ಎಲ್ಲವೂ ಕೂಡ ಅಸ್ವಸ್ತತೆಯನ್ನು ಮುಂದುವರಿಸಿಕೊಂಡು ಹೋಗುವ ಪ್ರಯತ್ನಗಳೆ ಆಗಿವೆ. ಇನ್ನೊಂದೆಡೆ ಪೂಜಾ ಕೈಂಕರ್ಯದವರು-ಪುರೋಹಿತಶಾಹಿ ಜಗತ್ತನ್ನೊಮ್ಮೆ ನೋಡಿ.. ಭಕ್ತರು ದೇವರ ನಡುವೆ, ಜನರು ಸತ್ಯದ ನಡುವೆ, ಜಗತ್ತು ಸ್ವರ್ಗದ ನಡುವೆ ಇವರು ಮದ್ಯವರ್ತಿಗಳಂತೆ ವರ್ತಿಸುತ್ತಾರೆ. ಪುರೋಹಿತ ಎಂದರೆ ದೇವರ ಪ್ರತಿನಿಧಿ, ಜಗತ್ತಿನ ಪರಮ ಸತ್ಯಕ್ಕೊಬ್ಬ ಭಾಷ್ಯಕಾರ, ಸ್ವರ್ಗದ ಕೀಲಿ ಇರುವುದೇ ಈತನಲ್ಲಿ. ನಂಬಿಕೆ, ಶಾಸ್ತ್ರ, ತತ್ವ ಶಾಸ್ತ್ರಗಳನ್ನು ತಲೆಗೆ ತುಂಬುವ ಭವರೋಗ ವೈದ್ಯನೀತ. ನಿಮಗೆ ಸುಖ, ಸ್ವರ್ಗ, ಭದ್ರತೆ, ಅಭದ್ರತೆಗಳಿಗೆ ಆಶ್ವಾಸನೆಗಳು, ಪ್ರಮಾಣಪತ್ರಗಳು ಬೇಕಾಗಿರುವುದರಿಂದ ಅದಕ್ಕೆಲ್ಲ ಪೂರಕವಾಗಿ ಆತ ಮನ:ಪರಿವರ್ತನೆ ಮಾಡುತ್ತಾನೆ. ಮೈಂಡ್ ವಾಶ್ ಮಾಡುತ್ತಾನೆ.
ಇನ್ನೊಂದೆಡೆ ಚಿತ್ರ ಕಲಾವಿದ, ಕವಿ, ವಿಚಾರ ವಾದಿ, ವಿಜ್ಞಾನಿಗಳನ್ನೆಲ್ಲ ನಾವು ಎಷ್ಟೊಂದು ಹೊಗಳುತ್ತೇವಲ್ಲ- ಅವರಾದರೂ ಸ್ವಸ್ತರಾಗಿರುತ್ತಾರೆಯೇ ? ಅವರೆಲ್ಲ ಕನಸು-ವಾಸ್ತವ ಜಗತ್ತಿನ ವಿರೋಧಾಭಾಸದಲ್ಲಿ, ಕಂದಕದಲ್ಲಿ ಬದುಕಿರುವುದಿಲ್ಲವೇ ?  ಕಲ್ಪನೆಯಿಂದ  ಸೃಷ್ಟಿಯಾದ ಸಾಹಿತ್ಯದ ಸುಖ, ದು:ಖ ಹಾಗೂ ಸೃಷ್ಟಿಸಿದದವರ ನಿಜ ಜೀವನದ ಸುಖ, ದು:ಖಗಳು ಪರಸ್ಪರ ಬೇರೆಯೇ ಆಗಿರುತ್ತವೆಯಲ್ಲವೆ ?
ನಿಮ್ಮ ಸುತ್ತಲಿನ ಜಗತ್ತು ವೈರುಧ್ಯದಿಂದ ಕೂಡಿದೆ. ಹಾಗೇ ನೀವೂ ಕೂಡ. ಜಗತ್ತಿನ ಅಭಿವ್ಯಕ್ತಿಗಳೂ ಹಾಗೆಯೇ. ಛಿದ್ರತೆ, ಗೊಂದಲ, ದುರಂತಗಳೆಲ್ಲತುಂಬಿದೆ.; ನೀವೇ ಜಗತ್ತು-ಜಗತ್ತೇ ನೀವು. ವೈರುಧ್ಯ ರಹಿತವಾದ ಕ್ರಿಯಾಶೀಲ ಬದುಕನ್ನು ಬದುಕುವುದೇ ಸ್ವಸ್ತತೆ. ಕ್ರಿಯೆ ಮತ್ತು ಐಡಿಯಾಗಳು ಪರಸ್ಪರ ವೈರುಧ್ಯಗಳಾಗಿವೆ. ನೋಡುವಿಕೆಯೇ  ಕರ್ಮವಾಗಿ ಪರಿವರ್ತನೆಯಾಗಬೇಕು. ನೋಡುವುದಕ್ಕೊಂದಿಷ್ಟು ಹೊತ್ತು, ಒಂದು ಐಡಿಯಾವನ್ನು ಸಿದ್ಧಪಡಿಸಿ ನಂತರ ಕೆಲಸಕ್ಕೆ ಇಳಿಯುವಂತೆ ಆಗಬಾರದು. ಕ್ರಿಯೆ ಮತ್ತು ಆಲೋಚನೆಗಳ ನಡುವೆ ಅಂತರ ಉಂಟಾದರೆ ತಿಕ್ಕಾಟಕ್ಕೆ ಕಾರಣವಾಗುತ್ತದೆ. ವೈರುಧ್ಯ ಉಂಟಾಗುತ್ತದೆ. ವಿಶ್ಲೇಷಕ ವಿಶ್ಲೇಷಣೆಗಳೆಂಬ ಪ್ರತ್ಯೇಕತೆ ಹೋಗಬೇಕು. ವಿಶ್ಲೇಷಕ ತಾನು ಪ್ರತ್ಯೇಕವಾಗಿರುವಂಥದ್ದು ಎಂದು ಯಾವಾಗ ಅಂದುಕೊಳ್ಳುತ್ತಾನೊ ಆಗ ತಿಕ್ಕಾಟಕ್ಕೆ ಹೇತುವಾಗುತ್ತಾನೆ. ತಿಕ್ಕಾಟ- ವೈರುಧ್ಯಗಳ ಸ್ಥಿತಿಯೇ ಮನಸ್ಸಿನ ತೂಕ ತಪ್ಪುವಿಕೆಯ  ವಿಕಲ್ಪಗಳಾಗುತ್ತವೆ. ಯಾವಾಗ ವೀಕ್ಷಕನೇ ವೀಕ್ಷಣೆಗೊಳಗಾಗುತ್ತಾನೋ ಅಲ್ಲಿ ಸ್ವಸ್ತತೆ ಉಂಟಾಗುತ್ತದೆ. ಪೂರ್ಣತೆ-ಪವಿತ್ರತೆಯೇ ಪ್ರೇಮವಾಗಿರುತ್ತದೆ.


ಸೆಪ್ಟೆಂಬರ್ 21, 1973

ನಿದ್ದೆಯಿಂದ ಎಚ್ಚರಗೊಂಡಾಗ ಯಾವೊಂದು ಆಲೋಚನೆ-ಅವುಗಳ ಕಿರಿಕಿರಿ ಇಲ್ಲದಿದ್ದರೆ ಚೆನ್ನಾಗಿರುತ್ತದೆ. ಅದರರ್ಥ  ಮನಸ್ಸು ಸಂಪೂರ್ಣ ವಿಶ್ರಾಂತಿ ಪಡೆದಿರುತ್ತದೆ. ತನ್ನೆಲ್ಲ ಜಡಕು-ಗಂಟುಗಳನ್ನುಸರಿಪಡಿಸಿಕೊಂಡು ವ್ಯವಸ್ಥೆಗೊಳಪಟ್ಟು ಶಾಂತವಾಗುತ್ತಿರುತ್ತದೆ- ಅದಕ್ಕಾಗಿಯೇ ಉತ್ತಮವಾದ ನಿದ್ದೆ ಎಂಬುದು ಬಹು ಮುಖ್ಯ ಸಂಗತಿ. ಎಚ್ಚರವಿದ್ದ ಅವಧಿಯಲ್ಲಿ ಮೆದುಳಿನ ಚಟುವಟಿಕೆಗಳು ಅಥವಾ ಸಂಕೀರ್ಣ ಸಂಬಂಧಗಳನ್ನೆಲ್ಲ ನಿದ್ದೆಯ ಪ್ರಕ್ರಿಯೆಯಲ್ಲಿ ಕ್ರಮವಾಗಿ ಹೊಂದಿಸಿಡಲಾಗುತ್ತದೆ. ನಿದ್ದೆಯ ಹೊತಿನಲ್ಲಿ ತನಗೆ ತೃಪ್ತಿಯಾಗುವ ರೀತಿಯಲ್ಲಿ ಮನಸ್ಸು ತನ್ನನ್ನು ಹೊಂದಿಸಿಕೊಳ್ಳುತ್ತದೆ. ದಿನದ ಹೊತ್ತಿನಲ್ಲಿ ಎಷ್ಟೊಂದು ಘಟನೆಗಳು ಮನಸ್ಸಿನಲ್ಲಿ ಅವ್ಯವಸ್ಥೆಯನ್ನುಉಂಟುಮಾಡಿರುತ್ತವೆ. ಆಲೋಚನೆಯ ಗೊಂದಲ, ಅಸ್ಪಷ್ಟತೆ ಹಾಗೂ ಜಂಡವನ್ನೆಲ್ಲ ನಿದ್ದೆಯ ಹೊತ್ತಿನಲ್ಲಿಸರಿಪಡಿಸಿಕೊಳ್ಳುತ್ತದೆ. ಒಂದು ಸರಿಯಾದ ವ್ಯವಸ್ಥೆಗೊಳಪಟ್ಟಲ್ಲಿ ಮಾತ್ರ ಮನಸ್ಸು-ಮೆದುಳು ಕೆಲಸ ಮಾಡುವುದು ಸಾಧ್ಯ. ಯಾವುದೇ ರೀತಿಯ ತಿಕ್ಕಾಟಗಳಿದ್ದರೂ ಮೆದುಳಿನಲ್ಲಿ ಅವ್ಯವಸ್ಥೆ ಇರುತ್ತದೆ. ಪ್ರತಿಯೊಂದು ದಿನವೂ ಮನಸ್ಸು ಒಳಗಾಗುವ ಘಟನೆಯನ್ನು ಗಮನಿಸಿದರೆ ಇದೆಲ್ಲತಿಳಿಯುತ್ತದೆ. ಮನಸ್ಸು ಹಗಲು ಹೊತ್ತಿನಲ್ಲಿ ಅವ್ಯವಸ್ಥೆಗೊಳಗಾಗುವುದು, ರಾತ್ರಿ ಹೊತ್ತಿನಲ್ಲಿ ಅದನ್ನೆಲ್ಲ ಸರಿಪಡಿಸಿಕೊಳ್ಳುವುದೆಲ್ಲನಿರಂತರ ನಡೆಯುತ್ತಿರುತ್ತದೆ. ರಾತ್ರಿಹೊತ್ತು ಸಂಪೂರ್ಣ ವ್ಯವಸ್ಥೆಗೊಳಗಾಗುವ ಮನಸ್ಸು ಮತ್ತೊಂದು ಹಗಲನ್ನು ಕಳೆಯುವ ಹೊತ್ತಿಗೆ ಸಂಪೂರ್ಣ ಕಲಸಿ ಗೊಂದಲದ ಗೂಡಾಗಿಬಿಡುತ್ತದೆ ; ಇದು ಜೀವನದ ದೈನಂದಿನ ತಿಕ್ಕಾಟವಾಗಿ ಹೋಗಿರುತ್ತದೆ.
ಮೆದುಳು ಒಂದು ಭದ್ರತೆಯ ವಾತಾವರಣದಲ್ಲಿ ಮಾತ್ರ ಕಾರ್ಯ ನಿರ್ವಹಿಸಬಲ್ಲದು. ಗೊಂದಲ-ವಿರೋಧಾಭಾಸಗಳು ಇದ್ದಲ್ಲಿ ಮೆದುಳಿಗೆ ಕಾರ್ಯನಿರ್ವಹಿಸುವುದೇ ಸಾಧ್ಯವಾಗಿರುವುದಿಲ್ಲ. ಕೊನೆಗೆ ಯಾವುದೋ ಗೊಂದಲದ ಸಮೀಕರಣವಾದರೂ ಸರಿಯೇ, ಅದರಲ್ಲಿಯೇ ಭದ್ರತೆಯನ್ನು ಪಡೆಯುವ ಮೂಲಕ ಕಾರ್ಯನಿರ್ವಹಿಸಲು ಪ್ರಯತ್ನಿಸಿ  ಮತ್ತಷ್ಟು ಗೊಂದಲಕ್ಕೊಳಗಾಗುತ್ತಿರುತ್ತದೆ. ಮನಸ್ಸಿನಲ್ಲಿ ವ್ಯವಸ್ಥೆ ತಂದುಕೊಳ್ಳುವುದು ಎಂದರೆ ಅಲ್ಲಿನ ಜಡಕುಗಳನ್ನೆಲ್ಲ ಸರಿಪಡಿಸುವುದು. ಯಾವಾಗ ನೋಡುಗನೇ ನೋಡುವಿಕೆಯಾಗಿ ಲೀನವಾಗುತ್ತಾನೊ ಆಗ ಎಲ್ಲವೂ ಒಂದು ವ್ಯವಸ್ಥೆಗೆ ಹೊಂದಿಕೊಳ್ಳುತ್ತದೆ.
ಆ ಗಲ್ಲಿಯಲ್ಲಿದ್ದ ಒಂದು ಚಿಕ್ಕ ಮನೆಯ ಜಗುಲಿಯಲ್ಲಿ ಕುಳಿತಿದ್ದ ಬಾಲಕಿಯೊಬ್ಬಳು ಆಕಾಶ ಕಳಚಿಬಿದ್ದುಹೋಗುವ ರೀತಿಯಲ್ಲಿ ಅಳುತ್ತಿದ್ದಳು. ಅಂಥ ಅಳು ಕೇವಲ ಚಿಕ್ಕ ಮಕ್ಕಳಿಂದ ಮಾತ್ರ ಸಾಧ್ಯ. ಹೆಚ್ಚೆಂದರೆ ಆಕೆಗೆ ಐದಾರು ವರ್ಷ ಪ್ರಾಯ  ಇದ್ದೀತು. ತನ್ನ ವಯಸ್ಸಿಗಿಂತಲೂ ಕುಬ್ಜಳಾಗಿ ಕಾಣುತ್ತಿದ್ದಳು. ನೆಲದಲ್ಲಿ ಕುಳಿತಿದ್ದ ಆಕೆಯ ಕೆನ್ನೆಯಿಂದ ನೀರು ಧಾರಾಕಾರವಾಗಿ ಇಳಿಯುತ್ತಿತ್ತು. ಅವಳ ಪಕ್ಕದಲ್ಲಿ ಹೋಗಿ ಕುಳಿತ 'ಆತ' ಏನಾಯಿತು ಎಂದು ಉಪಚರಿಸಿದ, ಅಳುವಿನ ಭರದಲ್ಲಿ ಆಕೆಯ ಬಾಯಿಯಿಂದ ಮಾತೇ ಹೊರಡುತ್ತಿರಲಿಲ್ಲ. ಅವಳು ಯಾವುದೋ ಸಮಸ್ಯೆಯಲ್ಲಿ ಸಿಲುಕಿದ್ದಿರಬಹುದು. ಆಕೆಯ ಪ್ರೀತಿಯ  ಆಟದ ಗೊಂಬೆಯೊಂದು ಒಡೆದುಹೋಗಿರಬೇಕು.. ಅಥವಾ ಒರಟಾದ ಜಗತ್ತು ಆಕೆಯ ಬೇಡಿಕೆಯನ್ನು ನಿರಾಕರಿಸಿದ್ದಿರಬೇಕು. ಅಂಥದ್ದೇ ಏನೋ ಒಂದು ಸಮಸ್ಯೆ. ಅಷ್ಟರಲ್ಲೇ ತಾಯಿ  ಹೊರಕ್ಕೆ ಬಂದಳು, ಕುಳಿತಿದ್ದ ಈ ವ್ಯಕ್ತಿಯನ್ನು ನಿರ್ಲಕ್ಷಿಸಿ ಮಗುವನ್ನು ಒಳಕ್ಕೆ ಕರೆದುಕೊಂಡು ಹೋಗುತ್ತಾಳೆ. ಎಷ್ಟಾದರೂ ಅಪರಿಚಿತರಲ್ಲವೆ ?
ಕೆಲ ದಿನಗಳ ನಂತರ ಅದೇ ಮಾರ್ಗದಲ್ಲಿ ಹೋಗುವಾಗ ಅದೇ ಹುಡುಗಿ ಮನೆಯಿಂದ ಹೊರಕ್ಕೆ ಬಂದಿದ್ದಳು. ಅಂದು ಮಾತ್ರ ಆಕೆ ಖುಷಿಯ ಮೂಡಿನಲ್ಲಿ ಇದ್ದಳು. ಗಲ್ಲಿಯಲ್ಲಿ ಆತನೊಂದಿಗೆ ಕೆಲಹೊತ್ತು ಹೆಜ್ಜೆಯನ್ನು ಹಾಕಿದಳು. ಈ ಆಗಂತುಕನೊಂದಿಗೆ ಹೋದರೆ ಅಪಾಯ ಇಲ್ಲ ಎಂದು ತಾಯಿಗೆ ಅನಿಸಿ ಮಗುವಿಗೆ ಸೂಚಿಸಿದ್ದಿರಬೇಕು. ಮುಂದಿನ ದಿನಗಳಲ್ಲಿ ಅದೇ ಗಲ್ಲಿಯಲ್ಲಿ ನಡೆದು ಹೋಗುತ್ತಿದ್ದಾಗಲೆಲ್ಲ ಹುಡುಗಿ, ಆಕೆಯ ಸಹೋದರಿ, ಸಹೋದರರೆಲ್ಲ ಬಂದು ಅಭಿನಂದಿಸಿ ಹೋಗುವುದು  ರೂಡಿಯಾಯಿತು. ಇವರೆಲ್ಲ ತಮ್ಮಲ್ಲಿ ತುಂಬಿಕೊಳ್ಳುತ್ತಿರುವ ನೋವು, ವಿಷಾದಗಳಿಂದ ಮುಕ್ತರಾಗುವುದಕ್ಕಿದೆಯೇ ? ಅಥವಾ ಯಾವುದೋ ಪಲಾಯನವಾದದಲ್ಲಿ ಅದನ್ನೆಲ್ಲ ಮುಚ್ಚಿಕೊಂಡು ಬೆಳೆಯುತ್ತಾರೊ ? ಸಾಮಾನ್ಯವಾಗಿ ಬಾಲ್ಯದ ನೋವುಗಳನ್ನು ಹಾಗೆಯೇ ಉಳಿಸಿಕೊಳ್ಳುವುದು ಮನುಷ್ಯನ ಸ್ವಭಾವವೇ  ಆಗುತ್ತಿದೆ. ನಂತರ ಎಲ್ಲ ಕ್ರಿಯೆಗಳೂ ಇದರೊಂದಿಗೆ ಕಲಸಿ ತಿರುಚಿಕೊಳ್ಳುತ್ತಿರುತ್ತವೆ. ಮನುಷ್ಯನ ಮನಸ್ಸು ನೋವು ತಿನ್ನದಂತೆ ಇರಲು ಸಾಧ್ಯವೇ- ನೋವು ತಿನ್ನದೇ ಇರುವುದೆಂದರೆ ಮುಗ್ಧವಾಗಿರುವಂಥದ್ದು. ನೀವು ನೋವು ತಿನ್ನದ ರೀತಿಯಲ್ಲಿ ಬದುಕುವುದು ಸಾಧ್ಯವಾದರೆ ಇನ್ನೊಬ್ಬರನ್ನು ಚುಚ್ಚುವುದು, ತಿವಿಯುವುದನ್ನು ಮಾಡುತ್ತಿರುವುದಿಲ್ಲ. ಇದು ಸಾಧ್ಯವೇ ? ನಾವು ಬದುಕುವ ಸಂಸ್ಕೃತಿಯೇ ನಮ್ಮ ಮನಸ್ಸು ಹಾಗೂ ಹೃದಯವನ್ನುಆಳವಾಗಿ ಚುಚ್ಚುತ್ತಿರುತ್ತದೆ. ಗದ್ದಲ, ಮಾಲಿನ್ಯ, ಆಕ್ರಮಣಶೀಲತೆ, ಸ್ಪರ್ಧೆ, ಹಿಂಸೆ ಅಲ್ಲದೆ ನಮಗೆ ನೀಡಲಾಗುವ ಶಿಕ್ಷಣ ಕೂಡ ನಮ್ಮ ದುರಂತದ ಜೋಳಿಗೆಯೊಳಗೆ ತುಂಬಿರುತ್ತದೆ. ಹೇಗಿದ್ದರೂ ನಾವು ಕ್ರೌರ್ಯ ಹಾಗೂ ಪ್ರತಿರೋಧದ ಜಗತ್ತಿನಲ್ಲಿಯೇ ಬದುಕುವುದು ಅನಿವಾರ್ಯ.  ನಾವೇ ಜಗತ್ತು, ಜಗತ್ತು ನಮ್ಮೊಳಗೇ ಇದೆ. ಓರ್ವ ವ್ಯಕ್ತಿ ನೋವು ಅನುಭವಿಸುವುದು ಎಂದರೇನು ? ವ್ಯಕ್ತಿತ್ವ ಎಂಬ ಚೌಕಟ್ಟಿಗೆ ಧಕ್ಕೆಯಾಗುವುದು ಎಂದರೇನು ?  ತಾನೇ ತನ್ನ ಬಗ್ಗೆ ಕಲ್ಪಿಸಿಕೊಂಡ ವ್ಯಕ್ತತ್ವಕ್ಕೆ ಕುಂದುಂಟಾಗುವ ಪ್ರಕ್ರಿಯೆ ಇದಲ್ಲವೆ ?  ಅಹಂಗೆ ಏಟು ಬೀಳುವುದು ಎಂದರೆ ಇದಲ್ಲವೆ ? ಆಶ್ಚರ್ಯದ ಸಂಗತಿ ಎಂದರೆ ಜಗತ್ತಿನ ಎಲ್ಲೆಡೆಯೂ ಈ ವ್ಯಕ್ತಿತ್ವದ ಕಲ್ಪನೆ ಒಂದೇ ಆಗಿರುತ್ತದೆ- ಬದಲಾವಣೆ ಇದ್ದರೂ ಅಲ್ಪ ಸ್ವಲ್ಪ ಮಾತ್ರ.
ಸಾವಿರ ಮೈಲಿಗಳಾಚೆ ಬದುಕುವ ವ್ಯಕ್ತಿತ್ವಗಳ ಒಳಗಿರುವ ತಿರುಗಳೆಲ್ಲ ಇದೇ ರೀತಿಯಾಗಿರುತ್ತದೆ. ನೀವು ಮಹಿಳೆಯಾಗಿರಬಹುದು ಅಥವಾ ಪುರುಷನಾಗಿದ್ದಿರಬಹುದು. ಇತರರ ನೋವೇ ನಿಮ್ಮ ನೋವು. ನಿಮಗೆ ಆಗುವ ನೋವೇ ಇತರರಿಗೂ ಆಗುತ್ತಿರುತ್ತದೆ. ನೀನೇ ಅವರಲ್ಲಿ ಇದ್ದೀಯೇ.
ನೋವಿಗೊಳಗಾಗದೇ ಇರುವುದು ಸಾಧ್ಯವೇ ? ಎಲ್ಲಿ ಗಾಯ ಇರುತ್ತದೋ  ಅಲ್ಲಿ ಪ್ರೇಮ ಇರುವುದಿಲ್ಲ. ಎಲ್ಲಿ ಪ್ರೇಮ ಎಂಬುದು ಸುಖದ ಸಾಧನವಾಗಿರುತ್ತದೋ  ಅಂಥ ಪ್ರೇಮದ ಆಳದಲ್ಲಿ ನೋವು ಇರುತ್ತದೆ. ಯಾವುದೇ ಸಂದರ್ಭದಲ್ಲೂ ಮನಸ್ಸಿಗೆ ಘಾಸಿಮಾಡಿಕೊಳ್ಳದ ರೀತಿಯಲ್ಲಿ ಜೀವಿಸುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತೀರೊ ಆಗಲೇ ಹಳೆಯ ನೋವನ್ನೆಲ್ಲ ಮರೆಯುವುದು ಸಾಧ್ಯ. ನಿಮ್ಮಲ್ಲಿ ಮಡುಗಟ್ಟಿದ ನೋವಿಗೆ ವಿದಾಯ ಹೇಳಬೇಕಾದರೆ ನೋವಿನೊಂದಿಗೆ ಬದುಕುವುದನ್ನು ಕಲಿಯಬೇಕು. ಸಂಪೂರ್ಣ ವರ್ತಮಾನದಲ್ಲಿದ್ದಾಗಲೇ ಭೂತದ ಹೊರೆ ಕಳಚುವುದು ಸಾಧ್ಯ.
'ಅವನ' ಜೀವನದಲ್ಲಿ ಅದೆಷ್ಟೋ ಘಟನೆಗಳು ಸಂಭವಿಸಿದರೂ ಮನಸ್ಸಿನಲ್ಲಿ ನೋವು ಉಳಿದಿರಲಿಲ್ಲ. ಸಾಕಷ್ಟು ಬಾರಿ ಅವಮಾನ, ಅಭದ್ರತೆ, ಬೆದರಿಕೆಗಳು ಅವನಿಗೆ ಎದುರಾಗಿವೆ. ಇವುಗಳಿಗೆಲ್ಲ ಸ್ಪಂದಿಸದಷ್ಟು ಆತ ಒರಟಾಗಿದ್ದ ಅಥವಾ ಆತನಿಗೆ ಕೊಂಕುಗಳು ತಿಳಿಯುತ್ತಲೇ ಇರಲಿಲ್ಲ ಎಂದೇನೂ ಅಲ್ಲ. ಆತನಿಗೆ ತನ್ನದೇ ಆದ ವ್ಯಕ್ತಿತ್ವದ ಚೌಕಟ್ಟು ಇರಲೇ ಇಲ್ಲ. ತನ್ನ ವ್ಯಕ್ತತ್ವದ ಬಗ್ಗೆಯಾವೊಂದು ಅಂತಿಮ ಗೆರೆಯನ್ನು, ಸೀಮಾ ರೇಕೆಯನ್ನು ಆತ ಹಾಕಿಕೊಂಡಿರಲಿಲ್ಲ. 'ಅವನಿ'ಗೆ ಯಾವುದೇ ತಾತ್ವಿಕ ನಿಲುವು ಇದ್ದಿರಲಿಲ್ಲ. ವ್ಯಕ್ತಿಯೊಬ್ಬನಲ್ಲಿ ಯಾವುದೇ  ಬಗೆಯ ವ್ಯಕ್ತಿತ್ವದ ಕಲ್ಪನೆ ಎಂಬುದು ತನ್ನ ಸುತ್ತಲೂ ಒಂದು ಬಗೆಯ ಪ್ರತಿರೋಧ -ಇಗೋ ಇದ್ದಂತೆ- ಅದು ಇಲ್ಲವಾದಾಗ ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸುವ ಗುಣ ಉಂಟಾಗುತ್ತದೆ. ಆಗ ನೋವು ಎಂಬುದೇ ಆಗುವುದಿಲ್ಲ.
ಹಾಗೆಂದು ನೀವು ವ್ಯಕ್ತಿತ್ವ ಎಂಬ ಸೀಮೆುಂದ ಮುಕ್ತವಾಗಿ ಇರಬೇಕು ಎಂಬ ಮತ್ತೊಂದು ಚೌಕಟ್ಟು ವಿಧಿಸಿಕೊಳ್ಳಲಾಗದು. ಕಲ್ಪಿಸಿಕೊಂಡ ಮುಕ್ತತೆಯೇ ನಿಮಗೆ ಬೇರೊಂದು ವ್ಯಕ್ತಿತ್ವವನ್ನು ಕೊಟ್ಟಿರುತ್ತದೆ !  ವಿಶ್ವದ  ಸಮಗ್ರ ಚಲನೆಯನ್ನುಅರ್ಥವಿಸಿಕೊಳ್ಳಿ. ಮೇಲ್ನೋಟದಿಂದಲ್ಲ, ಅದಕ್ಕೆಲ್ಲ ಒಂದು ಒಳನೋಟವನ್ನು ಬೆಳೆಸಿಕೊಂಡಿರಬೇಕು. ಯಾವುದೇ ಪೂರ್ವಾಗ್ರಹ ಇಲ್ಲದೆ ಇಲ್ಲಿನ ಸಮಗ್ರ ವ್ಯವಸ್ಥೆಯನ್ನು ಅರ್ಥವಿಸಿಕೊಳ್ಳಿ. ಸತ್ಯ ದರ್ಶನ ಮಾಡುವುದು, ಕಂಡುಕೊಳ್ಳುವುದರಿಂದ ನಮ್ಮ ಕಲ್ಪನೆಯ ವ್ಯಕ್ತಿತ್ವ ನಿರ್ಮಾಣಕ್ಕೆ  ತಡೆಯಾಗುತ್ತದೆ.
ಕೊಳವು ತುಂಬಿ ಹರಿಯುತ್ತಿತ್ತು. ಅದರಲ್ಲಿನ ಪ್ರತಿಬಿಂಬಗಳು ಸಾವಿರ ಸಂಖ್ಯೆಯಲ್ಲಿ ಕಾಣುತ್ತಿದ್ದವು. ಕತ್ತಲಾಗುತ್ತ ಬಂದಂತೆ ಸ್ವರ್ಗದ ಬಾಗಿಲೇ ತೆರೆದಂತಾಗಿತ್ತು.


ಸೆಪ್ಟೆಂಬರ್ 22, 1973
ಪಕ್ಕದ ಮನೆಯಲ್ಲಿ ಮಹಿಳೆಯೊಬ್ಬರು ಹಾಡುತ್ತಿದ್ದರು ; ಆಕೆಯ ಇಂಪಾದ ಹಾಡಿಗೆ ಅಲ್ಲಿದ್ದ ಕೆಲವೇ ಕೇಳುಗರು ಮಂತ್ರಮುಗ್ಧರಾಗಿದ್ದರು. ಹೊರಗೆ ಪಾಮ್ ಮರಗಳ ತೋಪು, ಹೂ ಬಿಟ್ಟಸಸ್ಯಗಳ ಸಮ್ಮುಖದಲ್ಲಿ ಸೂರ್ಯಾಸ್ತದ ಸನ್ನಿವೇಶ. ಸಂಜೆ ಸೂರ್ಯನ ಬಂಗಾರದ ಬಣ್ಣದೊಂದಿಗೆ ತೋಪಿನ ಹಚ್ಚ ಹಸುರಿನ ರಂಗಿನಾಟ. ಆ ಹೊತ್ತಿಗಾಗಲೇ ಆಕೆ ಕೆಲವು ಭಜನ್‌ಗಳನ್ನು ಹಾಡುವುದಕ್ಕೆ ತೊಡಗಿದ್ದರು. ಅದಕ್ಕೆ ತಕ್ಕಂತೆ ಸ್ವರ ಮತ್ತಷ್ಟು ಶ್ರೀಮಂತ ಹಾಗೂ ಹೃದಯಸ್ಪರ್ಶಿಯಾಗತೊಡಗಿತ್ತು.
ಕೇಳುವುದೂ ಒಂದು ಕಲೆ, ಅದು ಪಶ್ಚಿಮದ ಶಾಸ್ತ್ರೀಯ ಸಂಗೀತವೇ ಇದ್ದಿರಬಹುದು ಅಥವಾ ನಮ್ಮೆದುರಿನ ಮಹಿಳೆ ಪ್ರಸ್ತುತಪಡಿಸಿದ ಭಜನ್ ಕೂಡ ಇರಬಹುದು. ಇದರಿಂದಾಗಿ ನಿಮ್ಮಲ್ಲಿ ಒಂದು ತರದ ಸಂವಹನ ಉಂಟಾಗಿರುತ್ತದೆ. ಅದು ಶೃಂಗಾರ ಭಾವ ಇದ್ದಿರಬಹುದು, ಅದರಲ್ಲೂ ಭೂತ ಕಾಲದ ಕೆಲ ನೆನಪುಗಳು ನಿಮ್ಮನ್ನು ಆವರಿಸುವುದು ಸಾಧ್ಯ. ಆಲೋಚನೆಗಳು ನಮ್ಮ ಭಾವದ ಲಯಗಳನ್ನುಬದಲಿಸುತ್ತಿರುತ್ತವೆ, ಕೆಲ ಬಾರಿ ಅದರಲ್ಲಿ ಭವಿಷ್ಯದ ಹೊಳಹುಗಳು ಬರುತ್ತಿರುತ್ತವೆ. ಯಾವೊಂದೂ ಆಲೋಚನಾ ಲಹರಿಯೇ ಬಾರದ ರೀತಿಯಲ್ಲಿ ನೀವು ಕೇಳುವುದೂ ಶಕ್ಯವಿದೆ. ಯಾವತ್ತೂ ಆಳವಾದ ಮೌನದೊಂದಿಗೆ ನಿಶ್ಚಲಭಾವದಿಂದ ಕೇಳುವಂತಾಗಬೇಕು. ತನ್ನ ಆಲೋಚನೆಯನ್ನೇ ಆಲಿಸುವುದು ಅಥವಾ ಮಾವಿನ ಮರದಲ್ಲಿ ಹಾಡುವ ಕೋಗಿಲೆಯ ಹಾಡನ್ನು ಕೇಳುವುದು ಅಥವಾ ಯಾರಾದರೂ ಏನನ್ನಾದರೂ ಹೇಳುತ್ತಿದ್ದರೆ ಅದನ್ನು ಕೇಳಿಸಿಕೊಳ್ಳುವುದು. ಅದರಲ್ಲೂ ವಿಶೇಷವಾಗಿ, ಪ್ರತಿಯಾಗಿ ಯಾವೊಂದು ಆಲೋಚನೆಯೂ ಇಲ್ಲದ ರೀತಿಯಲ್ಲಿ ಆಲಿಸುವಲ್ಲಿ ಅದ್ಭುತವಾದ ಪರಿಣಾಮ ಇರುತ್ತದೆ. ಆ ಕೇಳುವ ಪ್ರಕ್ರಿಯೆಯಲ್ಲಿ ನಮ್ಮೊಳಗಿನ ಆಲೋಚನೆಗಳು ಚಡಪಡಿಸುತ್ತಿರುವುದಿಲ್ಲ. ಆ ಬಗೆಯ ಕೇಳುವಿಕೆಗೆ ಒಂದು ಕೇಂದ್ರಎಂಬುದು  ಇರುವುದಿಲ್ಲ. ಸಂಪೂರ್ಣ ಮಗ್ನರಾಗಿ ಕೇಳಿಸಿಕೊಳ್ಳುವ ಪ್ರಕ್ರಿಯೆ ಅದು. ಅದೇ ಕೇಳುವ ಕಲೆ.
ಪರ್ವತಗಳಲ್ಲಿಒಂದು ಬಗೆಯ ಆಳವಾದ ಮೌನವಿರುತ್ತದೆ, ಅದೇ  ಮೌನ ಕಣಿವೆಗಳಲ್ಲಿ ಕಾಣುವುದಕ್ಕೆ ಸಿಗುವುದಿಲ್ಲ. ಪ್ರತಿಯೊಂದರಲ್ಲೂ ಅದರದ್ದೇ ಆದ ಮೌನ ಹಾಗೂ ಅನನ್ಯತೆ ಇದ್ದಿರುತ್ತದೆ. ಮೋಡಗಳು ಹಾಗೂ ಮರಗಳಲ್ಲಿ ಮೌನವಿದ್ದರೂ ಭಿನ್ನವಾಗಿದ್ದು, ಅವು ಪರಸ್ಪರ  ಹೋಲಿಕೆಗೆ ನಿಲುಕುತ್ತಿರುವುದಿಲ್ಲ. ಎರಡು ಆಲೋಚನೆಗಳ ನಡುವಿನ ಮೌನದಲ್ಲಿ 'ಕಾಲ' ಇರುವುದಿಲ್ಲ. ಭಯ ಹಾಗೂ ಸುಖದಲ್ಲಿರುವ ಮೌನಗಳಿಗೆ  ತುಸು ಹೋಲಿಕೆ ಇದೆ. ಆಲೋಚನೆ ಸೃಷ್ಟಿಸಬಹುದಾದ ಕೃತಕ ಮೌನ ಎಂದರೆ ಸಾವು. ಎರಡು ಗದ್ದಲಗಳ ನಡುವಿನ ಮೌನ- ಮೌನವಲ್ಲ, ಅದೊಂದು ಗದ್ದಲ ಇಲ್ಲದಿರುವಿಕೆ ಮಾತ್ರ. ಹೇಗೆ ಕದನ ವಿರಾಮವನ್ನು ಶಾಂತಿಯುತ ಕಾಲ ಎಂದು ಹೇಳುವುದಕ್ಕೆ ಬರುವುದಿಲ್ಲವೊ ಹಾಗೆ. ಕೆಥಡ್ರಲ್ ಒಂದರ ಕತ್ತಲಿನ ಮೌನ ಅಥವಾ ಪ್ರಾಚೀನ ದೇವಾಲಯವೊಂದರ ನೀರವತೆಗಳು ಮಾನವ ನಿರ್ಮಿತ ಮೌನ ಸೌಂದರ್ಯಗಳು. ಅಲ್ಲಿ ಭೂತ ಹಾಗೂ ಭವಿಷ್ಯತ್ತನ್ನು ಪ್ರಸ್ತುತಪಡಿಸುವ ಮೌನ ಇದ್ದಿರುತ್ತದೆ. ಮ್ಯೂಜಿಯಂಗಳು ಹಾಗೂ ಗೋರಿಗಳ ವಿಚಾರವೂ ಹಾಗೆಯೇ ; ಆದರೆ ಇಲ್ಲಿ ತಿಳಿಯಬೇಕಾದ ವಿಷಯ ಎಂದರೆ ಇದಾವುದೂ ನಿಜ ಮೌನವಲ್ಲ.
ಆ ವ್ಯಕ್ತಿಸುಂದರವಾದ ನದಿಯೊಂದರ ಪಕ್ಕದಲ್ಲಿ ನಿಶ್ಚಲನಾಗಿ ಕುಳಿತೇ ಇದ್ದ. ಒಂದು ಘಂಟೆಗೂ ಹೆಚ್ಚು ಸಮಯ ಕಳೆದಿರಬಹುದು. ಪ್ರತಿದಿನ ಬೆಳಗಿನಲ್ಲಿ ಅವರು ಅಲ್ಲಿಗೆ ಬರುತ್ತಾರೆ. ಸ್ನಾನ ಮಾಡಿ ಕುಳಿತು ತನ್ಮಯರಾಗಿ ಮಂತ್ರ ಹೇಳುವುದು ಅವರ ರೂಡಿ-ಅಂಥದ್ದೇ ಒಂದು ದಿನ ಈ ಹೊತ್ತು ತನ್ನದೇ ಆಲೋಚನಾ ಜಾಲದಲ್ಲಿ ಮುಳುಗಿಹೋಗಿದ್ದಾರು. ಆತ ಎಷ್ಟೊಂದು ತನ್ಮಯನಾಗಿದ್ದನೆಂದರೆ ಪಕ್ಕದಲ್ಲಿಯೇ  ಆಕರ್ಷಣೀಯವಾಗಿ ಕಾಣುತ್ತಿದ್ದ ಸೂರ್ಯಾಸ್ತದ ಸೌಂದರ್ಯವೂ ಆವರನ್ನುಎಚ್ಚರಿಸುತ್ತಿರಲ್ಲ.
ಹಾಗೇ ಒಂದು ದಿನ ಬಂದವರೆ ಧ್ಯಾನದ ಬಗ್ಗೆ ಚರ್ಚಿಸಲು ಆರಂಭಿಸಿದರು. ಆ ವ್ಯಕ್ತಿ ನಮ್ಮ ಸುತ್ತಲೂ ಇರುವ ಯಾವುದೇ  ತಾತ್ವಿಕ ಪರಂಪರೆಯಲ್ಲಿ ತನ್ನನ್ನು ಗುರುತಿಸಿಕೊಂಡವರಲ್ಲ.  ಅದೆಲ್ಲ ಇಂದಿನ ಕಾಲಕ್ಕೆ ಸರಿಹೊಂದುವುದಿಲ್ಲ, ಪ್ರಯೋಜನಕ್ಕೂ ಬರುವುದಿಲ್ಲ ಎಂಬುದು ಅವರ ನಿಲುವು. ಅವರು ಮದುವೆಯಾಗಿರಲಿಲ್ಲ. ಜಗತ್ತಿನ ವ್ಯಾಮೋಹವನ್ನೆಲ್ಲ  ಬಿಟ್ಟು ಏಕಾಂಗಿಯಾಗಿ ಬದುಕು ನಡೆಸುತ್ತಿದ್ದರು. ಏಕಾಂಗಿಯಾಗಿ ಬದುಕುವುದಷ್ಟೇ ಅಲ್ಲ ಅದಕ್ಕೆ ಪೂರಕವಾಗಿಯೇ ಆಲೋಚನಾ ರೀತಿಯನ್ನೂ ರೂಪಿಸಿಕೊಂಡಿದ್ದರು. ತಮ್ಮ ಈ ಸ್ಥಿತಿಯ ಬಗ್ಗೆ ಅವರಲ್ಲಿ ಯಾವೊಂದು ಕಹಿ ಅಥವಾ ಇನ್ನೊಂದು ಭಾವನೆ ಇದ್ದಿರಲಿಲ್ಲ. ಭೂತದ ಬದುಕನ್ನು ಬಹಳ ಹಿಂದೆಯೇ ಮರೆತುಬಿಟ್ಟಿದ್ದಾರೆ. ಧ್ಯಾನ ಹಾಗೂ ವಾಸ್ತವಗಳೆ ಅವರ ಜೀವನದ ಮಿಡಿತಗಳು.
ತಮ್ಮ ಈ ಸ್ಥಿತಿಯ ಬಗ್ಗೆ ಸೂಕ್ತ ಶಬ್ಧಕ್ಕಾಗಿ ತಡವರಿಸುತ್ತ ವಿವರಿಸುತ್ತಿದ್ದಾಗಲೇ ಅಂದಿನ ಸೂರ್ಯಾಸ್ತವೂ ಮುಗಿದಿತ್ತು. ನಮ್ಮ ಸುತ್ತಲೂ ಆಳವಾದ ಮೌನ ಆವರಿಸಿದೆ. ಅಷ್ಟರಲ್ಲಿಯೇ ಅವರು ಮಾತನ್ನು ನಿಲ್ಲಿಸಿದ್ದರು. ಕೆಲ ಹೊತ್ತಿನ ನಂತರ ನಕ್ಷತ್ರಗಳು ಭೂಮಿಗೆ ನಿಕಟವಾಗುತ್ತಿದ್ದಂತೆ 'ಇದೇ ಮೌನವನ್ನು ನಾನು ಅರಸುತ್ತಿದ್ದೆ. ಪುಸ್ತಕಗಳಿರಬಹುದು, ಗುರುವಿರಬಹುದು, ನನ್ನಲ್ಲಿಯ ಹುಡುಕಾಟದಿಂದಲೇ ಏನೆಲ್ಲ ಕಂಡುಕೊಂಡರೂ ಈ ಮೌನ ಮಾತ್ರ ಸಿಕ್ಕಿಯೇ ಇದ್ದಿರಲಿಲ್ಲ. ಇಂದು ಹುಡುಕದೆಯೇ ಇದು ದೊರೆುತು, ಕರೆಯದೆಯೇ ಇದು ಬಂದಿತು.
ನಾನು ನನ್ನ ಜೀವನವನ್ನೆಲ್ಲ ಅಪ್ರಸ್ತುತ ಸಂಗತಿಗಳಲ್ಲಿ,  ವ್ಯರ್ಥ ಹರಟೆಯಲ್ಲಿ ಕಳೆದುಬಿಟ್ಟೆನೆ ? ಇಲ್ಲಿಯ ತನಕ ನಾನು ಏನೆಲ್ಲ ಮಾಡಿದೆ ಎಂಬ ಬಗ್ಗೆ ನಿಮಗೆ  ಊಹಿಸುವುದಕ್ಕೂ  ಸಾಧ್ಯವಾಗಲಿಕ್ಕಿಲ್ಲ. ಉಪವಾಸ, ಆತ್ಮ ನಿರಾಕರಣೆ, ಕಂಡ ಕಂಡ ವೃತಗಳನ್ನೂಮಾಡಿದೆ.  ಅದೆಲ್ಲ ವ್ಯರ್ಥ ಎಂದು ನನಗೆ ಬಹಳ ಹಿಂದಯೇ ಅನಿಸಿದ್ದರೂ ಈ ಮೌನ-ಶಾಂತಿಯ  ಸಾಕ್ಷಾತ್ಕಾರ ಆಗಿರಲಿಲ್ಲ. ನನ್ನ ಇಂದಿನ ದಿವ್ಯ ಸ್ಥಿತಿಯನ್ನೇ ಉಳಿಸಿ ಮುಂದುವರಿದುಕೊಂಡು ಹೋಗಲು ಏನು ಮಾಡಲಿ ? ಇದನ್ನು ನನ್ನ ಹೃದಯದಾಳದಲ್ಲಿ ಹಿಡಿದಿಟ್ಟುಕೊಳ್ಳಬೇಕಾಗಿದೆ.'
ನೀನು ಏನನ್ನೂ ಮಾಡಬೇಡ, ಇದು ತನ್ನಿಂದ ತಾನೆ ಬಂದದ್ದಲ್ಲವೇ ..ಎಂದು ನೀವು ಹೇಳುತ್ತೀರಿ ಎಂಬುದೂ ನನಗೆ ಗೊತ್ತು. ಇಲ್ಲಿ ಕುಳಿತು ಇಲ್ಲಿನ ನದಿ, ಮರ, ನಕ್ಷತ್ರ, ಆಕಾಶಗಳ ಮೂಲಕ  ನನ್ನಲ್ಲಿಯೇ ಪವಿತ್ರ ಮೌನವನ್ನುಕಾಣುತ್ತಿದ್ದೇನೆ. ಇದೇ ಸ್ಮತಿಯಲ್ಲಿದ್ದುಕೊಂಡು ಈ ದೇಶವನ್ನು ಸಂಚರಿಸಬಹುದೇ. ನಾನು ಇದನ್ನೆಲ್ಲ ಅನುಭವಿಸುತ್ತ ಗಮನಿಸುತ್ತಲೇ ಇದ್ದರೂ 'ನಾನು' ನಿಜಕ್ಕೂ ಇಲ್ಲಿ ಇಲ್ಲ. ಅದೊಂದು ದಿನ ನೀವು ಹೇಳಿದಿರಲ್ಲವೇ, ನೋಡುಗ ಎಂಬುದು ನೋಡಿದ ಸಂಗತಿಗಳೆಲ್ಲದರ ಒಂದು ಮೂಟೆ ಎಂಬುದಾಗಿ. ಅದೆಲ್ಲದರ ಅರ್ಥ ಇದೀಗ ನನಗೆ ಹೊಳೆಯತ್ತಿದೆ. ನಾನೇನು ಹುಡುಕುತ್ತಿದ್ದೆನೋ ಅದೆಲ್ಲ ಹುಡುಕುವಿಕೆಯಿಂದ ಸಿಗುವಂಥದ್ದೇ ಆಗಿರಲಿಲ್ಲ.  ನಾನಿಲ್ಲಿಂದ ಹೊರಡುವ ಸಮಯ ಬಂದಿದೆ.'
ಕಾರ್ಗತ್ತಲಲ್ಲೂ ನದಿಯ ಮೇಲೆ ನಕ್ಷತ್ರಗಳು  ಆ ಹೊತ್ತಿಗೆ ಸ್ಪಷ್ಟವಾಗಿ ಗೋಚರಿಸತೊಡಗಿದ್ದವು. ದಿನದ ಗದ್ದಲಗಳೆಲ್ಲ ಮುಗಿಯುತ್ತ ರಾತ್ರಿಯ ಮೃದು ಶಬ್ಧಗಳು ಅಲ್ಲಿ ಸುತ್ತಲೂ ಸನ್ನಿಹಿತವಾಗಿದ್ದವು. 'ನೀನು' ಜಗತ್ತಿನಿಂದ ಬಹುದೂರದಲ್ಲಿ ನಿಂತು ಕಾರ್ಗತ್ತಲಿನಲ್ಲಿ ಮಿಂದ ಭೂಲೋಕ ಮತ್ತು ನದಿಯನ್ನು ಗಮನಿಸಿದ್ದೆ. ಭೂಮಿಯನ್ನೊಳಗೊಂಡ ಚರಾಚರವೆಲ್ಲ ಪ್ರೇಮ ರೂಪಿ ಸೌದರ್ಯದಲ್ಲಿ ಸಾಕಾರಗೊಂಡಿತ್ತು.



ಸೆಪ್ಟೆಂಬರ್ 23, 1973
ಹೊಳೆ ದಂಡೆಯ ತಗ್ಗು ಪ್ರದೇಶದಲ್ಲಿ ಆತ ನಿರ್ಲಿಪ್ತನಾಗಿ, ಏಕಾಂಗಿಯಾಗಿ ನಿಂತುಕೊಂಡಿದ್ದ; ಅದು ಸಾಮಾನ್ಯ ಹೊಳೆಯಾಗಿದ್ದರಿಂದ ಆಚೆ ದಡದಲ್ಲಿನ ಜನರ ಚಲನವಲನಗಳನ್ನು ಗಮನಿಸಬಹುದಿತ್ತು. ಜೋರಾಗಿ ಮಾತನಾಡಿದರೆ ಆಚಿನವರು ಹೇಳುವುದೂ  ಕೇಳುತ್ತಿತ್ತು. ಮಳೆಗಾಲ ಬಂತೆಂದರೆ ಇಲ್ಲಿನ ಹೊಳೆ ತುಂಬಿ ಸಮುದ್ರದತ್ತ ಧಾವಿಸುತ್ತಿರುತ್ತದೆ. ಕೆಲದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದುದರಿಂದ ಮರ ಮಟ್ಟುಗಳನ್ನೆಲ್ಲ ನದಿ ಕೊಚ್ಚಿ ತರುತ್ತಿತ್ತು. ನೀರು ರಬಸದಿಂದ ಸಮುದ್ರಕ್ಕೆ ನುಗ್ಗುತ್ತಿದೆ. ಬಿರುಸಾದ ಮಳೆ ಊರು ಕೇರಿಯ ಕೊಳೆಯನ್ನೆಲ್ಲ ತೊಳೆದು ಶುದ್ಧವಾಗಿಸಿತ್ತು.ಹೊಸ ನೀರು ಹರಿದು ನದಿ ಶುದ್ಧವಾಗಿರುವುದರಿಂದ ಈಜಿಯೂ ಆಚೆ ದಡ ಸೇರಬಹುದಿತ್ತು. ಇನ್ನೊಂದೆಡೆ ನದಿ ಹರಿವಿನಿಂದಾಗಿ ಕ್ರಮೇಣ  ನಡುಗಡ್ಡೆಯೊಂದು ನಿರ್ಮಾಣವಾಗಿತ್ತು, ಅಲ್ಲಿಯೇ ಗಿಡಗಂಟಿ ಬೆಳೆದು ಹಸಿರು ಹುಲ್ಲುಗಾವಲಾಗಿತ್ತು.ನಡುಗಡ್ಡೆಯಲ್ಲಿ ಸಣ್ಣ ಸಣ್ಣ ಮರಗಳು, ಅಲ್ಲಿ ಇಲ್ಲಿ ತಾಳೆಯ ಮರಗಳೂ ಬೆಳೆದುಕೊಂಡಿವೆ. ಒಂದು ರೀತಿಯಲ್ಲಿ ಗೋಮಾಳದಂತೆಯೂ  ಇರುವುದರಿಂದ ಮಳೆ ಕಡಿಮೆಯಾಗುತ್ತಲೇ ದನಕರುಗಳು ಹೊಳೆಯನ್ನು ದಾಟಿಹೋಗಿ ನಡುಗಡ್ಡೆಯಲ್ಲಿ ಮೇಯ್ದುಕೊಂಡು ಬರುವುದೂ ಇದೆ. ನದಿಯಲ್ಲಿಯಾವತ್ತೂ ಭಯದ ವಾತಾವರಣ ಇರಲಿಲ್ಲ.*
ಆ ದಿನವೂ ಎಂದಿನಂತೆ ನದಿಯ ಪರಿಸರ ಆಹ್ಲಾದಕರವಾಗಿತ್ತು. ಅಕ್ಕಪಕ್ಕದಲ್ಲಿ ಯಾರೂ ಇಲ್ಲದೆ ಆತನೊಬ್ಬನೇ ನಿರಂಜನನಾಗಿ ನಿಂತಿದ್ದ. ಆ ಹೊತ್ತಿಗೆ ಅವನಿಗೆ ಹೆಚ್ಚೆಂದರೆ 14 ವರ್ಷದ ಪ್ರಾಯ. ಇತ್ತೀಚೆಗಷ್ಟೆ 'ಅವರು' ಈ ಹುಡುಗ ಮತ್ತು ಈತನ ಸಹೋದರನನ್ನು ಗುರುತಿಸಿ ಗಹನವಾದ ಉದ್ದೇಶವಿಟ್ಟುಕೊಂಡು ಕರೆತಂದಿದ್ದರು. ಒಮ್ಮೆಲೇ ಪ್ರಾಮುಖ್ಯತೆ ಕೊಟ್ಟಿದ್ದರಿಂದ ಹುಡುಗನ ಸುತ್ತಲೂ ಗೌಜಿ, ಗದ್ದಲಗಳು, ಸುಳ್ಳು ಪ್ರಭಾವಲಯ ಉಂಟಾಗಿತ್ತು. ಮುಂಬರುವ ದಿನಗಳಲ್ಲಿ ಹುಡುಗ ಸಂಘಟನೆಯೊಂದರ ನೇತೃತ್ವ ವಹಿಸಿ ಬೃಹತ್ ಆಸ್ತಿಯ ಮಾಲಕನಾಗುವವ. ಅದೇ ಆಶಯದಿಂದಾಗಿಯೇ ಆತನ ಬಗ್ಗೆ ಭಕ್ತಿ ಗೌರವಾದರಗಳು  ಉಂಟಾಗಿದ್ದವು. ಅದೆಲ್ಲ ಪ್ರಭಾವಳಿ ಮತ್ತು ಸಂಘಟನೆಯ ಆಮೂಲಾಗ್ರ ವಿಸರ್ಜನೆಗಳೆಲ್ಲ ಮುಂದಿನದಿನಗಳಲ್ಲಿ ಆಗುವುದಕ್ಕಿತ್ತು. ಆ ಹುಡುಗ ಮಾತ್ರ ಅದೆಲ್ಲದರಿಂದ ದೂರನಾಗಿ ಏಕಾಂಗಿಯಾಗಿ ಎಲ್ಲೋ ಕಳೆದುಹೋದಂತಿದ್ದ; ಅದೆಷ್ಟೋ ಕಾಲವಾದ ನಂತರವೂ ಇದೊಂದು ದೃಶ್ಯ  'ಆತನ' ಸ್ಮತಿ ಪಟಲದಲ್ಲಿ ಉಳಿದುಕೊಂಡಿದ್ದು ಬಿಟ್ಟರೆ ಆಗಿನ ದಿನಗಳ ಬೇರಾವುದೇ ಘಟನೆಗಳೂ ಇದೀಗ ನೆನಪಿನಲ್ಲಿ ಉಳಿದಿಲ್ಲ.
ಆತನಿಗೆ ತನ್ನ ಬಾಲ್ಯದ ನೆನಪು ಇಲ್ಲ. ಓದಿದ ಶಾಲೆ, ಮಾಸ್ಟರ್‌ಗಳ ಬೆತ್ತದ ರುಚಿ, ಹೀಗೆ ಯಾವೊಂದೂ ಆತನ ನೆನಪಿಗೆ ಬರುತ್ತಿಲ್ಲ. ಹುಡುಗನನ್ನು ದಿನವೂ ಬೆತ್ತದಲ್ಲಿ ಹೊಡೆದು ಶಿಕ್ಷೆ ವಿಧಿಸಲಾಗುತ್ತಿತ್ತಂತೆ. ಹುಡುಗ ಅಳುತ್ತಿದ್ದರೂ ಆತನನ್ನು  ಶಾಲೆಯ ವರಾಂಡದಲ್ಲಿ ಒಬ್ಬಂಟಿಯಾಗಿ  ನಿಲ್ಲಿಸಿ  ಹಿಂಸಿಸಲಾಗುತ್ತಿತ್ತಂತೆ. ಶಾಲೆಯ ಬಾಗಿಲು ಹಾಕುವ ಹೊತ್ತಿಗೆ ಬಂದು  ಶಿಕ್ಷಕರು ಮನೆಗೆ ಹೋಗು ಎಂದು ನಿರ್ದೇಶಿಸುವ ತನಕ ಹುಡುಗ ಹಂದಾಡುವಂತಿರಲಿಲ್ಲ-  ಈ ಘಟನೆಗಳನ್ನೆಲ್ಲ ಬಹಳ ವರ್ಷಗಳ ನಂತರ ನಿರ್ದಿಷ್ಟ ಶಿಕ್ಷಕರೇ ಹೇಳಬೇಕಾಯಿತು ಬಿಟ್ಟರೆ ಆವನ ನೆನಪಿನಲ್ಲಿ ಮಾತ್ರ ಯಾವೊಂದು ಸಂಗತಿಯೂ ಉಳಿದಿರಲಿಲ್ಲ. ಆತ ಶಾಲೆಯ ದಿನಗಳಲ್ಲಿ ಶಿಕ್ಷಕರು ಕಲಿಸಿದ್ದಾಗಲಿ, ಆತನೇ ಓದಿರುವುದಾಗಲಿ ಏನೊಂದನ್ನೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ- ನೆನಪಿನಲ್ಲೇ ಇರುತ್ತಿರಲಿಲ್ಲ. ಅದಕ್ಕಾಗಿ ಹೊಡೆದು ಶಿಕ್ಷಿಸಲಾಗುತ್ತಿತ್ತುಎಂದು ಹೇಳುವ ಶಿಕ್ಷಕರು, ಅದೇ ಹುಡುಗ ದೊಡ್ಡವನಾದ ಬಳಿಕ  ಆತನ ಒಂದು ಉಪನ್ಯಾಸ ಕೇಳಿ ಆಶ್ಚರ್ಯಚಕಿತರಾಗಿದ್ದರು. ಅವರಿಗೆಲ್ಲ ಎಲ್ಲಿಲ್ಲದ ಆಶ್ಚರ್ಯ, ಅವಶ್ಯಕತೆಗಿಂತ ಹೆಚ್ಚುಗೌರವಭಾವ. ಆ ದಿನಗಳು ಆತನ ಮನಸ್ಸಿನಲ್ಲಿ ಯಾವೊಂದು ಗೆರೆಯನ್ನೂಮೂಡಿಸದ ರೀತಿಯಲ್ಲಿ ಕಳೆದುಹೋಗಿದ್ದವು. ಅಂದಿನ ಗೆಳೆತನಗಳು, ವಾತ್ಸಲ್ಯ- ಕೊನೆಗೆ ಆತನೊಂದಿಗೆ ಹೀನಾಯವಾಗಿ ನಡೆದುಕೊಂಡವರೂ ನೆನಪಿನಲ್ಲಿ ಉಳಿದಿರಲಿಲ್ಲ. ಇತ್ತೀಚಿನ ವರ್ಷದಲ್ಲೊಮ್ಮೆ ಲೇಖಕರೊಬ್ಬರು ಅಂದಿನ ದಿನಗಳ ಘಟನೆಗಳ ಬಗ್ಗೆ  ಕೇಳಿದ್ದರು. ಹುಡುಗ ಮತ್ತವನ ಸಹೋದರನನ್ನು ಅವರು ಹುಡುಕಿದ್ದು ಹೇಗೆ, ಆ ದಿನಗಳ ಇತರ ಘಟನೆಗಳ ಬಗ್ಗೆ ಕೂಡ ಕೆದಕಿದಾಗ 'ಆತ' ಏನೊಂದು ನೆನಪಿಗೆ ಬಾರದೆ ಅಸಹಾಯಕನಾಗಬೇಕಾಯಿತು. ಉಳಿದವರು ಹೇಳಿದ್ದನ್ನೇ ಪುನರಾವರ್ತಿಸಬಹುದು ಎಂದೇ ಹೇಳಿದರೆ ನಂಬುಗೆ ಹುಟ್ಟದ ಲೇಖಕ 'ನೀವು ನಾಟಕ ಆಡುತ್ತಿದ್ದೀರಿ' ಎಂದು ಜರೆದಿದ್ದರು.
ಯಾವುದೇ ಘಟನೆಯನ್ನೂ ಆತ ಹಿಡಿದಿಟ್ಟುಕೊಳ್ಳಲಿಲ್ಲ. ಎಲ್ಲವೂ ಅವನ ಮನಸ್ಸಿಗೆ ಬಂದವು, ಯಾವುದೇ ಗೆರೆಗಳನ್ನು ಉಳಿಸದೆಯೇ ಹೊರಟು ಹೋಗಿವೆ.
ಪ್ರಜ್ಞೆ  ಮತ್ತದರ ತಿರುಳುಗಳು ಪರಸ್ಪರ ಅವಿನಾಭಾವದಿಂದಿ ಇರುತ್ತವೆ. ಅವೆರಡನ್ನೂ ಪ್ರತ್ಯೇಕಿಸುವುದು ಕಷ್ಟ. ಎಲ್ಲರಲ್ಲೂ ಹಾಗೆಯೇ ಇರುತ್ತದೆ. ಆದರೆ ತಿರುಳು-ವಿಷಯ ಎಂಬುದು ನಾನು ಮತ್ತು ನಾನಲ್ಲದ್ದು ಎಂಬ ಪ್ರತ್ಯೇಕತೆಯನ್ನು ನಿರ್ಮಿಸುತ್ತದೆ. ಸಂಸ್ಕೃತಿ, ಜಾತಿ ಧರ್ಮ, ವರ್ಣಬೇಧ, ಕೌಶಲ್ಯ, ಪಾಂಡಿತ್ಯ ಸಪಾದನೆಗಳಿಗನುಗುಣವಾಗಿ  ಪ್ರಜ್ಞಾ ಸ್ಥರದ ತಿರುಳು ಬದಲಾಗುತ್ತ ಹೋಗುತ್ತದೆ. ತಿರುಳಿನ ಬದ್ಧತೆ-ಬೇಧಗಳಿಂದಾಗಿ ಕಲಾವಿದ, ವಿಜ್ಞಾನಿಗಳು ಮೇಲ್ನೋಟಕ್ಕೆ ಪರಸ್ಪರ ಭಿನ್ನವಾಗಿ ಕಾಣುತ್ತಿರುತ್ತಾರೆ. ವ್ಯಕ್ತಿಗಳು ಬೇರ್ಪಡುವುದು, ರಸ್ಪರ ಬೌದ್ಧಿಕ ನಡುಗಡ್ಡೆಗಳಾಗಿ ಕಾಣುವುದಕ್ಕೆ  ಅವರವರ ವೈಚಾರಿಕ ಬದ್ಧತೆಗಳು  ಕಾರಣ. ವೈಚಾರಿಕ ಬದ್ಧತೆ ಎಲ್ಲರಲ್ಲೂ ಕಾಣುವ ಸಾಮ್ಯತೆ.
ಈ  ವೈಚಾರಿಕ ಬದ್ಧತೆಯೇ ತಿರುಳು ಅಥವಾ ಪ್ರಜ್ಞೆ . ಪ್ರಜ್ಞೆಯನ್ನು ಎರಡು ತೆರನಾಗಿ ವಿಂಗಡಿಸಲಾಗುತ್ತದೆ. ಸುಪ್ತ-ಜಾಗೃತ ಪ್ರಜ್ಞೆ  ಎಂದು ಬಣ್ಣಿಸುವಾಗ ಪರಸ್ಪರ ವಿಭಿನ್ನವೇನೊ ಎಂದು  ಕಾಣುವುದು. ನಾವು ಏನೊಂದನ್ನು ಪೂರ್ಣವಾಗಿ ನೋಡದಿರುವುದರಿಂದಲೇ ಸುಪ್ತ ಪ್ರಜ್ಞೆ ಎಂಬುದು ಮಹತ್ವ ಪಡೆದುಕೊಳ್ಳುತ್ತದೆ. ನೋಡಿದ ವ್ಯಕ್ತಿ ಹಾಗೂ ನೋಡುವಿಕೆ, ಅನುಭವ ಹಾಗೂ ಅನುಭವಿಸುವ ವ್ಯಕ್ತಿಗಳು ಪ್ರತ್ಯೇಕವಾಗುವುದಕ್ಕಾಗಿಯೇ ಇಷ್ಟೊಂದು ರೀತಿಯಲ್ಲಿ ಅಪೂರ್ಣಗಳು, ವಿರೋಧಾಬಾಸಗಳು, ಛಿದ್ರತೆಗಳು ಉಂಟಾಗುವಂಥದ್ದು. ಜಾಗೃತ ಪ್ರಜ್ಞೆಯನ್ನು ಗಮನಿಸುವ ರೀತಿಯಲ್ಲೇ ಗಮನಿಸಿದರೆ ಸುಪ್ತ ಪ್ರಜ್ಞಾಸ್ತರ ಎಂಬುದನ್ನು ಜಾಗೃತ ಸ್ಥಿತಿಯಲ್ಲೇ  ಅರಿತುಕೊಳ್ಳಬಹುದು. ನೋಡುವುದು ಎಂದರೆ ವಿಷ್ಲೇಸುವುದಲ್ಲ, ವಿಷ್ಲೇಶಣೆಗಳ ರೀತಿಯಲ್ಲೂ ಹೇಗೆಯೇ, ವಿಷ್ಲೇಶಕ ವಿಷ್ಲೇಶಣೆಗಳು ಪ್ರತ್ಯೇಕವಾಗಿಬಿಡುತ್ತವೆ; ಪರಿಣಾಮ ಎಂದರೆ  ಒಂದು ರೀತಿಯ ಭೌದ್ಧಿಕ ಸೋಂಬೇರಿತನ, ಉದಾಸೀನ, ಅರೆ ಮಂಕು ಕವಿಯುತ್ತದೆ. ಗಮನಿಸುವಿಕೆಯಲ್ಲಿ ಗಮನಿಸುವಾತ ಇಲ್ಲದಾದಾಗ ಕ್ರಿಯೆ ಎಂಬುದು ತಕ್ಷಣಕ್ಕೆ ಸನ್ನಿಹಿತವಾಗುವುದು. ಅಂಥ ಸ್ಥಿತಿಯಲ್ಲಿ ಆಲೋಚನೆ ಹಾಗೂ ಕ್ರಿಯೆಯ ನಡುವೆ ಅಂತರ ಇರುವುದಿಲ್ಲ. ಆಲೋಚನೆ, ಹಿಂದಿನ ಅನುಭವ, ತೀರ್ಮಾನಗಳ ಒಂದು ಕಂತೆಯೇನೋಡುವಾತನಾಗುತ್ತಾನೆ. ಆತ ನೋಡುವಿಕೆುಂದ ಪ್ರತ್ಯೇಕ. ಆಲೋಚನೆಯಿಂದಾಗಿ ಗುರುತಿಸುವಿಕೆ  ಉಂಟಾಗುತ್ತದೆ. ಗುರುತಿವಿಕೆ  ಎಂಬುದೇ ಪ್ರತ್ಯೇಕತೆ.
ಆ ದಿನಗಳಲ್ಲಿ ಅಲ್ಲಿದ್ದನಡುಗಡ್ಡೆ, ನದಿ ಮತ್ತು ಸಮುದ್ರಗಳು ಈಗಲೂ ಅಲ್ಲಿಯೇ ಇವೆ. ತಾಳೆ ಮರಗಳು, ಕಟ್ಟಡಗಳೂ ಕೂಡ. ದಟ್ಟ ಮೋಡದ ಮರೆಯಿಂದ ಹೊರ ಬರುವ ಸೂರ್ಯ ಕೂಡ ಸ್ವರ್ಗವನ್ನೇ ಹೊರಚಿಮ್ಮಿಸುತ್ತಿರುತ್ತಾನೆ. ಕೇವಲ ಸೊಂಟಕ್ಕೊಂದು ಬಟ್ಟೆಸುತ್ತಿಕೊಂಡು ನೀರಿಗಿಳಿಯುವ ಮೀನುಗಾರರು ಉದರಂಭರಣದ ಕೆಲಸಕ್ಕಾಗಿ ಬಲೆ ಬೀಸುತ್ತಿರುತ್ತಾರೆ. ಬಿಟ್ಟು ಬಿಡದ ಬಡತನ ಮತ್ತಷ್ಟು ತೀವ್ರವಾಗುತ್ತಿದೆ.
ಅಷ್ಟಾದರೂ ಸಂಜೆವೇಳೆಗೆ ಎಲ್ಲವೂ ಆಹ್ಲಾದಕರವಾಗಿ ಮಾವಿನ ಮರದ ಮಧ್ಯೆ ಹೂವುಗಳು ಕಾಣಿಸತೊಡಗಿದ್ದವು. ಆಹಾ ಈ ಭೂಮಿ ಎಷ್ಟೊಂದು ಸುಂದರ.

* ಕೃಷ್ಣ ಮೂರ್ತಿಯವರು  ಮಡ್ರಾಸ್‌ವ ಅಡ್ಯಾರ್‌ನಲ್ಲಿಕಳೆದ  ತಮ್ಮ ಬಾಲ್ಯದ  ಬಗ್ಗೆ ಬರೆದಿದ್ದಾರೆ.


ಸೆಪ್ಟೆಂಬರ್ 24, 1973
 ಇಂದಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದಕ್ಕೆ ಹೊಸಬಗೆಯ  ಪ್ರಜ್ಞೆ  ಮತ್ತು ಹೊಸಬಗೆಯ ನೈತಿಕತೆಯ ಅವಶ್ಯವಿದೆ. ಎಡ ಪಂಥ, ಬಲ ಪಂಥ ಹಾಗೂ ಕ್ರಾಂತಿಕಾರಿಗಳು ಇದನ್ನೆಲ್ಲ ಒಪ್ಪಿಕೊಳ್ಳುವುದಿಲ್ಲ ಎಂಬುದು ನಿಜ. ಇದೀಗ ನಮ್ಮ ಮುಂದಿರುವ ಯಾವುದೇ  ಸಿದ್ಧಾಂತ, ಸಮೀಕರಣ ಅಥವಾ ತತ್ವಶಾಸ್ತ್ರಗಳೆಲ್ಲ ಹಳೆಯ ಪ್ರಜ್ಞಾವಲಯದ ಭಾಗವೇ ಆಗಿವೆ. ಹೊಸದಾಗಿ ಅಳವಡಿಸಿಕೊಳ್ಳಲಾಗುತ್ತಿರುವ ಸಿದ್ಧಾಂತಗಳು ಛಿದ್ರ-ಅಪೂರ್ಣ ಸಮನ್ವಯ ರಹಿತ ಕ್ರಿಯೆಗಳಿಗೆ ಪ್ರೇರಣೆಯಾಗುವ ಇನ್ನೊಂದಿಷ್ಟು ಆಲೋಚನೆಗಳ ಹಂದರ  ಮಾತ್ರ. ಎಡ, ಬಲ, ಮಧ್ಯ  ಅಥವಾ ಮತ್ತೊಂದಿರಬಹುದು ಎಲ್ಲದರ ಕತೆಯೂ ಅಷ್ಟೇ. ಇವೆಲ್ಲವುಗಳು ಅಂತಿಮವಾಗಿ ರಕ್ತಪಾತಕ್ಕೆ ಪ್ರೇರಣೆ ನೀಡುವಂಥಹವುಗಳು. ಇದೀಗ ನಮ್ಮ ಸುತ್ತ ನಡೆಯುತ್ತಿರುವಂಥದ್ದೂ ಅದೇ ಆಗಿದೆ. ಪ್ರತಿಯೊಬ್ಬನೂ ಒಂದಲ್ಲ ಒಂದು ಬಾರಿ ವ್ಯವಸ್ಥೆಯಲ್ಲಿನ ಸಾಮಾಜಿಕ, ಆರ್ಥಿಕ, ನೈತಿಕ ಬದಲಾವಣೆಗಳ ಅವಶ್ಯಕತೆಯನ್ನು ಮನಗಾಣುತ್ತಾನೆ. ಆದರೆ ಇದಕ್ಕೆ ಆತನ ಪರಿಹಾರ ಸೂತ್ರಗಳು ಮಾತ್ರ ಹಳಸಲು ವಿಚಾರಗಳ ಮುಂದುವರಿದಭಾಗಗಳಾಗಿರುತ್ತವೆ. ಇದೀಗ ಮನುಷ್ಯ ಸಿಕ್ಕಿಹಾಕಿಕೊಂಡ ಸಂಕೋಲೆ, ಗೊಂದಲ, ದುರಂತಗಳ ಮೂಲ ಇರುವುದು ಹಳಸಲಾಗಿರುವ ಪ್ರಜ್ಞಾವಲಯದಲ್ಲಿ. ಅದರಿಂದ ಮೊದಲಿಗೆ ಮುಕ್ತಿ ಪಡೆಯಬೇಕು. ಅದರಿಂದ ಹೊರಕ್ಕೆ ಬಾರದೆ ನಾವು ಚರ್ಚಿಸುವ ರಾಜಕೀಯ, ನೈತಿಕ, ಆರ್ಥಿಕ ಸುಧಾರಣೆಗಳೆಲ್ಲ ನಮ್ಮಸಮಾಜಕ್ಕೆ, ಸುತ್ತಲಿನ ಪ್ರಕೃತಿಗೆ ಇನ್ನಷ್ಟು ಹಾನಿಯನ್ನು ತರುತ್ತವೆ. ಯಾವುದೇ ಆರೋಗ್ಯಕರ ಮನಸ್ಸಿಗೆ ಇದೆಲ್ಲ ಕಾಣದಂಧ ವಿಷಯವಲ್ಲ.
 ಪ್ರತಿಯೊಬ್ಬನೂ ತನಗೆ ತಾನೇ ಮಾರ್ಗದರ್ಶನ ಮಾಡಿಕೊಳ್ಳುವ ಬೆಳಕಿನಂತೆ ಇರಬೇಕು ; ಇದೇ ಕಾನೂನು, ಇದಕ್ಕೆ ಹೊರತಾದ ಇನ್ನೊಂದು ಕಾನೂನು ಇಲ್ಲ. ಇತರ ಎಲ್ಲ ಬಗೆಯ ಕಾನೂನುಗಳು ಆಲೋಚನಾ ಹಂದರದಿಂದಲೇ ಸೃಷ್ಟಿಯಾಗಿರುವಂಥದ್ದು; ಅದೆಲ್ಲ ಅಪೂರ್ಣ ಹಾಗೂ ವಿರೋಧಾಭಾಸಗಳಿಂದ ಕೂಡಿದ್ದಾಗಿದೆ. ತನ್ನ ಜೀವನಕ್ಕೆ ತಾನೇ ಮಾರ್ಗದರ್ಶಕನಾಗಬೇಕು ಎಂದಾದಲ್ಲಿ  ಎಷ್ಟೇ ಸರಿ ಎನಿಸಿದರೂ ಇನ್ನೊಬ್ಬರು  ತೋರಿಸಿದ ದಾರಿಯನ್ನು ಅನುಸರಿಸಬಾರದು. ಇನ್ನೊಬ್ಬರು ತೋರುವ ದಾರಿಯಲ್ಲಿ ಎಷ್ಟೇ ತರ್ಕವಿರಲಿ, ಐತಿಹಾಸಿಕ ಹಿನ್ನೆಲೆ ಇದ್ದಿರಲಿ, ಅಥವಾ ನೇರವಾಗಿಯೇ ಕಂಡುಬರಲಿ ಅದನ್ನು ಅನುಸರಿಸುವಂಥದ್ದಲ್ಲ. ಯಾವುದೇ ನಿರ್ದೇಶಕನ ದಟ್ಟ ನೆರಳಲ್ಲಿ ನೀವು ಮುಂದುವರಿಯುತ್ತಿದ್ದರೆ ನಿಮಗೆ ನೀವು ಮಾರ್ಗದರ್ಶಕರಾಗುವುದೇ ಸಾಧ್ಯವಿಲ್ಲ. ಆಲೋಚನೆಗಳನ್ನು ಸಮೀಕರಿಸಿ ಒಂದು ನೈತಿಕತೆ ಸಿದ್ಧಪಡಿಸುವುದು ಸಾಧ್ಯವಾಗುವುದಿಲ್ಲ. ಪರಿಸರದ ಒತ್ತಡದಿಂದಾಗಿಯೇ ನೈತಿಕತೆ ಬೆಳೆಯುವುದಿಲ್ಲ. ನಿನ್ನೆಗಳಿಂದಾಗಿ ಅಥವಾ ಸಂಪ್ರದಾಯದಿಂದಾಗಿ ನೈತಿಕತೆಗಳು ಹರಿದು ಬರುವುದಿಲ್ಲ. ನೈತಿಕತೆ ಎಂಬುದು ಪ್ರೇಮದ ಶಿಶು, ಪ್ರೇಮವು ಆಸೆಯಿಂದ, ಸುಖದಿಂದ ಉಂಟಾಗುವಂಥದಲ್ಲ. ಲೈಂಗಿಕ ಅಥವಾ ಪಂಚೇಂದ್ರಿಯಗಳ ಸುಖ ಎಂಬುದು ಪ್ರೇಮವಲ್ಲ.
ಆ ಗುಡ್ಡದ ತುತ್ತ ತುದಿಯಲ್ಲಿ ಹೆಚ್ಚಾಗಿ ಹಕ್ಕಿಗಳು ಇರಲಿಲ್ಲ.  ಅಲ್ಲೊಂದಿಷ್ಟು ಕಾಗೆಗಳು ಇದ್ದವು. ಚಿಗರೆಗಳು, ಅಲ್ಲಲ್ಲಿ ಕರಡಿಗಳು ವಾಸಿಸುತ್ತಿದ್ದವು. ಬೃಹತ್ತಾಗಿ ಬೆಳೆದ ರೆಡ್‌ಉಡ್ ಮರಗಳು ಎಲ್ಲೆಡೆ ಕಾಣುತ್ತಿವೆ. ಇವುಗಳಿಂದಾಗಿ ಉಳಿದ ಮರಗಳು ಕುಬ್ಜವಾಗಿ ಕಾಣುತ್ತಿದ್ದವು. ಯಾವುದೇ ಬಗೆಯ ಬೇಟೆಗಳಿಗೂ ಈ ದೇಶದಲ್ಲಿ ಅವಕಾಶ ಇಲ್ಲದ ಅದ್ಬುತ ಕಾನೂನು ಇದೆ. ಇಲ್ಲಿನ ಎಲ್ಲ ಪ್ರಾಣಿಗಳನ್ನು, ಎಲ್ಲಬಗೆಯ ಹೂವುಗಳನ್ನೂ ರಕ್ಷಿಸಲಾಗುತ್ತದೆ. ರೆಡ್‌ಉಡ್ ಮರಗಳ ತೋಪಿನಲ್ಲಿ ಕುಳಿತಿದ್ದ 'ಆತ'  ಮನುಷ್ಯ ಜೀವಿಯ ಇತಿಹಾಸ ಹಾಗೂ ಭೂಮಿಯ ಸೌಂದರ್ಯದ ಬಗ್ಗೆ ಅರ್ಥವಿಸಿಕೊಳ್ಳುತ್ತಿದ್ದ. ಅಷ್ಟರಲ್ಲೆ ಕೆಂಪಾದ ದಪ್ಪನೆಯ ಅಳಿಲೊಂದು ಕುಳಿತಿದ್ದ ವ್ಯಕ್ತಿಯ ಕಡೆಗೆ ನೋಡಿಕೊಂಡು ಕೆಲವೇ ಅಡಿಗಳ ಆಚೆ ವಯ್ಯಾರದಿಂದ ದಾಟಿ ಹೋಯಿತು. ಸಮೀಪದಲ್ಲೊಂದು ಹಳ್ಳವಿದ್ದರೂ ಭೂಮಿ ಒಣಗಿತ್ತು. ಯಾವೊಂದು ಎಲೆಯೂ ಹಂದಾಡುತ್ತಿರಲಿಲ್ಲ; ಸುತ್ತಲಿನ ಮೌನದ ಸೌಂದರ್ಯಕ್ಕೆ ಮರಗಳು ಸಾಥ್ ನೀಡುವಂತಿತ್ತು.
ಇಕ್ಕಟ್ಟಾದ ಕಾಲು ಹಾದಿಯಲ್ಲಿ ಮುಂದೆ ಸಾಗಿದಾಗ ಅಲ್ಲಿ ಹುಲಿಯ ಗಾತ್ರದ ಕರಡಿಯೊಂದು ನಾಲ್ಕು ಮರಿಗಳೊಂದಿಗೆ ಸಾಗಿಹೋಗುತ್ತಿದೆ. 'ವ್ಯಕ್ತಿ'ಯನ್ನು ಕಾಣುತ್ತಿದ್ದಂತೆ ಮರಿಗಳು ಸರಿದು ಮಾಯವಾದವು, ತಾಯಿಮಾತ್ರ ತಿರುಗಿ ಎದುರುನಿಂತಿದೆ. ತಾಯಿ ಕರಡಿ ಕೇವಲ ಐವತ್ತು ಅಡಿಗಳಷ್ಟು ದೂರ ಇದ್ದಿರಬಹುದು. ಕಂದು ಬಣ್ಣದಲ್ಲಿ ಸೊಂಪಾಗಿದ್ದ ಕರಡಿ ಆಕ್ರಮಣ ಸ್ಥಿತಿಯಲ್ಲಿ ಸಿದ್ಧವಾಗಿ ನೋಡುತ್ತಲೇ ಇದೆ. 'ಆತ' ಕೂಡಲೇ ಅದರ ಕಡೆಗೆ ಬೆನ್ನು ಹಾಕಿ ಹೊರಟುಬಿಟ್ಟ. ಯಾರೊಬ್ಬರೂ ಪರಸ್ಪರರನ್ನು ನೋಯಿಸುವ ಉದ್ದೇಶ ಹೊಂದಿರಲಿಲ್ಲ ಎಂಬುದು ಇಬ್ಬರ ಅರಿವಿನಲ್ಲೂ ಇತ್ತು. ಈಚೆ ಮರಗಳ ನೆರಳು, ಕೀಚಾಯಿಸುವ ಮೈನಾ ಹಕ್ಕಿಗಳ ಸಾಂಗತ್ಯ ಆತನಿಗೂ ಹಿತವೆನಿಸುವಂತಿದೆ.
ಸ್ವಾತಂತ್ರ ಎಂಬುದು ವ್ಯಕ್ತಿಯೊಬ್ಬನಿಗೆ ಬೆಳಕಾಗುತ್ತದೆ; ಅಂಥ ಮನಸ್ಥಿತಿಯಲ್ಲಿ ಆಲೋಚನೆಯ ಗೊಂದಲಗಳಿಂದ ವ್ಯಕ್ತಿ ಇಕ್ಕಟ್ಟಿನಲ್ಲಿಸಿಲುಕುವುದಿಲ್ಲ. ದಿಙ್ಮೂಢನೂ ಆಗಿರುವುದಿಲ್ಲ. ಅಪ್ಪಟ  ಸ್ವಾತಂತ್ರ್ಯ ಎಂದರೆ ಅವಲಂಬನೆಗಳಿಂದ ಸ್ವತಂತ್ರನಾಗುವಂಥದ್ದು. ಆಲೋಚನೆಯ ಹಂದರಗಳಿಂದ ಸ್ವತಂತ್ರರಾಗುವುದರಲ್ಲಿ ತನಗೆ ತಾನು ಬೆಳಕು ಕಂಡುಕೊಳ್ಳುವ ಪರಿ ಇದೆ.. ಇದೇ ಬೆಳಕಿನಲ್ಲಿ ಎಲ್ಲಬಗೆಯ ಕ್ರಿಯೆ, ಕ್ರಿಯಾಶೀಲತೆ ಉಂಟಾಗುವುದರಿಂದ ಅದು ಎಂದಿಗೂ ವೈರುಧ್ಯದಿಂದ ಕೂಡಿರುವುದಿಲ್ಲ. ಯಾವಾಗ ಕಾನೂನು, ಬೆಳಕು, ಕ್ರಿಯೆ ಒಂದಕ್ಕೊಂದು ಬೇರ್ಪಟ್ಟು ವ್ಯವಹರಿಸುವುದೊ ಆಗ ವೈರುಧ್ಯಗಳು ಉಂಟಾಗುತ್ತವೆ. ಕ್ರಿಯೆಯಿಂದ ಕರ್ತೃ ಬೇರ್ಪಟ್ಟಾಗ ವೈರುಧ್ಯ ಉಂಟಾಗುತ್ತದೆ. ತತ್ವಗಳು, ಆದರ್ಶಗಳೆಲ್ಲ ಶುಷ್ಕ ಆಲೋಚನೆಯ ಚಲನೆಯಾಗಿರುತ್ತವೆ. ಅದರಲ್ಲಿ ಬೆಳಕು ಒಳಗೊಂಡಿರುವುದಕ್ಕೆ ಸಾಧ್ಯವಿಲ್ಲ; ಪರಸ್ಪರ ಇವು ಒಂದನ್ನೊಂದು ನಿರಾಕರಿಸುತ್ತಿರುತ್ತವೆ. ಒಂದು ವೇಳೆ ಬೆಳಕೇ ವೀಕ್ಷಕನಾಗಿದ್ದರೂ ಪ್ರೇಮ ಎಂಬುದು ಇಲ್ಲದಾದಾಗ ಅಲ್ಲಿ ಬೆಳಕು ಮತ್ತು ಕಾನೂನು ಬೇರೆ ಬೇರೆಯಾಗುತ್ತವೆ. ಆಲೋಚನೆಯ ಹಂದರದಿಂದಲೇ ವೀಕ್ಷಕನೊಬ್ಬ ನಿರ್ಮಾಣವಾಗುವುದರಿಂದ ಅವನಲ್ಲಿ ಹೊಸತನ, ಸ್ವತಂತ್ರಸಾಧ್ಯವಾಗುವುದಿಲ್ಲ. ಅಲ್ಲಿ ಇದಮಿತ್ಥಂ ಎಂಬುದಾಗಲಿ, ವ್ಯವಸ್ಥೆ ಅಥವಾ ಆಚರಣೆಗಳು ಇದ್ದಿರುವುದಿಲ್ಲ. ಅಲ್ಲಿ ನೋಡುವಿಕೆಯೇ ಮಾಡುವಿಕೆಯಾಗಿ ಪರಿವರ್ತನೆಯಾಗಿರುತ್ತದೆ. ನೀವು ಬೇರೊಬ್ಬರ ಕಣ್ಣಲ್ಲಿ ನೋಡುವಂತಾಗಬಾರದು. ಈ ಬೆಳಕು, ಕಾನೂನು ಎಂಬುದು ನಿಮ್ಮದು ಅಥವಾ ಇನ್ನೊಬ್ಬನದು ಎಂದೇನೂ ಅಲ್ಲ. ಆಗಿರುವುದೂ ಇಲ್ಲ.  ಅಲ್ಲಿ ಪ್ರೇಮವಿರುತ್ತದೆ, ಅದೇ ಬೆಳಕು.



ಸೆಪ್ಟೆಂಬರ್ 25, 1973

ಹೊರಗೆ ದೂರದಲ್ಲಿ ಹಸಿರು ಹಾಸಿದಂತಿದ್ದ ಬೆಟ್ಟಮತ್ತುಅಡವಿಯ ಮೇಲೆ ಬಿದ್ದ ಸೂರ್ಯಕಿರಣವನ್ನು ಆತ ಕಿಟಕಿುಂದ ನೋಡುತ್ತಿದ್ದ. ಅದೊಂದು ಸುಂದರ- ಸುಖಕರವಾದ ಮುಂಜಾನೆಯಾಗಿತ್ತು. ಅಡವಿಯ ಮೇಲ್ಚಾವಣಿಯಲ್ಲಿಅಲೆ ಅಲೆಯಾದ ಬಿಳಿಯ ಮೋಡಗಳು  ಅದ್ಭುತವಾಗಿ ಕಾಣುತ್ತಿದ್ದವು. ಬೆಳ್ಳಿ ಮೋಡಗಳು ಹಾಗೂ ಪರ್ವತಗಳಲ್ಲಿ ದೇವತೆಗಳು ವಾಸಿಸುತ್ತಾರೆ ಎಂಬುದಾಗಿ ಹಿಂದಿನಿಂದಲೂ ಹೇಳಲಾಗುವ ಮಾತು ಈ ದೃಶ್ಯದೊಂದಿಗೆ ಅರ್ಥಪೂರ್ಣ. ಎಲ್ಲೆಡೆ ನೀಲಾಕಾಶದಲ್ಲಿ ಬೆಳ್ಳಿ ಮೋಡಗಳು ಚದುರಿಕೊಂಡಿದ್ದವು. ಆತನ ಮನಸ್ಸಿನಲ್ಲಿ ಯಾವೊಂದೂ ಆಲೋಚನೆ ಆಗ ಇದ್ದಿರಲಿಲ್ಲ. ಕೇವಲ ಸುತ್ತಣ ಜಗತ್ತಿನ ಸೌಂದರ್ಯವಷ್ಟನ್ನೇ ಆತ ನೋಡುತ್ತಿದ್ದ. ಅದೇ ಸ್ಥಿತಿಯಲ್ಲಿ ಕಿಟಕಿಯ ಬಳಿ ಆತ ಬಹಳ ಹೊತ್ತು ಇದ್ದ ಎಂದು ತೋರುತ್ತದೆ- ಆಗಲೇ ಅವನಲ್ಲಿ ಏನೋ ಒಂದು ಬದಲಾವಣೆ ಆಯಿತು. ಅದೆಲ್ಲ ಅನಿರೀಕ್ಷಿತ ಹಾಗೂ ಅನಪೇಕ್ಷಿತ. ತಿಳಿದೋ, ತಿಳಿಯದೆಯೋ ನೀವು ಅಂಥ ಘಟನೆಯನ್ನು ಸ್ವಾಗತಿಸುವುದು ಸಾಧ್ಯವಾಗುವುದಿಲ್ಲ. ಉಳಿದೆಲ್ಲವೂ ತೆರವುಗೊಂಡು ಕೇವಲ ಹೊರಗಿನ ಸೌಂದರ್ಯವೊಂದೇ ಆತನಲ್ಲಿ ಸೇರಿಹೋದ ಅನುಭವ ಅದು. ಅದಕ್ಕೊಂದು ಹೆಸರು ಕೊಡುವುದು ಕಷ್ಟ. ಇಂಥದ್ದನ್ನು ಯಾವುದೇ ದೇವಾಲಯದಲ್ಲಿ , ಚರ್ಚ್, ಮಸೀದಿ ಅಥವಾ ಮುದ್ರಿತ ಪುಟದಲ್ಲೂ ನೋಡುವುದಕ್ಕೆ ಸಾಧ್ಯವಿಲ್ಲ. ನೀವು ಎಲ್ಲಿಯೂ ಇದನ್ನು ಸಂಧಿಸುವುದು ಸಾಧ್ಯವಿಲ್ಲ.ಯಾವುದೋ ಒಂದು ಎಂದು ನೀವದನ್ನು ಗುರುತಿಸಿದರೂ ಅದು ಇದಾಗಿರಲಿಕ್ಕಿಲ್ಲ.
ಅಂದು ಇಸ್ತಾಂಬುಲ್‌ನ ಗೋಲ್ಡನ್ ಹಾರ್ನ್‌ ಬೃಹತ್ ಇಮಾರತ್‌ನ ತುಂಬ ಜನರಿದ್ದರು. ಓರ್ವ ಹರಕು ಬಟ್ಟೆಯ ಭಿಕ್ಷುಕನ ಪಕ್ಕದಲ್ಲಿ 'ಈತ' ಕುಳಿತುಕೊಂಡಿದ್ದ. ಭಿಕ್ಷುಕ ತಲೆ ಬಗ್ಗಿಸಿ ಏನೋ ಪ್ರಾರ್ಥನೆಯಲ್ಲಿ ನಿರತನಾಗಿದ್ದ. ಅಷ್ಟರಲ್ಲೆ ವ್ಯಕ್ತಿಯೊಬ್ಬನಿಂದ ಅರೇಬಿಕ್ ಭಾಷೆಯಲ್ಲಿ ಪ್ರಾರ್ಥನೆ ಆರಂಭವಾಗುತ್ತದೆ. ಆತನ ಕಂಠದಿಂದ ಹೊರಟು ಮೊಳಗಿ ಧ್ವನಿಯಿಂದ ಇಡೀ ಕಟ್ಟಡದಲ್ಲೇ   ಶಕ್ತಿ ಸಂಚಾರವಾಯಿತು. ಕಟ್ಟಡವೇ ಕಂಪಿಸುತ್ತಿರುವ ಅನುಭವ. ಆ ಧ್ವನಿ ಅಲ್ಲಿದ್ದವರಲ್ಲೆಲ್ಲಒಮ್ಮೆ ಮಿಂಚಿನ ವಿದ್ಯುತ್‌ಸಂಚಾರಕ್ಕೆ  ಪ್ರೇರಣೆಯನ್ನುಉಂಟುಮಾಡಿತು. ಎಲ್ಲರೂ ಅದೇ ಪ್ರಾರ್ಥನೆಯನ್ನು ಪುನರಾವರ್ತಿಸತೊಡಗಿದ್ದರು. ಅವರೆಲ್ಲರ ನಡುವೆ ಹೊಸಬನಾಗಿದ್ದ'ಈತ'ನನ್ನು ಎಲ್ಲರೂ ಒಮ್ಮೆ ನೋಡಿ ತಮ್ಮಷ್ಟಕ್ಕೆ  ತಾವೆ ಪ್ರಾರ್ಥನೆಯಲ್ಲಿ ತೊಡಗಿಕೊಂಡರು. ಒಮ್ಮೆ ಪ್ರಾರ್ಥನೆ ನಡೆಸಿ ಎಲ್ಲರೂ ಮೌನವಾದರು. ತಮ್ಮ ಶಾಸ್ತ್ರ ಷಡಂಗಗಳು ಮುಗಿಯುತ್ತಲೇ ಒಬ್ಬರಾದ ನಂತರ ಒಬ್ಬರು ಅಲ್ಲಿಂದ ಹೊರಟುಹೋಗುತ್ತಿದ್ದರು. ಕೊನೆಗೆ ಭಿಕ್ಷುಕ ಮತ್ತು 'ಆತ' ಮಾತ್ರ ಅಲ್ಲಿದ್ದರು. ಇನ್ನೇನೂ ಭಿಕ್ಷುಕನೂ ಅಲ್ಲಿಂದ ಜಾಗ ಕಾಲಿ ಮಾಡುತ್ತಾನೆ.. ಈತನೊಬ್ಬ ಉಳಿದಿದ್ದ. ಬಹುದೊಡ್ಡ ಗುಮ್ಮಟ ಖಾಲಿಯಾಗಿ ಒಂದು ಬಗೆಯ ಮೌನ ಅಲ್ಲಿತ್ತು. ಜೀವ ಜಗತ್ತಿನ ಯಾವೊಂದು ಗದ್ದಲವೂ ಅಲ್ಲಿರಲಿಲ್ಲ.
ಕಣಿವೆಯಲ್ಲಿ ಅತ್ಯಂತ ಕೆಳಗೆ  ಎಲ್ಲವನ್ನೂ ಬಿಟ್ಟು ಪರ್ವತವೇರಿ ತುಟ್ಟತುದಿಯ ಬಂಡೆಗಳು, ಪೈನ್ ಮರಗಳ ಪಕ್ಕದಲ್ಲಿ ನೀವು ಒಮ್ಮೆ ನೆಡೆದಾಡಿದ್ದರೆ ; ನಿಮ್ಮಲ್ಲಿ ಆ ಹೊತ್ತಿಗೆ ಆಲೋಚನೆಗಳೆಲ್ಲಉದುರಿ ಪಿಸುಮಾತುಗಳೆ ನಿಂತುಹೋಗಿರುತ್ತವೆ. ಆಗ ನಿಮಗೊಂದು ಪರಕೀಯತೆಯ ಅನುಭವ ಉಂಟಾಗಿರುತ್ತದೆ. ನೀವು ಆ ಸ್ಥಿತಿಯನ್ನು ಹಿಡಿದಿಟ್ಟುಕೊಳ್ಳುವುದಕ್ಕಾಗುವುದಿಲ್ಲ. ಮತ್ತೊಮ್ಮೆ ಅದೇ ಅನುಭವ ಬರುವುದಿಲ್ಲ. ಒಂದು ವೇಳೆ ನೀವು ಹಿಡಿದಿಟ್ಟುಕೊಳ್ಳುವಂಥದ್ದೇನಿದೆಯಲ್ಲ ಅದು ಘಟನೆಯ ಸತ್ತ ನೆನಪುಮಾತ್ರವೇ ಆಗಿರುತ್ತದೆ. ನೀವು ಏನನ್ನು ಮನಸ್ಸಿನಲ್ಲಿ ಹಿಡಿದಿಟ್ಟುಕೊಳ್ಳುತ್ತೀರಲ್ಲ ಅದಾವುದೂ ನಿಜವಲ್ಲ. ನಿಮ್ಮ ಹೃದಯ ಅಥವಾ ಮನಸ್ಸಿನಲ್ಲಿ ಅದನ್ನೆಲ್ಲ ಹಿಡಿದಿಟ್ಟುಕೊಳ್ಳುವಷ್ಟು ಜಾಗವಿರುವುದಿಲ್ಲ. ಆಲೋಚನೆಯ ರೀತಿಯಲ್ಲಿ ನೀವು ಹಿಡಿದಿಟ್ಟುಕೊಳ್ಳುವ ಸಂಗತಿಗಳು ಶುಷ್ಕವಾಗಿರುತ್ತವೆ. ಕಣಿವೆಯಿಂದ ದೂರ, ಬಹುದೂರ ಹೊರಟು ಹೋಗಿರಬೇಕು. ನಿಮ್ಮ ಸಾಮಾನು ಸರಂಜಾಮಗಳೆಲ್ಲವನ್ನೂ ಕೆಳಗೆ ದೂರದಲ್ಲೆಲೋ ಬಿಟ್ಟು ಹತ್ತುವುದಕ್ಕೆ ಆರಂಭಿಸಬೇಕು. ಸಾಕಷ್ಟು ಹತ್ತಿದ ಮೇಲೆ ನೀವು ಹಿಂದಿರುಗಿ ಬಂದು ಅವುಗಳನ್ನು ಪಡೆಯಬಹುದಾದರೂ ಅದೆಲ್ಲಮಹತ್ವ ದ್ದು ಅನ್ನಿಸುವುದಿಲ್ಲ.  ನೀವು ಮೊದಲಿನಂತೇ ಇರುವುದಿಲ್ಲ.
ಅದೆಷ್ಟೋ ತಾಸುಗಳ ಪರ್ವತಾರೊಹಣದ ನಂತರ ಆತ ಒಂದು ಜಾಗಕ್ಕೆ ಬಂದಿದ್ದ. ಮರಗಳನ್ನೆಲ್ಲ ದಾಟಿದ ನಂತರ ಅಲ್ಲೊಂದಿಷ್ಟು ಬಂಡೆಗಳಿ ಇದ್ದವು. ತಿರುಚಿದ ದೇವದಾರು ಮರಗಳೂ ಇದ್ದವು. ಅಲ್ಲೆಲ್ಲೂ ಒಂದಿಷ್ಟೂ ಗಾಳಿ ಸುಳಿಯುತ್ತಿರಲಿಲ್ಲ. ಎಲ್ಲವೂ ಸಂಪೂರ್ಣ ಸ್ತಬ್ಧವಾಗಿವೆ. ಬಂಡೆ ಬಂಡೆಗಳನ್ನು ದಾಟಿ ಹಿಂದಿರುಗಿ ಬರುತ್ತಿದ್ದಾಗ ಆತನಿಗೆ ಬುಸ್‌ಗುಡುವ ಶಬ್ಧ ಕೇಳಿ ಜಿಗಿದು ನಿಲ್ಲಬೇಕಾುತು. ಕೆಲವೇ ಅಡಿಗಳಲ್ಲಿ ಬಲವಾದ ಕಪ್ಪನೆಯ ಹಾವೊಂದು ಸುತ್ತಿಕೊಂಡು ಮಲಗಿದೆ. ಹೊಟ್ಟೆಯ ಭಾಗದಲ್ಲಿ ಶಕ್ತಿಯನ್ನು ಕೇಂದ್ರೀಕರಿಸಿಕೊಂಡು ಮೇಲೆರಗುವುದಕ್ಕೆ ಸಜ್ಜಾಗಿದೆ. ತ್ರಿಕೋನಾಕೃತಿಯ ತಲೆ, ಹೊರಗೆ  ಝಳಪಿಸುತ್ತಿದ್ದ ಸೀಳು ನಾಲಗೆ, ಆತನನ್ನೇ ದಿಟ್ಟಿಸುತ್ತಿರುವ ಕಪ್ಪು ಕಣ್ಣುಗಳು. ಆತ ಒಂದಿಷ್ಟು ಮುಂದುವರಿಯುತ್ತಿದ್ದರೂ ಆತನ ಮೇಲೆ ಹಾರುತ್ತಿತ್ತು. ಸುಮಾರು ಅರ್ದ ತಾಸು ಹಾವಿನೊಂದಿಗೆ ಮುಖಾಮುಖಿಯಾಗಿ ದೃಷ್ಟಿಹಾಯಿಸಿದ್ದರೂ ಅದು ಕಣ್ಣಾಲಿಯನ್ನು ಮುಚ್ಚಿರಲಿಲ್ಲ. ಅದಕ್ಕೆ ಕಣ್ಣಾಲಿಗಳೆ ಇದ್ದಿರಲಿಲ್ಲ. ನಂತರ ಮುಖ ಹಾಗೂ ಬಾಲವನ್ನು ಆತನಿಗೆ ಎದುರಾಗಿದ್ದಂತೆ ಲಾಳಾಕಾರದಲ್ಲಿ ಕೇವಲ ದೇಹವನ್ನಷ್ಟೆ ಹಿಂದಕ್ಕೆ ಸರಿಸತೊಡಗಿತು. ಆತ ಮತ್ತಷ್ಟು ಸಮೀಪಿಸಿದಾಗ ಮತ್ತೆ ಸುತ್ತಿಕೊಂಡು ಆಕ್ರಮಣಕ್ಕೆ ಸಜ್ಜಾಗುತ್ತಿತ್ತು. ನಾವು ಕೆಲಹೊತ್ತು ಹೀಗೆಯೇ ಆಡಿದೆವು. ಅದಕ್ಕೆ ಸುಸ್ತಾಗುತ್ತಿತ್ತು. ತನ್ನಷ್ಟಕ್ಕೆ ಹೋಗಲಿ ಎಂದು ಆತ ಬಿಟ್ಟು ಆಚೆ ಬಂದ. ನಿಜಕ್ಕೂ ಅದೊಂದು ಭಯಾನಕವಾದ ಹಾವು.
ನೀವು ಮರ, ತೋಪು ಹಾಗೂ ಹಳ್ಳದೊಂದಿಗೆ ಏಕಾಂಗಿಯಾಗಿರಬೇಕು. ನೀವು ನಿಮ್ಮೊಂದಿಗೆ ಆಲೋಚನೆಗಳ ಸರಕನ್ನು ಒಯ್ದರೆ ಏಕಾಂಗಿಯಾಗಿ ಇರುವುದೇ ಸಾಧ್ಯವಿಲ್ಲ. ಮನಸ್ಸಿನ ಸ್ಥಳಾವಕಾಶ ಎಂಬುದು ಬಂಡೆಗಳಿಂದಲೂ ಕೂಡಿರಬಾರದು, ಅದು ಹೊಸದಾದ ತಪ್ಪಲೆಯಂತೆ ಖಾಲಿಯಾಗಿ ಇದ್ದಿರಬೇಕು. ಹಾಗಿದ್ದಲ್ಲಿ ಮಾತ್ರ ನೀವು ಸಂಪೂರ್ಣ ಮತ್ತು ಹಿಂದೆಂದೂ ಕಂಡಿರದ ಘಟನೆಗಳನ್ನು ಅನುಭವಿಸುತ್ತೀರಿ. 'ನೀವು' ಬದುಕಿದ್ದರೆ ಅದನ್ನೆಲ್ಲ ನೋಡುವುದು ಸಾಧ್ಯವಾಗುವುದಿಲ್ಲ. ಅದನ್ನೆಲ್ಲ ನೋಡುವುದಕ್ಕೆ ನಿಮ್ಮಲ್ಲಿನ ನೀವು ಸತ್ತು ಹೋಗಿರಬೇಕು. ನಿಮಗೆ ನೀವೆ ಜಗತ್ತಿನ ಅತಿ ಮಹತ್ವದ ಸಂಗತಿ ಎಂದು ಅನಿಸುತ್ತಿರುತ್ತದೆ. ಆದರೆ ವಾಸ್ತವ ಹಾಗಿರುವುದಿಲ್ಲ. ನಿಮ್ಮಲ್ಲಿ ಆಲೋಚನೆ ಒದಗಿಸಬಲ್ಲ ಎಲ್ಲ ವಸ್ತು ಒಡವೆಗಳೂ ಇದ್ದಿರಬಹುದು. ಆದರೆ ಅದಾವುದೂ ಜೀವಂತ ಸಂಗತಿ ಆಗಿರುವುದಿಲ್ಲ. ಅದೆಲ್ಲ ಹಳೆಯದಾಗಿರುತ್ತದೆ.
ಕಣಿವೆಯಲ್ಲಿ ಎಲ್ಲವೂ ತಂಪಾಗಿದ್ದವು. ಗುಡಿಸಲಿನ ಸಮೀಪ ಅಂದು ಅಳಿಲುಗಳು ಕಾಳಿಗಾಗಿ ಕಾಯುತ್ತಿದ್ದವು. ಅವುಗಳಿಗೆ ಕೊಠಡಿಯೊಂದರ ಟೇಬಲ್‌ನಲ್ಲಿ ದಿನವೂ ಆಹಾರ ಹಾಕಲಾಗುತ್ತಿತ್ತು. ಅವುಗಳು ಆತನನ್ನುತುಂಬ ಹಚ್ಚಿಕೊಂಡಿದ್ದವು. ಆಹಾರ ಕೊಡಲಾಗುವ ಹೊತ್ತಿನಲ್ಲಿ 'ನೀನು' ಅಲ್ಲಿರದಿದ್ದರೆ ಅವು ಕೂಗಾಡುತ್ತಿದ್ದವು. ಒಳಗೆ ಹೀಗಿದ್ದರೆ ಮನೆಯ ಹೊರಕ್ಕೆ ಚಿಲಿಪಿಲಿಯೊಂದಿಗೆ ನೀಲಿಯ ಮೈನಾ ಹಕ್ಕಿಗಳು ಕಾಯುತ್ತಿದ್ದವು.


ಸೆಪ್ಟೆಂಬರ್ 27,  1973
ಮಾಡಿನ ಮರೆಯಿಲ್ಲದ ಉದ್ದಾನುದ್ದ ವರಾಂಡಗಳು, ದ್ವಾರಗಳು,  ರುಂಡವಿಲ್ಲದ ಶಿಲ್ಪಗಳು ಮತ್ತು ಖಾಲಿಯಾಗಿರುವ  ಅಂಗಳದೊಂದಿಗೆ ಗಮನ ಸೆಳೆಯುವ  ಪಾಳು ಬಿದ್ದ ದೇವಾಲಯವದು. ಒಂದೆಡೆ ಹಕ್ಕಿಗಳು, ಪಾರಿವಾಳದ ಗುಂ[, ಇನ್ನೊಂದೆಡೆ ಮಂಗಗಳ ತುಂಟಾಟ- ಹೇಗೆ ಇದೊಂದು  ಪಕ್ಷಿಧಾಮದಂತೆ ಕಾಣುತ್ತದೆ. ಕೆಲವು ರುಂಡವಿಲ್ಲದ ವಿಗ್ರಹಗಳು ಈಗಲೂ  ಮೈದಳೆದು ಎದ್ದು ಬಂದಂತೆ ತೋರುತ್ತವೆ. ಅವುಗಳ ಬಗ್ಗೆ ಒಂದು ರೀತಿಯ ಗೌರವಭಾವ ಉಂಟಾಗುತ್ತದೆ. ಇಡೀ ವಠಾರವೆಲ್ಲ ಶುಭ್ರವಾಗಿದ್ದು, ಹಕ್ಕಿಗಳ ಚಿಲಿಪಿಲಿ, ಮಂಗಗಳ ಆಟವನ್ನು ನೋಡುತ್ತಾ ಅಲ್ಲಿಯೇ ಕುಳಿತುಕೊಳ್ಳಬಹುದಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಅದೊಂದು ಭಕ್ತಿಭಾವದ ಕೇಂದ್ರವಾಗಿತ್ತು ಎನಿಸುತ್ತದೆ. ಹೂವುಗಳ ಅರ್ಪಣೆ, ಪೂಜೆ-ಪುನಸ್ಕಾರ ಮತ್ತು ಪ್ರಾರ್ಥನೆಗಳೆಲ್ಲ  ಇದೇ ಜಾಗದಲ್ಲಿ ಭಕ್ತರು ನಡೆಸಿದ್ದಾರೆ. ಭಕ್ತರ ಬೇಡಿಕೆಗಳು, ಭಯ-ಭಕ್ತಿ ಮತ್ತವರ ನೋವು-ನಲಿವುಗಳ ವಾತಾವರಣದ ಛಾಯೆ  ಈಗಲೂ ಕಾಣುತ್ತದೆ. ಗರ್ಭಗೃಹ  ತುಂಬ ಹಿಂದೆಯೇ ಬಿದ್ದು ಹೋಗಿದೆ. ಬಿಸಿಲು ಏರುತ್ತಿದ್ದಂತೆ ಮಂಗಗಳು ಅಲ್ಲಿಂದ ಕಾಲ್ಕಿತ್ತವು. ಆದರೆ ಪಾರಿವಾಳಗಳು ಮಾತ್ರ ಪಾಳು ದೇವಾಲಯದ  ಎತ್ತರದ ಗೋಡೆಗಳು, ಬೋದಿಗೆಗಳ  ಅಂಚಿನಲ್ಲಿ ತಮ್ಮ ಗೂಡಿನಲ್ಲಿಯೇ ಇದ್ದವು.
ಈ ಪಾಳು ದೇವಾಲಯ  ಹಳ್ಳಿಗರ ಮತ್ತಷ್ಟು ಹಾಳುಗೇಡಿ ಕೆಲಸಕ್ಕೆ  ಸಿಗಲಾರದಷ್ಟು ದೂರವಿರುವುದರಿಂದ ಒಂದಿಷ್ಟು ಪವಿತ್ರವಾಗಿ ಉಳಿದಿದೆ. ಜನರು ಬರುವುದು ಸಾಧ್ಯವಾಗುತ್ತಿದ್ದರೆ ಇಲ್ಲಿನ ಖಾಲಿತನ ಮಾಯವಾಗಿ ಗದ್ದಲ ತುಂಬಿರುತ್ತಿತ್ತು. ಬಿಂಬಾರಾಧನೆ, ನಂಬಿಕೆ ಮತ್ತು ಸಂಪ್ರದಾಯಗಳಿಂದಾಗಿ ಧರ್ಮವು ಇದೀಗ ಬೂಟಾಟಿಕೆಯಾಗಿ ಹೋಗಿದೆ. ಧರ್ಮವು ತನ್ನಲ್ಲಿದ್ದ ಸತ್ಯಸೌಂದರ್ಯವನ್ನು ಕಳೆದುಕೊಂಡಿದೆ. ವಾಸ್ತವದ ಜಾಗದಲ್ಲಿ ಅಂಧಕಾರ ಆವರಿಸಿದೆ.
ಎದುರಿಗೆ ಕಾಣುವ ಸತ್ಯದ ಬದಲು ಮನಸ್ಸು ಮನುಷ್ಯ ನಿರ್ಮಿಸಬಹುದಾದ  ಕಲ್ಪನೆಗಳಿಂದ  ಅತಿಕ್ರಮಿಸಿದೆ. ಧರ್ಮದ ಏಕಮೇವ ಉದ್ದೇಶ ಎಂದರೆ ಮನುಷ್ಯನ ಸಂ]ರ್ಣ ಬದಲಾವಣೆಯಾಗಿರುತ್ತದೆ. ಆದರೆ ಧರ್ಮದ ಹೆಸರಿನಲ್ಲಿ ಕಸರತ್ತುಗಳೆಲ್ಲ ಗಿರಕಿ ಹೊಡೆಯುತ್ತಿವೆ. ಎಷ್ಟೇ ಸುಂದರವಾಗಿ ನಮ್ಮನ್ನು ಆರ್ಕಸುತ್ತಿದ್ದರೂ ಸತ್ಯಶೋಧನೆ ಎಂಬುದು ಯಾವುದೇ ದೇವಾಲಯ, ಮಸೀದಿ ಅಥವಾ ಚರ್ಚ್‌ಗಳಿಂದ  ಸಾಧ್ಯವಾಗುತ್ತಿಲ್ಲ. ಸತ್ಯದಲ್ಲಿರುವ ಸೌಂದರ್ಯ ಹಾಗೂ ಕಲ್ಲಿನಲ್ಲಿರುವ  ಸೌಂದರ್ಯಗಳು  ಪರಸ್ಪರ ಬೇರೆಯೇ ಆಗಿವೆ.
ಸತ್ಯದಲ್ಲಿನ ಸೌಂದರ್ಯ  ಮನುಷ್ಯನನ್ನು ಅಗಾಧ ಪ್ರಪಂಚಕ್ಕೆ  ಒಯ್ದರೆ ಕಲ್ಲಿನ ಸೌಂದರ್ಯ ಬಂಧನಗಳನ್ನು ಹೇರುತ್ತದೆ. ಮೊದಲನೆಯದು ಸ್ವಾತಂತ್ರ್ಯದ ಕಡೆಗೆ ಒಯ್ದರೆ ಎರಡನೆಯದು ಆಲೋಚನೆಗಳ  ಸಂಕೋಲೆಗಳಲ್ಲಿ  ಸಿಲುಕಿಸುತ್ತದೆ. ವಿಲಾಸ-ಭೋಗ ಹಾಗೂ ಭಾವನಾತ್ಮಕ ಸಂಬಂಧಗಳು  ಧರ್ಮದ ಮೂಲಗುಣವನ್ನೇ  ನಿರಾಕರಿಸುತ್ತವೆ. ಧರ್ಮ ಎಂಬುದು ಬೌದ್ಧಕತೆಯ ಆಟವೂ ಅಲ್ಲ. ನಾವು ಮಾಡುತ್ತಿರುವ ಕ್ರಿಯೆಯ ಬಗ್ಗೆ ನಮಗೆ ತಿಳುವಳಿಕೆ ಇರಬೇಕು ಎಂಬುದು ನಿಜ.  ಆದರೆ ತಿಳಿವಳಿಕೆಯೇ ಮನುಷ್ಯನಲ್ಲಿ ಬದಲಾವಣೆಯನ್ನು ತರಲಾರದು. ತಿಳಿವಳಿಕೆ ಎಂಬುದು ಆಲೋಚನೆಯ ಗೂಡಾಗಿದೆ. ಎಷ್ಟೇ ಸುಧಾರಿಸಿದ ಆಲೋಚನೆ ಎಂದರೂ ಅದೊಂದು ಹಳಸಲು [ನರಾವರ್ತನೆಯಾಗಿರುತ್ತದೆ. ಆಲೋಚನೆ ಮತ್ತು ಆಗಲೇ ತಿಳಿದ ಸಂಗತಿಗಳಿಂದ  ಅಲ್ಲಿ ಸ್ವಾತಂತ್ರ್ಯ ಇರುವುದಿಲ್ಲ.
ಒಣಗುತ್ತಿದ್ದ ಭತ್ತದ ಗದ್ದೆಯ ಹಾಸಿನ ಮೇಲೆ ಉದ್ದನೆಯ ಹಾವೊಂದು  ಬೆಳಗಿನ ಬಿಸಿಲಿಗೆ  ಮೈ ಕಾಯಿಸುತ್ತಿದೆ.  ಕಾಳಜಿ ಇಲ್ಲದೆ ಜಿಗಿದು ಬರುವ ಕಪ್ಪೆಗಳ  ನಿರೀಕ್ಷೆಯಲ್ಲೂ ಇತ್ತು ಎನಿಸುತ್ತದೆ.
ಕಪ್ಪೆಗಳು ರುಚಿಕರ  ಆಹಾರವೆಂದು  ಪರಿಗಣಿಸಿ ಆಗಿನ ದಿನಗಳಲ್ಲಿ ಯುರೋಪ್ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದವು.
ಆ ಉದ್ದನೆಯ ಹಾವು ಹಳದಿಯಾಗಿ  ಭೂಮಿಯ ಬಣ್ಣವನ್ನೇ  ಹೋಲುತ್ತಿತ್ತು. ಭೂಮಿಯ ಮೇಲೆ ಒಮ್ಮೆಲೇ ಇದನ್ನು ಗುರುತಿಸುವುದೇ ಕಷ್ಟವಾಗುತ್ತಿತ್ತಾದರೂ  ಸೂರ್ಯನ ಬಿಸಿಲಿಗೆ ಅದರ ಕಪ್ಪಾದ ಕಣ್ಣುಗಳು ಹೊಳೆಯುತ್ತಿದ್ದವು. ಕಪ್ಪಾದ ಸೀಳು ನಾಲಿಗೆಗಳನ್ನು ಬಿಟ್ಟರೆ ಬೇರೇನೂ ಚಲನೆಯಲ್ಲಿರಲಿಲ್ಲ. ಇದರ ತಲೆಯ ಹಿಂಭಾಗದಲ್ಲೇ ನಿಂತು ಅದನ್ನು ಗಮನಿಸುತ್ತಿರುವ ವ್ಯಕ್ತಿಯ ಬಗ್ಗೆ ಅದಕ್ಕೆ ಅರಿವಿರಲಿಲ್ಲ.
ಅಂದು ಬೆಳಗ್ಗೆ ಎಲ್ಲೆಡೆ ಸಾವು ಆವರಿಸಿದಂತಿತ್ತು. ಆ ಹಳ್ಳಿಯ ಎಲ್ಲೆಡೆಯಿಂದಲೂ ನಿನಗೆ ಸಾವಿನ ಸುದ್ದಿಗಳೇ ಬರುತ್ತಿದ್ದವು.ಬಟ್ಟೆಯಲ್ಲಿ ಸುತ್ತಿದ  ಶವವೊಂದನ್ನು ಹೊತ್ತು ಹೋಗುತ್ತಿದ್ದಾಗ  ಸುತ್ತಲಿನವರ ಆಕ್ರಂದನ, ಗಾಳಿಪಟವೊಂದು ಹಕ್ಕಿಯನ್ನು ಬಡಿದು ಕೆಳಕ್ಕುರುಳಿಸಿದ್ದು, ಪ್ರಾಣಿಯೊಂದರ ಹತ್ಯೆ ಅಲ್ಲದೆ , ಅದರ ಕೊನೆಯ ಆಕ್ರಂದನ ಕೂಡ ನಿನ್ನ ಕಿವಿಯಲ್ಲಿ ಗುನುಗುತ್ತಿತ್ತು. ಹಾಗೆ ಕೆಲವು ದಿನಗಳು ಇದೇ ವಾತಾವರಣ ಮುಂದುವರೆಯಿತು. ನೋವಿನ  ಹಾಗೆ ಸಾವು ಯಾವತ್ತೂಎಲ್ಲಡೆ ಇರುತ್ತದೆ.
ಸತ್ಯದ ಸೌಂದರ್ಯ ಹಾಗೂ ಇದರ ಗೂಢತೆಗಳು ನಂಬಿಕೆ ಹಾಗೂ ಸಿದ್ಧಾಂತಗಳಲ್ಲಿ ಇಲ್ಲ. ಮನುಷ್ಯ ಹುಡುಕುವಲ್ಲಿ 'ಅದು ' ಇರುವುದಿಲ್ಲ. ಯಾಕೆಂದರೆ ಸತ್ಯದ ಸೌಂದರ್ಯಾನ್ವೇಷಣೆಗೆ  ಮಾರ್ಗ ಎಂಬುದೇ ಇಲ್ಲ. ಅದೊಂದು ನಿರ್ದಿಷ್ಟ ಕೇಂದ್ರಬಿಂದುವಾಗಿರುವುದಿಲ್ಲ. ಸ್ವರ್ಗದಂಥ ರಕ್ಷಣಾ ಕವಚದಲ್ಲೂ ಇರುವುದಿಲ್ಲ. ಅದಕ್ಕೆ ಅದರದ್ದೇ ಆದ ಸೂಕ್ಷ್ಮತೆ ಇದ್ದು ಅದನ್ನು ಅಳೆದು ತೂಗಿ ಹೇಳುವುದು ಸಾಧ್ಯವಿಲ್ಲ. ಅದರಲ್ಲಿನ ಪ್ರೇಮವನ್ನು ಅಳೆಯುವುದಾಗಲಿ , ಹಿಡಿದಿಟ್ಟು ಅನುಭವಿಸುವುದಾಗಲಿ ಸಾಧ್ಯವಿಲ್ಲ. ಬಳಸಿ ಒಗೆಯುವುದಕ್ಕೆ ಮಾರುಕಟ್ಟೆ ವಸ್ತುವೂ ಇದಲ್ಲ; ಯಾವಾಗ ಮನಸ್ಸು ಹಾಗೂ ಹೃದಯಗಳು  ಆಲೋಚನೆಗಳು ಸೃಷ್ಟಿಸುವ  ವಸ್ತುಗಳಿಂದ ಖಾಲಿಯಾಗುತ್ತವೋ  ಆವಾಗ ಪ್ರೇಮ ಉಂಟಾಗುತ್ತದೆ. ಸನ್ಯಾಸಿ ಅಥವಾ ಬಡವನಿಗೆ ಇದು ಸಿಗುತ್ತದೆ ಎಂದಲ್ಲ. ಶ್ರೀಮಂತ ಅಥವಾ ಬುದ್ಧಿಜೀವಿ  ಅಥವಾ ಭಾಗ್ಯವಂತರು  ಇದನ್ನು ಮುಟ್ಟುವುದಕ್ಕಾಗದು. ಯಾವಾತ ತನಗೆ ಇದೆಲ್ಲ ತಿಳಿದಿದೆ ಎನ್ನುತ್ತಾನೋ ಆತ ಅದರ ಹತ್ತಿರವೂ ಸುಳಿದಿರುವುದಿಲ್ಲ.ಇಲ್ಲಿಯೇ ಬದುಕುತ್ತಿದ್ದರೂ ಈ ಜಗತ್ತಿನಿಂದ ದೂರ ಹೋಗುವುದನ್ನುಕಲಿತುಕೊಳ್ಳಬೇಕು.
ಅಂದು ಬೆಳಿಗ್ಗೆ ಹುಣಸೆ ಮರದಲ್ಲಿ ಪಾರಿವಾಳಗಳು ಪರಸ್ಪರ ಕಿರುಚಾಡುತ್ತ ಕಚ್ಚಾಡುತ್ತಿದ್ದವು. ಇಂದೇಕೋ ಎಂದಿನ ರೀತಿಯಲ್ಲಿ ಅವು  ಕಾಣುತ್ತಿರಲಿಲ್ಲ. ಅವುಗಳಲ್ಲಿ ತರಾತುರಿ, ಧಾವಂತ, ಗದ್ದಲಕಾಣುತ್ತಿತ್ತು. ಅವುಗಳ ಕೊಕ್ಕು  ಒಂದಿಷ್ಟು ಕೆಂ[ ಹಸುರಿನಿಂದ  ಕೂಡಿದ್ದರೆ, ಮೈಮಾಟ ಅಚ್ಚಾಗಿವೆ. ವಿಶೇಷ ಎಂದರೆ ಅವು ಎಂದಿಗೂ ನೇರವಾಗಿ ಹಾರುವುದಿಲ್ಲ. ಅತ್ತ ಇತ್ತ ಹಾರುವುದೇ ಅವುಗಳ ರೂಡಿ. ಕೆಲ ಬಾರಿ ವರಾಂಡಾದ ಎತ್ತರದ ಗೋಡೆಯಲ್ಲಿಯೂ  ಬಂದು ಕುಳಿತುಕೊಳ್ಳುತ್ತಿದ್ದವು. ನೀನು ಅವುಗಳನ್ನು ಆಗ ಗಮನಿಸಬಹುದಾಗಿತ್ತಾದರೂ  ಅವು ಹೆಚ್ಚು ಹೊತ್ತು ಅಲ್ಲಿರದೇ ಬಡಬಡ ಮಾಡುತ್ತಾ ಹಾರಾಟ ಶುರು ಮಾಡುತ್ತಿದ್ದವು.ಅವುಗಳ ಏಕೈಕ ವೈರಿ ಎಂದರೆ ಮನುಷ್ಯ .ಆತ ವೈರಿ ಯಾಕೆಂದರೆ  ಅವುಗಳನ್ನು  ಪಂಜರದಲ್ಲಿ ಕೂಡಿ ಹಾಕುತ್ತಾನೆ.


ಸೆಪ್ಟೆಂಬರ್ 28, 1973

ಕಪ್ಪನೆಯ ದಡೂತಿ ನಾಯಿಯೊಂದು  ಆಗಷ್ಟೇ  ಆಡೊಂದನ್ನು ಕೊಂದು ಹಾಕಿತ್ತು. ನಾಯಿಯನ್ನುಸರಿಯಾಗಿ ಥಳಿಸಿ  ಕಟ್ಟಿಹಾಕಲಾಗಿತ್ತಾದರೂ, ಬಾಯಲ್ಲಿ ನೀರೂರಿಸಿಕೊಂಡು ಏದುಸಿರು ಬಿಡುತ್ತಿತ್ತು. ಮನೆಯ ಸುತ್ತಲೂ ಎತ್ತರದ ಪೌಳಿ ಇದ್ದರೂ ಹೇಗೋ ಆಡು ಒಳಕ್ಕೆ ನುಗ್ಗಿ ನಾಯಿಯ ಆಕ್ರಮಣಕ್ಕೆ ತುತ್ತಾಗಿತ್ತು.  ಮನೆಯ ಮಾಲಕರು  ಆದ ಅವಘಡವನ್ನು ಸರಿಪಡಿಸಲು  ಪರದಾಡುತ್ತಿದ್ದರು.  ಮನೆಯ ಸುತ್ತಲೂ  ಮರಗಳಿದ್ದು ಲಾನ್‌ಗಳನ್ನು ಹಾಸಿರುವ ದೊಡ್ಡದಾದ ಬಂಗಲೆ ಅದು. ಸಾಕಷ್ಟು ಬಾರಿ ನೀರುಣಿಸಿದ್ದರೂ ಕೆಲವೆಡೆ ಹುಲ್ಲು ಸರಿಯಾಗಿ ಬೆಳೆಯುತ್ತಿರಲಿಲ್ಲ. ಆ ಭಾಗದಲ್ಲಿ ಸೂರ್ಯನ ಝಳ ತೀವ್ರವಾಗಿದ್ದರಿಂದ  ದಿನಕ್ಕೆ ಎರಡೆರಡು ಬಾರಿ ನೀರುಣಿಸಬೇಕಾಗಿ ತ್ತು. ಅಲ್ಲಿನ ಮಣ್ಣಿನಲ್ಲಿ ಹೆಚ್ಚಿನ ಜೀವಸೆಲೆ  ಇಲ್ಲದ ಕಾರಣ  ತೋಟದಲ್ಲಿ ಹಸಿರು ಸೋರಿ ಹೋಗುತ್ತಿತ್ತು. ಆದರೆ ಮರಗಳು ಮಾತ್ರ ಹುಲುಸಾಗಿ ಬೆಳೆದಿದ್ದವು. ಬೆಳಗಿನ ಹೊತ್ತು ಸೂರ್ಯ ಮೇಲೇರುವ ಮೊದಲು  ನೆರಳಲ್ಲಿ ಖಷಿಯಾಗಿ ಕುಳಿತುಕೊಳ್ಳಬಹುದಿತ್ತು. ನೀವು ನಿಮ್ಮಷ್ಟಕ್ಕೆ ಕುಳಿತು  ಧ್ಯಾನದಲ್ಲಿ  ತಲ್ಲೀನರಾಗುವುದಕ್ಕೆ  ಇದೊಂದು ಅತ್ಯುತ್ತಮ ಸ್ಥಳವಾಗಿತ್ತು. ಆದರೆ ಹಗಲುಗನಸು , ಉಲ್ಲಾಸದ  ಕನಸುಗಳಿಂದ  ಕಾಲಹರಣ ಮಾಡುವುದು ಇಲ್ಲಿ ಸಾಧ್ಯವಿರಲಿಲ್ಲ. ಇಲ್ಲಿ ನೆರಳಿಗೆ ಒಂದು ತೀವ್ರತೆ ಇದೆ, ನಿಮ್ಮನ್ನುಸೆಳೆದುಕೊಳ್ಳುವ ವಾತಾವರಣ ಅಥವಾ  ಧ್ಯಾನಿಸುವುದಕ್ಕೆ  ಯುಕ್ತವಾದ ಸ್ಥಳ ಅದು. ಆರಂಭಿಕವಾಗಿ 'ನೀನು' ಗೆಳೆಯರೊಂದಿಗೆ  ಹರಟಬಹುದಾಗಿದ್ದರೂ ನಂತರ ಅದೇ  ಮೂಡು  ಮುಂದುವರಿಯುತ್ತಲೇ ಇರಲಿಲ್ಲ.
ಪತ್ನಿ ಈಗಷ್ಟೇ ಸತ್ತು ಹೋಗಿದ್ದಾಳೆ.  ಆತ ತಲೆಯ ಮೇಲೊಂದು ವಸ್ತ್ರವನ್ನು ಹಾಕಿಕೊಂಡು ಅಳುತ್ತಿದ್ದ. ಅಷ್ಟಾದರೂ ಆತ ತನ್ನ ಅಳುವನ್ನು ಮಕ್ಕಳೆದುರು ತೋರಿಸಿಕೊಳ್ಳುತ್ತಿರಲಿಲ್ಲ. ಮಕ್ಕಳೂ ಅಳುತ್ತಿದ್ದರಾದರೂ ಅವರಿಗೆ ಇದೆಲ್ಲ ಏನು ಎಂದು ತಿಳಿದಂತಿರಲಿಲ್ಲ. ಅವರು ತಮ್ಮ ಮುಗ್ಧತೆಯಲ್ಲೇ ಸಾವನ್ನು ನೋಡುತ್ತಿದ್ದಾರೆ.  ಸಾಕಷ್ಟು ಮಕ್ಕಳನ್ನು ಹೆತ್ತ ತಾಯಿ ಅಂತಿಮವಾಗಿ  ತೀವ್ರ ಖಾಯಿಲೆಗೆ ಬಿದ್ದುಹೀಗಾಗಿದ್ದಳು; ತಂದೆ ಆಕೆಯ ಹಾಸಿಗೆ ಪಕ್ಕದಲ್ಲಿ ಕುಳಿತಿದ್ದಾರೆ. ಸೌಖ್ಯ ಇಲ್ಲದಾಗ  ತಂದೆ ಹೊರಗೆಲ್ಲೂ ಹೋಗುತ್ತಿರಲಿಲ್ಲ. ಆದರೆ ಕೊನೆಗೂ ಹೀಗಾದ ನಂತರ ಕೆಲವು ಶಾಸ್ತ್ರವನ್ನು ನರವೇರಿಸಿ ತಾಯಿಯನ್ನುಮನೆಯಿಂದ ಹೊರಕ್ಕೆ ಹೊತ್ತು ಹೋಗಲಾಯಿತು. ಈ ಘಟನೆಯಿಂದ ಮನೆಯಲ್ಲಿ ಅದೊಂದು ರೀತಿಯ ಖಾಲಿತನ  ಉಂಟಾಗಿದೆ.  ಮನೆಯಲ್ಲಿ ತಾುಯಿಂದಾಗಿ ತುಂಬಿದ್ದ ಒಂದು ರೀತಿಯ ಜೈವಿಕ ಸುಗಂಧವೇ  ಹೊರಟು ಹೋಯಿತು. ಇಷ್ಟು ವಿಷಯ  ಮಕ್ಕಳಿಗೆ ತಿಳಿದಿದೆ. ನಂತರದ ದಿನಗಳಲ್ಲಿ  ವಿಷಾದವೇ ತುಂಬಿ ಹೋಗಿದ್ದರಿಂದ  ಆ ಮನೆಗೆ ಮೊದಲಿನ ಜೀವಕಳೆ ಬರಲೇ ಇಲ್ಲ. ಇದು ತಂದೆಗೆ ಅರ್ಥವಾಗುತ್ತಿತ್ತು. ಮಕ್ಕಳು ಇನ್ನೆಂದೂ ಸಿಗದ ಒಂದು ಮಮತೆಯನ್ನು  ಕಳೆದುಕೊಂಡಿದ್ದರು. ಅಷ್ಟಾದರೂ ಆಕ್ರಂದನದಲ್ಲಿದ್ದಮಕ್ಕಳಿಗೆ ತಾಯಿಯ ಸಾವಿನ ನಿಜ ಅರ್ಥ ತಿಳಿದೇ ಇರಲಿಲ್ಲ. ಇದೆಲ್ಲ ಯಾಕಾಗಿ ಹೀಗೆ  ಎಂಬುದೇ ಗೊತ್ತಾಗುತ್ತಿರಲಿಲ್ಲ. ಜಗತ್ತಿನಲ್ಲಿ ಆವರಿಸಿರುವ ವಿಷಾದದ ಅವರಿಗೆ ಏನೊಂದೂ ಅರ್ಥವಾಗುತ್ತಿರಲಿಲ್ಲ.
ಆದರೆ ವಿಷಾದ ಎಂದೆಂದಿಗೂ ಇದ್ದೇ ಇರುತ್ತದೆ. ನಿಮಗೆ ಇದರಿಂದ ವಿದಾಯ ಸಾಧ್ಯವಾಗುವುದಿಲ್ಲ. ಯಾವುದೋ ಮನರಂಜನೆುಂದಲೂ ಇದನ್ನೆಲ್ಲ  ಮುಚ್ಚಿಡುವುದು ಸಾಧ್ಯವಿಲ್ಲ. ಧಾರ್ಮಿಕ ಮನರಂಜನೆ ಕೂಡ ಶೋಕ, ವಿಷಾದದಿಂದ ನಮ್ಮನ್ನು ಪಾರು ಮಾಡುವುದಿಲ್ಲ. ನೀವು ಅದರಿಂದ  ಓಡಿ ಹೋಗಬಹುದು. ಆದರೆ ಮರುಕ್ಷಣದಲ್ಲಿ  ನಿಮ್ಮನ್ನು ಅದು ಹಿಡಿದಿರುತ್ತದೆ. ನೀವು ಪ್ರಾರ್ಥನೆಯಲ್ಲೋ, ]ಜೆಯಲ್ಲೋ ನಿಮ್ಮನ್ನು, ನಿಮ್ಮನೋವನ್ನುನೀವು ಮುಚ್ಚಿಕೊಂಡಿರಬಹುದು.. ಮತ್ತೆ ಇದು ಯಥಾವತ್ತಾಗಿ  ನಿಮ್ಮನ್ನು ಆವರಿಸುತ್ತದೆ. ಅತಿಯಾದ ನೋವುಂಡು  ಕೆಲವರು   ಕಹಿಗುಣದಲ್ಲಿ, ವಿಕೃತಿಯಲ್ಲಿ  ಅಭಿವ್ಯಕ್ತಿಗೊಳ್ಳುತ್ತಾರೆ. ವರಟರು, ಸೈನಿಕರು ಅಥವಾ ಮನೋರೋಗಿಗಳಂತೆಯೂ  ವರ್ತಿಸುತ್ತಿರುತ್ತಾರೆ. ಮೇಲ್ನೋಟದಲ್ಲಿ ನೀವು ಧೈರ್ಯವಂತರಾಗಿ, ಸುಖಿಗಳಂತೆ ಅಭಿನಯಿಸುವುದು, ಆಕ್ರಮಣ ಶೀಲರಂತೆ, ಹಿಂಸಾಚಾರಿಗಳಂತೆ ಇರಬಹುದು.. ಬಹಿರ್ಮುಖಿಗಳಾಗಿ ವರ್ತಿಸುತ್ತಿದ್ದರೂ ವಿಷಾದ ಒಳಗೆ ಇದ್ದಿರುತ್ತದೆ. ನಿಮ್ಮಲ್ಲಿ ಅಧಿಕಾರ ಇದ್ದೀತು, ಸ್ಥಾನ ಇದ್ದೀತು, ಹಣದ ಸುಖವೂ ಇರಬಹುದು. ಆದರೆ ವಿಷಾದ ವು ನಿಮ್ಮ ಹೃದಯದಲ್ಲಿ ಸಿದ್ಧ ಸ್ಥಿತಿಯಲ್ಲಿ ಕಾಯುತ್ತಿರುತ್ತದೆ. ಏನೇ ಮಾಡಿದರೂ  ನೀವು  ಇದರಿಂದ ಪಲಾಯನ ಮಾಡುವುದು ಸಾಧ್ಯವಿಲ್ಲ. ನೀವು ಯಾವುದನ್ನು ಪ್ರೇಮ ಎಂದುಕೊಂಡಿರುತ್ತೀರೋ ಕೊನೆಗೆ ಅದು ವಿಷಾದಲ್ಲಿಪರ್ಯಾವಸಾನಗೊಂಡಿರುತ್ತದೆ.  ವಿಷಾದ ಎಂದರೆ ಮತ್ತೇನಲ್ಲ, ಕಾಲ, ನಿಮ್ಮೊಳಗಿನ ಆಲೋಚನೆಯ ಜಾಲ.
ಮರವನ್ನು ಕತ್ತರಿಸಿದಾಗ ನೀವು ಒಂದು ಹನಿ ಕಣ್ಣೀರು ಹಾಕಬಹುದು.. ನಿಮ್ಮ ರುಚಿಗಾಗಿ ಪ್ರಾಣಿಗಳನ್ನು ಕೊಲ್ಲುತ್ತೀರಿ. ನಿಮ್ಮ ಸುಖಕ್ಕಾಗಿ  ಪರಿಸರವನ್ನು ಹಾಳುಗೆಡಹುತ್ತೀರಿ. ಇನ್ನೊಬ್ಬರನ್ನು ಹಾಳು ಮಾಡುವ ಕೊಲ್ಲುವ ಉದ್ದೇಶದಿಂದ ನಿಮಗೆ ತರಬೇತಿ, ಶಿಕ್ಷಣ ಕೊಡಲಾಗುತ್ತದೆ. ಹೊಸ ತಂತ್ರಜ್ಞಾನ , ಮನುಷ್ಯ  ಶ್ರಮವನ್ನು ಕಡಿಮೆ ಮಾಡಿದ್ದಿರಬಹುದು. ಆದರೆ ಆತನ ಆಳದಲ್ಲಿ  ಆಲೋಚನೆಗಳಿಂದಾದ  ವಿಷಾದದ ಹುತ್ತವನ್ನು ನಿವಾರಿಸುವುದು ಸಾಧ್ಯವಾಗಿಲ್ಲ.
ಪ್ರೇಮ ಎಂಬುದು ಸುಖವಲ್ಲ.
ಆಕೆ ವಿಷಾದಯೋಗದಲ್ಲಿ ಹತಾಶಳಾಗಿ ಬಂದಿದ್ದಳು. ತನಗಾದ ನೋವನ್ನೆಲ್ಲ ಆಕೆ  ತೋಡಿಕೊಳ್ಳುತ್ತಿದ್ದಳು. ಸಾವು, ಆಕೆಯ ಮಕ್ಕಳ  ಮೌಢ್ಯ, ಅವರ ರಾಜಕಾರಣ, ವಿಚ್ಛೇದನ,  ಕಹಿ ಅನುಭವ, ಒಟ್ಟಾರೆ ಅರ್ಥವೇ ಇಲ್ಲದಂತಿರುವ  ಜೀವನದ ಜಂಜಾಟ.. ಏನೊಂದನ್ನೂ ಬಿಡದೆ ಹೇಳಿಕೊಂಡಳು. ಇದೀಗ ಆಕೆ ಸಣ್ಣವಳೇನೂ ಆಗಿರಲಿಲ್ಲ. ಆಕೆಯ ಗಂಡ ತೀರಿಕೊಂಡಿದ್ದಾರೆ. ಆಕೆ ವಾಣಿಜ್ಯ ಶಾಸ್ತ್ರದಲ್ಲಿ ಪದವೀಧರೆ. ಎಲ್ಲರಂತೆಯೇ ಆಕೆಯ ಜೀವನ ಆರಂಭವಾದರೂ ಈ ಪರಿಗೆ ಬಂದು ತಲುಪಿದ್ದಾಳೆ.. ಏನೆಲ್ಲ ಕಷ್ಟಕೋಟಲೆಗಳು ಇವಳನ್ನು ಆವರಿಸಿವೆ. ಮಾತನಾಡುತ್ತಾ ಹೋದಂತೆ ಕೊನೆಗೆ ಆಕೆ ಶಾಂತವಾದಳು.
ತಲೆಯಲ್ಲಿಸಣ್ಣದಾದ ಆಲೋಚನೆ ಕುಲುಕಾಡಿದರೂ ಆಳದಲ್ಲಿರುವ ವಿಷಾದದ ಬೇರುಗಳು ನೋವನ್ನು ಸೃವಿಸತೊಡಗುತ್ತವೆ.. ಆಲೋಚನೆ, ಅದರೊಂದಿಗಿನ ನೆನಪಿನ ಜಾಲ, ಒಂದನ್ನೊಂದು ಹೆಣೆದಿರುವ  ಸುಖ ದುಃಖಗಳ ಜೋಡಣೆಗಳು ಸೇರಿಕೊಳುಳುತ್ತ ಹೋಗುತ್ತವೆ. ಏಕಾಂಗಿತನ , ಕಣ್ಣೀರು ಆತ್ಮ ಕರುಣೆಗಳೆಲ್ಲ ನೋವಿನ ತಳದಲ್ಲಿ ಹೆಪ್ಪುಗಟ್ಟಿರುತ್ತದೆ.
ಶೋಕ ಅಥವಾ ವಿಷಾದ ಉಂಟಾದಾಗ ಸುಮ್ಮನೆ ಅದನ್ನು ಕೇಳಿಸಿಕೊಳ್ಳಿ. ಅದರೊಂದಿಗೆ ಬರುವ ಭೂತಕಾಲದ  ಪ್ರತಿಧ್ವನಿಯನ್ನಲ್ಲ. ಶೋಕದಿಂದ  ಹೊರಬರುವುದು ಹೇಗೆ ಅಥವಾ ಇದನ್ನು ಗೆಲ್ಲುವ ಪರಿ ಎಂತು ಎಂಬ ಉದ್ದೇಶ ಬೇಡ. ಶೋಕವನ್ನು ಸಂ]ರ್ಣ ಹೃದಯವಿಟ್ಟು ಆಲಿಸಿ. ಇದೀಗ ಏನು ಹೇಳಲ್ಪಡುತ್ತಿದೆ  ಎಂಬುದನ್ನು ನೀವು ಸಂ]ರ್ಣ  ಮನಸ್ಕರಾಗಿ ಕೇಳಿ. ನಿಮ್ಮ ಅವಲಂಬನೆ , ಭಾವನಾತ್ಮಕ ಹೊಂದಾಣಿಕೆಗಳು  ಶೋಕಕ್ಕೆ ಪೀಠಿಕೆಯಾಗಿರುತ್ತವೆ. ನೀವು ನಿಮ್ಮನ್ನು ಗಮನಿಸುವ , ನಿಮ್ಮ ಚಲನವಲನವನ್ನು  ವೀಕ್ಷಿಸಿಕೊಳ್ಳುವ ಗುಣದ ಕೊರತೆ ನಿಮ್ಮ ಶೋಕವನ್ನು, ವಿಷಾದವನ್ನು ಇನ್ನಷ್ಟು  ಬಲಗೊಳಿಸುತ್ತದೆ. ನಿಮ್ಮ ಸ್ವಾರ್ಥ ಕೇಂದ್ರಿತ ಕ್ರಿಯೆಗಳಿಂದಾಗಿ  ವಿಷಾದ ಹುಟ್ಟಿಕೊಳ್ಳುತ್ತಿರುತ್ತದೆ. ಸತ್ಯ ಹೀಗಿರುವುದರಿಂದ  ವಿಷಾದ ಅಥವಾ ಶೋಕದ ಆ ಹೊತ್ತಿನಲ್ಲಿ ಸತ್ಯ ಸಂಗತಿ ಏನು ಎಂಬುದನ್ನು  ಗಮನವಿಟ್ಟು ಕೇಳಿ. ವಿಚಲಿತರಾಗದೆ ಅದರಲ್ಲೇ ಗಮನ ಕೇಂದ್ರೀಕರಿಸಬೇಕು. ಆ ಹೊತ್ತಿನಲ್ಲಿ  ಆಲೋಚನೆಯ ಏನೊಂದು ಸೆಳಕು ಇದ್ದರೂ ಅದರ ಪರಿಣಾಮವಾಗಿ  ಶೋಕ ಮತ್ತಷ್ಟು ಹೆಚ್ಚುವುದು. ಆಲೋಚನೆಯು ಪ್ರೇಮವಲ್ಲ. ಪ್ರೇಮಕ್ಕೆ ಶೋಕ ಇರುವುದಿಲ್ಲ.


ಸೆಪ್ಟೆಂಬರ್ 29, 1973
ಆ ವರ್ಷದ ಮಳೆಗಾಲ ಮುಕ್ತಾಯದ ಹಂತಕ್ಕೆ ಬಂದಿತ್ತು. ಅಂದು ಕ್ಷಿತಿಜದಲ್ಲಿ ಬಂಗಾರ ಹಾಗೂ ಬೆಳ್ಳಿ ಬಣ್ಣದ  ಮೋಡದ ಅಲೆಗಳು ತೇಲುತ್ತಿದ್ದವು. ನೀಲಿ ಹಾಗೂ ಹಸಿರು ಬಣ್ಣದ ಆಕಾಶಕ್ಕೆ  ಮೋಡಗಳನ್ನು ಚಿಮ್ಮಿಸಿದಂತೆ ಭಾಸವಾಗುತ್ತಿತ್ತು. ಪೊದೆಗಳ  ಎಲೆಯನ್ನೆಲ್ಲ  ಮಳೆ  ತೊಳೆದ  ಕಾರಣ ಅವು ಬೆಳಗಿನ  ಬಿಸಿಲಿಗೆ  ಮಿಂಚುತ್ತಿವೆ. ಅದೊಂದು ಸುಂದರ  ಬೆಳಗು. ಭೂಮಿ ಸಂತಸದಿಂದ  ನಲಿಯುತ್ತಿತ್ತು. ವಾತಾವರಣದಲ್ಲಿ  ಸ್ವಸ್ತಿವಾಚನ ಪ್ರತಿಧ್ವನಿಸುತ್ತಿತ್ತು. ನೀಲಿ ಸಮುದ್ರಕ್ಕೆ ನದಿಯೊಂದು ಸೇರುವ  ದೃಶ್ಯ. ದಡದಲ್ಲಿ ತಾಳೆ ಹಾಗೂ ಮಾವಿನಮರದ ತೋ[ಗಳನ್ನು  ಕಟ್ಟಡದ ಮೇಲಂತಸ್ತಿನ  ಕೊಠಡಿಯಲ್ಲಿ  ಕುಳಿತು 'ನೀನು' ನೋಡಿದ್ದೆ. ಭೂಮಿಯ ಅದ್ಭುತ ಸೌಂದರ್ಯ, ಮೋಡಗಳು  ತಾಳುತ್ತಿದ್ದ ಚಿತ್ರವಿಚಿತ್ರಆಕಾರಗಳನ್ನು  ನೋಡುತ್ತ 'ನಿನಗೆ' ಆಶ್ಚರ್ಯವಾಗುತ್ತಿತ್ತು. ಅದು ನಸುಕಿನ ಜಾವವಾಗಿದ್ದರಿಂದ  ದಿನದ ಯಾವೊಂದು ಜಂಜಡ ಗದ್ದಲಗಳೂ ಇನ್ನೂಸುಳಿದಿರಲಿಲ್ಲ. ದೂರದಲ್ಲಿ ಕಾಣುವ  ಸೇತುವೆಯ ಮೇಲೆ  ವಾಹನಗಳೇನೂ ಕಾಣುತ್ತಿರಲಿಲ್ಲ. ಹುಲ್ಲಿನ ಮೇದೆಯನ್ನುಹೇರಿಕೊಂಡು ಬರುತ್ತಿದ್ದಸಾಲು ಸಾಲು ಚಕ್ಕಡಿ ಗಾಡಿಗಳು  ಮಾತ್ರ ಕಾಣುತ್ತಿದ್ದವು. ಬಹಳ ವರ್ಷಗಳ ನಂತರ  ಈ ಮಾರ್ಗದಲ್ಲಿ ಧಾವಿಸತೊಡಗಿದ ಬಸ್ಸುಗಳು ಗದ್ದಲ  ಎಬ್ಬಿಸಿ ಮೂಲ ಸೌಂದರ್ಯವನ್ನೇ ನಾಶ ಮಾಡಿದ್ದು ಬೇರೆ ವಿಷಯ.
ಹದಿನೈದಕ್ಕೂ  ಹೆಚ್ಚು ವರ್ಷಗಳಿಂದ   ನೋಡದ ತಂದೆಯ ದರ್ಶನಕ್ಕಾಗಿ  ಇಬ್ಬರು ಸಹೋದರರು  ಕಾರಿನಲ್ಲಿ ಸಮೀಪದ ಹಳ್ಳಿಗೆ ಹೊರಟಿದ್ದರು. ನಂತರ ಕಾಲುಹಾದಿಯಲ್ಲಿನಡೆದು  ತಾವು ಹುಟ್ಟಿದ ಮನೆ ಸಮೀಪ ತಲುಪಿದ್ದರು. ಅಲ್ಲೊಂದು ಕಲ್ಲಿನ ಮೆಟ್ಟಿಲುಗಳುಳ್ಳ ಕೆರೆ. ಶುದ್ಧ ನೀರಿಗಾಗಿ  ಮೆಟ್ಟಿಲುಗಳನ್ನು ಇಳಿದುಕೊಂಡು ಹೋಗಬೇಕು. ಕೆರೆಯ ಒಂದು ತುದಿಯಲ್ಲಿ  ಸಣ್ಣಚಚ್ಚೌಕಾಕಾರದ ಒಂದು ಗುಡಿ. ಗುಡಿಯ ಕೆಳಾರ್ಧದಲ್ಲಿಒಳ ಪ್ರವೇಶದ ಅವಕಾಶ ಇದ್ದರೂ ಮೇಲ್ಭಾಗದಲ್ಲಿ ತೀರಾ ಇಕ್ಕಟ್ಟು. ಸುತ್ತಲೂ ಕಲ್ಲಿನ ವಿವಿಧ  ಪ್ರತಿಮೆಗಳು . ಗುಡಿಯ ವರಾಂಡಾದಲ್ಲಿ ಒಂದಿಷ್ಟು ಜನರು  ಕೆರೆಯನ್ನು ನೋಡುತ್ತಾ ಪ್ರತಿಮೆಗಳಂತೆ ಧ್ಯಾನಾಸಕ್ತರಾಗಿ  ಕುಳಿತಿದ್ದರು. ಕೆರೆಯಿಂದ ಆಚೆಗೆ ಕೆಲವು ಮನೆಗಳಿವೆ. ಅವುಗಳ ಪೈಕಿ ಒಂದರಲ್ಲಿ ಸಹೋದರರ  ತಂದೆ  ವಾಸಿಸುತ್ತಿದ್ದರು. ಮನೆಯ ಬಳಿ ಹೋದಾಗ ತಂದೆ ಹೊರ ಬರುತ್ತಾರೆ. ತಂದೆ ಎದುರು ಬಗ್ಗಿ ಅವರ ಕಾಲನ್ನು ಮುಟ್ಟಿ ಸಹೋದರರು ನಮಸ್ಕರಿಸುತ್ತಾರೆ. ಮಕ್ಕಳಿಗೆ ನಾಚಿಕೆ. ರೂಡಿಯಂತೆ ತಂದೆಯೇ ಮಾತಾಡಲಿ ಎಂದು ಕಾಯುತ್ತಿದ್ದಾರೆ. ಯಾವೊಂದು ಮಾತನಾಡುವ ಮೊದಲು  ಹುಡುಗರು ಮುಟ್ಟಿದ ಕಾಲನ್ನು ತೊಳೆಯುವುದಕ್ಕೆ  ತಂದೆ ಮನೆಯೊಳಕ್ಕೆ ಹೋಗಿದ್ದರು. ಅವರೊಬ್ಬ ಕರ್ಮಠ ಬ್ರಾಹ್ಮಣರಾಗಿದ್ದರಿಂದ  ಇನ್ನೊಬ್ಬ ಬ್ರಾಹ್ಮಣರಲ್ಲದೆ ಬೇರಾರು ಅವರನ್ನು ಮುಟ್ಟುವಂತಿರಲಿಲ್ಲ. ಅವರ ಮಕ್ಕಳು ಹಲವು ವರ್ಷದಿಂದ  ಬೇರೆಯವರ ಜೊತೆಗೆ ಬದುಕುತ್ತಿದ್ದವರು, ಬ್ರಾಹ್ಮಣೇತರರು ಸಿದ್ಧಪಡಿಸಿದ  ಆಹಾರ ಸ್ವೀಕರಿಸಿದ್ದಾರೆ, ಆದ್ದರಿಂದ  ಅಪವಿತ್ರರಾಗಿದ್ದಾರೆ ಎಂದೇ ತಂದೆಯ ಭಾವನೆ. ಕೆಲವು ಹೊತ್ತು ಅವರು ಮಾತನಾಡಿದರು. ಇನ್ನೇನು ಊಟದ ಹೊತ್ತು ಬರುತ್ತದೆ. ತಂದೆಯ ದೃಷ್ಟಿಯಲ್ಲಿ  ಮಕ್ಕಳು ಬ್ರಾಹ್ಮಣರಾಗಿ  ಉಳಿದಿರಲಿಲ್ಲ. ಅದಕ್ಕಾಗಿ ಅವರೊಂದಿಗೆ ಊಟ ಸಾಧ್ಯವಾಗದೆ ಹೊರಕ್ಕೆ ಕಳುಹಿಸುತ್ತಾರೆ. ಹಾಗೆಂದು ತನ್ನ ಮಕ್ಕಳು, ಎಷ್ಟೋ ವರ್ಷದ ತರುವಾಯ ಬಂದಿದ್ದಾರೆ ಎಂಬ ವಾತ್ಸಲ್ಯ  ಎಲ್ಲಿ ಹೋಗುತ್ತದೆ.. ಒಂದು ವೇಳೆ ಅವರ ತಾಯಿ ಇದ್ದಿದ್ದರೆ ಮಕ್ಕಳಿಗೆ ಊಟ ಕೊಡದೆ ಕಳುಹಿಸುತ್ತಿರಲಿಲ್ಲವೇನೋ? ಆದರೆ  ಆಕೆಯೂ ಅವರೊಂದಿಗೆ ಸಹಭೋಜನ ಮಾಡುತ್ತಿರಲಿಲ್ಲ. ಪಾಲಕರಿಗೆ ಮಕ್ಕಳ ಬಗ್ಗೆ  ವಾತ್ಸಲ್ಯ ಆಳವಾಗಿಯೇ ಇತ್ತಾದರೂ ಸಂಪ್ರದಾಯವೂ ಅವರನ್ನು ಸ್ಪರ್ಶ ಮಾಡುವುದಕ್ಕೆ  ಮಧ್ಯೆ ದೊಡ್ಡ ಅಡಚಣೆಯಾಗಿತ್ತು. ಮಕ್ಕಳೊಂದಿಗಿನ ಸಾಮಿಪ್ಯಕ್ಕೆ ಅವಕಾಶವನ್ನು ನೀಡುತ್ತಿರಲಿಲ್ಲ.  ಸಂಪ್ರದಾಯವು ಇಲ್ಲಿ ದೊಡ್ಡ ಗೋಡೆಯಾಗಿದ್ದು, ಪ್ರೀತಿಯನ್ನು ನುಂಗಿ ಹಾಕುವಷ್ಟು ಬಲವಾಗಿದೆ. ತ್ತಿನಲ್ಲಿ ಯುದ್ಧಗಳು ನಿರ್ಮಿಸಿದ ಸಂಪ್ರದಾಯ ಕೂಡ  ಹಾಗೆಯೇ. ಸೌಹಾರ್ದತೆ ಪ್ರೀತಿಗಿಂತ ಬಲವಾಗಿ ವ್ಯಾಪಿಸಿದೆ. ಆಹಾರಕ್ಕಾಗಿ ಕೊಲ್ಲುವುದು , ವೈರಿ ಎನ್ನಲಾದವರನ್ನು ಸಂಹರಿಸುವುದು ಮಾನವ ಸಂವೇದನೆ ಹಾಗೂ ಪ್ರೀತಿಯನ್ನೇ ಧ್ವಂಸ ಮಾಡುತ್ತವೆ.
ಬಹು ಹೊತ್ತಿನ ಶ್ರಮವು ಕೌಶಲ್ಯದ ಕ್ರೌರ್ಯವನ್ನು  ಬೆಳೆಸುತ್ತದೆ. ವಿವಾಹ ಎಂಬ ಸಂಪ್ರದಾಯ ನಂತರ ಬಂಧನವಾಗುತ್ತದೆ. ಶ್ರೀಮಂತ ಹಾಗೂ ಬಡ ಸಂಪ್ರದಾಯಗಳು ಪರಸ್ಪರರನ್ನು ದೂರ ಇಡುತ್ತವೆ. ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ  ಸಂಪ್ರದಾಯ  ಪ್ರತಿಷ್ಠೆ ಇರುತ್ತದೆ. ಪರಿಣಾಮವಾಗಿ   ದ್ವೇಷ ಹಾಗೂ ಅಸಮಾಧಾನವನ್ನು  ಬೆಳೆಸುತ್ತದೆ. ಆರಾಧನಾ ಸ್ಥಳದಲ್ಲಿ  ]ಜಾ ಸಂಪ್ರದಾಯ ಜಗತ್ತಿನಲ್ಲೆಡೆ  ಮನುಷ್ಯ ಮನುಷ್ಯರಲ್ಲಿ ಕಂದರವನ್ನು ಏರ್ಪಡಿಸಿದೆ.  ಇಲ್ಲಿ ಮಾತು  ಹಾಗೂ  ಕೃತಿಗೆ  ಅರ್ಥವೇ ಇರುವುದಿಲ್ಲ. ಈ ಸಂಪ್ರದಾಯಕ್ಕೆ ಸಾವಿರಾರು  ವರ್ಷಗಳ ಶ್ರೀಮಂತ ಇತಿಹಾಸ ಇರಬಹುದಾಗಿದ್ದರೂ, ಇದು ಮೂಲ ದೃವ್ಯವಾದ  ಪ್ರೀತಿ ಹಾಗೂ ಸೌಂದರ್ಯವನ್ನೇ ನಿರಾಕರಿಸುತ್ತದೆ.
ಅಲ್ಲಿಂದ ಪಕ್ಕದ ಹೊಳೆಯನ್ನುಇಕ್ಕಟ್ಟಿನ ಸೇತುವೆ ಮೂಲಕ  ದಾಟಿ ಆಚೆಗೆ  'ನೀವು' ಬಂದಿರಿ. ಹೊಳೆ ನಂತರ ದೊಡ್ಡ ನದಿಗೆ ಸೇರಿಕೊಳ್ಳುತ್ತದೆ. ಆ ಪ್ರದೇಶದಲ್ಲಿ ಒಂದಿಷ್ಟು ಇಟ್ಟಿಗೆಗಳನ್ನು ಮಾಡಿ ಇಟ್ಟಿದ್ದು ನೀವು ಹಳ್ಳಿಗೆ ತಲುಪುತ್ತೀರಿ. ಊರಿನ ವಠಾರದಲ್ಲಿ ಎಲ್ಲೆಡೆ ಚಿಳ್ಳೆಪಿಳ್ಳೆಗಳು ತುಂಬಿದ್ದರು. ಅಲ್ಲಿನ  ಪ್ರೌಢರೆಲ್ಲ  ಮೀನುಗಾರಿಕೆಗೋ, ಸಮೀಪದ  ನಗರದ ಕೆಲಸಕ್ಕೋ, ಕೃ ಷಿಕೂಲಿಗೋ ಹೋಗುತ್ತಿದ್ದರು.
ಗಲ್ಲಿಯ ಮನೆಯೊಂದರ ಸಣ್ಣ ಕೊಠಡಿಯೊಂದರಲ್ಲಿ  ದೊಡ್ಡ ಮಗ್ಗದೊಂದಿಗೆ ನೇಕಾರನೊಬ್ಬ  ನೇಯುತ್ತಿದ್ದ. ಅವನಿದ್ದ ಮನೆ ಗೋಡೆಯ ಸಣ್ಣ ಕಿಟಕಿಯಿಂದ ನೊಣಗಳೂ ಒಳಕ್ಕೆ ಹೋಗುವುದಿಲ್ಲ. ಅದೊಂದು ತಂಪನೆಯ ಕೊಠಡಿ. ಆ ನೇಕಾರನಿಗೆ ಓದು -ಬರಹಗಳೆಲ್ಲ ತಿಳಿಯುವುದಿಲ್ಲ. ಆದರೆ ಮಗ್ಗ ನೇಯುವುದರಲ್ಲಿ ನಿಪುಣ. ನೇಕಾರ ಕಸುಬನ್ನು ಸಾಂಪ್ರದಾಯಿಕವಾಗಿ ಕಲಿತು  ಪ್ರಾಮಾಣಿಕವಾಗಿ ಬದುಕುತ್ತಿರುವವ. ಆತನಿಗೆ ತನ್ನ ಕೆಲಸವೇ ಸರ್ವಸ್ವ.  ಸಾಮಾನ್ಯ  ಬಟ್ಟೆಗಳಿಗೆ ಬೆಳ್ಳಿ ಬಂಗಾರದ ಸರಿಗೆಯೊಂದಿಗೆ  ಕಸೂತಿ ಮಾಡುತ್ತಿದ್ದ. ಎಂಥದ್ದೇ ಬಟ್ಟೆ ಕೊಟ್ಟರೂ  ತನ್ನ ಸಾಂಪ್ರದಾುಕ ಕೌಶಲ್ಯತೆಯಿಂದ  ಅದ್ಭುತ ಕುಸುರಿ ಹಾಕುತ್ತಿದ್ದ. ಆತ ಅದೇ  ಕಸುಬಿನವರ ಕುಟುಂಬದಲ್ಲಿ ಹುಟ್ಟಿದ್ದು, ಆತನಿಗೆ ತನ್ನ ಶ್ರಮ  ಕಲೆಯನ್ನು ತೋರಿಸುವುದಕ್ಕೆ  ಎಲ್ಲಿಲ್ಲದ ಖು. ಆತನ ಕೌಶಲ್ಯವೂ  ಅದ್ಭುತ. ಆತ ರೇಶಿಮೆದಾರದಲ್ಲಿ ಸಿದ್ಧಪಡಿಸಿದ  ಸೂಕ್ಷ್ಮ ಬಟ್ಟೆಗಳನ್ನು 'ನೀನು' ವೀಕ್ಷಿಸಿದೆ. ಅವುಗಳ ಬಗ್ಗೆ ಆಶ್ಚರ್ಯ ಹಾಗೂ ಹೃದಯ ತುಂಬಿ ಬಂದಿತ್ತು. ಅಲ್ಲಿ ಇಡಲಾಗಿದ್ದ ಬಿಂದಿಗೆಯಾಕಾರದ ಕುಸುರಿಯೊಂದು ಆತನ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿತ್ತು.



ಸೆಪ್ಟೆಂಬರ್ 30, 1973
ಆಲದ ಮರದ ಕೆಳಗೆ  ಉದ್ದನೆಯ ಹಳದಿ ಹಾವೊಂದು   ರಸ್ತೆ ದಾಟುತ್ತಿತ್ತು. 'ಆತ' ಬಹು ದೂರದ ವಾಕಿಂಗ್  ಮುಗಿಸಿ ಬರುತ್ತಿದ್ದ. ಹಾವನ್ನು ನೋಡುತ್ತಲೇ ಅದರ ಹಿಂಬಾಲಿಸಿ ಹೋದ. ಮಣ್ಣಿನ ದಿನ್ನೆಯೊಂದರಲ್ಲಿ  ಆತ ಹಾವಿಗೆ ಇನ್ನೇನು  ಅತ್ಯಂತ  ಸಮೀಪದಲ್ಲಿದ್ದ.  ಅಲ್ಲಿದ್ದ ಬಿಲಗಳಲ್ಲೆಲ್ಲ ಹೋಗುತ್ತಿದ್ದ  ಹಾವಿಗೆ ಆತ  ಸಮೀಪವೇ ಇದ್ದಾನೆಂಬುದು  ತಿಳಿದೇ ಇರಲಿಲ್ಲ. ಹಾವು ಸಾಕಷ್ಟು ದಪ್ಪವಾಗಿತ್ತು. ನುಂಗಿಕೊಂಡಿದ್ದ ಪ್ರಾಣಿಯಿಂದಾಗಿ ಅದರ ದೇಹದ ಮಧ್ಯ ಭಾಗ ಒಂದಿಷ್ಟು ದಪ್ಪವಾಗಿತ್ತು. ಆ ಮಾರ್ಗದಲ್ಲಿ ಹೋಗುತ್ತಿದ್ದ  ಹಳ್ಳಿಗರು ಅಲ್ಲಿ ಬರುತ್ತಲೇ  ಸುಮ್ಮನಾಗಿ ಗಮನಿಸತೊಡಗಿದರು. ಅದು ನಾಗರಹಾವಾಗಿದ್ದು ಅದರ ಬಗ್ಗೆ ಕಾಳಜಿ ಬೇಕು ಎಂದು ಅವರಲ್ಲೊಬ್ಬ ಎಚ್ಚರಿಕೆಯ ಮಾತನ್ನು ಹೇಳಿದ್ದ. ಇದೆಲ್ಲ ನಡೆಯುತ್ತಿರುವಾಗಲೇ  ಅಲ್ಲಿಯೇ ಒಂದು ಬಿಲದಲ್ಲಿಹೋದ ನಾಗರಹಾವು  ಮಾಯವಾಗಿತ್ತು. ಆತ ಮತ್ತೆ ವಾಕಿಂಗ್ ಮುಂದರವರೆಸಿದ್ದ. ನಾಗರಹಾವನ್ನು ನೋಡಬೇಕು ಎಂಬ ಉದ್ದೇಶದಿಂದ  ಮಾರನೆ ದಿನ  ಆತ ಮತ್ತೆ ಅಲ್ಲಿಗೆ ಬಂದ, ಆದರೆ ಅಲ್ಲಿ ಹಾವು ಕಾಣಲಿಲ್ಲ. ಹೊರತಾಗಿ  ಹಳ್ಳಿಯವರು  ಅಲ್ಲೊಂದು ಕಲ್ಲನ್ನು ಸ್ಥಾಪಿಸಿ  ಅದಕ್ಕೆ ಕುಂಕುಮ ಬಳಿದಿದ್ದರಲ್ಲದೆ ಒಂದಿಷ್ಟು ಸೇವಂತಿಗೆ ಹೂವನ್ನು ಹಾಕಿದ್ದರು. ಇದು ಅಲ್ಲಿಗೇ ನಿಲ್ಲಲಿಲ್ಲ. ಹಳ್ಳಿಗರು ಪ್ರತಿದಿನವೂ ಕಲ್ಲಿಗೆ ]ಜೆ ಮಾಡಿ ಹಾಲನ್ನು ಇಟ್ಟು  ಹೂವುಗಳಿಂದ ಅಲಂಕರಿಸತೊಡಗಿದ್ದರು. ಕ್ರಮೇಣ ಸುತ್ತಮುತ್ತಲ ಹಳ್ಳಿಗಳ ಜನರೆಲ್ಲ ಇದನ್ನೊಂದು ಪವಿತ್ರ ಸ್ಥಳ ಎಂದು ನಂಬ ತೊಡಗಿದ್ದರು.
ಹಲವು ತಿಂಗಳುಗಳ ನಂತರ  ಆತ ಅದೇ ಸ್ಥಳಕ್ಕೆ  ಮರಳಿದಾಗಲೂ ಅಲ್ಲಿ ಕಲ್ಲನ್ನು ವಿಶೇಷವಾಗಿ ಅಲಂಕರಿಸಿಹೊಸದಾಗಿ ಹೂವು ಹಾಕಿ ]ಜೆ ಮಾಡಲಾಗಿತ್ತಲ್ಲದೆ, ಹಾಲನ್ನೂ ತಂದಿಡಲಾಗಿತ್ತು. ಆದರೆ ಅಲ್ಲಿನ ಆಲದ ಮರ ಸೊರಗ ತೊಡಗಿತ್ತು.
ನೀಲವಾದ ಮೆಡಿಟರೇನಿಯನ್ ಸಮುದ್ರಕ್ಕೆ ಎದುರಾಗಿತ್ತು  ಆ ದೇವಾಲಯ. ದೇವಸ್ಥಾನ ಪಾಳು ಬಿದ್ದಿದೆಯಾದರೂ ಕಲ್ಲಿನ ಸ್ತಂಭಗಳು ಮಾತ್ರಅಚ್ಚಳಿಯದೇ ನಿಂತಿವೆ. ಯುದ್ಧ ಒಂದರಲ್ಲಿ ದೇವಾಲಯವನ್ನು ಧ್ವಂಸಮಾಡಲಾಗಿತ್ತಾದರೂ  ಈಗಲೂ ಇದೊಂದು  ಪವಿತ್ರಧಾಮ.  ಒಂದು ಸಂಜೆ  ಶಿಲಾಕಲ್ಲು ಕಂಭದ ಮೇಲೆ  ಮುಳುಗುತ್ತಿರುವ ಕೆಂ[ ಸೂರ್ಯ  ಇಡೀ ವಾತಾವರಣಕ್ಕೆ  ವೈಭವ ನೀಡಿದ್ದನ್ನು ಗಮನಿಸುವುದು     'ನಿನಗೆ' ಸಾಧ್ಯವಾಗಿತ್ತು. ಆಗ ಅಲ್ಲಿಯಾವೊಬ್ಬ ಪ್ರವಾಸಿಯೂ ಇರಲಿಲ್ಲ. ಪ್ರವಾಸಿಗರ ಹರಟೆಯೂ ಇಲ್ಲದೆ ಅಲ್ಲೊಂದು ಪವಿತ್ರವಾದ  ವಾತಾವರಣ ನಿರ್ಮಾಣವಾಗಿತ್ತು. ಸೂರ್ಯ ಮುಳುಗುವ ಹೊತ್ತಿಗೆ ಭವ್ಯ ಶಿಲಾಸ್ಥಂಭ ಚಿನ್ನದಂತೆ ಮಿಂಚುತ್ತಿತ್ತು. ಹಿನ್ನೆಲೆಯಾಗಿ  ಅತ್ಯಂತ ಕೆಳಗೆ  ಇಡೀ ಸಮುದ್ರವೇ  ನೀಲಿಯಾಗಿತ್ತು. ಅಲ್ಲಿ ದೇವಿಯ ಮೂರ್ತಿಯೊಂದಿತ್ತು. ಅದನ್ನುಗುಡಿಯ ಒಳಕ್ಕಿಟ್ಟುಕೀಲಿಯನ್ನು ಹಾಕಿ ರಕ್ಷಿಸಲಾಗುತ್ತಿತ್ತು. ದಿನದ ಸೀಮಿತ ಅವಧಿಯಲ್ಲಿ ದೇವಿಯ ಮೂರ್ತಿಯನ್ನು ನೋಡಬಹುದಾಗಿತ್ತಾದರೂ, ಮೂರ್ತಿಯ ಪಾವಿತ್ರತೆ ಕುಂದುತ್ತಿತ್ತು. ಆದರೆ ನೀಲಿಯ ಸಮುದ್ರ ಮಾತ್ರ ಅದೇ ಭವ್ಯತೆಯಲ್ಲಿದೆ.
ದೇಶದಲ್ಲಿದ್ದ ಉತ್ತಮ  ಕಾಟೇಜುಗಳಲ್ಲಿ ಅದೂ ಒಂದು. ಇದರ ಸುತ್ತಲೂ ಸುಂದರವಾದ ಲಾನ್ ಹಾಸು  ಬೆಳೆಸಲಾಗಿತ್ತಲ್ಲದೆ, ಬಹು ಕಾಲದಿಂದ ಅದನ್ನು ಸಕಾಲದಲ್ಲಿಕತ್ತರಿಸಿ ಧೇಕರೇಕ್ ನೋಡಲಾಗುತ್ತಿದೆ. ಕಾಟೇಜ್ ಇರುವ ಇಡೀ ವಠಾರವನ್ನೇ  ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಲಾಗಿತ್ತಲ್ಲದೆ, ಅಭಿವೃದ್ಧಿ ಪಡಿಸಲಾಗಿತ್ತು. ಇದರ ಹಿಂದುಗಡೆ ಒಂದು ತರಕಾರಿ ಹೊಲ, ಪಕ್ಕದಲ್ಲೇ ಶಾಂತವಾಗಿ ಹರಿಯುವ  ಹಳ್ಳವೂ ಇತ್ತು. ಆ ಕಾಟೇಜಿನ ಬಾಗಿಲನ್ನು ತೆರೆದಾಗ  ಬಾಗಿಲಿನ ವ್ಯವಸ್ಥೆಒಂದಿಷ್ಟು ಕುತೂಹಲಕರವಾಗಿತ್ತು. ಬಾಗಿಲನ್ನು ಒತ್ತಿಹಿಡಿಯುವುದಕ್ಕೆಂದು ಅದರ ಮಾಲಕ ಬುದ್ಧನ ಪ್ರತಿಮೆಯೊಂದನ್ನು ಆನಿಸಿ ಇಟ್ಟಿದ್ದ. ಆತನ ದೃಷ್ಟಿಯಲ್ಲಿ ಬಾಗಿಲನ್ನು ಒತ್ತಿಡುವುದಕ್ಕೆ  ಇರುವ ಸಾಧನವೇ  ಹೊರತು ಬುದ್ಧನ ಪ್ರತಿಮೆಗೆ  ಹೆಚ್ಚಿನ ಯಾವುದೇ ಮಹತ್ವವೂ ಇದ್ದಿರಲಿಲ್ಲ.
ಕ್ರಿಶ್ಚಿಯನ್ ಧರ್ಮೀಯರಾಗಿದ್ದ ಆ ವ್ಯಕ್ತಿ  ಒಂದು ವೇಳೆ ತನ್ನದೇ ಧರ್ಮದ  ಯಾವುದಾದರೂ ದೇವರ ಮೂರ್ತಿಯನ್ನು  ಈ ಸ್ಥಿತಿಯಲ್ಲಿಇಡಬಹುದೇ ಎಂದು ಆಶ್ಚರ್ಯವಾಯಿತು. ಪ್ರತಿಯೊಬ್ಬನಿಗೂ  ಇತರ ಧರ್ಮದ  ಪಾವಿತ್ರತೆ ಲೆಕ್ಕಕ್ಕೆ ಇರುವುದಿಲ್ಲ. ಆದರೆ ಸ್ವಂತ ಧರ್ಮದ  ಮಟ್ಟಿಗೆ ಅದೊಂದು ಗಂಭೀರ ವಾದ ಸಂಗತಿ. ಇತರರ ನಂಬಿಕೆ ಎಂದರೆ  ಅದೊಂದು ರೀತಿಯ ಬೂಟಾಟಿಕೆ. ನಮ್ಮ ನಂಬಿಕೆಗಳು ಮಾತ್ರಸರ್ವಕಾಲಿಕ ಶ್ರೇಷ್ಠ.
ಇಷ್ಟಕ್ಕೂ ಪವಿತ್ರ ಎಂದರೇನು ?
ತಾನು ಬೀಚೊಂದರಿಂದ ಇದನ್ನು ಹಿಡಿದುಕೊಂಡು ಬಂದಿದ್ದಾಗಿ ಆತ ಹೇಳುತ್ತಿದ್ದ. ಬಹುಕಾಲದಿಂದ  ಸಮುದ್ರದ  ತೆರೆಗೆ ಸಿಲುಕಿ  ತೊಳೆದು ತೊಳೆದು ಮಾನವ ಮುಖದ ಆಕೃತಿ  ಪಡೆದುಕೊಂಡ  ಮರದ ದಿಮ್ಮಿ ಅದಾಗಿತ್ತು. ಹತ್ತಾರು ಮಳೆಗಾಲದ ಕಾಲ ಸಮುದ್ರದ ಉಪ್ಪು ನೀರಿಗೆ  ಸಿಲುಕಿ ಮರದ  ಮೇಲ್ಭಾಗ ತೊಳೆದು ಒಳಗಿನ ಕೆಂಚು ಮಾತ್ರ ಉಳಿದು  ಆ ರೂಪಕ್ಕೆ ಬಂದಿತ್ತು. ಆತ ಅದನ್ನು ಮನೆಗೆ ತಂದು  ಗೋಡೆಯ ಶೆಲ್ಫ್ ಮೇಲೆ  ಇರಿಸಿದ್ದ. ಆಗಾಗ ಅದನ್ನು ನೋಡುತ್ತಿದ್ದ. ಅದಕ್ಕೊಂದು ಸೂಕ್ತ ಸ್ಥಳ  ಕಲ್ಪಿಸಿದ್ದಕ್ಕಾಗಿ  ಆತನೇ ಖು ಪಟ್ಟುಕೊಳ್ಳುತ್ತಿದ್ದ. ಒಂದು ದಿನ  ಅದರ ಮೇಲೆ ಹೂವನ್ನು  ಇಡತೊಡಗಿದ. ಹಾಗೆ ಮುಂದುವರೆದು ಅದರ ]ಜೆಯೂ ಆರಂಭವಾುತು. ನಂತರದ ದಿನಗಳಲ್ಲಿ ಒಂದು ದಿನ ಅದಕ್ಕೆ ]ಜೆ ಮಾಡಿಲ್ಲ ಎಂದರೂ ಆತನಿಗೆ ಪಾಪ ಪ್ರಜ್ಞೆ ಕಾಡಲು ಆರಂಭವಾಗುತ್ತದೆ. ನಂತರ ಆ ಕಟ್ಟಿಗೆಯ ಮೂರ್ತಿಯನ್ನು ಕೈ ತೊಳೆಯದೆ ಮುಟ್ಟುವುದನ್ನು ನಿಲ್ಲಿಸಿದ. ಅವನನ್ನು ಬಿಟ್ಟರೆ ಬೇರಾರು ಮುಟ್ಟುವಂತೆ ಇರಲಿಲ್ಲ. ಅದೊಂದು ಪವಿತ್ರ ಮೂರ್ತಿಯಾಗಿ ಆತ ಅದರ ಖಾಸಾ ಅರ್ಚಕನಾಗಿ ಹೋದ. ಅದೊಂದು ದೇವೀ ಮೂರ್ತಿಯಾಗಿ  ಅದರ ಪ್ರೇರಣೆಯಿಂದ  ಆತನಿಗೆ ಮೈಮೇಲೆ ಬರುವುದಕ್ಕೆ  ಶುರುವಾುತು. ಅವನಿಗೆ ತಿಳಿಯುವುದಕ್ಕೆ ಸಾಧ್ಯವಾಗದ  ಸಂಗತಿಯನ್ನೆಲ್ಲ  ಆ ಮೂರ್ತಿಯ ಪ್ರೇರಣೆ ಆತನ ಬಾಯಿಯಲ್ಲಿ ಹೇಳಿಸುತ್ತದೆಯಂತೆ. ಆ ಮೂರ್ತಿ ಆತನ  ಜೀವನವನ್ನೇ  ಆವರಿಸಿತ್ತಲ್ಲದೆ, ಅದರಿಂದ ಹೇಳಲಾಗದಷ್ಟು  ಸಂತೋಷ ತನಗಾಗುತ್ತಿದೆ  ಎನ್ನುತ್ತಿದ್ದ.
ಇಷ್ಟಕ್ಕೂ ಪವಿತ್ರ ಎಂದರೇನು ?  ಮತ್ತದೇ ಪ್ರಶ್ನೆಯಾವುದು ಪವಿತ್ರ?
ಮನಸ್ಸು ನಿರ್ಮಿಸಿದ ಸಂಗತಿ, ನಾಗರ ಕಲ್ಲು, ದೇವಿಯ ಮೂರ್ತಿ ಅಥವಾ  ಸಮುದ್ರ ತೇಯ್ದ ವಸ್ತುಒಮ್ಮೆಲೇ ಪವಿತ್ರವಾಗುವುದಿಲ್ಲ. ಪ್ರತಿಮೆಗಳು ಯಾವಾಗಲೂ ಸತ್ಯವೂ ಆಗಿರುವುದಿಲ್ಲ. ಹುಲ್ಲು ಎಂಬುದಾಗಿ ಶಬ್ಧ ಒಂದರಲ್ಲಿ ನಾವು ಗುರುತಿಸುತ್ತೇವಲ್ಲ, ಅದು ಹೊಲದಲ್ಲಿ ರುವ ನಿಜವಾದ ಹುಲ್ಲಲ್ಲ. ದೇವರೆಂಬ ಶಬ್ದ  ನಿಜವಾದ ದೇವರೇ ಅಲ್ಲ. ಶಬ್ದವು ಅದರೊಂದಿಗೆ  ಸಂಕೇತಿಸುವ  ವಸ್ತುವನ್ನು ಹೊಂದಿರುವುದಿಲ್ಲ. ಯಾವುದೇ ರೀತಿಯ  ವಿವರಣೆ ಇದ್ದರೂ  ಅಷ್ಟೆ. ಪವಿತ್ರ ಎಂಬ ಪದಕ್ಕೆ  ತನ್ನಷ್ಟಕ್ಕೆ  ಅರ್ಥ ಬರುವುದಿಲ್ಲ. ಬೇರೊಂದರೊಂದಿಗೆ  ವಾಸ್ತವ ಅಥವಾ ಕಲ್ಪನೆಯ  ಸಂಬಂಧ ಜೋಡಣೆಯಿಂದಾಗಿ ಅದಕ್ಕೆ ಪಾವಿತ್ರ್ಯತೆ ಬರುತ್ತದೆ. ವಾಸ್ತವ ಎಂಬುದು ಮನಸ್ಸಿನ ಲ್ಲಿರುವ  ಶಬ್ದಗಳಲ್ಲಿರುವುದಿಲ್ಲ. ವಾಸ್ತವ ಸತ್ಯವನ್ನು  ಆಲೋಚನೆಯಿಂದ  ಮುಟ್ಟುವುದು  ಸಾಧ್ಯವಾಗುವುದಿಲ್ಲ. ಎಲ್ಲಿ ಗ್ರಹಿಸುವವನಿರುತ್ತಾನೋ ಅಲ್ಲಿ ಸತ್ಯ ಇರುವುದಿಲ್ಲ. ಸತ್ಯ ಇರಬೇಕಾದರೆ  ಅಲ್ಲಿ ಆಲೋಚನೆ , ಆಲೋಚಿಸುವವ  ಹೊರಬರಬೇಕು. ಆಗ ಮಾತ್ರ ಅದು  ಪವಿತ್ರವಾದ [ರಾತನ  ಶಿಲಾಸ್ಥಂಭದ ಮೇಲಿನ  ಸೂರ್ಯ ಅಥವಾ  ನಾಗರಹಾವು  ಹಾಗೂ ಹಳ್ಳಿಗರು ಇರುತ್ತಾರೆ. ಎಲ್ಲಿ ಪ್ರೇಮ ಎಂಬುದು ಇರುವುದಿಲ್ಲವೋ  ಅಲ್ಲಿ ಪವಿತ್ರ ಎಂಬುದು ಇರುವುದಿಲ್ಲ. ಪ್ರೇಮ ಎಂದರೆ  ಪರಿ]ರ್ಣವಾಗಿದ್ದು ಅಲ್ಲಿ ಯಾವೂದೂ  ಅ]ರ್ಣವಾಗಿರುವುದಿಲ್ಲ.



ಅಕ್ಟೋಬರ್2, 1973

ಪ್ರಜ್ಞೆ  ಎಂದರೆ ಅದರೊಳಗಿನ ವಸ್ತು ಸಾರಾಂಶ ; ಸಾರಾಂಶವೇ ಪ್ರಜ್ಞೆ. ಪ್ರಜ್ಞೆ ಯೊಳಗಿನ ಸಾರಾಂಶ ಒಂದಕ್ಕೊಂದು ಹೊಂದಿಕೊಂಡಿರದೆ, ತುಣುಕು ತುಣುಕಾಗಿದ್ದರೆ ಅದರಿಂದ ಉಂಟಾಗುವ ಕರ್ಮಗಳು,ಕ್ರಿಯೆಗಳು ಅಪೂರ್ಣವಾಗಿರುತ್ತವೆ. ಇಂಥ ಕ್ರಿಯಾಶೀಲತೆಯು ಗೊಂದಲ, ದುರಂತ ಹಾಗೂ ವಿಷಾದವನ್ನು ಉಂಟುಮಾಡುತ್ತಿರುತ್ತದೆ.
ಎತ್ತರದ ಆಕಾಶದಲ್ಲಿಯಾನಮಾಡುವಾಗ ಅಂದು ಕಂಡ ಪಕ್ಷಿನೋಟ ಅದ್ಬುತವಾಗಿತ್ತು ;  ಬಣ್ಣ, ಆಕೃತಿ  ಮತ್ತು ವಿಸ್ತೀರ್ಣಗಳಲ್ಲಿ ಪ್ರತಿಯೊಂದು ಬೇರೆ ಬೇರೆಯಾಗಿ ಗೋಚರಿಸುತ್ತಿದ್ದಬೆಟ್ಟ-ಗುಡ್ಡಗಳೊಂದಿಗೆ ಯಾನ ಆರಂಭವಾಯಿತು. ತೊರೆಯೊಂದು ಸಮುದ್ರಸೇರುವುದಕ್ಕೆ ತನ್ನಷ್ಟಕ್ಕೆ ಹರಿದು ಬರುತ್ತಿರುತ್ತಿದೆ. ಇದಕ್ಕಿಂತ ಬಹು ದೂರದಲ್ಲಿಪರ್ವತಶ್ರೇಣಿಗಳಿವೆ- ಅದು ಹಿಮಾಲಯ, ಹಿಮದ ರಾಶಿ. ಇದಾದ ನಂತರ ಮತ್ತೆ ಶುರುವಾದ ಜನವಸತಿ, ಜಗತ್ತಿನ ಎಲ್ಲೆಡೆಯಂತೆ ವಿಸ್ತರಿಸಿಕೊಳ್ಳುತ್ತಿರುವ ಪಟ್ಟಣಗಳು, ಹಳ್ಳಿಗಳು ; ಗುಡ್ಡದ ತುದಿಯಲ್ಲಿ ಬಂಗಲೆಗಳು, ಚರ್ಚ್‌ಗಳು. ನಂತರ ಇವುಗಳೆಲ್ಲವನ್ನೂ ಮೀರಿ ವ್ಯಾಪಿಸಿದ್ದಕಂದು ಹಳದಿ ಮತ್ತು ಬಿಳಿ ಬಣ್ಣದಲ್ಲಿ ಹಾಸಿ ಬಿದ್ದ ಬಹುದೊಡ್ಡಮರುಭೂಮಿಯ ಮೇಲೆ ವಿಮಾನ ಹೋಯಿತು. ಇದಾದ ನಂತರ ಮತ್ತೆ ಅಲ್ಲೊಂದು ವಿಶಾಲ ಸಮುದ್ರ. ಬಹುದೂರದ ತನಕ ಸಮುದ್ರದ ಮೇಲೆ ಯಾನಮಾಡಿದ ನಂತರ ಹಸಿರಾದ ದಟ್ಟ ಅಡವಿ ಸಿಕ್ಕಿತು- ಹೀಗೆ ಇಡೀ ಭೂ ಭಾಗ ಸುಂದರ, ವಿಹಂಗಮವಾಗಿತ್ತು.
'ಆತ' ಹುಲಿಯೊಡನೆ ಮುಖಾಮುಖಿಯಾಗುವ ಉದ್ದೇಶದಿಂದಲೇ ಆ ಪ್ರದೇಶಕ್ಕೆ ಹೋಗಿದ್ದ. ಮುಖಾಮುಖಿ ಸಾಧ್ಯವೂ ಆಯಿತು.
ಆ ಊರಿನಲ್ಲಿ ಇದ್ದ ಸಂದರ್ಭ, ಹಿಂದಿನ ರಾತ್ರಿಹುಲಿಯೊಂದು ಎಳೆಯ ದನದವೊಂದನ್ನು ಕೊಂದು ಹಾಕಿತ್ತು. ಮಾರನೆ ದಿನ ರಾತ್ರಿಅಲ್ಲಿಗೆ ಹುಲಿ ಬಂದೇ ಬರುತ್ತದೆ, ಅಲ್ಲಿ ಹುಲಿಯನ್ನು ನೋಡಬಹುದು ಎಂಬುದಾಗಿ ಸಮೀಪದ ಹಳ್ಳಿಯ ಜನರು 'ಆತ'ನ ಆತಿಥೇಯರಿಗೆ  ಸುದ್ದಿಕೊಟ್ಟಿದ್ದರು. ಹುಲಿ ನೋಡುವುದಾದಲ್ಲಿದನ  ಕೊಂದ ಜಾಗದಲ್ಲಿಯೇ ಎತ್ತರದ ಅಟ್ಟಣಗೆಯೊಂದನ್ನು ನಿರ್ಮಿಸಿ ನೋಡುವ ವ್ಯವಸ್ಥೆಮಾಡುವುದಾಗಿ ಹೇಳಿದ್ದರು. ಹುಲಿ ಅಲ್ಲಿಗೆ ಬರುವುದಕ್ಕೆ ಇನ್ನೊಂದು ಪ್ರಲೋಬನವಾಗಿ ಆಡೊಂದನ್ನು ಅಲ್ಲಿ ಕಟ್ಟಿಡುವುದಾಗಿಯೂ ಅವರು ಹೇಳಿದರು. ತನ್ನ ಉದ್ದೇಶ ಈಡೇರಿಸಿಕೊಳ್ಳುವುದಕ್ಕಾಗಿ ಹುಲಿ ಆಡು ಕೊಲ್ಲುವ ದೃಶ್ಯವನ್ನು ನೋಡುವುದಿಲ್ಲ ಎಂದು 'ಆತ' ಹೇಳಿದ. ಆ ವಿಷಯ ಅಲ್ಲಿಯೇ ಕೈಬಿಡಲಾಗಿತ್ತು.
ಅದೇ ದಿನ ಸಂಜೆ ಹಸುವನ್ನು ಕೊಂದ ಹುಲಿಯನ್ನು ನೋಡೊಣ ಎಂದು 'ಆತ'ನ ಆತಿಥೇಯರು ಪ್ರಸ್ತಾಪಿಸಿದರು. ಸಂಜೆ ಗುಡ್ಡಗಳ ಮರೆಯಲ್ಲಿ ಸೂರ್ಯ ಮುಳುಗುತ್ತಿದ್ದ ಹೊತ್ತಿಗೆ ಕಾಡಿನತ್ತ ಹೋಗುತ್ತಿದ್ದೆವು. ಕಾಡಿನಲ್ಲಿ ಸಾಕಷ್ಟು ದೂರ ಕ್ರಮಿಸಿ ಹೋಗಿದ್ದೆವು. ಕತ್ತಲೆಯೂ ಅವರಿಸತೊಡಗಿತ್ತು. ವಾಪಸ್ ಬರುವಾಗ ತಲೆಗೆ ದೊಡ್ಡ ಹೆಡ್‌ಲೈಟ್‌ಗಳನ್ನು ಕಟ್ಟಿಕೊಂಡಿದ್ದೆವು. ಸಾಕಷ್ಟು ಸುತ್ತಿದ್ದಾಯಿತು, ಇನ್ನೇನು ಹುಲಿ ಕಾಣಲಿಕ್ಕಿಲ್ಲ ಎಂದುಕೊಳ್ಳುತ್ತಹಿಂದಿರುಗುತ್ತಿದ್ದೆವು. ಅಷ್ಟರಲ್ಲಿ ರಸ್ತೆಯ ತಿರುವಲ್ಲಿ ತುದಿಗಾಲಿನಲ್ಲಿ ಕುಳಿತ ಹುಲಿರಾಯನ ದರ್ಶನವಾಗುತ್ತದೆ.
ಸಾಕಷ್ಟು ದೊಡ್ಡದಾಗಿದ್ದಪಟ್ಟೆಹುಲಿ ಅದು. ಹೆಡ್ ಲೈಟಿನ ಪ್ರಖರತೆಗೆ ಅದರ ಕಣ್ಣುಗಳು ಪಳಪಳ ಹೊಳೆಯುತ್ತಿವೆ. ಕಾರನ್ನು ನಿಲ್ಲಿಸುತ್ತಲೆ ಗುರ್ ಎನ್ನುತ್ತ ಕಾರಿನ ಕಡೆಗೆ ಹುಲಿ ಧಾವಿಸಿ ಬರತೊಡಗಿತ್ತು. ಹುಲಿ ಗುರ್ ಎನ್ನುವ ಪೆಟ್ಟಿಗೆ ನಾವಿದ್ದ ಕಾರೇ ನಡುಗುತ್ತಿತ್ತು. ಆಶ್ಚರ್ಯ ಹುಟ್ಟಿಸುವಷ್ಟು ಉದ್ದವಿದ್ದಹುಲಿ ಧಾವಿಸಿ ಕಾರನ್ನು ಸಮೀಪಿಸುತ್ತಿದ್ದರೆ, ಅದರ ಬಾಲದ ಕಪ್ಪು ತುದಿ ಆಚೆ-ಈಚೆ ನಿಧಾನವಾಗಿ ದೇಹದ ತಾಳಕ್ಕೆ ತಕ್ಕಂತೆ ಚಲಿಸುವ ಗತ್ತನ್ನು ಗಮನಿಸಿಯೇ ತಿಳಿದುಕೊಳ್ಳಬೇಕು. ಆ ಹುಲಿ ಕೆರಳಿತ್ತು. ಘರ್ಜಿಸುತ್ತ ಕಾರಿನ ಸಮೀಪವೇ ಬಂದಾಗ ತೆರೆದಿದ್ದ ಗಾಜಿನ ಕಿಟಕಿಯಲ್ಲಿ 'ಆತ' ಕಾಡಿನ ಈ ಬಲಾಡ್ಯನನ್ನು ರ್ಸ್ಪಸಲೆಂದು  ಕೈಯನ್ನು ಹೊರಕ್ಕೆ ಚಾಚಿದ್ದ. ಆದರೆ ಅತಿಥೇಯರು ಕೈಯ್ಯನ್ನು ಹಿಂದಕ್ಕೆ ಜಗ್ಗಿದ್ದರು. ಕೈಯನ್ನೇ ಹರಿದು ಹಾಕೀತು ಎಂಬ ಕಾರಣಕ್ಕಾಗಿ ತಾನು ಹಾಗೆ ಮಾಡಿದ್ದಾಗಿ ನಂತರ ನಾವು ಹಿಂದಿರುಗುವಾಗ ಕಾರಣವನ್ನು ಅವರು  ವಿವರಿಸಿದ್ದರು.
ಅಂದು ನಮ್ಮ ಪಕ್ಕದಲ್ಲಿ ಇದ್ದ ಹುಲಿ ಅಪಾರ ಶಕ್ತಸಂಚಯದಿಂದ ಕೂಡಿತ್ತಲ್ಲದೆ ದೈತ್ಯ ರೀತಿಯಲ್ಲಿ ಮೈದಳೆದಿತ್ತು.
ಅದೇ ಭೂಭಾಗದ ಕೆಳಗಿನ ನಾಡಿನಲ್ಲಿ ಪ್ರಜಾಪೀಡಕರಾದ ಆಡಳಿತಗಾರರು ಇದ್ದರು. ಇತಿಹಾಸದ ಕಾಲದಿಂದಲೂ ತಾತ್ವಿಕರು ಮನುಷ್ಯನ ಮನಸ್ಸನ್ನು ರೂಪುಗೊಳಿಸುತ್ತ ಬಂದಿದ್ದಾರೆ. ಧರ್ಮ ಬೊಧಕರು ಇನ್ನೊಂದೆಡೆ ಶತ ಶತಮಾನಗಳಿಂದ ನಂಬಿಕೆ, ಸಂಪ್ರದಾಯಗಳನ್ನು ಹೇರುತ್ತ ಮನುಷ್ಯರನ್ನು ಗುಲಾಮರಾಗಿಸುತ್ತ ಬಂದಿದ್ದಾರೆ. ಹಾಗೆಯೇ ರಾಜಕಾರಣಿಗಳು ಉದ್ದಾನುದ್ದದ ಆಶ್ವಾಸನೆಗಳ ಪಟ್ಟಿಯನ್ನು ಒಂದೆಡೆ ಕೊಡುತ್ತ ಇನ್ನೊಂದೆಡೆ ಭ್ರಷ್ಟಾಚಾರ ಹಾಗೂ ಒಡೆದು ಆಳುವುದರಲ್ಲಿಯೇ ಆಸ್ಥೆವಹಿಸಿದ್ದಾರೆ. ಇದೆಲ್ಲದರಲ್ಲಿ ಸಿಲುಕಿರುವ ಮನುಷ್ಯ ಮುಗಿಯದ ಗೊಂದಲ, ವಿಷಾದ ಸಾಗರದಲ್ಲಿ ಸಿಲುಕಿ  ಭೊಗದ ಪ್ರಕರ ಬೆಳಕಿನ ಆಕರ್ಷಣೆಗೆ ಮಾರುಹೋಗುತ್ತಿದ್ದಾರೆ. ನೋವು, ಪರಿಶ್ರಮ ಮತ್ತಿತರ ಸಂಗತಿಗಳ ಬಗ್ಗೆ ಸಿದ್ಧಾಂತ ಮುಂದಿಡುವವರ ಮಾತುಗಳಾವುದಕ್ಕೂ ಅರ್ಥವೇ ಇಲ್ಲ. ಎಲ್ಲೆಡೆ ಸಾವು, ಅಸಮಾಧಾನ, ಕಣ್ಣಿರು, ಮನುಷ್ಯನ ವಿರುದ್ಧ ಮನುಷ್ಯನ್ನು ಎತ್ತಿಕಟ್ಟುವ ಕುತಂತ್ರನಡೆಯುತ್ತಿದೆ. ಇವುಗಳೆಲ್ಲ ಒಂದನ್ನೊಂದು ಸೇರಿ ತೀರಾ ಸಂಕೀರ್ಣವಾದ ಎರಕ ಮನುಷ್ಯ ಪ್ರಜ್ಞೆಯ ಸಾರಾಂಶದ ರೀತಿಯಲ್ಲಿ ಹೆಪ್ಪುಗಟ್ಟಿರುತ್ತದೆ.
ಇದು ತಲೆತಲಾಂತರದಿಂದ ಬಂದ ಸಂಸ್ಕೃತಿ-ಪರಂಪರೆಯ ಮೂಲಕ ಹರಿದು ಬಂದ ಧರ್ಮ, ಆರ್ಥಿಕ ಅನುಕೂಲತೆ, ಜೀವನೋಪಾಯದ ಬವಣೆಯೊಂದಿಗೆ ಎರಕವಾಗಿ ಮೆದುಳಿನಲ್ಲಿ ಘನೀಕರಿಸಿರುತ್ತದೆ. ಇಂಥ ಘನೀಕೃತ ಪ್ರಜ್ಞೆಯ ಪರಿಸರದಲ್ಲಿ ಸ್ವಾತಂತ್ರ್ಯ ಎಂಬುದೇ  ಸಾಧ್ಯವಾಗುವುದಿಲ್ಲ.
ಆದರೆ ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ತಕ್ಕಮಟ್ಟಿಗೆ ಬದುಕಬಹುದಾದ ವ್ಯವಸ್ಥೆಯೊಂದನ್ನೇ ನಾವು ಸ್ವಾತಂತ್ರ್ಯ ಎಂದು ಅಂದುಕೊಳ್ಳುತ್ತಿದ್ದೇವೆ. ಹಾಗೆ ಅಂದುಕೊಂಡಿರುವ ಸ್ವಾತಂತ್ರವೂ  ಬಂಧನವಲ್ಲದೆ ಮತ್ತೇನಲ್ಲ. ಇದೀಗ ನಾವಿರುವ ಬಂಧನದಲ್ಲಿ ವಿಜ್ಞಾನ ಹಾಗೂ ಲಾಬಬಡುಕತನಗಳು  ಮೇಳೈಸಿರುವುದರಿಂದಾಗಿ ಮತ್ತಷ್ಟು ವಿನಾಶಕಾರಿ ಯುದ್ಧಗಳು ನಡೆಯುತ್ತಿವೆ. ಒಂದು ಜೈಲಿನಿಂದ ಇನ್ನೊಂದು ಜೈಲಿಗೆ ಬದಲಾವಣೆಯಾಗುವುದರಿಂದ ಸ್ವಾತಂತ್ರ್ಯ ಬದುಕು ಸಾಧ್ಯವಾಗುವುದಿಲ್ಲ. ಒಬ್ಬರಾದ ನಂತರ ಇನ್ನೊಬ್ಬ ಗುರುಗಳನ್ನು ಬದಲಿಸಿಕೊಳ್ಳುವುದರಿಂದಲೂ ಮೋಕ್ಷ ಪ್ರಾಪ್ತಿಯಾಗುವುದಿಲ್ಲ; ಇನ್ನೊಂದೆಡೆ ಧರ್ಮಗುರುಗಳೆ ತಮ್ಮ ಅಸಂಬದ್ಧ ಅಧಿಕಾರವನ್ನು ಶಿಷ್ಯರ ಮೇಲೆ ವಿಧಿಸತೊಡಗುತ್ತಾರೆ. ಅದು ಯಾವುದೇ ಬಗೆಯದ್ದಿರಲಿ, ಅಧಿಕಾರ ಎಂಬ ವ್ಯವಸ್ಥೆುಂದಾಗಿ ಸ್ವಸ್ತ ಬದುಕು ಅಥವಾ ವ್ಯವಸ್ಥತ ಬಾಳನ್ನು ಬದುಕುವುದು ಸಾಧ್ಯವಿಲ್ಲ.
ಅಧಿಕಾರದ ವ್ಯವಸ್ಥೆಗಳು ಕ್ರಮೇಣ ತಾವೇ ಅಧಿಕಾರ ಪಡೆಯುವವರ ಹೊಸ ಜಗಳದ ವ್ಯವಸ್ಥೆಯಾಗಿಬಿಡುತ್ತದೆ. ಸ್ವಾತಂತ್ರ್ಯ ಎಂಬುದು ಛಿದ್ರವಾಗಿ, ಪ್ರತ್ಯೇಕವಾಗಿ ಇರುವಂಥದ್ದಲ್ಲ. ಯಾವ ಮನಸ್ಸಿನಲ್ಲಿ ಛಿದ್ರತೆಗಳಿಲ್ಲದೆ ಪರಸ್ಪರ ಸಮನ್ವಯ ಎಂಬುದು ಇರುತ್ತದೊ ಅಲ್ಲಿ ಸ್ವಾತಂತ್ರ್ಯ ಇರುವುದು ಸಾಧ್ಯ. ಅಂಥ ಮನಸ್ಸಿಗೆ ತಾನು ಮುಕ್ತನಾಗಿದ್ದೇನೆ ಎಂಬುದು ಗೊತ್ತಿರುವುದಿಲ್ಲ. ಕಾಲದ ಸೀಮೆಯಲ್ಲಿ ಭೂತವು ವರ್ತಮಾನದೊಂದಿಗೆ -ವರ್ತಮಾನವು ಭವಿಷ್ಯದೊಂದಿಗೆ ಇರುವುದು ಮಾತ್ರ ತಿಳಿಯುತ್ತದೆ. ಆಯ್ಕೆ ಎಂಬ ಸ್ವಾತಂತ್ರ್ಯದಲ್ಲಿ ಸ್ವಾತಂತ್ರವೇ ನಿರಾಕರಿಸಲ್ಪಟ್ಟಿರುತ್ತದೆ. ಎಲ್ಲಿ ಗೊಂದಲ ಇರುತ್ತದೊ ಅಲ್ಲಿ ಮಾತ್ರ ಆಯ್ಕೆ ಇರುತ್ತದೆ. ಗೃಹಿಕೆಯ ಸ್ಪಷ್ಟತೆ, ಒಳನೋಟಗಳು ಆಯ್ಕೆುಂದಾಗುವ ನೋವಿನಿಂದ ಬಿಡುಗಡೆ ಮಾಡಬಲ್ಲವು. ಸಂಪೂರ್ಣ ವ್ಯವಸ್ಥೆಯೇ ಸ್ವಾತಂತ್ರ್ಯದ ಬೆಳಕು. ಆಲೋಚನೆಯಿಂದ ಪ್ರೇಣಿತವಾದ ಎಲ್ಲ ಕರ್ಮ- ಕ್ರಿಯೆಯೂ ಅಪೂರ್ಣವಾಗಿರುವುದರಿಂದ ವ್ಯವಸ್ಥೆ ಎಂಬುದು ಆಲೋಚನೆಯಿಂದಾಗಿ ಸಾಧ್ಯವೇ ಇಲ್ಲ. ಪ್ರೇಮ ಎಂಬುದು ಆಲೋಚನೆ ಅಥವಾ ಸುಖದ ಶಿಶುವೂ ಅಲ್ಲ. ಇದನ್ನೆಲ್ಲ ಗೃಹಿಸುವುದೇ ಜಾಣ್ಮೆ. ಪ್ರೇಮ ಮತ್ತು ಜಾಣ್ಮೆಗಳು ಪರಸ್ಪರ ಪ್ರತ್ಯೇಕವಾಗಿರುವುದಿಲ್ಲ. ಇದರಿಂದಾಗಿಯೇ ಹುಟ್ಟುವ ಕ್ರಿಯೆಗಳು ನೋವುಂಟುಮಾಡುವುದಿಲ್ಲ. ಹಾಗಿದ್ದಾಗಲೇ ತಳದಲ್ಲೊಂದು ಸುವ್ಯವಸ್ಥೆ ಇರುತ್ತದೆ.



ಅಕ್ಟೋಬರ್ 3, 1973
ನಸುಕಿನಜಾವವಾಗಿದ್ದರಿಂದ ವಿಮಾನ ನಿಲ್ದಾಣದಲ್ಲಿ ಮೈಕೊರೆಯುವಷ್ಟು ಛಳಿ ; ಸೂರ್ಯ ಆಗಷ್ಟೇ ಉದಯಿಸುತ್ತಿದ್ದ. ಅಲ್ಲಿದ್ದ ಪ್ರತಿಯೊಬ್ಬರೂ ಉಣ್ಣೆಬಟ್ಟೆಯ ಮುಸುಕಿನಲ್ಲಿ ಅಡಗಿಕೊಂಡಂತಿದ್ದರೆ, ನಿಲ್ದಾಣದ ಸಿಬ್ಬಂದಿಗಳು ಮಾತ್ರಅನ್ಯಮಾರ್ಗವಿಲ್ಲದೆ ಛಳಿಯಿಂದ ನಡುಗುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ಎಂದಿನ ಗದ್ದಲ ಇದ್ದೇ ಇತ್ತು. ಒಂದೆಡೆ ಜೆಟ್ ವಿಮಾನಗಳ ಘರ್ಜನೆ, ಪ್ರಯಾಣಿಕರ ಗುಂಪುಗಳಿಂದ ದೊಡ್ಡದಾದ ಹರಟೆ, ಹೋಗುವವರಿಗೆ ಬೀಳ್ಕೊಡುವವರ ದಂಡು, ವಿಮಾನಗಳು ಆಕಾಶಕ್ಕೇರುವುದು, ಇಳಿಯುವುದೆಲ್ಲ ನಡೆದೇ ಇತ್ತು.
ಅಂದು ವಿಮಾನದಲ್ಲಿ ಕಿಕ್ಕಿರಿದು ಪ್ರವಾಸಿಗರಿದ್ದರು. ಉದ್ಯಮಿಗಳು, ಭಕ್ತಾದಿಗಳೆಲ್ಲ ಯಾತ್ರೆಗೆ ಹೊರಟಿದ್ದಾರೆ. ಕಿಕ್ಕಿರಿದ ಜನವಸತಿ, ಕೊಳಕು ಗಲ್ಲಿಗಳು, ಪ್ರವಾಸಿಗರ ಗದ್ದಲದಿಂದ ಕೂಡಿದ ಪವಿತ್ರ ಯಾತ್ರಾಸ್ಥಳ ಅಂದು ಅವರೆಲ್ಲರ ಗಮ್ಯಸ್ಥಾನವಾಗಿತ್ತು. ಯಾನ ಆರಂಭವಾಗಿ ಕೆಲ ಹೊತ್ತಿಗೆ ಹಿಮಾಲಯ ಪರ್ವತಶ್ರೇಣಿಗಳ ಮೇಲೆ ಬೆಳಗಿನ ಸೂರ್ಯಕಿರಣ ಪಸರಿಸಿದ್ದರಿಂದ ಪರ್ವತಾಗ್ರಗಳೆಲ್ಲ ನೇರಳೆಬಣ್ಣಕ್ಕೆ ತಿರುಗಿದ್ದವು. ವಿಮಾನ ಆಗ್ನೇಯ ದಿಕ್ಕಿನತ್ತ(ದಕ್ಷಿಣ-ಪಶ್ಚಿಮ) ಚಲಿಸುತ್ತಿತ್ತು. ನೂರಾರು ಮೈಲಿ ವ್ಯಾಪ್ತಿಗೆ ಹಾಸಿಕೊಂಡಿದ್ದ ಹಿಮಾಲಯ ಪರ್ವತದ ಸಾಲುಗಳು  ಆಕಾಶದಲ್ಲಿ ತೇಲುತ್ತಿರುವ ರೀತಿಯಲ್ಲಿ ಭಾಸವಾಗುತ್ತಿವೆ. ಆದರೆ ಹಿಮಾಲಯದ ವಿಜೃಂಬಣೆ ವಿಮಾನದಲಲ್ಲಿದ್ದ ಪ್ರವಾಸಿಗರನ್ನು ಆರ್ಕಸಿಯೇ ಇರಲಿಲ್ಲ. ಪಕ್ಕದ ಆಸನದಲ್ಲಿಯೇ ಇದ್ದ ಪ್ರವಾಸಿಯೊಬ್ಬ ದಿನ ಪತ್ರಿಕೆಯಲ್ಲಿ ಮುಖ ಹುದುಗಿಸಿಕೊಂಡು ನಿನ್ನೆಯ ಸುದ್ದಿಯನ್ನು ಓದುವುದರಲ್ಲಿಯೇ ಮಗ್ನನಾಗಿದ್ದ. ಇನ್ನೊಂದು ಸಾಲಿನಲ್ಲಿದ್ದ ಮಹಿಳೆ ಜಪಮಣಿ ಹಿಡಿದು ಧ್ಯಾನದಲದಲ್ಲಿ ಮಗ್ನರಾಗಿದ್ದರು. ಒಂದು ಗುಂಪು ಯಾವುದೋ ಹರಟೆಯಲ್ಲಿ ಮೈಮರೆತಿದೆ, ಕೆಲವೊಬ್ಬರು ಪರ್ವತ ಸಾಲುಗಳ ಫೋಟೊ ತೆಗೆಯುವುದರಲ್ಲಿಯೇ ಮಗ್ನರಾಗಿದ್ದಾರೆ. ಉಳಿದ ಒಂದಿಷ್ಟು ಜನ ತಮ್ಮ ಸಾಮಾನು ಸರಂಜಾಮಗಳ ಬಗ್ಗೆ ಕಾಳಜಿಯಿಂದ ಇದ್ದರೇ ವಿನ: ಭೂಮಿಯ ಭವ್ಯತೆಯನ್ನು ಗಮನಿಸಿಯೇ ಇರಲಿಲ್ಲ. ಮೇಲಿನಿಂದ ಕಾಣುವ ನದೀ ಕೊಳ್ಳಗಳು, ಎತ್ತರದ ಪರ್ವತಾಗ್ರಗಳ ಸೌಂದರ್ಯ, ಸೂರ್ಯ ಮೇಲೇರುತ್ತಿದ್ದಂತೆ ಅವುಗಳ ಬಣ್ಣದಲ್ಲಾಗುತ್ತಿದ್ದ ಬದಲಾವಣೆಗಳು ಏನೊಂದನ್ನೂ ಹೆಚ್ಚಿನವರು ಗಮನಿಸುತ್ತಲೇ ಇರಲಿಲ್ಲ. ವಿಮಾನದ ಇನ್ನೊಂದು ಮಗ್ಗಲಿನಲ್ಲಿ ತುಸು ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬರು ಹೆಚ್ಚಿನ ಯಾತ್ರಿಗಳ ಮಾರ್ಗದರ್ಶಕರಂತೆ ಕಾಣುತ್ತಿದ್ದರು. ನಡುವಯಸ್ಸಿನಲ್ಲಿದ್ದ ಆ ವ್ಯಕ್ತಿಯಲ್ಲಿ ಪಾಂಡಿತ್ಯದ ಚರ್ಯೆಗಳು ಇದ್ದು, ಆತ ಅಲ್ಲೆಲ್ಲ ಚುರುಕಾಗಿ ಓಡಾಡುತ್ತಿದ್ದರು. ಆ ವ್ಯಕ್ತಿಯ ಬಟ್ಟೆ ಕೂಡ ಆಕರ್ಷಕವಾಗಿ ಗೌರವವಾಗಿ ಕಾಣುತ್ತಿದ್ದವು. ಆ ವ್ಯಕ್ತಿ ಕೂಡ ಪರ್ವತ ಶಿಖರಗಳ ಸೌಂದರ್ಯವನ್ನೇನೂ ಗಮನಿಸುತ್ತಿರುವಂತೆ ಕಾಣಲಿಲ್ಲ. ಅಷ್ಟೊತ್ತಿಗಾಗಲೇ ಪ್ರಯಾಣಿಕರ ನಡುವೆಯೇ ನಡೆದು ಬಂದ ಆ ವ್ಯಕ್ತಿ ಪಕ್ಕದಲ್ಲಿ ಕುಳಿತುಕೊಂಡ. ಕುಳಿತುಕೊಳ್ಳಬಹುದೇ ಎಂದು ಅನುಮತಿ ಕೇಳಿಯೇ ಕುಳಿತುಕೊಂಡು ತನ್ನನ್ನು ಪರಿಚುಸಿಕೊಂಡರು.
ಒಂದಿಷ್ಟು ಮಾತನಾಡೋಣ ಎಂದು ಮಾತಿಗೆಳೆದ. ಇಂಗ್ಲೀನಲ್ಲಿ ಅಷ್ಟೊಂದೇನೂ ಸಲೀಸಾಗಿರದಿದ್ದರೂ ಶಬ್ಧಗಳನ್ನು ಹುಡುಕುತ್ತಮುಜುಗರದಿಂದಲೇ ಮಾತಾಡುತ್ತಿದ್ದ. ಆ ವ್ಯಕ್ತಿಯ ಸ್ವರ ಮಾತ್ರ ಸ್ಪಷ್ಟ ಹಾಗೂ ಇಂಪಾಗಿತ್ತು. ಮಾತಿನಲ್ಲಿ ಸೌಜನ್ಯತೆ ತುಂಬಿರುತ್ತಿತ್ತು. 'ಇದೇ ವಿಮಾನದಲ್ಲಿ ನಿಮ್ಮೊಂದಿಗೆ ಪ್ರಯಾಣದ ಅವಕಾಶ ಸಿಕ್ಕಿದ್ದು ಅತ್ಯಂತ ಖುಯ ಸಂಗತಿ' ಎಂದು ಶುರುಮಾಡಿದರು. 'ನಾನು ಯುವಕನಾಗಿದ್ದಂದಿನಿಂದಲೇ ನಿಮ್ಮ ಬಗ್ಗೆ ಕೇಳಿದ್ದೆ. 'ಧ್ಯಾನ ಮತ್ತು ವೀಕ್ಷಕ' ಎಂಬ ವಿಷಯದ ಮೇಲಿನ ನಿಮ್ಮ ಉಪನ್ಯಾಸವನ್ನು ಇತ್ತೀಚೆಗಷ್ಟೇ ಕೇಳಿದೆ. ಪಾಂಡಿತ್ಯ ವಿಚಾರಗಳಲ್ಲಿ ನನಗೆ ಆಸಕ್ತಿ, ನನ್ನದೇ ಆದ ರೀತಿಯಲ್ಲಿ ಧ್ಯಾನ ಹಾಗೂ ಶಿಸ್ತುಗಳನ್ನು ಅಳವಡಿಸಿಕೊಂಡಿದ್ದೇನೆ' ಎಂದು  ಮಾತಿಗೆ ಪ್ರಸ್ತಾವನೆ ಇಟ್ಟರು.
ಆ ಹೊತ್ತಿಗೆ ನಾವು ಪೂರ್ವದ ಕಡೆಗೆ ಪರ್ವತಗಳನ್ನು ದಾಟಿ ಹೋಗುತ್ತಿದ್ದೆವು. ನಮ್ಮ ಕೆಳಗೆ ನದಿಯೊಂದು ವಿಶಾಲವಾಗಿ ಹಾಸಿಕೊಂಡು ತನ್ನ ವೈವಿಧ್ಯವನ್ನು ತೆರೆದುಕೊಳ್ಳುತ್ತಿತ್ತು.
'ನೋಡಿದವುಗಳೇ ನೋಡುಗನಾಗಿರುತ್ತಾನೆ ಎಂದು ನೀವು ಹೇಳುತ್ತೀರಿ. ಧ್ಯಾನಿಯೇ ಧ್ಯಾನ; ಎಲ್ಲಿ ಧ್ಯಾನಿ ಇರುವುದಿಲ್ಲವೋ  ಅಲ್ಲಿ ಮಾತ್ರಧ್ಯಾನಿಸುವಿಕೆ ಸಾಧ್ಯ ಎಂದಿದ್ದೀರಿ. ಈ ಬಗ್ಗೆ ನನಗೆ ಇನ್ನಷ್ಟು ವಿವರವಾಗಿ ಕೇಳಬೇಕಾಗಿದೆ. ನನಗೆ ಧ್ಯಾನ ಎಂಬುದು ಆಲೋಚನೆಗಳನ್ನೆಲ್ಲ ನಿಯಂತ್ರಿಸಿ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವುದು, ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಾಗಿದೆ.''
ನಿಯಂತ್ರಣಕ್ಕೊಳಪಟ್ಟ ಭಾಗವೇ  ನಿಯಂತ್ರಕನಾಗಿರುತ್ತಾನೆ ಅಲ್ಲವೇ ? ಆಲೋಚಿಸುವವ ಇರುವುದು ಆಲೋಚನೆಯಲ್ಲಿ-ಶಬ್ಧಗಳು, ಬಿಂಬಗಳು ಆಲೋಚನೆಗಳು ಇಲ್ಲದಿದ್ದರೆ ಆಲೋಚಿಸುವವನಾದರೂ ಎಲ್ಲಿರುತ್ತಾನೆ ? ಅನುಭವಿಸುವವನೇ ಅನುಭವಿಸುವಿಕೆ; ಅನುಭವ ಇಲ್ಲದಿದ್ದರೆ ಅನುಭವಿಸುವವನೂ ಇರುವುದಿಲ್ಲ. ಆಲೋಚನೆಯನ್ನು ನಿಯಂತ್ರಿಸುವವನಿದ್ದಾನಲ್ಲ-ಅವನು ಆಲೋಚನೆಗಳಿಂದಲೇ ಸಿದ್ಧಗೊಂಡ ಮೂರ್ತಿಯಾಗಿರುತ್ತಾನೆ. ಆತ ಕೂಡ ಆಲೋಚನೆಯ ಒಂದು ಬಾಗವೇ. ನೀವು ಏನೇ ಹೇಳಿ ನಿಯಂತ್ರಕ ಎಷ್ಟೇ ಉದಾತ್ತ ಅಥವಾ ಭವ್ಯಗುಣದವನಾಗಿದ್ದರೂ ಆತನ ಅಸ್ತಿವಾರ ಆಲೋಚನೆಯಲ್ಲಿಯೇ ಇರುತ್ತವೆ. ಆಲೋಚನೆಯ ಕಾರ್ಯಕ್ಷೇತ್ರಎಂದಿಗೂ ಬಾಹ್ಯಾಭಿಮುಖವಾಗಿಯೇ ಇರುವುದರಿಂದ ಅದು ವ್ಯಕ್ತಿಯಲ್ಲಿ  ಮತ್ತಷ್ಟು ಪ್ರತ್ಯೇ ಕತಾಭಾವವನ್ನೇ ಉಂಟುಮಾಡಿರುತ್ತದೆ.
'ಜೀವನದ ಮೂಲ ದ್ರವ್ಯವೇ ಶಿಸ್ತು, ಹೀಗಿರುವಾಗ ಒಂದು ನಿಯಂತ್ರಣ ಎಂಬುದೇ ಇಲ್ಲದೇ ಬದುಕುವುದು ಸಾಧ್ಯವೇ ?'
ಯಾವಾಗ ನಿಯಂತ್ರಕನನ್ನೆಗೌಣವಾಗಿಸಿ ನೇರವಾಗಿ ಗಾಡ ಸತ್ಯವನ್ನಷ್ಟೇ ಗೃಹಿಸುವುದು ಸಾಧ್ಯವಾದರೆ ಬೇರೆಯದೇ ಆದ ಒಂದು ಬಗೆಯ ಶಕ್ತಿ ಉದ್ಭವವಾಗಿ ವಾಸ್ತವದ ಅರಿವಾಗುತ್ತದೆ. ನಿಯಂತ್ರಕ ಎಂದಿಗೂ ವಾಸ್ತವ ದರ್ಶನ ಮಾಡಿಸಲಾರ. ನಿಯಂತ್ರಿಸುವವ ನಿಯಂತ್ರಿಸಬಹುದು, ಹತ್ತಿಕ್ಕಬಹುದು, ಬದಲಿಸಬಹುದು ಅಥವಾ ಸತ್ಯದಿಂದ ಓಡಿಯೂ ಹೋಗಬಹುದು. ಇದಕ್ಕಿಂತ ಹೆಚ್ಚಿನದೇನೂ ನಿಯಂತ್ರಕನಿಂದ ಸಾಧ್ಯವಾಗುವುದಿಲ್ಲ. ಜೀವನವನ್ನು ಯಾವುದೇ ನಿಯಂತ್ರಣಕ್ಕೊಳಪಡಿಸದ ರೀತಿಯಲ್ಲಿ ಬದುಕಬೇಕು, ನಿಯಂತ್ರಣಕ್ಕೊಳಪಟ್ಟ ಬದುಕು ಸ್ವಸ್ತವಾಗುವುದಿಲ್ಲ;  ಇದರಿಂದಾಗಿಯೇ ಮುಗಿಯದ ಗೊಂದಲಗಳು, ವಿಷಾದ ಹಾಗೂ ದುರಂತ ಉಂಟಾಗುತ್ತವೆ.
'ಇದೆಲ್ಲ ಸಂಪೂರ್ಣ ಭಿನ್ನವಾದ ತತ್ವಜ್ಞಾನವಾಗಿದೆ.'
ಈ ಬಗ್ಗೆ ಇನ್ನಷ್ಟು ಹೇಳಬಹುದಾದರೆ , ಇದಾವುದೂ ಸಮೀಕರಿಸಿ ಸಿದ್ಧಪಡಿಸಿದ ಸೂತ್ರವಲ್ಲ. ಅಮೂರ್ತವೂ ಅಲ್ಲ. ವಾಸ್ತವ ಅಥವಾ 'ಏನಿರುವುದೋ ಅದು' ಮಾತ್ರಇರುತ್ತದೆ. ವಿಷಾದ ಎಂಬುದು ಅಮೂರ್ತವಲ್ಲ, ಅದು ಮೂರ್ತವೇ. ವಿಷಾದದ ಬಗ್ಗೆ ಒಂದು ನಿರ್ಣಯಕ್ಕೆ ಬರಬಹುದು. ಇದಮಿತ್ಥಂ ಎಂದು ಹೇಳಬಹುದು. ಒಂದು ತತ್ವವಾಗಿ, ಶಾಬ್ಧಿಕ ಹಂದರವಾಗಿ ಬಣ್ಣಿಸಬಹುದು. ಆದರೆ ವಿಷಾದ ಎಂಬುದು 'ಏನಿರುವುದೋ ಅದು' ಆಗಿರುವುದಿಲ್ಲ. ತಾತ್ವಿಕತೆ ಎಂಬುದು ವಾಸ್ತವ, ಏನಿರುವುದೋ ಅದು ಅಲ್ಲ. ಇಂಥವುಗಳನ್ನು ವೀಕ್ಷಕ ಪ್ರತ್ಯೇಕನಾಗಿ ವೀಕ್ಷಿಸುವ ಮೂಲಕ ಪರಿವರ್ತನೆಗೊಳಿಸುವುದು ಸಾಧ್ಯವಿಲ್ಲ.
'ಇದು ನಿಮ್ಮ ಸ್ವಂತ ಅನುಭವವೇ '
ಹೇಗೆ ಹೇಳುತ್ತಿರುವುದೆಲ್ಲ ಕೇವಲ ಆಲೋಚನೆ-ಶಾಬ್ಧಿಕ ಹಂದರವಾಗಿದ್ದಿದರೆ  ಇದೊಂದು ನೋವು ಹಾಗೂ ಮೂರ್ಖತನದ ಸಂಗತಿಯಾಗುತ್ತಿತ್ತು. ಹಾಗಾಗದಿದ್ದಲ್ಲಿ ಆ ಬಗ್ಗೆಮಾತಾಡುವುದೇ ಬೂಟಾಟಿಕೆ.
'ಧ್ಯಾನ ಎಂದರೇನು ಎಂಬುದನ್ನು ನಿಮ್ಮಿಂದ ಕಲಿಯುವುದಕ್ಕೆ ನಾನು ಬಯಸಿದ್ದೆ. ಆದರೇನುಮಾಡೋಣ, ವಿಮಾನ ಇಳಿಯುವ ಕಾಲ ಸನ್ನಿಹಿತವಾಯಿತಲ್ಲ. ನಮಗಿನ್ನು ಸಮಯವೇ ಇಲ್ಲ.'
ಇಳಿಯುತ್ತಲೇ ಒಂದಿಷ್ಟು ಹೂಹಾರಗಳ ಅರ್ಪಣೆಯಾುತು. ಚಳಿಗಾಲದ ಆಕಾಶ ತೀವ್ರ ನೀಲಿ ಬಣ್ಣಕ್ಕೆ ತಿರುಗಿತ್ತು.


ಅಕ್ಟೋಬರ್4, 1973
ತಾವರೆಗಳು ಅರಳುವ ಕೆರೆಯ ಪಕ್ಕದಲ್ಲಿ ವಿಷಾಲವಾದ ಒಂದು ಮರ ;  ಆತ ಚಿಕ್ಕವನಿರುವಾಗ ತನ್ನಷ್ಟಕ್ಕೇ ಹೋಗಿ ಕುಳಿತುಬಿಡುತ್ತಿದ್ದ. ಅಲ್ಲಿನ ನೇರಳೆ ಬಣ್ಣದ ತಾವರೆ ಹೂವುಗಳಿಗೆ ತೀವ್ರವಾದ ಪರಿಮಳ ಇರುತ್ತಿತ್ತು. ಮರದ ನೆರಳಿನಲ್ಲಿ ಕುಳಿತು ಹಸಿರು ಹಾವು, ಓತಿಕ್ಯಾತಗಳು, ಕಪ್ಪೆಗಳು ಮತ್ತು ನೀರು ಹಾವುಗಳನ್ನೆಲ್ಲ ಗಮನಿಸುತ್ತ ಮಗ್ನನಾಗಿ ಕುಳಿತುಬಿಡುತ್ತಿದ್ದ. ಕೆಲವೊಮ್ಮೆ ಆತನ ಸಹೋದರ ಮತ್ತಿತರರು ಬಂದು ಮನೆಗೆ ಕರೆದುಕೊಂಡು ಹೋಗಬೇಕಾಗುತ್ತಿತ್ತು. ಕೆರೆ ಹಾಗೂ ಹಳ್ಳದ ಕಾರಣದಿಂದಾಗಿ ಮರದ ಕೆಳಗಿನ ವಾತಾವರಣ ಆಹ್ಲಾದಕರವಾಗಿತ್ತು. ಅಲ್ಲಿ ಎಷ್ಟೊಂದು ವಿಷಾಲವಾದ ಪ್ರದೇಶ ಇತ್ತು. ಅದೆಲ್ಲದರ ನಡುವೆ ಮರವು ತನ್ನದೇ ಆದ ಸ್ಥಳಾವಕಾಶದಲ್ಲಿ ಬೆಳೆದು ನಿಂತಿತ್ತು. ಪ್ರತಿಯೊಂದಕ್ಕೂ ಒಂದಿಷ್ಟು ಜಾಗದ ಅವಶ್ಯಕತೆ ಇರುತ್ತದೆ. ಟೆಲಿಫೋನ್ ತಂತಿಗಳ ಮೇಲೆ ಸಾಲಾಗಿ ಕುಳಿತುಕೊಳ್ಳುವ ಹಕ್ಕಿಗಳನ್ನೇ ಗಮನಿಸಿ, ಸಂಜೆ ವೇಳೆ ಅವುಗಳೆಲ್ಲ ತಮ್ಮ ನಡುವೆ ಒಂದಿಷ್ಟು ಸಮನಾದ ಜಾಗವನ್ನು ಬಿಟ್ಟೇ ಕುಳಿತುಕೊಂಡಿರುತ್ತವೆ ; ಆ ದೃಶ್ಯ ನೋಡುವುದಕ್ಕೇ ಒಂದು ಬಗೆಯ ಖುಷಿ.
ಇಬ್ಬರು ಸಹೋದರರು ಹಲವರ ನಡುವೆ ಚಿತ್ರಪಟಗಳಿರುವ ಗೋಡೆಯ ಕೊಠಡಿಯೊಂದರಲ್ಲಿ ಕುಳಿತಿರುತ್ತಿದ್ದರು. ಅಲ್ಲಿ ಸಂಸ್ಕೃತ ಶ್ಲೋಕಗಳ ಪಠಣ ನಡೆಯುತ್ತಿತ್ತು. ಶ್ಲೋಕ ಪಠಣ ಮುಗಿಯುತ್ತಲೇ ಒಮ್ಮೆಲೇ ಕೊಠಡಿಯಲ್ಲಿ ಮೌನ ಆವರಿಸಿರುತ್ತದೆ. ಅದು ಸಂಜೆಯ ಸಂಧ್ಯಾವಂದನೆಯಾಗಿರುತ್ತಿತ್ತು. ಅವರಲ್ಲಿ ಕಿರಿಯನಿಗೆ ಅಲ್ಲಿಯೇ ನಿದ್ದೆ ಆವರಿಸಿ ಸುತ್ತಿಕೊಂಡು ಮಲಗಿಬಿಡುತ್ತಿದ್ದ. ಆತ ಇನ್ನು ಏಳುವುದು ಮಾರನೆ ದಿನ ಎಲ್ಲರೂ ಎದ್ದು ಮನೆಯಿಂದ ಹೊರಟ ನಂತರವೇ. ಕೊಠಡಿ ಅಷ್ಟೊಂದೇನೂ ದೊಡ್ಡದಲ್ಲ. ಅದರಲ್ಲಿಯೇ ದೇವ ದೇವಿಯರ ಚಿತ್ರಗಳು ತುಂಬಿದ್ದವು.
ದೇವಸ್ಥಾನ ಹಾಗೂ ಚರ್ಚ್‌ಗಳ ಕಿರಿದಾದ ಗೋಡೆಗಳಲ್ಲೂ ಮನುಷ್ಯ ಬ್ರಹ್ಮಾಂಡವನ್ನೇ ಹಿಡಿದಿಡಲು ಪ್ರಯತ್ನಿಸುತ್ತ ಬಂದಿದ್ದಾನೆ. ಕಾಲ್ಪನಿಕ ಚಿತ್ರಗಳನ್ನುಸೃಷ್ಟಿಸಿರುವುದು, ವಿಭಿನ್ನ ಕೆತ್ತನೆ ಕೆತ್ತುವ ಪ್ರಯತ್ನವನ್ನು ಹಲವೆಡೆ ಮಾಡಿದ್ದಾನೆ. ಇದು ಎಲ್ಲೆಡೆ ಮಂದಿರಗಳಲ್ಲಿ ಕಾಣಸಿಗುತ್ತವೆ. ಇದೇ ಆಶಯ ಮಸೀದಿಗಳ ವಿಚಾರದಲ್ಲಿ ಬಂದಾಗ ಶಬ್ಧ- ವಾಕ್ಯಗಳಾಗಿ ಮೂಡಿರುತ್ತವೆ. ಪ್ರೇಮ ಎಂಬುದಕ್ಕೆ ವಿಷಾಲವಾದ ಅವಕಾಶ ಬೇಕಾಗಿರುತ್ತದೆ. ಆ ಕೊಳಕ್ಕೆ ಒಂದಿಷ್ಟು ಹಾವುಗಳು ಬರುತ್ತಿದ್ದವು. ಅಪರೂಪಕ್ಕೆ ಜನರೂ ಬಂದು ಹೋಗುತ್ತಿದ್ದರು. ಕೊಳಕ್ಕೆ ಇಳಿಯುವುದಕ್ಕೆ ಕಲ್ಲಿನ ಸೋಪಾನಗಳನ್ನು ಮಾಡಲಾಗಿತ್ತು. ಕೊಳದಲ್ಲಿ ತಾವರೆ ಹೂವುಗಳು ಸಿಗುತ್ತಿದ್ದವು.
ಆಲೋಚನೆ ನಿರ್ಮಿಸುವ ಸ್ಥಳಾವಕಾಶಕ್ಕೆ ಮಿತಿ ಇದೆ, ಇದನ್ನುಅಳೆಯಬಹುದು. ಸಂಸ್ಕೃತಿ ಹಾಗೂ ಧರ್ಮಗಳು ಇದರದ್ದೇ ಉತ್ಪನ್ನಗಳಾಗಿವೆ. ಮನಸ್ಸಿನಲ್ಲಿ ಆಲೋಚನೆಗಳೇ ತುಂಬಿರುತ್ತವೆ, ಆಲೋಚನೆಯಿಂದಾಗಿಯೇ ಮನಸ್ಸು ಎಂಬುದು ಉಂಟಾಗಿರುತ್ತದೆ. ಮನಸ್ಸಿನ ಪ್ರಜ್ಞೆ ಎಂದರೆ ಆಲೋಚನೆಗಳ ಹಂದರ, ಅದರಲ್ಲಿ ಸ್ಥಳಾವಕಾಶ ಎಂಬುದು ಸಣ್ಣದಾಗಿರುತ್ತದೆ. ಅದರಲ್ಲಿನ ಅವಕಾಶ ಎಂದರೆ ಕಾಲದ ಚಲನೆಯಾಗಿರುತ್ತದೆ. ಇಲ್ಲಿಂದ ಅಲ್ಲಿಗೆ, ಕೇಂದ್ರದಿಂದ ಪ್ರಜ್ಞಾ ಸೀಮೆಯ ವರೆಗೆ ಕಾಲದ ಚಲನೆ ಇರುತ್ತದೆ. ಇಂಥ ಮನಸ್ಸಿನ ಕೇಂದ್ರದಲ್ಲಿ  ನಿರ್ಮಾಣವಾಗುವ  ಸ್ಥಳಾವಕಾಶ ಎಂದರೆ ಅದೊಂದು ರೀತಿಯ ಆಲೋಚನೆಗಳ ಬಂಧನವೇ ಆಗಿರುತ್ತದೆ. ಮನಸ್ಸಿನ ಸಂಬಂಧಗಳು ಇಕ್ಕಟ್ಟಾದ  ಸ್ಥಳಾವಕಾಶದಲ್ಲಿ ಸಿಲುಕಿ ನರಳುತ್ತವೆ. ಇಂಥ ಮನಸ್ಸು ಬದುಕುವಿಕೆಯನ್ನೇ ನಿರಾಕರಿಸುತ್ತದೆ. ನಿಜವಾದ ಬದುಕಿಗೆ ಸ್ಥಲಾವಕಾಶಗಳು ಬೇಕು. ಇಕ್ಕಟ್ಟಾದ ಜಾಗವನ್ನು ಕೇಂದ್ರೀಕರಿಸಿಕೊಂಡು ಬದುಕುವುದು ಎಂದರೆ ಜಗಳಕ್ಕೆ ಎಡೆಮಾಡಿಕೊಡುತ್ತದೆ. ಜೊತೆಗೆ ನೋವು, ವಿಷಾದಗಳಿಗೆಲ್ಲ ಎಡೆಮಾಡಿಕೊಡುವುದರಿಂದ ಅದು ನಿಜ ಅರ್ಥದಲ್ಲಿ ಬದುಕೇ ಅಲ್ಲ.
ನೀನು ಮತ್ತು ಆ ಮರದ ನಡುವಿನ ಅಂತರದ ಅವಕಾಶದಲ್ಲಿ  ನಿನ್ನ ಬಾಲ್ಯದ ಜಗತ್ತು ಇತ್ತು. ಆ ಜಗತ್ತಿನಲ್ಲಿ  ತಿಳಿವಳಿಕೆಗಳ ರೂಪದಲ್ಲಿಕಾಲ ಆವರಿಸಿತ್ತು. ಬಾಲಕನಲ್ಲಿದ್ದ ಕಾಲವೇ ಆತ ಮತ್ತು ಮರದ ನಡುವಿನ ದೂರ ಏನು ಎಂಬುದನ್ನು  ಅಂದಾಜು ಮಾಡುತ್ತಿತ್ತು. ಅವನು ಹಾಗೂ 'ಏನಿದೆಯೋ ಅದು'ರ ನಡುವಿನ ಅಂತರವನ್ನು  ಕೂಡ. ವೀಕ್ಷಕನಿಲ್ಲದಾದಾಗ ಅಂತರ ಎಂಬುದೂ ಉಳಿದಿರುವುದಿಲ್ಲ. ಮರದೊಂದಿಗೆ ತನ್ನನ್ನು ಗುರುತಿಸಿಕೊಳ್ಳುವಂಥದ್ದಿರಬಹುದು, ಇನ್ನೊಬ್ಬನ ಜೊತೆಗೊ ಅಥವಾ ಸಮೀಕರಣಗಳ ಜೊತೆಗೊ ಗುರುತಿಸಿಕೊಳ್ಳುವುದೂ ಇದ್ದೀತು- ಅದೆಲ್ಲವೂ ಆಲೋಚನೆ ತನ್ನ ಭದ್ರತೆಗಾಗಿ ಮಾಡುವ ಕಸರತ್ತೇ ಆಗಿದೆ. ಅಂತರ ಎಂಬುದು ಎರಡು ಬಿಂದುಗಳ ನಡುವಿನ ಸ್ಥಲಾವಕಾಶವಾಗಿರುತ್ತದೆಯಷ್ಟೆ, ಅಂತರವನ್ನು ಕ್ರಮಿಸಲು ಕಾಲ ಎಂಬುದು ಬೇಕಿರುತ್ತದೆ. ಒಳಮುಖವಾಗಿರಲಿ ಅಥವಾ ಹೊರಮುಖನಾಗಿರಲಿ ಚಲನೆಗೆ ದಿಕ್ಕು ಎಂಬುದು ಇದ್ದಾಗ ಮಾತ್ರ ಅಂತರವೆಂಬುದು ಉಳಿದಿರುತ್ತದೆ. ತನ್ನ ಹಾಗೂ ವಾಸ್ತವದ ನಡುವೆ ಒಂದು ಅಂತರವಾಗಿ ವೀಕ್ಷಕ 'ಏನಿರುತ್ತದೊ ಅದು' ರಿಂದ ಪ್ರತ್ಯೇಕವಾಗಿರುತ್ತಾನೆ. ಇದರಿಂದಾಗಿಯೇ ತಿಕ್ಕಾಟ ಹಾಗೂ ವಿಷಾದಗಳು ಮನಸ್ಸಿನಲ್ಲಿ ಬೆಳೆಯುತ್ತವೆ. ಯಾವಾಗ ನೋಡುವಿಕೆ ಹಾಗೂ ನೋಡುಗನ ನಡುವೆ ಕಾಲ ಅಥವಾ ಪ್ರತ್ಯೇಕ ಎಂಬುದು ಇರುವುದಿಲ್ಲವೊ ಆಗ 'ಏನಿರುವುದೊ ಅದು' ಸನ್ನಿಹಿತವಾಗುತ್ತದೆ. ಪ್ರೇಮ ಎಂಬುದು ಇದ್ದಾಗ ಅಲ್ಲಿ ವೀಕ್ಷಕ, ಕಾಲ, ಅಂತರ ಎಂಬ ಯಾವೊಂದೂ ಇರುವುದಿಲ್ಲ.
ಆತನ ಸಹೋದರ ಒಂದು ದಿನ ಸತ್ತುಹೋದ. ಇದರಿಂದ ವಿಷಾದದ ಮಡುವಿನಲ್ಲಿ ಸಿಲುಕಿದ ಆತನಲ್ಲಿ ಯಾವ ದಿಕ್ಕಿನಲ್ಲೂ ಚಲನೆ ಎಂಬುದೇ ಸಾಧ್ಯವಿರಲಿಲ್ಲ. ಈ ನಿಶ್ಚಲ ಸ್ಥಿತಿಯಲ್ಲೇ ಆತನಲ್ಲಿದ್ದ ಕಾಲ ಎಂಬುದು ಕೊನೆಗೊಂಡಿತು. ಪರ್ವತಗಳು, ಹಸಿರು ನೆರಳಿನ ತೊಪ್ಪಲಿನಲ್ಲಿ ನದಿಯೊಂದು ಹುಟ್ಟುಕೊಂಡಿತು. ಬಾರೀ ಗರ್ಜನೆಯೊಂದಿಗೆ ಅದು ಸಮುದ್ರವನ್ನ ಪ್ರವೇಶಿಸಿತು. ಅನಂತ ದಿಗಂತದಲ್ಲಿ ಐಕ್ಯವಾಯಿತು.
ಮನುಷ್ಯ ಜೀವಿ ಪೆಟ್ಟಿಗೆಗಳೊಳಗಿನ ಡ್ರಾವರ್‌ಗಳಂತೆ ಮಿಸುಕಾಡದ ರೀತಿಯಲ್ಲಿ ಬಂಧಿತನಾಗಿ ಜೀವ ಸವೆಸುತ್ತಾನೆ. ಅವುಗಳಲಿ ಸ್ಥಳಾವಕಾಶ ಎಂಬುದೇ ಇದ್ದಿರುವುದಿಲ್ಲ. ಅವುಗಳಲ್ಲೇನಿತ್ತು ಹಿಂಸೆ, ಕ್ರೌರ್ಯ, ಆಕ್ರಮಣದ ಹವಣಿಕೆ ಮತ್ತೊಂದಿಷ್ಟು ಕುಚೋದ್ಯಗಳು ಮಾತ್ರ ಇರುತ್ತವೆ. ಪ್ರತೀ ಪೆಟ್ಟಿಗೆಗಳು ಪರಸ್ಪರ ಘರ್ಷಣೆಗಿಳಿದು ಪರಸ್ಪರ ನಾಶದ ಮಾರ್ಗವನ್ನು ಹಿಡಿಯುತ್ತವೆ.
ಭೂಮಿಯೇ ನದಿ, ನದಿಯೇ ಭೂಮಿ ; ಒಂದನ್ನು ಬಿಟ್ಟು ಇನ್ನೊಂದು ಇರುವುದಿಲ್ಲ.
ಹಾಗೆ ಹೇಳುತ್ತ ಹೋದರೆ ಶಬ್ಧಗಳಿಂದ ಅದು ಮುಗಿಯುವುದೇ ಇಲ್ಲ. ಸಂವಹನ ಎಂಬುದು  ಎರಡು ರೀತಿಯಲ್ಲಿ ಸಾಧ್ಯವಾಗುತ್ತದೆ. ಒಂದು ಶಬ್ಧದಿಂದ ಸಾಕಾರವಾಗುತ್ತದೆ, ಇನ್ನೊಂದು ಶಬ್ಧ ರಹಿತವಾಗಿ. ಶಬ್ಧವನ್ನು ಕೇಳಿಸಿಕೊಳ್ಳುವುದು ಒಂದು ಬಗೆಯಾದರೆ ಶಬ್ಧ ರಹಿತವಾಗಿ 'ಏನಿದೆಯೋ ಅದನ್ನು' ಗೃಹಿಸುವುದು ಇನ್ನೊಂದು ಬಗೆ. ಶಬ್ಧಗಳನ್ನು ಅವಲಂಭಿಸಿ ತಿಳಿದುಕೊಳ್ಳುವ ಪ್ರಕ್ರಿಯೆ ಎಂದರೆ ಸಾಮಾನ್ಯ ಸಂಗತಿ. ಶಬ್ಧಗಳನ್ನು ಸಂಗ್ರಹಿಸುತ್ತ ಹೋಗುವುದರಿಂದ ಅಂತಿಮವಾಗಿ ನ್ಕ್ರಿಯತೆಗೆ ಹೇತುವಾಗುತ್ತದೆ, ಸಂವಹನವೇ ಅಪ್ರಸ್ತುತವಾಗುತ್ತದೆ. ಶಬ್ಧ ರಹಿತವಾಗಿ ಜಗತ್ತನ್ನು ಗೃಹಿಸುವಲ್ಲಿಯೇ ಅಖಂಡ ಜ್ಞಾನದ ಸಾಕ್ಷಾತ್ಕಾರವಿದೆ, ಅದೇ ಸದ್ಗುಣದ ಅರಳುವಿಕೆಯಾಗಿದೆ. ಶಬ್ಧಗಳು ಸುಂದರ ಗೋಡೆಗಳನ್ನು ಕೊಟ್ಟವು, ಅಂಗಣವನ್ನು, ಸ್ಥಳಾವಕಾಶವನ್ನು ಕೊಡುವುದು ಅವುಗಳಿಗೆ ಸಾಧ್ಯವೇ ಇಲ್ಲ.
ನೆನಪಿಸಿಕೊಳ್ಳುವುದು, ಕಲ್ಪನೆಯ ಸಾಮ್ರಾಜ್ಯದಲ್ಲಿ ಮುಳುಗಿರುವುದು ಎಂದರೆ ಸುಖ ತಂದು ಕೊಡುವ ನೋವಿನ ಅಭಿವ್ಯಕ್ತಿ. ಪ್ರೇಮ ಎಂಬುದು ಸುಖವಲ್ಲ.
ಆ ಬೆಳಗ್ಗೆ ಉದ್ದನೆಯ ಹಸಿರು ಹಾವೊಂದು ಅಲ್ಲಿತ್ತು. ಅದು ತೀರಾ ಸೂಕ್ಷ್ಮ ಹಾಗೂ ಹಸಿರು ಎಲೆಗಳ ನಡುವೆ ಪ್ರತ್ಯೇಕಿಸಿ ಗುರುತಿಸುವುದಕ್ಕೇ ಸಾಧ್ಯವಿಲ್ಲದಂತೆ ಇತ್ತು. ಬಹಳ ಹೊತ್ತು  ನಿಶ್ಚಲವಾಗಿ ಅಲುಗಾಡದೆ, ಕಾಯುತ್ತಕುಳಿತಿದೆ. ಇನ್ನೊಂದೆಡೆ ಓತಿಕ್ಯಾತದ ದೊಡ್ಡ ತಲೆಯೊಂದು ಗಮನ ಸೆಳೆಯುತ್ತಿತ್ತು. ಮರದ ಕೊಂಬೆಯ ಮೇಲೆ ಮೈ ಎಳೆದುಕೊಂಡಿರುವ ಓತಿಕ್ಯಾತ ಆಗಾಗ ತನ್ನ ಬಣ್ಣವನ್ನು ಬದಲಿಸುತ್ತಿತ್ತು.

* ಈ ಮೇಲಿನ ಘಟನೆಯ ಮೂಲಕ ಕೃಷ್ಣ ಮೂರ್ತಿ ತಮ್ಮ ಬಾಲ್ಯಕ್ಕೆ ಹೊರಳಿದ್ದಾರೆ.



ಅಕ್ಟೋಬರ್ 6, 1973
ಅದೊಂದು  ಹಸಿರು ಹುಲ್ಲುಗಾವಲಿನ ಪ್ರದೇಶ.  ಅದರಲ್ಲಿ ಬರೋಬ್ಬರಿ ಒಂದು ಎಕರೆ  ಜಾಗಕ್ಕೆ ಬೆಳೆದು ನಿಂತಿರುವ  ಮರವೊಂದಿತ್ತು. ವಯಸ್ಸಿನಲ್ಲಿ ಹಿರಿಯದಾದ  ಈ ಮರದ ಬಗ್ಗೆ ಸುತ್ತಲಿನ ಬೆಟ್ಟದ ಮರಗಳಿಗೆಲ್ಲ ಭಾರಿ  ಗೌರವ.  ಬೃಹತ್ತಾದ ಈ ಏಕಾಂಗಿ ಮರ ಸಮೀಪದ ತೊರೆಯ  ಗದ್ದಲ, ಬೆಟ್ಟಗಳು  ಮತ್ತು ಸಂಕದಾಚೆ  ಇರುವ ಬಿಡಾರವನ್ನೂ ಮೀರಿ ತನ್ನಪ್ರಭುತ್ವ  ಮೆರೆದಿತ್ತು. ಆ ದಾರಿಯಲ್ಲಿ  ಹೋಗುತ್ತಿದ್ದಾಗ ಖುಷಿಂದ ನೋಡಿ ಅದನ್ನು  'ನೀನು' ಮೆಚ್ಚಿಕೊಂಡಿದ್ದೆ. ಹಿಂದಿರುಗಿ ಬರುವಾಗ  ಇನ್ನಷ್ಟು ಸಾವಧಾನವಾಗಿ  ಮರವನ್ನು ವೀಕ್ಷಿಸಿದೆ. ಮರದ ಕಾಂಡ ದೊಡ್ಡದಾಗಿ  ಗಟ್ಟಿಮುಟ್ಟಾಗಿತ್ತಲ್ಲದೆ ಆಳವಾದ ಭೂಮಿಯಲ್ಲಿ ಹುಗಿದುಕೊಂಡಿತ್ತು. ಸುಲಭದಲ್ಲಿ ಇದನ್ನು ಹಾಳು ಗೆಡಹುವುದೆಲ್ಲ ಸಾಧ್ಯವೇ ಇರಲಿಲ್ಲ. ಕೊಂಬೆಗಳೆಲ್ಲ ಉದ್ದುದ್ದವಾಗಿ  ಕಪ್ಪಾಗಿ ತಳಕು ಹಾಕಿಕೊಂಡಿದ್ದವು. ಮರದ ಶ್ರೀಮಂತಿಕೆಗೆ  ಸಾಕ್ಷಿಯಾದಂತಿತ್ತು ಇದರ ನೆರಳು.  ಕತ್ತಲಾಗುತ್ತಲೇ  ಮರ ತನ್ನೊಳಗೆ ಸೇರಿಕೊಂಡು  ಮುಚ್ಚಿಕೊಂಡಂತೆ ಭಾಸವಾಗುತ್ತಿದ್ದರೆ, ಹಗಲಿನ ಬೆಳಕಿನಲ್ಲಿ  ಕೈ ಬೀಸಿ ತನ್ನೊಳಗೆ  ಆಹ್ವಾನಿಸುತ್ತಿತ್ತು. ಗರಗಸವನ್ನಾಗಲಿ ಅಥವಾ ಕೊಡಲಿಯ ಪೆಟ್ಟಿಗೂ ಸಿಗದ ಕಾರಣ ಮರವು ಒಂದಿಷ್ಟು  ಮುಕ್ಕಾಗದೆ ಸಮಗ್ರವಾಗಿತ್ತು. ಸೂರ್ಯ ಪ್ರಖರವಾಗಿದ್ದ ಒಂದು ದಿನ ಅದರ ಕೆಳಗೆ ನೀನು ಕುಳಿತಿದ್ದೆ. ಆಗ ಅದರ ವಯಸ್ಸಿನೊಂದಿಗೆ ಇರುವ ಪೂಜ್ಯ ಭಾವದ  ಅರಿವು ನಿನಗಾಗಿತ್ತು. ನೀನು ಅದರೊಂದಿಗೆ  ಏಕಾಂಗಿಯಾಗಿದ್ದ ಕಾರಣ ಅದರ ಆಳ ಹಾಗೂ ಜೀವನದ ಸೌಂದರ್ಯಗಳ ಅರಿಯುವುದು ಸಾಧ್ಯವಾಯಿತು.
ಸೇತುವೆಯಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡುತ್ತಿದ್ದಾಗ ವೃದ್ಧ ಹಳ್ಳಿಗರು ನಿನ್ನ ಸಮೀಪದಲ್ಲೇ  ದಾಟಿ ಹೋಗುತ್ತಿದ್ದರು. ಅವರಲ್ಲೊಬ್ಬನಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲ. ಒಂದು ಕೈಯಲ್ಲಿ ಚೀಲ ಇನ್ನೊಂದರಲ್ಲಿ ಊರುಗೋಲನ್ನು  ಹಿಡಿದು ಸಾವಧಾನವಾಗಿ ದಾಟುತ್ತಿದ್ದ. ಅಂಥದ್ದೇ  ಒಂದು ದಿನ ಸಂಜೆ ಅಸ್ತಮಿಸುತ್ತಿದ್ದ ಸೂರ್ಯನ ಬೆಳಕು ಎಲ್ಲೆಡೆ ಬಂಡೆಗಳು, ಪೊದೆ , ಹುಲ್ಲು ಮತ್ತು  ಇಡೀ ಹೊಲದಲ್ಲಿ ಬಿದ್ದು ಇವುಗಳೆಲ್ಲದರ ಒಳಗಿನಿಂದಲೇ ಬೆಳಕು  ಬಂದಂತೆ ಭಾಸವಾಗುತ್ತಿತ್ತು. ಹಾಗೆಯೇ ಕಮಾನು  ಆಕಾರದ ಗುಡ್ಡೆಯೊಂದರ ಹಿಂದೆ  ಸೂರ್ಯ ಅಸ್ತಂಗತನಾದ. ಇದೆಲ್ಲ ವೈಭವದ ನಡುವೆ  ಆಕಾಶದಲ್ಲಿ  ನಕ್ಷತ್ರವೊಂದರ ಜನನವಾಗಿತ್ತು. ಹಳ್ಳಿಗರೆಲ್ಲ ಹೋಗುತ್ತ ನಿನ್ನ ಸಮೀಪ ಒಮ್ಮೆ ನಿಂತು ಸೂರ್ಯಾಸ್ತದ ಸೌಂದರ್ಯದೆಡೆಗೆ  ಒಮ್ಮೆ, ಇನ್ನೊಮ್ಮೆ ನಿನ್ನ ಕಡೆಗೆ ನೋಡುತ್ತಿದ್ದರು. ನೀನು ಅವರಲ್ಲಿ ಪ್ರತಿಯೊಬ್ಬರನ್ನು  ನೋಡಿದಾಗ  ಆತ ಏನೊಂದು ಮಾತನಾಡದೆ ಭಾರವಾದ ಹೆಜ್ಜೆಯನ್ನು ಮುಂದಿಡುತ್ತಿದ್ದ. ಆ ಸಂವಹನದಲ್ಲಿ  ಪ್ರೀತಿ ಇತ್ತು. ಕೋಮಲ ಹಾಗೂ ಗೌರವ ಇತ್ತು. ಅದೊಂದು ಕ್ಷುಲ್ಲಕ ಗೌರವವಲ್ಲ. ಧಾರ್ಮಿಕ ಭಾವನೆಯ ಗೌರವ. ಆ ಕ್ಷಣದಲ್ಲಿ  ಮನಸ್ಸಿನಲ್ಲಿದ್ದ ಕಾಲ - ಆಲೋಚನೆಗಳೆಲ್ಲ ಸ್ತಬ್ಧಗೊಳ್ಳುತ್ತಿತ್ತು.
ನೀನು ಮತ್ತು ಆವನು ಇಬ್ಬರೂ ಅಪ್ಪಟ ದಾರ್ಮಿಕ ವ್ಯಕ್ತಿಗಳಾಗಿದ್ದಿರಿ. ಜಗತ್ತಿನ ಸುಖ, ಧು:ಖ ಅಥವಾ ಯಾವೊಂದು ಪ್ರಲೋಬನವೂ ನಿಮ್ಮನ್ನು ಬ್ರಷ್ಟರನ್ನಾಗಿಸುವುದು ಸಾಧ್ಯವಿರಲಿಲ್ಲ. ಬಂಡೆಗಳಿಂದ ಕೂಡಿರುವ  ಗುಡ್ಡದ ಹಾದಿಯಲ್ಲಿ ಭೇಟಿಯಾದಾಗ  ಅಥವಾ ಇನ್ನೆಲ್ಲೊ ಸಂಧಿಸಿದಾಗ  ಪರಸ್ಪರರನ್ನುನೋಡುತ್ತಿದ್ದಿರಿ. ಆ ನೋಡುವಿಕೆಯಲ್ಲಿ  ಆತ್ಮಾನಂದದ  ಅನುಭವವಾಗುತ್ತಿತ್ತು.
ದಾರಿಯ ಪಕ್ಕದಲ್ಲಿ ಇದ್ದ ದೇವಸ್ಥಾನವೊಂದರಲ್ಲಿ ಅಂದು ಪೂಜೆಯನ್ನು ಮುಗಿಸಿ ಆತ ತನ್ನ ಪತ್ನಿಯೊಂದಿಗೆ ಮನೆಗೆ ಹಿಂದಿರುಗುತ್ತಿದ್ದ. ದೇವಳದ ಭಜನೆ, ಮಂತ್ರಘೋಷಗಳ ಪ್ರಭಾವದಿಂದ ಅವರು ಒಂದಿಷ್ಟು ಮೌನವಾಗಿದ್ದರು. ರಸ್ತೆ ಇಳಿದು ಅವರು ಮುಂದಾಗುತ್ತಿದ್ದಂತೆ ನೀನು  ಅವರ ಹಿಂದೆ ನಡೆದುಬರುವಂತಾಗಿತ್ತು.  ಧಾರ್ಮಿಕ ಬದುಕನ್ನು ನಡೆಸಬೇಕೆಂಬ ಕಟ್ಟಳೆಗೊಳಗಾದ ಈ  ದಂಪತಿಯ ಭಾವನೆಯಲ್ಲಿದ್ದವಿಷಾದ ಅಂದು ನಿನ್ನಗಮನಕ್ಕೆ ಬಂದಿತ್ತು. ಬೆಳೆಯುವ  ಮಕ್ಕಳನ್ನು ಸಾಕುವ, ಅವರ ಬೇಕುಗಳನ್ನು ಈಡೇರಿಸುವ ಜವಾಬ್ದಾರಿ  ಹೆಗಲ ಮೇಲೆ ಬರುತ್ತಲೇ ಅಂಥ ಕಟ್ಟಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಅವರಿಂದ ಸಾಧ್ಯವಾಗಿರಲಿಲ್ಲ.  ಆ ವ್ಯಕ್ತಿಗೆ ಅದೇನೋ ವೃತ್ತಿ ಇತ್ತು.ಅವನಿಗೆ ಮಕ್ಕಳನ್ನು ನಿರ್ವಹಿಸುವ ಸಾಮರ್ಥ್ಯವೂ ಇತ್ತು. ಒಂದು ದೊಡ್ಡ ಮನೆಯನ್ನೂ  ಕಟ್ಟಿಕೊಂಡಿದ್ದ. ಸಂಸಾರದ ಜಂಜಡ ಆತನನ್ನು ಅಲುಗಾಡಿಸಿಬಿಡುತ್ತಿತ್ತು. ಆಗಾಗ ದೇವಸ್ಥಾನಕ್ಕೆ ಹೋಗುತ್ತಿದ್ದರೂ  ಹೋರಾಟ ನಡೆದೇ ಇರುತ್ತದೆ.
ಶಬ್ಧವು ಅದು ಸಂಕೇತಿಸುವ ಮೂಲ ವಸ್ತುವಲ್ಲ. ಪ್ರತಿಬಿಂಬ ಅಥವಾ  ಸಂಕೇತಗಳು  ನಿಜ ಸಂಗತಿಯಾಗಿರುವುದಿಲ್ಲ. ವಾಸ್ತವಿಕತೆ ಸತ್ಯಗಳೆಲ್ಲ ಒಂದು ಶಬ್ದವಾಗಿರುವುದಿಲ್ಲ. ಸತ್ಯವನ್ನು ಶಬ್ದರೂಪದಲ್ಲಿ ಹಿಡಿದಿಟ್ಟರೂ, ಅದು ಮರಳ ಮೂರ್ತಿಯಂತೆ ತೊಳೆದುಹೋಗಿರುತ್ತದೆ. ಆ ಜಾಗದಲ್ಲಿ ಭ್ರಮೆ  ಆವರಿಸುತ್ತದೆ. ತತ್ವಾದರ್ಶಗಳು, ನಂಬಿಕೆ ಮತ್ತಿತರ ಗೊಂದಲಗಳು ಹಾಗೂ ಅಧಿಕಾರದ ಶಕ್ತಿಗಳನ್ನು  ಜಾಣ್ಮೆ ಸಂಪೂರ್ಣವಾಗಿ  ತಿರಸ್ಕರಿಸಬಹುದು. ಆದರೆ ಇನ್ನೊಂದೆಡೆ  ಕಾರಣಗಳು ಇವುಗಳಿಗೆಲ್ಲ ಸಮರ್ಥನೆ  ನೀಡುತ್ತಿರುತ್ತವೆ. ಕಾರಣ ಎಂಬುದು ಆಲೋಚನೆಯ ವ್ಯವಸ್ಥೆಯಾಗಿದ್ದು, ಆಲೋಚನೆ ಎಂಬುದು ಬಾಹ್ಯದ ಪ್ರಚೋದನೆ. ಆಲೋಚನೆ ಹೊರಗಿನದ್ದಾದ್ದರಿಂದ  ಒಳಗಿನ ವ್ಯವಸ್ಥೆಗಳನ್ನೆಲ್ಲ ತನಗೆ ಬೇಕಾದ ರೀತಿಯಲ್ಲಿಜೋಡಿಸಿರುತ್ತದೆ.
ಯಾವುದೇ  ವ್ಯಕ್ತಿಯೂ  ಕೇವಲ ಬಾಹ್ಯ ಪ್ರಪಂಚದೊಂದಿಗೆ  ಬದುಕಲಾರ. ಒಂದಲ್ಲ ಒಂದು ಸಂದರ್ಭದಲ್ಲಿ  ಆತನಿಗೆ  ಆಂತರಿಕತೆ ಅಥವಾ ಒಳವ್ಯವಸ್ಥೆಯ ಅವಲಂಭನೆ ಅನಿವಾರ್ಯವೇ  ಆಗುತ್ತದೆ. ಇದೇ ವಿಭಜನೆಯ ತಳಹದಿಯಲ್ಲಿ  'ನಾನು ' ಮತ್ತು ' ನನ್ನ ಹೊರತುಪಡಿಸಿ' ಎಂಬ ಯುದ್ಧ ನಡೆಯುತ್ತಿರುತ್ತದೆ. ಹೊರಗಿನದೆಂದರೆ ದೇವರು,  ಧರ್ಮಬೋಧನೆ  ಹಾಗೂ ತತ್ವಾದರ್ಶಗಳ ತಿರುಳು. ಆಂತರಿಕತೆ ಎಂಬುದು  ಹೊರಗಿನವುಗಳ ನೆರಳಲ್ಲಿ ಹೊಂದಿಕೊಳ್ಳುವುದಕ್ಕೆ  ಹೆಣಗಾಡುತ್ತಿರುತ್ತದೆ. ಗೊಂದಲಕ್ಕೆ ಕಾರಣವಾಗುತ್ತಿರುತ್ತದೆ.
ಸರಿಯಾಗಿ ನೋಡಿದರೆ ಇಲ್ಲಿ ಬಾಹ್ಯ ಮತ್ತು ಆಂತರಿಕ ಅಥವಾ ಒಳ ಮತ್ತು ಹೊರ ಎಂಬ ವಿಭಜನೆ ಇರುವುದಿಲ್ಲ. ಇಲ್ಲಿರುವುದು ಕೇವಲ ಪರಿಪೂರ್ಣತೆ ಮಾತ್ರ. ಅನುಭವಿಸುವ ಪ್ರಕ್ರಿಯೆಯೇ ಅನುಭವಿಸಿದವನಾಗುತ್ತಾನೆ. ವಿಭಜನೆಗಳೇ ಅಸ್ವಸ್ತತೆಯಾಗುತ್ತದೆ. ಪರಿಪೂರ್ಣತೆ ಎಂಬುದನ್ನು ಕೇವಲ ಶಾಬ್ಧಿಕವಾಗಿ  ಗ್ರಹಿಸಬಾರದು. ಒಳಗಿನ ಹಾಗೂ ಹೊರಗಿನದೆಂಬ ಪ್ರಪಂಚದ ಪ್ರತ್ಯೇಕತೆ  ಹೊರಟು ಹೋಗಿ ಬಿಡಬೇಕು. ಆಲೋಚಿಸುವವನೇ  ಆಲೋಚನೆಯಲ್ಲಿರುತ್ತಾನೆ.
ಒಂದು ದಿನ ಹಾಗೆ ನಡೆದುಕೊಂಡು ಹೋಗುತ್ತಿದ್ದಾಗ 'ನಿನ್ನಲ್ಲಿ' ಏನೊಂದು ಆಲೋಚನೆಗಳೂ ಇರಲಿಲ್ಲ. ವಿಕ್ಷಕನಿಲ್ಲದ ಕೇವಲ ವೀಕ್ಷಣೆಯ ಸ್ಥಿತಿ ಅದು. ಆ ಹೊತ್ತಿಗೆ ಅಚಾನಕ್ಕಾಗಿ ಸುತ್ತಲ ಪರಿಸರದ ಪಾವಿತ್ರ್ಯತೆ- ಆಲೋಚನೆಗೆ ನಿಲುಕದ ಪಾವಿತ್ರ್ಯತೆ ನಿನ್ನ ಗಮನಕ್ಕೆ ಬಂದಿತ್ತು. ನೀನು ಅಲ್ಲಿಯೇ ನಿಂತು ಆ ಮರವನ್ನು ಸಂಪೂರ್ಣವಾಗಿ ವೀಕ್ಷಿಸಿದ್ದೆ. ಅಲ್ಲಿನ ಹಕ್ಕಿಗಳು, ಪಕ್ಕದಲ್ಲಿ ಸಾಗಿ ಹೋಗುವವರನ್ನುಕೂಡ. ಇದೆಲ್ಲ ಕೇವಲ ಭ್ರಮೆ ಅಥವಾ ಮನಸ್ಸಿನಲ್ಲಿ ನಡೆಯುವ ಆತ್ಮವಂಚನೆಯ ವಿಕಲ್ಪವಾಗಿರಲಿಲ್ಲ. ನಿನ್ನ ಕಣ್ಣಿನಲ್ಲಿ, ಅಸ್ತಿತ್ವದಲ್ಲಿ ಆ ಮರ, ಹಕ್ಕಿಗಳು, ಪರಿಸರವೆಲ್ಲ ಸನ್ನಿಹಿತವಾಗಿತ್ತು. ಪಾತರಗಿತ್ತಿ ಬಣ್ಣ ತುಂಬಿಕೊಂಡು ನಿನ್ನೊಳಗೆ ಹಾರಾಡುತ್ತಿತ್ತು.
 ಸೂರ್ಯ ಪುಳಕಿಸಿದ್ದಬಣ್ಣಗಳು ಕಳೆಗುಂದ ತೊಡಗಿದ್ದವು. ಇನ್ನೇನು ಸಂಪೂರ್ಣವಾಗಿ ಬಣ್ಣ ಹೋಗುವಷ್ಟೊತ್ತಿಗೆ  ನಸು ನಗುವ ಚಂದ್ರ ಇಣುಕತೊಡಗಿದ್ದ.




ಅಕ್ಟೋಬರ್ 7, 1973
ಅದೊಂದು ಬಗೆಯ ಮಲಯ ಮಾರುತ ; ಒಮ್ಮೆಶುರುವಾುತೆಂದರೆ ಮೂರ‌್ನಾಲ್ಕು ದಿನಗಳ ತನಕ ಎಡೆಬಿಡದೆ ಹೊಯ್ಯುತ್ತಲೇ ಇರುತ್ತದೆ. ಪರಿಣಾಮವಾಗಿ ಆ ಭಾಗದ ವಾತಾವರಣದಲ್ಲಿ ಛಳಿ ಆವರಿಸಿತ್ತು. ಮಳೆಯಿಂದಾಗಿ ಭೂಮಿ ನೀರುಂಡು ಭಾರವಾಗಿತ್ತು. ಬೆಟ್ಟದ ಹಾದಿಗಳೆಲ್ಲ ಜಾರುತ್ತಿದ್ದವು. ಸಣ್ಣಪುಟ್ಟ ತೊರೆಗಳು ತುಂಬಿ  ಮೇಲಿಂದ ಧುಮುಕುತ್ತಿದ್ದವು. ಹದಗೊಳಿಸಲಾದ  ಗದ್ದೆಗಳಲ್ಲಿಮಳೆಯ ಅಬ್ಬರದಿಂದಾಗಿ ಕೆಲಸಗಳೆಲ್ಲ ನಿಂ ತು ಹೋಗಿದೆ. ಆ ಭಾಗದ ಮರಗಳು, ಚಹಾ ತೋಟಗಳೆಲ್ಲ ಮಳೆಯಿಂದ ತೊಯ್ದುನಲುಗಿದ್ದವು. ಒಂದು ವಾರದ ಅವಧಿಗೆ ಸೂರ್ಯನ ದರ್ಶನವೇ ಇಲ್ಲದೆ ಚಳಿಯಿಂದ ನಡುಗುವಂತಾಗಿತ್ತು. ಉತ್ತರಭಾಗದಲ್ಲಿ ವಿಸ್ತರಿಸಿಕೊಂಡಿದ್ದ  ಪರ್ವತದ ಸಾಲುಗಳು  ಮಂಜಿನಿಂದ ಆವರಿಸಿಕೊಂಡಿದ್ದವು. ದೇವಸ್ಥಾನದ  ಪೌಳಿಗಳಲ್ಲಿ  ಹಾಕಿದ್ದ ಧ್ವಜಗಳೆಲ್ಲ ಮಳೆಗೆ ಒದ್ದೆಯಾಗಿ ಜೋತು ಬಿದ್ದಿದ್ದವು. ಅವುಗಳ ಬಣ್ಣಗಳೆಲ್ಲ ತೊಳೆದು ಸುಕ್ಕಾಗಿಹೋಗಿವೆ. ಸುತ್ತಲೂ ಆಗೀಗ ಗುಡುಗು ಸಿಡಿಲುಗಳು ಎರಗುತ್ತಿರುವುದರಿಂದ ಒಂದರಿಂದ  ಇನ್ನೊಂದು  ಕಣಿವೆಯಲ್ಲಿ  ಶಬ್ದ ಮಾರ್ದನಿಸುತ್ತಿತ್ತು. ತೀವ್ರ ಮಂಜು ಮುಸುಕಿದ್ದರಿಂದ  ಮಿಂಚಿನ ಪ್ರಭೆಗೆ ತೀವ್ರತೆ ಇರಲಿಲ್ಲ.
ಮಾರನೆ ದಿನ ಬೆಳಿಗ್ಗೆ  ಅನ್ನುವಷ್ಟರಲ್ಲಿ ಒಮ್ಮೆ ಪರಿಸರದ ದೃಶ್ಯವೇ ಬದಲಾಗಿದೆ ; ಆವರಿಸಿದ್ದಮೋಡಗಳೆಲ್ಲತೆರವಾಗಿ ಶುಭ್ರ ನೀಲಾಕಾಶ  ಗೋಚರಿಸ ತೊಡಗಿದೆ. ಬಹುಕಾಲದಿಂದ ನಿಂತಿರುವ ಅಗಾಧ  ಪರ್ವತ ಶ್ರೇಣಿಗಳ ತುದಿಗೆ ಸೂರ್ಯ ರಶ್ಮಿಯ ಸ್ಪರ್ಶವಾಗಿದೆ. ಇನ್ನೊಂದೆಡೆ ಊರು ಹಾಗೂ ಪರ್ವತಗಳ ಸಾಲಿನ  ಮಧ್ಯೆ ಆಳವಾದ ಕಣಿವೆಯೊಂದು  ಹಾಸಿಕೊಂಡಿದ್ದು ಅದರಲ್ಲಿ  ದಟ್ಟವಾದ ಮಂಜು ಕವಿದಿದೆ. ಊರಿನಿಂದ ನೇರಕ್ಕೆ  ಬೃಹದಾಕಾರವಾಗಿ ಗೋಚರಿಸುವ ಶಿಖರವೇ  ಹಿಮಾಲಯ ಪರ್ವತ ಶ್ರೇಣಿಯಲ್ಲಿ ಎತ್ತರವಾದ ಗೋಪುರಗಳಲ್ಲೊಂದು. ಶಿಖರ ಗೋಚರಿಸುವ ಭವ್ಯತೆ ಎಷ್ಟೊಂದು ಪ್ರಭಾವಿ ಎಂದರೆ- ಎತ್ತರದ ಗೋಪುರ  ಹಲವಾರು ಮೈಲಿಗಳ ದೂರದಲ್ಲಿದೆ ಎಂಬ ಕಲ್ಪನೆಯೇ ಬರುವುದಿಲ್ಲ. ಎದುರಲ್ಲಿ ಸನ್ನಿಹಿತವಾದ ಪರ್ವತ ಎಷ್ಟೊಂದು ಶುಭ್ರ  ಹಾಗೂ ಭವ್ಯ ಎಂದರೆ  ಅದೆಲ್ಲ ಅಲ್ಲಿ ಏನೊಂದೂ ಅಳತೆಗೆ ಸಿಗುವಂಥದ್ದೇ ಅಗಿರಲಿಲ್ಲ. ಬೆಳಗಿನ ಕೆಲವು ತಾಸುಗಳ ನಂತರ ಮತ್ತೆ ದಟ್ಟ ಮೋಡಗಳು  ಆವರಿಸಿದ್ದರಿಂದ  ಮತ್ತೆ ಪರ್ವತ ಗೋಪುರ ಮಾಯವಾಗಿತ್ತು; ದರ್ಶನ ನೀಡಿ ಅದೃಶ್ಯವಾಗುವ ಪರ್ವತರಾಜನಂತೆ. ಇದೇ ಪರ್ವತ ಗೋಪುರದಲ್ಲಿ, ಮಾಯಾವಿಗಳಂತೆ ಸುಳಿಯುವ ಗುಡುಗು, ಮಿಂಚುಗಳಲ್ಲಿ ದೇವರನ್ನು ಕಾಣುವ ಪುರಾತನರ ಭಾವನೆಯ  ಬಗ್ಗೆ  ಆಶ್ಚರ್ಯವೇನೂ ಹುಟ್ಟುವುದಿಲ್ಲ. ತಲುಪಲಾಗದ ಹಿಮರಾಶಿಯಲ್ಲಿ, ಮಾಯವಾಗುವ ಮಂಜಿನಲ್ಲಿಪುರಾತನರು ದೈವತ್ವವನ್ನು ಕಂಡಿದ್ದಾರೆ ಕೂಡ.ದಿವ್ಯ ಆಕರ್ಷಣೆಯಾಗಿ  ಆಶೀರ್ವಾದ ಮಾಡುವ  ಪರ್ವತದಲ್ಲಿ ಜೀವನದ  ದಿವ್ಯತೆಯನ್ನೂ ಗುರುತಿಸಿದ್ದಾರೆ.
ತಮ್ಮ ಗುರುವನ್ನೊಮ್ಮೆ ಸಂದರ್ಶಿಸುವಂತೆ  ಕೇಳಲು ಆ ಶಿಷ್ಯರುಗಳು 'ನಿನ್ನ'ಲ್ಲಿಗೆ ಆಹ್ವಾನಿಸಲು ಬಂದಾಗ  'ನೀನು' ನಯವಾಗಿಯೇ ನಿರಾಕರಿಸಿದ್ದೆ. ಅಷ್ಟಾದರೂ 'ನಿನ್ನ' ನಿಲುವು ಬದಲಾಗಬಹುದು, ಮತ್ತೊಮ್ಮೆ ಕರೆದರೆ  ಒತ್ತಾಯಕ್ಕೆ ಕಟ್ಟುಬಿದ್ದು ಒಪ್ಪಬಹುದೆಂದು  ಅವರು ಮತ್ತೆ ಮತ್ತೆ ಕೇಳಿದರು. ಅಂತಿಮವಾಗಿ  ಅವರ ಗುರುಗಳು ಕೆಲವೇ ಶಿಷ್ಯರೊಂದಿಗೆ  ಭೇಟಿಗೆ ಬರುವುದೆಂದು  ನಿರ್ಧಾರವಾಗಿತ್ತು.
ಅದೊಂದು ಅಗಲ ಕಿರಿದಾದ ಜನಜಂಗುಳಿಯ ಗಲ್ಲಿ.  ಅಲ್ಲಿಯೇ ಹುಡುಗರು ಕ್ರಿಕೆಟ್  ಆಡುತ್ತಗದ್ದಲ ಹಾಕುತ್ತಿದ್ದರು. ಅವರಲ್ಲಿ ಇರುವಂಥದ್ದೆಂದರೆ ಒಂದು ಬ್ಯಾಟ್ ಮಾತ್ರ. ಇಟ್ಟಗೆಯನ್ನು ಸ್ಟಂಪ್ ಎಂದು ಗುರುತಿಸಿಕೊಂಡು  ಹುರುಪಿನಿಂದ ಕುಣಿದಾಡುತ್ತ ಆಟದಲ್ಲಿ ತಲ್ಲೀನರಾಗಿದ್ದರು. ಆ ಮಾರ್ಗದಲ್ಲಿ ಯಾವುದಾದರೂ ಕಾರು ಅಥವಾ ಮತ್ತಿತರ ವಾಹನಗಳು ಬಂದರೆ  ಚಾಲಕರು ಹುಡುಗರನ್ನು  ಗೌರವಿಸಿ ನಿಲ್ಲಿಸಿ ದಾರಿ ಬಿಟ್ಟ ನಂತರ  ಕಳೆದು ಹೋಗಬೇಕು. ಅವರು ಪ್ರತಿದಿನ ಆಡುತ್ತಲೇ ಇರುತ್ತಾರೆ. ವಿಶೇಷವಾಗಿ ಆ ಗುರುಗಳು ಬರುವ ದಿನ ಮಾತ್ರ ಭಾರಿ ಗದ್ದಲದೊಂದಿಗೆ ಆಡುತ್ತಿದ್ದರು. ಸಣ್ಣದಾದ ನುಣುಪುಗೊಳಿಸಿದ್ದ ದಂಡವೊಂದನ್ನು  ಹಿಡಿದು ಕೊಂಡಿದ್ದ ಗುರುಗಳು  ಹುಡುಗರನ್ನು ದಾಟಿ ಆ ಬೆಳಗ್ಗೆ ಬಂದಿದ್ದರು.
ಅವರು ಅಲ್ಲಿಗೆ ಬಂದಿದ್ದಾಗ  ನಾವೆಲ್ಲ ಕುಳಿತಿದ್ದ ಚಾಪೆಯಿಂದ ಎದ್ದು ಅವರಿಗೆ ಜಾಗವನ್ನು ಕೊಟ್ಟೆವು. ತೆಳು ಚಾಪೆಯಲ್ಲಿ ಚಕ್ಕಳಮಕ್ಕಳ ಹಾಕಿಕೊಂಡು  ತಾವು ತಂದ ದಂಡವನ್ನು ಎದುರಿಗೆ ಮಲಗಿಸಿಕೊಂಡು  ಗುರುಗಳು ವಿರಾಜಮಾನರಾದಾಗ ಅವರಿಗೊಂದು ಪ್ರಭುತ್ವದ ಛಾಪು ಲಭಿಸಿದಂತೆ ಕಾಣುತ್ತಿತ್ತು.
ಅವರು ಸತ್ಯವನ್ನು ತಿಳಿದುಕೊಂಡಿದ್ದಾರೆ.  ಅದನ್ನು ಅನುಭವಿಸಿರುವುದರಿಂದ  ತಮ್ಮ ಸತ್ಯದ  ಬಾಗಿಲನ್ನು ನಮ್ಮೆದುರಿಗೆ  ತೆರೆಯುತ್ತಿದ್ದಾರೆ. ಅವರು ಹೇಳುವಂತದ್ದು  ಅವರಿಗೆ ಮತ್ತು ನಮಗೆಲ್ಲರಿಗೂ ಕಾನೂನಿನಂತೆ. ಅವರು ಕಂಡುಕೊಂಡ ಸತ್ಯವನ್ನು  ನೋಡಲು  ನೀವು ಅರಸಿ ಬಂದವರು ಮಾತ್ರ.  ನೀವು ಸತ್ಯ ಸಂಶೋಧನೆ ಪ್ರಕ್ರಿಯೆಯಲ್ಲಿ ಕಳೆದು ಹೋಗಬಹುದು. ಅಂಥ ದಾರಿ ಕಾಣದ ಪರಿಸ್ಥಿತಿಯಲ್ಲಿ ಅವರು ಗುರುವಾಗಿ  ಮಾರ್ಗದರ್ಶನ ಮಾಡುತ್ತಾರೆ. ಅವರು ಹೇಳಿದ್ದನ್ನೆಲ್ಲ  ನೀವು ಅನುಸರಿಸಬೇಕು.
ಇಂತಹ ವಾತಾವರಣ ಅಲ್ಲಿದ್ದಾಗಲೇ  ಮೃದುವಾಗಿ 'ನೀನು' ಹೇಳತೊಡಗಿದ್ದೆ. ಮನಸ್ಸು ತ್ನನ ಪೂರ್ವಾಗ್ರಹದಿಂದ ಹೊರಬರದ  ತನಕ ಹುಡುಕಾಟ  ಮತ್ತು ದೊರಕುವ ಘಟನೆಗಳಿಗೆಲ್ಲ  ಅರ್ಥವೇ ಇರುವುದಿಲ್ಲ.  ಇಲ್ಲಿ ಸ್ವಾತಂತ್ರ್ಯವೇ  ಮೊದಲ ಮತ್ತು ಕೊನೆಯ ಹೆಜ್ಜೆಯಾಗಿದ್ದು ವ್ಯಕ್ತಿ ಅಥವಾ ತತ್ವಕ್ಕೆ  ನಿಷ್ಠನಾಗುವುದೆಂದರೆ  ವಿಷಾದದ ಮಡುವಿಗೆ  ಜಾರಿಸುವ ಬಂಧನದಲ್ಲಿ  ಸಿಕ್ಕಿಕೊಂಡಂತೆ.
 ಇದನ್ನೆಲ್ಲ ಕೇಳಿಸಿಕೊಳ್ಳುತ್ತ ಕಿರಿಕಿರಿ ಅನುಭವಿಸಿದ ಗುರುಗಳು  ನೇರವಾಗಿ 'ನಿನ್ನ'ನ್ನು ನೋಡತೊಡಗಿದರು. 'ನಿನ್ನ' ಬಗ್ಗೆ  ಪಾಪ ಎನಿಸಿ ನಿನಗೆ  ಮಾನಸಿಕ ವಿಕಲ್ಪ ಉಂಟಾಗಿದೆ  ಎಂದು ಕನಿಕರ  ಪಡುವಂತೆ ಕಂಡಿತು ಅವರ ವರ್ತನೆ.  ''ನನಗೆ  ಅಗಾಧ ಹಾಗೂ ಅಂತಿಮವಾದ ಅನುಭವ ಆಗಿದೆ. ಆತ್ಮಾನಂದದ ಹುಡುಕಾಟದಲ್ಲಿ  ತೊಡಗಿರುವ ಯಾರೊಬ್ಬರೂ  ಇದನ್ನು ನಿರಾಕರಿಸುವಂತಿಲ್ಲ.'' ಎಂದು ಗುರುಗಳು ಪ್ರತಿಯಾಗಿ ಹೇಳಿದರು.
ನೀವು ಅನುಭವಿಸಿದ್ದೇನಿದೆಯಲ್ಲ ಅದು ಸತ್ಯವಲ್ಲ. ಅಂತಿಮ ಸತ್ಯವನ್ನು ಅನುಭವಿಸುವುದಕ್ಕಾಗುವುದಿಲ್ಲ. ನಿಮ್ಮ ಮನಸ್ಸಿನದೇ ಇನ್ನೊಂದು  ವಿಕಲ್ಪ ಅದಾಗಿದೆ. ಅದು ನಿಜ ಅಲ್ಲ.
ಇಷ್ಟೆಲ್ಲ ಮಾತಾಗುತ್ತಿದ್ದಂತೆ ಅವರ ಭಕ್ತರೆಲ್ಲಚಡಪಡಿಸತೊಡಗಿದ್ದರು. ಅನುಯಾುಗಳು ತಾವು ಮಾತ್ರವಲ್ಲ, ತಮ್ಮ ಗುರುಗಳನ್ನು  ನಾಶ ಮಾಡಿ ಹಾಕುತ್ತಾರೆ ಎಂಬುದಕ್ಕೆ ಅಲ್ಲಿಯೇ ಇತ್ತು ನಿದರ್ಶನ. ಗುರುಗಳು ಏಳುತ್ತಾರೆ.. ಎದ್ದು ನಡೆದೇಬಿಟ್ಟರು. ಜೊತೆಗೆ ಬಂದಿದ್ದ ಭಕ್ತರೂ ಹಿಂಬಾಲಿಸಿದರು. ಹೊರಗೆ ಹುಡುಗರು ಮಾತ್ರ  ಆಡುತ್ತಲೇ ಇದ್ದರು. ಅಷ್ಟೊತ್ತಿಗೆ ಸರಿಯಾಗಿ ಯಾರೋ ಒಬ್ಬ ಔಟ್ ಆಗಿದ್ದಕ್ಕೆ  ಜೋರಾದ ಚಪ್ಪಾಳೆ ಹಾಗೂ ಗದ್ದಲ. ಖುಷಿ.
ಐತಿಹಾಸಿಕವಾಗಿ, ಪಾರಮಾರ್ಥಿಕವಾಗಿಯೂ  ಸತ್ಯಕ್ಕೆ ದಾರಿ ಎಂಬುದೇ  ಇಲ್ಲ. ಮಹಾಚರ್ಚೆಗಳಿಂದ  ಇದನ್ನು ಅನುಭವಿಸುವುದಾಗಲಿ , ನೋಡುವುದಾಗಲಿ  ಸಾಧ್ಯವೇ ಇಲ್ಲ. ಅಭಿಪ್ರಾಯ ಹಾಗೂ ನಂಬಿಕೆಗಳ ವರ್ಗಾವಣೆಯಿಂದಲೂ  ಸತ್ಯ ಸಾಕ್ಷಾತ್ಕಾರ ಆಗುವುದಿಲ್ಲ. ಮನಸ್ಸು ತನ್ನಲ್ಲಿ ಮಾಡಿಕೊಂಡ  ವ್ಯವಸ್ಥೆಯಿಂದ  ಸ್ವತಂತ್ರವಾದಾಗಲೇ  ನಿಮಗೆ ಸತ್ಯದರ್ಶನ ಆಗುತ್ತದೆ. ಹಾಗಾಗುವ ಉನ್ನತ ಗಳಿಗೆಯೇ ಜೀವನದ ಅಚ್ಚರಿಯಾಗಿದೆ.



ಅಕ್ಟೋಬರ್ 8, 1973
ವರಾಂಡಾ, ಮನೆಯ ಮಾಡು ಹಾಗೂ ಸಮೀಪದ ಮಾವಿನಮರದಲ್ಲಯೂ ಬಿಡದೆ ಆ ಮುಂಜಾನೆ ಎಲ್ಲೆಡೆ ಕೋತಿಗಳು ಆವರಿಸಿದ್ದವು. ಕೆಂಪು ಮೂತಿಯ ಮಂಗಗಳ ಒಂದು ಸಮೂಹವೆ ಅಲ್ಲಿಗೆ ಬಂದಿತ್ತು. ಅದರಲ್ಲಿ ಸುಮಾರು 20ಕ್ಕೂ ಹೆಚ್ಚು ಮಂಗಗಳು ಇದ್ದಿರಬಹುದು. ಅವುಗಳ ಪೈಕಿ ದೊಡ್ಡದಾದ ಕೋಡಗವೊಂದು ಸಮೂಹದ ಸದಸ್ಯರನ್ನೆಲ್ಲ ಗಮನಿಸುತ್ತಿತ್ತು. ಸಣ್ಣ  ಮರಿಗಳು ತಾಯಿಯಿಂದ ತೀರಾ ದೂರ ಹೋಗದೆ ಪರಸ್ಪರ ಆಟದಲ್ಲಿ ನಿರತವಾಗಿದ್ದವು. ಅಲ್ಲಿ-ಇಲ್ಲಿ ಒಂದಿಷ್ಟು ದಾಂದಲೆಯನ್ನೂ ಹಾಕುತ್ತಿದ್ದ ಮಂಗಗಳು ಹೊತ್ತೇರತೊಡಗಿದಂತೆ ಊರನ್ನು ಬಿಟ್ಟು ಆಚೆ ಹೋಗತೊಡಗಿದ್ದವು. ಮೊದಲು ಹೊರಟಿದ್ದುಗುಂಪಿನ ನಾಯಕನಂತಿದ್ದ ಕೋಡಗ- ನಂತರ ಇತರ ಮಂಗಗಳು ಸುಮ್ಮನೆ ಹಿಂಬಾಲಿಸುತ್ತಿದ್ದವು. ಮಂಗಗಳು ಜಾಗ ಖಾಲಿ ಮಾಡುತ್ತಲೆ ಅಲ್ಲಿಗೆ ಗಿಳಿ ಹಾಗೂ ಕಾಗೆಗಳು ಬಂದು ತಮ್ಮ ಸ್ವರದ ಮೂಲಕ ಅಸ್ತಿತ್ವ ತೋರತೊಡಗಿದ್ದವು. ಅಲ್ಲಿಗೊಂದು ಗೊಗ್ಗರು ಕಂಠದ ಕಾಗೆ ಬರುತ್ತಿತ್ತು. ಅದು ಇತರ ಕಾಗೆಗಳನ್ನು ಕರೆಯುವ ರೀತಿಯೇ ಹಾಗಿತ್ತೊಅಥವಾ ಕೂಗುವುದೇ ಹಾಗೋ ಏನೊ ಒಂದು ರೀತಿಯಲ್ಲಿ ಕೂಗುತ್ತಿತ್ತು- ಒಂದೇ ಸಮನೆ ಶುರು ಹಚ್ಚಿತಲ್ಲ ಎಂದರೆ ಅಲ್ಲಿಂದ ಓಡಿಸುವ ತನಕ ಬಾಯಿ ಮುಚ್ಚುತ್ತಿರಲಿಲ್ಲ. ಪ್ರತೀದಿನ ಆ ಕಾಗೆ ಅದೇ ಹೊತ್ತಿಗೆ ತನ್ನ ಪಾಳಿಯನ್ನು ತಪ್ಪಿಸುತ್ತಿರಲಿಲ್ಲ. ಕಾಗೆಯ ಕೂಗಾಟ ಇಡೀ ಕೊಠಡಿಯಲ್ಲೆಲ್ಲ ಪ್ರತಿಧ್ವನಿಸುತ್ತಿತ್ತು. ಕಾಗೆ ರಾಗ ಆರಂಭಿಸಿದರೆ ಉಳಿದವುಗಳು ಬಾಯಿ ಮುಚ್ಚಿರುತ್ತವೆ. ಈ ಕಾಗೆಗಳು ಪರಸ್ಪರ ಕಚ್ಚಾಡುವುದಿಲ್ಲ. ಚುರುಕಾಗಿ ಎಲ್ಲವನ್ನೂ ಗಮನಿಸುತ್ತಿರುತ್ತವೆ. ಹೇಗಾದರೂ ತಮ್ಮ ಆಹಾರವನ್ನು ಹುಡುಕಿಕೊಂಡು ಬದುಕಿ ಬಿಡುತ್ತವೆ. ಮಂಗಗಳು ಕಾಗೆಯನ್ನು ಮೆಚ್ಚಿಕೊಂಡಂತೆ ತೋರುತ್ತಿರಲಿಲ್ಲ.
 ಅಂದಿನ ದಿನ ಸುಂದರವಾಗುವ ಎಲ್ಲ ಲಕ್ಷಣಗಳೂ ಇತ್ತು.
ಸರಿಯಾಗಿ ಹೊಂದಿಸಿಕೊಂಡಿದ್ದ ತಲೆ, ಬಡಕಲಾದರೂ- ಗಟ್ಟಿಮುಟ್ಟಾದ ದೇಹ, ಪ್ರಕಾಶಮಾನವಾದ ಕಣ್ಣಿನಿಂದ ಗಮನಸೆಳೆಯುತ್ತಿದ್ದ ಆ ವ್ಯಕ್ತಿಯ ನಗುವೇ ವಿಶಿಷ್ಟವಾಗಿತ್ತು. ನಾವು ಹುಣಸೆ ಮರವೊಂದರ ಕೆಳಗಿನ ಬೆಂಚಿನಲ್ಲಿ ಎದುರಿನ ಹೊಳೆಯನ್ನು ನೋಡುತ್ತ ಕುಳಿತುಕೊಂಡಿದ್ದೆವು. ಹುಣಸೆ ಮರವು ಹಲವಾರು ಗಿಳಿಗಳಿಗೆ ಆಶ್ರಯ ನೀಡಿದ ಮರ. ಒಂದು ಜೋಡಿ ವಿಷಾದಗೂಬೆ ಮರದ ತುದಿಯಲಿ ಕುಳಿತು ಬಿಸಿಲು ಕಾಯಿಸುತ್ತಿದ್ದವು.
"ನಾನು ನನ್ನ ಮನೋನಿಗ್ರಹ ಮಾಡಿ ಹಲವಾರು ವರ್ಷದಿಂದ ಧ್ಯಾನಿಸುತ್ತಿದ್ದೇನೆ. ಉಪವಾಸ, ದಿನಕ್ಕೊಂದು ಊಟದ  ವ್ರತಗಳನ್ನೆಲ್ಲ  ಮಾಡಿ ನನ್ನ ಆಲೋಚನೆಯನ್ನು ನಿಯಂತ್ರಿಸುತ್ತಿದ್ದೇನೆ. ನಾನು ಸಮಾಜ ಸೇವೆ ಮಾಡುತ್ತಿದ್ದೆ. ಆದರೆ ಇದೆಲ್ಲ ಮಾನವನ ಆಳದ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ ಎನ್ನಿಸಿದಾಗ ಬಿಟ್ಟು ಆಚೆ ಬಂದು ಬಿಟ್ಟೆ. ಇನ್ನೂ ಹಲವರು ಅದನ್ನು ಮುಂದುವರೆಸಿದ್ದಾರಾದರೂ ಅದರಲ್ಲಿ ನನಗೆ ಮಾತ್ರ ಒಂದಿಷ್ಟೂ ಆಸಕ್ತಿ ಉಳಿದಿಲ್ಲ. ಧ್ಯಾನವನ್ನು ಸಂಪೂರ್ಣ ಅರ್ಥದಲ್ಲಿ ತಿಳಿದುಕೊಳ್ಳಬೇಕು ಎಂಬುದು ನನಗೆ ಜೀವನದ ಮಹತ್ವದ ಉದ್ದೇಶವಾಯಿತು. ಹಾಗೆ ನೋಡಿದರೆ ಧ್ಯಾನ ಬಗ್ಗೆ ಹೇಳುವ ಪ್ರತಿಯೊಂದು ಪದ್ಧತಿಯಲ್ಲೂ ಒಂದಲ್ಲ ಒಂದು ಬಗೆಯ ನಿಯಂತ್ರಣವನ್ನೆಹೇಳಲಾಗುತ್ತದೆ. ನಾನು ಹಲವಾರು ಬಗೆಯಲ್ಲಿ ಧ್ಯಾನವನ್ನು ಮಾಡಿದೆ; ಈ ಧ್ಯಾನದ ಬಗೆಗಳಿಗೆ ಅಂತ್ಯವೇ ಇಲ್ಲ ಎನಿಸುತ್ತಿದೆ''. ಎಂದು ಅವರು ಹೇಳಿದರು.
ನಿಯಂತ್ರಣ ಎಂಬುದು ವಿಭಜನೆ. ನಿಯಂತ್ರಿಸುವವ ಮತ್ತು ನಿಯಂತ್ರಣಕ್ಕೊಳಪಡುವ ಸಂಗತಿ ಎಂಬುದೂ ಎಲ್ಲ ಬಗೆಯ ವಿಭಜನೆಗಳ ರೀತಿಯದ್ದೆ ಇನ್ನೊಂದಾಗಿದೆ. ಇದರಿಂದಾಗಿ ತಿಕ್ಕಾಟ ಹಾಗೂ ಕರ್ತವ್ಯದಲ್ಲಿವಕ್ರತೆ ಉಂಟಾಗುತ್ತದೆ. ವಿಭಜನೆ ಅಥವಾ ಭದ್ರತೆ ಎಂಬುದು ಆಲೋಚನೆಯಿಂದಾದದ್ದು. ಒಂದು ತುಣುಕು ಇನ್ನೊಂದರ ಮೇಲೆ ಹಿಡಿತ ಸಾಧಿಸುವ ಆಲೋಚನೆಯ ಭಾಗವನ್ನೇ ನೀವು ನಿಯಂತ್ರಕ ಎಂದೋ ಇನ್ನೇನೊ ಹೆಸರಿನಲ್ಲಿ ಕರೆಯುತ್ತೀರಿ. ಈ ರೀತಿಯಲ್ಲಿ  ನಿರ್ಮಿಸಿಕೊಳ್ಳುವ ವಿಭಜನೆಯು ಕೃತಕ ಮತ್ತು ಹುಡುಗಾಟದ ಸಂಗತಿ. ವಾಸ್ತವದಲ್ಲಿ ನಿಯಂತ್ರಿಸುವ ಪ್ರಕ್ರಿಯೆುಂದಾಗಿಯೆ ಓರ್ವ ನಿಯಂತ್ರಕ ಸಿದ್ಧನಾಗುತ್ತಾನೆ. ಆಲೋಚನೆಯ ಮೂಲ ರೂಪವೇ ಛಿದ್ರವಾಗಿದ್ದು ಇದು ಗೊಂದಲ ಹಾಗೂ ವಿಷಾದವನ್ನೆಉಂಟು ಮಾಡುತ್ತದೆ. ಆಲೋಚನೆಯಿಂದಾಗಿಯೇ ರಾಷ್ಟ್ರೀಯತೆ, ತತ್ವಜ್ಞಾನ, ಧಾರ್ಮಿಕ ಪಂಥಗಳು, ದೊಡ್ಡ ಹಾಗೂ ಸಣ್ಣ ಪಂಥಗಳೆಂಬ ವಿಭಜನೆಗಳಿಗೆ ಕಾರಣವಾಗಿದೆ. ನೆನಪಿನ ಪ್ರತಿಕ್ರಿಯೆಯೆ ಆಲೋಚನೆ. ಅನುಭವ, ಜ್ಞಾನ ಮತ್ತಿತರ ರೀತಿಯಲ್ಲಿ ಮೆದುಳಿನಲ್ಲಿ ಆಲೋಚನೆಯ ದೃವ್ಯಗಳು ಸಂಗ್ರಹವಾಗಿರುತ್ತದೆ ; ಇವುಗಳಿಗೊಂದು ಭದ್ರತೆ, ವ್ಯವಸ್ಥೆಗಳು ಇದ್ದಾಗ ಮಾತ್ರ ಸ್ವಸ್ತ  ಹಾಗೂ ಸಮರ್ಥವಾದ ಕೆಲಸ ಮಾಡುವುದು ಸಾಧ್ಯ.
ದೈಹಿಕವಾಗಿ ಬದುಕುವುದಕ್ಕೆ ದೇಹವನ್ನು ಎಲ್ಲ ಬಗೆಯ ಅಪಾಯಗಳಿಂದ ರಕ್ಷಿಸಿಕೊಳ್ಳಬೇಕಷ್ಟೆ. ದೇಹದ ರಕ್ಷಣೆಯ ದೃಷ್ಟಿಯಲ್ಲಿ ಬದುಕನ್ನು ಅರ್ಥವಿಸುವುದು ಸುಲಭ; ಆದರೆ ಮನಶ್ಯಾಸ್ತ್ರೀಯವಾಗಿ ಬದುಕುವುದು ಎಂಬುದರ ವ್ಯಾಖ್ಯೆಯೇ ಬೇರೆ; ನಮ್ಮ ಮನಸ್ಸಿನಲ್ಲಿ ಆಲೋಚನೆ ಹಂದರ ಹುಟ್ಟು ಹಾಕಿದ ನಮ್ಮ ಬದುಕಿನ ಕಲ್ಪನೆಯನ್ನು ಉಳಿಸಿಕೊಳ್ಳುವ ಬದುಕು ಅದು. ಆಲೋಚನೆುಂದಾಗಿಯೇ ಬದುಕು ಎಂಬುದು ಆಂತರಿಕ ಹಾಗೂ ಬಾಹ್ಯ ಎಂಬುದಾಗಿ ವಿಭಜನೆ ಉಂಟಾಗಿದೆ; ಈ ವಿಭಜನೆಯ ಪರಿಣಾಮವಾಗಿ ತಿಕ್ಕಾಟ ಹಾಗೂ ಹಿಡಿತ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಆಲೋಚನೆಯ ಹಂದರ ಹುಟ್ಟು ಹಾಕುವ ಆಂತರಿಕ ಬದುಕಿಗಾಗಿ ನಂಬಿಕೆಗಳು ತತ್ವ, ದೇವರು, ರಾಷ್ಟ್ರೀಯತೆ, ತೀರ್ಮಾನಗಳು ಅವಶ್ಯದ ಸಂಗತಿಗಳಾಗುತ್ತವೆ. ಆಂತರಿಕ ವ್ಯವಸ್ಥೆಯ ಪರಿಣಾಮವೇ ನಮ್ಮಲ್ಲಿ ಯುದ್ಧಗಳು, ಹಿಂಸಾಚಾರ ಹಾಗೂ ವಿಷಾದಗಳಿಗೆ ಕಾರಣವಾಗುತ್ತಿದೆ. ತನ್ನ ಹಲವಾರು ಮುಖವಾಡಗಳಿಂದ ಬದುಕಬೇಕೆಂಬ ಆಂತರಿಕ ವ್ಯವಸ್ಥೆಯ ಕಾರಣದಿಂದಲೇ ರೋಗರುಜಿನಗಳು, ಸಾಮರಸ್ಯ ಕದಡುವಿಕೆಯೆಲ್ಲ ಆಗಿದೆ. ಆಲೋಚನೆಯೇ ಸಾಮರಸ್ಯ ವಿರೋಧಿ. ಇದು ಹೇಳುವ ಸತ್ಯ, ಇದರ ಬಿಂಬ, ತತ್ವ ಸಿದ್ಧಾಂತಗಳೆಲ್ಲ ವಿರೋಧಾಭಾಸ ಹಾಗೂ ಅಪಾಯಕಾರಿ ರೀತಿಯಲ್ಲಿರುತ್ತವೆ. ತಾಂತ್ರಿಕ ಔನ್ನತ್ಯವೊಂದನ್ನು ಹೊರತುಪಡಿಸಿದರೆ ಆಲೋಚನೆ ಉಂಟುಮಾಡುವ ಆಂತರಿಕ ಹಾಗೂ ಬಾಹ್ಯದ ಸುಖ-ಧು:ಖಗಳೆಲ್ಲ ಅಂತಿಮವಾಗಿ ವಿಷಾದವನ್ನು ಉಂಟು ಮಾಡುತ್ತವೆ, ಪರಿಣಾಮವಾಗಿ ನಾವು ವಿಲಾಸದ ಮೊರೆ ಹೋಗುತ್ತೇವೆ.
ನಮ್ಮ ದೈನಂದಿನ ಜೀವನದಲ್ಲಿ ಇರುವ ಇದನ್ನೆಲ್ಲಕಾಣುವುದು, ಆಲೋಚನೆಯ ಚಲನವಲನಗಳನ್ನು ಕೇಳಿ ಗೃಹಿಸಿಕೊಳ್ಳುವುದನ್ನೆ ಧ್ಯಾನವು ನಮಗೆ ಸಾಧ್ಯವಾಗಿಸುತ್ತದೆ. ಧ್ಯಾನ ತರುವ ಇಲ್ಲಿನ ಬದಲಾವಣೆ ಎಂದರೆ ನಾನು ಎಂಬವ ದೇವಮಾನಾಗುವುದಲ್ಲಅಥವ ಉನ್ನತ ಮಟ್ಟದ-ಮಹಾತ್ಮನಾಗುವುದು ಎಂದಲ್ಲ. ಪ್ರಜ್ಞೆಯಲ್ಲಿರುವ ವಿಷಯದಲ್ಲಿ ಬದಲಾವಣೆ ಆಗಿ- ಪ್ರಜ್ಞೆ ಹಾಗೂ ಸಾರಾಂಶಗಳು ಅವಿನಾಭಾವ ಆಗಬೇಕು. ಜಗತ್ತಿನಲ್ಲಿರುವ ಜ್ಞಾನವೆಲ್ಲ ನಿಮ್ಮಲ್ಲಿ ಆವಾಹಿತವಾಗಬೇಕು. ನೀವೇ ಜಗತ್ತು- ಜಗತ್ತೇ ನೀವು ಎಂದಾಗಬೇಕು. ಆಲೋಚನೆ ಮತ್ತದರ ಚಟುವಟಿಕೆಯಲ್ಲಿ ಸಂಪೂರ್ಣ ಬದಲಾವಣೆ ತಂದುಕೊಳ್ಳುವುದೇ ಧ್ಯಾನ.ಸಾಮರಸ್ಯ ಎಂಬುದು ಆಲೋಚನೆಯಿಂದ ಸಿಗುವ ಫಲವಲ್ಲ; ಅದು ಪೂರ್ಣತ್ವದ ಸಾಕ್ಷಾತ್ಕಾರದಿಂದ ಬರುತ್ತದೆ.
ಬೆಳಗಿನ ಗಾಳಿಯೆಲ್ಲ ನಿಂತು ಹೋಗಿದ್ದರಿಂದ ಒಂದು ಎಲೆ ಕೂಡ ಆಚೆ ಈಚೆ ಅಲ್ಲಾಡುತ್ತಿರಲಿಲ್ಲ. ಹೊಳೆಯೂ ಸಂಪೂರ್ಣ ಸ್ತಬ್ಧವಾಗಿದ್ದರಿಂದ ಆಚೆ ದಡದ ಮಾತುಗಳೆಲ್ಲ ಕೇಳುತ್ತಿದ್ದವು. ಗಿಳಿಗಳೂ ಕೂಡ ಸುಮ್ಮನಿದ್ದವು.



ಅಕ್ಟೋಬರ್ 9, par 1973\u3221?ಿರುಹಳಿಯಲ್ಲಿ ಹೋಗುತ್ತಿದ್ದಆ ರೈಲು ಎಲ್ಲೆಡೆಯ ನಿಲ್ದಾಣದಲ್ಲಿ ನಿಲ್ಲುತ್ತಿತ್ತು. ಬೋಗಿಯೊಳಕ್ಕೆ ಬರುತ್ತಿದ್ದ ಕಾಫಿ, ಚಹಾ ಮಾರುವ ಹುಡುಗರು, ಇನ್ನೊಂದೆಡೆ ರಗ್ಗು ಮಾರುವವರು, ಒಂದಿಷ್ಟು ಆಟಿಕೆ ಸಾಮಾನುಗಳೊಂದಿಗೆ ಗಮನಸೆಳೆಯುವರೆಲ್ಲ ತಮ್ಮ ಮಾರಾಟ ಹೆಚ್ಚಿಸಿಕೊಳ್ಳು ವುದಕ್ಕೆ ಏನೆಲ್ಲ ರೀತಿಯಲ್ಲಿ ಕಿರುಚಾಡುತ್ತಿದ್ದರು. ರಾತ್ರಿ ಒಂದಿಷ್ಟು ಹೊತ್ತು ಕೂಡ ನಿದ್ದೆ ಮಾಡುವುದು ಸಾಧ್ಯವಾಗಿರಲಿಲ್ಲ. ರೈಲು ಬೆಳಗಿನ ಹೊತ್ತು ಒಂದೆಡೆ ಬಂದು ತಲುಪಿದ ನಂತರ ಅದರಲ್ಲಿದ್ದ ಪ್ರಯಾಣಿಕರು  ಒಂದು ದೋಣಿಯಲ್ಲಿ ಸೇರಿಕೊಂಡಿದ್ದರು. ದೋಣಿ ಅಲ್ಲಿಂದ ಹೊರಟು ಆಳ ಸಮುದ್ರಕ್ಕೆ ಹೋಗಲಿಲ್ಲ ಹೊರತಾಗಿ ಎಲ್ಲರನ್ನೂ ನಡುಗಡ್ಡೆಯೊಂದಕ್ಕೆ  ತಲುಪಿಸಿತು. ಅಲ್ಲಿಂದ ಪ್ರಯಾಣಿಕರನ್ನು ರಾಜಧಾನಿಗೆ ಕರೆದೊಯ್ಯುವುದಕ್ಕಾಗಿ ರೈಲೊಂದು ಕಾಯುತ್ತಿತ್ತು. ಆ ರೈಲು ಹಚ್ಚಹಸಿರು ಕಾಡು, ತಾಳೆ ಮರಗಳು, ಚಹಾ ತೋಟಗಳು ಮತ್ತು ಹಳ್ಳಿಗಳ ಮೂಲಕ ಹಾದು ಹೋಗುತ್ತದೆ. ಅದು ಸುಖ-ಸಮೃದ್ಧಿಯ ನಾಡು. ಸಮುದ್ರದ ಸಮೀಪ ವಾತಾವರಣ ಉಷ್ಣವಾಗಿತ್ತಾದರೂ ಒಳನಾಡು- ಚಹಾ ತೋಟಗಳಿಗೆ ಬರುತ್ತಲೆ ವಾತಾವರಣ ತಂಪಾಗಿ ಚಳಿ ಆವರಿಸತೊಡಗಿತ್ತು. ಜನದಟ್ಟಣೆ ಇಲ್ಲದೆ ಸರಳವಾದ, ಪುರಾತನ ವಸಾಹತುಗಳ ಸುಗಂಧ ಇರುವ ನಾಡು ಅದು.
ಆದರೆ ನಗರಗಳ ವಿಚಾರದಲ್ಲಿ ಇತರ ನಗರಗಳಿಗಿಂತ ಭಿನ್ನತೆಯೇನೂ ಇದ್ದಿರಲಿಲ್ಲ. ಗದ್ದಲ- ಕೊಳಚೆ, ಬಡತನದೊಂದಿಗೆ ಇರುವ ಹೊಲಸುತನ, ಹಣದ ಪ್ರಭಾವದಿಂದ ಬಂದಿರುವ ಅಶ್ಲೀಲತೆ ಎಲ್ಲವೂ ಇತ್ತು. ಬಂದರಿನಲ್ಲಿ ಜಗತ್ತಿನ ಎಲ್ಲೆಡೆಯಿಂದ ಬಂದ ಹಡಗುಗಳು ಲಂಗರು ಹಾಕಿದ್ದವು.
ಆ ಮನೆ ಊರಿನಿಂದ ಹೊರಕ್ಕೆ  ತುಸು ಪ್ರತ್ಯೇಕವಾಗಿದೆ. 'ಆತನ'ನ್ನು ಅಭಿನಂದಿಸುದಕ್ಕಾಗಿ ಜನ ಹೂವು ಹಣ್ಣುಗಳೊಂದಿಗೆ ಆ ಮನೆಗೆ ನಿರಂತರವಾಗಿ ಬರತೊಡಗಿದ್ದರು. ಹಾಗೆಯೇ ಒಂದು ದಿನ ಆಗಷ್ಟೆ ಪ್ರಸವವಾದ ಆನೆ-ಮರಿಯನ್ನುತೋರಿಸುವುದಾಗಿ ವ್ಯಕ್ತಿಯೊಬ್ಬರು ಹೇಳಿದಾಗ ಸಹಜವಾಗಿಯೇ ಅಲ್ಲಿಗೆ ಹೋಗಿದ್ದೆವು. ಆನೆ ಮರಿಗೆ ಕೇವಲ ಎರಡು ವಾರಗಳು ಮಾತ್ರ. ದೈತ್ಯ ಗಾತ್ರದ ತಾಯಿ ತೀರಾ ಖಿನ್ನವಾಗಿ ವರ್ತಿಸುತ್ತಮರಿಯ ಹತ್ತಿರಕ್ಕೆಲ್ಲೂ ಬಿಡುತ್ತಿಲ್ಲ ಎಂದು ಆತ ನಮಗೆ ಹೇಳಿದ್ದ. ಕಾರಿನಲ್ಲಿ ನಗರದ ಹೊರಕ್ಕೆ ಬಂದು, ಕೊಳಕು ಹರಿದು ನದಿಯನ್ನುಸೇರುವಲ್ಲಿದ್ದಹಳ್ಳಿಯೊಂದನ್ನುನಾವು ತಲುಪಿದೆವು. ಎತ್ತರಕ್ಕೆ ಬೆಳೆದ ಹಾಗೂ ದೊಡ್ಡದೊಡ್ಡ ಮರಗಳು ಈ ಊರನ್ನು ಸುತ್ತುವರಿದಿವೆ. ಅವುಗಳ ನಡುವೆ ಒಂದೆಡೆ ದೈತ್ಯ ಗಾತ್ರದ ಕಪ್ಪು ಬಣ್ಣದ ಆ ತಾಯಿ ಆನೆ  ಹಾಗೂ ಮರಿ ಗಮನಸೆಳೆಯುತ್ತಿದ್ದವು.
ತಾಯಿಗೆ ಪರಿಚಯ ಆಗುವುದಕ್ಕಾಗಿ 'ಆತ' ಹಲವಾರು ತಾಸುಗಳ ತನಕ ಅಲ್ಲಿಯೇ ಕಳೆದಿದ್ದ. ತಾಯಿ ಆನೆಗೆ ಆತನನ್ನು ಪರಿಚುಸಬೇಕು. ನಂತರ ಆನೆಯ ಉದ್ದನೆಯ ಸೊಂಡಿಲನ್ನು ಮುಟ್ಟಿ ಒಂದಿಷ್ಟು ಹಣ್ಣು ಹಾಗೂ ಕಬ್ಬಿನ ಜಲ್ಲೆಯನ್ನು ಕೊಡಬೇಕು. ಹೀಗೆ ಆನೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕೆ ಸಮಯ ಹಿಡಿಯುತ್ತದೆ. ಆನೆ ಸೊಂಡಿಲಿನ ತುದಿಯಲ್ಲಿ ಇನ್ನಷ್ಟು ಹಣ್ಣನ್ನು ಬೇಡುತ್ತಿತ್ತು. ಬಾಳೆ ಹಣ್ಣು ಹಾಗೂ ಸೇಬು ಹಣ್ಣುಗಳು ಅದರ ದೊಡ್ಡ ಬಾಯಿಯಲ್ಲಿ ಏಕಕಾಲಕ್ಕೆ ಒಳ ಹೋಗಿ ಬಿಡುತ್ತಿದ್ದವು. ಹೊಸದಾಗಿ ಹುಟ್ಟಿದ ಮರಿ ತನ್ನ ತಾಯಿಯ ಕಾಲುಗಳ ಕೆಳಗೆ ನಿಂತುಕೊಂಡು ಸೊಂಡಿಲನ್ನು ಆಡಿಸುತ್ತಿತ್ತು. ತಾಯಿಯ ಸಣ್ಣದಾದ ಪ್ರತಿರೂಪದಂತೆ ಮರಿ ಕಾಣುತ್ತದೆ. ಅಂತೂ ಬಹಳ ಹೊತ್ತಿನ ಸ್ನೇಹಶೀಲ ಚಟುವಟಿಕೆಗಳ ನಂತರ ಅವನಿಗೆ ಮರಿಯನ್ನು ಮುಟ್ಟಲು ತಾಯಿ ಬಿಟ್ಟಿತ್ತು. ಮರಿಯ ದೇಹ ಅಷ್ಟೊಂದು ಒರಟಾಗಿ ಇದ್ದಿರಲಿಲ್ಲ. ಮರಿಯ ಸೊಂಡಿಲು ದೇಹದ ಉಳಿದೆಲ್ಲ ಭಾಗಗಳಿಗಿಂತ ಚುರುಕಾಗಿದ್ದು ನಿರಂತರವಾಗಿ ಆಡಿಸುತ್ತಲೆ ಇತ್ತು. ಮರಿಯೊಂದಿಗಿನ ನಮ್ಮ ಒಡನಾಟವನ್ನು ತಾಯಿ ಎಷ್ಟೊತ್ತಿಗೂ ನೋಡುತ್ತಲೇ ಇತ್ತು. ಮಾವುತ  ಆಗಾಗ ಅದನ್ನು ಸಾಂತ್ವನಗೊಳಿಸುತ್ತಲೇ ಇರಬೇಕಾಗಿತ್ತು. ಮರಿ ಚುರುಕಾಗಿ ಆಟ ಆಡುತ್ತಿತ್ತು.
ತೀವ್ರ ದೃತಿಗೆಟ್ಟ ಮಹಿಳೆಯೊಬ್ಬರು ಆ ಸಣ್ಣ ಕೊಠಡಿಗೆ ಬಂದಿದ್ದರು. ಆಕೆಯ ಮಗ ಯುದ್ಧದಲ್ಲಿ ಮಡಿದಿದ್ದ. ""ಆತನನ್ನು ನಾನು ಅತಿಯಾಗಿ ಪ್ರೀತಿಸುತ್ತಿದ್ದೆ. ಆತ ನನ್ನ ಏಕೈಕ ಮಗ; ಆತನಿಗೆ ಉತ್ತಮ ಶಿಕ್ಷಣ ಕೊಡಿಸಿದ್ದೆವು. ಉಜ್ವಲ ಭವಿತವ್ಯಕ್ಕೆ ಆಶಾವಾದಿಯಾಗಿದ್ದ- ಅತ್ಯುತ್ತಮ ಪ್ರತಿಭಾವಂತನೂ ಆಗಿದ್ದ. ಅವನನ್ನೆ ಯುದ್ಧದಲ್ಲಿ ಸಾಯಿಸಲಾಯಿತಲ್ಲ. ಇದೆಲ್ಲ ಆತನಿಗೆ- ನನಗೆ ಯಾಕಾಗಿ ಬಂದೆರಗಬೇಕು. ನಾವು ನಿಜಕ್ಕೂ ಪರಸ್ಪರರನ್ನು ತೀರಾ ಹಚ್ಚಿಕೊಂಡಿದ್ದೆವು. ಹೀಗೆಲ್ಲ ನಡೆದದ್ದು ಎಣಿಸಲಾಗದ ಕ್ರೌರ್ಯ'' ಎಂದೆಲ್ಲ ಹೇಳುತ್ತ ಧಾರಾಕಾರವಾಗಿ ಕಣ್ಣೀರಿಟ್ಟಳು ತಾಯಿ. ಏನು ಮಾಡಿದರೂ ದುಃಖವನ್ನು ನಿಯಂತ್ರಿಸುವುದು  ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಆತನ ಕೈ ಹಿಡಿದುಕೊಂಡು ಅತ್ತು ಸ್ವಲ್ಪ ಶಾಂತಳಾಗಿ ಹೇಳುವುದನ್ನು ಕೇಳಿಸಿಕೊಳ್ಳುವ ಸ್ಥಿತಿಗೆ ಬಂದಿದ್ದಳು.
ನಾವು ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ಎಷ್ಟೊಂದು ಹಣ ಖರ್ಚು ಮಾಡುತ್ತೇವೆ. ನಾವು ಅವರ ಬಗ್ಗೆ ಬಹಳ ಕಾಳಜಿಯನ್ನು ವಹಿಸುತ್ತೇವೆ. ನಾವು ಅವರೊಂದಿಗೆ ತೀವ್ರ ಭಾವನಾತ್ಮಕವಾಗಿ ತಳಕು ಹಾಕಿಕೊಳ್ಳುತ್ತೇವೆ. ಅವರು ನಮ್ಮ ಏಕಾಂಗಿ ಬದುಕನ್ನು ತುಂಬುತ್ತಾರೆ. ಅವರಲ್ಲಿ ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುತ್ತೇವೆ. ನಾವೆ ಅವರ ಮೂಲಕ ಬದುಕಲು ಪ್ರಯತ್ನಿಸುತ್ತೇವೆ. ನಮಗೆ ಶಿಕ್ಷಣ ನೀಡುವುದು ಯಾತಕ್ಕಾಗಿ ? ಮನುಷ್ಯನನ್ನು ಓರ್ವ ಯಂತ್ರ ಮಾನವ ಅಥವಾ ಯಂತ್ರವಾಗಿಸುವ ಉದ್ದೇಶ ಶಿಕ್ಷಣದಲ್ಲಿದೆಯೆ? ನಮ್ಮೆಲ್ಲ ಜೀವನವನ್ನು ದುಡಿಯುತ್ತಲೇ ಕಳೆಯುವುದು, ಒಂದು ದಿನ ಅಪಘಾತದಲ್ಲೋ, ತೀವ್ರ ನೋವಿನ ರೋಗದಿಂದಲೋ, ಹೃದಯಾಘಾತದಲ್ಲಿ ಸಾಯುವುದಕ್ಕಾಗಿ ಶಿಕ್ಷಣವೆ ? ನಮ್ಮ ಧರ್ಮ ನಮ್ಮ ಸಂಸ್ಕೃತಿ ಕಟ್ಟಿಕೊಟ್ಟ ಬದುಕಿನ ಆದರ್ಶ ಇದು. ಜಗತ್ತಿನ ಎಲ್ಲೆಡೆ ತಾಯಂದಿರು ಹೆಂಡತಿಯರು ತಮ್ಮ ಮಗ ಅಥವಾ ಗಂಡನನ್ನು ಕಳೆದುಕೊಂಡು ಹೀಗೆಯೇ ಅಳುತ್ತಿದ್ದಾರೆ. ಪ್ರೇಮ ಎಂದರೆ ಭಾವನಾತ್ಮಕ ಅವಲಂಬನೆಯೇ? ಕಣ್ಣೀರಿಡುವುದು, ಕಳೆದುಕೊಂಡಿದ್ದಕ್ಕೆ ವಿಷಾದ, ತನ್ನ ಬಗ್ಗೆ ಮರುಕ ಪಡುವುದು, ಬೇರ್ಪಡುವ ನೋವಿನಲ್ಲಿ ಪ್ರೇಮ ಇರುತ್ತದೆಯೆ? ನೀವು ನಿಜಕ್ಕೂ ಮಗನನ್ನು ಪ್ರೀತಿಸುತ್ತಿದ್ದರೆ, ಯಾವುದೇ ಮಗನೂ ಇನ್ನು ಯುದ್ಧದಲ್ಲಿ ಸಾಯಬಾರದು ಎಂಬ ಆಶಯ ಹೊಂದಬೇಕು. ಆಗಲೆ ಸಾವಿರಾರು ಯುದ್ಧಗಳು ನಮ್ಮಲ್ಲಿ ಆಗಿಹೋಗಿವೆ. ನಮ್ಮಲ್ಲಿನ ತಾಯಂದಿರು, ಪತ್ನಿಯರು ಯುದ್ಧಗಳಿಗೆ ಕಾರಣವಾಗುವ ಮಾರ್ಗಗಳನ್ನು ಸಂ]ರ್ಣ ತಿರಸ್ಕರಿಸಲೇ ಇಲ್ಲ. ಒಂದೆಡೆ ಮಗನನ್ನು ಕಳೆದುಕೊಂಡಿದ್ದಕ್ಕೆ ಅಳುತ್ತೀರಿ- ಇನ್ನೊಂದೆಡೆ ಯುದ್ಧಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುತ್ತೀರಿ.
ಪ್ರೇಮಕ್ಕೆ ಹಿಂಸೆ ಎಂಬುದೇ ಗೊತ್ತಿಲ್ಲ.
ಆ ವ್ಯಕ್ತಿ ತಾನು ತನ್ನ ಪತ್ನಿುಂದ ಬೇರ್ಪಡುತ್ತಿರುವುದೇಕೆ ಎಂಬ ಬಗ್ಗೆ ವಿವರಿಸುತ್ತಿದ್ದ. ""ನಾವು ಬೇಗನೆ ವಿವಾಹವಾದೆವು. ಕೆಲವು ವರ್ಷ ಕಳೆದ ನಂತರ ನಮ್ಮ ಸಂಬಂಧದ ಸಂಗತಿಗಳೆಲ್ಲ ಹಾದಿ ತಪ್ಪತೊಡಗಿದವು. ಲೈಂಗಿಕವಾಗಿ, ಮಾನಸಿಕವಾಗಿ ಸೇರಿದಂತೆ ನಾವಿಬ್ಬರೂ ಕೂಡಿ ಬಾಳುವುದಕ್ಕೆ ಯಾವೊಂದು ವಿಷಯದಲ್ಲೂಹೊಂದಾಣಿಕೆಯಾಗದೆ ಹೋಯಿತು. ಆರಂಭದಲ್ಲಿ ನಾವು ಪರಸ್ಪರರನ್ನು ಪ್ರೀತಿಸುತ್ತಿದ್ದೆವಾದರೂ ಕ್ರಮೇಣ ಅದೆಲ್ಲ ಪರಸ್ಪರ ದ್ವೇಷವಾಗಿ ಮಾರ್ಪಡತೊಡಗಿತ್ತು. ಇದೀಗ ನಾವು ಬೇರ್ಪಡುವುದು ಅನಿವಾರ್ಯವಾಗಿದ್ದು ವಕೀಲರು ಅದನ್ನೆಲ್ಲ ಇತ್ಯರ್ಥ ಮಾಡುತ್ತಿದ್ದಾರೆ'' ಎಂದು ವಿವರಿಸಿದ.
ಪ್ರೇಮ ಎಂಬುದು ಸುಖವೆ? ನಮ್ಮ ಕಾಮನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಪ್ರೇಮವೆ? ಪ್ರೇಮ ಎಂಬುದು ದೈಹಿಕ ಸಂವೇದನೆಯೆ? ಆಕರ್ಷಣೆ ಹಾಗೂ ಕನಸುಗಳನ್ನು ಈಡೇರಿಸಿಕೊಳ್ಳುವುದು ಪ್ರೇಮವೆ? ಒಂದು ಆಕಸ್ಮಿಕ ಸನ್ನಿವೇಶವು ಹುಟ್ಟುಹಾಕಿದ ವ್ಯವಸ್ಥೆಪ್ರೇಮವೇ ? ಸಹಬಾಳ್ವೆ, ದಯಾಪರತೆ ಅಥವಾ ಗೆಳೆತನ? ಇದರಲ್ಲಿ ಯಾವೊಂದು ಅಂಶ ಹೆಚ್ಚಿನ ಹಿಡಿತ ಸಾಧಿಸಿದರೂ ಅದು ಪ್ರೇಮ ಅಲ್ಲ. ಪ್ರೇಮ ಎಂಬುದು ಸಾವಿನಂತೆ ಅಂತಿಮ.
ಅಲ್ಲೊಂದು ಹಾದಿ ಇದೆ. ಅದು ಹಾಗೆಯೇ ಮುಂದುವರಿದು ತೋಪಿನ ಮೂಲಕ ಪರ್ವತದ ಶಿಖರ ಮೈದಾನವನ್ನು ತಲುಪಿಸುತ್ತದೆ. ಪರ್ವತ ಏರುವ ಜಾಗದಲ್ಲಿ ಒಂದು ಬೆಂಚ್ ಇದ್ದು ಅಲ್ಲೊಂದು ವೃದ್ಧ ದಂಪತಿ ಕುಳಿತಿದ್ದಾರೆ. ಕೆಳ ಭಾಗದ ಕಣಿವೆಯಲ್ಲಿ ಸೂರ್ಯಕಿರಣ ಹರಡಿದ ಭವ್ಯತೆಯನ್ನು ಅವರು ನೋಡುತ್ತಿದ್ದಾರೆ; ಅವರು ಅಲ್ಲಿಗೆ ಆಗಾಗ ಬರುತ್ತಿದ್ದರು. ಭೂಭಾಗದ ಸೊಬಗನ್ನು ನೋಡುತ್ತ ಏನೊಂದೂ ಮಾತನಾಡದೆ ಅವರು ಅಲ್ಲಿ ಕುಳಿತಿದ್ದರು. ಅವರು ಸಾವಿನ ಆಗಮನಕ್ಕಾಗಿ ಕಾಯುತ್ತಿದ್ದರು. ನಂತರ ಮಾರ್ಗವು ಮೇಲೆ ಹೋಗಿ ಮಂಜಿನಲ್ಲಿ ಮಾಯವಾಗುತ್ತದೆ.



ಅಕ್ಟೋಬರ್ 10, 1973
ಮಳೆ ಸುರಿದು ನಿಂತಿತ್ತು. ಬಂಡೆಗಳು ಸೂರ್ಯಕಿರಣದ ಸ್ಪರ್ಷದಿಂದ  ಮಿಂಚತೊಡಗಿದ್ದವು. ಬತ್ತಿಹೋದ ನದಿ ಪಾತಳಿಯಲ್ಲಿ ನೀರು ತುಂಬಿಕೊಂಡಿದೆ. ಭೂಭಾಗ ಮತ್ತೊಮ್ಮೆ ನಳನಳಿಸುತ್ತಿದೆ. ಕೆಂಪಾದ ಭೂಮಿ, ಅದರ ಮೇಲೆ ಹಸಿರಾಗಿ ನಳನಳಿಸುತ್ತಿರುವ ಹುಲ್ಲುಗರಿಕೆ, ಗಿಡಗಂಟಿಗಳು. ಭೂಮಿಯ ಆಳದಲ್ಲಿ ಬೇರಿಳಿಸಿ ಬೆಳೆದಿರುವ ಮರಗಳು ಹೊಸದಾಗಿ ಚಿಗುರಿವೆ. ದನಕರುಗಳು ಮೈ ತುಂಬಿಕೊಂಡಿವೆ, ರೈತರೂ ಮತ್ತೆ ಸೊರಗಿಲ್ಲ.
ಇಲ್ಲಿನ ಗುಡ್ಡಗಳಿಗೆ ಭೂಮಿಯಷ್ಟೇ ಪ್ರಾಯ ಇದ್ದಿರಬಹುದು. ದೊಡ್ಡ ದೊಡ್ಡ ಬಂಡೆಗಳನ್ನು ಯಾರೋ ಕುಶಲಕರ್ಮಿಗಳು  ಪೇರಿಸಿಟ್ಟಂತೆ ಕಾಣುತ್ತಿತ್ತು. ಅಲ್ಲಿಯೇ ಪೂರ್ವ ದಿಕ್ಕಿಗೊಂದು ಗುಡ್ಡವಿದ್ದು ಅದೊಂದು ಸುಂದರ ದಿಬ್ಬದಂತೆ ಕಾಣುತ್ತದೆ. ಅದರ ಮೇಲೆ ಚೌಕಾಕಾರದ ದೇವಸ್ಥಾನವೊಂದನ್ನು ನಿರ್ಮಿಸಲಾಗಿದೆ.
ಓದು, ಬರೆಯುವುದನ್ನು ಕಲಿಯುವುದಕ್ಕೋಸ್ಕರ ಆ ಹಳ್ಳಿ ಹುಡುಗರು ಹತ್ತಾರು ಮೈಲಿ ದೂರವನ್ನು ನಡೆದೇ ಹೋಗುತ್ತಿದ್ದರು. ಅವರಲ್ಲೊಂದು ಸಣ್ಣ ಮಗು, ತನ್ನಷ್ಟಕ್ಕೇ ತಾನು ಹೋಗುತ್ತಿದ್ದಾಳೆ. ಒಂದು ಕೈಯಲ್ಲಿ ಪುಸ್ತಕ, ಇನ್ನೊಂದರಲ್ಲಿ ಊಟದ ಡಬ್ಬಿ; ನಾವು ಹಾದು ಹೋಗುತ್ತಿದ್ದಂತೆಯೇ ಹುಡುಗಿ ಅಲ್ಲಿಯೇ ನಿಂತಳು. ನಾಚಿಕೆ ಮತ್ತು ಒಂದು ರೀತಿಯ ಪ್ರಶ್ನಾರ್ಥಕಭಾವ ಅವಳಲ್ಲಿ. ಹೆಚ್ಚು ಹೊತ್ತು ಹಾಗೆಯೇ ನಿಂತರೆ ಅವಳಿಗೆ ಶಾಲೆ ತಲುಪುವುದು ವಿಳಂಬವಾಗಿಬಿಡುತ್ತದೆ. ಅದೊಂದು ಪ್ರಶಾಂತ ಹಾಗೂ ಸುಧೀರ್ಘ ಬೆಳಗು. ಭತ್ತದ ಗದ್ದೆಗಳೆಲ್ಲ ಮಿರಿಮಿರಿ ಮಿಂಚುತ್ತಿವೆ.
ಎರಡು ಕಾಗೆಗಳು ಗಾಳಿಯಲ್ಲಿ ಕಚ್ಚಾಡುತ್ತ ಪರಸ್ಪರ ಘರ್ಷಣೆಗಿಳಿದಿದ್ದವು. ಅವುಗಳಿಗೆ ಆಕಾಶದಲ್ಲಿಯೇ ಕಚ್ಚಾಡುತ್ತ ಅಲ್ಲಿ ಹೆಚ್ಚು ಹೊತ್ತು ನಿಲ್ಲುವುದು ಸಾಧ್ಯವಾಗಲಿಲ್ಲ. ಕಚ್ಚಾಡುತ್ತಲೇ ಅವು ನೆಲಕ್ಕೆ ತಲುಪಿದವು. ನೆಲಕ್ಕೆ ಬಿದ್ದರೂ ಅವುಗಳ ಕಚ್ಚಾಟ ನಿಲ್ಲಲಿಲ್ಲ, ಪರಸ್ಪರರ ಗರಿಗಳನ್ನು ನೆಲಕ್ಕೆ ಉದುರಿಸುತ್ತ ಕಚ್ಚಾಟ ತಾರಕಕ್ಕೆ ಏರಿದೆ.  ಅಷ್ಟರಲ್ಲಿ ಎಲ್ಲಿದ್ದವೋ ಏನೋ, ಹತ್ತು ಹನ್ನೆರಡು ಕಾಗೆಗಳು ಕಚ್ಚಾಟ ನಿರತ ಆ ಎರಡರ ಮೇಲೆ ಎರಗುತ್ತವೆ, ಆ ಮೂಲಕ ಜಗಳಕ್ಕೆ ಪೂರ್ಣವಿರಾಮವಾಗುತ್ತದೆ. ಬಹಳ ಹೊತ್ತು ಕಾ ಕಾ ಎಂದು ಬೈದಾಡಿಕೊಳ್ಳುತ್ತಿದ್ದ  ಸಮೂಹ ನಂತರ ಮರವೊಂದನ್ನು ಏರಿ ಅಲ್ಲೇ ಎಲ್ಲಿಯೋ ಕಾಣೆಯಾಗಿಬಿಡುತ್ತವೆ.
ಹಿಂಸೆ ಎಂಬುದು ಎಲ್ಲ ಕಡೆಯಲ್ಲೂ ಇದೆ. ಸುಶಿಕ್ಷಿತರು  ಜಗಳವಾಡುತ್ತಾರೆ. ಶಿಲಾಯುಗದ ಮಾನವರಲ್ಲೂ ಜಗಳವಾಗುತ್ತಿತ್ತು. ಬುದ್ಧಿ ಜೀವಿಗಳಲಿ ಭಾವ ಜೀವಿಗಳಲ್ಲಿ ಇದೇನು ಹೊರತಾಗಿಲ್ಲ. ಶಿಕ್ಷಣವಾಗಲಿ, ಸಂಘಟಿತ ಧರ್ಮವಾಗಲಿ ಮನುಷ್ಯನನ್ನು ಪಳಗಿಸುವುದು ಸಾಧ್ಯವೇ ಆಗಿಲ್ಲ; ಇನ್ನೊಂದೆಡೆ ಯುದ್ಧ, ಕಿರುಕುಳ, ಯಾತನಾಶಿಬಿರಗಳು, ಭೂಮಿ ಹಾಗೂ ಸಾಗರದ ಪ್ರಾಣಿಗಳ ಮಾರಣಹೋಮಕ್ಕೂ ಒಂದೆಡೆಯಿಂದ ಇವೇ ಕಾರಣವಾಗಿವೆ. ಮನುಷ್ಯ ಪ್ರಗತಿಪರನಾಗುತ್ತಿರುವಂತೆ ಹೆಚ್ಚು ಹೆಚ್ಚು ಕ್ರೌರ್ಯವನ್ನು ಮೈಗೂಡಿಸಿಕೊಳ್ಳುತ್ತಿದ್ದಾನೆ. ರಾಜಕಾರಣ ಎಂಬುದು ಸಂಘಟಿತ ಗೂಂಡಾಗಿರಿಯಾಗಿಬಿಟ್ಟಿದೆ. ಒಂದು ಗುಂಪಿನ ವಿರುದ್ಧ ಇನ್ನೊಂದು ಗುಂಪಿನ ಗೂಂಡಾಗಿರಿ, ಕೊನೆಗೆ ರಾಷ್ಟ್ರೀಯತೆ ಹೆಸರಿನಲ್ಲಿ ಉಂಟಾಗುತ್ತಿರುವ ಯುದ್ಧಗಳು. ಆರ್ಥಿಕ ಸಮರ, ವ್ಯಕ್ತಿಗತದ್ವೇಷದಿಂದ ಕೂಡ ಹಿಂಸೆಗೆ ಪ್ರೇರಣೆ ಇದೆ. ಮನುಷ್ಯ ಅನುಭವ ಹಾಗೂ ತಿಳಿವಳಿಕೆಗಳಿಂದ ಏನೊಂದನ್ನೂ ಕಲಿಯುವಂತೆ ತೋರುವುದಿಲ್ಲ. ವಿಭಿನ್ನ ರೂಪದ ಹಿಂಸೆಗಳು ಹಾಗೆಯೇ ಮುಂದುವರಿದಿವೆ. ಮನುಷ್ಯ ಹಾಗೂ ಸಮಾಜವನ್ನು ಪರಿವರ್ತನೆಗೊಳಪಡಿಸುವಲ್ಲಿ ಜ್ಞಾನದ ಪಾತ್ರವಾದರೂ ಏನು ?
ಜ್ಞಾನಾರ್ಜನೆಗಾಗಿ ವ್ಯಯವಾದ ಮನುಷ್ಯ ಶಕ್ತಿಯಿಂದ ಯಾವುದೇ ಸಾಮಾಜಿಕ ಬದಲಾವಣೆಯೂ ಉಂಟಾಗಿಲ್ಲ. ಇದು ಹಿಂಸೆಗೆ ಪೂರ್ಣವಿರಾಮವನ್ನು ಹಾಕಿಲ್ಲ. ಮನುಷ್ಯನಲ್ಲಿ ಇಷ್ಟೊಂದು ಕ್ರೌರ್ಯವಾದರೂ ಯಾಕೆ ? ಮಾನವ ತನ್ನ ಸಂವೇದನೆಯನ್ನೇ  ಸಂವೇದನೆಯನ್ನೇ ಕಳೆದುಕೊಂಡು ದುಷ್ಟನಾಗಿದ್ದಾನೆ ಯಾಕೆ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಬರುತ್ತಿರುವ ಸಾವಿರಾರು ವಿವರಣೆಗಳಿಂದಲೂ ಹಿಂಸೆಯ ಒಂದು ಭಾಗವನ್ನು ತಗ್ಗಿಸುವುದೂ ಸಾಧ್ಯವಾಗಿಲ್ಲ. ಯಾವ ಪ್ರಯೋಜನವೂ ಆಗಿಲ್ಲ. ಮಾನವನಲ್ಲಿ ಅಸ್ವಸ್ತತೆ, ಆಕ್ರಮಣಶೀಲತೆ, ಹಾಳುಗೇಡಿ ಪ್ರವೃತ್ತಿ, ಹಿಂಸಾ ಮನರಂಜನೆ, ಸ್ಯಾಡಿಸಂ, ಕಾಲು ಕೆರೆದು ಜಗಳ ತೆಗೆಯುವ ಗುಣ ಇವೆಲ್ಲವುದರ ವಿಷ್ಲೇಷಣೆಗಾಗಿ ವ್ಯಯವಾದ ಶಕ್ತಿಯಿಂದಾಗಿ ಮನುಷ್ಯನಲ್ಲಿ ವಿವೇಚನಾಗುಣ ಹೆಚ್ಚಿಸಿಲ್ಲ. ಒಂದಿಷ್ಟು ಸಂವೇದನಾಶೀಲನೂ ಆಗಿಲ್ಲ. ಸಾಕಷ್ಟು ಪುಸ್ತಕಗಳು, ಬರಹ, ಬೆದರಿಕೆ, ಶಿಕ್ಷೆಗಳು ಇದ್ದಾಗಲೂ ಮನುಷ್ಯ ಹಿಂಸೆಯನ್ನು ಮುಂದುವರಿಸಿಯೇ ಇದ್ದಾನೆ.
ಹಿಂಸೆ ಎಂಬುದ ಕೇವಲ ಕೊಲ್ಲುವಿಕೆಯಲ್ಲ. ಬಾಂಬ್ ಎಸೆಯುವುದು ಅಥವಾ ರಕ್ತ ಕ್ರಾಂತಿಯಲ್ಲಷ್ಟೇ ಅಲ್ಲ. ಹಿಂಸೆಯಬೇರುಗಳು ಇನ್ನಷ್ಟು ಆಳವಾಗಿ ಇಳಿದುಕೊಂಡಿವೆ. ಯಾಜಮಾನ್ಯ ವ್ಯವಸ್ಥೆಯನ್ನು ಹೇರುವುದು ಅಥವಾ ಹೇರಿಸಿಕೊಳ್ಳುವುದರಲ್ಲೂ ಹಿಂಸೆಯ ಒಂದು ಬೇರು ಇದೆ. ಮಹತ್ವಾಕಾಂಕ್ಷೆ ಹಾಗೂ ಕ್ರೌರ್ಯಗಳು ಹಿಂಸೆಯದೇ ಅಭಿವ್ಯಕ್ತಿಗಳು. ಪರಸ್ಪರರನ್ನು ಹೋಲಿಸುವುದರಿಂದ ಮತ್ಸರಕ್ಕೆ ಅವಕಾಶವಾಗಿ ವೈರ ಹಾಗೂ ದ್ವೇಷಕ್ಕೆ ಕಾರಣವಾಗುತ್ತದೆ. ಒಳಗಿನ ಹಾಗೂ ಹೊರಗಿನ ತಿಕ್ಕಾಟಗಳು ಹಿಂಸೆಯ ಪ್ರೇರಣೆಯಾಗುತ್ತವೆ. ಎಲ್ಲ ಬಗೆಯ ವಿಭಜನೆಗಳೂ ತಿಕ್ಕಾಟ ಹಾಗೂ ನೋವನ್ನು ಉಂಟುಮಾಡುತ್ತವೆ.
ನಿಮಗೆ ಇದೆಲ್ಲ ಗೊತ್ತು ; ಹಿಂಸಾತ್ಮಕ ಘಟನೆಗಳ ಬಗ್ಗೆ ಓದುತ್ತೀರಿ. ನಿಮ್ಮ ಸುತ್ತಮುತ್ತ ಒಂದಲ್ಲ ಒಂದು ಬಾರಿ ಹಿಂಸೆಯನ್ನುನೋಡಿಯೂ ಇರುತ್ತೀರಿ. ಬೇರೆಯವರ ಬಾಯಿಯಲ್ಲಿ ಕೇಳಿರುತ್ತೀರಿ. ಆದರೂ ಹಿಂಸೆಗೆ ಒಂದು ಪೂರ್ಣವಿರಾಮ ಎಂಬುದು ಸಿಗುತ್ತಿಲ್ಲ. ಯಾಕೆ ? ಹೀಗೆಂದು  ಈ ಬಗ್ಗೆ ವಿವರಣೆ, ಆಳವಾದ ವಿಶ್ಲೇಷಣೆ ಅಪ್ರಸ್ತುತ. ಒಂದು ವೇಳೆ ವಿಶ್ಲೇಷಣೆ ಮುಂತಾದವುಗಳಲ್ಲಿ ನೀವು ತೊಡಗಿದ್ದರೆ ಅದೆಲ್ಲ ವ್ಯರ್ಥ. ಹಿಂಸೆಯನ್ನು ಮೀರುವುದಕ್ಕೆ ದಾಟುವುದಕ್ಕೆ ಬೇಕಾದ ಶಕ್ತಿಯನ್ನು  ಇಂಥ ಅಪ್ರಸ್ತತತೆಯಲ್ಲೇ ನೀವು ವ್ಯಯಮಾಡಿರುತ್ತೀರಿ. ಹಿಂಸೆಯನ್ನು ಮೀರುವುದಕ್ಕೆ ನೀವು ನಿಮ್ಮೆಲ್ಲ  ಶಕ್ತಿಯನ್ನು ಕ್ರೂಢೀಕರಿಸಿ, ಹಿಂಸೆಗಾಗಿ ಶಕ್ತಿ ಹಾಳಾಗುವುದನ್ನು ದಾಟಿ ಸಾಗಬೇಕು. ಹಿಂಸೆಯನ್ನು ನಿಯಂತ್ರಿಸುವುದೆಂದರೆ ಅದು ಇನ್ನೊಂದು ಬಗೆಯ ಹಿಂಸೆಯಾಗಿರುತ್ತದೆ. ಆಗಲೇ ನಿಯಂತ್ರಣಕ್ಕೊಳಗಾದ ಭಾಗವೇ ನಿಯಂತ್ರಕನ ಪಾತ್ರ ವಹಿಸಿರುತ್ತದೆ. ಸಂಪೂರ್ಣ ಗಮನ ಇಟ್ಟಿರಬೇಕು, ಶಕ್ತಿಯನ್ನೆಲ್ಲ ಕ್ರೂಡೀಕರಿಸಿದಾಗ ಎಲ್ಲ ಬಗೆಯ ಹಿಂಸೆಯೂ ಒಂದು ಅಂತ್ಯವನ್ನು ಕಾಣುತ್ತದೆ. ಸಂಪೂರ್ಣ ಗಮನ ಎಂಬುದನ್ನು ಕೇವಲ ಶಾಬ್ಧಿಕವಾಗಿ ಅರ್ಥಹಚ್ಚತಕ್ಕದ್ದಲ್ಲ. ಅದು ಆಲೋಚನೆಗಳಿಂದಾದ ಅಮೂರ್ತ ಸಮೀಕರಣವೂ ಅಲ್ಲ; ಅದು ದೈನಂದಿನ ಜೀವನದ ಒಂದು ಕ್ರಿಯೆಯೇ ಆಗಿದೆ. ಕ್ರಿಯೆ ಎಂಬುದು ಒಂದು ತತ್ವವಲ್ಲ. ತತ್ವದಿಂದ ಉಂಟಾಗಿದ್ದರೆ ಕ್ರಿಯೆ ಎಂಬುದು ಹಿಂಸೆಯಾಗಿ ಮಾರ್ಪಟ್ಟಿರುತ್ತದೆ.
ಮಳೆಯ ನಂತರ ನದಿ ಪ್ರತಿಯೊಂದು ಬಂಡೆಯನ್ನೂ ಸುತ್ತುವರಿದು ಪ್ರವಹಿಸುತ್ತದೆ. ನಗರಗಳು ಹಳ್ಳಿಗಳೊಂದಿಗೆ ಹರಿದು ಎಷ್ಟೇ ಕೊಳಚೆಯಾಗಿದ್ದರೂ ಮುಂದುವರಿಯುತ್ತ ತನ್ನನ್ನು  ಸ್ವಚ್ಛಗೊಳಿಕೊಳ್ಳುತ್ತದೆ. ಬೆಟ್ಟದ ತಪ್ಪಲಿನ ಮೂಲಕ ಹರಿದು ಹೋಗುತ್ತಿರುತ್ತದೆ.




ಅಕ್ಟೋಬರ್ 12, 1973
ಮತ್ತೊಮ್ಮೆ  ಪ್ರಖ್ಯಾತಗುರುವೊಬ್ಬರು 'ಆತ'ನನ್ನು ಭೇಟಿಯಾಗಲು ಬರುತ್ತಾರೆ. ಸುಂದರ ಗೋಡೆಯಿಂದ ಆವೃತವಾದ ಚೆನ್ನಾಗಿ ನೆಲಹಾಸನ್ನು ಬೆಳೆಸಿದ್ದ ಹೂದೋಟದಲ್ಲಿಎಲ್ಲರೂ ಕುಳಿತಿದ್ದೆವು. ಅಲ್ಲಿ ಗುಲಾಬಿ ಹೂವು, ಅಚ್ಚ ಹಳದಿಯ ಸೇವಂತಿಗೆ, ಸ್ವೀಟ್ ಪೇಸ್ ಸೇರಿದಂತೆ ಪೌರಾತ್ಯದ ದಕ್ಷಿಣದಲ್ಲಿ ಕಾಣುವ ವೈವಿಧ್ಯಮಯ ಹೂವುಗಳಿದ್ದವು. ಗೋಡೆ ಹಾಗೂ ಮರಗಳಿಂದಾದ ಆವರಣವು ಹೊರಗೆ ಹೋಗುತ್ತಿದ್ದ ಕೆಲವು ಕಾರುಗಳ ಗದ್ದಲವನ್ನು ತಡೆಯುತ್ತಿತ್ತು. ಗಾಳಿಯಲ್ಲಿ ಉದ್ಯಾನದ ಹಲವು ಬಗೆಯ ಹೂವಿನ ಪರಿಮಳ ತುಂಬಿತ್ತು. ಸಂಜೆಯಾಗುತ್ತಲೆ ಗುಳ್ಳೆನರಿಯ ಕುಟುಂಬವೊಂದು ಬಿಲದಿಂದ  ಮರದ ಕೆಳಗೆ ಬರುತ್ತದೆ. ಸಮೀಪದಲ್ಲೇ ದೊಡ್ಡದಾದ ಸುರಂಗವೊಂದನ್ನು ತೋಡಿಕೊಂಡು ತಾಯಿ ಮತ್ತದರ ಮೂರು ಮರಿಗಳು ವಾಸಿಸುತ್ತವೆ. ಅವೆಲ್ಲವೂ ಆರೋಗ್ಯ]ರ್ಣವಾಗಿದ್ದು ಕತ್ತಲಾಗುತ್ತಲೆ ತಾಯಿ ಮರಿಗಳೊಂದಿಗೆ ಬಿಲದಾಚೆಯ ಮರದ ಹತ್ತಿರ ಬರುತ್ತದೆ. ಮನೆಯ ಹಿಂದಿರುವ ಕಸದ ರಾಶಿಗೆ ನಂತರ ಇವುಗಳು ಬರಲಿಕ್ಕಿವೆ. ಅಲ್ಲಿ ಮುಂಗುಲಿಯ ಒಂದು ಕುಟುಂಬವೂ ಇದೆ. ಪ್ರತಿದಿನ ಸಂಜೆ ಕೆಂ[ ಮೂಗಿನ ತಾಯಿ  ಮುಂಗುಸಿ ಮತ್ತು ಅದರ ಬೆನ್ನ ಹಿಂದೆ ಎರಡು ಮರಿಗಳು ತಮ್ಮ ಅಡಗುದಾಣದಿಂದ ಬರಲಿಕ್ಕಿವೆ. ಅವು ಗೋಡೆಯ ಸಮೀಪದಲ್ಲೇ ತೆವಳಿ  ಅಡುಗೆ ಮನೆಯು ಹಿಂಬದಿಗೆ ಬರುತ್ತವೆ. ಕೆಲ ದಿನ ಅವುಗಳಿಗಾಗಿ ಮಿಕ್ಕ ಆಹಾರವನ್ನು ಹಾಕುವುದೂ ಇತ್ತು. ಮುಂಗುಲಿಗಳಿಂದಾಗಿ ಉದ್ಯಾನದಲ್ಲಿ ಹಾವುಗಳು ಸುಳಿಯುತ್ತಿರಲಿಲ್ಲ. ನರಿ ಮತ್ತು ಮುಂಗುಲಿಗಳು ಪರಸ್ಪರ ಒಂದನ್ನೊಂದು ಎದುರುಬದುರಾಗಿ ದಾಟಿ ಹೋಗುತ್ತಿರಲಿಲ್ಲ. ಒಂದು ವೇಳೆ ಆಕಸ್ಮಾತ್ ಎದುರಾಗುವ ಸಂದರ್ಭ ಬಂದರೂ ಮಾರ್ಗ ಬದಲಿಸಿ ಬೇರೆ ದಾರಿ ಹಿಡಿಯುತ್ತವೆ.
ಗುರುಗಳು ಕೆಲವು ದಿನ ಮೊದಲಾಗಿಯೇ ತಾನೊಮ್ಮೆ ಬರುತ್ತೇನೆ ಎಂದು ಹೇಳಿದ್ದರು. ಅವರು ಬಂದರು. ಅವರ ಹಿಂದೆ ಶಿಷ್ಯರು ದುಬುದುಬು ಬಂದು ಸೇರಿಕೊಳ್ಳತೊಡಗಿದರು. ಅತ್ಯಂತ ಗೌರವದ ಸಂಕೇತವಾಗಿ ಶಿಷ್ಯರೆಲ್ಲ ಗುರುಗಳ ಪಾದ ಮುಟ್ಟಿ ನಮಸ್ಕರಿಸುತ್ತಿದ್ದರು. ಅಲ್ಲಯೇ ಇದ್ದ "ಆತನ' ಪಾದವನ್ನು ಮುಟ್ಟಿ ನಮಸ್ಕರಿಸುವುದಕ್ಕೆ ಬಂದರೂ ಅದನ್ನು ಆತ ಪ್ರೋತ್ಸಾಹಿಸಲಿಲ್ಲ. ಹೀಗೆ ಮಾಡುವುದರಿಂದ ಅವಮಾನದಂತಾಗುತ್ತದೆ ಎಂದು ಆತ ಹೇಳಿದರೂ ಸಂಪ್ರದಾಯ ಹಾಗೂ ಸ್ವರ್ಗದ ಆಸೆ ಅವರಲ್ಲಿ ಆಳವಾಗಿ ಬೇರೂರಿದ್ದಿತ್ತು. ತಾನು ಎಂದಿಗೂ ವಿವಾಹಿತರ ಮನೆಯನ್ನು ಹೊಗುವುದಿಲ್ಲ ಎಂವ ಪ್ರತಿಜ್ಞೆ ಮಾಡಿದ್ದರಿಂದ ಗುರುಗಳು ಮನೆ ಒಳಕ್ಕೆ ಬರಲಿಲ್ಲ.
ಆ ಬೆಳಗಿನಲ್ಲಿ ಆಕಾಶ ಅಚ್ಚ ನೀಲಯಾಗಿದ್ದಿತ್ತು. ಮರದ ನೆರಳುಗಳು ಉದ್ದುದ್ದವಾಗಿ ಹಾಸಿಕೊಂಡಿದ್ದವು.
""ನೀವು ಗುರುತ್ವವನ್ನು ನಿರಾಕರಿಸಿ ಗುರುಗಳ ಗುರುವಾಗಿದ್ದೀರಿ. ನೀವು ಯುವಕರಾಗಿದ್ದಾಗಿನಿಂಲೇ ನಿಮ್ಮನಡೆಗಳನ್ನುಗಮನಿಸುತ್ತ ಬಂದಿದ್ದೇನೆ. ನೀವು ಹೇಳುವುದೆಲ್ಲವೂ ಸತ್ಯವೇ ಆಗಿದ್ದು ಅದೆಲ್ಲ ಕೆಲವರಿಗೆ ಮಾತ್ರ ಅರ್ಥವಾಗುತ್ತದೆ. ಆದರೆ ಹೆಚ್ಚಿನವರಿಗೆ ನಮ್ಮಂಥವರ ಅವಶ್ಯಕತೆ ಇರುತ್ತದೆ. ಇಲ್ಲವಾದರೆ ಅವರು ಅತಂತ್ರರಾಗಿ ಬಿಡುತ್ತಾರೆ; ಯಜಮಾನಿಕೆ ಎಂಬುದು ಮಂದಮತಿಗಳನ್ನು ರಕ್ಷಿಸುತ್ತದೆ. ನಾವು ಅವರಿಗೆ ಸತ್ಯವನ್ನು ವಿವರಿಸಿ ಹೇಳುವ ಭಾಷ್ಯಕಾರರು. ನಮಗೆ ನಮ್ಮದೆ ಆದ ಅನುಭವಗಳಾಗಿವೆ; ಅದು ನಮಗೆ ಗೊತ್ತು. ಸಂಪ್ರದಾಯ ಎಂಬುದು ಎಲ್ಲೆಡೆ ಹರಡಿಕೊಂಡಿದ್ದು, ಕಲವೆ ಕೆಲವು ಜನರು ಮಾತ್ರ ಅದನ್ನುತಟ್ಟಿಸಿಕೊಳ್ಳದೆ ಏಕಾಂಗಿಯಾಗಿ ನಿಂತು ಸತ್ಯ ಸಂಗತಿಗಳನ್ನು ಗಮನಿಸಬಹುದು. ಅಂಥ ಧನ್ಯತೆ ಪಡೆದವರಲ್ಲಿ ನೀವೂ ಒಬ್ಬರಾಗಿದ್ದೀರಿ. ಆದರೆ ನಾವು ಜನರೊಟ್ಟಿಗೆ ಇರಬೇಕು. ಅವರೊಂದಿಗೆ ಹಾಡಬೇಕು. ಪವಿತ್ರ ಹೆಸರುಗಳನ್ನು ಗೌರವಿಸಬೇಕು. ತೀರ್ಥ ಪ್ರೋಕ್ಷಣ್ಯ ಮಾಡಬೇಕು; ಹೀಗೆಲ್ಲ  ಮಾಡಿದಾಕ್ಷಣ ನಮ್ಮದು ಸಂ]ರ್ಣ ಬೂಟಾಟಿಕೆ ಎಂಬ ಅರ್ಥವಲ್ಲ. ಅವರಿಗೆಲ್ಲ ಸಹಾಯ ಬೇಕಾಗಿದೆ. ನಾವು ಅದಕ್ಕಾಗಿಯೇ  ಇಲ್ಲಿ ಇದ್ದೇವೆ. ನಿಮ್ಮಲ್ಲಿ ಕೇಳುವ ಅವಕಾಶ ಇದ್ದರೆ ಸಂ]ರ್ಣ ಸತ್ಯದರ್ಶನದ ಅನುಭವ ಏನು ಎಂದು ಕೇಳಬಹುದೇ?''
ಶಿಷ್ಯಂದಿರು ಎಲ್ಲೆಡೆಯಂತೆ ಇಲ್ಲಿಯೂ ಬರುವುದು ಹೋಗುವುದು ಮಾಡುತ್ತಲೇ ಇದ್ದರು. ಅವರಿಗೆಲ್ಲ ಈ ಮಾತುಕತೆಯಲ್ಲಿ ಆಸಕ್ತಿ ಇದ್ದಿರಲಿಲ್ಲ. ಅಲ್ಲಿನ ಹೂವು, ಮರಗಳ ಸೌಂದರ್ಯದ ಬಗ್ಗೆಯೂ ಗಮನ ಇರಲಿಲ್ಲ. ಅವರಲ್ಲಿ ಕೆಲವರು ಹುಲ್ಲಿನ ಮೇಲೆ ಕುಳಿತು ಕೇಳುತ್ತಿದ್ದರು. ತಮ್ಮ ಮನಶ್ಯಾಂತಿಗೆ ಹೆಚ್ಚೇನೂ ತೊಂದರೆ ಆಗಲಿಕ್ಕಿಲ್ಲ ಎಂಬ ನಂಬಿಕೆ ಅವರದ್ದು. ಸುಸಂಸ್ಕೃತ ವ್ಯಕ್ತಿಯೊಬ್ಬ ತನ್ನ ಸಂಸ್ಕೃತಿಯ ತಿರುಳನ್ನೇ ಅಲುಗಾಡಿಸಿಕೊಂಡಿದ್ದ. ಸತ್ಯವನ್ನು ಅನುಭವಿಸುವುದು ಸಾಧ್ಯವಿಲ್ಲ. ಅದನ್ನು ಪಡೆಯುವುದಕ್ಕೆ ಮಾರ್ಗವೇ ಇಲ್ಲ. ಯಾವುದೇ ಶಬ್ದವೂ ಅದನ್ನು ಬಣ್ಣಿಸಲಾರದು. ಅಥವಾ ಅದರ ಬೆನ್ನು ಬಿದ್ದು ಪಡೆದುಕೊಳ್ಳುವುದು ಅಥವಾ ಹಾಗೆ ಸಿಗಬಹುದೆಂಬುದೂ ಸರಿಯಲ್ಲ. ಹುಡುಕಿದ ನಂತರ ಪಡೆಯುವುದೇನಿದೆಯಲ್ಲ ಅದು ಮನಸ್ಸಿನ ಭ್ರಷ್ಟತೆಯಷ್ಟನ್ನೆ. ಸತ್ಯ ಎಂಬ ಶಬ್ದವೇ ಸತ್ಯವಲ್ಲ. ವಿವರಿಸಲ್ಪಡುವಂಥದ್ದು ಅದರ ವಿವರಣೆಯೇ ಆಗಿರುವುದಿಲ್ಲ.
""[ರಾತನರು ತಮಗಾದ ಸತ್ಯದ ಅನುಭವಗಳನ್ನು ಹೇಳಿದ್ದಾರೆ. ಧ್ಯಾನದ ಹಂತದಲ್ಲಾದ ಜ್ಞಾನೋದಯಗಳನ್ನು ವಿವರಿಸಿದ್ದಾರೆ. ಪರಮಾನಂದ ಪವಿತ್ರ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ಅಂಥವುಗಳನ್ನೆಲ್ಲ, ಅವುಗಳನ್ನೆಲ್ಲ ಬದಿಗಿಟ್ಟು ಬಿಡಬೇಕು ಎಂಬುದಾಗಿ ನೀವು ಹೇಳುತ್ತಿದ್ದೀರಾ?''
ಧ್ಯಾನದ ಬಗ್ಗೆಇರುವ ಯಾವುದೇ ಯಾಜಮಾನ್ಯ ಹೇಳಿಕೆಯೂ ಅದನ್ನು ಮೂಲ ಸ್ಥರದಲ್ಲಿಯೇ ನಿರಾಕರಿಸಿದಂತೆ. ಎಲ್ಲಾ ಬಗೆಯ ಜ್ಞಾನ, ಪ್ರಕ್ರಿಯೆಗಳು, ನಿದರ್ಶನಗಳಿಗೆ ಧ್ಯಾನದಲ್ಲಿ ಜಾಗವೇ ಇಲ್ಲ. ಧ್ಯಾನಿಸುವವನನ್ನು ಸಂ]ರ್ಣ ಹೊಡೆದು ಹಾಕಿ, ಅನುಭವಿಸುವವನೂ ಇಲ್ಲವಾಗಿ, ಆಲೋಚಿಸುವವನ ಹೊರಹೋಗುವಿಕೆಯು ಧ್ಯಾನದ ಕನಿಷ್ಠ ಅವಶ್ಯಕತೆಗಳು. ಇವೆಲ್ಲವುಗಳಿಂದ ಸ್ವತಂತ್ರರಾಗುವುದೆ ದೈನಂದಿನ ಧ್ಯಾನ ಕ್ರಿಯೆ. ಗ್ರಹಿಸುವವ ಎಂದರೆ ಭೂತ. ಆತನ ನೆಲೆ ಇರುವುದು ಕಾಲದಲ್ಲಿ. ಆತನ ಆಲೋಚನೆ, ನೆರಳು, ಬಿಂಬಗಳಿಗೆಲ್ಲ ಕಾಲನ ಕಟ್ಟಳೆಗಳು ಇರುತ್ತವೆ. ತಿಳಿವಳಿಕೆ ಎಂಬುದು ಕಾಲ. ಈ ರೀತಿ ತಿಳಿವಳಿಕೆಗಳಿಂದ ಸ್ವತಂತ್ರನಾಗುವುದೇ ಧ್ಯಾನ. ಅದಕ್ಕೊಂದು ವ್ಯವಸ್ಥೆ ಎಂಬುದಿಲ್ಲ. ಅದಕ್ಕಾಗಿ ಸತ್ಯಕ್ಕೆ ಒಂದು ದಿಕ್ಕು ಎಂಬುದೂ ಇರುವುದಿಲ್ಲ. ಅಥವಾ ಧ್ಯಾನದ ಸೌಂದರ್ಯವೂ ಅದೇ ರೀತಿ. ಬೇರೊಬ್ಬರನ್ನು ಅನುಸರಿಸುವುದು ಎಂದರೆ ಸತ್ಯವನ್ನು ನಿಷೇಧಿಸಿದಂತೆ.
ವಿಭಿನ್ನ ಬಗೆಯ ಸಂಬಂಧಗಳ ಕನ್ನಡಿಯಲ್ಲಿ 'ಏನಿರುವುದೋ ಅದರ' ಮುಖ ದರ್ಶನವಾಗುತ್ತದೆ. ನೋಡಿದ ಸಂಗತಿಗಳಿಂದಲೇ ನೋಡುಗ ಸಿದ್ಧನಾಗಿರುತ್ತಾನೆ. ಸದ್ಗುಣಗಳ ರಾಶಿಯಿಂದ ಉಂಟಾಗುವ ವ್ಯವಸ್ಥೆ, ಧ್ಯಾನ ಮತ್ತು ಇತರರು ಹೇಳಿಕೊಟ್ಟ ಮುಗಿಯದ ಅನುಭವಗಳ ನಿದರ್ಶನಗಳಿಗೆಲ್ಲ ಅರ್ಥವೇ ಇಲ್ಲ; ಅವೆಲ್ಲ ಅಪ್ರಸ್ತುತವೂ ಆಗಿವೆ. ಸತ್ಯಕ್ಕೆ ಯಾವುದೇ ಸಂಪ್ರದಾಯ ಎಂಬುದಿಲ್ಲ, ಅದನ್ನು ಇತರರಿಗೆ ಕೊಡುವುದೂ ಸಾಧ್ಯವಿಲ್ಲ.
ಆ ಹೊತ್ತಿಗೆ ಬಿಸಿಲಿನ ಝಳದಿಂದಾಗಿ ಸ್ವೀಟ್ ಪೇಸ್‌ನ ಪರಿಮಳ ವಾತಾವರಣದಲ್ಲಿ ದಟ್ಟವಾಗಿ ಹರಡಿತ್ತು.




ಅಕ್ಟೋಬರ್ 13, 1973
ನಾವು ಭೂಮಿಯಿಂದ 37 ಸಾವಿರ ಅಡಿಗಳ ಎತ್ತರದಲ್ಲಿ  ಲೀಲಾಜಾಲವಾಗಿ ಹಾರಿ ಹೋಗುತ್ತಿದ್ದೆವು. ವಿಮಾನವು ಪ್ರಯಾಣಿಕರಿಂದ ತುಂಬಿಕೊಂಡಿತ್ತು. ಆಗಲೆ ನಾವು ಸಮುದ್ರವನ್ನು ದಾಟಿ ಭೂಭಾಗದತ್ತ ಧಾವಿಸುತ್ತಿದ್ದೇವೆ. ನಮ್ಮ ಕೆಳಗೆ ತುಂಬ ದೂರದಲ್ಲಿ ಸಮುದ್ರ ಹಾಗೂ ಭೂಮಿ ಇದ್ದಿತ್ತು. ಅಲ್ಲಿದ್ದ ಪ್ರಯಾಣಿಕರು ತಮ್ಮ ಹರಟೆಗಳಿಂದ ಹೊರಬರುವ ಸಂಭವವೇ ಕಾಣಿಸುತ್ತಿರಲಿಲ್ಲ. ಹಲವರು ತಿನ್ನುವುದು ಕುಡಿಯುವುದರಲ್ಲಿ  ತಲ್ಲೀನರು. ಇನ್ನೂ ಕೆಲವರು ಪೇಪರ್ ಓದುವುದರಲ್ಲಿ ಮಗ್ನರಾಗಿದ್ದಾರೆ; ಇದೆಲ್ಲ ಮುಗಿಯುವಷ್ಟರಲ್ಲಿ ಸಿನಿಮಾವೊಂದು ಆರಂಭವಾಗಿದೆ. ಅಲ್ಲಿದ್ದ ಗದ್ದಲ ಪ್ರಿಯರ ಗುಂಪಿಗೆ ಮನರಂಜನೆ, ತಿಂಡಿ-ತೀರ್ಥಗಳಿಲ್ಲದೆ ನಡೆಯುತ್ತಿರಲಿಲ್ಲ. ಅದೆಲ್ಲ ಮುಗಿಯುತ್ತಲೆ ಪರಸ್ಪರ ಕೈ ಹಿಡಿದುಕೊಂಡು ನಿದ್ದೆಗೆ ಜಾರಿ ಗೊರಕೆ ಆರಂಭಿಸಿದ್ದರು. ಅಷ್ಟರಲ್ಲೇ ಭೂಮಿಯನ್ನು ಮೋಡಗಳು ಆವರಿಸತೊಡಗಿ ಕ್ಷಿತಿಜದ ಒಂದು ತುದಿಯಿಂದ ಇನ್ನೊಂದು ತುದಿಯ ತನಕವೂ ಮೋಡಗಳ ರಾಶಿ ಬಿದ್ದುಕೊಂಡಿದೆ. ಎಲ್ಲೆಡೆ ಅವಕಾಶ- ಆಳದ ಜೊತೆ ವಿಮಾನದ ಭೋರ್ಗರೆತ. ಭೂಮಿ ಮತ್ತು  ವಿಮಾನದ ನಡುವೆ ಮುಗಿಯದಷ್ಟು ಮೋಡದ ರಾಶಿ. ಮೇಲ್ಗಡೆ ಸುಂದರವಾದ ನೀಲಿ ಆಕಾಶ. ವಿಮಾನದಲ್ಲಿ ಕಿಟಕಿಯ ಹತ್ತಿರದ ಮೂಲೆಯ ಆಸನದಲ್ಲಿ 'ನೀನು' ನಿರಂತರ ಎಚ್ಚರದಿಂದ ಇದನ್ನೆಲ್ಲ ನೋಡುತ್ತಿದ್ದೆ. ಬಿಳಿ ಮೋಡದ ಮೇಲೆ ಸೂರ್ಯನ ಬೆಳಕು ಬಿದ್ದಾಗ ಮೋಡದ ಆಕಾರವೆಲ್ಲ  ಬದಲಾಗುತ್ತ  ಹೋಗುತ್ತಿತ್ತು.
ಪ್ರಜ್ಞೆ  ಎಂಬುದಕ್ಕೆ ಒಂದಿಷ್ಟು  ಆಳ ಎಂಬುದು ಇರುತ್ತದೆಯೇ? ಅಥವಾ ಕೇವಲ ಮೇಲಿಂದ ಮೇಲಷ್ಟೇ ಕಳವಳ- ಸ್ಪಂದನಗೊಳ್ಳುತ್ತಿರುತ್ತದಯೇ? ಆಲೋಚನೆ ತನ್ನ ಆಳವನ್ನು ಕಲ್ಪಿಸಿಕೊಳ್ಳಬಹುದು. ಆಲೋಚನೆ ಮೇಲ್ನೋಟದ್ದೋ ಅಥವಾ ಒಂದಿಷ್ಟು ಆಳವಿದೆಯೋ ಎಂಬುದನ್ನು ಪರೀಕ್ಷಿಸಿ ಕೊಳ್ಳಬಲ್ಲುದಾಗಿದೆ.
ಅಷ್ಟಕ್ಕೂ ಈ ಆಲೋಚನೆಯಲ್ಲಿ  ಆಳ ಎಂಬುದೇನಾದರೂ ಇರುತ್ತದೆಯೇ? ಪ್ರಜ್ಞೆ  ಎಂಬುದು ಅದರ ಸಾರಾಂಶದಿಂಧ ಕೂಡಿರುವಂಥದ್ದು. ಸಾರಾಂಶವೇ ಪ್ರಜ್ಞೆಯ ಸರ್ವತ್ರ ಸೀಮೆಯಾಗಿದೆ. ಆಲೋಚನೆ ಎಂಬುದು ಹೊರಗಿನ ಚಟುವಟಿಕೆಯಾಗಿದೆ. ನಿರ್ದಿಷ್ಟ ಭಾಷೆಯೊಂದರಲ್ಲಿ ಆಲೋಚನೆಯ ಶಬ್ದಾರ್ಥವೇ "ಹೊರಗಿನದು' ಎಂದಾಗಿದೆ. ಪ್ರಜ್ಞೆಯ ಒಳಸ್ಥರಕ್ಕೆ ಮಹತ್ವ ಕೊಡಲಾಗುತ್ತದೆಯಷ್ಟೇ. ಅದೂ ಕೂಡ ಮೇಲ್ಮಟ್ಟದಲ್ಲಿಯೇ ಇರುವಂಥದ್ದಾಗಿದ್ದು, ಅದಕ್ಕೆ ಆಳವೆಂಬುದೇ ಇಲ್ಲ. ಆಲೋಚನೆ ತನಗೊಂದು ಕೇಂದ್ರವನ್ನು, ಇಗೋ, ನಾನು ಎಂಬುದಾಗಿ ಗುರುತಿಸಿಕೊಳ್ಳಬಹುದು. ಆದರೆ ಇಗೋ, ನಾನು ಎಂಬ ಕೇಂದ್ರಕ್ಕೆ ಆಳ ಇರುವುದೇ ಇಲ್ಲ. ಎಷ್ಟೊಂದು ರೀತಿಯಲ್ಲಿ ವಂಚನಾತ್ಮಕವಾಗಿ ಹೆಣೆದಿರಲಿ ಅಥವಾ ಸೂಕ್ಷ್ಮವಾಗಿದ್ದಿರಲಿ ಶಬ್ದಗಳಿಗೆ ಆಳ ಎಂಬುದೇ ಇರುವುದಿಲ್ಲ. ನಾನು ಎಂಬುದು ಆಲೋಚನೆಯ ಹಂದರವಾಗಿದ್ದು ಶಬ್ದದ ಮೂಲಕ ಹೆಣೆದಿರುತ್ತದೆ. ಹಾಗೆಯೇ ತನ್ನನ್ನು ಗುರುತಿಸಿಕೊಳ್ಳುತ್ತದೆ ಕೂಡ. ನಾನು ಕರ್ಮದಲ್ಲಿಅಥವಾ ಅಸ್ತಿತ್ವದಲ್ಲಿ ಆಳ ಕಂಡುಕೊಳ್ಳಲು ಹೋರಾಡುವುದು, ನಾನು ಎಂಬುದು ತನ್ನೆಲ್ಲ ಸಂಬಂಧಗಳಲ್ಲಿ ಆಳ ಕಂಡುಕೊಳ್ಳುವ ಪರಿಣಾಮ ಎಂದರೆ, ನಾನು ಎಂಬುದನ್ನೇ ನೂರಾರು ರೂಪದಲ್ಲಿ ಕಲ್ಪಿಸಿಕೊಂಡು ಅದರ ನೆರಳನ್ನೇ ಆಳವೆಂದು ಭ್ರಮಿಸಿ ಸಂಭ್ರಮಿಸುವಂತಾಗುತ್ತದೆ.
ಆಲೋಚನೆಯ ಚಟುವಟಿಕೆಗೆ ಆಳ ಎಂಬುದೇ ಇರುವುದಿಲ್ಲ; ಇದಕ್ಕೆ ಸುಖ, ಭಯ, ವಿಷಾದಗಳೆಲ್ಲ ಮೇಲ್ಮಟ್ಟದಲ್ಲಿಯೇ ಇರುವಂಥದ್ದು. ಹೊರಮೈ ಅಥವಾ ಮೇಲ್ಮಟ್ಟ ಎಂಬ ಶಬ್ದಗಳೆ  ಆಳದಲ್ಲಿ ಬೇರೇನೂ ಇದೆ ಎಂಬುದನ್ನು ಸೂಚಿಸುತ್ತದೆ. ಇದರ ಆಳದಲ್ಲಿ ಭಾರೀ  ಪ್ರಮಾಣದ ನೀರು ಅಥವಾ ಮೊಳಕಾಲಿನ ಮಟ್ಟದ ನೀರಷ್ಟೇ ಇದ್ದಿರಲೂ ಬಹುದು. ಆಳ ಅಥವಾ ಮೇಲು ಮೇಲಿನ ಮನಸ್ಸು ಎಂಬುದು ಆಲೋಚನೆ ಆಯ್ದುಕೊಂಡ ಶಬ್ಧಗಳು.  ಆದರೆ  ಆಲೋಚನೆಯೆಂಬುದೇ ಮೇಲ್ಮಟ್ಟದ್ದು. ಆಲೋಚನೆಯು  ಆಳದಲ್ಲಿರುವ  ಸಾಂದ್ರತೆ ಅಥವಾ ದೊಡ್ಡ ಪ್ರಮಾಣದ ನೀರು ಎಂದರೆ ಅನುಭವ, ತಿಳಿವಳಿಕೆ, ನೆನ[ಗಳು, ಮುಗಿದುಹೋದ ಸಂಗತಿಗಳು ನೆನಪಿನಲ್ಲಿ  ಮಾತ್ರ ಸಿಗುವಂಥವು. ಕೆಲಸಕ್ಕೆ ಬರುವ ಅಥವಾ ಬಾರದ, ಕೆಲವು ಹಣ್ಣಾದ, ಇನ್ನೂ ಕೆಲವು ಕಾಯಾಗಿಯೇ ಇರುವ ಸಂಗತಿಗಳು ಆಲೋಚನೆಯ ಆಳದಲ್ಲಿರುತ್ತವೆ.
ನಾವು ಯಾನ ಮಾಡುತ್ತಿದ್ದ ಎತ್ತರದಿಂದ ಬಹಳ ಕೆಳಕ್ಕೆ ಭೂಮಿಯಲ್ಲಿ ದೊಡ್ಡ ತಿರುವು ಹಾಗೂ ಹೊಲಗದ್ದೆಗಳ ನಡುವೆ ನದಿಯೊಂದು ಹರಿದು ಹೋಗುತ್ತಿತ್ತು. ಅಲ್ಲೇ ಇದ್ದ ಕೆಲವು ರಸ್ತೆಗಳಲ್ಲಿಜನರು  ಇರುವೆಗಳು ಹರಿದು ಹೋತುತ್ತಿದ್ದಂತೆ ಕಾಣುತ್ತಿದ್ದರು.  ಪರ್ವತಗಳ ಮೇಲೆಲ್ಲ  ಮಂಜು ಕವಿದಿತ್ತು. ಕಣಿವೆಯಲ್ಲಿ ನೆರಳು ಬಿದ್ದು  ದಟ್ಟ  ಹಸಿರಿನಲ್ಲಿ  ಗೋಚರವಾಗಿತ್ತು. ಅಲ್ಲಿಯ ತನಕ ನಮ್ಮ ಎದುರಿನಲ್ಲಿಯೇ ಕಾಣುತ್ತಿದ್ದ  ಸೂರ್ಯ, ವಿಮಾನವು ಕೆಳಕ್ಕಿಳಿದಂತೆ ಸಮುದ್ರದೊಳಗೆ ಇಳಿದುಹೋದ. ವಿಮಾನವು ಹೊಗೆ ಹಾಗೂ ಗದ್ದಲಗಳಿಂದ ಕೂಡಿದ ವಿಸ್ತರಿಸುತ್ತಿದ್ದ ನಗರವೊಂದರಲ್ಲಿ ಇಳಿುತು.
ಜೀವನ ಅಥವಾ ಅಸ್ತಿತ್ವ ಎಂಬುದಕ್ಕೆ ಆಳ ಎಂಬುದೇನಾದರೂ ಇದೆಯೇ? ಎಲ್ಲ ಬಗೆಯ ಸಂಬಂಧಗಳೂ ಮೇಲ್ಮಟ್ಟದ್ದೇ ಆಗಿರುತ್ತವೆಯೇ? ಇದನ್ನೆಲ್ಲ ಕಂಡುಕೊಳ್ಳುವುದು ಆಲೋಚನೆಗೆ ಎಂದಾದರೂ ಸಾಧ್ಯವಿದೆಯೇ? ಆಲೋಚನೆಯ ಆಯುಧವೊಂದನ್ನೆ ಮನುಷ್ಯ ಸಂಶೋಧಿಸಿಕೊಂಡು ಹರಿತವಾಗಿ ಬೆಳೆಸಿಕೊಂಡಿದ್ದಾನೆ. ಆದರೆ ಯಾವತ್ತು ಇದರಿಂದ ಆಳವನ್ನು ಅಳೆಯುವುದು ಸಾಧ್ಯವಿಲ್ಲ ಎಂದು ತಿಳಿದುಕೊಳ್ಳುತ್ತಾನೋ ಆಗ ಮನಸ್ಸು ಬೇರೆ ಸಾಧ್ಯತೆಗಳನ್ನೂ ಹುಡುಕುತ್ತದೆ. ಆಲೋಚನೆಗಳಿಂದಾದ ಮೇಲ್ಮಟ್ಟದ ಬದುಕು ಕೆಲಕಾಲದ ನಂತರ ಬೋರಾಗಿ, ಸವಕಳಿ ಎನಿಸಿದಾಗ, ಅರ್ಥ ಕಳೆದುಕೊಂಡಾಗ ಅಂಥ ಸ್ಥಿತಿಯಲ್ಲಿ ಹುಟ್ಟಿಕೊಳ್ಳುತ್ತದೆ. ನಿರಂತರ ಸುಖದ ಹುಡುಕಾಟ, ಭಯ, ತಿಕ್ಕಾಟ ಮತ್ತು ಹಿಂಸೆ- ಆಲೋಚನೆಗಳು ಹುಟ್ಟು ಹಾಕುವ ಇಂಥ ತುಣುಕುಗಳು, ಇವುಗಳ ಚಟುವಟಿಕೆಗಳನ್ನು ಇಡಿ ಇಡಿಯಾಗಿ ನೋಡಿದಾಗ ಆಲೋಚನಾ ಜಾಲಕ್ಕೊಂದು ಕೊನೆ ಉಂಟಾಗುತ್ತದೆ. ಆಲೋಚನೆಯ ಒಂದು ತುಣುಕಾದ ವೀಕ್ಷಕ ನಿಷ್ಕಿಯಗೊಂಡಾಗಲೆ ಪೂರ್ಣತ್ವ ಏನು ಎಂಬುದು ಗಮನಕ್ಕೆ ಬರುತ್ತದೆ. ಆಗ ಕರ್ಮ ಎಂಬುದು ಸಂಬಂಧವಾಗಿ ಮಾರ್ಪಟ್ಟು ಯಾವುದೇ ತಿಕ್ಕಾಟ ಅಥವಾ ವಿಷಾದಕ್ಕೆ ಎಡೆ ಮಾಡದ ರೀತಿಯಲ್ಲಿ ನಡೆಯುತ್ತದೆ.
ಮೌನ ಮತ್ತು ಪ್ರೇಮದಲ್ಲಿ ಮಾತ್ರಆಳವಿದೆ. ಮೌನ ಎಂಬುದಾಗಲಿ ಅಥವಾ ಪ್ರೇಮವೂ ಆಲೋಚನೆಯ ಚಲನೆಯಲ್ಲ.  ಆಗ ಆಳ ಅಥವಾ ಮೇಲ್ಮಟ್ಟ ಎಂಬ ಕೇವಲ ಶಬ್ದಗಳು ಅರ್ಥವನ್ನೇ ಕಳೆದುಕೊಳ್ಳುತ್ತವೆ. ಪ್ರೇಮ ಅಥವಾ ಮೌನಕ್ಕೆ ಅಳತೆಗೋಲು ಎಂಬುದೇ ಇರುವುದಿಲ್ಲ. ಕಾಲವನ್ನು ಮಾತ್ರ ಅಳೆಯಬಹುದು; ಆಲೋಚನೆಯೇ ಕಾಲವಾಗಿರುತ್ತದೆ. ಅಳತೆ ಎಂಬುದು ಅವಶ್ಯಕ ನಿಜ. ಆದರೆ ಆಲೋಚನೆ ಕ್ರಿಯಾಯಾಗಿ ಮಾರ್ಪಟ್ಟಾಗ ಅವ್ಯವಸ್ಥೆ, ಅಸ್ತವ್ಯಸ್ಥತೆ ಉಂಟಾಗುತ್ತದೆ. ವ್ಯವಸ್ಥೆಯನ್ನು ಅಳೆಯುವುದು ಸಾಧ್ಯವಿಲ್ಲ. ಕೇವಲ ಅವ್ಯವಸ್ಥೆಯನ್ನು ಮಾತ್ರ ಅಳೆಯಬಹುದು.
ಸಮುದ್ರ ಹಾಗೂ ಮನೆ ಎರಡೂ ಮೌನವಾಗಿದ್ದವು. ಅದರ ಹಿಂದೆ ಕಾಡು ಹೂವುಗಳಿಂದ ತುಂಬಿದ್ದ ವಸಂತಕಾಲದ ಗುಡ್ಡಗಳೂ ಮೌನವಾಗಿದ್ದವು.


* ಇದೀಗ ಕೃಷ್ಣಮೂರ್ತಿ ರೋಮ್‌ನಲ್ಲಿದ್ದಾರೆ. ಅಕ್ಟೋಬರ್ 29ರ ತನಕ ಅಲ್ಲಿಯೇ ಇದ್ದರು.
ಅಕ್ಟೋಬರ್ 17, 1973
ಆ ವರ್ಷ ಬೇಸಿಗೆ ಉರಿ ಬಿಸಿಲು, ಸೆಕೆಯಿಂದ ಕೂಡಿತ್ತು. ಅಪರೂಪಕ್ಕೊಮ್ಮೆ ಮಳೆ ಬರುತ್ತಿತ್ತು. ಅಂಗಣಕ್ಕೆ ಹಾಸಿದ ಲಾನ್‌ಗಳೆಲ್ಲ ಕಂದು ಬಣ್ಣಕ್ಕೆ ತಿರುಗಿದ್ದವು. ಆದರೆ ರೆಂಬೆ ಕೊಂಬೆಗಳಿಂದ ತುಂಬಿದ್ದ ಎತ್ತರದ ಮರಗಳು ಮಾತ್ರ ಖುಷಿಯಾಗಿದ್ದು ಹೂವುಗಳಿಂದ ಅರಳಿದ್ದವು. ಇತ್ತೀಚಿನ ವರ್ಷಗಳಲ್ಲಿಯೇ ಇಂಥ ಒಂದು ಬೇಸಿಗೆ ಬಂದಿರಲಿಲ್ಲ; ರೈತರಿಗೆಲ್ಲ ಎಲ್ಲಿಲ್ಲದ ಖುಷಿ. ನಗರ ಪ್ರದೇಶಗಳಲ್ಲಿ ಮಾತ್ರ ಬೇಸಿಗೆ ಭಯದ ಬಾತಾವರಣವನ್ನುಂಟು ಮಾಡಿತ್ತು. ಮಲೀನಗೊಂಡ ಗಾಳಿ, ಉಷ್ಣ ಗಾಳಿ ಒಂದೆಡೆಯಾದರೆ ಇನ್ನೊಂದೆಡೆ ಗದ್ದಲದ ಗಲ್ಲಿಗಳು. ಆ ಭಾಗದಲ್ಲಿ ಗಮನ ಸೆಳೆಯುವ ಚೆಸ್ಟ್  ನೆಟ್ಸ್‌ಗಳು ಕಂದು ಬಣ್ಣಕ್ಕೆ ತಿರುಗಿದ್ದವು. ಪಾರ್ಕುಗಳಲ್ಲಿ ಎಲ್ಲಿ ನೋಡಿದರೂ ಜನ ; ಕೂಗುತ್ತ ಕೇಕೆ ಹಾಕುತ್ತ ಮಕ್ಕಳು ಆಡುವ ದೃಶ್ಯ.
ಇದೊಂದು ಸುಖ ಸಮೃದ್ಧದೇಶ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಶಾಂತಿ ನೆಲೆಸಿರುತ್ತದೆ. ಎಲ್ಲೆಡೆ ಸಣ್ಣದಾದ ಇಕ್ಕಟ್ಟಾದ ಹೊಳೆಗಳು, ಅದರಲ್ಲಿ ಬಾತುಗಳು- ನೀರು ಕೋಳಿಗಳು ಸ್ವಸ್ತಿವಾಚನ ಮಾಡುತ್ತಿರುತ್ತವೆ. ರಮ್ಯತೆ ಮತ್ತು ಭಾವುಕತೆಗಳು ಇಲ್ಲಿನ ನಗರ ಪ್ರದೇಶದಲ್ಲಿ ಸುಭದ್ರವಾಗಿ ನೆಲೆಗೊಂಡಂತೆ ಕಾಣುತ್ತಿದೆ. ದೇಶದ ಮಧ್ಯ ಭಾಗದಲಿ ತೋ[, ಮರಗಳು ತೊರೆಗಳು ಒಂದು ಬಗೆಯ  ಭವ್ಯತೆಯನ್ನು ತಂದಿವೆ. ಇಲ್ಲಿ ಕಾಡಿನ ಮಧ್ಯೆ ಹಾಯ್ದು ಹೋಗುವ ರಸ್ತೆಯೊಂದಿದೆ. ಅಲ್ಲಿ ಗೋಲಗೋಲಾಕಾರವಾಗಿ ಹಾಸಿ ಬಿದ್ದ ನೆರಳು. ಮರದ ಪ್ರತಿಯೊಂದು ಎಲೆಗೂ ಅದರದ್ದೇ ಆದ ಸೌಂದರ್ಯ. ಒಂದೆಡೆ ಹಣ್ಣಾಗಿ ಕೆಂಪುಬಣ್ಣಕ್ಕೆ ತಿರುಗುವ ಎಲೆಗಳು, ಅಷ್ಟೇ ಅಲ್ಲ ಸಾಮಾನ್ಯ  ಹುಲ್ಲು ಕಡ್ಡಿಗೂ ವಿಶಿಷ್ಟ ಸೌಂದರ್ಯ ಇದೆ. ಸೌಂದರ್ಯ ಎಂಬುದೊಂದು ಶಬ್ದವಲ್ಲ. ಭಾವನಾತ್ಮಕ ಸ್ಪಂದನವೂ ಅಲ್ಲ. ಬೇಕಾದಂತೆ ತಿರುಚುವಷ್ಟು ಮೃದುವೂ ಅಲ್ಲ. ಆಲೋಚನೆಯ ಹಂದರವೂ ಅಲ್ಲ. ಎಲ್ಲಿ ಸೌಂದರ್ಯ ಎಂಬುದು ಇರುತ್ತದೊ ಅಲ್ಲಿ ಪ್ರತಿಯೊಂದು ಚಲನೆ, ಯಾವುದೇ ಬಗೆಯ ಸಂಬಂಧದೊಂದಿಗಿನ ಕರ್ಮವೂ ಸಂ]ರ್ಣವಾಗಿ ಆರೋಗ್ಯ ಹಾಗೂ ಪವಿತ್ರವಾಗಿರುತ್ತವೆ. ಯಾವಾಗ ಪ್ರೀತಿ-ಸೌಂದರ್ಯ ಇರುವುದಿಲ್ಲವೊ ಆಗ ಜಗತ್ತು ಹುಚ್ಚರ ಸಂತೆಯಾಗುತ್ತದೆ.
ಟೀವಿ ಪರದೆಯ ಮೇಲೆ ಧರ್ಮಗುರುವೊಬ್ಬ ತನ್ನ ಕರಾರುವಕ್ಕಾದ ನಂಬಿಕೆಯೊಂದಿಗೆ ದೇವರ ಬಗ್ಗೆ ಹೇಳುತ್ತಿದ್ದ. ಆತನಿಗೆ ರಕ್ಷಕನಾರು ಎಂಬುದು ತಿಳಿದಿದೆಯಂತೆ. ಅವನೊಬ್ಬ ರಕ್ಷಕ ಎಲ್ಲೆಲ್ಲೂ ಇದ್ದಾನೆ; ಆ ರಕ್ಷಕನಿಲ್ಲದಿದ್ದರೆ ಈ ಜಗತ್ತಿನಲ್ಲಿ ಬದುಕುವ ಆಶಾವಾದವೇ ಇರುತ್ತಿರಲಿಲ್ಲ. ಹಾಗೆ ಹೇಳುವಾಗ ಕೈ ಎತ್ತಿ  ಆತ ಮಾಡಿದ ಅಭಿನಯ ಎಷ್ಟೊಂದು ಮನಮುಟ್ಟುವಂತೆ ಇತ್ತೆಂದರೆ ಆತನ ನಂಬಿಕೆಯಲ್ಲಿ ಯಾರಿಗೂ ಸಂದೇಹವೇ ಬರುತ್ತಿರಲಿಲ್ಲ. ಅಷ್ಟೇ ಅಲ್ಲ. ಆತನ ನಂಬಿಕೆ ನಿಮ್ಮ ನಂಬಿಕೆಯಾಗಿ ನೀವೂ ಅದೇ ಭಾವವನ್ನು ಆಹ್ವಾನಿಸಿಕೊಳ್ಳುವಂತೆ ಇತ್ತು. ಆತನ ಕೈಗಳ ಕರಾರುವಾಕ್ಕಾದ ಚಲನೆ, ಜೀವಂತಿಕೆಯನ್ನು ಹೊಮ್ಮಿಸುವ ಸಂಭಾಷಣೆ ಬಾಯಿಯನ್ನು ಆಡಿಸುವ ರೀತಿಯೆಲ್ಲ ಆ ಬಾಲವೃದ್ಧಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿತ್ತು. ತಮ್ಮ ಮನಸ್ಸಿನಲ್ಲಿದ್ದ ದೇವರ ಚಿತ್ರಗಳಿಗೆ ಪ್ರೇಕ್ಷಕರೂ ಆರಾಧಿಸುವಂತೆ ಪ್ರಭಾವಶಾಲಿ ಉದ್ಬೋಧನೆ ಅದಾಗಿತ್ತು. ಆಗಷ್ಟೇ ಯುದ್ಧವೊಂದು ಶುರುವಾಗಿತ್ತು. ಯುದ್ಧದ ಬಗ್ಗೆ ಧರ್ಮಗುರುವಾಗಲಿ ಅಥವಾ ಅವರನ್ನು ಹಿಂಬಾಲಿಸುತ್ತಿದ್ದ ಬಹುದೊಡ್ಡ ಜನಸಮೂಹವಾಗಲಿ ಕಾಳಜಿ ವಹಿಸಿದಂತೆ ಕಾಣಲಿಲ್ಲ. ಯುದ್ಧ ನಿಲ್ಲಲಿ ಎಂದು ಆಶಿಸುವುದಕ್ಕೆ ಅದೆಲ್ಲ ಅವರ ಸಂಸ್ಕೃತಿಯ ಭಾಗವೇ ಆಗಿದೆಯಲ್ಲವೇ?
ಅದೇ ಟೀವಿ ಪರದೆಯಲ್ಲಿ  ಕೆಲ ಹೊತ್ತಿನ ನಂತರ ಓರ್ವ ವಿಜ್ಞಾನಿಯನ್ನು ತೋರಿಸಲಾುತು. ಆ ವಿಜ್ಞಾನಿಗಳು ಅಸಾಮಾನ್ಯವಾದ ನೌಕೆಯೊಂದನ್ನು ಸಿದ್ಧಪಡಿಸಿದ್ದಾರೆ ಎಂಬುದನ್ನು ತೋರಿಸಲಾುತು. ಮುಂದುವರಿದು ಇನ್ನೊಂದು; ಜೀವಕೋಶಗಳು ಹೇಗೆ ರಚನೆಗೊಂಡಿವೆ ಎಂಬ ಸಂಶೋಧನೆ. ಪ್ರಾಣಿಗಳು ಕೀಟದ ಮೇಲೆ ಮಾಡಿದ ಪ್ರಯೋಗದೊಂದಿಗೆ ಜೀವಕೋಶದ ಬಗ್ಗೆ ಮಾಡಿದ ಸಂಶೋಧನೆಯನ್ನು ವಿವರಿಸುತ್ತಿದ್ದರು. ಪ್ರಾಣಿಗಳ ವರ್ತನೆಯನ್ನು ಸೂಕ್ಷ್ಮ ಸ್ಥರದಲ್ಲಿ ವಿವರಿಸಲಾಗುತ್ತಿತ್ತು. ಪ್ರಾಣಿಗಳ ಅಧ್ಯಯನದ ಮೂಲಕ ಪ್ರಾಧ್ಯಾಪಕರಿಗೆ ಮಾನವನ ವರ್ತನೆಗಳ ಬಗ್ಗೆ ಕೂಡ ಹೊಳಹು ಸಿಗುತ್ತಿತ್ತು. [ರಾತನ ಸಂಸ್ಕೃತಿಯ ಪಳೆಯುಳಿಕೆಯೊಂದರ ಬಗ್ಗೆ ವರ್ಣಿಸಲಾುತು. ಉತ್ಕನನ, ಹೂಕುಂಡಗಳು, ಕಲ್ಲಿನ ಸುಂದರ ನೆಲಹಾಸು, ಬೀಳುವಂತಿರುವ ಗೋಡೆಗಳು, ಭೂತಕಾಲದ ಅದ್ಭುತ ಲೋಕ, ದೇವಾಲಯಗಳು ಮತ್ತದರ ಭವ್ಯತೆ, ಭೂತಕಾಲದ ಶ್ರೀಮಂತಿಕೆಯನ್ನು ವಿವರಿಸುವ ಅದೆಷ್ಟೋ [ಸ್ತಕಗಳು ಬಂದಿವೆ. ಆ ಕಾಲದ ಪೇಂಟಿಂಗ್‌ಗಳು, ಕ್ರೌರ್ಯ, ಆ ಕಾಲದ ರಾಜ ಮಹಾರಾಜರ ಉದಾರತೆ, ಮತ್ತವರ ಗುಲಾಮರ ಬಗ್ಗೆಲ್ಲ ಬರೆಯಲಾಗಿದೆ ಎಂದು ಬಿತ್ತರಿಸಲಾಯಿತು.
ಸ್ವಲ್ಪ ಸಮಯದ ನಂತರ ಮರುಭೂಮಿಯಲ್ಲಿ ಆ ದಿನ ನಡೆದ ನಿಜವಾದ ಯುದ್ಧದ ತುಣುಕನ್ನು ತೋರಿಸಲಾುತು. ಹಸಿರು ಬೆಟ್ಟಗಳನ್ನು ಏರುತ್ತಿರುವ ಬೃಹದಾಕಾರದ ಟ್ಯಾಂಕರ್‌ಗಳು, ಅತ್ಯಂತ ಕೆಳಕ್ಕೆ ಹಾರುತ್ತಿರುವ ಜೆಟ್ ವಿಮಾನ, ಅವುಗಳ ಗದ್ದಲ, ವ್ಯವಸ್ಥಿತ ಕಗ್ಗೊಲೆಗಳು. ರಾಜಕಾರಣಿಗಳು ಶಾಂತಿಯ ಬಗ್ಗೆ ಮಾತಾಡುತ್ತಾರಾದರೂ ಎಲ್ಲೆಡೆ ಯುದ್ಧಕ್ಕೆ ಪ್ರೋತ್ಸಾಹವನ್ನೇ ನೀಡುತ್ತಿದ್ದಾರೆ. ಒಂದೆಡೆ ಗೋಳೊ ಎಂದು ಅಳುತ್ತಿರುವ ಮಹಿಳೆಯರು, ತೀವ್ರ ಗಾಯಗೊಂಡವರು, ಇನ್ನೊಂದೆಡೆ ಧ್ವಜವನ್ನು ತೋರಿಸುತ್ತಿರುವ ಮಕ್ಕಳು. ಅದರೊಂದಿಗೆ ಧರ್ಮ ಬೋಧನೆ- ಆಶೀರ್ವಾದ ಮಾಡುತ್ತಿರುವ ಗುರುಗಳು.
ಮನುಕುಲದ ಕಣ್ಣೀರುಗಳು ಮಾನವನ ರಕ್ತಪಿಪಾಸೆಯನ್ನು ಒಂದಿಷ್ಟೂ ಕಡಿಮೆ ಮಾಡಲಿಲ್ಲ. ಯಾವುದೇ ಧರ್ಮವೂ ಯುದ್ಧವನ್ನು ತಡೆಯಲಿಲ್ಲ. ಇನ್ನೊಂದು ದೃಷ್ಟಿಯಲ್ಲಿ ಧರ್ಮಗಳೇ ಯುದ್ಧವನ್ನು ಪ್ರೋತ್ಸಾಹಿಸುತ್ತ ಬಂದಿವೆ. ಶಸ್ತ್ರ ಸಂಗ್ರಹಣೆಗೆ ಬೆಂಬಲಿಸಿವೆ. ಜನರನ್ನು ಬಿಭಜಿಸಿವೆ. ಸರ್ಕಾರಗಳು ಪ್ರತ್ಯೇಕವಾಗಿ ನಡುಗಡ್ಡೆಗಳಾಗುತ್ತಿವೆ. ವಿಜ್ಞಾನಿಗಳನ್ನು ಸರ್ಕಾರಗಳು ಪ್ರೋತ್ಸಾಹಿಸುತ್ತ ಬಂದಿವೆ. ಧರ್ಮಗುರುಗಳ ಮಾತನ್ನು ಯಾರೊಬ್ಬರೂ ಕೇಳುವ ಪರಿಸ್ಥಿತಿ ಇಲ್ಲ.
ನಡೆದ ತಕ್ಷಣ ಪ್ರತಿಯೊಬ್ಬರೂ ಧು:ಖಿತರಾಗುತ್ತಾರೆ.ಆದರೆ ತಮ್ಮ ಮಕ್ಕಳನ್ನುಹಿಂಸೆಗೆ ಪ್ರಚೋದಿಸುವ ರೀತಿಯಲ್ಲಿ ಬೆಳೆಸುತ್ತಾರೆ. ಇದೆಲ್ಲ ಬದುಕಿಗೆ ಅನಿವಾರ್ಯ ಎಂದು ನೀವು ಒಪ್ಪಿಕೊಂಡಿದ್ದೀರಿ. ನೀವು ನಿಮ್ಮ ಭದ್ರತೆಯ ಬಗೆಗಷ್ಟೇ ಬದ್ಧರಾಗಿದ್ದೀರಿ. ನಿಮಗೆ ನಿಮ್ಮ ದೇವರು, ವಿಷಾದಗಳೇ ದೊಡ್ಡವು. ನೀವು ನಿಮ್ಮ ಮಕ್ಕಳನ್ನು ಎಷ್ಟೊಂದು ಪ್ರೀತಿಸಿ ಬೆಳೆಸುತ್ತೀರೆಂದು ಅವರನ್ನು ಕೊಲ್ಲುವುದಕ್ಕೆ ಕೂಡ ನೀವು ಉತ್ಸುಕರಾಗಿರುತ್ತೀರಿ. ಅಂದಿನ ಟೀವಿಯಲ್ಲಿ ಸುಂದರ ಸೀಲ್ಸ್  ಮರಿಗಳನ್ನು ಕೊಲ್ಲುವ ದೃಶ್ಯವನ್ನೇ ತೋರಿಸುತ್ತಿದ್ದರು.
ಸಂಸ್ಕೃತಿಯ ಕೆಲಸ ಎಂದರೆ ಮನುಷ್ಯನನ್ನು ಸಂ]ರ್ಣವಾಗಿ ಬದಲಿಸುವುದು.
ಹೊಳೆ ನೀರಿನ ಮಧ್ಯೆ ಮೆಂಡಲಿನ್ ಹಂಸಗಳು ಪರಸ್ಪರ ಆಡುತ್ತ ಖುುಂದ ಇದ್ದವು. ಮರದ ನೆರಳು ನೀರಿನ ಮೇಲೆ ಹಾಸಿಕೊಂಡಿತ್ತು.



ಅಕ್ಟೋಬರ್ 18 1973
ಸಂಸ್ಕೃತದಲ್ಲಿದೀರ್ಘವಾದ ಶಾಂತಿಮಂತ್ರವೊಂದಿದೆ. ಅದೆಷ್ಟೋ ಶತಮಾನಗಳ ಹಿಂದೆ, ಶಾಂತಿಯೇ ಪರಮ ಧ್ಯೇಯವೆಂದು ಬದುಕಿನ ಮಹಾನುಭಾವನೊಬ್ಬ ಅದನ್ನು ಬರೆದಿದ್ದಾನೆ. ಆ ಉನ್ನತ ಮಟ್ಟದ ಶಾಂತಿಯಲ್ಲಿ ಆ ವ್ಯಕ್ತಿಯ ದೈನಂದಿನ ಜೀವನದ ಬೇರುಗಳು ಇಳಿದಿದ್ದಿರಬೇಕು. ರಾಷ್ಟ್ರೀಯತೆಯೆಂಬ ಹರಿದಾಡುವ ವಿಷ, ಕಾಂಚಾಣವೆಂಬ ಪರಮಾಧಿಕಾರ, ಔಧ್ಯಮಿಕತೆ ಒದಗಿಸಿದ ಜಾಗತಿಕ ವೈಭೋಗದಿಂದ ಮನಸ್ಸುಗಳು ಭ್ರಷ್ಟವಾಗುವುದಕ್ಕೆ ಮೊದಲೆ ಇದನ್ನು ರಚಿಸಲಾಗಿದೆ. ಸುತ್ತಲೂ ಶಾಂತಿ ಆವರಿಸಲೆಂಬ ಪ್ರಾರ್ಥನೆ ಅದು; ದೇವ ಸಮೂಹದಲ್ಲಿ ಶಾಂತಿ ಉಂಟಾಗಲಿ, ಸ್ವರ್ಗದಲ್ಲಿ, ನಕ್ಷತ್ರ [ಂಜದಲ್ಲಿ, ಭೂಮಿಯ ಮೇಲೆ, ಮನುಷ್ಯರಲ್ಲಿ, ನಾಲ್ಕು ಕಾಲಿನ ಪ್ರಾಣಿಗಳಲ್ಲಿ, ನಾವು ಪರಸ್ಪರರನ್ನು ನೋಯಿಸದಂತಾಗಲಿ, ಪರಸ್ಪರರಲ್ಲಿ ಉದಾರ ಭಾವವಿರಲಿ, ನಮ್ಮ ಬದುಕನ್ನು, ಕೆಲಸವನ್ನು ನಿರ್ದೇಶಿಸಬಲ್ಲ ಜಾಣ್ಮೆ ನಮಗೆ ಬರಲಿ, ನಮ್ಮ ಪ್ರಾರ್ಥನೆಯಲ್ಲಿ, ನಾಲಗೆಯಲ್ಲಿ ಮತ್ತು ನಮ್ಮ ಹೃದಯದಲ್ಲಿ ಶಾಂತಿ ನೆಲಸಲಿ ಎಂಬುದು ಪ್ರಾರ್ಥನೆಯ ಆಶಯ.
ಶಾಂತಿಯ ಬಗ್ಗೆ  ಹೇಳುವಾಗ ಅಲ್ಲೆಲ್ಲಿಯೂ ವ್ಯಕ್ತಿಗತ ಸ್ವಾರ್ಥ ಬರುವುದಿಲ್ಲ. ಎಲ್ಲರಿಗೂ ಶಾಂತಿ ಲಭಿಸಲಿ ಎಂದು ಆಶಿಸುತ್ತದೆ. ವೈಯಕ್ತಿಕತೆ ಎಂಬುದು ಬಂದದ್ದು ಬಹಳ ಕಾಲದ ನಂತರ. ಆದರೆ ಇದೀಗ ಎಲ್ಲೆಡೆ ನಾನು ನಾವು ಮಾತ್ರ ಇರುತ್ತೇವೆ- ನಮ್ಮ ಶಾಂತಿ, ನನ್ನ ಜಾಣ್ಮೆ, ನನ್ನ ಜ್ಞಾನ, ನನಗೆ ಜ್ಞಾನೋದಯ ಹೀಗೆ.. ಸಂಸ್ಕೃತ ಪಠಣದಿಂದಾಗಿ ಹೊಸ ಬಗೆಯ ಪರಿಣಾಮ ಬೀರುವಂತೆ ತೋರುತ್ತದೆ. ಅಲ್ಲೊಂದು ದೇವಸ್ಥಾನದಲ್ಲಿ ಸುಮಾರು 50ಕ್ಕೂ ಹೆಚ್ಚು ವಟುಗಳು ಶ್ಲೋಕ ಪಠಿಸುತ್ತಿದ್ದರು. ಪ್ರತಿ ಗೋಡೆಯಲ್ಲೂ ಕಂಪನ ಕಂಡು ಬರುತ್ತಿತ್ತು.
ಅಲ್ಲೊಂದು ಸುಂದರ ಮಾರ್ಗವಿದೆ. ಹಚ್ಚ ಹಸಿರಾಗಿ  ಹೊಳೆಯುವ ಹೊಲವೊಂದರಿಂದ ಆರಂಭವಾಗಿ ಸಾಕಷ್ಟು ಬೆಳಕು ಬರುವ ಕಾಡಿನಲ್ಲಿದಾರಿ ಹಾಯ್ದು ಮುಂದಕ್ಕೆ ಹೋಗುತ್ತದೆ. ಒಂದೆಡೆ ಅಚ್ಚಬಿಸಿಲು  ಮತ್ತುಅದಕ್ಕೆ ಪ್ರತಿಯಾಗಿ ನೆರಳಿನಿಂದ ಕೂಡಿರುವ ಈ ಪ್ರದೇಶಕ್ಕೆ ಎಲ್ಲೊ ಅಪರೂಪಕ್ಕೊಮ್ಮೆ ಯಾರಾದರೂ ಬರುತ್ತಿರುತ್ತಾರೆ. ಆ ಪ್ರದೇಶ ಜನಜಂಗುಳಿಯಿಂದ ಪ್ರತ್ಯೇಕವಾಗಿ ತಂಪಾಗಿ ಶಾಂತವಾಗಿದೆ. ಅಲ್ಲಿ ಸಾಕಷ್ಟು ಅಳಿಲುಗಳು, ಅಪರೂಪಕ್ಕೆ ಕಾಣುವ ಚಿಗರೆಗಳು ನಾಚುತ್ತ ನೋಡಿ ಕಣ್ಮರೆಯಾಗುತ್ತಿರುತ್ತವೆ. ಅಳಿಲು ಮರದ ಟೊಂಗೆಯೊಂದರಲ್ಲಿ  ಕುಳಿತು 'ನಿನ್ನನ್ನು' ನೋಡುತ್ತಿರುತ್ತಿತ್ತು. ಕೆಲವೊಮ್ಮೆ ಹಾಗೆಯೇ ಗದರುತ್ತಲೂ ಇತ್ತು. ಈ ಕಾಡಿನಲ್ಲಿಬೇಸಿಗೆಯಲ್ಲಿ ಒಂದು ರೀತಿಯ ಪರಿಮಳ. ಭೂಮಿಯಲ್ಲಿತೇವಾಂಶ ಇರುತ್ತದೆ. ಅಲ್ಲಿ ಬಹಳಷ್ಟು ಹಳೆಯ ಹಾಗೂ ಪಾಚಿಗಟ್ಟಿದ ಮರಗಳಿವೆ. ಅಲ್ಲಿಗೆ ಹೋಗುತ್ತಲೆ ಅವು ನಿನ್ನನ್ನು ಸ್ವಾಗತಿಸುತ್ತಿದ್ದವು. ನಿನಗೆ ಅವುಗಳ ಬೆಚ್ಚನೆಯ ಸ್ವಾಗತದ ಅನುಭವ ಕೂಡ ಆಗುತ್ತಿತ್ತು. ಪ್ರತಿ ಬಾರಿ 'ನೀನು' ಅಲ್ಲಿ ಕುಳಿತು ಟೊಂಗೆಗಳು- ಎಲೆಗಳ ಮೂಲಕ ಕಾಣುವ ನೀಲಾಕಾಶಕ್ಕೆ ಇಣುಕಿದಾಗ ಅದೊಂದು ರೀತಿಯ ಶಾಂತಿ ಹಾಗೂ ಸ್ವಾಗತ ನಿಮ್ಮನ್ನು ಆವರಿಸಿಕೊಳ್ಳುತ್ತಿತ್ತು. ಕಾಡಿಗೆ 'ನೀನು' ಒಮ್ಮೆ ಇತರರೊಂದಿಗೆ ಹೋಗಿದ್ದಾಗ ಮಾತ್ರ ಒಂದು ರೀತಿಯ ಏಕಾಂಗಿತನ, ಮೌನ ಆವರಿಸಿತ್ತು. ಜೊತೆಗಿದ್ದ ಜನರು ಏನೇನೊ ಹರಟುತ್ತ ಮರಗಳ ವೈಭವ, ಗೌರವಗಳನ್ನು ಗಮನಿಸಿಯೇ ಇರಲಿಲ್ಲ. ಅಲ್ಲಿನ ಮರಗಳೊಂದಿಗೆ ಅವರಿಗೆ ಸ್ನೇಹ ಭಾವವೇ  ಉಂಟಾಗಿರಲಿಲ್ಲ. ಅದಕ್ಕಾಗಿ ಅವುಗಳೊಂದಿಗೆ ಪರಸ್ಪರ ಗೆಳೆತನವೇ ಉಂಟಾಗಿರಲಿಲ್ಲ ಎನಿಸುತ್ತದೆ. ಆದರೆ ನಿನ್ನ ಮತ್ತು ಮರಗಳ ಜೊತೆಗಿನ ಸಂಬಂಧ ತಕ್ಷಣ ಹಾಗೂ ಸಂ]ರ್ಣವಾಗಿರುತ್ತಿತ್ತು. ನಿನಗೆ ಅಲ್ಲಿದ್ದ ಮರಗಳೆಲ್ಲದರ ಜೊತೆ ಗೆಳೆತನ ಉಂಟಾಗಿತ್ತು. ಆದ್ದರಿಂದ ಆ ಭಾಗದಲ್ಲಿದ್ದ ಮರಗಳು, ಪೊದೆಗಳು, ಹೂವುಗಳೆಲ್ಲದರ ಗೆಳೆತನ ಲಭಿಸಿತ್ತು. ನೀನು ಅಲ್ಲಿ ಅವುಗಳನ್ನು ಹಾಳುಗೆಡಹುವುದಕ್ಕಾಗಿ ಹೋಗಿದ್ದಲ್ಲವಷ್ಟೆ. ಆದ್ದರಿಂದ ನಿಮ್ಮ ನಡುವೆ ಒಂದು ಶಾಂತಿಯುತ ಸಹಬಾಳ್ವೆ ಇತ್ತು.
ತಿಕ್ಕಾಟದ ಕೊನೆ ಹಾಗೂ ಆರಂಭದ ನಡುವೆ ಇರುವ ಮಧ್ಯಂತರವು ಶಾಂತಿಯಲ್ಲ. ಹಾಗೆ ಎರಡು ನೋವು ಅಥವಾ ವಿಷಾದದ ನಡುವಿನ ಬಿಡುವೂ ಶಾಂತಿ ಎನಿಸಿಕೊಳುವುದಿಲ್ಲ.
ಯಾವುದೇ ಸರ್ಕಾರದಿಂದಲೂ ಶಾಂತಿ ಸ್ಥಾಪಿಸುವುದು ಸಾಧ್ಯವಿಲ್ಲ. ಸರ್ಕಾರ ತರುವ ಶಾಂತಿ ಎಂದರೆ ಭ್ರಷ್ಟತೆ ಹಾಗೂ  ಕೊಳೆತ ಕೆಸರಿನ ಸಮ್ಮಿಳಿತವಾಗಿರುತ್ತದೆ.. ವ್ಯವಸ್ಥಿತ ರಾಜ್ಯಾಡಳಿತ ಕೂಡ ಶಾಂತಿಯನ್ನು ತರುವುದು ಸಾಧ್ಯವಿಲ್ಲ. ಯಾಕೆಂದರೆ ಅದಕ್ಕೆ ಜಗತ್ತಿನ ಎಲ್ಲೆಡೆಯ ಮಾನವರ ಕಾಳಜಿ ಇರುವುದಿಲ್ಲ. ನಿರಂಕುಶಾಧಿಕಾರ ಸ್ವಾತಂತ್ರ್ಯವನ್ನೆನಿರಾಕರಿಸುವುದರಿಂದಾಗಿ ಎಂದೆಂದಿಗೂ ಶಾಂತಿ ಸ್ಥಾಪಿಸುವುದು ಸಾಧ್ಯವಿಲ್ಲ. ಶಾಂತಿ ಮತ್ತು  ಸ್ವತಂತ್ರ ಒಟ್ಟೊಟ್ಟಿಗೆ ಹೋಗುತ್ತವೆ. ಶಾಂತಿಗಾಗಿ ಇನ್ನೊಬ್ಬರನ್ನು ಸಾಯಿಸುವುದೆಂದರೆ ತತ್ವಜ್ಞಾನದೊಂದಿಗೆ ಬಂದ ಮಹಾಮೌಡ್ಯ. ಯಾರೂ ಶಾಂತಿಯನ್ನು ಖರೀದಿಸುವುದು ಸಾಧ್ಯವಿಲ್ಲ. ಬುದ್ಧಿಜೀವಿಗಳ ಸಂಶೋಧನೆಯೂ ಇದಲ್ಲ. ಯಾವುದೇ ಪ್ರಾರ್ಥನೆ ಅಥವಾ ಚೌಕಾಶಿಗಳಿಂದ ಖರೀದಿಸುವಂಥದ್ದೂ ಇದಲ್ಲ. ಯಾವುದೇ ಪವಿತ್ರ ಕಟ್ಟಡದಲ್ಲಾಗಲಿ, ಯಾವುದೇ [ಸ್ತಕದಲ್ಲಾಗಲಿ, ಯಾವುದೇ ವ್ಯಕ್ತಿಯಲ್ಲಾಗಲಿ ಇಲ್ಲ. ಯಾವುದೇ ಗುರು, ]ಜಾರಿ, ಸಂಕೇತ ಏನೊಂದೂ ನಿಮ್ಮನ್ನು ಶಾಂತಿಯೆಡೆಗೆ ಒಯ್ಯುವುದು ಸಾಧ್ಯವಿಲ್ಲ.
ಧ್ಯಾನದಲ್ಲಿ ಶಾಂತಿ ಇರುತ್ತದೆ. ಧ್ಯಾನವೇ ಶಾಂತಿಯ ಚಲನೆ. ಅಂತ್ಯದಲ್ಲಿ  ಸಿಗುವ ಗುರಿಯೂ ಇದಲ್ಲ. ಯಾವುದೇ ಶಬ್ದ ಅಥವಾ ಆಲೋಚನೆಯಿಂದ ಹಿಡಿದಿಡುವಂಥದ್ದೂ ಅಲ್ಲ. ಧ್ಯಾನದ ಕಾರ್ಯತತ್ಪರತೆಯೇ ಜಾಣ್ಮೆ. ನಿಮಗೆ ಆಗಲೇ ಕಲ್ಪಿಸಿದಂಥ ಅಥವಾ ನಿಮಗಾದ ಅನುಭವ ಯಾವುದೊಂದೂ ಧ್ಯಾನವಲ್ಲ. ನೀವು ಏನೆಲ್ಲ ಕಲಿತಿದ್ದೀರಿ, ಅನುಭವಿಸಿದ್ದೀರಿ ಅದೆಲ್ಲವುಗಳಿಗೆ ವಿದಾಯ ಹೇಳಿ ಹೊರಕ್ಕೆ ಬರುವುದೇ ಧ್ಯಾನ. ಅನುಭವದಿಂದ ಸ್ವತಂತ್ರರಾಗುವುದೇ ಧ್ಯಾನ. ಸಂಬಂಧಗಳಲ್ಲಿ ಯಾವಾಗ ಶಾಂತಿ ಎಂಬುದು ಇರುವುದಿಲ್ಲವೋ, ಆಗ ಧ್ಯಾನದಲ್ಲೂ ಶಾಂತಿ ಇರುವುದಿಲ್ಲ; ಆಗ ಧ್ಯಾನ ಎಂಬುದು ಭ್ರಮೆ ಹಾಗೂ ರೋಚಕ ಕನಸುಗಳಾಗಿ ಪರಿವರ್ತನೆಗೊಳ್ಳುತ್ತಿರುತ್ತವೆ. ಧ್ಯಾನವನ್ನು ತೋರಿಸುವುದಾಗಲಿ ಅಥವಾ ವಿವರಿಸುವುದಾಗಲಿ ಸಾಧ್ಯವಿಲ್ಲ. ನೀವು ಶಾಂತಿಯ ತೂಗುವ ತಕ್ಕಡಿಯಲ್ಲ. ನಿಮ್ಮ ದೈನಂದಿನ ಚಟುವಟಿಕೆಯಲ್ಲಿ, ನಿಮ್ಮ ದೈನಂದಿನ ಜೀವನದಲ್ಲಿ, ವ್ಯವಸ್ಥೆಯಲ್ಲಿ, ಗುಣದಲ್ಲಿ ಶಾಂತಿ ಇದ್ದರೆ ನಿಮಗದು ತಿಳಿಯುತ್ತದೆ ಅಷ್ಟೆ.
ಅಂದಿನ ಬೆಳಗ್ಗೆ ಭಾರವಾದ ಮೋಡ ಹಾಗೂ ಮಂಜು ಆವರಿಸಿತ್ತು; ಮಳೆ ಬರುವ ಎಲ್ಲ ಸಾಧ್ಯತೆಗಳೂ ಇದೆ. ಮತ್ತೆ ನೀಲಾಕಾಶ ನೋಡುವುದಕ್ಕೆ ಹಲವು ದಿನಗಳೇ ಕಳೆಯಬೇಕು. ಆದಾಗ್ಯೂ ನೀನು ಆ ಕಾಡಿಗೆ ಬಂದಾಗ ಎಂದಿನ ಶಾಂತಿ ಹಾಗೂ ಸ್ವಾಗತಕ್ಕೆ ಏನೊಂದೂ ಕೊರತೆ ಇರಲಿಲ್ಲ. ಅಲ್ಲಿ  ತೀವ್ರವಾದ ಸ್ತಬ್ಧತೆ ಹಾಗೂ ಅಳೆಯಲಾಗದ ಶಾಂತಿ ಇತ್ತು. ಅಳಿಲುಗಳು ಅಡಗಿದ್ದವು. ಕಾಡಿನ ಮಿಡತೆಗಳೆಲ್ಲ ಸುಮ್ಮನಿದ್ದವು. ಬೆಟ್ಟ ಹಾಗೂ ಕಣಿವೆಯ ಆಚೆ ಸಮುದ್ರ ಮಾತ್ರ ಭೋರ್ಗರೆಯುತ್ತಿತ್ತು.



ಅಕ್ಟೋಬರ್ 19, 1973
ಕಾಡು ನಿದ್ರೆಯಲ್ಲಿತ್ತು; ಅದರೊಳಗಿನ ಹಾದಿಯಲ್ಲಿ ಕಗ್ಗತ್ತಲು, ಅಲ್ಲಲ್ಲಿ ತಿರುವುಗಳು ಇದ್ದವು. ಆ ಪ್ರದೇಶದಲ್ಲಿ ಏನೊಂದೂ ಕುಲುಕಾಡುತ್ತಿರಲಿಲ್ಲ. ಸುಧೀರ್ಘ ಮುಸ್ಸಂಜೆ ಕಳೆದು, ರಾತ್ರಿಯ ಮೌನವು ಭೂಮಿಯ ಎಲ್ಲೆಡೆ ಆವರಿಸುತ್ತಿದೆ. ಹಗಲಿನಲ್ಲಿ ತೀವ್ರವಾಗಿ ಪ್ರಭಾವ ಬೀರುವ ಜುಳುಜುಳು ನುಗ್ಗುವ ತೊರೆಯೊಂದು ಬರಲಿರುವ ರಾತ್ರಿಯ ಪ್ರಶಾಂತತೆಗೆ ತನ್ನನ್ನು ಹೊಂದಿಸಿಕೊಳ್ಳುತ್ತಿದೆ. ಅಲ್ಲಿ ಇಲ್ಲಿ  ಎಲೆಗಳ ನಡುವಿನ ಸಣ್ಣ ತೆರವಿನಲ್ಲಿ ಇಣುಕಿ, ಸಮೀಪದಲ್ಲಿರುವಂತೆ ಪ್ರಭಾವವಾಗಿ ಕಾಣುವ ನಕ್ಷತ್ರಗಳು. ಹಗಲಿನಲ್ಲಿ ಬೆಳಕು  ಎಷ್ಟು ಅವಶ್ಯವೋ ರಾತ್ರಿಯ ಕತ್ತಲು ಕೂಡ ಅಷ್ಟೆ ಅವಶ್ಯವಾಗಿರುತ್ತದೆ. ಸ್ವಾಗತಿಸುವ ಮರಗಳೆಲ್ಲ ತಮ್ಮೊಳಗೆ ಹುದುಗಿಕೊಂಡು ದೂರ ನಿಂತಿದ್ದವು. ಅವೆಲ್ಲ ಇದ್ದಲ್ಲಿಯೇ ಇದ್ದರೂ ಏಕಾಂಗಿಯಾಗಿ ನಿಲುಕದಂತಿದ್ದವು. ಅವುಗಳೆಲ್ಲ ನಿದ್ರಿಸುತ್ತಿರುವುದರಿಂದ ಅಡಚಣೆಯನ್ನುಂಟು ಮಾಡಬಾದರದು. ಇಂಥ ನಿಶ್ಚಲವಾದ ರಾತ್ರಿಯಲ್ಲಿ ಅಲ್ಲೊಂದು ಬೆಳವಣಿಗೆ ಇರುತ್ತದೆ. ಹೂವುಗಳು ಅರಳುವ ಘಟನೆ ನಡೆಯುತ್ತಿರುತ್ತವೆ. ಗಡಿಬಿಡಿಯ ಹಗಲನ್ನು ಎದುರಿಸಲು ಅವುಗಳು ಇದೀಗ ಶಕ್ತಿ ಕ್ರೂಢೀಕರಿಸುತ್ತಿವೆ. ರಾತ್ರಿ ಹಗಲುಗಳು ಅವಶ್ಯಕ. ಪ್ರತಿಯೊಂದು ಜೀವಿಗೂ ಜೀವ  ಕಳೆಯನ್ನು ಕೊಡುವುದೇ ಇದು. ಆದರೆ ಮನುಷ್ಯ ಮಾತ್ರ ಇದನ್ನೆಲ್ಲ ಧಿಕ್ಕರಿಸಿ ಸಾಗುತ್ತಿದ್ದಾನೆ.
ಜೀವಿಗಳಿಗೆ ನಿದ್ದೆಯು ಬಹಳ ಮುಖ್ಯವಾದ ಸಂಗತಿ. ಬಹಳಷ್ಟು ಕನಸುಗಳಿಲ್ಲದ, ಹೊರಳಾಟ ನರಳಾಟ ಇಲ್ಲದ ನಿದ್ದೆ ಅದಾಗಿರಬೇಕು. ನಿದ್ದೆಯ ಸಂದರ್ಭದಲ್ಲಿ  ದೈಹಿಕ ಹಾಗೂ ಮಾನಸಿಕ (ಮೆದುಳು) ವಾಗಿ ಬಹಳಷ್ಟು ಸಂಗತಿಗಳು ನಡೆಯುತ್ತವೆ. ಇವೆರಡು ಒಂದೇ, ಕೂಡಿಕೊಂಡು ಮುನ್ನಡೆಯುವಂಥದ್ದು. ಈ ಸಂ]ರ್ಣ ವ್ಯವಸ್ಥೆಗೆ ನಿದ್ದೆ ಎಂಬುದು ಅತ್ಯಂತ ಅವಶ್ಯವಾದದ್ದು. ನಿದ್ದೆಯು ವ್ಯವಸ್ಥೆಯಲ್ಲಿ ಆಳವಾದ ಗೃಹಿಕೆ ಸಾಕಾರವಾಗುತ್ತದೆ. ಮೆದುಳು ಹೆಚ್ಚು ಹೆಚ್ಚು ಮೌನವಾದಾಗ ಗೃಹಿಕೆಯ ಆಳ, ಅಂತರ್‌ದೃಷ್ಟಿ ಹೆಚ್ಚುತ್ತದೆ. ಯಾವುದೇ ಘರ್ಷಣೆ ಇಲ್ಲದೆ, ಸಾಮರಸ್ಯದಲ್ಲಿ ಕೆಲಸ ಮಾಡುವುದಕ್ಕೆ ಮೆದುಳಿಗೆ ಒಂದು ಬಗೆಯ ಭದ್ರತೆ ಹಾಗೂ ವ್ಯವಸ್ಥೆಯ ತೀವ್ರ ಅವಶ್ಯಕತೆ ಇರುತ್ತದೆ; ರಾತ್ರಿ ಇದನ್ನು ಸಾಕಾರಗೊಳಿಸುತ್ತದೆ; ಸೊಂಪಾದ ನಿದ್ದೆಯಲ್ಲೂ  ಆಲೋಚನೆಗೆ ನಿಲುಕುವಂಥ ಕೆಲವು ಚಲನವಲನಗಳು, ಆಯಾಮಗಳು ಸಂಭವಿಸುತ್ತವೆ. ಕನಸುಗಳು ನಿದ್ರೆಯ ಅಡಚಣೆಗಳು; ಅವು ನಿದ್ದೆಯಿಂದಾಗುವ ಇಡಿಯಾದ ಗೃಹಿಕೆಯನ್ನೇ ತಿರುಚುತ್ತವೆ. ನಿದ್ದೆಯ ಹೊತ್ತಿನಲ್ಲಿ ಮನಸ್ಸು ತನ್ನನ್ನೇ ತಾನು ಚೈತನ್ಯಗೊಳಿಸಿಕೊಳ್ಳುತ್ತದೆ.
ಆದರೂ ಕನಸುಗಳು ಅವಶ್ಯಕವೆಂದು ನೀವು ಹೇಳಬಹುದು. ಒಂದು ವೇಳೆ ವ್ಯಕ್ತಿಯೊಬ್ಬನಿಗೆ ಕನಸೇ ಬೀಳಲಿಲ್ಲ ಎಂದಾದರೆ ಆತ ಹುಚ್ಚನಾಗಿ ಬಿಡಬಹುದು. ಅವುಗಳಿಂದ ಅನುಕೂಲತೆಗಳಿವೆ. ನಿರಾಳತೆ ಉಂಟು ಮಾಡುತ್ತವೆ. ಕೆಲವೊಂದು ಮೇಲ್ಮಟ್ಟದ ಕನಸುಗಳು, ಅವುಗಳಿಗೆಲ್ಲ ಹೆಚ್ಚಿನ ಅರ್ಥವಿರುವುದಿಲ್ಲ. ನಿದ್ದೆಯ ಹಂತದಲ್ಲಿ ಕನಸೇ ಇಲ್ಲದ ಆಯಾಮವೂ ಇರುತ್ತದೆ.
ಕನಸುಗಳು ನಮ್ಮ ಜೀವನದ ವಿಭಿನ್ನ ಅಭಿವ್ಯಕ್ತಿಯೇ ಆಗಿರುತ್ತವೆ. ನಮ್ಮ ದೈನಂದಿನ ಜೀವನದಲ್ಲಿ ಒಂದಿಷ್ಟು ವ್ಯವಸ್ಥೆ ಇರಲಿಲ್ಲ ಎಂದಾದರೆ, ದಿನದಲ್ಲಿ ಸಂಭ್ರಮಿಸುವ ವಿಭಿನ್ನ ಸಂಬಂಧಗಳಲ್ಲಿ ಸಾಮರಸ್ಯ ಎಂಬುದು ಇಲ್ಲದಾದಾಗ, ಅದೇ ಅವ್ಯವಸ್ಥೆ ಕನಸಿನ ಮೂಲಕ ಮುಂದುವರಿದಿರುತ್ತವೆ. ಗೊಂದಲ ಹುಟ್ಟುವ ವಿರೋಧಾಭಾಸಗಳನ್ನು ಒಂದು ವ್ಯವಸ್ಥೆಗೆ ತರುವುದಕ್ಕೆ ಮೆದುಳು ನಿದ್ದೆಯ ವೇಳೆಯಲ್ಲಿ ಹೆಣಗಾಡುತ್ತದೆ. ಈ ರೀತಿಯ ಅವ್ಯವಸ್ಥೆ ಹಾಗೂ ವ್ಯವಸ್ಥೆಯ ನಿರಂತರ ತಿಕ್ಕಾಟದಲ್ಲಿ ಮೆದುಳು ಜರ್ಜರಿತವಾಗಿ ಹೋಗುತ್ತದೆ. ಅಷ್ಟಾದರೂ ಮೆದುಳು ಕಾರ್ಯನಿರ್ವಹಿಸುವಂತಿರಬೇಕೆಂದರೆ ಅದಕ್ಕೊಂದು ಭದ್ರತೆ ಬೇಕೇಬೇಕು. ಆದ್ದರಿಂದ ನಂಬಿಕೆ, ತಾತ್ವಿಕ ಬದ್ಧತೆ ಸೇರಿದಂತೆ ಇನ್ನಿತರ ಮನೋವೈಕಲ್ಯತೆಗಳು ಮೆದುಳಿಗೆ ಅವಶ್ಯ ಎಂದಾಗಿಬಿಟ್ಟಿದೆ. ರಾತ್ರಿಯನ್ನು ಹಗಲಾಗಿ ಪರಿವರ್ತಿಸುವಂಥದ್ದೇ ನಿದ್ದೆಯಲ್ಲಅದು ಮನುಷ್ಯ ರೂಢಿಸಿಕೊಳ್ಳುತ್ತಿರುವ ಕೆಲವು ಮನೋವೈಕಲ್ಯದ ವ್ಯಸನಗಳಲ್ಲೊಂದು. ನಿತ್ಯದ ಜಂಜಡ ಹಾಗೂ ಬೇಸರಗಳಿಂದ ಪಲಾಯನಗೊಳ್ಳುವುದಕ್ಕೆ ನವ್ಯ ಸಮಾಜ ರಾತ್ರಿರಂಜನೆಯ ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ.
ವಯಕ್ತಿಕ ಹಾಗೂ ಸಾಮೂಹಿಕವಾದ ವಿಭಿನ್ನ ಸಂಬಂಧಗಳಲ್ಲಿನ ಅವ್ಯವಸ್ಥೆಯನ್ನು ಹಗಲಿನಲ್ಲಿ ಅವುಗಳು ನಡೆಯುತ್ತಿದ್ದಾಗಲೇ ಯಾವೊಂದೂ ಆಯ್ಕೆಯೇ ಇಲ್ಲದ ರೀತಿಯಲ್ಲಿಸಮಗ್ರವಾಗಿ  ತಿಳಿದುಕೊಳ್ಳುವುದರಿಂದ ತನ್ನಿಂದ ತಾನೆ ಒಂದು ವ್ಯವಸ್ಥೆ ಉಂಟಾಗುತ್ತದೆ. ಹಾಗಾದಾಗ ರಾತ್ರಿ ವೇಳೆಯಲ್ಲಿ ವ್ಯವಸ್ಥೆಗೊಳಿಸಿಕೊಳ್ಳುವ ಅನಿವಾರ್ಯತೆ ಮನಸ್ಸಿಗೆ ಉಂಟಾಗಿರುವುದಿಲ್ಲ. ಅಂಥ ನಿದರ್ಶಗಳಲ್ಲಿ ಕನಸು ಬಿದ್ದರೂ ಮೇಲ್ಮಟ್ಟದ ಅಪ್ರಸ್ತುತ ಕನಸುಗಳು ಬಿದ್ದಿರುತ್ತವೆ. ವೀಕ್ಷಿಸಿರುವಂಥದ್ದು ಮತ್ತು ವೀಕ್ಷಕನ ನಡುವಿನ ಪ್ರತ್ಯೇಕತೆಗಳು ಸಂ]ರ್ಣ ಮಾಯವಾದಾಗ ಗೃಹಿಕೆಯ ಸ್ಥರವನ್ನೂ ಮೀರಿದ ಪ್ರಜ್ಞಾಭಾವ ವ್ಯವಸ್ಥೆ ಉಂಟಾಗುತ್ತದೆ.
ಭೂತಕಾಲದ ವೀಕ್ಷಕ ಇನ್ನಿಲ್ಲವಾದಾಗ ವಾಸ್ತವ ಎಂಬ ಕೇವಲ ಜ್ಞಾನ ಸಾಕಾರವಾಗುತ್ತದೆ. ವರ್ತಮಾನದಲ್ಲಿ ತೊಡಗಿಕೊಂಡ 'ಏನಿರುತ್ತದೋ ಅದ'ಕ್ಕೆ ವೀಕ್ಷಕನಂತೆ ಕಾಲದ ಸಂಕೋಲೆಗಳು ಬಂಧಿಸುವುದಿಲ್ಲ. ನಿದ್ದೆಯ ಹೊತ್ತಿನಲ್ಲಿ ಮನಸ್ಸು- ಬುದ್ಧಿ ಮತ್ತು ದೇಹಗಳು ಒಂದು ಸಮಗ್ರ ವ್ಯವಸ್ಥೆಗೊಳಪಟ್ಟಿರುವಂತೆ, ಜಾಗೃತರಾಗಿದ್ದಾಗಲೂ ಶಬ್ದಗಳಿಲ್ಲದ ಸ್ಥಿತಿ ಮತ್ತು ಕಾಲವಿಲ್ಲದ  ಚಲನೆಯ ಆಯಾಮವನ್ನು ಪಡೆಯುವ ವ್ಯವಸ್ಥೆ ಅದು. ಇದೆಲ್ಲ ರಂಜನೀಯವಾದ ಕನಸಲ್ಲ. ಅಮೂರ್ತರೂಪದ ಪಲಾಯನವೂ ಅಲ್ಲ. ನಿಜ ಅರ್ಥದಲ್ಲಿ ಧ್ಯಾನ ಎಂಬುದರ ಸಮೀಕರಿಸಿದ ರೂಪ ಇದು. ಅಂದರೆ ಎಚ್ಚರದಲ್ಲಿ ನಡೆಯುತ್ತಿರಬಹುದು ಅಥವಾ ನಿದ್ದಿಸುತ್ತಿದ್ದಾಗಲೂ ಮೆದುಳು ಎಚ್ಚರವಾಗಿರುತ್ತದೆ.
ವೀಕ್ಷಕನಿಂದಾಗಿ ಮೆದುಳಿನಲ್ಲಿ ಹಗಲಿನ ಅವ್ಯವಸ್ಥೆಹಾಗೂ ರಾತ್ರಿವ್ಯವಸ್ಥೆಗೆ ಹೊಂದಿಕೊಂಡರೆ ಉಂಟಾಗುವ ನಿರಂತರ ತಿಕ್ಕಾಟದಿಂದಾಗಿ ಮೆದುಳು ಜರ್ಜರಿತವಾಗುತ್ತಿರುತ್ತದೆ.
ಆದರೆ ವೀಕ್ಷಕನಿಲ್ಲದ ಮೆದುಳಿನ ವ್ಯವಸ್ಥೆ ಎಂಬುದು ಗರಿಷ್ಠ ಪವಿತ್ರವಾದುದು, ಸೂಕ್ಷ್ಮ ಸಂವೇದನೆ ಮತ್ತು  ಜಾಣ್ಮೆಯ ಕೇಂದ್ರಇದು. ಯಾವಾಗ ಮೆದುಳಿನಲ್ಲಿ ವ್ಯವಸ್ಥೆ ಎಂಬ ಅದ್ಭುತ ಸೌಂದರ್ಯವಿರುತ್ತದೋ, ಸಮನ್ವಯತೆ ಇರುತ್ತದೋ ಆಗ ಮೆದುಳು ವಿಪರೀತ ಕ್ರಿಯಾಶೀಲವಾಗಿರುವುದಿಲ್ಲ; ಮೆದುಳಿನ ಕೆಲವೊಂದು ಭಾಗ ನೆನಪನ್ನು ಹೊತ್ತುಕೊಂಡಿರಬೇಕಾಗಿರುತ್ತದೆಯಾದರೂ ಅದಕ್ಕೆಲ್ಲ ಸಣ್ಣ ಭಾಗ ಸಾಕಾಗುತ್ತದೆ. ಮೆದುಳಿನ ಉಳಿದ ಹೆಚ್ಚಿನ ಭಾಗಗಳು ಅನುಭವವೆಂಬ ಗದ್ದಲದಿಂದ ನಿರಾಳವಾಗಿರುತ್ತವೆ. ಆ ನಿರಾಳತೆಯೇ ವ್ಯವಸ್ಥೆ, ಸಮನ್ವಯತೆ, ಮೌನ. ನಿರಾಳತೆ ಮತ್ತು ನೆನಪಿನ ಗದ್ದಲಗಳು ಒಟ್ಟೊಟ್ಟಿಗೇ ಹೋಗುತ್ತಿರುತ್ತವೆ; ಇಂಥ ಸಂದರ್ಭದಲ್ಲಿ ಈ ಬಗೆಯ ಚಲನಶೀಲತೆಯ ಕ್ರಿಯೆಯೇ ಜಾಣ್ಮೆಯಾಗಿರುತ್ತದೆ. ಧ್ಯಾನ ಎಂಬುದು ತಿಳಿವಳಿಕೆಯ ಭಾರದಿಂದ ಸ್ವಾತಂತ್ರ್ಯಗೊಳ್ಳುವಂಥಹುದಾದರೂ ತಿಳಿವಳಿಕೆಯ ಅಂಗಳದಲ್ಲಿಯೇ ಕಾರ್ಯನಿರ್ವಹಿಸುವಂಥದ್ದಾಗಿದೆ. ಆದರೆ ಅಲ್ಲಿ ನಾನು ಎಂಬ ನಿರ್ವಾಹಕನಿರುವುದಿಲ್ಲ. ನಿದ್ದೆಯಲ್ಲಿರಲಿ  ಅಥವಾ ಎಚ್ಚರದಲ್ಲಿನಡೆತ್ತಿರುವಾಗಲೂ ಈ ಧ್ಯಾನ ಸಾಗುತ್ತಲೇ ಇರುತ್ತದೆ.
ಕಾಡಿನ ದಾರಿಯಲ್ಲಿ ನಿಧಾನವಾಗಿ ಹೊರಬಂದಾಯಿತು. ಕ್ಷಿತಿಜದಿಂದ ಕ್ಷಿತಿಜಕ್ಕೆ ಆಕಾಶದಲ್ಲಿ ನಕ್ಷತ್ರಗಳು ತುಂಬಿದ್ದವು. ಹೊಲದಲ್ಲಿ ಏನೊಂದು ಚಲಿಸುತ್ತಿರಲಿಲ್ಲ.



ಅಕ್ಟೋಬರ್ 20, 1973
ಭೂಮಿಯ ಮೇಲಿನ ಅತ್ಯಂತ ಹಳೆಯ ಜೀವ ಇದು. ಎತ್ತರದಲ್ಲಿ  ಕೊಂಬೆಗಳ ಹರವಿನಲ್ಲಿಯೂ ಬೃಹದಾಕಾರವಾಗಿ ಬೆಳೆದಿದೆ. ಅಲ್ಲಿಯೇ ಇರು ವ ಹರಯದ ಇನ್ನಿತರ ರೆಡ್‌ಉಡ್ ಮರಗಳ ನಡುವೆ ಇದು ಎತ್ತರಕ್ಕೆ ಎದ್ದುಕಾಣುತ್ತಿತ್ತು; ಇತರ ಮರಗಳಿಗೆ ಎಂದೋ ಒಮ್ಮೆ ಬೆಂಕಿ ತಗುಲಿತ್ತಾದರೂ ಈ ಮರದಲ್ಲಿಮಾತ್ರಅಂಥ ಯಾವೊಂದು ಗುರುತುಗಳೂ ಇಲ್ಲ. ಇತಿಹಾಸದಲ್ಲಿ ಘಟಿಸಿದ ಜಗತ್ತಿನ ಎಲ್ಲ ಬಗೆಯ ಅಸಹ್ಯದ ದಿನಗಳನ್ನು, ಏರಿಳಿತಗಳನ್ನು ಇದು ಕಂಡಿದೆ. ಎಲ್ಲ ಜಾಗತಿಕ ಯುದ್ಧ, ಮಾನವ ಜೀವಿಯ ಕುಚೋದ್ಯ ಹಾಗೂ ವಿಷಾದಗಳಿಗೂ ಇದು ಸಾಕ್ಷಿಯಾಗಿದೆ. ಬಿರುಗಾಳಿಗಳು, ಕಾಳ್ಗಿಚ್ಚು ಯಾವೊಂದೂ ಇದರ ಭವ್ಯತೆಗೆ ಭಂಗ ತಂದಿಲ್ಲ- ಏಕಾಂಗಿಯಾಗಿ ತೀವ್ರ ಗೌರವದಿಂದ ನಿಂತುಕೊಂಡಿದೆ. ಕೆಲವೊಮ್ಮೆ ಬೆಂಕಿ ಈ ಭಾಗದಲ್ಲಿ ಸುಳಿದಿದ್ದರೂ ತೊಗಟೆಯ ರಕ್ಷಣೆುಂದಾಗಿ ಮರದ ಸಮಗ್ರತೆಗೆ ಚ್ಯುತಿ ಬಂದಿಲ್ಲ.
ಗದ್ದಲ ಹಾಕುವ ಪ್ರವಾಸಿಗಳು ಇನ್ನೂ ತನಕ ಇಲ್ಲಿಗೆ ಲಗ್ಗೆ ಇಡದ ಕಾರಣ ಈ ಬಹುದೊಡ್ಡ ಮೌನಿಯೊಂದಿಗೆ 'ನೀನು' ಏಕಾಂಗಿಯಾಗಿ ಇರುವುದು ಸಾಧ್ಯವಾಯಿತು. ನೀನು ಕೆಳಗೆ ಕುಳಿತು ನೋಡಿದಾಗ ಮರವು ಸ್ವರ್ಗಕ್ಕೆ ಚಿಮ್ಮಿದಂತೆ, ವಿಶಾಲ ಹಾಗೂ ಕಾಲಾತೀತವಾಗಿರುವಂತೆ ಅನುಭವವಾಗುತ್ತಿತ್ತು. ಮೌನದಲ್ಲಿ  ನಿಂತ ಇದಕ್ಕೆ  ಇದರ ವಯೋಮಾನವೇ ಒಂದು ಘನತೆಯನ್ನು ತಂದುಕೊಟ್ಟಂತಿತ್ತು. ದೊಡ್ಡ ವಯೋಮಾನದಲ್ಲೂ ಇದು ಏಕಾಂಗಿ. ಇದು 'ನಿನ್ನ' ಮನಸ್ಸಿನಂತೆ ಪ್ರಶಾಂತ್ತ, ಹೃದಯದಂತೆ ಸ್ಥಿಮಿತವಾಗಿತ್ತು. ಕಾಲದ ಯಾವೊಂದು ಹೊರೆಯನ್ನೂ ಹೊತ್ತುಕೊಳ್ಳದೆ ಬದುಕುತ್ತಿರುವ ಮರದ ಪ್ರಭಾವದಿಂದಾಗಿ ಕಾಲದಿಂದ ಮೈಲಿಗೆಯಾಗದಂಥ ಆಳವಾದ ಪ್ರೀತಿಯ ಅನುಭವ ನಿನಗಾಯಿತು. ನೋವು ಹಾಗೂ ದುಃಖವನ್ನು ಎಂದೂ ಕಾಣದ ಮುಗ್ಧತೆಯು ಅನುಭವಕ್ಕೆ ಬಂದಿತು. ನೀನು ಅಲ್ಲಿ  ಕುಳಿತಿದ್ದಾಗ ಸಮಯ ಹೋದದ್ದೇ ತಿಳಿಯುತ್ತಿರಲಿಲ್ಲ. ಆ ಸಮಯ ಇನ್ನೆಂದೂ ಸಿಗಲಾರದು. ಸಾವು ಸುಳಿಯದಿರುವುದರಿಂದ ಅಲ್ಲೊಂದು ಬಗೆಯ ಚಿರಂಜೀವಿತ್ವವಿತ್ತು. ಅಲ್ಲೊಂದು ತೀವ್ರಪ್ರಭಾವದ ಮರ, ಬಿಟ್ಟರೆ ಮೋಡ ಹಾಗೂ ಅನಂತ ಆಕಾಶ. ಅಷ್ಟು ಬಿಟ್ಟರೆ ಮತ್ತೇನೂ ಇರಲಿಲ್ಲ. ಆ ಕಡೆಗೆ ಹೋದಾಗಲೆಲ್ಲ ಅದೆಷ್ಟೋ ದಿನ ಅಲ್ಲಿ ಹೋಗಿ ಕುಳಿತಿದ್ದಾಗಿನ ಸ್ವಸ್ತಿವಾಚನದ ಶುಭ ಗಳಿಗೆ ನಿನಗೆ ಮಾತ್ರ ಗೊತ್ತು. ಇದಕ್ಕಿಂತ ಹೆಚ್ಚೇನನ್ನೂ ಅದರಿಂದ ಪಡೆಯುವ ಹಾಗೆ ಇರಲಿಲ್ಲ. ಅದಕ್ಕಾಗಿ ಆ ಮೇಲೆ ಮತ್ತೆ ಅಲ್ಲಿಗೆ ಬರುವುದು ಸಾಧ್ಯವಾಗಲಿಲ್ಲ. ಅಲ್ಲಿನ ಸ್ವಸ್ತಿವಾಚನದ ಸಾನ್ನಿಧ್ಯದಲ್ಲಿ ಇನ್ನಷ್ಟು, ಮತ್ತಷ್ಟು ಎಂಬ ಚೌಕಾಸಿ ಸಾಧ್ಯವಿರಲಿಲ್ಲ. ಚೌಕಾಸಿ ಎಂಬುದು ಮರದ ಕೆಳಭಾಗದಲ್ಲಿದ್ದ ಕಣಿವೆಯಲ್ಲಿತ್ತು. ಇದು ಮಾನವ ನಿರ್ಮಿಸಿದ ಗುಡಿಯಂತೆ ಅಲ್ಲ; ಇಲ್ಲಿರುವುದು ಅಳೆಯಲಾಗದ ಪಾವಿತ್ರ್ಯತೆ. ಇದು ನಿನ್ನದಾಗಿರಲಿಲ್ಲವಾದ್ದರಿಂದ ನಿನ್ನಿಂದ ಹೋಗಲೇ ಇಲ್ಲ.
ಈಗಷ್ಟೇ ಬೆಳಗಾಗುತ್ತಿದ್ದರಿಂದ ಸೂರ್ಯಕಿರಣಗಳು ಮರದ ತುದಿಯನ್ನು ತಲುಪಿರಲಿಲ್ಲ. ಕರಡಿ ಮತ್ತು ಚಿಗರೆಗಳು ಅಲ್ಲಿದ್ದವು; ನಾವು ಪರಸ್ಪರ ಕಣ್ಣಿಟ್ಟು ನೋಡಿದೆವು. ಭೂಮಿ ಎಂಬುದರ ಮೇಲೆ ಎಲ್ಲರಿಗೂ ಸಮಾನ ಸ್ವಾತಂತ್ರ್ಯ ಇರುವುದರಿಂದ ಯಾರಲ್ಲಿಯೂ ಭಯ ಇರಲಿಲ್ಲ. ಇಷ್ಟರಲ್ಲೇ ಬ್ಲೂ ಜೇಗಳು ಕೆಂ[ ಅಳಿಲುಗಳು ಇಲ್ಲಿಗೆ ಬರಲಿಕ್ಕಿವೆ; ಅಳಿಲುಗಳು ಪಳಗಿದ್ದರಿಂದ ಗೆಳೆತನ ಸಾಧ್ಯವಾಗಿತ್ತು. ನಿನ್ನ ಜೇಬಿನಲ್ಲಿ ಕೆಲವು ಬೀಜಗಳಿದ್ದು, ಅವನ್ನು ಹೊರತೆಗೆಯುವ ಹೊತ್ತಿಗೆ ನಿಮ್ಮ ಕೈಯಿಂದಲೇ ಕಸಿದುಕೊಳ್ಳುತ್ತಿದ್ದವು. ಅಳಿಲುಗಳ ಹೊಟ್ಟೆತುಂಬಿ ಹಿಂದಿರುಗುವ ಹೊತ್ತಿಗೆ, ಬ್ಲೂ ಜೇಗಳು ಮರದಿಂದ ಕೆಳಕ್ಕೆ ಕುಪ್ಪಳಿಸಿ ಬರುತ್ತವೆ. ಅವುಗಳ ಜಗಳ ನಿಲ್ಲುತ್ತದೆ. ಹಾಗೆ ದಿನ ಆರಂಭವಾಗುತ್ತದೆ.
ಸುಖಭೋಗದ ಜಗತ್ತಿನಲ್ಲಿ ವಿಷಯಲಂಪಟತನ ಎಂಬುದು ಬಹುಮುಖ್ಯದ ಸಂಗತಿಯಾಗಿ ಹೋಗಿದೆ. ರುಚಿ ಎಂಬುದು ನಮ್ಮನ್ನು ಆಳುತ್ತದೆ; ಕ್ರಮೇಣ ಸುಖಭೋಗ ಎಂಬುದು ವ್ಯಸನವಾಗುತ್ತದೆ. ವ್ಯಸನ ಇಡೀ ಜೀವವನ್ನೇ ಹಾಳುಗಡಹಬಹುದಾಗಿದ್ದರೂ ಸುಖದ ಹಿಡಿತ ಸಡಿಲವಾಗುವುದಿಲ್ಲ. ಇಂದ್ರಿಯದ ಸುಖ, ವಂಚಕ ಮತ್ತು ಸಂವೇದನಶೀಲ ಆಲೋಚನೆಗಳು, ಶೈಕ್ಷಣಿಕ ಸಂಸ್ಕೃತಿಯಿಂದ ಬರುವ ಶಬ್ದಬಂಢಾರ, ಹಿಂಸಾವಿನೋದ, ಲೈಂಗಿಕ ಸುಖ ಇತ್ಯಾದಿ. ಧಾರ್ಮಿಕ ಇರಬಹುದು, ಅಲ್ಲದೆಯೂ ಇದ್ದೀತು. ಮನುಷ್ಯನ ಎಲ್ಲ ಬಗೆಯ ಅಸ್ತಿತ್ವಗಳು ಸುಖದ ಪಡಿಯಚ್ಚಿನಲ್ಲಿ ಹೊಂದಿಸಲಾಗಿದೆ;  ಜೀವನ ಎಂಬುದು ಅದಕ್ಕಾಗಿನ ಹೋರಾಟವಾಗಿದೆ. ಇನ್ನೊಂದೆಡೆ ನೈತಿಕ ಹಾಗೂ ಬೌದ್ಧಿಕ ನಿಷ್ಠೆಯ ಪರಿಣಾಮದಿಂದಾಗಿಯೇ ಸುಖದ ಬಗೆಗಿನ ಉತ್ಪ್ರೇಕ್ಷೆ ಹೆಚ್ಚುವಂತಾಯಿತು. ಯಾವಾಗ ಮನಸ್ಸು ಮುಕ್ತ ಹಾಗೂ ಎಚ್ಚರಿಕೆಯಿಂದ ಇರುವುದಿಲ್ಲವೋ ಆಗ ಸುಖಭೋಗ ಎಂಬ ಭ್ರಷ್ಟ ಮಾರ್ಗಕ್ಕೆ ಶರಣಾಗುತ್ತದೆ;  ಈ ಯುಗದಲ್ಲಿ ಆಗುತ್ತಿರುವಂಥದ್ದೂ ಅದೇ. ಹಣ ಹಾಗೂ ಲೈಂಗಿಕ ಸುಖ ವ್ಯಕ್ತಿಯ ಮೇಲೆ ಹಿಡಿತ ಸಾಧಿಸುತ್ತಿದೆ. ಮನುಷ್ಯ ತನ್ನ ಹೊಸತನ ಕಳೆದುಕೊಂಡು ಎರಡನೇ ದರ್ಜೆಯವನಾಗುತ್ತಲೆ ವಿಷಯ ಲಂಪಟತನದ ಅಭಿವ್ಯಕ್ತಿಯೇ ಸ್ವಾತಂತ್ರ(ಪ್ರದರ್ಶನ)  ಎಂಬಂತಾಗುತ್ತದೆ. ಪ್ರೇಮ ಎಂಬುದು ಸುಖ ಹಾಗೂ ಆಸೆಯ ಪ್ರತಿರೂಪವಾಗುತ್ತದೆ. ಧಾರ್ಮಿಕ ಅಥವಾ ವ್ಯಾಪಾರಿ ಉದ್ದೇಶದ ಸಂಘಟಿತ ಮನರಂಜನೆಗಳು ವಯಕ್ತಿಕ ಹಾಗೂ ಸಾಮೂಹಿಕ ನೈತಿಕ ದಿವಾಳಿತನಕ್ಕೆ ಹೇತುವಾಗುತ್ತದೆ; ನಿಮಗೆ ಜವಾಬ್ದಾರಿ ಎಂಬುದೇ ಇರುವುದಿಲ್ಲ. ಯಾವುದೇ ಸವಾಲಿಗೆ ಸಂ]ರ್ಣವಾಗಿ ಸ್ಪಂದಿಸುವುದೇ ಜವಾಬ್ದಾರಿಯುತ ಹಾಗೂ ಬದ್ಧತೆಯ ಲಕ್ಷಣ. ಆಲೋಚನೆಯ ಮೂಲ ದೃವ್ಯ ಚೂರುಚೂರಾಗಿದ್ದಾಗ, ಜೀವನದ ಮೇಲ್ನೋಟದ ಹಾಗೂ ಆಳದ ಉದ್ದೇಶವೇ ಸುಖದ ತಲಾಶೆಯಾಗಿದ್ದಾಗ ಈ ಬದ್ಧತೆ ಸಾಧ್ಯವಾಗುವುದಿಲ್ಲ.
ಸುಖ ಎಂಬುದು ಆನಂದವಲ್ಲ. ಆನಂದ ಮತ್ತು ಸುಖಗಳೆರಡೂ ಸಂ]ರ್ಣ ಭಿನ್ನ ಸಂಗತಿಗಳು. ಆನಂದ ಎಂಬುದು ಕರೆದು ಬರುವಂಥದ್ದಲ್ಲ. ಆದರೆ ಸುಖ ಎಂಬುದನ್ನು ಅಳವಡಿಸಿಕೊಳ್ಳುವಂಥದ್ದು, ಹೊಂದಿಸಿಕೊಳ್ಳುವಂಥದ್ದು. ನಾನು ಇಲ್ಲದಾಗ ಆನಂದ ಬರುವಂಥದ್ದು, ಸುಖ ಎಂಬುದು ಕಾಲಮಿತಿಯದ್ದಾಗಿರುತ್ತದೆ. ಒಂದು ಇದ್ದಲ್ಲಿ ಇನ್ನೊಂದು ಇರುವುದಿಲ್ಲ. ಸುಖ, ಭಯ ಮತ್ತು ಹಿಂಸೆಗಳು ಒಟ್ಟೊಟ್ಟಿಗೆ ಹೆಜ್ಜೆ ಹಾಕುತ್ತವೆ; ಅವುಗಳನ್ನು ಪರಸ್ಪರ ಬೇರ್ಪಡಿಸುವುದಕ್ಕೆ ಆಗುವುದಿಲ್ಲ. ಗಮನಿಸುವಿಕೆಯಿಂದ ಕಲಿಯುವುದೇ ಕ್ರಿಯೆಯಾಗಿರುತ್ತದೆ. ಆಗ ಗಮನಿಸುವಿಕೆಯೇ ಕ್ರಿಯೆಯಾಗಿರುತ್ತದೆ.
ಸಂಜೆ ಕತ್ತಲು ಭೂಮಿಯನ್ನುಆವರಿಸುತ್ತಲೆ ಅಳಿಲು ಮತ್ತು ಜೇಗಳು ನಿದ್ದೆ ಹೋದವು. ಸಂಜೆಯ ನಕ್ಷತ್ರ ಆಗಷ್ಟೇ ಕಾಣತೊಡಗಿತ್ತು. ದಿನದ ಗದ್ದಲ ನೆನ[ಗಳೆಲ್ಲ  ಕ್ರಮೇಣ ಮುಗಿಯತೊಡಗಿದ್ದವು. ಬೃಹತ್ ಗಾತ್ರದ  ಸಿಕ್ವಾನ್ ಮರಗಳು  ಬಹುಕಾಲದಿಂದ ಒಂದೇ ಕಡೆ  ಸ್ಥಾವರವಾಗಿದ್ದವು.  ಅವು ಕಾಲವನ್ನೂ ಮೀರಿದ ಅಸ್ತಿತ್ವ ತೋರುತ್ತವೆ. ಆದರೆ ಮಾನವ ಮಾತ್ರ  ಒಂದಲ್ಲ ಒಂದು ದಿನ ಸಾಯುತ್ತಾನೆ, ಸಾವಿನಲ್ಲಿಯೇ ಆತನ ವಿಷಾದ ಕೂಡ ಅಂತ್ಯವಾಗಬೇಕಾಗುತ್ತದೆ.



ಅಕ್ಟೋಬರ್ 21, 1973
ಅದೊಂದು ಚಂದ್ರನಿಲ್ಲದ ರಾತ್ರಿ. ಪಾಮ್ ಮರಗಳ ಮೇಲ್ಭಾಗದಲ್ಲಿ  ಸದರ್ನ್ ಕ್ರಾಸ್ ಅಚ್ಚಾಗಿ ಕಾಣುತ್ತಿತ್ತು. ಸೂರ್ಯೋದಯಕ್ಕೆ ಇನ್ನೂ ಕೆಲವು ತಾಸು ಬಾಕಿ ಇದೆ; ಶಾಂತವಾಗಿದ್ದ ಆ ಜಾವದಲ್ಲಿ ನಕ್ಷತ್ರಗಳೆಲ್ಲ ಭೂಮಿಗೆ ಸಮೀಪವಾಗಿ ಗೋಚರಿಸುತ್ತಿದ್ದವು. ಅವುಗಳೆಲ್ಲ  ಎದ್ದು  ಬರುವಂತೆ ಮಿನುಗುತ್ತಿದ್ದವು. ನಕ್ಷತ್ರಗಳೆಲ್ಲ ನೀಲಿಯಿಂದ ಹೊರಚಿಮ್ಮುತ್ತಿದ್ದರೆ ತಣ್ಣಗಿದ್ದ ಹೊಳೆಯಲ್ಲಿ ಅವುಗಳ ಮರು ಹುಟ್ಟು ಗೋಚರಿಸುತ್ತಿತ್ತು. ಸದರ್ನ್ ಕ್ರಾಸ್ ಏಕಾಂಗಿಯಾಗಿ ಗಮನ ಸೆಳೆಯುತ್ತಿತ್ತು; ಇತರ ಯಾವುದೇ ನಕ್ಷತ್ರಗಳು ಅದರ ಹತ್ತಿರ ಕಾಣುತ್ತಿರಲಿಲ್ಲ. ಆ ಹೊತ್ತಿನಲ್ಲಿ ಗಾಳಿ ಸುಳಿದಾಡುತ್ತಿರಲಿಲ್ಲ; ಮನುಷ್ಯನ ಗದ್ದಲದಿಂದ ಬೇಸತ್ತಿದ್ದ  ಭೂಮಿ ಸ್ತಬ್ಧವಾಗಿ ನಿಂತಂತೆ ಭಾಸವಾಗುತ್ತಿತ್ತು. ರಾತ್ರಿ ಆ ಹೊತ್ತಿನ ವರೆಗೆ ರಭಸದಿಂದ ಮಳೆ ಹೊಯ್ದು ನಿಂತಿತ್ತು. ಕ್ಷಿತಿಜದಲ್ಲಿ ಮೋಡ ಕಾಣುತ್ತಿಲ್ಲದ್ದರಿಂದ ಸುಂದರ ಮುಂಜಾವಿನ ಎಲ್ಲ ಸೂಚನೆಗಳೂ  ಇತ್ತು.  ಮೃಗಶಿರಾ ನಕ್ಷತ್ರ [ಂಜ ಸಜ್ಜಾಗಿತ್ತು. ಬೆಳಗಿನ ಜಾವದ ನಕ್ಷತ್ರಗಳು ಕ್ಷಿತಿಜದ ತುಂಬ ದೂರದಲ್ಲಿದ್ದವು. ಇನ್ನೊಂದೆಡೆ ತೋಪಿನ ಮಧ್ಯದ ಹೊಂಡದೊಳಗೆ ಕಪ್ಪೆಗಳು ಕೂಗುತ್ತಿದ್ದವು; ಸ್ವಲ್ಪ ಹೊತ್ತು ಅಲ್ಲಿಯೇ  ನಿದ್ದೆಗೆ ಜಾರಿ ಮತ್ತೆ ಎಚ್ಚೆತ್ತುಕೊಂಡು ಕೂಗುತ್ತವೆ. ಗಾಳಿಯಲ್ಲಿ ಮಲ್ಲಿಗೆಯ ಪರಿಮಳ ಹಾಸಿಕೊಂಡಿತ್ತು; ಎಲ್ಲೋ ದೂರದಿಂದ ಪರಿಮಳ ಪಸರಿಸುತ್ತಿದೆ. ಆದರೆ ಆ ಹೊತ್ತಿನಲ್ಲಿ ಉಸಿರಾಟ ಕೇಳುವಷ್ಟರ ಮಟ್ಟಿಗೆ ಮೌನ ಆವರಿಸಿದೆ; ಅದರ ಸ್ನಿಗ್ಧ ಸೌಂದರ್ಯ ಭೂಮಿಯನ್ನೆಲ್ಲ ಆವರಿಸಿದೆ. ಈ ಪ್ರಶಾಂತ ಮೌನದ ಚಲನೆಯೇ ಧ್ಯಾನ.
ಫೌಳಿಗಳಿದ್ದ ಉದ್ಯಾನವೊಂದರಲ್ಲಿ ದಿನದ ಗದ್ದಲ ಆರಂಭವಾಗುತ್ತದೆ. ಶಿಶುವೊಂದರ ಸ್ನಾನದ ಕಾರ್ಯಕ್ರಮ ನಡೆಯುತ್ತಿದೆ; ಶಿಶುವಿನ ದೇಹದ ಎಲ್ಲ ಭಾಗಗಳಿಗೂ ಎಣ್ಣೆ ಹಚ್ಚಲಾಗಿದೆ. ತಲೆಗೊಂದು ತೈಲ; ದೇಹಕ್ಕೆಲ್ಲ ಬೇರೊಂದು. ಪ್ರತಿಯೊಂದಕ್ಕೂ ಅದರದ್ದೇ ಆದ ಪರಿಮಳ. ಎಣ್ಣೆಯನ್ನು ತುಸು ಬೆಚ್ಚ ಮಾಡಿ ಹಚ್ಚಲಾಗುತ್ತಿದೆ. ಮಗುವಿಗೆ ಇದೆಲ್ಲ  ತುಂಬ ಖುಷಿ. ಎಣ್ಣೆಯಿಂದ ಹೊಳೆಯುತ್ತಿದ್ದ ದುಂಡಾದ ಮಗು ಖುಷಿಯಲ್ಲಿ ಹಾ ಹೂ ಎಂದು ಕಾಕ್ ಹೊಡೆಯುತ್ತಿದೆ. ನಂತರ ಮಗುವಿಗೆ ಇನ್ನೊಂದು ಪರಿಮಳ ದ್ರವ್ಯವನ್ನು ಹಚ್ಚಿ ಸ್ವಚ್ಛಗೊಳಿಸಲಾಯಿತು. ಅಲ್ಲಿ ಎಷ್ಟೊಂದು ಪ್ರೀತಿ ಮತ್ತು ಜತನ ಎಂದರೆ ಈ ಮಗುವು ಅಳುತ್ತಲೇ ಇರಲಿಲ್ಲ. ಇಷ್ಟಾದ ನಂತರ ಮೈಯನ್ನೆಲ್ಲ ಒರೆಸಿ ಬಿಳಿಯಾದ ಮೆತ್ತನೆಯ ಬಟ್ಟೆಯೊಂದನ್ನು ಮೃದುವಾಗಿ ಸುತ್ತುವಷ್ಟರಲ್ಲಿ ಮಗು ನಿದ್ದೆಗೆ ಜಾರಿತ್ತು. ಇನ್ನು ಇದು ಬೆಳೆಯುತ್ತಲೇ ಶಿಕ್ಷಣ ನೀಡಲಾಗುತ್ತದೆ. ಕೆಲಸದ ತರಬೇತಿ. ಹೊಸದೋ ಅಥವಾ ಹಳೆಯದೋ ಸಂಪ್ರದಾಯವನ್ನು ಒಪ್ಪಿಸಲಾಗುತ್ತದೆ. ನಂತರ ಮದುವೆ, ಮಕ್ಕಳನ್ನು ಹುಟ್ಟಿಸುವುದು, ದುಃಖಸಹಿಸಿ ಕೊಳ್ಳಬೇಕು, ನೋವಿನಲ್ಲೂ ನಗಬೇಕಮ್ಮ.
ಒಂದು ದಿನ ತಾಯಿಯೊಬ್ಬಳು ಬಂದು ಕೇಳುತ್ತಾಳೆ. "" ಪ್ರೀತಿ ಎಂದರೇನು ? ಜತನ ಅಥವಾ ಕಾಳಜಿಯೇ? ನಂಬುಗೆಯೇ, ಇದು ಒಂದು ಜವಾಬ್ದಾರಿಯೇ ? ಅಥವಾ ಗಂಡು ಮತ್ತು ಹೆಣ್ಣಿನ ನಡುವಿನ ಸುಖವೇ ? ಇದು ಅವಲಂಬನೆ ಅಥವಾ ವಿರಹದಲ್ಲಿ ಇರುವ ನೋವೆ? ''
ನೀವು ನಿಮ್ಮ ಮಗುವನ್ನು ಎಷ್ಟೊಂದು ಕಾಳಜಿಯಿಂದ ಬೆಳೆಸುತ್ತಿದ್ದೀರಿ. ಅದಕ್ಕಾಗಿ ದಣಿವರಿಯದೆ ಶ್ರಮಿಸುತ್ತಿದ್ದೀರಿ. ನಿಮ್ಮ ಸಮಯ ಹಾಗೂ ಜೀವವನ್ನೇ ಅದಕ್ಕಾಗಿ ಧಾರೆ ಎರೆಯುತ್ತಿದ್ದೀರಿ... ನೀವು ಇದರ ಎಲ್ಲ ಬಗೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೀರಿ, ಹಾಗೆಂದು ನಿಮಗೆ ತಿಳಿದಿರಲಿಕ್ಕೂ ಇಲ್ಲ. ನೀವು ಅದನ್ನು ಪ್ರೀತಿಸುತ್ತೀರಿ. ಆದರೆ ಶಿಕ್ಷಣ ಎಂಬ ಕಿರಿದಾಗಿಸುವ-ಹತ್ತಿಕ್ಕುವ ಪ್ರಯತ್ನ ಕ್ರಮೇಣ ಆರಂಭವಾಗುತ್ತದೆ. ಇದೆಲ್ಲದಕ್ಕೂ ಹೊಂದಿಕೊಳ್ಳುವ ಶಿಕ್ಷೆ ವಿಧಿಸುತ್ತೀರಿ. ಸಾಮಾಜಿಕವಾಗಿ ಹೊಂದಿಕೊಂಡರೆ ಬಹುಮಾನಗಳನ್ನುಕೊಡುತ್ತೀರಿ. ಮನಸ್ಸನ್ನು ವ್ಯವಸ್ಥೆಯೊಂದಕ್ಕೆ ಹೊಂದಿಸುವುದಕ್ಕೆ ಶಿಕ್ಷಣ ಎಂಬುದು ಸರ್ವಸಮ್ಮತ ಮಾರ್ಗ. ಆದರೆ ನಾವು ಮಗುವಿಗೆ ಶಿಕ್ಷಣ ಕೊಡುವುದು ಯಾವ ಪುರುಷಾರ್ಥಕ್ಕಾಗಿ? ದುಡಿದು... ದುಡಿದು... ಕೊನೆಗೆ ಒಂದು ದಿನ ಸಾಯುವುದಕ್ಕಾ? ನೀವು ಅಷ್ಟೊಂದು ಪ್ರೀತಿಯಿಂದ ಜತನದಿಂದ ಸಾಕಿದ ಮಗುವಿನ ಬಗೆಗಿನ ಕಾಳಜಿ ಶಿಕ್ಷಣ ಆರಂಭವಾಗುತ್ತಲೆ ಎಲ್ಲವೂ ನಿಂತು ಹೋಗುತ್ತದೆ.
ಯುದ್ಧಕ್ಕೆ ಕಳುಹಿಸುವುದಕ್ಕಾಗಿ ಶಿಕ್ಷಣ ನೀಡುವಲ್ಲಿಮಗುವಿನ ಬಗ್ಗೆ ಪ್ರೀತಿ ಇದೆಯೇ? ಯುದ್ಧದಲ್ಲಿ ಸಾಯಲೆಂದು ಇಷ್ಟೊಂದು ಪ್ರೀತಿಯಿಂದ ಮಗುವನ್ನು ಸಾಕುತ್ತಿದ್ದೀರಾ? ಹಾಗೆ ನೋಡಿದರೆ ನಿಮ್ಮ ಜವಾಬ್ದಾರಿ ಎಂದೆಂದಿಗೂ ಮುಗಿಯುವುದಿಲ್ಲ; ಹಾಗೆಂದ ಮಾತ್ರಕ್ಕೆ ಮಗುವಿನ ಎಲ್ಲ ನಡೆಯಲ್ಲೂ ಅಡಚಣೆ ಮಾಡಬೇಕು ಎಂದಲ್ಲ. ಸ್ವಾತಂತ್ರ ಎಂಬುದು ಸಂ]ರ್ಣ ಜವಾಬ್ದಾರಿಯಾಗಿದೆ. ಇದು ಕೇವಲ ನಿಮ್ಮ ಮಗು ಮಾತ್ರವಲ್ಲ. ಜಗತ್ತಿನ ಎಲ್ಲ ಮಕ್ಕಳ ಬಗ್ಗೆಯೂ ಇದೇ ಕಾಳಜಿ ಬೇಕು. ಪ್ರೇಮ ಎಂಬುದು ಅವಲಂಬನೆ ಮತ್ತದರ ನೋವು ಎಂದುಕೊಂಡಿದ್ದೀರಾ ?  ಯಾವಾಗಲೂ ಅವಲಂಬನೆ ಎಂಬುದು ನೋವಿನ ಮೂಲದೃವ್ಯ; ಮತ್ಸರ, ದ್ವೇಷವೂ ಇದರಿಂದಲೇ ಬರುವಂಥದ್ದು. ವ್ಯಕ್ತಿಗತ ಆಳದ ಕೊರತೆ, ವ್ಯಕ್ತಿಗತ ದೌರ್ಬಲ್ಯಗಳು, ಏಕಾಂಗಿತನಗಳು  ಇನ್ನೊಬ್ಬರನ್ನು ಅಬಲಂಬಿಸುವಂತೆ ಮಾಡುತ್ತವೆ. ಅವಲಂಬನೆ ಎಂಬುದು ನಾವೆಲ್ಲ ಒಂದು ಎಂಬ ಕಲ್ಪನೆ ಹುಟ್ಟಿಸುತ್ತದೆ. ಇನ್ನೊಂದರೊಂದಿಗೆ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇದೇ ವಾಸ್ತವ, ಇದೇ ಬದುಕು ಎಂಬ ಭ್ರಮೆ ಹುಟ್ಟಿಸುತ್ತದೆ. ಯಾವಾಗ ನಮ್ಮ ಅವಲಂಬನೆಗಳು ಧ್ವಂಸವಾಗುತ್ತವೊ ಆಗ ದ್ವೇಷ, ಭಯ, ಸಿಟ್ಟು, ಮತ್ಸರಗಳು ಉಂಟಾಗುತ್ತವೆ. ಇವುಗಳನ್ನೇ ಪ್ರೀತಿ ಎನ್ನಬೇಕೆ ? ನೋವು ಮತ್ತು ವಿಷಾದಗಳು ಪ್ರೀತಿಯೇ? ದೈಹಿಕ ಸುಖವು ಪ್ರೇಮವೇ ? ಸಾಮಾನ್ಯ ಜಾಣ್ಮೆ ಹೊಂದಿದವರಿಗೆಲ್ಲರಿಗೂ ಈ ಸತ್ಯಗಳೆಲ್ಲಸ್ಪಷ್ಟವಾಗಿ ಅರ್ಥವಾಗುತ್ತದೆ; ಇದೆಲ್ಲತೀರಾ ಗೊಂದಲ, ಗೋಜಲಾದ ಸಂಗತಿಯಲ್ಲ. ಅಷ್ಟಾದರೂ ಇದನ್ನೆಲ್ಲ ಬಿಟ್ಟುಕೊಡುವುದಕ್ಕೆ ಅವರು ಸಿದ್ಧರಾಗುವುದಿಲ್ಲ. ತಮಗೆ ತಿಳಿದ ಈ ಎಲ್ಲ ಸತ್ಯಗಳನ್ನು ಒಂದು ಐಡಿಯಾವಾಗಿ ಪರಿವರ್ತಿಸಿ ನಂತರ ಅಮೂರ್ತ ತತ್ವವಾಗಿಸಿಕೊಂಡು ಅದರೊಂದಿಗೆ ಹೋರಾಟ ಆರಂಭಿಸುತ್ತಾರೆ. ವಾಸ್ತವ ಅಥವಾ 'ಏನಿರುವುದೋ ಅದ'ರ ಬದಲು ಅಮೂರ್ತ ತತ್ವಗಳೊಂದಿಗೆ ಬದುಕಲು ಅವರು ಹೆಣಗಾಡುತ್ತಾರೆ.
ಯಾವುದು ಪ್ರೇಮವಲ್ಲವೋ ಅದನ್ನು ಸಂ]ರ್ಣ ನಿರಾಕರಿಸುವಲ್ಲಿನಿಜವಾದ ಪ್ರೇಮ ಇದೆ. ನಕಾರಾತ್ಮಕ ಎಂಬ ಶಬ್ದದಿಂದ ಭಯಗೊಳ್ಳಬೇಡಿ. ಯಾವುದು ಪ್ರೇಮವಲ್ಲವೋ ಅದನ್ನು ಸಂ]ರ್ಣ ಕತ್ತರಿಸಿ ಹಾಕಿಬಿಡಿ. ಇದಾದ ನಂತರ ಉಳಿಯುವುದೇ ತೀವ್ರವಾದ ಪ್ರೇಮ. ನಿಮ್ಮ ಮೇಲೆ ತೀವ್ರಪ್ರಭಾವ ಬೀರುವ ವಿಚಾರವೆಂದರೆ ಜಗತ್ತು; ಜಗತ್ತೇ ನೀವು; ಇದರ ಸಾಕ್ಷಾತ್ಕಾರದಿಂದಲೇ ಆಳವಾದ ಪ್ರೀತಿ ಹುಟ್ಟುತ್ತದೆ.
ನಿಧಾನವಾಗಿ ಬೆಳಕು ಸರಿಯುತ್ತಿತ್ತು. ]ರ್ವ  ಕ್ಷಿತಿಜದಲ್ಲಿ ಬೆಳಕಿನ ಮಂದ್ರ ಗೋಚರಿಸುತ್ತಿತ್ತು. ಇದು ವಿಸ್ತರಿಸತೊಡಗಿದಂತೆ ಸದರ್ನ್ ಕ್ರಾಸ್ ಮಾಯವಾಗತೊಡಗಿತ್ತು. ಮರಗಳು ರೂಪ ತಳೆಯಲು ಆರಂಭಿಸಿದವು. ಕಪ್ಪೆಗಳ ಕೂಗಾಟ ನಿಂತಿತ್ತು. ಬೆಳಕು ಹೆಚ್ಚುತ್ತಲೆ ಬೆಳಗಿನ ನಕ್ಷತ್ರಗಳೆಲ್ಲಬೆಳಕಿನಲ್ಲಿ ಲೀನವಾದವು. ಹಾಗೆ ಹೊಸ ದಿನ ಆರಂಭವಾುತು. ಕಾಗೆಗಳ ಹಾರಾಟ, ಮಾನವನ ಚಟುವಟಿಕೆ ಆರಂಭವಾಯಿತಾದರೂ ನಸುಕಿನ ಜಾವದ ಸಾನ್ನಿಧ್ಯ ಹಾಗೇ ಇತ್ತು.



ಅಕ್ಟೋಬರ್ 22, 1973
ಆ ನದಿ ನಿಧಾನ ಗತಿಯಲ್ಲಿ  ಪ್ರವಹಿಸುತ್ತಿತ್ತು. ಅದರಲ್ಲಿ ಸಣ್ಣದೊಂದು ದೋಣಿಯ ಮೂಲಕ ಯಾನ ಮಾಡುತ್ತಿದ್ದಾಗ ಪೂರ್ವ-ಪಶ್ಚಿಮ ಹಾಗೂ ಉತ್ತರ-ದಕ್ಷಿಣದ ಎಲ್ಲ ಬಾನಂಚುಗಳು ಕಾಣುತ್ತಿದ್ದವು. ಬಾನಂಚಿನ ನೋಟಕ್ಕೆ ಅಡಚಣೆಯಂತೆ ಇರುವ ಯಾವೊಂದು ಮನೆಯಾಗಲಿ ಅಥವಾ ಮರವಾಗಲಿ ಅಲ್ಲಿರಲಿಲ್ಲ. ಆಕಾಶದಲ್ಲೆಲ್ಲೂ ಒಂದು ಮೋಡವೂ ತೇಲುತ್ತಿರಲಿಲ್ಲ. ನದಿಯ ದಂಡೆಗಳು ಹರವಿ ಮೈದಾನವಾಗಿ ವಿಶಾಲವಾಗಿ ಹಾಸಿಕೊಂಡಿತ್ತು. ವಿಶಾಲವಾದ ಆ ನದಿಯಲ್ಲಿ ಇನ್ನೂ ಕೆಲವೊಂದು ಮೀನುಗಾರರ ದೋಣಿಗಳಿದ್ದವು. ದೋಣಿಯ ಒಂದೆಡೆ ಬಲೆ ಬೀಸಿಕೊಂಡು ಅಡ್ಡಾದಿಡ್ಡಿಯಾಗಿ ನಿಂತಿರುವ ಮೀನುಗಾರರು. ಈ ಮೀನುಗಾರ ಪುರುಷರಿಗೆ ಬೆಟ್ಟದಷ್ಟು ಸಹನೆ. ಒಂದರ್ಥದಲ್ಲಿ ಹೇಳುವುದಾದರೆ ಇಲ್ಲಿ  ಆಕಾಶ-ಭೂಮಿಗಳೆರಡೂ ಒಂದಾಗಿವೆ. ಅಷ್ಟೊಂದು ವಿಶಾಲತೆ. ಇದೇ ಅಪರಿಮಿತ ಅವಕಾಶದಲ್ಲಿ  ಭೂಮಿ ಮತ್ತೆಲ್ಲ  ಚರಾಚರಗಳು ಅಸ್ತಿತ್ವ ಹೊಂದಿರುವಂಥದ್ದು. ಪ್ರವಾಹದೊಂದಿಗೆ ಹೊರಟಿರುವ ನಾವಿದ್ದ  ಚಿಕ್ಕ ದೋಣಿಯೂ ಅದರಲ್ಲೊಂದು. ನದಿಯ ತಿರುವಿನಲ್ಲಿ  ನಿಂತು ನೋಡಿದರೆ ಅದೆಷ್ಟೊ  ದೂರದ ವರೆಗೆ, ಅಪರಿಮಿತ ಅವಕಾಶವಾಗಿ ದಿಗಂತವಿದೆ. ಅನಂತದ ಅನಾವರಣ ಎನ್ನಬಹುದು. ಸ್ಥಳಾವಕಾಶ ಎಲ್ಲೆಲ್ಲೂ ಮುಗಿಯದ ಸ್ಥಿತಿ ಅದು. ಸೌಂದರ್ಯ ಮತ್ತು ತೀವ್ರ ತರದ ಪ್ರೀತಿಯ ಸಾಕ್ಷಾತ್ಕಾರಕ್ಕೆ ಇಂಥ ವಿಶಾಲ ಅವಕಾಶವಿರಬೇಕು. ಪ್ರತಿಯೊಂದಕ್ಕೂ ಸ್ಥಳಾವಕಾಶದ ಅಗತ್ಯ ಇರುತ್ತದೆ. ಜೀವ ಇರುವ, ನಿರ್ಜೀವ ಎಂಬ ಬೇಧವಿಲ್ಲದೆ, ಗುಡ್ಡೆಯ ಮೇಲಿನ ಬಂಡೆಗಳಿಂದ ಹಿಡಿದು ಹಾರಾಡುವ ಹಕ್ಕಿಗಳಿಗೆಲ್ಲವಕ್ಕೂ ಸ್ಥಳಾವಕಾಶ ಎಂಬುದು ಬಹುಮುಖ್ಯ ಸಂಗತಿ. ಯಾವಾಗ ಅವಕಾಶ ಎಂಬುದು ಇಲ್ಲವಾಗುತ್ತದೋ, ಆಗ ಸಾವು ಸಂಭವಿಸುತ್ತದೆ.
ಮೀನುಗಾರರೆಲ್ಲ ಹಾಡುತ್ತಿದ್ದರು. ಅವರ ಹಾಡಿನ ಧ್ವನಿ ನೀರಿನೊಂದಿಗೆ ಹರಿದು ಬರುತ್ತಿತ್ತು. ಧ್ವನಿಗೂ ಅವಕಾಶ ಬೇಕಾಗುತ್ತದೆ. ಶಬ್ದವೊಂದು ಧ್ವನಿಯಾಗುವುದಕ್ಕೆ ಅವಕಾಶ ಬೇಕು: ಸರಿಯಾಗಿ ಉಚ್ಚರಿಸಿದ ಶಬ್ದವು ತನ್ನದೆ ಆದ ಜಾಗವನ್ನು ನಿರ್ಮಿಸಿಕೊಳ್ಳುತ್ತದೆ.
ನದಿ ಮತ್ತು  ದೂರದ ಮರ ಕೂಡ ಸ್ಥಳಾವಕಾಶವನ್ನು ಹೊಂದಿದ್ದರೆ ಮಾತ್ರ ಉಳಿದುಕೊಳ್ಳಬಹುದು. ಅವಕಾಶ ಇಲ್ಲವಾದರೆ ಎಲ್ಲವೂ ಅವಸಾಗೊಳ್ಳುತ್ತವೆ. ನದಿಯು ದಿಗಂತದಲ್ಲಿ ಕಾಣೆಯಾಗಿತ್ತು. ಮೀನುಗಾರರೆಲ್ಲ  ದಡ ಹತ್ತುತ್ತಿದ್ದರು. ರಾತ್ರಿಯ ತೀವ್ರತರವಾದ ಕತ್ತಲು ಆವರಿಸತೊಡಗಿತ್ತು. ದಿನದಲ್ಲಿ  ದಣಿದ ಭೂಮಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದರೆ, ನಕ್ಷತ್ರಗಳು ನೀರಿನಲ್ಲಿ  ಇಳಿದಿದ್ದವು. ವಿಶಾಲವಾದ ಸ್ಥಳ ಅವಕಾಶವನ್ನೆ ಸೀಮಿತಗೊಳಿಸಿ ಹಲವು ಗೋಡೆಗಳ ಸಣ್ಣ ಮನೆಯನ್ನು ನಿರ್ಮಿಸಲಾಗಿತ್ತು. ಇನ್ನೇನು ದೊಡ್ಡದಾಗಿದ್ದರೂ, ಭವಂತಿ ಮನೆಗಳೂ ಸ್ಥಳಾವಕಾಶಕ್ಕೊಂದು ಅಡೆತಡೆ, ಆವರಣದಂತಿರುತ್ತವೆ. ಮನೆಕಟ್ಟಿಕೊಳ್ಳುವುದೆಂದರೆ  ಸ್ಥಳಾವಕಾಶವನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನ.
ಚೌಕಟ್ಟಿನಲ್ಲಿ  ಹೊಂದಿಸಲಾಗುವುದಾದರೂ ಪೇಂಟಿಂಗ್‌ಗಳಲ್ಲಿ ಒಂದಿಷ್ಟು  ಖಾಲಿ ಅವಕಾಶ  ಅವಶ್ಯವಿರುತ್ತದೆ. ಅವಕಾಶ ಇದ್ದರೆ ಮಾತ್ರ ಪ್ರತಿಮೆಯೊಂದರ ಅಸ್ತಿತ್ವ ಸಾಧ್ಯ. ತನಗೆ ಬೇಕಾದ ಅವಕಾಶವನ್ನು ಸಂಗೀತ ತಾನೇ ನಿರ್ಮಿಸಿಕೊಳ್ಳುತ್ತದೆ. ಶಬ್ದವೊಂದರ ಧ್ವನಿ ತಾನೇ ಅವಕಾಶವನ್ನು ನಿರ್ಮಿಸಿಕೊಳ್ಳುವುದರ ಜೊತೆಗೆ ಅದನ್ನು ಕೇಳಿಸುವಂತೆ ಮಾಡುತ್ತದೆ. ಎರಡು ಬಿಂದುಗಳ ನಡುವಿನ ವಿಸ್ತರಣೆಯನ್ನು ಆಲೋಚನೆ ಊಹಿಸಬಲ್ಲುದು. ಅಲ್ಲಿರುವ ದೂರ ಅಥವಾ ಅಳತೆಯನ್ನೂ ಅಂದಾಜಿಸಬಲ್ಲದು.  ಎರಡು ಆಲೋಚನೆಗಳ ನಡುವಿನ ಮಧ್ಯಂತರದ ಅವಕಾಶವೇ ಆಲೋಚನೆ ನಿರ್ಮಿಸುವ ಖಾಲಿ ಅವಕಾಶ. ಕಾಲದ ನಿರಂತರ ವಿಸ್ತರಣೆ, ಚಲನೆ ಮತ್ತು ಎರಡು ಆಲೋಚನೆಗಳ ಚಲನೆಗಳ ನಡುವಿನ ಬಿಡುವು ಇವೆಲ್ಲವೂ ಸೇರಿಕೊಂಡಿರುವಲ್ಲಿಯೂ ಒಂದು ಅವಕಾಶವಿದೆ. ಕಾಲ ಮತ್ತು ಆಲೋಚನೆಗೆಳ ಆಂತರಿಕ ಚಲನೆಯಲ್ಲಿಯೇ ಪ್ರಜ್ಞೆ ಎಂಬುದಿದೆ. ಆಲೋಚನೆ ಹಾಗೂ ಕಾಲಗಳನ್ನು ಎರಡು ಬಿಂದುಗಳ ಅಂತರದಲ್ಲಿ ಅಳೆಯಬಹುದು. ಅಷೇ ಅಲ್ಲ ಕೇಂದ್ರ ಮತ್ತು ಹೊರವಲಯದ ನಡುವಿನ ಅವಕಾಶವನ್ನು ಅಳೆಯಬಹುದು. ನಾನು ಮತ್ತು ನಾನಲ್ಲ ಎಂಬುದನ್ನು ಕೇಂದ್ರವಾಗಿಸಿಕೊಂಡು ವಿಶಾಲವೊ ಅಥವಾ ಸೀಮಿತವಾಗಿಯೋ ಪ್ರಜ್ಞೆ  ಎಂಬುದು ಇರುತ್ತದೆ.
ಎಲ್ಲ  ವಸ್ತುಗಳಿಗೂ ಸ್ಥಳಾವಕಾಶ ಬೇಕು. ಒಂದು ಸಣ್ಣ ಬೋನಿನಲ್ಲಿ ಇಲಿಗಳನ್ನು ಕೂಡಿಹಾಕಿಟ್ಟರೆ ಅವುಗಳು ಪರಸ್ಪರ ಕಚ್ಚಾಡಿಕೊಂಡು ನಾಶವಾಗುತ್ತವೆ; ದೂರವಾಣಿಯ ತಂತಿಯ ಮೇಲೆ ಅಂದು ಸಂಜೆ ಕುಳಿತುಕೊಂಡಿದ್ದ  ಸಣ್ಣ ಹಕ್ಕಿಗಳು ತಮ್ಮ ನಡುವೆ ಒಂದು ಸ್ಥಳಾವಕಾಶವನ್ನು ಬಿಟ್ಟುಕೊಂಡಿದ್ದವು. ಗಿಜಿಗುಟ್ಟುವ ನಗರದಲ್ಲಿ  ವಾಸಿಸುವ ಜನರು ಹಿಂಸಾಪ್ರಿಯರು, ಕ್ರೂರಿಗಳೂ ಆಗುತ್ತಿದ್ದಾರೆ. ಎಲ್ಲಿ ಆಂತರಿಕ ಹಾಗೂ ಬಾಹ್ಯವಾದ ಸ್ಥಳಾವಕಾಶ ಇರುವುದಿಲ್ಲವೋ ಪರಿಣಾಮ ಎಂದರೆ ಎಲ್ಲ ಬಗೆಯು ಕುಚೋದ್ಯ ಹಾಗೂ ಕೊಳೆಯುವಿಕೆಗೆ ಹೇತುವಾಗುತ್ತದೆ. ಶಿಕ್ಷಣವೆಂಬ ವ್ಯವಸ್ಥೆ, ಧರ್ಮ, ಸಂಪ್ರದಾಯ, ಸಂಸ್ಕೃತಿಗಳ ಮೂಲಕ ಒಡಂಬಡಿಕೆಗೊಂಡಿರುವುದರಿಂದ ಮನಸ್ಸು ಹಾಗೂ ಹೃದಯದ ಅರಳುವಿಕೆಗೆ ಸೀಮಿತವಾದ ಸ್ಥಳಾವಕಾಶ ಇರುತ್ತದೆ. ನಂಬಿಕೆ, ನಂಬಿಕೆಗಳ ಆಧಾರದಿಂದ ಬರುವ ಅನುಭವ, ಅಭಿಪ್ರಾಯ, ತತ್ವಗಳು, ಶಬ್ದ ರೂಪದಲ್ಲಿರುವ ನಾನು, ಪ್ರತಿಷ್ಠೆ ಮುಂತಾದವುಗಳೆಲ್ಲ  ಸೇರಿದ ಕೇಂದ್ರದಲ್ಲಿ ಹೆಚ್ಚೇನೂ ಸ್ಥಳಾವಕಾಶ ಇರುವುದಿಲ್ಲ. ಇಲ್ಲಿಯೇ ಸಾಮಾನ್ಯವಾಗಿ ನಮ್ಮ ಪ್ರಜ್ಞೆಯ ಸೀಮೆ ಇರುವಂಥದ್ದು. ನಾನು ಎಂಬುದರ ಅಸ್ತಿತ್ವ ಹಾಗೂ ಚಟುವಟಿಕೆಗಳು ತಾನೇ ನಿರ್ಮಿಸಿಕೊಂಡ ಸಣ್ಣದಾದ ಸ್ಥಳಾವಕಾಶಕ್ಕೆ ಸೀಮಿತವಾಗಿರುತ್ತದೆ. ಅದೇ ವ್ಯಾಪ್ತಿಯಲ್ಲಿ  ನಾನು ಎಂಬುದರ ಸಮಸ್ಯೆ, ದುಃಖ, ಇದರ ಆಕಾಂಕ್ಷೆ, ಹತಾಶೆಗಳೆಲ್ಲ ತುಂಬಿಕೊಂಡಿರುವುದರಿಂದ ಅದಕ್ಕೊಂದು ಸ್ಥಳಾವಕಾಶ ಎಂಬುದೇ ಇರುವುದಿಲ್ಲ. ಸಾಮಾನ್ಯವಾಗಿ ತಿಳಿವಳಿಕೆ ಎಂಬುದು ಪ್ರಜ್ಞೆಯ ಎಲ್ಲೆಡೆಯಲ್ಲೂ ತುಂಬಿಕೊಂಡಿರುತ್ತದೆ. ತಿಳಿವಳಿಕೆ ಎಂಬುದೇ ಪ್ರಜ್ಞೆಯಾಗಿ ಹೋಗುತ್ತದೆ. ಆದರೆ ಮಾನವನ ಏನೆಲ್ಲ  ಸಮಸ್ಯೆಗಳಿಗೆ ಈ ತೆರನಾದ ಪ್ರಜ್ಞೆ  ಅಥವಾ ತಿಳಿವಳಿಕೆಯಲ್ಲಿ ಪರಿಹಾರ ಇಲ್ಲ. ಹಾಗಿದ್ದರೂ ತಿಳಿವಳಿಕೆ ಎಂಬುದು ಅಲ್ಲಿಂದ ಖಾಲಿ ಮಾಡುವುದಕ್ಕೆ ಕೇಳುವುದಿಲ್ಲ. ಅವು ಅಲ್ಲಿಯೇ ಅಂಟಾಗಿ ಹಿಡಿದುಕೊಂಡು, ಜಪ್ಪಯ್ಯ ಎಂದರೂ ತೊಲಗದ ರೀತಿಯಲ್ಲಿ ಇರುತ್ತವೆ.
ಸಮಸ್ಯೆಯನ್ನು ಹೇಗಾದರೂ ಪರಿಹರಿಸಿಕೊಳ್ಳುವ ಉದ್ದೇಶದಿಂದ ತಿಳಿಯದ ಇನ್ನಷ್ಟನ್ನು ಸಂಶೋಧಿಸತೊಡಗುತ್ತದೆ. ನಾನು ಎಂಬುದು ನಿರ್ಮಿಸಿಕೊಂಡ ಸ್ಥಳಾವಖಾಶದಲ್ಲಿ ಒಟ್ಟಾರೆ ಇರುವಂಥದ್ದು ಎಂದರೆ ಅದರ ವಿಷಾದ ಹಾಗೂ ಸುಖದ ನೋವು. ನಿಮ್ಮಲ್ಲಿಯೇ ಆ "ದೇವರೂ' ಇರುವುದಕ್ಕಾಗಿ ದೇವರು ನಿಮಗಾಗಿ ಹೆಚ್ಚಿನ ಸ್ಥಳಾವಕಾಶವನ್ನೇನೂ ಕೊಡುವುದಿಲ್ಲ. (ಮನಸ್ಸಿನ ಈ ರೀತಿಯು ಗುಣದಿಂದಾಗಿ) ಸುತ್ತಲಿನ ಅಪರಿಮಿತ ಅನಂತ ಸ್ಥಳಾವಕಾಶಗಳು ಆಲೋಚನೆಯ ವ್ಯಾಪ್ತಿಗೆ ನಿಲುಕದೆ ಇರುತ್ತವೆ. ಆಲೋಚನೆ ಎಂಬುದು ತಿಳಿದ ತಿಳಿವಳಿಕೆಯಿಂದ ಆಗಿರುವಂಥದ್ದು. ಧ್ಯಾನ ಎಂದರೆ ಪ್ರಜ್ಞೆಯಲ್ಲಿರುವ ನಾನು, ತಿಳಿವಳಿಕೆ ಸೇರಿದಂತೆ ಪ್ರಜ್ಞೆಯೊಳಗಿನ ಸಾರವನ್ನು ಖಾಲಿ ಮಾಡಿ ಸ್ಥಳಾವಕಾಶ ನಿರ್ಮಿಸಿಕೊಳ್ಳುವುದಾಗಿದೆ.
ನಿಧಾನವಾಗಿ ಹುಟ್ಟುಗಳು ದೋಣಿಯನ್ನು ನದಿಯ ಮೇಲ್ಮುಖವಾಗಿ ಒಯ್ಯುತ್ತಿದ್ದವು. ಮನೆಯಲ್ಲಿ ಇಣುಕುತ್ತಿದ್ದ ಬೆಳಕಿನ ಆಧಾರದಲ್ಲಿ ದೋಣಿಗಳು ತಮ್ಮ ದಿಕ್ಕನ್ನು ನಿರ್ಧರಿಸಿ ಮುಂದೆ ಹೋಗುತ್ತಿದ್ದವು. ಇದೊಂದು ದೀರ್ಘ ಸಂಜೆಯಾಗಿತ್ತು. ಸೂರ್ಯಾಸ್ತ ಸುಂದರವಾಗಿತ್ತು. ನೀರಿನ ಮೇಲೆ ಸೂರ್ಯ ರಶ್ಮಿ ಬಂಗಾರದ ದಾರಿಯನ್ನು ನಿರ್ಮಿಸಿತ್ತು.



ಅಕ್ಟೋಬರ್ 24, 1973
ಕಣಿವೆ ಹಾದಿಯ ತಗ್ಗಿನಲ್ಲಿ  ಊರಿನ ಮಿಣುಕು ದೀಪಗಳು ಕಾಣಿಸುತ್ತಿದ್ದವು; ಆಗಲೆ ಕತ್ತಲಾಗಿತ್ತಲ್ಲದೆ ಕಾಲು ಹಾದಿ ತೀರಾ ಇಕ್ಕಟ್ಟಾಗಿತ್ತು. ಗುಡ್ಡಗಳ ಸಾಲುಗಳು ದಿಗಂತದಲ್ಲಿ ಅಲೆಅಲೆಯಾಗಿ ಹಾಸಿಕೊಂಡಿರುವ ದೃಶ್ಯ ನಕ್ಷತ್ರಗಳ ಮಂದ ಬೆಳಕಿನಲ್ಲೂ ಕಾಣುತ್ತಿತ್ತು. ಸಮೀಪದಲ್ಲೇ ಎಲ್ಲೊ ತೋಳವೊಂದು (ಉತ್ತರ ಅಮೆರಿಕದಲ್ಲಿ  ಕಂಡುಬರುವ ತೋಳ) ಕೂಗು ಹಾಕುತ್ತಿತ್ತು. ನಿರ್ದಿಷ್ಟವಾಗಿ ರಸ್ತೆ ಗುರುತು ಹಿಡಿಯುವಂತಿರಲಿಲ್ಲ. ಇನ್ನೊಂದೆಡೆ ವನಸ್ಪತಿಗಳ ಪರಿಮಳದೊಂದಿಗೆ  ತಂಗಾಳಿ ಮೇಲಕ್ಕೆ ಬರುತ್ತಿತ್ತು. ನೀರವತೆಯಲ್ಲಿ ಒಬ್ಬಂಟಿಯಾಗಿರುವುದು ಎಂದರೆ ತೀವ್ರಪ್ರಶಾಂತತೆ ಮತ್ತದರ ಸೌಂದರ್ಯವನ್ನು ಆಲಿಸುವುದಾಗಿರುತ್ತದೆ. ಹೆದರಿಯೊ ಅಥವಾ ಗಮನ ಸೆಳೆಯುವುದಕ್ಕೆಂದೊ ಪೊದೆಯಲ್ಲೊಂದು ಪ್ರಾಣಿ ಸರಸರ ಶಬ್ದ ಮಾಡುತ್ತಿತ್ತು. ಆಗಲೆ ಸಾಕಷ್ಟು ಕತ್ತಲಾಗಿದ್ದರಿಂದ ಕಣಿವೆಯ ಜಗತ್ತು ಸಂಪೂರ್ಣ ಸ್ತಬ್ದವಾಗಿತ್ತು. ಒಣ ಗುಡ್ಡೆಯ ಮೇಲೆ ಬೆಳೆದುಕೊಳ್ಳು ವ ಎಲ್ಲ ಬಗೆಯ ವನಸ್ಪತಿಗಳು ಬಿಸಿಲಿಗೆ ಒಡ್ಡಿಕೊಂಡ ನಂತರ ಹೊಮ್ಮುವ ವಾಸನೆಯು ಕಲಸಿಕೊಂಡು ಸುಳಿಯುತ್ತಿರುವುದು  ಅನುಭವಕ್ಕೆ ಬರುತ್ತಿತ್ತು. ಅದೆಷ್ಟೋ ತಿಂಗಳ ಹಿಂದೆಯೇ ಮಳೆ ನಿಂತಿದೆ; ಇನ್ನು ಸುದೀರ್ಘ ಅವಧಿಗೆ ಮಳೆಯಾಗುವ ಸೂಚನೆಯಿಲ್ಲ. ಪರಿಣಾಮವಾಗಿ ರಸ್ತೆಯೆಲ್ಲ ಒಣಗಿ ಧೂಳು ತುಂಬಿದೆ. ವಿಶಾಲವಾದ ಅವಕಾಶದ ತೀವ್ರತರ ಸ್ತಬ್ದತೆ ಕತ್ತಲಿನ ಆ ಹೊತ್ತು ಆವರಿಸಿತ್ತು. ಪ್ರತೀ ಹಂತದಲ್ಲೂ ಆಲೋಚನೆ ಸ್ತಬ್ದವಾಗುತ್ತಿತ್ತು.
ಮನಸ್ಸಿಗೆ ಆಗಾಧವಾದ ಸ್ಥಳಾವಕಾಶ ಸಾಧ್ಯತೆಯಿರುತ್ತದೆ. ಅಂದಿನ ಆಳವಾದ ನಿಶ್ಯಬ್ದದಲ್ಲಿ  ಆಲೋಚನಾ ಪ್ರಕ್ರಿಯೆುಂದ ಏನೊಂದನ್ನೂ ಸೃಷ್ಟಿಸಲಾಗುತ್ತಿರಲಿಲ್ಲ. ಸಂಪೂರ್ಣ ಖಾಲಿತನ ಎಂಬುದು ಅಳತೆಗೆ ಸಿಗುವಂಥದ್ದೇ ಅಲ್ಲ. ಮುಂದಕ್ಕೆ ದಾರಿ ಇನ್ನಷ್ಟು ತಗ್ಗಿನಲ್ಲಿ  ಇಳಿಯಿತು. ಅಲ್ಲಿ ಹರಿಯುತ್ತಿದ್ದ ತೊರೆಯೊಂದರ ಮಂಜುಳನಾದ ಏನೆಲ್ಲ ಸಂಭ್ರಮವನ್ನು ಹುಟ್ಟಿಸುತ್ತಿತ್ತು. ದಾರಿಗೆ ಅಡ್ಡಬಂದು ದಾಟಿಕೊಂಡ ಹೋಗುವ ತೊರೆ ಒಂದಿಷ್ಟು ಮರೆಯಾಗುತ್ತದೆ. ಒಮ್ಮೆ ರಸ್ತೆಯಾಚೆ, ಇನ್ನೊಮ್ಮೆ ಈಚೆ- ಹೀಗೆ ರಸ್ತೆಮತ್ತು ತೊರೆಗಳು ಪರಸ್ಪರ ಆಟವಾಡುತ್ತಿದ್ದಂತೆ ಭಾಸವಾಗುತ್ತಿತ್ತು. ನಕ್ಷತ್ರಗಳು ಅತ್ಯಂತ ಸಮೀಪವಾದಂತೆ- ಗುಡ್ಡದ ತುದಿಯಿಂದ ಇಣುಕಿ ನೋಡುತ್ತಿದ್ದಂತೆ ಭಾಸವಾಗುತ್ತಿದ್ದವು. ಇನ್ನೂ ಹಳ್ಳಿಗೆ ತಲುಪಲು ಬಹು ದೂರ ಕ್ರಮಿಸಬೇಕು. ಮುಂದುವರಿದಂತೆ ಕೆಲವು ನಕ್ಷತ್ರಗಳು ಗುಡ್ಡದ ಹಿಂದಕ್ಕೆ ಮರೆಯಾಗುತ್ತಿವೆ. ಶಬ್ದಗಳು ಮತ್ತು ಆಲೋಚನೆಗಳಿಗೆ ಎಡೆ ಇಲ್ಲದಂತೆ ಒಂಟಿಯಾಗಿ ಕೇವಲ ನೋಡುತ್ತ  ಗಮನಿಸುತ್ತಿರಬೇಕು. ಅಂದು ಅಲ್ಲಿನ ಆಳವಾದ ನಿಶ್ಯಬ್ದದಲ್ಲಿಇಳಿದು ಗಮನಿಸಿದಾಗ ಇದಿಲ್ಲದಿದ್ದರೆ ಅಸ್ತಿತ್ವ ಎಂಬುದಕ್ಕೆ ಒಂದು ಸೌಂದರ್ಯ, ಅರ್ಥವೇ ಇಲ್ಲ ಎಂಬುದು ಮನನವಾಯಿತು.
ತನಗೆ ತಾನೆ ಬೆಳಕಾಗುವುದು ಎಂದರೆ ಎಲ್ಲ ಬಗೆಯ ಅನುಭವವನ್ನು ನಿರಾಕರಿಸುವಂಥದ್ದು. ಅನುಭವ ಎಂಬುದು ಹೊರಕ್ಕೆ ಹೋಗಬೇಕಾದರೆ ಅನುಭವದ ಸಂದರ್ಭದಲ್ಲಿ  "ಅನುಭವಿಸುವವ' ಎಂಬಾತ ಇರಲೇಬಾರದು. ಆಳವಾಗಿದ್ದಿರಬಹುದು ಅಥವಾ ಮೇಲ್ನೋಟದಿಂದ ಕೂಡ "ಅನುಭವಿಸುವವ' ಇಲ್ಲವಾಗುವಂಥದ್ದು ಅತಿ ಮಹತ್ವದ ಸಂಗತಿ. ಅನುಭವವೇ ತಿಳಿವಳಿಕೆ, ಸಂಪ್ರದಾಯ; ಅನುಭವಿ ಅನುಭವಗಳನ್ನು ಸುಖ ಹಾಗೂ ದುಃಖ, ಶಾಂತ ಹಾಗೂ ಅಶಾಂತ ಎಂದು ತನ್ನ ಮೂಗಿನ ನೇರಕ್ಕೆ ವಿಂಗಡಿಸುತ್ತಾನೆ. ಇಂಥ ವ್ಯವಸ್ಥೆಯಲ್ಲಿ  ಆಗಲೆ ತಿಳಿದಿರುವ ಅನುಭವ ಮಾತ್ರ ಉಂಟಾಗುತ್ತಿರುತ್ತದೆ; ಅನುಭವಗಳಿಗೆ ಗುರುತು ಹಚ್ಚಲು ಅದೆಲ್ಲ  ಅವಶ್ಯವೂ ಆಗಿರುತ್ತದೆ; ಇದರ ಹೊರತಾಗಿ ಅಲ್ಲಿ  ಬೇರೇನೂ ಅನುಭವಗಳೇ ಆಗುತ್ತಿರುವುದಿಲ್ಲ. ಯಾವುದೇ ಅನುಭವ ಆರಂಭವಾದ ರೀತಿಯಲ್ಲಿಯೇ ಮುಕ್ತಾಯವಾಗದಿದ್ದಲ್ಲಿ  ಮನಸ್ಸಿನ ಮೇಲೊಂದು ಅಚ್ಚನ್ನು ನಿರ್ಮಿಸಿ ಬಿಡುತ್ತದೆ. ಪ್ರತಿಯೊಂದು ಸವಾಲಿಗೆ ಉಂಟಾಗುವ ಪ್ರತಿಕ್ರಿಯೆಯೇ ಅನುಭವ; ಆದರೆ ಪ್ರತಿಕ್ರಿಯೆ ಎಂಬುದು ತಿಳಿದ ಸಂಗತಿಯೇ ಆಗಿದ್ದಾಗ ಸವಾಲುಗಳು ತಮ್ಮ ಜೀವಂತಿಕೆ, ನಾವಿನ್ಯತೆಯನ್ನು ಕಳೆದುಕೊಳ್ಳತೊಡಗುತ್ತವೆ; ಆಗ ಅಲ್ಲಿ ತಿಕ್ಕಾಟ ಆರಂಭವಾಗುತ್ತದೆ. ಅಡಚಣೆಗಳು, ಮನೋವೈಕಲ್ಯಗಳು ಉಂಟಾಗುತ್ತವೆ.
ಪ್ರಶ್ನಿಸುವುದು, ಅಡಚಣೆ ಮಾಡುವುದು, ಎಚ್ಚರಿಸುವುದು, ತಿಳಿದುಕೊಳ್ಳುವುದೆಲ್ಲ ಸವಾಲಿನೊಂದಿಗೆ ಬರುವ ಸಹಜ ಗುಣ. ಆದರೆ ಸವಾಲು ಎಂಬುದೇ ಭೂತಕಾಲದ ಹಳೆಯ ಸರಕಾದಾಗ ವರ್ತಮಾನಕ್ಕೆ ಜಾಗವಿರುವುದಿಲ್ಲ. ಅನುಭವ ಜನ್ಯ ತೀರ್ಮಾನಗಳು ಪರಿಶೀಲಿಸುವ ಗುಣಕ್ಕೆ ಮಂಕು ಹಿಡಿಸುತ್ತವೆ.  ಪರಿಶೀಲನೆಯ ಸಾಧ್ಯತೆಗಳನ್ನು ಸೀಮಿತಗೊಳಿಸುತ್ತವೆ. ವಿಚಾರಣೆಗೆ ಇರುವ ಸ್ವಾತಂತ್ರ್ಯದಲ್ಲಿ ಜಾಣ್ಮೆ ಉಂಟಾಗುತ್ತದೆ. ನಾನು, ನನ್ನ ಹೊರತಾದದ್ದು, ಒಳಗಿನ ಹಾಗೂ ಹೊರಗಿನ ಎಂಬುದನ್ನು ಸ್ವತಂತ್ರವಾಗಿ ವಿಚಾರಣೆಗೊಳಪಡಿಸಲು ಜಾಣ್ಮೆ ಬೇಕು. ನಂಬಿಕೆಗಳು, ತತ್ವ, ಯಜಮಾನ್ಯತೆ ಎಂಬುದು ಸೂಕ್ಷ್ಮ  ಸಂವೇದನೆಯನ್ನೇ ತೊಲಗಿಸುತ್ತವೆ. ಇವೆಲ್ಲವುಗಳಿಂದ ಸ್ವತಂತ್ರವಾಗುವುದರಿಂದಲೇ ಸೂಕ್ಷ್ಮ ಸಂವೇದನೆ ಸಾಧ್ಯ. ಅನುಭವಿಸುವ ಆಸೆ ಎಂಬುದೇ ಪ್ರಜ್ಞೆಯ ಮೇಲ್‌ಸ್ತರದ ಘಟನೆ. ಅನುಭನ ಯಾವುದೇ ಇರಬಹುದು. ಪಂಚೇಂದ್ರಿ ಯದ್ದಿರಬಹುದು. ಮೇಲ್ಮಟ್ಟದ್ದಿರಬಹುದು, ಸುಖವಿರಬಹುದು ಅಥವಾ ಎಷ್ಟೇ ಆಳದ್ದೆಂದು ಪರಿಗಣಿಸಿರಬಹುದು. ಇದೆಲ್ಲ ವೂ ಆಲೋಚನೆ ಸೃಷ್ಟಿಸಿದ ಸರಕು. ಆಲೋಚನೆ ಎಂಬುದೇ ಬಹಿರೀಂದ್ರೀಯ ವ್ಯಾಪಾರ. ಆಳವಾಗಿರುವಂಥದ್ದನ್ನೆಕ್ರೂಡೀಕರಣ ಮಾಡದಿದ್ದರೂ ಆಲೋಚನೆ ಎಂದಮೇಲೆ ಮತ್ತೂ ಕೂಡ ಅದು ಬಹಿರೀಂದ್ರಯದ್ದೇ ಸರಕಾಗಿರುತ್ತದೆ. ಆಲೋಚನೆ ಎಂಬುದೇ ಹಳತಾಗಿತುವುದರಿಂದ ಅಲ್ಲಿ ಹೊಸತು ಎಂಬುದೇ ಸಾಧ್ಯವಿಲ್ಲ. ಇದಕ್ಕೆ ಸ್ವತಂತ್ರ ಎಂಬುದೂ ಇರುವುದಿಲ್ಲ. ಸ್ವತಂತ್ರ ಎಂಬುದು ಆಲೋಚನೆಗೆ ನಿಲುಕುವಂಥದ್ದಲ್ಲ. ಸ್ವತಂತ್ರ ಎಂಬುದು ಆಲೋಚನೆಗೂ ಮೀರಿ ಇರುವಂಥದ್ದಾಗಿದೆ. ಆಲೋಚನೆಯ ಎಲ್ಲ ಚಟುವಟಿಕೆಗಳೂ ಪ್ರೇಮವಲ್ಲ. ತನಗೆ ತಾನೆ ಬೆಳಕಾಗಿರುವುದೆಂದರೆ, ಉಳಿದೆಲ್ಲರಿಗೂ ಬೆಳಕಾಗಿರುವುದಾಗಿದೆ. ತಾನು ತನಗೆ ಬೆಳಕಾಗಿರುವುದೆಂದರೆ ಮನಸ್ಸನ್ನು ಸವಾಲು ಹಾಗೂ ಪ್ರತಿಕ್ರಿಯೆುಂದ ಮುಕ್ತವಾಗಿಸುವುದಾಗಿದೆ. ಆಗ ಮನಸ್ಸು ಸಂಪೂರ್ಣ ಎಚ್ಚರ, ಸಂಪೂರ್ಣ ಗಮನದಲ್ಲಿರುತ್ತದೆ. ಈ ರೀತಿಯ ಗಮನಕ್ಕೆ ಯಾವುದೇ ಕೇಂದ್ರ ಎಂಬುದು ಇರುವುದಿಲ್ಲ. ಯಾವ ಮನಸ್ಸು ಈ ಸ್ಥಿತಿಯಲ್ಲಿರುವುದೋ ಆಗ ಅದಕ್ಕೆ ಸೀಮೆ ಎಂಬುದು ಇರುವುದಿಲ್ಲ. ಎಲ್ಲಿಯ ತನಕ ಕೇಂದ್ರ "ನಾನು' ಎಂಬುದು ಇರುವುದೊ ಅಲ್ಲಿ ಸವಾಲು ಎಂಬುದು, ಪ್ರತಿಕ್ರಿಯೆ ಎಂಬುದು ಇರುತ್ತದೆ. ಹೊಂದಿಕೆಯಾಗುವ ಅಥವಾ ಹೊಂದಾಣಿಕೆಯಾಗದಂಥ ಸುಖ ಅಥವಾ ವಿಷಾದವಿರಬಹುದು. ಯಾವುದೇ ಬಗೆಯು ಸವಾಲು-ಪ್ರತಿಕ್ರಿಯೆಯು ಇರಬಹುದು. ಕೇಂದ್ರ ಇರುವ ಮನಸ್ಸು ಎಂದಿಗೂ ತನಗೆ ತಾನು ಬೆಳಕಾಗುವುದಿಲ್ಲ. ಅದರ ಬೆಳಕೇನಿತ್ತು, ಆಲೋಚನೆ ನಿರ್ಮಿಸಿದ ಕೃತಕ ಬೆಳಕಾಗಿರುತ್ತದೆ. ಅದಕ್ಕೆ ಹತ್ತಾರು ನೆರಳುಗಳು ಇರುತ್ತವೆ. ತೀವ್ರತರದ ಪ್ರೀತಿ ಎಂಬುದು ಆಲೋಚನೆಯ ನೆರಳಲ್ಲ. ಅದೇ ಬೆಳಕು. ಆ ಬೆಳಕು ನಮ್ಮದು ಅಲ್ಲ, ಇತರರದ್ದ ಅಲ್ಲ.
ದಾರಿ ಕ್ರಮೇಣ ಕಣಿವೆಯನ್ನು ಪ್ರವೇಶಿಸಿತು. ತೊರೆ ಹಾಗೆಯೇ ಹರಿದು ಸಮುದ್ರವನ್ನು ಸೇರಿತು. ಆದರೆ ಗುಡ್ಡಗಳು ಯಾವೊಂದು ಬದಲಾವಣೆ ಇಲ್ಲದೆ ಹಾಗೆಯೇ ಇದ್ದವು. ಗೂಬೆಗಳೆರಡು ಪರಸ್ಪರ ಕೂಗಿನಲ್ಲಿ  ಉತ್ತರಿಸುತ್ತಿದ್ದವು. ಆ ಕೂಗಿನ ನಡುವೆಯೂ ಒಂದು ನಿಶ್ಯಬ್ದದ ಅವಕಾಶವಿತ್ತು.



ಅಕ್ಟೋಬರ್ 25, par 1973\u3221?ಿತ್ತಳೆ ತೋಟದ ಬಂಡೆಯೊಂದರಲ್ಲಿ  ಕುಳಿತು ನೋಡಿದಾಗ ವಿಸ್ತರಿಸಿಕೊಂಡಿರುವ ಕಣಿವೆ ಮುಂದುವರಿದಂತೆ ಪರ್ವತಗಳ ಮಗ್ಗಲಿನಲ್ಲಿಮರೆಯಾದಂತೆ ಗೋಚರಿಸಿತ್ತು. ಅದು ನಸುಕಿನ ಜಾವ. ನೆರಳುಗಳು ಬೃಹದಾಕಾರವಾಗಿ ಹರವಿಕೊಂಡಿದ್ದವು. ಪುರುಲಿ ಹಕ್ಕಿಗಳು ತೀಕ್ಷ್ಣಬೇಡಿಕೆಯೊಂದಿಗೆ ಕೂಗುಹಾಕಿ ಕರೆಯುತ್ತಿವೆ. ಶೋಕತಪ್ತಪಾರಿವಾಳವೊಂದು ಬೆಳಗಿನ ಆ ಹೊತ್ತಿನಲ್ಲಿಯೇ ಮೃದು-ಮಧುರವಾಗಿ ಶೋಕಗೀತೆ ಹಾಡುವುದಕ್ಕೆ ಆರಂಭಿಸಿದೆ. ವಿನೋದ ಪಕ್ಷಿಯು ಆಕಾಶದಲ್ಲಿಹಾರುತ್ತಲೇ ತಕ್ಷಣ ಕೆಳಕ್ಕೆ ಬಂದು  ಮಕಾಡೆ ಬಿದ್ದುಮೇಲೇರುತ್ತ, ಸಂಭ್ರಮಿಸುತ್ತಿತ್ತು. ಮೈ ತುಂಬ ರೋಮ ತುಂಬಿಕೊಂಡಿದ್ದಹುಲಿ ಜೇಡವೊಂದು ಬಂಡೆಯ ಕೆಳಗಿಂದ ಹೊರಕ್ಕೆ ಇಣುಕಿತಾದರೂ ಬೆಳಗಿನ ವಾತಾವರಣ ಹಿತವೆನಿಸದೆ ಬಂದ ಹಾದಿಯಲ್ಲಿಯೇ ಹಿಂದಿರುಗಿತು. ಕಿತ್ತಳೆ ಮರಗಳನ್ನು ಉದ್ದಾನುದ್ದ ಸಾಲುಗಳಲ್ಲಿ ಅದೆಷ್ಟೊ ಎಕರೆ ಪ್ರದೇಶದಕ್ಕೆ ಇಲ್ಲಿಬೆಳೆಸಲಾಗಿದೆ. ಹೊಳೆಯುವ ಕಾಯಿ ಹಾಗೂ ಮೊಗ್ಗುಗಳಿಂದ ಇವುಗಳೆಲ್ಲ ಗಮನಸೆಳೆಯುತ್ತಿವೆ. ಒಂದೆ ಮರದಲ್ಲಿ ಹೂವು- ಹಣ್ಣುಗಳು  ಏಕಕಾಲದಲ್ಲಿ ಗಮನ ಸೆಳೆಯುತ್ತಿವೆ. ಮೊಗ್ಗಿನ ಪರಿಮಳ ಪೂರ್ಣ ಪ್ರಮಾಣದಲ್ಲಿ  ವ್ಯಾಪಿಸಿದ್ದು, ಬಿಸಿಲಿನ ಝಳಕ್ಕೆ ಇನ್ನಷ್ಟು  ತೀವ್ರವಾಗಿ ಒತ್ತಟ್ಟಿಗೆ ಬರುತ್ತಿದೆ. ಆಕಾಶ ಮೃದುವಾಗಿ ಅಚ್ಚ  ನೀಲಿಯಾಗಿದ್ದರೆ, ಬೆಳಗಿನ ಆ ಹೊತ್ತು ಬೆಟ್ಟಗುಡ್ಡಗಳು ಇನ್ನೂ ಸಂಪೂರ್ಣ ಎಚ್ಚೆತ್ತಿರಲಿಲ್ಲ.
ಶುದ್ಧ  ಹಾಗೂ ತಂಪಾದ ಗಾಳಿಯಿಂದ ಕೂಡಿದ ಸುಂದರ ಮುಂಜಾವು ಅದು. ಮಾನವನಿಂದ ಕಲುಶಿತವಾಗದ ಅಪರೂಪದ ಸೌಂದರ್ಯ ಇನ್ನೂ ಅಲ್ಲಿದೆ. ಉಡಗಳು  ಹೊರಕ್ಕೆ ಬಂದು ಸೂರ್ಯನ ಬಿಸಿಲು ಬೀಳುವ ಜಾಗದಲ್ಲಿ  ಕುಳಿತುಕೊಂಡವು. ಉದರ ಭಾಗವನ್ನು ಬೆಚ್ಚಗಾಗಿಸಿಕೊಳ್ಳಲು ಒಮ್ಮೆ ದೇಹವನ್ನು ಹಿಗ್ಗಿಸುತ್ತಿದ್ದವು. ಬಾಲ ಆಚೆ ಈಚೆ ತೊನೆಯುತ್ತಿತ್ತು. ಮೃದುವಾದ ಸೂರ್ಯ ರಶ್ಮಿ ಭೂಮಿಯ ಮೇಲೆ ಬೀಳುತ್ತಲೆ ಜೀವಜಾಲದ ಬೆಳಗಿನ ಸಂತೋಷ ಎಲ್ಲೆಡೆ ಅನುರಣಿಸುತ್ತಿತ್ತು. ಇಂಥದ್ದೊಂದು ಸೌಂದರ್ಯ ಇದ್ದಲ್ಲಿ ಧ್ಯಾನ ಸಾಧ್ಯವಾಗುತ್ತದೆ; ಸೌಂದರ್ಯ ವ್ಯಕ್ತವಾಗುತ್ತಿರಬಹುದು ಅಥವಾ ಅವ್ಯಕ್ತ ರೂಪದಲ್ಲಿದ್ದರೂ ಆದೀತು. ಅಭಿವ್ಯಕ್ತಿಗೊಂಡಾಗ ವಸ್ತುವಿನಲ್ಲಿ ರೂಪ ಪಡೆದಿರುತ್ತದೆ; ಅವ್ಯಕ್ತವಾಗಿರುವುದನ್ನು ಶಬ್ದದಲ್ಲಿ, ರೂಪದಲ್ಲಿ, ಬಣ್ಣದಲ್ಲಿ ಚಿತ್ರಿಸುವುದು ಸಾಧ್ಯವಿರುವುದಿಲ್ಲ. ಮೌನದಿಂದ ಹೊರಬಂದ ಅಭಿವ್ಯಕ್ತಿ ಅಥವಾ ಕ್ರಿಯೆಯಲ್ಲಿ ಸೌಂದರ್ಯ ಇರುತ್ತದೆ; ಅದೊಂದು ಪೂರ್ಣವಾಗಿರುವುದರಿಂದ ತಿಕ್ಕಾಟ, ಹೋರಾಟಗಳು ಅಲ್ಲಿಯೇ ನಿಲ್ಲುತ್ತವೆ.
ಕ್ರಮೇಣ ಉಡಗಳು ನೆರಳಿಗೆ ಸರಿಯುತ್ತಿದ್ದವು. ಸಿಹಿಯನ್ನು ಹೀರುವ ಹಕ್ಕಿಗಳು, ಜೇನು ಹುಳುಗಳು ಮೊಗ್ಗಿನ ಸುತ್ತ  ಹಾರಾಡಲು ಆರಂಭಿಸಿದವು.
ತೀವ್ರವಾದ ಪ್ರೀತಿ ಇಲ್ಲದಿದ್ದರೆ ಸೃಷ್ಟಿಕ್ರಿಯೆ ಸಾಧ್ಯವಾಗುವುದಿಲ್ಲ. ಸಂಪೂರ್ಣ ತ್ಯಾಗ ಎಂಬುದು ಅನಂತವಾದ ಪ್ರೇಮವನ್ನು ಸಾಕಾರಗೊಳಿಸುತ್ತದೆ. ಯಾವುದೊ ಒಂದು ಉದ್ದೇಶಕ್ಕಾಗಿನ ತ್ಯಾಗ ಒಂದು ಬಗೆ, ಯಾವುದೆ ಉದ್ದೇಶ ಇಲ್ಲದ, ಲೆಕ್ಕಾಚಾರ ಇಲ್ಲದ ತ್ಯಾಗ ಮತ್ತೊಂದು. ಯಾವುದಕ್ಕೆ ಕೊನೆ ಇರುತ್ತದೊ, ದಿಕ್ಕು ಇರುತ್ತದೊ ಅದಕ್ಕೆ ದೊಡ್ಡ ಭವಿಷ್ಯ ಇರುವುದಿಲ್ಲ; ಅದು ಕುಚೋದ್ಯ, ವ್ಯಾಪಾರ ಹಾಗೂ ಅಶ್ಲೀಲವಾಗಿ ಬಿಡುತ್ತದೆ. ಯಾವುದೆ ಉದ್ದೇಶ ಇಲ್ಲದ ತ್ಯಾಗಕ್ಕೆ ಅಂತ್ಯ ಅಥವಾ ಆರಂಭ ಇರುವುದಿಲ್ಲ. ಮನಸ್ಸಿನಲ್ಲಿರುವ ನಾನು, ನನ್ನದು ಎಂಬುದನ್ನು ತೆರವುಗೊಳಿಸುವುದೇ ಉದ್ದೇಶ ರಹಿತ ತ್ಯಾಗಕ್ಕೆ ಹೇತು. ಈ "ನಾನು' ಎಂಬುದು ಕೆಲವೊಂದು ಕರ್ಮದಲ್ಲಿ- ಕೆಲಸದಲ್ಲಿ ನಂಬಿಕೆ ಹಿತ, ಕ್ರೇಜ್‌ಗಳಲ್ಲಿ  ಕಳೆದುಹೋದಂತೆ ಕಂಡರೂ ಇನ್ನೊಂದು ರೀತಿಯಲ್ಲಿ  ಮಾರ್ಪಟ್ಟ ನಾನು ಇದ್ದೇ ಇರುತ್ತದೆ. ತತ್ವದ ರೂಪದಲ್ಲಿ  ಕಾರ್ಯ ಹಾಗೂ ತ್ಯಾಗದ ಹೆಸರಿನಲ್ಲಿ ನಾನು ಉಳಿದಿರುತ್ತದೆ. ತ್ಯಾಗ ಎಂಬುದು ಮನಸ್ಸಿನ ನಿರ್ಧಾರ (ವಿಲ್) ಅಲ್ಲ. ಮನಸ್ಸಿನ ನಿರ್ಧಾರ ಎಂಬುದರಲ್ಲೂ ನಾನು ಇರುತ್ತದೆ. ನಾನು ಎಂಬುದರ ಚಲನೆ ಸಮಪಾತಳಿಯಲ್ಲಿರಬಹುದು ಅಥವಾ ಲಂಬವಾಗಿದ್ದಿರಬಹುದು. ಯಾವುದೇ ದಿಕ್ಕಿನಲ್ಲೂ ಇದ್ದೀತು- ಅಷ್ಟಾದರೂ  ಕಾಲ ಮತ್ತು ವಿಷಾದದ ವ್ಯಾಪ್ತಿಯನ್ನು ಮೀರಿ ಇರುವುದಿಲ್ಲ. ಆಲೋಚನೆಯಿಂದಾಗಿ ಸ್ವಸ್ತವೊ, ಅಸ್ವಸ್ತವೊ, ತಾರ್ಕಿಕವೋ, ಅತಾರ್ಕಿಕವೊ ಅಥವಾ ಮೂರ್ಖತನದ್ದೋ ಯಾವುದೊ ಒಂದು ರೂಪ ಸಿದ್ಧವಾಗಬಹುದು. ಆದರೆ ತನ್ನ ಸಹಜವಾದ ಛಿದ್ರತೆಯಿಂದಾಗಿ, ಕುತೂಹಲ, ಉತ್ಕರ್ಷೆಯೆಲ್ಲವೂ ಅಂತಿಮವಾಗಿ ಸುಖ ಹಾಗೂ ಭಯವಾಗಿ ರೂಪಾಂತರಗೊಂಡಿರುತ್ತವೆ. ಹಾಗಾಗಿ ಈ ವ್ಯಾಪ್ತಿಯಲ್ಲಿ 'ನನ್ನ' ತ್ಯಾಗ ಎಂಬುದು ಭ್ರಮೆಯಷ್ಟೇ ಅಲ್ಲ, ಅದಕ್ಕೆ ಹೆಚ್ಚಿನ ಅರ್ಥವೂ ಉಳಿಯುವುದಿಲ್ಲ. ಇದೆಲ್ಲವನ್ನು ಸರಿಯಾಗಿ ಅರ್ಥವಿಸಿಕೊಳ್ಳುವುದರಲ್ಲಿಯೇ 'ನನ್ನ' ಸ್ವಾರ್ಥದ ಚಟುವಟಿಕೆಯ ಬಗೆಗಿನ  ಜಾಗೃತಿಯಾಗಿರುತ್ತದೆ. ಈ ಜಾಗೃತಿಯಲ್ಲಿ ಕೇಂದ್ರ ಅಥವಾ ಸ್ವಾರ್ಥ ಎಂಬುದು ಇರುವುದಿಲ್ಲ. ಸ್ವಾರ್ಥವನ್ನೂ, ತನ್ನನ್ನೂ ಅಭಿವ್ಯಕ್ತಿಸಬೇಕೆಂಬ ಅಭಿಲಾಶೆಯಿಂದಾಗಿ ಗೊಂದಲವು ಉಂಟಾಗುತ್ತದೆ. ಜೀವನ ಅರ್ಥಶೂನ್ಯವಾಗುತ್ತದೆ. ಅಸ್ತಿತ್ವ ಅಥವಾ ಇದೆಲ್ಲದರಲ್ಲಿ ಅರ್ಥ ಹುಡುಕುವುದೆಂದರೆ ಪ್ರತ್ಯೇಕತೆ ಅಥವಾ ಛಿದ್ರಗೊಳ್ಳುವ ಪ್ರಕ್ರಿಯೆಯ ಆರಂಭ. ಆಲೋಚನಾ ಪ್ರಕ್ರಿಯೆುಂದ ಜೀವನಕ್ಕೆ  ಸಾವಿರಾರು ಬಗೆಯ ಅರ್ಥ ಕಾಣಬಹುದು. ಅದರಲ್ಲಿ ಪ್ರತಿಯೊಂದೂ ಕೂಡ ತನ್ನದೇ ನೆಲೆಯಲ್ಲಿಅರ್ಥ ವಿವರಣೆ- ಸಮರ್ಥನೆಯನ್ನು ಹೇಳಬಹುದು ; ಇದಕ್ಕೆಲ್ಲ ಕೊನೆ ಎಂಬುದೇ ಇರುವುದಿಲ್ಲ. ಬದುಕುವುದರಲ್ಲೇ  ಸಂಪೂರ್ಣ ಅರ್ಥವಿರುತ್ತದೆ. ಹೊರತಾಗಿ ಜೀವನ ಎಂಬುದು ತಿಕ್ಕಾಟ, ಹೋರಾಟ, ಮಹತ್ವಾಕಾಂಕ್ಷೆಯ ಯುದ್ಧ ಭೂಮಿ, ಸ್ಪರ್ಧೆ, ಯಶಸ್ಸಿನ ಆರಾಧನೆ, ಸ್ಥಾನ-ಅಧಿಕಾರಕ್ಕಾಗಿ ಹುಡುಕಾಟವಾದರೆ ಜೀವನಕ್ಕೆ ಅರ್ಥವೇ ಉಳಿಯುವುದಿಲ್ಲ. ಅಭಿವ್ಯಕ್ತಿಯ ಉದ್ದೇಶವಾದರೂ ಏನು ? ಸೃಷ್ಟಿಶೀಲತೆ ಎಂಬುದು ಸೃಷ್ಟಿಯಾದ ವಸ್ತುವಿನಲ್ಲಿ ಇರುತ್ತದೆಯೇ? ಮನಸ್ಸು ಅಥವಾ ದೇಹದಿಂದಾದ ಸೃಷ್ಟಿ , ಎಷ್ಟೇ ಸುಂದರವಾಗಿರಲಿ ಅಥವಾ ಪ್ರಯೋಜನಕಾರಿಯಾಗಿದ್ದಿರಲಿ ಇದರ ಹಿಂದೆಯೇ ಮನುಷ್ಯ ಜೀವನ ಗಿರಕಿಹೊಡೆಯುತ್ತಿರಬೇಕೆ ? ಸ್ವಾರ್ಥ ತ್ಯಾಗ ಎಂಬುದಕ್ಕೆ ಅಭಿವ್ಯಕ್ತಿ ಅನಿವಾರ್ಯವಾಗುತ್ತದೆಯೇ ? ಅಭಿವ್ಯಕ್ತಿಯ ಅವಶ್ಯಕತೆ ಅನಿವಾರ್ಯತೆ ಇದ್ದಲ್ಲಿ ಅದು ಸೃಷ್ಟಿಶೀಲತೆಯ ಪ್ರೇಮವೇ ? ಎಲ್ಲಿಯ ತನಕ ಸೃಷ್ಟಿ ಹಾಗೂ ಸೃಷ್ಟಿಸುವವ ಎಂಬ ವಿಭಜನೆ ಇರುತ್ತದೋ ಅಲ್ಲಿಯ ತನಕ ಸೌಂದರ್ಯ , ಪ್ರೇಮ ಎಂಬುದು ಇರುವುದಿಲ್ಲ. ನೀವು ಬಣ್ಣ ಅಥವಾ ಕಲ್ಲಿನಲ್ಲಿ ಅದ್ಭುತವಾದದ್ದೊಂದನ್ನು ಸೃಷ್ಟಿಸಬಹುದು ; ಒಂದು ವೇಳೆ ನಿಮ್ಮ ದೈನಂದಿನ ಜೀವನ ಆಧ್ಯಾತ್ಮಕ್ಕೆ ಸೃಷ್ಟಿಕ್ರಿಯೆ ವಿರುದ್ಧವಾಗಿದ್ದಲ್ಲಿನೀವು ಸೃಷ್ಟಿಸಿದ್ದು ಇತರರ ಹೊಗಳಿಕೆಗಾಗಿ , ಕೊಳಕು ಉದ್ದೇಶಕ್ಕಾಗಿಯೇ ಆಗಿರುತ್ತದೆ. ಜೀವನದ ಸಹಜತೆಯಲ್ಲಿಯೇ  ಬಣ್ಣ , ಸೌಂದರ್ಯ ಹಾಗೂ ಅಭಿವ್ಯಕ್ತಿ ಕೂಡ ಇರುತ್ತದೆ. ಇದನ್ನು ಹೊರತುಪಡಿಸಿ ಬೇರೇನೂ ಬೇಕಾಗಿರುವುದಿಲ್ಲ.
ನೆರಳುಗಳು ಕುಗ್ಗುತ್ತಿದ್ದವು. ಪುರುಲು ಹಕ್ಕಿ ಮೌನವಾಗಿತ್ತು. ಅಲ್ಲಿ ಬಂಡೆ, ಹೂವು ಅರಳಿ ನಿಂತ ಮರ, ಕಾು,  ಸುಂದರ ಗುಡ್ಡಗಳು ಮತ್ತು ಅಗಾಧ ಭೂಮಿ ಮಾತ್ರ ಇತ್ತು.




ಅಕ್ಟೋಬರ್ 29- par 1973\u3221?ಿತ್ತಳೆ ತೋಟಗಳಿರುವ ಕಣಿವೆಯಲ್ಲಿಇದು ಇನ್ನೊಂದು ದಿನ. ವಿಶೇಷವಾಗಿ ತೋಟವನ್ನುಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗಿತ್ತು. ಎಳೆಯ ಮರಗಳ ಸಾಲು ಒಂದಾದ ನಂತರ ಒಂದು ಬಿಸಿಲಿನಲ್ಲಿ  ಮಿಂಚುತ್ತಿದ್ದವು. ಭೂಗುಣ ಒಳ್ಳೆಯದಾಗಿದೆ, ಉತ್ತಮ ರೀತಿಯಲ್ಲಿ ಗೊಬ್ಬರ- ನೀರನ್ನು ಕೊಟ್ಟು ಮರಗಳನ್ನು ಬೆಳೆಸಲಾಗಿದೆ. ಸ್ವಚ್ಚ ಆಕಾಶವುಳ್ಳ ಸುಂದರ ಮುಂಜಾವು ಅದು. ಬೆಚ್ಚನೆಯ ಗಾಳಿ ಮೈಯನ್ನು ನೇವರಿಸುತ್ತಿತ್ತು. ಕಂಟಿಗಳಲ್ಲಿ ಪುರುಲು ಹಕ್ಕಿಗಳು ತೀವ್ರವಾಗಿ ಪರಸ್ಪರರನ್ನು ಕರೆದುಕೊಳ್ಳುತ್ತಿವೆ; ಗುಬ್ಬಿಯ ಮೇಲೆ ಕಣ್ಣಿಟ್ಟಿರುವ ಗಿಡುಗವೊಂದು ಮೇಲೆ ಸುಳಿದಾಡುತ್ತಿದೆ. ಬಹಳ ಹೊತ್ತು ರೆಕ್ಕೆ ಬಡಿಯದೆ ಚಲಿಸುತ್ತಿದ್ದ ಗಿಡುಗ, ನಂತರ ಕೆಳಕ್ಕೆ ಬಂದು ಸಮೀಪದ ಮರದ ಟೊಂಗೆಯೊಂದರಲ್ಲಿ ಕುಳಿತು ತೂಕಡಿಸತೊಡಗಿತ್ತು. ಅದು ಎಷ್ಟೊಂದು ಸಮೀಪದಲ್ಲಿತ್ತೆಂದರೆ ಅದರ ಹರಿತವಾದ ಉಗುರುಗಳು, ಸುಂದರವಾದ ರೆಕ್ಕೆ, ಬಲವಾದ ಕೊಕ್ಕು ಸ್ಪಷ್ಟವಾಗಿ ಗೋಚರಿಸುತ್ತಿತ್ತು; ಗಿಡುಗ ಕೈಗೆ ಸಿಗುವಷ್ಟು ಹತ್ತಿರವಾಗಿತ್ತು. ಬೆಳಗ್ಗೆ ಇದಕ್ಕೂ ಮೊದಲು ಅಲ್ಲಿನ ಸೂಕ್ಷ್ಮ ಸಸ್ಯಗಳ ಪೊದೆಯಿಂದ ಸಣ್ಣ ಹಕ್ಕಿಗಳು ಹೆದರಿ ಕೂಗಾಡುತ್ತಿದ್ದವು. ಪೊದೆಯ ಕೆಳ ಭಾಗದಲ್ಲಿ ತೀವ್ರ ಕಂದು ಬಣ್ಣದ  ಕಟ್ಟುಗಳುಳ್ಳ ಎರಡು ಅಜಗರಗಳು ಪರಸ್ಪರ ಸುತ್ತಿಕೊಂಡು ಇದ್ದವು. ಅವುಗಳ ಸಮೀಪವೇ ಹೋದರೂ ಅಲ್ಲೊಬ್ಬ ಮನುಷ್ಯ ಬಂದಿದ್ದಾನೆ ಎಂಬ ಅರಿವೇ ಅವುಗಳಿಗಿರಲಿಲ್ಲ. ಅವುಗಳು ಪೊದೆಯ ಎತ್ತರದ ದಿಮ್ಮಿಯಲ್ಲಿ ದೊಡ್ಡ ಕಣ್ಣುಗಳೊಂದಿಗೆ ಇಲಿಗಳಿಗಾಗಿ ಕಾಯುತ್ತಿವೆ. ರೆಪ್ಪೆಗಳಿಲ್ಲದ ಕಾರಣ ಮುಖದಲ್ಲಿ ಕಣ್ಣು ಮಿಂಚುತ್ತಿತ್ತು. ರಾತ್ರಿ ಇಡೀ ಆ ಭಾಗದಲ್ಲಿ ಅವು ಸುತ್ತಾಡುತ್ತಿದ್ದಿರಬೇಕು- ಇದೀಗ ಪೊದೆಯೊಳಕ್ಕೆ ಸೇರಿಕೊಂಡಿವೆ. ಇದು ಅವುಗಳ ವಾಸಸ್ಥಳವಾಗಿದ್ದು, ಅಲ್ಲಿಯೇ ಹಲವಾರು ಬಾರಿ ಕಾಣಿಸಿಕೊಂಡಿವೆ. ಅವುಗಳಲ್ಲೊಂದನ್ನು ಎತ್ತಿ ಹಿಡಿದುಕೊಂಡಾಗ ಅವು ತೋಳಿಗೆ ಸುತ್ತಿಕೊಂಡಿದ್ದು, ತಂಪಾದ ಅನುಭವ ಆಗುತ್ತಿತ್ತು. ಇಲ್ಲಿರುವ ಎಲ್ಲ ಜೀವಿಗಳಿಗೂ ಪ್ರಕೃತಿಯಲ್ಲಿ ಅವುಗಳದ್ದೇ ಆದ ಹೊಂದಾಣಿಕ ಇದ್ದಂತೆ ತೋರುತ್ತದೆ. ಅವರದ್ದೇ ಆದ ಶಿಸ್ತುಗಳು, ಆಟ, ಚಲನೆಯ ಭಂಗಿಗಳು ಇರುತ್ತವೆ.
ಭೌತಿಕವಾದ- ವಸ್ತುಗಳಲ್ಲದೆ ಇಲ್ಲಿ  ಬೇರೇನೂ ಇಲ್ಲ ಎಂಬಂಥದ್ದು, ಈಗಲೂ ಇದೆ. ಇದಕ್ಕೆ ಬಡವ ಶ್ರೀಮಂತ ಎಂಬ ಯಾವ ಬೇಧವಿಲ್ಲ.  ಹಿಂದಿನಿಂದಲೂ ಮಾನವರಲ್ಲಿ ಇದು ಇತ್ತು ಕೂಡ. ಜಗತ್ತಿನಲ್ಲಿ ಭೌತವಾದದಲ್ಲೆ ತನ್ನನ್ನು ಸಮರ್ಪಿಸಿಕೊಂಡ ಬಹುದೊಡ್ಡ ಸಮುದಾಯವೇ ಇದೆ; ಆ ಸಮಾಜದ ಮೂಲ ಹಂದರವೇ ಭೌತವಾದದ ಸಮೀಕರಣದಲ್ಲಿ, ಪರಿಣಾಮದಲ್ಲಿ ನಿಂತಿದೆ. ಇದರ ಹೊರತಾಗಿ ಇರುವ ಇನ್ನೊಂದು ಸಮುದಾಯವು ಕೂಡ ಭೌತವಾದದಲ್ಲೆ ಇದ್ದರೂ ತನಗೆ ಅವಶ್ಯ ಎನಿಸಿದಾಗ, ಅದನ್ನು ಬಳಸಿ ಬೇಡ ಎನಿಸಿದಾಗ, ತಾರ್ಕಿಕ ಕಾರಣ ಕೊಟ್ಟು ದೂರವಾಗುತ್ತದೆ. ಪರಿಸರದ ಬದಲಾವಣೆಯಾದಾಗಲೆಲ್ಲ- ಅದು ಹಿಂಸಾತ್ಮಕ, ನಿಧಾನಗತಿ, ಕ್ರಾಂತಿಕಾರಿ ಅಥವಾ ಮಾರ್ಪಾಡಿನ ಮೂಲಕವೊ ಇದ್ದೀತು- ಮನುಷ್ಯ ಬದುಕಿನ ಸಂಸ್ಕಾರಕ್ಕನುಗುಣವಾಗಿ ಬದಲಾಗುತ್ತ ಬಂದಿದ್ದಾನೆ. ಮನುಷ್ಯನೂ ಒಂದು ವಸ್ತುವಾಗಿದ್ದಾನೆ ಎಂಬ  ವಾದ. ಇನ್ನೊಂದೆಡೆ ಮನುಷ್ಯ ಒಂದು ಶಕ್ತಿಯ ಭಾಗವಾಗಿದ್ದಾನೆ ಎಂಬ ವಾದ ಬಹಳ ಹಿಂದಿನಿಂದಲೂ  ಇರುವಂಥದ್ದು. ಈ ವಿಭಜನೆ ಮಾನವನಲ್ಲಿ ಅದೆಷ್ಟೊ ದುರಂತಗಳನ್ನು ಗೊಂದಲ ಹಾಗೂ ಭ್ರಮೆಯನ್ನುಉಂಟು ಮಾಡಿದೆ.
ಆಲೋಚನೆಯೇ ಭೌತಿಕ. ಎಷ್ಟೇ ಆಳವಾಗಿರಲಿ, ಮೇಲ್ನೋಟದ್ದಾಗಿರಲಿ ಅದರ ಚಟುವಟಿಕೆಯೇ ಭೌತವಾದವಾಗಿರುತ್ತದೆ. ಆಲೋಚನೆಯನ್ನು ಅಳೆಯಬಹುದಾಗಿದ್ದರಿಂದ ಅದು ಕಾಲ. ಆಲೋಚನೆಯ ಈ ಪರಿಮಿತಿಯಲ್ಲಿ ಪ್ರಜ್ಞೆಯೂ ಭೌತಿಕವಾಗಿರುತ್ತದೆ. ಪ್ರಜ್ಞೆ ಎಂಬುದೆ ಅದರೊಳಗಿನ ತಿರುಳು ; ತಿರುಳೇ ಪ್ರಜ್ಞೆ. ಅವುಗಳನ್ನು ಪ್ರತ್ಯೇಕಿಸುವುದು ಸಾಧ್ಯವಿಲ್ಲ. ಹಲವು ಬಗೆಯ ಸಾರಾಂಶಗಳು, ತಿರುಳುಗಳು ಆಲೋಚನೆಯ ಹಂದರದಲ್ಲಿ ಒಂದಾಗಿರುತ್ತವೆ; ಭೂತವನ್ನು ವರ್ತಮಾನದಲ್ಲಿ ಬದಲಿಸಿ ಭವಿಷ್ಯವನ್ನು ಹೆಣೆಯುವ ಪ್ರಕ್ರಿಯೆ ನಡೆಯುತ್ತಿರುತ್ತದೆ- ಅದುವೇ ಕಾಲ. ಪ್ರಜ್ಞೆ  ಎಂಬುದು  ವಿಭಿನ್ನ ದಿಕ್ಕಿನಲ್ಲಿವಿಸ್ತರಿಸುವ ಚಲನೆಯೇ ಕಾಲವಾಗಿರುತ್ತದೆ. ಆಲೋಚನೆ ಎಂಬುದು ನೆನಪು, ಅನುಭವ ಮತ್ತು ತಿಳಿವಳಿಕೆಯಾಗಿದೆ. ಇದೇ ನೆನಪುಗಳು, ಅವುಗಳ ಪ್ರತಿಬಿಂಬ, ಅದರ ನೆರಳುಗಳು ಎಂಬುದೇ ಸ್ವಾರ್ಥ ಅಥವಾ ನಾನು, ನಾನಲ್ಲದ್ದು, ನಾವು ಮತ್ತು ಅವರು ಎಂಬುದಾಗಿದೆ. ಸ್ವಾರ್ಥದ ವಿಭಿನ್ನ ಗುಣ ರೂಪಾಂತರದಲ್ಲಿಯೇ  ಇಲ್ಲೊಂದು ವಿಭಜನೆಯ ಅವಶ್ಯಕತೆ ಉಂಟಾಗುತ್ತದೆ. ನಾನು ಎಂಬುದು ನೇರವಾಗಿ ಸ್ವಾರ್ಥದ ವ್ಯವಸ್ಥೆ, ಯಾವುದೇ ಒಂದು ತತ್ವ ಅಥವಾ ನನ್ನ ಬಿಟ್ಟು ಕರ್ಮ, ಧಾರ್ಮಿಕ, ಧರ್ಮನಿರಪೇಕ್ಷ  ಎಂಬುದಾಗಿ ನಾನಾ ಬಗೆಯಲ್ಲಿ ಗುರುತಿಸಿಕೊಳ್ಳಬಹುದಾಗಿದ್ದು, ಗುರುತಿಸಿಕೊಳ್ಳುತ್ತದೆ ಕೂಡ- ಆದರೂ ಇದೆಲ್ಲ ಸ್ವಾರ್ಥವೇ ಆಗಿದೆ. ಇದರ ಸುಖ ಹಾಗೂ ಭಯಗಳು ಹೇಗೆ ಸ್ವಯಂಕೃತವೊ ಹಾಗೇ ನಂಬಿಕೆಗಳೂ ಕೂಡ. ಆಲೋಚನೆ ತನ್ನಮೂಲ  ರೂಪದಲ್ಲೆ ಗುಣದಲ್ಲಿ ಪ್ರತ್ಯೇಕತೆ, ಖಂಡಗಳನ್ನು ಪ್ರತಿಪಾದಿಸುತ್ತದೆ. ಛಿದ್ರತೆ- ಖಂಡಗಳು, ರಾಷ್ಟ್ರೀಯತೆ, ಜಾತಿವಾದ, ಸಿದ್ದಾಂತಗಳ ನಡುವೆ ತಿಕ್ಕಾಟ ಯುದ್ಧಗಳು ನಡೆಯುತ್ತಲೇ ಇರುತ್ತವೆ. ಸ್ವಾರ್ಥವನ್ನು ಸಂಪೂರ್ಣವಾಗಿ ತ್ಯಾಗ ಮಾಡದಿದ್ದಲ್ಲಿ ಭೌತಿಕವಾದಿಯಾದ ಈ ಮಾನವ ಜನಾಂಗ ತನ್ನನ್ನು ತಾನು ಸಂಪೂರ್ಣ ನಾಶಗೊಳಿಸಿಕೊಳ್ಳುವುದರಲ್ಲಿಎರಡು ಮಾತೆ ಇಲ್ಲ. ಸ್ವಾರ್ಥದ ತ್ಯಾಗ ಎಂದಿಗೂ ಅತಿ ಮಹತ್ವದ ಸಂಗತಿ. ಕೇವಲ ಇಂಥದ್ದೊಂದು ಕ್ರಾಂತಿಯ ಮೂಲಕವೇ ಹೊಸ ಸಮಾಜವನ್ನು ಸಂಘಟಿಸುವುದು ಸಾಧ್ಯ. ಸ್ವಾರ್ಥ ತ್ಯಾಗವೇ ಪ್ರೇಮ, ತೀವ್ರ ತರದ ಪ್ರೀತಿ; ಜಗತ್ತಿನ ಎಲ್ಲ ವಸ್ತುಗಳ ಬಗ್ಗೆಯೂ ಅಲ್ಲಿ ಪ್ರೀತಿ ಇರುತ್ತದೆ. ಅಲ್ಲಿ ಬಡತನ, ಕೋಟಲೆಗಳು, ನಿರಾಶ್ರಿತರು, ಭೌತಿಕವಾದಿಗಳು, ನಂಬಿಕಸ್ತರು ಎಲ್ಲರ ಬಗ್ಗೆಯೂ ಪ್ರೇಮ ಇರುತ್ತದೆ. ಪ್ರೇಮ ಎಂಬುದು ಕೇವಲ ಭಾವನಾತ್ಮಕ ಗೊಂದಲವಲ್ಲ. ವಿಲಾಸವೂ ಅಲ್ಲ; ಇದು ಸಾವಿನಂತೆ ತೀವ್ರ ಹಾಗೂ ಅಂತಿಮವಾಗಿರುತ್ತದೆ.
ನಿಧಾನವಾಗಿ ಸಮುದ್ರದಿಂದ ಮಂಜು ಪಶ್ಚಿಮ ಘಟ್ಟದ ಕಡೆಗೆ ಪ್ರವಹಿಸುತ್ತಿತ್ತು. ಇದು ತನ್ನಿಂದ ತಾನೆ ಗುಡ್ಡವನ್ನು ಏರಿ ಕಣಿವೆಯಲ್ಲಿ ಇಳಿದು ಇದೀಗ ಇಲ್ಲಿಗೆ ಬರುತ್ತಿತ್ತು. ಇನ್ನೇನು ರಾತ್ರಿ ಸಮೀಪಿಸುತ್ತಿದ್ದಂತೆ ಇದೆಲ್ಲ ತಂಪಾಗುತ್ತದೆ. ಅಲ್ಲಿ ನಕ್ಷತ್ರವಿರುವುದಿಲ್ಲ. ಸಂ]ರ್ಣ ಮೌನ. ಇದು ಆಲೋಚನೆ ನಿರ್ಮಿಸಿದ ಮೌನವಲ್ಲ. ಆಲೋಚನೆ ಸೃಷ್ಟಿಸುವ ಮೌನದಲ್ಲಿ ಸ್ಥಳಾವಕಾಶವೇ ಇರುವುದಿಲ್ಲ.




* ಮಾಲಿಬು
ಮುಂದಿನ ಐದು ಡೈರಿಗಳನ್ನು, 18 ತಿಂಗಳ ನಂತರ ಕ್ಯಾಲಿಫೋರ್ನಿಯಾದ ಮಾಲಿಬುವಿನಲ್ಲಿ  ದಾಖಲಿಸಿದ್ದಾರೆ.
ಏಪ್ರಿಲ್ 1, 1975
ಆ ನಸುಕಿನಲ್ಲಿಯೇ ಸೂರ್ಯನ ಬಿಸಿಲು ಸುಡುತ್ತಿತ್ತು. ಅಲ್ಲೆಲ್ಲೂ ಗಾಳಿಯ ಸುಳಿವು ಇದ್ದಿರಲಿಲ್ಲ. ತರಗಲೆ ಕೂಡ ಹಂದಾಡುತ್ತಿರಲಿಲ್ಲ. ಪುರಾತನವಾದ ಆ ದೇವಾಲಯದಲ್ಲಿ ವಾತಾವರಣ ತಂಪಾಗಿ ಆಹ್ಲಾದಕರವೆನಿಸುತ್ತಿತ್ತು; ಬಂಡೆಯ ಕಲ್ಲು ಹಾಸಿನ ಮೇಲೆ ಬರಿಗಾಲ ನಡಿಗೆ, ಅವುಗಳ ಆಕಾರ ಮತ್ತು ಏರಿಳಿತವನ್ನು ದಾಖಲಿಸುತ್ತಿತ್ತು. ಸಾವಿರಾರು ವರ್ಷಗಳ ಇತಿಹಾಸದಲ್ಲಿ ಅದೆಷ್ಟೊ ಸಾವಿರ ಜನರು ಅಲ್ಲಿ ನಡೆದಾಡಿದ್ದಿರಬೇಕು. ಬೆಳಗಿನ ಸೂರ್ಯನ ಪ್ರಖರತೆಯನ್ನು ಅನುಭವಿಸಿ ದೇವಸ್ಥಾನದ ಒಳಕ್ಕೆ ಹೋದರೆ ಅಲ್ಲಿ ಕತ್ತಲು. ಆ ಹೊತ್ತಿನಲ್ಲಿ ಅಲ್ಲಿಯ ವರಾಂಡದಲ್ಲಿ ಕೆಲವೇ ಜನರು ಕಾಣಿಸುತ್ತಿದ್ದರು. ಒಳಕ್ಕೆ ಹೋದಂತೆ ಮತ್ತೂ ಕತ್ತಲು ಆವರಿಸಿತ್ತು. ಇಕ್ಕಟ್ಟಿನ ಮಾರ್ಗವನ್ನು ದಾಟಿದರೆ ದೊಡ್ಡ ಹಜಾರ- ಅದರ ನಂತರ ಗರ್ಭಗೃಹವಿದೆ. ಅಲ್ಲಿ ಹೋಗುತ್ತಲೆ ಕೆಲವು ಶತಮಾನಗಳಿಂದ ಇದ್ದ ಧೂಪ ಹಾಗೂ ಹೂವಿನ ಪರಿಮಳ ಅನುಭವಕ್ಕೆ ಬರುತ್ತದೆ. ಸುಮಾರು ನೂರು ಬ್ರಾಹ್ಮಣರು ಸ್ನಾನ ಮಾಡಿ, ಬಿಳಿಯ ಪಂಚೆಯನ್ನುಟ್ಟು ಮಂತ್ರ ಹೇಳುತ್ತಿದ್ದಾರೆ. ಸಂಸ್ಕೃತವು ಆಳವಾಗಿ ಪ್ರತಿಧ್ವನಿಸುವ ಶಕ್ತಿಯುತವಾದ ಭಾಷೆ. ನೂರು ಜನರು ಮಂತ್ರ ಹೇಳುತ್ತಿದ್ದರೆ ಪುರಾತನ ದೇವಾಲಯದ ಗೋಡೆಗಳು ಕಂಪಿಸುವಂತೆ ಭಾಸವಾಗುತ್ತಿದೆ. ಧ್ವನಿಯಲ್ಲಿ ಹೊರ ಸೂಸುವ ಗೌರವ ಭಾವವನ್ನು, ಆ ಕ್ಷಣದ ಪಾವಿತ್ರ್ಯವನ್ನು ಶಬ್ದಗಳಲ್ಲಿ ಹೇಳುವುದು ಸಾಧ್ಯವಿಲ್ಲ. ಮಂತ್ರದಲ್ಲಿನ ಶಬ್ದಗಳಲ್ಲ, ಅದರ ಧ್ವನಿ ಇಲ್ಲಿ ಅಷ್ಟೊಂದು ಅಪರಿಮಿತವಾದ ಅವಕಾಶವನ್ನು ಕಲ್ಪಿಸಿದೆ. ಸಾವಿರಾರು ವರ್ಷದಿಂದ ಪ್ರತಿಧ್ವನಿಸುತ್ತಿರುವ ಧ್ವನಿಗಳು ಗುಡಿಯ ಗೋಡೆಯನ್ನೂ ಮೀರಿದ ಆಂತರಿಕ ಅವಕಾಶವನ್ನು ನಿರ್ಮಿಸಿದೆ. ಮಂತ್ರದ ಶಬ್ದದೊಳಗಿನ ಅರ್ಥವಾಗಲಿ ಅಥವಾ ಉಚ್ಚಾರಣೆಯ ಸ್ಪಷ್ಟತೆಯೂ ಅಲ್ಲ. ಕಪ್ಪಾಗಿ ಅಚ್ಚಾಗುವ ದೇವಾಲಯದ ಗೋಡೆಯೂ ಅಲ್ಲ.
ಕೇವಲ ಧ್ವನಿ ತರಂಗದ ಗುಣದಿಂದಾಗಿಯೇ ಗುಡಿ ಹಾಗೂ ಮನಸ್ಸಿನ ಚೌಕಟ್ಟನ್ನೂ ಒಡೆದು ಹಾಕುವ ಇಷ್ಟು ಪ್ರಭಾವಿ ವಾತಾವರಣ ಉಂಟಾಗಿತ್ತು. ಹಕ್ಕಿಯ ಹಾಡು, ದೂರದಲ್ಲಿ ಕೇಳುವ ಕೊಳಲು, ಎಲೆಗಳ ನಡುವೆ ಬರುವ ತಂಗಾಳಿ ಇವುಗಳೆಲ್ಲವೂ ಮಾನವ ತನಗಾಗಿ ನಿರ್ಮಿಸಿದ ಗೋಡೆಗಳನ್ನು ಒಡೆದು ಹಾಕುವಷ್ಟು ಪ್ರಭಾವಿಯಾಗಿರುತ್ತವೆ.
ಭವ್ಯವಾದ ಚರ್ಚುಗಳಲ್ಲಿ, ಸುಂದರವಾದ ಮಸೀದಿಗಳಲ್ಲಿ ಅಲ್ಲಿನ ಪವಿತ್ರ ಗ್ರಂಥಗಳ ಸುಶ್ರಾವ್ಯ ಪಠಣದ ಧ್ವನಿಯೇ ಸೌಂದರ್ಯ ಹಾಗೂ ವಿಷಾದ ಅನುಭವದ ಹೃದಯವನ್ನು ತೆರೆಯುತ್ತದೆ. ಅವಕಾಶ ಇಲ್ಲದಿದ್ದರೆ ಅಲ್ಲಿ ಸೌಂದರ್ಯ ಇರುವುದಿಲ್ಲ. ಸ್ಥಳಾವಕಾಶವೇ ಇಲ್ಲದಾಗ ನಿಮ್ಮಲ್ಲಿ ಕೇವಲ ಗೋಡೆ, ಅಳತೆಗೋಲು ಮಾತ್ರ ಉಳಿದಿರುತ್ತದೆ. ಸ್ಥಳಾವಕಾಶ ಇಲ್ಲದಲ್ಲಿ ಆಳ ಇರುವುದಿಲ್ಲ; ಸ್ಥಳಾವಕಾಶ ಇಲ್ಲದಿದ್ದರೆ ಅಲ್ಲ ಕೇವಲ ಆಂತರಿಕ ಹಾಗೂ ಬಾಹ್ಯ ಬಡತನ ಮಾತ್ರ ಇರುತ್ತದೆ.
ನಿಮ್ಮ ಮನಸ್ಸಿನಲ್ಲಿ ತೀರಾ ಸಣ್ಣದಾದ ಸ್ಥಳಾವಕಾಶ ಇದೆ; ಅದರಲ್ಲೂ ಶಬ್ದಗಳನ್ನು ಕಿಕ್ಕಿರಿದು ಪೋಣಿಸಲಾಗಿದೆ. ನೆನಪುಗಳು, ತಿಳಿವಳಿಕೆ, ಅನುಭವ ಹಾಗೂ ಸಮಸ್ಯೆಗಳಿಂದ ತುಂಬಿ ಹೋಗಿರುತ್ತದೆ. ಇದೆಲ್ಲದರ ನಡುವೆ ಮನಸ್ಸಿನಲ್ಲಿ ಸೂಜಿ ಮೊನೆಯಷ್ಟೂ ಸ್ಥಳಾವಕಾಶ ಎಂಬುದು ಉಳಿದಿರುವುದಿಲ್ಲ. ಅಲ್ಲಿ ಇರುವುದೆಂದರೆ ಗಿಜಿಗಿಜಿಯಾಗಿ ಹುಟ್ಟಿಕೊಳ್ಳುವ ಆಲೋಚನೆಗಳು ಮಾತ್ರ. ಅದೊಂದು ರೀತಿಯಲ್ಲಿ ಹೇಳಬೇಕೆಂದರೆ ನಮ್ಮಲ್ಲಿನ ಮ್ಯುಜಿಯಂ, ಗ್ರಂಥಾಲಯದಂತೆ ಅಲ್ಲಿನ ಕಪಾಟುಗಳೆಲ್ಲ ತುಂಬಿ ಹೋಗಿರುತ್ತವೆ. ಅಷ್ಟಾದ ನಂತರ ಧಾರ್ಮಿಕ ಮತ್ತಿತರ ಮನರಂಜನೆಗಳು ಒಂದಿಷ್ಟು ಜಾಗವನ್ನು ಆವರಿಸಿರುತ್ತವೆ. ಅದೂ ಇಲ್ಲದಿದ್ದರೆ, ಕುಚೋದ್ಯ ಅಥವಾ ನೋವಿನ ಗೋಡೆಯೊಂದನ್ನು ನೀವೆ ಅಲ್ಲಿ ಕಟ್ಟಿಕೊಂಡಿರುತ್ತೀರಿ. ಆಂತರಿಕ ಅಥವಾ ಬಾಹ್ಯದಲ್ಲೂ ಕೂಡ ಒಂದಿಷ್ಟು ಜಾಗ ಎಂಬುದು ಇಲ್ಲದೆ ಹೋದಲ್ಲಿ ನೀವು ಹಿಂಸೆಗಿಳಿಯುತ್ತೀರಿ. ಅಸಹ್ಯವಾಗಿ ವರ್ತಿಸುತ್ತೀರಿ.
ಪ್ರತಿಯೊಂದಕ್ಕೂ ಬದುಕುವುದಕ್ಕೆ ಆಡುವುದು, ಪಠಿಸುವುದಕ್ಕೆ ಸ್ಥಳಾವಕಾಶ ಎಂಬುದು ಬೇಕೆಬೇಕು. ಯಾವುದು ಎಷ್ಟೇ ಪವಿತ್ರ ಎಂದು ಪ್ರಮಾಣಪತ್ರ ಕೊಟ್ಟರೂ ಅದರಲ್ಲಿ ಅವಕಾಶ ಎಂಬುದು ಇಲ್ಲದೆ ಹೋದರೆ ಅಲ್ಲಿ ಪ್ರೇಮ ಎಂಬುದು ಅಸಾಧ್ಯ. ಮುಷ್ಟಿ ಬಿಗಿಹಿಡಿದಿಟ್ಟಾಗ, ಅಲ್ಲೊಂದು ವಿಷಾದ ಇದ್ದಾಗ, ನೀವು ಗದ್ದಲದ ಮಧ್ಯೆ ಸಿಕ್ಕಿಕೊಂಡಾಗ ನಿಮ್ಮಲ್ಲಿ  ಸ್ಥಳಾವಕಾಶ ಎಂಬುದೇ ಇರುವುದಿಲ್ಲ. ನೀವು ಬದುಕುವ ಸ್ಥಳ ಎಂದರೆ ಆಲೋಚನೆಯು ನಿಮ್ಮ ಸುತ್ತಲೂ ದುರಂತ ಹಾಗೂ ಗೊಂದಲಗಳೊಂದಿಗೆ ಹೆಣೆದ ಸ್ಥಳಾವಕಾಶವಾಗಿದೆ. ನೀನು ಮತ್ತು ನಾನು, ನೀವು ಮತ್ತು ನಾವು ಎಂಬುದರ ನಡುವಿನ ವಿಭಜನೆಯಲ್ಲಿರುವ ಸ್ಥಳಾವಕಾಶವನ್ನು ಮಾತ್ರ ಆಲೋಚನೆ ಅಳೆಯುತ್ತದೆ. ಈ ವಿಭಜನೆಯೇ ಮುಗಿಯದ ನೋವು.
ವಿಶಾಲವಾದ ಹುಲ್ಲುಗಾವಲಿನ ಮೈದಾನದಲ್ಲಿ ಒಂದು ಏಕಾಂಗಿ ಮರವು ಇದೆ.



ಎಪ್ರಿಲ್ 2, 1975
ಇದು ಮರಮುಟ್ಟುಗಳಿರುವ ಭೂ ಪ್ರದೇಶವಾಗಿರಲಿಲ್ಲ. ತೋಪುಗಳಿಲ್ಲ; ಹೊಳೆ ಹಳ್ಳವಿಲ್ಲ; ಹೂವಿಲ್ಲ. ಎಲ್ಲಿಯೂ ಉಲ್ಲಾಸವೆಂಬುದೇ ಇಲ್ಲ. ಎಲ್ಲಿ ನೋಡಿದರೂ ಬಿಸಿಲಿನಿಂದ ಸುಟ್ಟು ಸುಣ್ಣವಾದ ಖಾಲಿಖಾಲಿ ಬೋಳು ಗುಡ್ಡಗಳು. ಎತ್ತರಕ್ಕೆ ಬಿದ್ದಮರಳು ರಾಶಿ. ಸಾವಿರಾರು ಮೈಲಿ ಕ್ರಮಿಸಿದರೂ ಸುಟ್ಟ  ಭೂಮಿ ಬಿಟ್ಟರೆ ಅಲ್ಲಿ  ಜನಜೀವನ ಎಂಬುದು ಇಲ್ಲ. ಒಂದೇ ಒಂದು ಹಕ್ಕಿ ಇಲ್ಲ. ಬೃಹತ್ ಯಂತ್ರೋಪಕರಣದೊಂದಿಗಿನ ತೈಲಬಾವಿಯಾಗಲಿ, ಅದರ ಚಿಮಣಿ ಕೂಡ ಇದ್ದಿರಲಿಲ್ಲ. ಪ್ರತಿ ಗುಡ್ಡವು ಖಾಲಿಯಾದ ನೆರಳಿನಂತೆ ಗೋಚರಿಸುತ್ತದೆ. ನಿರ್ಜೀವಿ ಪರಿಸರ ಪ್ರಜ್ಞೆಗೂ ನಿಲುಕುವಂತಿಲ್ಲ. ಕೆಲವು ತಾಸುಗಳ ತನಕ ಖಾಲಿಖಾಲಿಯಾದ ಈ ಭೂಪ್ರದೇಶದ ಮೇಲೆ ಯಾನ ಮಾಡಿದ ಬಳಿಕ ಅಂತೂ ಕೆಲವು ಹಿಮ ಗೋ[ರ ಕಾಣಿಸಿತ್ತು. ನಂತರ ನಿಧಾನವಾಗಿ ಕಾಡು, ಹಳ್ಳ, ಹಬ್ಬುತ್ತಿರುವ ಹಳ್ಳಿಗಳು ಕಾಣತೊಡಗಿದವು.
ನಿಮ್ಮಲ್ಲಿ ಬಾರೀ ಪಾಂಡಿತ್ಯವಿದ್ದರೂ ನೀವು ಬಡವರಾಗಿರುವುದು ಸಾಧ್ಯ. ಬಡತನದ ತೀವ್ರತೆ ಹೆಚ್ಚಿದಂತೆ ತಿಳಿವಳಿಕೆಯ ಬೇಡಿಕೆ ಕೂಡ ಹೆಚ್ಚುತ್ತದೆ. ನೀವು ನಿಮ್ಮ ಪ್ರಜ್ಞಾ ವಲಯವನ್ನು ವಿಸ್ತರಿಸುತ್ತಿರುವಿರಿ. ವಿಭಿನ್ನ ರೀತಿಯ ತಿಳಿವಳಿಕೆ ಹೊಂದುತ್ತೀರಿ. ವಿಭಿನ್ನ ಅನುಭವಗಳನ್ನು ಪಡೆಯುತ್ತೀರಿ. ಅವುಗಳನ್ನೆಲ್ಲ ನೆನಪಿನಲ್ಲಿಟ್ಟು ಕೊಳ್ಳುತ್ತೀರಿ. ಆದರೂ ನಿಮ್ಮ ಬಡತನ ಬೆನ್ನು ಬಿಡುವುದಿಲ್ಲ. ತಿಳಿವಳಿಕೆಯನ್ನು ಜಾಣತನದಿಂದ ಬಳಸುವುದರಿಂದ ನಿಮ್ಮಲ್ಲಿ ಆರ್ಥಿಕ ಶ್ರೀಮಂತಿಕೆ ವೃದ್ಧಿಸಬಹುದು. ಇದು ನಿಮಗೆ ಸಮಾಜದಲ್ಲಿ ಉನ್ನತ ಸ್ಥಾನವನ್ನು, ಅಧಿಕಾರವನ್ನು ತರಬಹುದು. ಆದರೂ ನೀವು ಬಡವರೇ ಆಗಿರುತ್ತೀರಿ. ಈ ಬಡತನ ನಿಮ್ಮಲ್ಲಿ ಒಂದು ರೀತಿಯ ವರಟುತನ, ಕಾಠಿಣ್ಯವನ್ನು ಉಂಟು ಮಾಡುತ್ತದೆ. ಊರಿನಲ್ಲಿ ಮನೆಗಳಿಗೆ ಬೆಂಕಿ ಬಿದ್ದರೆ ನೀವು ಏನೋ ಒಂದು  ಮನರಂಜನೆಯ ಆಟದಲ್ಲಿ ತೊಡಗಿರುತ್ತೀರಿ. ಇಂಥ ಬಡತನ ನಿಮ್ಮಲ್ಲಿನ ಬುದ್ಧಿಯನ್ನಷ್ಟೆ ಸದೃಢಗೊಳಿಸುತ್ತದೆ; ಅಥವಾ ನಿಮ್ಮಲ್ಲಿನ ಭಾವನಾತ್ಮಕ ದೌರ್ಬಲ್ಯವನ್ನು ಹೆಚ್ಚಿಸುತ್ತಿರುತ್ತದೆ. ಇದೇ ಬಡತನವೇ ನಿಮ್ಮಲ್ಲಿ ಒಳ ಹಾಗೂ ಹೊರಗಿನ ವರ್ತನೆಯ ವೈಪರಿತ್ಯಗಳನ್ನು ತರುತ್ತದೆ. ಬಾಹ್ಯದ ತಿಳಿವಳಿಕೆಗಳು, ಭೌತಿಕ ಜ್ಞಾನದಲ್ಲಿಎಡವಿದಾಗಲೆಲ್ಲ- ಅಲ್ಲೊಂದು ಆಂತರಿಕ ತಿಳಿವಳಿಕೆ ಇದ್ದಿರಬಹುದೆಂಬ ಸೂಚನೆ ನಮಗೆ ಆಗಾಗ ಬರುತ್ತಿರುತ್ತದೆ. ಆತ್ಮನ ತಿಳಿವಳಿಕೆ ಎಂಬುದು ಇದ್ದರೂ ಸಾಮಾನ್ಯವಾಗಿ ಮಿತ ಹಾಗೂ ಮೇಲ್ಮಟ್ಟದ್ದಾಗಿರುತ್ತದೆ; ಕೆಲ ಸಮಯದ ನಂತರ ಮನಸ್ಸು ಇದನ್ನೆಲ್ಲ ಮೀರಿಹೋಗಿರುತ್ತದೆ; ನದಿಯನ್ನು ದಾಟಿಕೊಂಡು ದೂರ ಹೋದಂತೆ. ನೀವು ನದಿ ದಾಟುವ ಪ್ರಕ್ರಿಯೆಯಲ್ಲಿ ನಿಮ್ಮಲ್ಲಿಬಹಳಷ್ಟುಗೌಜಿ, ಗದ್ದಲ ಉಂಟಾಗುತ್ತದೆ. ಇದೇ ಗದ್ದಲವೇ ಆತ್ಮಜ್ಞಾನ ಎಂದು ತಿಳಿಯುವುದರಿಂದಲೂ ಈ ಬಗೆಯ ಬಡತನ ಹೆಚ್ಚುತ್ತದೆ. ಈ ಬಗೆಯ ಪ್ರಜ್ಞೆ ವಿಸ್ತರಣೆ ಕೂಡ ಬಡತನದ ಪರಿಣಾಮವೇ ಆಗುತ್ತದೆ. ಧರ್ಮಗಳು, ಸಂಸ್ಕೃತಿ, ಮೊದಲಾದ ಯಾವೊಂದೂ ತಿಳಿವಳಿಕೆಗಳಿಂದಲೂ ಈ ಬಡತನದಿಂದ ಬಿಡುಗಡೆ ಸಾಧ್ಯವಿಲ್ಲ.
ತಿಳಿವಳಿಕೆಯನ್ನು ಅದಕ್ಕೆ  ಸರಿಹೊಂದುವ ಸ್ಥಾನದಲ್ಲಿ ಹೊಂದಿಸುವುದೇ ಜಾಣ್ಮೆಯ ಕೌಶಲ್ಯ. ತಂತ್ರಜ್ಞಾನವನ್ನು ಅವಲಂಬಿಸಿದ ಹಾಗೂ ಸರಿಸುಮಾರು ಯಾಂತ್ರಿಕವೇ ಆಗುತ್ತಿರುವ ಇಂದಿನ ಸಮಾಜದಲ್ಲಿ ತಿಳಿವಳಿಕೆ ಇಲ್ಲದೆ ಬದುಕುವುದು ಸಾಧ್ಯವಿಲ್ಲ; ಆದರೆ ಇದರಿಂದ ಮಾನವ ಅಥವಾ ಸಮಾಜದ ಬದಲಾವಣೆ ಸಾಧ್ಯವಿಲ್ಲ ನಿಜ. ತಿಳಿವಳಿಕೆ ಎಂಬುದು ಜಾಣ್ಮೆಯ ಅತ್ಯುನ್ನತ ರೀತಿಯೇನೂ ಅಲ್ಲ; ಜಾಣ್ಮೆ ಎಂಬುದು ತಿಳಿವಳಿಕೆಯನ್ನು ಬಳಸಬಹುದು. ಬಳಸುತ್ತದೆ ಕೂಡ. ಆ ಮೂಲಕ ಮಾನವನಲ್ಲಿ ಬದಲಾವಣೆ ತರುತ್ತದೆ. ಬುದ್ಧಿ ಮತ್ತು ಅದರ ಸಮಗ್ರತೆಯನ್ನು ರೂಢಿಸಿ ಕೊಂಡಾಕ್ಷಣ ಜಾಣ್ಮೆ ಕರಗತವಾಗಿ ಬಿಡುವುದಿಲ್ಲ. ಮಾನವನ ಸಂ]ರ್ಣ ಪ್ರಜ್ಞಾವಲಯವನ್ನು ಅರಿಯುವುದರಿಂದ ಮಾತ್ರಜಾಣ್ಮೆ ಕರಗತವಾಗುತ್ತದೆ. ನಿಮ್ಮ ಬಗ್ಗೆ ಪ್ರತ್ಯೇಕತೆಯನ್ನು ಮೀರಿ ಅನಂತವಾದ ತಿಳಿವಳಿಕೆ ಇರಬೇಕು. ನಿಮ್ಮದೇ ಆದ ಅನನ್ಯತೆಯನ್ನು ನೀವು ತಿಳಿದುಕೊಂಡಿರಬೇಕು. ನಿಮ್ಮ ಹೃದಯ ಹಾಗೂ ಮನಸ್ಸುಗಳ ಚಲನಶೀಲತೆಯನ್ನು ಅರಿತುಕೊಳ್ಳುವುದರಿಂದ ಮಾತ್ರವೇ ಈ ಜಾಣ್ಮೆಸಾಧ್ಯವಾಗುತ್ತದೆ. ನಿಮ್ಮ ಪ್ರಜ್ಞೆಯಲ್ಲಿ ನೀವೇ ಸಾರಾಂಶವಾಗಿರುತ್ತೀರಿ; ನಿಮ್ಮನ್ನು ಅರ್ಥವಿಸಿಕೊಂಡರೆ ನಿಮಗೆ ಜಗತ್ತಿನ ಜ್ಞಾನ ಉಂಟಾಗುತ್ತದೆ. ಈ ತಿಳಿವಳಿಕೆ ಎಂಬುದು ಶಬ್ದವನ್ನು ಮೀರಿ ಇರುವಂಥದ್ದು. ಶಬ್ದ ಎಂಬುದು ಎಂದಿಗೂ ಅದು ಗುರುತಿಸುವ ವಸ್ತುವಲ್ಲ. ತಿಳಿದುಕೊಂಡಿರುವುದರಿಂದ ಸ್ವಾತಂತ್ರ್ಯ, ಪ್ರತಿಕ್ಷಣದಲ್ಲೂ ತಿಳಿವಳಿಕೆುಂದ ಸ್ವತಂತ್ರರಾಗುತ್ತಿರುವ ಸ್ಥಿತಿ ಇದ್ದಲ್ಲಿ ಮಾತ್ರ ಜಾಣ್ಮೆ ಇರುತ್ತದೆ. ಅದನ್ನು ತನ್ನಷ್ಟಕ್ಕೆ ಬಿಟ್ಟರೆ, ಅದೇ ಜಾಣ್ಮೆ ಇಡೀ ಪ್ರಪಂಚದಲ್ಲೆಲ್ಲೆಡೆ ಇರುತ್ತದೆ. ನಿಮ್ಮ ಬಗೆಗಿನ ತಿಳಿವಳಿಕೆ ಇಲ್ಲದೆ, ಅಜ್ಞಾನದಿಂದಾಗಿ ಈ ಜಗತ್ತಿನ ಜಾಣ ವ್ಯವಸ್ಥೆಯನ್ನು ಹಾಳು ಮಾಡುತ್ತಿರುತ್ತೀರಿ.
ಇತರರು ನಿಮ್ಮ ಬಗ್ಗೆ ಅಥವಾ ಅವರ ಬಗ್ಗೆ ಮಾಡಿದ ಅಧ್ಯಯನದ ಆಧಾರದಲ್ಲಿ ನಿಮ್ಮಲ್ಲಿನ ಅಂಧಕಾರವನ್ನು ತೊಲಗಿಸುವುದು ಸಾಧ್ಯವಾಗುವುದಿಲ್ಲ. ನಿಮ್ಮ ಪ್ರಜ್ಞಾವಲಯದಲ್ಲಿರುವ ತಿರುಳನ್ನು ನಿಮಗೆ ನೀವೆ ಅಧ್ಯಯನ ಮಾಡಿಕೊಳ್ಳಬೇಕು. ಇತರರು ಅವರ ಬಗ್ಗೆ ಅಥವಾ ನಿಮ್ಮ ಬಗ್ಗೆ ಮಾಡಿದ ಅಧ್ಯಯನದ ವಿವರಣೆ ಕೇವಲ ವಿವರಣೆ, ಅದು ನಿಜವಾದ ನೀವಲ್ಲ. ಎಂದಿಗೂ ಶಬ್ದವು ವಸ್ತುವಲ್ಲ.
ಸಂಬಂಧಗಳು ಇದ್ದಲ್ಲಿ ಮಾತ್ರ ನೀವು ನಿಮ್ಮನ್ನು ಅರಿಯುವುದು ಸಾಧ್ಯ. ಅಸ್ಪಷ್ಟ ವಿವರಣೆಯಿಂದ ಅಥವಾ ಏಕಾಂಗಿಯಾಗಿರುವುದರಿಂದ ನಿಮ್ಮನ್ನು ನೀವು ಅರಿತುಕೊಳ್ಳುವುದು ಸಾಧ್ಯವಿಲ್ಲ. ಸಮಾಜ ತನ್ನ ಪಲಾಯನಕ್ಕೆಂದು ಮಾನ್ಸ್ ಟ್ರೀಗಳನ್ನು ನಿರ್ಮಿಸಿರಬಹುದು. ಆದರೆ ಮಾನ್ಸ್ ಟ್ರೀಗಳಲ್ಲೂ ಒಂದು ಸಮಾಜ ಎಂಬುದಿರುತ್ತದೆ; ಮನಸ್ಸಿನ ಸ್ವತಂತ್ರದ ಬಾಗಿಲನ್ನು ಮುಚ್ಚುವ ಇನ್ನಾವುದೆ ವ್ಯವಸ್ಥೆಯೂ ಹಾಗೆಯೇ. ವರ್ತನೆಯಲ್ಲಿರುವ ಚಲನಯೇ ನಿಮ್ಮ ಬಗ್ಗೆ ತಿಳಿಸಿಕೊಡುವ ಮಾರ್ಗದರ್ಶಕ; ಅದು ನಿಮ್ಮ ಪ್ರಜ್ಞೆಯ ಕೈಗನ್ನಡಿ; ಆ ಕನ್ನಡಿಯಲ್ಲಿಯೇ ನಿಮ್ಮಲ್ಲಿನ ಸಾರಾಂಶದ ಬಗ್ಗೆ ದರ್ಶನವಾಗುತ್ತದೆ; ನಿಮ್ಮೊಳಗಿನ ಪ್ರತಿಬಿಂಬಗಳು, ಅವಲಂಬನೆಗಳು, ಭಯಗಳು, ಏಕಾಂಗಿತನ, ಆನಂದ ಮತ್ತು ವಿಷಾದಗಳೆಲ್ಲ ನಿಮ್ಮ ವರ್ತನೆಯ ಚಲನವಲನಗಳನ್ನು ಗಮನಿಸಿದಾಗ ತಿಳಿಯುತ್ತದೆ. ನಿಮ್ಮ ವರ್ತನೆಗಳನ್ನು ಗಮನಿಸದೆ ಅದನ್ನು ವ್ಯತ್ಪತನಗೊಳಿಸದೆ ಅಥವಾ ಗುರುತಿಸಿಕೊಳ್ಳುವ ಕೆಲಸ ಮಾಡದೆ ಪಲಾಯನ ಮಾಡುವುದರಲ್ಲಿಯೇ ಬಡತನ ಎಂಬುದು ಹುದುಗಿರುತ್ತದೆ. ಸ್ವಭಾವದಲ್ಲಿನ ನಿಮ್ಮ ಸಾರಾಂಶವನ್ನು ನಿರ್ದಯವಾಗಿ ಹಿಂಡಿ ಹಾಕುವುದರಲ್ಲಿ ಸೌಂದರ್ಯವಿದೆ; ಅದು ಜಾಣ್ಮೆಯ ಬಗೆಗಿನ ಆಳವಾದ ಪ್ರೀತಿಯಾಗಿದೆ.



ಎಪ್ರಿಲ್ 3, 1975
ವಿಶಾಲ ನದಿಯೊಂದರ ಬಳಸಿ ಹೋಗುವ ತಿರುವು ಎಷ್ಟೊಂದು ಅದ್ಭುತವಾಗಿ ಕಾಣುತ್ತದೆ. ಹತ್ತಿರವೂ ಅಲ್ಲದ, ತೀರಾ ದೂರವೂ ಅಲ್ಲದ ಸ್ಥಳವೊಂದರಲ್ಲಿ  ನಿಂತು ಅದನ್ನುನೋಡಬೇಕು. ಹಸಿರು ಹೊಲದಿಂದ ಕಾಡಿನ ಕೊಳ್ಳದಲ್ಲಿ ನಿಧಾನವಾಗಿ ಪ್ರವಹಿಸುವ ಅದರ ಸೌಂದರ್ಯ ಅವರ್ಣನೀಯ. ಆ ನದಿ ಸಾಕಷ್ಟು ವಿಶಾಲವಾಗಿತ್ತು. ನೀರು ತುಂಬಿ ಹರಿಯುತ್ತಿತ್ತು. ನೀರು ನೀಲಿಯಾಗಿ ಸ್ಫಟಿಕದಂತೆ ಶುದ್ಧವಾಗಿತ್ತು. ನಾವು ತೀರಾ ಎತ್ತರದಲ್ಲೆನೂ ಯಾನ ಮಾಡುತ್ತಿಲ್ಲವಾದ್ದರಿಂದ ನದಿಯ ಶಕ್ತಿಯುತ ಪ್ರವಾಹವನ್ನು ಸ್ಪಷ್ಟವಾಗಿ ಗಮನಿಸಬಹುದಾಗಿತ್ತು. ನದಿಯ ಮೇಲಿನ ಸಣ್ಣ[ಟ್ಟ ತೆರೆಗಳು ಕಾಣುತ್ತಿದ್ದವು. ನಾವು ನದಿಯ ಮಾರ್ಗದಲ್ಲೆ ಚಲಿಸುತ್ತ ಹಳ್ಳಿಗಳು, ಪಟ್ಟಣಗಳನ್ನು ದಾಟಿ ಸಮುದ್ರದತ್ತ ಹೋಗುತ್ತಿದ್ದೆವು. ನದಿಯ ಪ್ರತಿಯೊಂದು ತಿರುವಿಗೂ ಅದರದ್ದೇ ಆದ ಸೌಂದರ್ಯ, ಅದರದ್ದೇ ಆದ ಚಲನಶೀಲತೆ, ಬಿರುಸುತನ ಕಾಣುತ್ತಿತ್ತು. ಇದೆಲ್ಲ ಕಳೆದು ಸಾಕಷ್ಟು ದೂರದ ಯಾನದ ಬಳಿಕ ಹಿಮ ಆವರಿಸಿದ ಬೃಹತ್ ಪರ್ವತಗಳು ಕಾಣತೊಡಗಿದ್ದವು. ಬೆಳಗಿನ ಸೂರ್ಯನ ಕಿರಣದಿಂದ ಇವೆಲ್ಲ ನೇರಳೆ ಬಣ್ಣಕ್ಕೆ ತಿರುಗಿದ್ದವು. ]ರ್ವ ದಿಗಂತವನ್ನೆಲ್ಲ ಇಂಥ ಪರ್ವತಗಳೇ ಆವರಿಸಿದ್ದವು. ವಿಶಾಲವಾದ ನದಿ ಹಾಗೂ ದೊಡ್ಡ ದೊಡ್ಡ ಪರ್ವತಗಳೆ ಎಲ್ಲೆಡೆ ಆವರಿಸಿವೆ. ಇದೆಲ್ಲ ಆ ಹೊತ್ತಿನಲ್ಲಿಅಮರತ್ವವನ್ನು ಸಾಕಾರಗೊಳಿಸಿದ್ದವು; ಕಾಲನ ಬಾಧೆಯಿಲ್ಲದ ಅವಕಾಶದ ಅ]ರ್ವ ಕ್ಷಣ ಅದು. ವಿಮಾನವು ಆಗ್ನೇಯ ದಿಕ್ಕಿನ ಕಡೆಗೆ ಧಾವಿಸುತ್ತಿತ್ತಾದರೂ ಆ ಅವಕಾಶದಲ್ಲಿ ದಿಕ್ಕು ಎಂಬುದೆಲ್ಲ ಪ್ರಸ್ತುತವೇ ಆಗಿರಲಿಲ್ಲ. ಆಗ ದಿಕ್ಕೇ ಇರಲಿಲ್ಲ. ಚಲನೆಯ ಅನುಭವವೂ ಇಲ್ಲ. ಕೇವಲ "ಏನಿದಯೋ ಅದು' ಮಾತ್ರ. ಇಡೀ ತಾಸಿನ ಅವಧಿಯಲ್ಲಿ ಅಲ್ಲಿ ಬೇರೇನೂ ಇರಲಿಲ್ಲ. ಜೆಟ್ ವಿಮಾನದ ಗದ್ದಲ ಕೂಡ ಇರಲಿಲ್ಲ. ವಿಮಾನದ ಚಾಲಕ ಇನ್ನೇನು ನಾವು ಭೂಮಿಯನ್ನು ಇಳಿಯುತ್ತಿದ್ದೇವೆ ಎಂಬ ಪ್ರಕಟಣೆ ಹೊರಡಿಸಿದಾಗಲೆ ಇಡೀ ಒಂದು ತಾಸಿಗೆ ]ರ್ಣ ವಿರಾಮ ಉಂಟಾಯಿತು. ಮೆದುಳಿನಲ್ಲಿ ಆ ಅವಧಿಯ  ನೆನಪೇ ಇಲ್ಲ. ಮೆದುಳಿನಲ್ಲಿ ಅದೆಲ್ಲ ದಾಖಲಾಗಲೇ ಇಲ್ಲ. ಆಲೋಚನೆಗೆ ಅದಾವುದೂ ಸಿಗುವಂಥದ್ದೇ ಅಲ್ಲ. ಅದೆಲ್ಲ ಮುಗಿದಾಗ ಆ ಘಟನೆಯ ಲವಲೇಶವೂ ಅಲ್ಲಿ ಉಳಿದಿರಲಿಲ್ಲ. ಮನಸ್ಸು ಇನ್ನೊಮ್ಮೆ ಆ ಸನ್ನಿವೇಶವನ್ನು ರೂಢಿಸಿಕೊಳ್ಳುವ ಪ್ರಮೆಯವೂ  ಇಲ್ಲವಾಗಿತ್ತು. ಅದಕ್ಕಾಗಿ ಆಲೋಚನೆ ವಿಮಾನದಿಂದ ಕೆಳಕ್ಕೆ ಇಳಿಯತೊಡಗಿತ್ತು.
ಆಲೋಚನೆ ಯಾವುದರ ಬಗ್ಗೆ ವಿಚಾರ ಮಾಡುತ್ತದೋ ಅದನ್ನು ವಾಸ್ತವದಲ್ಲಿಸೃಷ್ಟಿಸಿಕೊಳ್ಳುತ್ತದೆ; ಆದರೆ ಅದು ನಿಜ-ಸತ್ಯವಲ್ಲ. ಆಲೋಚನೆಯ ಅಭಿವ್ಯಕ್ತಿ ಎಂದಿಗೂ ಸೌಂದರ್ಯವಾಗಲು ಸಾಧ್ಯವಿಲ್ಲ. ಆಲೋಚನೆಯಿಂದಾಗಿ ಹಾರುವ ಹಕ್ಕಿಯೊಂದನ್ನು ಸೃಷ್ಟಿಸುವುದು ಸಾಧ್ಯವಿಲ್ಲ; ಅದಕ್ಕಾಗಿಯೇ ಹಕ್ಕಿ ಸುಂದರವಾಗಿತ್ತದೆ. ಪ್ರೇಮವನ್ನು ಆಲೋಚನೆಗಳಿಂದ ಕಟ್ಟಿಕೊಡುವುದು ಸಾಧ್ಯವಿಲ್ಲ. ಹಾಗಾದಾಗ ಅದು ಪ್ರೇಮವಲ್ಲದೆ ಬೇರೇನೋ ಆಗಿರುತ್ತದೆ. ಬುದ್ಧಿ ಹಾಗೂ ಅದರ ಸಮಗ್ರತೆಯ ಆರಾಧನೆಯನ್ನು ಆರಂಭಿಸಿದ್ದೇ ಆಲೋಚನೆ. ಆದರೆ ಅದರಲ್ಲಿ ಆಳವಾದ ಪ್ರೀತಿ ಇಲ್ಲ. ಆಲೋಚನೆ ಎಂದಿಗೂ ಪ್ರೀತಿಯನ್ನು ಖರೀದಿಸಲಾರದು. ಪ್ರೀತಿಯ ಸಾಕಾರಗೊಳಿಬಹುದು, ಅನಿವಾರ್ಯವಾಗಿಸಬಹುದಾದರೂ ಅದು ನಿಜವಾದ ಪ್ರೀತಿಯಾಗಿರುವುದಿಲ್ಲ. ಆಲೋಚನೆ ತನ್ನ ಮೂಲ ಸ್ವರೂಪದಲ್ಲೇ ಪ್ರತ್ಯೇಕವಾಗಿದೆ. ಅದಕ್ಕಾಗಿ ಆಲೋಚನೆ ಏಕಾಂಗಿಯಾಗಿ ತುಕುಡಿಯಾಗಿ ಪ್ರತ್ಯೇಕವಾಗಿಯೇ ಇರುತ್ತದೆ. ಅದಕ್ಕಾಗಿ ತಿಳಿವಳಿಕೆ ಕೂಡ ಪ್ರತ್ಯೇಕದ ತುಣುಕು. ಈ ತುಣುಕುಗಳನ್ನೆಲ್ಲ ಸೇರಿಸಿ ಎಷ್ಟೇ ದೊಡ್ಡ ರಾಶಿ ಹಾಕಿದರೂ ಅದು ಒಂದಾಗುವುದಿಲ್ಲ. ಮತ್ತೂ ಚೂರುಚೂರಾಗಿಯೇ ಇರುತ್ತದೆ. ಏನೋ ಹರಸಾಹಸ ಮಾಡಿ ಒಮ್ಮೆ ಸಮಗ್ರತೆ ಎಂಬುದನ್ನು ಜೋಡಿಸಿಕೊಳ್ಳಬಹುದಾಗಿದ್ದರೂ, ಕೊನೆಗೂ ಅದು ಪ್ರತ್ಯೇಕವೇ.
ವಿಜ್ಞಾನ ಎಂಬ ಶಬ್ದವೇ ತಿಳಿವಳಿಕೆಯಾಗಿದೆ. ಮನುಷ್ಯ ತನ್ನೆಲ್ಲ ಸಮಸ್ಯೆಗಳಿಗೆ ವಿಜ್ಞಾನದಲ್ಲಿ ಉತ್ತರ ಕಂಡುಕೊಂಡು ಸ್ವಾಸ್ತ್ಯತೆ, ಆನಂದ ಸಾಧಿಸುವ ಭರಾಟೆಯಲ್ಲಿದ್ದಾನೆ. ಭೂಮಿ ಹಾಗೂ ತನ್ನ ಬಗೆಗಿನ ಎಲ್ಲ ಮಾಹಿತಿಯನ್ನು ಕಲೆ ಹಾಕುವ ಧಾವಂತದಲ್ಲಿ ಮನುಷ್ಯ ತೊಡಗಿದ್ದಾನೆ. ತಿಳಿವಳಿಕೆ ಎಂಬುದು ಆಳವಾದ ಪ್ರೀತಿ ಅಲ್ಲ. ಆಳವಾದ ಪ್ರೀತಿ ಇಲ್ಲದಿದ್ದರೆ ತಿಳಿವಳಿಕೆಯು ಕೇವಲ ವಿಷಾದ. ಇದು ಕುಚೋದ್ಯ ಹಾಗೂ ಘರ್ಷಣೆಯನ್ನು ಮಾತ್ರ ತರಬಲ್ಲುದು. ತಿಳಿವಳಿಕೆುಂದ ಮನುಷ್ಯನನ್ನು ಪ್ರೀತಿಸುವಂತೆ ಮಾಡಲು ಸಾಧ್ಯವಿಲ್ಲ. ತಿಳಿವಳಿಕೆ ಕೇವಲ ಯುದ್ಧವನ್ನು ಸೃಷ್ಟಿಸಬಹುದು. ಕೊಲ್ಲುವ ಹಟಮಾರಿಗಳನ್ನು ಸಿದ್ಧಪಡಿಸಬಲ್ಲುದು ಅಷ್ಟೆ; ಮನಸ್ಸಿಗೆ ಮಾತ್ರ ಶಾಂತಿ ಉಂಟು ಮಾಡಲಾರದು. ಇದನ್ನೆಲ್ಲ ಗೃಹಿಸುವುದೆಂದರೆ ತಕ್ಷಣ ಸತ್ಯವನ್ನು ಕೃತಿಗಿಳಿಸುವಂಥದ್ದಾಗಿರುತ್ತದೆ. ಇಲ್ಲಿ ಕೃತಿ ಅಥವಾ ಕರ್ಮ ಎಂದರೆ ನೆನಪು ಅಥವಾ ಸಿದ್ಧಾಂತನ್ನು ಆದರಿಸಿದ್ದಲ್ಲ.
ಪ್ರೇಮ ಎಂಬುದು ನೆನಪಲ್ಲ. ಸುಖದ ನೆನಪೂ ಪ್ರೇಮ ಅಲ್ಲ.




ಎಪ್ರಿಲ್ 4, 1975
ಹಾಗೊಂದು ಅವಕಾಶ ಉಂಟಾಗಿದ್ದರಿಂದ ಊರಿನಿಂದ ಬಹುದೂರದ ಗುಡ್ಡದ ತುದಿಯಲ್ಲಿ ಜೀರ್ಣಾವಸ್ತೆಯಲ್ಲಿದ್ದ ಗುಡಿಸಲೊಂದರಲ್ಲಿಕೆಲವು ತಿಂಗಳು ಆತ ವಾಸಿಸಿದ. ಆ ಪ್ರದೇಶದಲ್ಲಿ ಬಹಳಷ್ಟು ಮರಗಳಿದ್ದವು. ವಸಂತಕಾಲವಾಗಿದ್ದರಿಂದ ಗಾಳಿಯಲ್ಲಿ ಸುವಾಸನೆಯೂ ಪಸರಿಸುತ್ತಿತ್ತು. ಕೆಂಪಾದ ಭೂಮಿ, ಪರ್ವತದ ಸಾಲುಗಳಿಂದಾಗಿ ಅಲ್ಲೊಂದು ಏಕಾಂಗಿಭಾವ ಆವರಿಸಿತ್ತು. ಒಂದಕ್ಕಿಂತ ಒಂದು ಎತ್ತರಕ್ಕಿದ್ದ ಪರ್ವತಗಳ ಶಿಖರಗಳು ಹಿಮಾಚ್ಛಾದಿತವಾಗಿರುತ್ತಿದ್ದವು. ಅದರಲ್ಲಿ ಒಂದಿಷ್ಟು ಮರಗಳು ಹೂವಿನಿಂದ ತುಂಬಿಕೊಂಡಿದ್ದವು. ಪ್ರಕೃತಿಯ ಈ ಎಲ್ಲ ವಿಜೃಂಬಣೆಯ ನಡುವೆ 'ಆತ' ಏಕಾಂಗಿಯಾಗಿ ವಾಸವಾಗಿದ್ದ. ಅಡವಿ ಸಮೀಪದಲ್ಲೇ ಇತ್ತು; ಕೆಲವು ಕರಡಿಗಳು, ಆಗಾಗ ಸುಳಿಯುತ್ತಿದ್ದ ಚಿಗರೆ, ಒಂದಿಷ್ಟು ಹಾವುಗಳು, ಅದೆಲ್ಲವುಗಳಿಗಿಂತ ಹೆಚ್ಚಾಗಿ ಕಪ್ಪು ಮೂತಿಯ ಉದ್ದ ಬಾಲದ ಮಂಗಗಳು ಅಲ್ಲಿಧಾರಾಳವಾಗಿದ್ದವು. ಅಲ್ಲಿನ ದಿನಗಳಲ್ಲಿ ಕಂಡ ಆಳವಾದ ಏಕಾಂಗಿತನ ಅನನ್ಯವಾಗಿತ್ತು.  ಕಾಲು ಹಾದಿಯಲ್ಲಿ ಸಾಗುವಾಗ ದಾರಿಯಲ್ಲಿ ಅರಳಿರುವ ಕಾಡು ಹೂಗಳೆ ಇದ್ದಿರಬಹುದು, ಜೀವಿಜಾಲದ ಯಾವೊಂದನ್ನೂಹಿಸುಕುವುದು, ಹಿಂಸೆಮಾಡುವುದು, ನೋವುಂಟು ಮಾಡುವುದು ಆತನಿಗೆ ಇಷ್ಟವಿರಲಿಲ್ಲ. ಅಲ್ಲಿರುವ ಎಲ್ಲದರೊಂದಿಗೂ ಆತನಿಗೊಂದು ಸಂಬಂಧ ಇತ್ತು.'ನೀನು' ಮತ್ತು ಅವುಗಳ ನಡುವಿನ ಸೀಮಾರೇಖೆಯೇ ಇಲ್ಲದ ಕಾರಣ ಸಂಬಂಧ ಎಂಬುದು ಅವಿನಾಭಾವವಾಗಿತ್ತು. ಇಂಥ ಒಂದು ಸಂಬಂಧವು ಕಲ್ಪಿಸಿಕೊಂಡಿದ್ದಲ್ಲ, ವೈಚಾರಿಕ ಅಥವಾ ಭಾವನಾತ್ಮಕ ಹೇರಿಕೆಯಿಂದ ಇದೆಲ್ಲ ಸಾಧ್ಯವಾಗಿದ್ದೂ ಅಲ್ಲ, ಕೇವಲ ಸಹಜ ರೀತಿಯಲ್ಲಿ ಉಂಟಾಗಿತ್ತು.
ದೃಢ ಕಾಯದ ಮಂಗಗಳ ಗುಂಪು ಬಿಡಾರದ ಸಮೀಪವೇ ಬರುತ್ತಿದ್ದವು. ವಿಶೇಷವಾಗಿ ಅವು ಸಂಜೆ ಹೊತ್ತಿಗೆ ಅಲ್ಲಿ ಹಾಜರಾಗುತ್ತಿದ್ದವು. ಕೆಲವೊಂದು ಮಂಗಗಳು ನೆಲಕ್ಕೆ ಇಳಿಯುವುದಿತ್ತಾರೂ ಹೆಚ್ಚಿನ ಮಂಗಗಳು ಮರದಲ್ಲೇ ಕುಳಿತು ಸುಮ್ಮನೆ ಎಲ್ಲವನ್ನೂ ಬಹುಹೊತ್ತಿನ ತನಕ ನೋಡುತ್ತಿರುತ್ತಿದ್ದವು. ಅಪರೂಪಕ್ಕೊಮ್ಮೆ ಮೈ ಕೆರೆದುಕೊಂಡರೂ ಅವುಗಳು ಮುನಿಗಳಂತೆ ಸುಮ್ಮನೇ ಕುಳಿತುಕೊಂಡಿರುತ್ತಿದ್ದವು, ನಾವು ಪರಸ್ಪರ ಒಬ್ಬರನ್ನೊಬ್ಬರು ನೋಡುತ್ತಿದ್ದೆವು. ನಂತರದ ದಿನಗಳಲ್ಲಿ ಮಂಗಗಳು ದಿನವೂ ಸಂಜೆವೇಳೆ ಅಲ್ಲಿ ಬರತೊಡಗಿದವು. ತೀರಾ ಎತ್ತರವೂ ಅಲ್ಲ, ಇನ್ನೇನು ತೀರಾ ಹತ್ತರವೂ ಅಲ್ಲದ ಕೊಂಬೆಯಲ್ಲಿ ಕುಳಿತು ಕೊಳ್ಳುತ್ತಿದ್ದವು. ನೇರವಾಗಿ ನೋಡದಿದ್ದರೂ ನಮ್ಮ ಪರಸ್ಪರ ಸಾಂಗತ್ಯದ ಅರಿವು ನಮಗಿರುತ್ತಿತ್ತು. ಕೆಲವು ದಿನಗಳಲ್ಲಿ ನಾವು ಉತ್ತಮವಾದ ಗೆಳೆತನವನ್ನೇ ಸಾಧಿಸಿದ್ದೆವಾದರೂ, ಮಂಗಗಳು ಎಂದಿಗೂ 'ಆತನ' ಆಕಾಂಗಿತನದ ಆವರಣದೊಳಗೆ ಇಣುಕುತ್ತಿರಲಿಲ್ಲ.
ಅದೊಂದು ದಿನ ಹಾಗೆಯೇ ಕಾಡಿನಲ್ಲಿ 'ಆತ' ನಡೆದುಹೋಗುತ್ತಿದ್ದಾಗ ಒಂದಿಷ್ಟು ತೆರವಾದ ಜಾಗದಲ್ಲಿ ಮಂಗಗಳ ಗುಂಪಿನೊಂದಿಗೆ ಮುಖಾಮುಖಿಯಾಗುತ್ತದೆ. ಅಂದು ಸಣ್ಣ, ದೊಡ್ಡ ಮಂಗಗಳೆಲ್ಲವೂ ಸೇರಿ ಕೊನೇ ಪಕ್ಷ ಮೂವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಒಂದಿಷ್ಟು ಮರದಮೇಲಿದ್ದರೆ, ಇನ್ನೊಂದಿಷ್ಟುನೆಲದಲ್ಲಿಯೇ  ಕುಳಿತಿದ್ದವು. ಆತ ಅಂದು ಅವುಗಳನ್ನು ತನ್ನ ಕೈಯಲ್ಲಿ ನಿಲುಕಬಹುದಾದಷ್ಟು ಸಮೀಪದಲ್ಲಿದ್ದಾನೆ. ಆ ದಿನ ಸೂರ್ಯಾಸ್ತವಾಗುವ ವರೆಗೂ ಅವರೆಲ್ಲರೊಂದಿಗೆ ಅಲ್ಲಿಯೇ ಕಳೆದಿದ್ದಾಯಿತು.
ನೀವು ನಿಸರ್ಗದ ಒಡನಾಟ ಬಿಟ್ಟರೆ ನಿಮ್ಮಲ್ಲಿನ ಮಾಮನವೀಯತೆಯೂ ಹೊರಟು ಹೋಗುತ್ತದೆ. ಪರಿಸರದೊಂದಿಗೆ ನಿಮ್ಮ ಸಂವಹನ ತಪ್ಪಿದರೆ ನೀವು ಕ್ರೂರಿಗಳಾಗುತ್ತೀರಿ. ಸೀಲ್‌ಗಳ ಮರಿಯನ್ನೋ, ತಿಮಿಂಗಿಲಗಳು ಅಥವಾ ಪಾಪದ ಡಾಲ್ಫಿನ್‌ಗಳನ್ನು ಕೊಲ್ಲುವುದಕ್ಕೆ ನಿಮಗೆ ಮುಜುಗರಗಳೇ ಇರುವುದಿಲ್ಲ. ಲಾಭಕ್ಕಾಗಿ, ಆಹಾರಕ್ಕಾಗಿ, ಕೊನೆಗೆ ಬೇಟೆಯ ಮೋಜು- ಕೊಲ್ಲುವುದಕ್ಕೆ ಎಷ್ಟೊಂದು ಕಾರಣ. ಇದರ ಪರಿಣಾಮ ಎಂದರೆ ನಿಸರ್ಗ ನಿಮ್ಮ ಬಗ್ಗೆ ಭಯಭೀತವಾಗುತ್ತದೆ, ನಿಮ್ಮಲ್ಲಿತನ್ನ ಅನರ್ಘ್ಯ ಸೌಂದರ್ಯವನ್ನು ತೆರೆದುಕೊಳ್ಳುವುದೇ ಇಲ್ಲ. ಕಾಡಿನಲ್ಲಿ ಎಷ್ಟೋ ದೂರ ನೀವು ನಡೆದು ಹೋಗಬಹುದು ಅಥವಾ ರಾತ್ರಿ ಅಲ್ಲಿಯೇ ಉಳಿದು ಬೆಂಕಿಹಾಕಿಕೊಂಡು ಛಳಿ ಕಾಯಿಸಿ ಕಾಡಿನ ಸಾಂಗತ್ಯಕ್ಕಾಗಿ ಪ್ರಯತ್ನಿಸಿದರೂ ಗೆಳೆತನ ಮಾತ್ರ ಸಾಧ್ಯವಾಗುವುದಿಲ್ಲ.
ಹಾಗೆ ನೋಡಿದರೆ ನಿಮಗೆ ಯಾವುದರೊಂದಿಗೂ ಸಂಬಂಧವೇ ಇದ್ದಿರುವುದಿಲ್ಲ. ನಿಮ್ಮ ಪತಿ ಅಥವಾ ಪತ್ನಿಯೊಂದಿಗಿನ ಸಂಬಂಧ ಅರಳುವುದಕ್ಕೆ ಅವಶ್ಯವಾದ ಸಮಯವೇ ನಿಮ್ಮಲ್ಲಿ ಇದ್ದಿರುವುದಿಲ್ಲ. ಆಲೋಚನಾ ಪ್ರಕ್ರಿಯೆಯಲ್ಲಿ ಗಳಿಕೆಗಾಗಿ ಕಳೆಯುವ, ಕೂಡುವ ಜಂಜಡದಲ್ಲಿ ನಿಮ್ಮ ದಿನಗಳು ಉರುಳುತ್ತಿರುತ್ತವೆ. ಖಾಸಗಿಯಾದ ಆಲೋಚನೆಗಳ ಸುಖ-ದು:ಖಗಳು ನಿಮ್ಮನ್ನು ಅಷ್ಟೊಂದು ಪ್ರಮಾಣದಲ್ಲಿ ಆವರಿಸಿಬಿಟ್ಟಿರುತ್ತವೆ. ಎಲ್ಲರ ನಡುವೆಯೇ ಇದ್ದರೂ ಪ್ರತಿಯೊಬ್ಬರೂ  ಅವರದೇ ಆದ ಕತ್ತಲು ಸಾಮ್ರಾಜ್ಯದಲ್ಲಿ ಕೂಡಿಕೊಂಡಿರುತ್ತಾರೆ. ಅದರಿಂದ ಪಲಾಯನವಾಗುವುದಕ್ಕೆ ಮತ್ತಷ್ಟು ಅಂಧಕಾರದ ಮಾರ್ಗಳು.. ನಿಮ್ಮ ಆಸಕ್ತಿಗಳೇನಿತ್ತೂ ತಕ್ಷಣದ ಆಸೆಯನ್ನು ಈಡೇರಿಸಿಕೊಳ್ಳುವುದು, ಯಾವುದೇ ಜವಾಬ್ದಾರಿ ಬೇಡ, ಹಿಂಸೆ-ರಕ್ತಪಾತಗಳು ಉಂಟಾದರೂ ನೀವು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರುವುದಿಲ್ಲ. ಈ ತೆರನಾದ ಬೇಜವಾಬ್ಧಾರಿುಂದಾಗಿಯೇ ಸಮೀಪದಲ್ಲಿ ಸಾವಿರಾರು ಜನ ಹಸಿವಿನಿಂದ ಸಾಯುತ್ತಿರುತ್ತಾರೆ, ತಲವಾರಿನಿಂದ ಪ್ರಾಣಹರಣವೂ ನಡೆಯುತ್ತದೆ. ಇದನ್ನೆಲ್ಲ ಒಂದು ವ್ಯವಸ್ಥೆಗೆ ತರಬೇಕಾದ ಜವಾಬ್ಧಾರಿಯಲ್ಲಿ ನಿಮ್ಮದೂ ಒಂದು ಪಾತ್ರ ಇದ್ದಿರಬಹುದು ಎಂದು ಅನಿಸುವುದೇ ಇಲ್ಲ. ಆ ಎಲ್ಲ ಕೆಲಸವನ್ನು ಸುಳ್ಳುಗಾರ ರಾಜಕಾರಣಿಗಳು, ಬುದ್ಧಿಜೀವಿಗಳು ಅಥವಾ ವಿಶೇಷಜ್ಞರ ಹೆಗಲ ಮೇಲೆ ಹೊರಿಸಿ ನೀವು ನಿಮ್ಮದೇ ನಡುಗಡ್ಡೆಯ ಜಗತ್ತಿನಲ್ಲಿರುತ್ತೀರಿ. ಇದರ ಪರಿಣಾಮ ಎಂದರೆ ಕೇವಲ ಸ್ವಾರ್ಥಸಾಧನೆಯ ಉದ್ದೇಶದ ಸಮಾಜ ನಿರ್ಮಾಣವಾಗುತ್ತಿದೆ. ಯಾರೊಂದಿ ಗೂ ಸ್ನೇಹವಿಲ್ಲದೇ ಬದುಕು ಖಾಲಿ ಎನಿಸಿದಾಗ ಇದರಿಂದ ತಪ್ಪಿಸಿಕೊಳ್ಳುವ ಮಾರ್ಗಗಳ ಹುಡುಕಾಟ ಆರಂಭವಾಗುತ್ತದೆ. ಬೀಚಿಗೋ, ಕಾಡಿನಲ್ಲೋ ಸುಖವನ್ನು ಅರಸಿ ಹೋಗುವುದು, ಮೋಜಿಗಾಗಿ ಮೃಗಬೇಟೆ, ಹರಿಣದ ಬೇಟೆಗಾಗಿ ಬಂದೂಕನ್ನು ಹೆಗಲಿಗೆ ಹಾಕಿ ಹೊರಡುತ್ತೀರಿ.
ನಿಮಗೆ ಈ ಎಲ್ಲ ವಿಚಾರವೂ ಅತ್ಯಂತ ಸ್ಪಷ್ಟವಾಗಿಯೇ ಅರ್ಥವಾಗುತ್ತಿರುತ್ತದೆ ನಿಜ. ಆದರೆ ತಿಳಿಯುವಿಕೆ ಎಂಬುದು ನಿಮ್ಮನ್ನು ಬದಲಿಸುವುದೇ ಇಲ್ಲ. ಯಾವಾಗ ನಿಮ್ಮಲ್ಲಿ ಪೂರ್ಣತ್ವದ ಪ್ರಜ್ಞೆ ಎಂಬುದು ಉಂಟಾಗುವುದೋ ಆಗ ಮಾತ್ರ ನೀವು ವಿಶ್ವದ ಭಾಗವಾಗುತ್ತೀರಿ.



* ಮಲಿಬುವಿನಲ್ಲಿ ಅವರು ವಾಸಿಸುತ್ತಿದ್ದ ಮನೆ.
ಎಪ್ರಿಲ್ 6, 1975
ಇದು  ಮೆಡಿಟೇರನಿಯನ್ ಸಮುದ್ರದಲ್ಲಿ ಕಾಣುವ ಅಸಾಮಾನ್ಯ ನೀಲಿಯಾಗಿರಲಿಲ್ಲ; ಫೆಸಿಫಿಕ್ ಸಾಗರಕ್ಕೆ ಒಂದು ಬಗೆಯ ಎಥರಲ್ ನೀಲವರ್ಣವಿದೆ. ವಿಶೇಷವಾಗಿ ಪಶ್ಚಿಮದಿಂದ ತಂಗಾಳಿ ಬೀಸುವ ಸಂದರ್ಭದಲ್ಲಿ  ಕಿನಾರೆಯ ರಸ್ತೆಯಲ್ಲಿ ನೀವು ದಕ್ಷಿಣದತ್ತ ಸಾಗಬೇಕು- ಆಗ ಅದರ ಮಹತ್ವದ ಅಂದಾಜಾಗುತ್ತದೆ. ಅಚ್ಚ ನೀಲಿಯಲ್ಲಿ ಮೃದು ಹಾಗೂ ಸ್ಪಷ್ಟವಾಗಿ ಕಾಣುವ ಮೆಡಿಟೇರಿಯನ್ ಸಮುದ್ರ ಆಹ್ಲಾದಕರವಾಗಿರುತ್ತದೆ. ದಕ್ಷಿಣ ದಿಕ್ಕಿಗೆ ಈಜುವ ಬೃಹತ್ ತಿಮಿಂಗಿಲಗಳು ಅಚಾನಕ್ಕಾಗಿ ಮೇಲಕ್ಕೆ ನೆಗೆದು ಗಾಳಿಗೆ ಮೈ ಒಡ್ಡುವುದು ಅದ್ಭುತವಾಗಿರುತ್ತದೆ. ಆ ಪ್ರದೇಶದಲ್ಲಿ ತಿಮಿಂಗಿಲಗಳು ಹಿಂಡು ಹಿಂಡಾಗಿ ಇದ್ದು, ಹಾದಿಗುಂಟ ಹೋಗುವವರ ಗಮನಕ್ಕೆ ಬರುತ್ತಲೇ ಇರುತ್ತವೆ. ಇವು ಅತ್ಯಂತ ಶಕ್ತಿಯುತ ಪ್ರಾಣಿಗಳಿದ್ದಿರಬೇಕು. ಆ ದಿವಸ ಸಮುದ್ರವು ಒಂದು ದೊಡ್ಡ ಸರೋವರದ ತರಹವೇ ಸ್ತಬ್ಧ ಹಾಗೂ ಶಾಂತವಾಗಿ ಕಾಣುತ್ತಿತ್ತು. ಸಮುದ್ರದಲ್ಲಿ ಅಲೆಗಳೆ ಇದ್ದಿರಲಿಲ್ಲ. ಅದರಿಂದಾಗಿ ನೀಲಿ ಬಣ್ಣದಲ್ಲಿ ಅಲೆಗಳ ನರ್ತನವೂ ಇರಲಿಲ್ಲ. ಅಂದು ಉದ್ದಾನುದ್ದಕ್ಕೆ ಸಮುದ್ರವೇ ಮಲಗಿಕೊಂಡಂತಿದ್ದುದನ್ನು 'ನೀನು' ಅಚ್ಚರಿಯಿಂದ ಗಮನಿಸುತ್ತಿದ್ದೆ. ಆ ಮನೆ ಸಮುದ್ರಾಭಿಮುಖವಾಗಿತ್ತು *. ಸುತ್ತಲೂ ಹೂದೋಟ, ಲಾನ್‌ಗಳಿಂದ ಶೃಂಗರಿಸಲ್ಪಟ್ಟ ಸುಂದರವಾದ ಮನೆ ಅದು. ಸಾಕಷ್ಟು ವಿಶಾಲವಾಗಿದ್ದ ಆ ಸುಂದರ ಮನೆಯ ಆವರಣದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಸಾಮಾನ್ಯವಾಗಿರುವ ವಿಶಿಷ್ಟ ಬಿಸಿಲು ರಷ್ಮಿಯೂ ಬರುತ್ತಿತ್ತು.
ಈ ಮನೆಯನ್ನು ಕಂಡರೆ ಮೊಲಗಳಿಗೂ ಎಲ್ಲಿಲ್ಲದ ಪ್ರೀತಿ ; ಅವುಗಳು ಬೆಳಗಿನ ನಸುಕಿನಲ್ಲಿ, ಸಂಜೆ ಹೊತ್ತಿನಲ್ಲಿ ತೋಟಕ್ಕೆ ಬಂದೇ ಬರುತ್ತಿದ್ದವು. ಹೂದೋಟದಲ್ಲಿ ಹೂವು ಬಿಡುವುದಕ್ಕೆ ಮಾತ್ರಇವು ಅವಕಾಶ ಕೊಡುತ್ತಿರಲಿಲ್ಲ. ಹೊಸದಾಗಿ ನೆಟ್ಟ ಸೇವಂತಿಗೆ ಮತ್ತಿತರ ಹೂವಿನ ಗಿಡಗಳು, ಪರಿಮಳಯುಕ್ತವೆನಿಸಿದ ಎಲ್ಲಗಿಡಗಳನ್ನೂ ತಿಂದು ಹಾಕುತ್ತಿದ್ದವು. ಸುತ್ತಲೂ ತಂತಿಯ ಬಲೆಯನ್ನೇ ಹಾಕಿದರೂ ಅವುಗಳನ್ನು ಮಾತ್ರ ಹದ್ದುಬಸ್ತಿಗೆ ತರುವುದು ಸಾಧ್ಯವಾಗಿರಲಿಲ್ಲ. ಅವುಗಳನ್ನು ಕೊಲ್ಲುವುದೆಂದರೆ ಅಪರಾಧವಾಗುತ್ತದೆ. ಹೀಗಿರುವಾಗ ಒಂದೇ ಒಂದು ಬೆಕ್ಕು, ಇನ್ನೊಂದು ಕೋಠಿ ಗೂಭೆ ಸೇರಿ ಈ ಮೊಲಗಳ ಉಪಟಳವನ್ನು ನಿಯಂತ್ರಿಸುವುದು ಸಾಧ್ಯವಾಯಿತು. ಕಪ್ಪು ಬೆಕ್ಕು ಹಗಲಿಡೀ ತೋಟದಲ್ಲಿ ಓಡಾಡುತ್ತಿದ್ದರೆ, ಗೂಭೆ ನೀಲಗಿರಿ ಮರದಲ್ಲಿ ಠಿಕಾಣಿ ಹೂಡಿರುತ್ತಿತ್ತು. ನಿಶ್ಚಲವಾಗಿ ಕಪ್ಪಾದ, ಗೋಲಾಕಾರದ ತನ್ನ ಕಣ್ಣುಗಳನ್ನು ಮುಚ್ಚಿಕೊಂಡು ಮರದ ಮೇಲೆ ಕುಳಿತುಕೊಂಡಿರುತ್ತಿದ್ದ ಗೂಬೆಯನ್ನು ಒಮ್ಮೆ ನೋಡಬೇಕು. ಇವುಗಳಿಂದಾಗಿ ಮೊಲಗಳು ಕಾಣೆಯಾಗಿಬಿಟ್ಟವು. ಹೂದೋಟವೂ ಸಮೃದ್ಧವಾಗಿ ಬೆಳೆಯತೊಡಗಿತ್ತು.
ಈ ಜಗತ್ತಿನಲ್ಲಿ ಕೇವಲ ಮನುಷ್ಯ ಮಾತ್ರ ಅವ್ಯವಸ್ಥೆಯನ್ನು ತರುತ್ತಾನೆ. ಮನುಷ್ಯ ಹೃದಯ ಶೂನ್ಯನಾಗಿ, ಕ್ರೂರಿಯಾಗಿ ವರ್ತಿಸುತ್ತಾನೆ. ಆತ ಎಲ್ಲೆಲ್ಲಿ ಇರುತ್ತಾನೊ ತನಗೆ ಗೊಂದಲ, ವಿಷಾದ,ದುರಂತಗಳನ್ನು ತರುವುದರ ಜೊತೆಗೆ ಜಗತ್ತಿನ ಎಲ್ಲ ಜೀವ ಜಾಲಗಳಿಗೂ ತನ್ನ ಬಗ್ಗೆ ಕೂಡ ಅದೇ ಭಾವನೆಯನ್ನು ಹುಟ್ಟಿಸುತ್ತಾನೆ. ಆತ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆದು ಹಾಳು ಮಢುತ್ತಾನೆ. ಆತನಲ್ಲಿ ಆಳವಾದ ಪ್ರೀತಿ ಎಂಬುದೇ ಇಲ್ಲ. ಆತನಿಗೆ ಸ್ವಂತಕ್ಕೆ ವ್ಯವಸ್ಥೆ ಎಂಬುದಿಲ್ಲ. ಆತ ಮುಟ್ಟಿದ್ದೆಲ್ಲ ಗಲಿಬಿಲಿ, ಗೊಂದಲಗಳಿಂದ ಮಣ್ಣಾಗುತ್ತದೆ. ಆತ ನಡೆಸುತ್ತಿರುವ ರಾಜಕಾರಣ ಎಂಬುದು ಪರಿಷ್ಕೃತ ಗೂಂಡಾಗಿರಿಯಂತೆ ಆಗಿಹೋಗಿದೆ. ಮನುಷ್ಯ ಅಧಿಕಾರಕ್ಕಾಗಿ ಜಾತಿ ಜಾತಿಯನ್ನು, ವಿವಿಧ ಗುಂಪುಗಳು, ದೇಶಗಳನ್ನು ಎತ್ತಿಕಟ್ಟಿ ಆಟವಾಡುತ್ತಾನೆ. ಆತನ ಆರ್ಥಿಕತೆ ಎಂಬುದು ಸೀಮಿತಗೊಂಡುಹೋಗಿದೆ. ಅದಕ್ಕೊಂದು ಸರಿಯಾದ ಜಾಗತಿಕ ಮುಖವೇ ಇಲ್ಲ. ಮನುಷ್ಯ ಸಮಾಜವೇ ಬಲವಂತ ಹಾಗೂ ಸ್ವತಂತ್ರದ ಹೆಸರಿನಲ್ಲಿ ಒಂದು ರೀತಿಯ ಅನೈತಿಕ ಮಾರ್ಗವನ್ನು ಅನುಸರಿಸುತ್ತಿದೆ. ಮುಗಿಯದ ಸಂಪ್ರದಾಯ, ಅರ್ಥವಿಲ್ಲದ ಅನುಷ್ಠಾನಗಳಲ್ಲಿ ಮುಳುಗಿ ಎದ್ದು ಆತ ಧಾರ್ಮಿಕನಾಗಿಲ್ಲ. ಕ್ರೌರ್ಯ, ಬೇಜವಾಬ್ಧಾರಿ, ಸಂಪೂರ್ಣ ಸ್ಪರ್ಧೆ ಇದೆಲ್ಲ ಮನುಷ್ಯನಲ್ಲಿ ಹೇಗೆ ಮನೆಮಾಡಿತು ? ಇದಕ್ಕೆಲ್ಲ ನೂರಾರು ವಿವರಣೆಗಳು, ಉತ್ತರಗಳು ಇದ್ದಿರಬಹುದು. ಮನುಷ್ಯ ತಪ್ಪು ಹಾದಿ ಹಿಡಿಯುವುದು ಹೇಗೆ ಎಂಬ ಬಗ್ಗೆ ಬೃಹತ್ ಗೃಂಥಗಳಿಂದ ಕ್ರೂಢೀಕರಿಸಿ, ಸ್ವತ: ಅಧ್ಯಯನಗಳನ್ನು ಕೈಗೊಂಡವರು, ಸತ್ಯ ಶೋಧನೆಗೆ ಪ್ರಾಣಿಗಳ ಮೇಲೆ ಪ್ರಯೋಗನಡೆಸುವವರು ಇದ್ದಾರೆ. ಹೀಗೆ ಅಧ್ಯಯನ ನಡೆಸಿದವರೂ ಕೂಡ ಮಾನವನ ವಿಷಾದದಲ್ಲಿ, ಮಹತ್ವಾಕಾಂಕ್ಷೆಗಳಲ್ಲಿ , ಅಹಂಕಾರದಲ್ಲಿ, ದುರಂತದಲ್ಲಿ ಸಿಲುಕಿಕೊಂಡಿದ್ದಾರೆ. ಜಗತ್ತು ಎಂಬುದು ಒಂದು ವಸ್ತುವಲ್ಲ, ವಿವರಣೆಗಳೊಂದಿಗೆ ವಿವರಿಸಿದ ಸಂಗತಿ ಮೂಲ ವಸ್ತುವೇ ಆಗಿರುವುದಿಲ್ಲ. ಮನುಷ್ಯ ಬಾಹ್ಯ ಪರಿಣಾಮಗಳ ಬಗೆಗೆ ಹೆಚ್ಚಾಗಿ ಆಸಕ್ತಿವಹಿಸುತ್ತಿರುವುದೇ ಇಂಥದ್ದಕ್ಕೆಲ್ಲ ಕಾರಣ ಇದ್ದೀತೆ ? ಬಾಹ್ಯ ಬದಲಾವಣೆಯೇ ಮನುಷ್ಯನ ಆಂತರಿಕ ಬದಲಾವಣೆಗೂ ಕಾರಣ ಎಂಬುದಾಗಿ ಆತ ಬದುಕುತ್ತಿರುವ ಪರಸರವೇ ಅವನಿಗೆ ಕಲಿಸುತ್ತಿದೆಯೇ ? ಇಂದ್ರಿಯ ಭೋಗದ ಹಿತಾಸಕ್ತಿಗಳನ್ನು ತಕ್ಷಣ ಈಡೇರಿಸಿಕೊಳ್ಳುವುದಕ್ಕಾಗಿ ಹೀಗೆಲ್ಲ ಆಗುತ್ತಿದೆಯೇ ? ಆಲೋಚನೆ ಹಾಗೂ ತಿಳಿವಳಿಕೆಯ ಜಗತ್ತಿನಲ್ಲಿಯೇ ಮುಳುಗಿ ಏಳುತ್ತಿರುವುದಕ್ಕಾಗಿ ಹೀಗಾಗುತ್ತಿದ್ದಾನೆಯೇ ? ತೀರಾ ರಮ್ಯ ಭಾವನೆಗಳಿಗೆ ಮೊರೆಹೋಗುತ್ತಿರುವಂಥದ್ದು, ಭಾವನೆಗಳಿಗೆ ಕಟ್ಟು ಬೀಳುವುದಕ್ಕಾಗಿಯೇ ತನ್ನ ತತ್ವದ ವಿಚಾರ ಬಂದಾಗ, ನಂಬಿಕೆ ಮತ್ತು ನಾಟಕದ ವಿಚಾರ ಬಂದಾಗ ಕ್ರೂರಿಯಾಗುತ್ತಿದ್ದಾನೆಯೇ ?ಒಂದೇ ಯಾರದೊ ಒಬ್ಬರ ಹಿಂಬಾಲಕನಾಗುವುದು, ತಪ್ಪಿದರೆ ತಾನೇ ಗುರುವಾಗುವ ಕಾರಣಕ್ಕಾಗಿ ಹೀಗೆಲ್ಲ ಆಗುತ್ತಿದೆಯೇ ?
ಅಂತರ್ಯ ಹಾಗೂ ಬಾಹ್ಯ ಎಂಬುದಾಗಿ ಮನುಷ್ಯನಲ್ಲಿ ಉಂಟಾಗುವ ವಿಭಜನೆಯೇ ದುರಂತದ ಪ್ರಾರಂಭವಾಗಿರುತ್ತದೆ. ಪುರಾತನ ಕಾಲದಿಂದಲೂ ನಂಬುತ್ತಲೇ  ಬಂದಿರುವ ಈ ಗೊಂದಲದಲ್ಲಿ ಆತ ಸಿಕ್ಕಿಕೊಂಡುಬಿಟ್ಟಿದ್ದಾನೆ. ಅರ್ಥವಾಗದ ವಿಭಜನೆಯಲ್ಲಿ ಸಿಲುಕಿ  ಕಳೆದುಹೋಗಿದ್ದಾನೆ, ಇತರರ ಗುಲಾಮನಾಗಿದ್ದಾನೆ. ಅಂತರ್ಯ ಹಾಗೂ ಬಾಹ್ಯ ಎಂಬುದು ಆಲೋಚನೆ ಸೃಷಿಸಿದ ಕಲ್ಪನೆ ಹಾಗೂ ಸಂಶೋಧನೆಗಳಾಗಿವೆ. ಆಲೋಚನೆ ತನ್ನಷ್ಟಕ್ಕೇ ಅಪೂರ್ಣವಾಗಿರುವುದರಿಂದ ಅವ್ಯವಸ್ಥೆ ಹಾಗೂ ತಿಕ್ಕಾಟವನ್ನು ಉಂಟುಮಾಡಿ ವಿಭಜಿಸುತ್ತಿರುತ್ತದೆ. ಆಲೋಚನೆ ಎಂಬುದು ಎಂದಿಗೂ ಒಂದು ವ್ಯವಸ್ಥೆಯನ್ನು ತರಲಾರದು. ನಿಧಿ- ಸದ್ಗುಣಗಳ ಸಹಜ ಚಲನೆಗೆ ಆಲೋಚನೆ ಪೂರಕವಲ್ಲ. ಸದ್ಗುಣ ಎಂಬುದು ಆಲೋಚನೆಗಳ ನಿರಂತರ ಪುನಾರವರ್ತನೆ ಅಲ್ಲ ಅಥವಾ ಅದೊಂದು ಸಾಧನೆ ಮಾಡಿ ಹೊಂದುವಂಥದ್ದೂ ಅಲ್ಲ. ಆಲೋಚನೆ, ತಿಳಿವಳಿಕೆಗಳೆಲ್ಲ ಕಾಲನ ಕಟ್ಟಳೆಗೆ ಸಿಲುಕಿಕೊಂಡಿರುತ್ತವೆ.ತ್ತಿನ ಜೀವಜಾಲದ ಚಲನೆಯನ್ನು ಈ ಸಮಗ್ರ ಪಯಣವನ್ನು ಅರ್ಥವಿಸಿಕೊಳ್ಳುವುದು ಆಲೋಚನೆಗೆ ನಿಲುಕುವಂಥದ್ದೇ ಅಲ್ಲ. ಪೂರ್ಣತ್ವದ ಬಗ್ಗೆ ಒಂದು ಸೂಕ್ಷ್ಮ ಗಮನ ಕೂಡ ಆಲೋಚನೆಯಿಂದ ಸಾಧ್ಯವಾಗುವುದಿಲ್ಲ. ಎಲ್ಲಿಯ ತನಕ ತಾನೊಬ್ಬ ಗೃಹಿಸುವಾತನೆಂದು ಹೊರಗೆ ನಿಂತು ನೋಡುವವನೆಂದುಕೊಂಡಿರುತ್ತದೊ, ಅಲ್ಲಿಯವರೆಗೂ ಆಯ್ಕೆಯಿಲ್ಲದೆ ಜಗವನ್ನು ಅರಿಯುವಿಕೆ ಸಾಕಾರಗೊಳ್ಳುವುದಿಲ್ಲ. ಗೃಹಿಸುವಿಕೆ ಎಂಬುದು ಯಾವಾಗ ಉಂಟಾಗುವುದೋ ಅಲ್ಲಿ ಆಲೋಚನೆ, ತಿಳಿವಳಿಕೆಗಳಿಗೆ ಅವಕಾಶವೇ ಇರುವುದಿಲ್ಲ. ಆಲೋಚಿಸುವವನೇ ಆಲೋಚನೆ, ಗೃಹಿಸುವವನೇ ಗೃಹಿಕೆಯಾಗಿರುತ್ತದೆ. ಹಾಗಿದ್ದಾಗ ಮಾತ್ರ ನಮ್ಮ ದಿನನಿತ್ಯದ ಬದುಕು ಎಂಬುದು ಆಯ್ಕೆ ಇಲ್ಲದ ಅರಿಯುವ ಚಲನೆಯಾಗುತ್ತದೆ.



*ಒಜಾಯಿ
* ಇದೀಗ ಅವರು ಹತ್ತು ದಿನಗಳ ಅವಧಿಗೆ ಒಜಾಯಿ ಕಣಿವೆಗೆ ಬಂದಿದ್ದಾರೆ ; ಇಲ್ಲಿರುವ ಚಿತ್ರಣವೂ ಒಜಾಯಿ ಕಣಿವೆಯದ್ದೇ ಆಗಿದೆ.
ಎಪ್ರಿಲ್ 8, 1975ತ್ತಿನ ಈ ಭಾಗದಲ್ಲಿ ಮಳೆ ಹೆಚ್ಚಾಗಿ ಸುರಿಯುವುದಿಲ್ಲ. ಹೆಚ್ಚೆಂದರೆ 15 ರಿಂದ 20 ಇಂಚಿನಷ್ಟು ಮಳೆ ಸುರಿಯುತ್ತದೆ. ವರ್ಷದ ಮತ್ಯಾವುದೇ ಸಂದರ್ಭದಲ್ಲೂ ಮಳೆ ಬಾರದಿರುವುದರಿಂದ ಸುರಿಯುವ ಅಲ್ಪ ಪ್ರಮಾಣದ ಮಳೆಗೆ ಇಲ್ಲಿ ಬಹಳ ಮಹತ್ವವಿರುತ್ತದೆ. ಮಳೆ ಸುರಿಯುವ ಸಂದರ್ಭದಲ್ಲಿ ಗುಡ್ಡಗಳ ಮೇಲೆಲ್ಲ ಮಂಜು ಆವರಿಸಿರುತ್ತದೆ. ಉಳಿದಂತೆ ಬೇಸಿಗೆ ಹಾಗೂ ಚಳಿಗಾಲದಲ್ಲಿ ಗುಡ್ಡಗಳೆಲ್ಲ ಬೋಳು, ಬೋಳಾಗಿರುತ್ತವೆ. ಬಿಸಿಲಿನಿಂದ ಸುಟ್ಟ ಬಂಡೆಗಳ ರಾಶಿ ರಾಶಿ, ಜೀವಿಗಳೆಲ್ಲ ಈ ಪರಿಸರವನ್ನು ಬಹಿಷ್ಕರಿಸಿದಂತೆ ತೋರುತ್ತದೆ. ವಸಂತ ಕಾಲದಲ್ಲಿ ಮಾತ್ರ ತಂಪಾಗಿ, ವಾತಾವರಣ ಆಹ್ಲಾದಕರವಾಗಿರುತ್ತದೆ. ಇಲ್ಲಿ ಇದಕ್ಕೂ ಮೊದಲು ಕರಡಿ, ಚಿಗರೆ, ಹುಲಿಬೆಕ್ಕು, ಪುರುಲಿ ಹಕ್ಕಿಗಳಲ್ಲದೆ ಇನ್ನೂ ಅನೇಕ ಬಗೆಯ ಜೀವಿಗಳಿದ್ದವು. ಅಪಾಯಕಾರಿ ಮನುಷ್ಯ ಎಲ್ಲೆಡೆ ಅತಿಕ್ರಮಿಸುತ್ತಿರುವುದರಿಂದ ಕ್ರಮೇಣ ಇಲ್ಲಿಯೂ ಪ್ರಾಣಿ-ಪಕ್ಷಿ ಸಂಕುಲ ಬರಿದಾಗುತ್ತಿದೆ. ಕೆಲ ಸಮಯದ ಹಿಂದ ಇಲ್ಲಿ ಮಳೆಯಾಗಿತ್ತು, ಕಣಿವೆಯಲ್ಲಿ ಹಸಿರು ಪಸರಿಸಿತು. ಕಿತ್ತಳೆ ಮರದಲ್ಲಿ ಹೂವು, ಕಾಯಿಗಳು ಬಿಡತೊಡಗಿದವು. ಜನ ವಸತಿಯ ಗದ್ದಲಗಳಿಂದೆಲ್ಲ ದೂರ ಇರುವ ಈ ಸುಂದರ ಕಣಿವೆಯಲ್ಲಿ ಬೆಳ್ಳಂಬೆಳ್ಳಗ್ಗೆ ಶೋಕ ಪಾರಿವಾಶದ ಹಾಡು ಕೇಳುತ್ತದೆ. ಕಿತ್ತಳೆ ಹೂವುಗಳ ಸುವಾಸನೆ ಕಣಿವೆಯ ವಾತಾವರಣದಲ್ಲೆಲ್ಲ ನಿಧಾನವಾಗಿ ಪಸರಿಸತೊಡಗುತ್ತದೆ. ಕೆಲವೇ ದಿನಗಳಲ್ಲಿ ಬಿಸಿಲು ಹಾಗೂ ಗಾಳಿ ಇಲ್ಲದ ವಾತಾವರಣದಲ್ಲಿ ಅದೆಲ್ಲ ತುಂಬಿಕೊಂಡು ಎಲ್ಲೆಡೆಯಲ್ಲಿ ವ್ಯಾಪಿಸಲಿಕ್ಕಿದೆ. ಸುತ್ತಲೂ ಗುಡ್ಡ ಬೆಟ್ಟಗಳಿಂದ ಕೂಡಿದ ಕಣಿವೆ ಇದು; ಗುಡ್ಡಗಳನ್ನು ದಾಟಿಕೊಂಡು ದೂರ ಹೊರಟು ಹೋದರೆ ಸಮುದ್ರ- ಇನ್ನೊಂದೆಡೆ ಪರ್ವತ ಶಿಖರಗಳನ್ನು ದಾಟಿ ಹೋದರೆ ಮರುಭೂಮಿ ಸಿಗುತ್ತದೆ. ಪಟ್ಟಣದಿಂದ ಬಹು ದೂರದಲ್ಲಿರುವ ಕಣಿವೆಯಲ್ಲಿ ಬೇಸಗೆಯಲ್ಲಿ ತಡೆಯಲಾಗದಷ್ಟು ಸೆಖೆಯಿದ್ದರೂ ಇಲ್ಲಿ ಒಂದು ಬಗೆಯ ಸೌಂದರ್ಯ ಇದ್ದೇ ಇದೆ. ರಾತ್ರಿ ವೇಳೆ ಸಮೃದ್ಧವಾಗಿ ಆವರಿಸುವ ಅನನ್ಯ ಮೌನ. ಕೃತಕ ಧ್ಯಾನಗಳು ಈ ಪರಿಸರಕ್ಕೊಂದು ಅಪವಿತ್ರ ಸಂಕೇತದಂತೆ; ಇಲ್ಲಿನ ಪ್ರತಿಯೊಂದು ಎಲೆ, ಟೊಂಗೆಗಳು ತನ್ನಷ್ಟಕ್ಕೆ ಖಷಿಯನ್ನು ಅನುರಣಿಸುತ್ತವೆ. ಎತ್ತರದ ಸೈಪ್ರಸ್ ಮರ ತನ್ನಷ್ಟಕ್ಕೆ ನಿಂತುಕೊಂಡಿದೆ.ಗಂಟು ಗಂಟಾದ ಪುರಾತನ ಕಾಳು ಮೆಣಸಿನ ಬಳ್ಳಿಯೊಂದು ಅದನ್ನು ತಳಕುಹಾಕಿಕೊಂಡೆದೆ.
ನೀವು ಆನಂದವನ್ನು ಆಹ್ವಾನಿಸಿಕೊಳ್ಳುವುದಕ್ಕಾಗುವುದಿಲ್ಲ. ಸಾಧ್ಯವೂ ಇಲ್ಲ; ಒಂದು ವೇಳೆ ನೀವು ಹಾಗೆ ಮಾಡಿದರೆ ಅದೊಂದು ಸಾಮಾನ್ಯ ಸುಖವಾಗಿರುತ್ತದೆ. ಸುಖ ಎಂಬುದು ಆಲೋಚನೆಯ ಚಲನೆಯಷ್ಟೆ. ಈ ಆಲೋಚನೆಯಿಂದ ಆನಂದವನ್ನು ರೂಢಿಸಿಕೊಳ್ಳುವುದು ಸಾಧ್ಯವಿಲ್ಲ. ಒಂದು ವೇಳೆ ಆಲೋಚನೆಯಿಂದ ಆನಂದವನ್ನು ಸಾಕಾರಗೊಳಿಸಿಕೊಂಡರೂ ಅದು ನಿಜ ಅಲ್ಲ. ಕೇವಲ ಸತ್ತ ನೆನಪಿನ ಅನುರಣನ. ಸೌಂದರ್ಯಕ್ಕೆ ಯಾವುದೇ ಕಾಲದ ಕಟ್ಟಳೆಗಳಿರುವುದಿಲ್ಲ; ಅದು ಕಾಲದಿಂದ ಸಂಸ್ಕೃತಿಯಿಂದ ಸಂಪೂರ್ಣ ಸ್ವತಂತ್ರವಾಗಿರುತ್ತದೆ. ಎಲ್ಲಿ ನಾನು ಎಂಬುದು ಇರುವುದಿಲ್ಲವೊ  ಅಲ್ಲಿ ಸೌಂದರ್ಯ ಇರುತ್ತದೆ. ನಾನು- ಸ್ವ ಎಂಬುದು ಕಾಲನ ತುಣುಕುಗಳು, ಆಲೋಚನೆಯ ಹಂದರ, ತಿಳಿವಳಿಕೆಗಳು, ಗೃಹಿಸಿದ ಜಗತ್ತಿನ ಇನ್ನಿತರ ಸಂಗತಿಗಳಿಂದ ಕೂಡಿರುತ್ತದೆ. ನಾನು-ಸ್ವ ಎಂಬುದರ ಸಂಪೂರ್ಣ ತ್ಯಾಗ ಮತ್ತುಆ ಸಂಪೂರ್ಣ ಅರಿವಿನಲ್ಲೆ ಮೂಲ ಸೌಂದರ್ಯದ ಸೆಲೆ ಇದೆ. ಸ್ವಾರ್ಥವನ್ನು ಬಿಟ್ಟುಬಿಡುವುದು ಎಂದರೆ ಅದೊಂದು ಲೆಕ್ಕಾಚಾರ ಮಾಡಿ ನಿರ್ಧರಿಸಿದ ಕ್ರಿಯೆ ಅಲ್ಲ. ನಿರ್ಧಾರ ಎಂಬುದು ಬೊಧಕ, ಅಡಚಣೆ, ವಿಭಜನೆಗಳಿಂದ ಕೂಡಿರುವುದರಿಂದ ತಿಕ್ಕಾಟಕ್ಕೆ ಕಾರಣವಾಗುತ್ತದೆ.
ನನ್ನನ್ನು ವಿಸರ್ಜಿಸುತ್ತೇನೆ ಎಂಬುದು ನನ್ನ ಬಗೆಗಿನ ತಿಳುವಳಿಕೆಯಿಂದ ಬೆಳೆಸಿಕೊಳ್ಳುವಂಥದ್ದಲ್ಲ; ವಿಸರ್ಜನೆ ಎಂಬುದರಲ್ಲಿ ಕಾಲದ ಪಾತ್ರವೇ ಇರುವುದಿಲ್ಲ. ವಿಸರ್ಜನೆ ಎಂಬುದಕ್ಕೆ ಮಾರ್ಗ ಅಥವಾ ಮಾಧ್ಯಮಗಳೆ ಇರುವುದಿಲ್ಲ. ಅಂತರ್ಯದತ್ತ ಸಂಪೂರ್ಣವಾಗಿ ಒಳಸೆಳೆದುಕೊಳ್ಳುವುದರಲ್ಲಿ ಸೌಂದರ್ಯದ ಸಕಾರಾತ್ಮಕ ಅಭಿವ್ಯಕ್ತಿ ಇದೆ.
ನೀವು ನಿಮ್ಮ ಅಂತರ್ಯದಲ್ಲಿ ಅದೆಷ್ಟೋ ಹಂದರಗಳನ್ನು ಬೆಳೆಸಿಕೊಂಡಿರುತ್ತೀರಿ. ಅದರ ಚಟುವಟಿಕೆಯಲ್ಲಿಯೇ ಸಿಕ್ಕಿಕೊಂಡು ಬಿದ್ದಿರುತ್ತೀರಿ. ನಿಮ್ಮ ಮನಸ್ಸು ಇದರಿಂದಲೇ ಯಾಜಮಾನ್ಯಕ್ಕೊಳಗಾಗಿ ಅಂತರ್ಯದ ಚಲನೆಯ ಹಂತದಲ್ಲೂ ಹಾಗೆಯೇ ವರ್ತಿಸುತ್ತದೆ. ಅಂಥ ಪರಿಸ್ಥಿತಿಯಲ್ಲಿ ಸಾಧನೆ ಎಂಬುದು ಮಹತ್ವದ ಸ್ಥಾನ ಪಡೆಯುವುದರಿಂದ ಹಂದರದ ಪ್ರೇರಣೆಯಲ್ಲಿರುವ ರೋಷ ಎಂಬುದು ಸ್ವ-ದ ಹಂದರದಂತೆ ವರ್ತಿಸುತ್ತದೆ. ಅದಕ್ಕಾಗಿಯೇ ನೀವು ನಿಮ್ಮ ಗುರುಗಳನ್ನು ಅನುಸರಿಸುವಂಥದ್ದು, ನಿಮಗೆ ರಕ್ಷಕನೊಬ್ಬ ಬೇಕಾಗಿರುತ್ತಾನೆ. ನಿಮ್ಮ ನಂಬಿಕೆ ಎಂಬುದು ಮಹತ್ವದ್ದಾಗಿರುತ್ತದೆ. ಹಾಗಾಗಿ ಆದರ್ಶ, ನಂಬಿಕೆಗಳು ಜ್ಞಾನ ಹಾಗೂ ಸೂಕ್ಷ್ಮತೆಯ ಸ್ಥಾನವನ್ನು ಆಕ್ರಮಿಸಿ ಬಿಡುತ್ತದೆ. ಎಲ್ಲಿ ಸ್ವ- ಎಂಬುದು ಇರುವುದಿಲ್ಲವೊ ಅಲ್ಲಿ ಪ್ರಾರ್ಥನೆ, ಅನುಷ್ಠಾನಗಳ ಅವಶ್ಯಕತೆಯೇ ಇರುವುದಿಲ್ಲ. ಖಾಲಿ ಇರುವ ಹಂದರದಲ್ಲಿ ತಿಳುವಳಿಕೆ, ಬಿಂಬಗಳು, ಅರ್ಥಹೀನ ಚಟುವಟಿಕೆಯನ್ನು  ತುಂಬಿಕೊಳ್ಳುವುದರಿಂದ ಬದುಕಿರುವಂತೆ ಭಾಸವಾಗುತ್ತೀರಿ.
ಮನಸ್ಸು ಸಂಪೂರ್ಣ ಸ್ಥಬ್ಧವಾದಾಗ  ಅಪಾರವಾದ ಸೌಂದರ್ಯ ಕೇಲದೆ ತನ್ನಿಂದ ತಾನೆ ಬರುತ್ತದೆ. ಅದಕ್ಕೆ ಗುರುತಿಸುವ ಗದ್ದಲವೇ ಇರುವುದಿಲ್ಲ.



ಎಪ್ರಿಲ್ 10, 1975
ಮಧ್ಯ ರಾತ್ರಿಯಲ್ಲಿನ ನೀರವ ಮೌನವಿರಬಹುದು ಅಥವಾ ಪ್ರಶಾಂತ ಬೆಳಗಿನಲ್ಲಿ ಸೂರ್ಯ ತನ್ನ ಕಿರಣಗಳಿಂದ ಪರ್ವತ ಶಿಖರಗಳನ್ನು ನೇವರಿಸುವ ಕ್ಷಣವೂ ಇರಬಹುದು.. ಇಂಥ ಸನ್ನಿವೇಶದಗಳಲ್ಲಿಆಳವಾದ ರಹಸ್ಯಗಳು ಹುದುಗಿರುತ್ತವೆ. ರಹಸ್ಯ ಎಂಬುದು ಎಲ್ಲ ಬಗೆಯ ಜೀವಿಗಳಿಗೂ ಅನ್ವುಸುವಂದ್ದು. ನೀವು ಮರವೊಂದರ ಕೆಳಗೆ ಮೌನವಾಗಿ ಕುಳಿತಲ್ಲಿ ಭೂಮಿಯ ಪ್ರಾಚೀನತೆಯ ಬಗ್ಗೆ ತಿಳಿದುಕೊಳ್ಳಲಾಗದ ಅಗಮ್ಯ-ರಹಸ್ಯಗಳ ಅನುಭವವಾಗುತ್ತದೆ. ನಕ್ಷತ್ರಗಳು ಸ್ಪಷ್ಟವಾಗಿ, ಪ್ರಶಾಂತವಾಗಿ ಗೋಚರಿಸುವ ಪ್ರಶಾಂತ ರಾತ್ರಿಯಲ್ಲಿ ನಿಮಗೆ ಬಿಚ್ಚಿಕೊಳ್ಳುವ ಸ್ಥಳಾವಕಾಶದ ಬಗ್ಗೆ, ರಹಸ್ಯವಾಗಿರುವ ಇಲ್ಲಿನ ವ್ಯವಸ್ಥೆಗಳು ಅನುಭವಕ್ಕೆ ಬರಬಹುದು. ಅಳತೆಗೆ ಸಿಗದೇಹೋಗುವ, ಕಲ್ಪಿಸಲಿಕ್ಕೆ ಸಾಧ್ಯವಾಗದ, ಕತ್ತಲಲ್ಲಿ ಕುಳಿತ ಪರ್ವತಗಳಿಂದ, ಗೂಬೆಯೊಂದರ ಬೆದರಿಸುವ ಧ್ವನಿಯಲ್ಲೂ ಇಂಥ ರಹಸ್ಯಗಳು ಅಡಗಿರುತ್ತವೆ. ಆ ಹೊತ್ತಿನಲ್ಲಿರುವ ಮನಸ್ಸಿನ ಮೌನ ಸ್ಥಿತಿಯ ರಹಸ್ಯ ಎಂಬುದು ಕಾಲ ಹಾಗೂ ಅವಕಾಶಗಳನ್ನು ಮೀರಿ ಹಿಗ್ಗುತ್ತಿರುತ್ತದೆ. ಆಗಾಧ ಕಾಳಜಿಯಿಂದ ಪ್ರೀತಿಯಿಂದ ಗಮನವಿಟ್ಟುಕಟ್ಟಲಾಗಿರುವ ಪುರಾತನ ದೇವಾಲಯಗಳಲ್ಲಿ ಒಂದಿಷ್ಟು ರಹಸ್ಯಗಳು ಹುದುಗಿರುತ್ತವೆ. ಎತ್ತೆತ್ತರದ ಮಿನಾರ್‌ಗಳಿರುವ ಮಸೀದಿಗಳು, ಆಗಾಧ ಕೆಥಡ್ರಲ್‌ಗಳಲ್ಲಿ ಪರಧರ್ಮ ಅಸಹಿಷ್ಣುತೆಯ, ಸ್ವಧರ್ಮದ ತೀವ್ರ ಪ್ರತಿಪಾದನೆಯ ಛಾಯೆ, ಸೈನ್ಯದ ವಿಜೃಂಬಣೆಯ ಪ್ರಭಾವದಿಂದಲೂ ರಹಸ್ಯ ಮಂಕಾಗಿರುತ್ತದೆ. ಮನಸ್ಸಿನಾಳದ ಪದರದಲ್ಲಿ ಹುದುಗಿರುವ ಪುರಾಣ ಕತೆಗಳು ರಹಸ್ಯವಲ್ಲ. ಅವುಗಳೇನಿತ್ತೂಒಂದು ಬಗೆಯ ರಮ್ಯ ಛಾಯೆ ಮಾತ್ರ. ಸಾಂಪ್ರದಾಯಿಕ ಹಾಗೂ ಯಾಜಮಾನ್ಯತೆಯ ಪ್ರತಿಪಾದಕಗಳಂತೆ ಇರುತ್ತವೆ. ಮನಸ್ಸಿನ ಗುಟ್ಟಾದ ಸ್ಥಳಾವಕಾಶಗಳಲ್ಲಿ ಸಂಕೇತ, ಶಬ್ಧ, ಬಿಂಬ ರೂಪದಲ್ಲಿ ತಳ್ಳಲಾಗುವ ವಾಸ್ತವ ಸಂಗತಿಗಳಲ್ಲೂ ರಹಸ್ಯ ಎಂಬುದು ಇರುವುದಿಲ್ಲ; ಇವೆಲ್ಲ ಆಲೋಚನೆಯ ಚರ್ವಿತ ಚರ್ವಣವೇ ಆಗಿರುತ್ತವೆ.  ತಿಳಿವಳಿಕೆ ಮತ್ತದರ ಕ್ರಿಯಾಶೀಲತೆಯಲ್ಲಿ ಅಚ್ಚರಿ, ಮೆಚ್ಚುಗೆ ಮತ್ತು ಖಷಿ ಇರುತ್ತದೆ. ಆದರೆ ರಹಸ್ಯ ಎಂಬುದು ಬೇರೆಯದೇ ಆದ ಸಂಗತಿ. ರಹಸ್ಯ ಎಂಬುದು ಅನುಭವ ಅಲ್ಲ, ಗುರುತಿಸುವುದಕ್ಕಾಗದು, ಜತನವಾಗಿ ಕಾಪಿಡುವುದಕ್ಕೂ ಆಗದು, ನಂತರ ನೆನಪಿಸುವುದಕ್ಕೂ ಆಗುವಂಥದ್ದಲ್ಲ. ಅನುಭವ ಎಂಬುದು ಸಂವಹನಶೀಲ ರಹಸ್ಯದ ಸಾವು; ಏನೊಂದನ್ನೂ ಸಂವಹನ ಮಾಡುವುದಕ್ಕೆ ನಿಮಗೆ ಶಬ್ಧ, ಹಾವಭಾವಗಳು, ನೋಟಗಳು ಬೇಕಾಗುತ್ತವೆ. ಆದರೆ ಅದರೊಂದಿಗೆ- 'ಏನಿದೆಯೋ ಅದರೊಂದಿಗೆ' ಸಂವಹನ ಏರ್ಪಡಿಸಿಕೊಳ್ಳುವುದಕ್ಕೆ  ಮನಸ್ಸು, ನಿಮ್ಮ ಸಂಪೂರ್ಣ ಅಸ್ತಿತ್ವವೇ ಸಮನಾದ ಸ್ಥರದಲ್ಲಿ ಇರಬೇಕಾಗುತ್ತದೆ. 'ಅದು' ಎಂದರೆ ರಹಸ್ಯದೊಂದಿಗೆ ಸಂವಹನ ಏರ್ಪಡಿಸಿಕೊಳ್ಳುವುದಕ್ಕೆ ಸಮಾನ ಕಾಲಧರ್ಮ, ಸಮಾನ ತೀವ್ರತೆ, ಸಮಾನವಾದ ವೇವ್‌ಲೆಂಥ್ ಅವಶ್ಯವಿರುತ್ತದೆ. ಅದನ್ನೇ ಪ್ರೇಮ ಎನ್ನುವಂಥದ್ದು. ಅದರಿಂದ ಜಗತ್ತಿನ ಸಂಪೂರ್ಣ ರಹಸ್ಯ ತೆರೆದುಕೊಳ್ಳುತ್ತದೆ.
ಇಂದಿನ ಬೆಳಗಿನಲ್ಲಿ ಆಕಾಶ ಮೋಡ ಮುಸುಕಾಗಿರಲಿಲ್ಲ.ಸೂರ್ಯ ಕಣಿವೆಯಲ್ಲಿ ಇಣುಕುತ್ತಿದ್ದ. ಮಾನವ ಜೀವಿಯೊಂದನ್ನು ಹೊರತುಪಡಿಸಿ ಇಡೀ ಪರಿಸರವೇ  ಜೀವಕಳೆಯಲ್ಲಿ ಇತ್ತು. ಆತ ಈ ಭೂಮಿಯ ಅಚ್ಚರಿಯನ್ನೊಮ್ಮೆ ನೋಡಿ ತನ್ನ ಕೆಲಸಗಳಲ್ಲಿ , ವಿಷಾದ, ಸುಖದಲ್ಲಿ ಮಗ್ನನಾಗಿಹೋಗಿದ್ದ. ಇದನ್ನೆಲ್ಲ ನೋಡಲು ಆತನಿಗೆ ಸಮಯವೇ ಇಲ್ಲ; ಆತ ತನ್ನದೆ ಸಮಸ್ಯೆಗಳಲ್ಲಿ ಮುಳುಗಿ ಹೋಗಿದ್ದಾನೆ. ಆತನ ಪ್ರಾರಬ್ಧಗಳು, ಹಿಂಸೆಯಲ್ಲಿ ಕಳೆದುಹೋಗಿದ್ದಾನೆ. ಆತ ಸಮೀಪವೇ ಇರುವ ಮರವನ್ನೇ ನೋಡಲಾರ, ಇದೆಲ್ಲ ಕುರುಡಿನಿಂದಾಗಿಯೇ ಆತನಿಗೆ ತನ್ನ ಪಡಿಪಾಟಲನ್ನು ಅರ್ಥವಿಸುವುದು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಪ್ರಕೃತಿಯೇ ಆತನಿಗೆ ಇದೆಲ್ಲದರ ನೋಡುವ ಅನಿವಾರ್ಯತೆಯನ್ನು ಉಂಟು ಮಾಡಿದ್ದರೂ ಆತ ಅದನ್ನೆಲ್ಲ ವಿಶ್ಲೇಷಣೆ ಮಾಡುತ್ತ , ಪ್ರಪ್ರತ್ಯೇಕವಾಗಿ ನೋಡುತ್ತ ಕೂರುತ್ತಾನೆ. ಇಡಿಯಾಗಿ ನೋಡದೆ ಇದೆಲ್ಲದರಿಂದ ಪಲಾಯನಗೊಳ್ಳುತ್ತಾನೆ ಅಥವಾ ಆತನಿಗೆ ಅದನ್ನೆಲ್ಲ ನೋಡುವ ಇಷ್ಟವೇ ಇರುವುದಿಲ್ಲ. ನೋಡುವ ಕಲೆಯಲ್ಲಿಯೇ ಪರಿವರ್ತನೆಯ ಅಚ್ಚರಿ ಇರುತ್ತದೆ; ಅದೇ ' ಏನಿರುತ್ತದೊ ಅದಕ್ಕೆ ' ಪರಿವರ್ತನೆಯಾಗುವಂಥದ್ದು. ಇಂಥದ್ದೇ ಇರಬೇಕೆಂಬ ಹೇರಿಕೆ ಅದಲ್ಲ. ನೋಡುವ ಪ್ರಕ್ರಿಯೆಯಲ್ಲಿ ಅಗಾಧವಾದ ನಿಗೂಢತೆ ಇದೆ. ಅದನ್ನು ತಿಳಿಯಲು ಕಾಳಜಿ ಬೇಕು, ಗಮನ ಬೇಕು, ಪ್ರೀತಿ ಬೇಕು.


ಎಪ್ರಿಲ್ 14, 1975
ದೊಡ್ಡದೊಂದು ಕಾಳಿಂಗ ಹಾವು ಹರವಿಕೊಂಡಿದ್ದ ರಸ್ತೆಯಲ್ಲಿ  'ನಿನ್ನ' ಎದುರಿನಲ್ಲಿಯೇ ದಾಟಿ ಹೋಗುತ್ತಿತ್ತು. ಸ್ವಲ್ಪ ಆಚೆ ಇದ್ದ ವಿಶಾಲವಾದ ಕೊಳದಿಂದ ಮೇಲಕ್ಕೆ ಹತ್ತಿದ ಕಾಳಿಂಗ ನಿಧಾನವಾಗಿ ತೆವಳಿ ಹೋಗುತ್ತಿದೆ. ಹೆಚ್ಚಿನಂಶ ಕಪ್ಪಾಗಿಯೇ ಇದ್ದ ಹಾವಿನ ಮೇಲ್ಮೈ ಸಂಜೆಯ ಬಿಸಿಲಿಗೆ ಫಳಪಳನೆ ಹೊಳೆಯುತ್ತಿದೆ. ವಿರಾಮದಲ್ಲಿ, ರಾಜಗಾಂಭೀರ್ಯದಲ್ಲಿ ಹರಿದು ಹೋಗುತ್ತಿದೆ. ನೀನು ಸುಮ್ಮನೆ ನಿಂತು ಅದನ್ನು ಗಮನಿಸುತ್ತಿರುವುದು ಅದಕ್ಕೆ ತಿಳಿದಿರಲೇ ಇಲ್ಲ. ಕನಿಷ್ಠ ಐದಡಿ ಉದ್ದವಿದ್ದ ಹಾವು ಯಾವುದೋ ಪ್ರಾಣಿಯನ್ನು ನುಂಗಿಕೊಂಡು ಹೊಟ್ಟೆ ಊದಿಸಿಕೊಂಡಿತ್ತು. ಅದರ ಹತ್ತಿರವೇ ನೀನು ನಿಂತಿದ್ದರೂ ಗಮನಿಸುತ್ತಿರಲಿಲ್ಲ. ಅದು ಅಲ್ಲಿಯೇ ಇರುವ ದಿನ್ನೆಯೊಂದನ್ನು ಏರಿ ನಿನ್ನ ಹತ್ತಿರವೇ ಬಂದಿದ್ದರೂ ಗಮನಿಸುವುದು ಅದಕ್ಕೆ  ಸಾಧ್ಯವಾಗಿರಲಿಲ್ಲ. ದಿನ್ನೆಯಲ್ಲಿದ್ದ ದೊಡ್ಡ ಸುರಂಗವೊಂದನ್ನು ಸೇರಿಕೊಳ್ಳುವುದಕ್ಕೆ ಹೋಗುತ್ತಿದ್ದ ಕಾಳಿಂಗ ತನ್ನ ಸೀಳು ನಾಲಗೆಯನ್ನು ಒಳಕ್ಕೆ ಹೊರಕ್ಕೆ ಚಾಚುತ್ತಿದೆ. ಅದರಲ್ಲಿ ಒಂದು ಅಪರೂಪದ ಆಕರ್ಷಣೆ, ಸೌಂದರ್ಯ ಇದ್ದ ಕಾರಣ ನೀನು ಅದನ್ನು ಇನ್ನೇನು ಹಿಡಿಯುವುದಕ್ಕೆ  ಮುಂದಾಗಿದ್ದೆ. ಆದರೆ ಅಲ್ಲಿಯೇ ಹೋಗುತ್ತಿದ್ದ ಹಳ್ಳಿಗರು ಅದೊಂದು ವಿಷಕಾರಕ ಕಾಳಿಂಗವಾಗಿದ್ದು ದೂರ ಇರುವುದೇ ಕ್ಷೇಮಕರ ಎಂದಿದ್ದರು. ಮಾರನೆ ದಿನ ಅಲ್ಲಿಗೆ ಬಂದ ಹಳ್ಳಿಯ ಜನರು ಒಂದಿಷ್ಟು ಹಾಲನ್ನು ಅಲ್ಲಿಟ್ಟು,  ದಾಸವಾಳದ ಹೂವನ್ನು ಹಾಕಿ ಪೂಜೆ ಮಾಡಿ ಹೋಗಿದ್ದರು. ಅದೇ ರಸ್ತೆಯಿಂದ ಒಂದಿಷ್ಟು ಮುಂದುವರಿದರೆ ಅಲ್ಲೊಂದು ಪೊದೆ ಇತ್ತು. ಇದೀಗ ಹೆಚ್ಚಿನ ಎಲೆಗಳು ಅದರ ದೇಟಿನಲ್ಲಿ ಇರದಿದ್ದರೂ ಸುಮಾರು ಎರಡು ಇಂಚುಗಳಷ್ಟು ಉದ್ದದ ಮುಳ್ಳುಗಳು ಅದರಲ್ಲಿ ಇತ್ತು. ಹರಿತವಾದ ಮುಳ್ಳುಗಳ ಕಾರಣದಿಂದಾಗಿ ಇದರಲ್ಲಿದ್ದ ರಸಭರಿತ ಎಲೆಗಳನ್ನು ಯಾವುದೇ ಪ್ರಾಣಿಯನ್ನೂ ಮುಟ್ಟುವಂತೆ ಇರಲಿಲ್ಲ. ಮುಳ್ಳುಗಳ ಮೂಲಕ ಸಸ್ಯ ತನ್ನನ್ನೇ ತಾನು ರಕ್ಷಿಸಿಕೊಳ್ಳುತ್ತಿದೆ, ಅಷ್ಟೇ ಅಲ್ಲ. ಯಾರಾದರೂ ಮುಟ್ಟಿದರೆ ಅದರ ಪರಿಣಾಮವೂ ಭಯಾನಕವೇ. ಅದೇ ಕಾಡಿನಲ್ಲಿ ಒಂದಿಷ್ಟು ಚಿಗರೆಗಳೂ ಇದ್ದವು. ಅವುಗಳಿಗೆ ತೀವ್ರ ನಾಚಿಕೆಯ ಸ್ವಭಾವವಾದರೂ ಅತ್ಯಂತ ಕುತೂಹಲಿಗಳಾಗಿದ್ದವು. ಕೆಲವೊಮ್ಮೆ ಅವುಗಳು ಸಮೀಪದಲ್ಲಿಯೇ ಲಭ್ಯವೆನಿಸುತ್ತಿದ್ದರೂ ಎಂದೂ ಸಮೀಪಕ್ಕೆ ಬರುತ್ತಿರಲಿಲ್ಲ. ನೀವು ಒಂದುವೇಳೆ ಅವುಗಳಿಗೆ ಅಚಾನಕ್ಕಾಗಿ ಸಮೀಪಕ್ಕೆ ಹೋದರೂ ತಕ್ಷಣ ಕುಪ್ಪಳಿಸಿ ಸಮೀಪದ ಪೊದೆಯಲ್ಲೆಲ್ಲೋ ಮಾಯವಾಗಿಬಿಡುತ್ತವೆ. 'ನೀನು' ಒಂಟಿಯಾಗಿ ಹೋದರೆ, ಆ ಗುಂಪಿನಲ್ಲಿದ್ದ ಹೊಳೆಯುವ ಕಣ್ಣಿನ, ಚುರುಕು ಕಿವಿಯ ಚಿಗರೆಯೊಂದು ಮಾತ್ರ ತನ್ನ ಸಮೀಪಕ್ಕೆ ಬಿಟ್ಟುಕೊಳ್ಳುತ್ತಿತ್ತು. ಅಲ್ಲಿದ್ದ ಚಿಗರೆಗಳಿಗೆಲ್ಲ ಕಂದು ಮೈ ಮೇಲೆ ಬಿಳಿ ಚುಕ್ಕೆ ಇದೆ. ಪ್ರತಿಯೊಂದೂ ಅತ್ಯಂತ ಸೂಕ್ಷ್ಮ , ಮೃದುವಾಗಿದ್ದು ಅವುಗಳೊಂದಿಗೆ ಇರುವುದೆಂದರೆ ಸಂಭ್ರಮವಾಗಿರುತ್ತದೆ. ಅವುಗಳಲ್ಲಿದ್ದ ಒಂದು ಸಂಪೂರ್ಣ ಬೆಳ್ಳಗಿತ್ತು, ಅದು ಒಂದಿಷ್ಟು ಕುಚೇಷ್ಟೆಯನ್ನು ಮಾಡುವಂತೆ ಕಾಣುತ್ತಿತ್ತು.
ಒಳಿತೆಂಬುದು ಕೆಡುಕಿನ ವಿರುದ್ಧ ಧ್ರುವ ಅಲ್ಲ. ಒಳಿತಿನ ಸುತ್ತಲೂ ಆವರಿಸಿದ್ದರೂ ಕೆಡುಕು ಎಂದಿಗೂ ಒಳಿತನ್ನು ಮುಟ್ಟಿಲ್ಲ. ಒಳಿತಿಗೆ ಹಾನಿಯುಂಟು ಮಾಡುವುದು ಕೆಡುಕಿಗೆ ಸಾಧ್ಯವಿಲ್ಲ; ಆದರೆ ಒಳಿತು ಕೆಡುಕಿಗೆ ಹಾನಿಯುಂಟುಮಾಡುವಂತೆ ಭಾಸವಾಗುವುದರಿಂದ ಕೆಡುಕು ಮತ್ತಷ್ಟು ವಂಚಕ ಹಾಗೂ ಕುಚೋದ್ಯದ ಹಂತವನ್ನು ತಲುಪುತ್ತದೆ. ಕೆಡುಕನ್ನು ಅಳವಡಿಸಿಕೊಳ್ಳಬಹುದು, ಹದಗೊಳಿಸಬಹುದು, ವಿಜೃಂಭಿತ ಹಿಂಸೆಯಾಗಿ ಕೂಡ ಮಾರ್ಪಡಿಸಬಹುದು ; ಕೆಡುಕು ಸಮಯದ ಚಲನಶೀಲತೆಯ ನಡುವೆ ಹುಟ್ಟಿಕೊಳ್ಳುತ್ತದೆ. ಅದೇ ರೀತಿಯಲ್ಲಿ ಬೆಳೆಸಿ ಕೌಶಲ್ಯ ಪೂರ್ಣವಾಗಿ ಬಳಸಲ್ಪಡುತ್ತದೆ. ಆದರೆ ಒಳಿತು ಎಂಬುದು ಸಮಯದ ಪರಿಮಿತಿಯಲ್ಲಿ  ಇರುವಂಥದ್ದಲ್ಲ. ಅದನ್ನು ಅಳವಡಿಸಿಕೊಳ್ಳುವುದೂ ಸಾಧ್ಯವಿಲ್ಲ. ಒಳಿತುಂಟಾಗುವಿಕೆಯು ಢಾಳಾಗಿ ಪ್ರದರ್ಶಿಸಲ್ಪಡುವುದಿಲ್ಲ. ಅದಕ್ಕೊಂದು ಕಾರಣವೇ ಇಲ್ಲದ್ದರಿಂದ ಪರಿಣಾಮವೂ ಇರುವುದಿಲ್ಲ. ಒಳಿತೆಂಬುದು ಆಲೋಚನೆಯ ಉತ್ಪನ್ನವಲ್ಲದ ಕಾರಣ ಕೆಡುಕು ಒಳಿತಾಗುವುದು ಸಾಧ್ಯವೇ ಇಲ್ಲ. ಸೌಂದರ್ಯದಂತೆ ಒಳಿತೂ ಕೂಡ ಆಲೋಚನೆಗೆ ನಿಲುಕುವುದಿಲ್ಲ. ಆಲೋಚನೆ ಸ್ಟೃಸಿದ ವಸ್ತುವನ್ನು ಅದರಿಂದಲೇ ಬಿಚ್ಚಬಹುದು. ಆದರೆ ಒಳಿತಿಗೆ ಇದು ಅನ್ವಯವಲ್ಲ. ಒಳಿತು ಆಲೋಚನೆಯಿಂದಾಗಿರುವುದಿಲ್ಲ. ಒಳಿತು ಇರುವುದಕ್ಕೆ ನಿರ್ದಿಷ್ಠವಾದ ಸ್ಥಳ ಇಲ್ಲ.
ಎಲ್ಲಿ ಒಳಿತೆಂಬುದು ಇರುವುದೊ ಅಲ್ಲಿ ವ್ಯವಸ್ಥೆ ಎಂಬುದು ಮನೆಮಾಡಿ ಇರುತ್ತದೆ ; ಅದು ಯಾಜಮಾನ್ಯ, ಶಿಕ್ಷ-ರಕ್ಷೆಯ ವ್ಯವಸ್ಥೆ ಅಲ್ಲ.



ಎಪ್ರಿಲ್ 17, 1975
ಸ್ಥಳಾವಕಾಶವೇ ವ್ಯವಸ್ಥೆ. ಅವಕಾಶವೆ ಕಾಲ, ಉದ್ದ, ಅಗಲ ಮತ್ತು  ವಿಸ್ತಾರ. ಈ ಮುಂಜಾನೆ ಸಮುದ್ರ ಹಾಗೂ ಆಗಸ ಎರಡೂ ಪರಸ್ಪರ ಒಂದಾಗಿ ಸ್ವರ್ಗದ ಸೃಷ್ಟಿಯಾಗಿತ್ತು. ಒಂದೆಡೆ ಹಳದಿ ಹೂವಿಂದ ತುಂಬಿದ ಬೆಟ್ಟ- ಇನ್ನೊಂದೆಡೆ ಸಮುದ್ರ- ಎರಡನ್ನೂ ಸಂದಿಸಿದ ದಿಗಂತ ಭೂಮಿಯನ್ನು ಸ್ವರ್ಗೀಯ ವ್ಯವಸ್ಥೆಯಾಗಿಸಿವೆ; ಇದುವೇ ಜಾಗತಿಕ ಪರಿಸರ. ದಟ್ಟವಾಗಿ, ಎತ್ತರಕ್ಕೆ ಬೆಳೆದಿರುವ ಏಕಾಂಗಿ ಸೈಪ್ರಸ್ ಮರಕ್ಕೆ ವ್ಯವಸ್ಥೆಯ ಸೌಂದರ್ಯವಿದೆ. ದೂರದ ಬೆಟ್ಟದಲ್ಲೊಂದು ಮನೆ, ಸಣ್ಣ ಸಣ್ಣ ಬೆಟ್ಟಗಳ ಮೇಲೆ ಅಲೆಯಾಗಿ ಎದ್ದಿರುವ ಪರ್ವತಗಳು; ವಿಶಾಲವಾದ ಹಸಿರು ಹುಲ್ಲುಗಾವಲಿನಲ್ಲಿ  ಮೇಯುತ್ತಿರುವ ಏಕಾಂಗಿ ಹಸು- ಇದು ಕಾಲವನ್ನು ಮೀರಿದ ದೃಶ್ಯ. ಮನುಷ್ಯನೊಬ್ಬ ಗುಡ್ಡ  ಏರುತ್ತಿರುವುದು ಆತನ ಕಷ್ಟ ಕೋಟಲೆಯಲ್ಲಿ  ಸಿಲುಕಿರುವುದಕ್ಕೆ ]ರಕ ದೃಶ್ಯದಂತಿತ್ತು.
ಅಲ್ಲಿ ಏನೂ ಅಲ್ಲದ ಒಂದು ಸ್ಥಳಾವಕಾಶವಿದ್ದು, ಅದರ ವಿಸ್ತಾರಕ್ಕೆ ಕಾಲನ ಕಟ್ಟಳೆಯೇ ಇಲ್ಲ. ಇದನ್ನು ಆಲೋಚನೆಯಿಂದ ಅಳೆಯುವುದಕ್ಕೆ ಸಾಧ್ಯವಿಲ್ಲ. ಈ ಸ್ಥಳಾವಕಾಶದಲ್ಲಿ  ಹೋಗುವುದು ಮನಸ್ಸಿಗೆ ಸಾಧ್ಯವಾಗುವುದಿಲ್ಲ; ಅದನ್ನು ಕೇವಲ ವೀಕ್ಷಿಸಬಹುದು. ಈ ವೀಕ್ಷಣೆಯ ಪ್ರಕ್ರಿಯೆಯಲ್ಲಿ  ಅನುಭವಿಸುವವ ಇರುವುದಿಲ್ಲ. ಇಲ್ಲಿನ ವೀಕ್ಷಕನಿಗೆ ಇತಿಹಾಸವೆ ಇಲ್ಲ. ಸನ್ನಿವೇಶವೂ, ಐತಿಹ್ಯವೂ ಇಲ್ಲ. "ಏನಿದೆಯೋ ಅದೇ' ವೀಕ್ಷಕ. ತಿಳಿವಳಿಕೆ ಸುಧೀರ್ಘವಾಗಿದ್ದರೂ ಅದಕ್ಕೊಂದು ಸ್ಥಳಾವಕಾಶ ಎಂಬುದು ಇರುವುದಿಲ್ಲ. ತಿಳಿವಳಿಕೆಯ ಭಾರ ಹಾಗೂ ವಿಸ್ತಾರಗಳು ಸ್ಥಳಾವಕಾಶವನ್ನುಪಡೆದು ಉಸಿರು ಕಟ್ಟಿಸುತ್ತದೆ.  ಮೇಲ್ಮಟ್ಟ  ಅಥವಾ ತಳಮಟ್ಟದ್ದಾದರೂ ಅಲ್ಲಿ  ಸ್ವ-ದ ಬಗೆಗಿನ ತಿಳಿವಳಿಕೆಗಳೇ ಇದ್ದಿರುವುದಿಲ್ಲ. ಸ್ವ-ದ ಬಗ್ಗೆ ತಿಳಿವಳಿಕೆ ಇದ್ದರೂ ಅದು ಕೇವಲ ಶಾಬ್ದಿಕವಾಗಿರುತ್ತದೆ. ಆಲೋಚನೆಗಳಿಂದ ಆವೃತವಾದ ಕೇವಲ ಅಸ್ತಿಪಂಜರದಂತೆ ಇರುತ್ತದೆ. ಆಲೋಚನೆಗೆ ತನ್ನದೆ ದೇಹದೊಳಕ್ಕೆ ಪ್ರವೇಶಿಸುವುದು ಸಾಧ್ಯವಿರುವುದಿಲ್ಲ. ತಾನೇ ಕ್ರೂಡೀಕರಿಸಿ ಇಟ್ಟುಕೊಂಡದ್ದನ್ನು ನಿರಾಕರಿಸುವ ಸಾಮರ್ಥ್ಯವೂ ಆಲೋಚನೆಗೆ ಇದ್ದಿರುವುದಿಲ್ಲ. ಯಾವಾಗ ನಿರಾಕರಿಸುತ್ತದೊ ಮುಂದೆ ಸ್ವೀಕರಿಸುವದನ್ನೆ ನಿಲ್ಲಿಸಿ ಬಿಡುತ್ತದೆ. ಯಾವಾಗ ಸ್ವ-ದೊಳಗೆ ಕಾಲ ಎಂಬುದು ಇರುವುದಿಲ್ಲವೋ, ಆವಾಗ ಉಳಿಯುವ ಸ್ಥಳಾವಕಾಶಕ್ಕೆ ಅಳತೆ ಸಾಧ್ಯವಿರುವುದಿಲ್ಲ.
ಸಾಧಕ ಬಾಧಕಗಳು, ಗಳಿಕೆ ಅಥವಾ ಕಳೆದುಕೊಳ್ಳುವುದು, ಹೋಲಿಕೆ ಮತ್ತು  ತತ್ವ ಬದ್ಧತೆ, ಘನತೆ ಗೌರವ ಅಥವಾ ಅದರ ನಿರಾಕರಣೆಗಳ ವ್ಯಾಪ್ತಿಯಲ್ಲಿನ ಚಲನಯೇ ಮನಸ್ಸಿಗೊಂದು ಅಳತೆಯನ್ನು ಕೊಟ್ಟಿರುತ್ತದೆ. ಭವಿಷ್ಯದ ಬಗ್ಗೆ ನಂಬಿಕೆ ಮತ್ತು ಭೂತಕಾಲದ ಭಾರದ ನಡುವಿನ ಚಲನಶೀಲತೆಯೇ ಕಾಲ. ಇದೆಲ್ಲವೂ ಸೇರಿರುವ ಜಾಲವೇ ನಾನು ಅಥವಾ ಸ್ವ-ವಾಗಿದೆ. ಸ್ವ ಮತ್ತು  ಪರಮಾತ್ಮ ಅಥವಾ ಆಗಾಧಶಕ್ತಿ  ಅಥವಾ ಭಗವತ್ ಸತ್ಯದೊಂದಿಗಿನ ಸಂಬಂಧವೂ ಇದೇ ಜಾಲದ ಭಾಗವಾಗಿರುತ್ತದೆ. ಇದೆಲ್ಲವೂ ಆಲೋಚನೆಯ ಭಾಗವಾಗಿಯೇ ಇರುತ್ತದೆ. ಎಷ್ಟೇ ಕಸರತ್ತು  ಮಾಡಿದರೂ ಕಾಲನಿಲ್ಲದ ಅವಕಾಶದೊಳಗೆ ಪ್ರವೇಶ ಮಾಡುವುದು ಆಲೋಚನೆಗೆ ಸಾಧ್ಯವೇ ಇಲ್ಲ. ಆಲೋಚನೆ ಸೃಷ್ಟಿಸುವ ಯಾವೊಂದು ನಿರ್ದಿಷ್ಟ ಮಾರ್ಗ ಅಥವಾ ಆಧ್ಯಾತ್ಮದ ಮಾರ್ಗದಿಂದಲೂ ಕಾಲವಿಲ್ಲದ  ಅವಕಾಶದ ಪ್ರಪಂಚಕ್ಕೆ ಹೋಗುವುದು ಸಾಧ್ಯವಿಲ್ಲ; ಅದಕ್ಕೆ ಅಂಥದೊಂದು ಪ್ರವೇಶ ಮಾರ್ಗವೇ ಇಲ್ಲ. ಚಾವಿಯೂ ಇಲ್ಲ. ಆಲೋಚನೆ ತನ್ನ ಮುಗಿಯದ ಚರ್ವಿತ ಚರ್ವಣವನ್ನು ತಿಳಿದುಕೊಳ್ಳಬಹುದು. ಭ್ರಷ್ಟರನ್ನಾಗಿಸುವ ತನ್ನ ಸಾಮರ್ಥ್ಯ, ವಂಚನೆ ಹಾಗೂ ಭ್ರಮೆಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ತಿಳಿದುಕೊಳ್ಳಬಹುದು. ಅದೆಲ್ಲ ವೀಕ್ಷಿಸಲ್ಪಟ್ಟಿದ್ದು, ವೀಕ್ಷಕನಾಗಿರುತ್ತದೆ ಅಷ್ಟೆ. ಆಲೋಚನೆ ಸೃಷ್ಟಿಸುವ ದೇವರೆಂದರೆ ಅದರದ್ದೇ ಮುಂದುವರಿದ ಭಾಗವಾಗಿದೆ. ಇಂಥ ದೇವರ ಆರಾಧನೆ ಎಂದರೆ ಆತ್ಮನ ಆರಾಧನೆಯೇ ಆಗಿದೆ.
ಆಲೋಚನೆಯಿಂದಾಚೆಗೆ, ತಿಳಿವಳಿಕೆಗಳಿಂದಾಚೆ ಏನಿದೆ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಪುರಾಣಕತೆಯನ್ನಾಗಿಸಿ, ಗುರುತನ್ನಾಗಿಸಿ ಕೆಲವೇ ಕೆಲವರ ಕಿವಿಯಲ್ಲಿ  ಹೇಳುವುದೂ ಸಾಧ್ಯವಿಲ್ಲ. ಅದನ್ನು ಅವರವರೇ ನೋಡಬೇಕು.





* ಮಲಿಬು
ಇದೀಗ ಮಲಿಬುವಿನ ಮನೆಗೆ ಅವರು ಹಿಂದಿರುಗಿದ್ದರು.
ಎಪ್ರಿಲ್  23, 1975
ವಿಶಾಲವಾದ ನದಿ ನಿಂತ ಕೆರೆಯಂತೆ ಸ್ತಬ್ಧವಾಗಿದೆ. ಅಲ್ಲಿ ಅಲೆಗಳೆ ಇರಲಿಲ್ಲ; ನಸುಕಿನಜಾವವಾಗಿದ್ದರಿಂದ ಬೆಳಗಿನ ತಂಗಾಳಿ ಕೂಡ ಸುಳಿಯದೆ ಏನೊಂದೂ ಎಚ್ಚರಗೊಂಡಿಲ್ಲ. ನಕ್ಷತ್ರಗಳು ನೀರಿನಲ್ಲಿ ಎದ್ದು  ಕಾಣುತ್ತ  ಮಿನುಗುತ್ತಿದ್ದವು; ಅದರಲ್ಲೂ  ಬೆಳ್ಳಿಚುಕ್ಕಿಗಳಾಗಿ ಕಾಣುತ್ತಿತ್ತು. ಹೊಳೆಯಂಚಿನ ಉದ್ದಕ್ಕೂ ಮರಗಳು ಕತ್ತಲಿನಲ್ಲಿಯೇ ಇದ್ದವು; ಅವುಗಳ ಮಗ್ಗಲಿನಲ್ಲಿದ್ದ ಊರೂ ನಿದ್ದೆಯಲ್ಲಿತ್ತು. ಯಾವೊಂದು ಎಲೆಯೂ ಅಲುಗಾಡುತ್ತಿಲ್ಲ. ವಿಷಾದ ಗೂಬೆಗಳು ಹಳೆಯ ಹುಣಸೆ ಮರದಲ್ಲಿ  ಬಡಬಡಿಸುತ್ತಿವೆ; ಅದು ಅವುಗಳ ಮನೆ-ಸೂರ್ಯೋದಯವಾಗುತ್ತಲೆ ಅವುಗಳಿಗೆ ಬಿಸಿಲು ಕಾಯಿಸಿಕೊಳ್ಳುದಕ್ಕಿದೆ. ಗದ್ದಲ ಹಾಕುವ ಅಚ್ಚ  ಹಸುರಿನ ಗಿಳಿಗಳೂ ತೆಪ್ಪಗಿವೆ. ಕಾಡು ಜಿರಲೆಗಳು, ಕ್ರಿಮಿಗಳೂ ಸೇರಿದಂತೆ ಏನೆಲ್ಲ  ಚರಾಚರಗಳು ಉಸಿರುಗಟ್ಟಿ ಹಿಡಿದು ಸೂರ್ಯನಿಗಾಗಿ ಆರಾಧ್ಯ ಮನಸ್ಸಿನಲ್ಲಿ ಕಾಯ್ದು ಕುಳಿತಿವೆ. ನದಿ ಚಲಿಸುತ್ತಿರಲಿಲ್ಲ. ಸಾಮಾನ್ಯವಾಗಿ ಲಾಂಟರ್ನ್‌ ಕಟ್ಟಿಕೊಂಡು ಹೋಗುವ ದೋಣಿಗಳೂ ಕಾಣುತ್ತಿರಲಿಲ್ಲ. ಇಂಥ ಸ್ಥಿತಿಯಲ್ಲಿ ನಿಧಾನವಾಗಿ ಕತ್ತಲಲ್ಲಿ ನಿಗೂಢವಾಗಿದ್ದ ಮರದ ಮೇಲೆ ಅರುಣೋದಯವಾಗುತ್ತದೆ. ಆ ಧ್ಯಾನಸ್ಥ ಸ್ಥಿತಿಯ ಗೂಢತೆಯಲ್ಲಿ ಎಲ್ಲ ಜೀವಿಗಳು ಸ್ತಬ್ಧವಾಗಿಯೇ ಇದ್ದವು. ಆಗ "ನಿನ್ನ' ಮನಸ್ಸು ಕಾಲನ ಆವರಣವಿಲ್ಲದೆ ಅನಂತವಾಗಿತ್ತು. ಆ ಸನ್ನಿವೇಶ ಎಷ್ಟೊಂದು ಹೊತ್ತಿನವರೆಗಿತ್ತು ಎಂದು ಅಳೆಯಲು ಯಾವುದೆ ಮಾಪನ ಇದ್ದಿರಲಿಲ್ಲ. ಹಾಗೆಯೇ ಅಲುಗಾಟ ಮತ್ತು  ಎಚ್ಚರಿಕೆ ಪಸರಿಸುತ್ತಲೇ ನದಿ ದಡದಗುಂಟ ಎಲ್ಲೆಡೆ ಗಿಳಿ, ಗೂಬೆ, ಕಾಗೆ, ಮೈನಾ ಮತ್ತು  ನಾಯಿಗಳೆಲ್ಲ ಕೂಗಿ ಸದ್ದು ಮಾಡತೊಡಗಿದವು. ಒಮ್ಮೆಲೆ ಮರದ ಕೊಂಬೆಗಳ ನಡುವೆ ಬಂಗಾರದ ಬಣ್ಣದಲ್ಲಿ ಸೂರ್ಯದರ್ಶನವಾಗುತ್ತದೆ. ಇಷ್ಟಾದ ನಂತರ ವಿಶಾಲ ನದಿ ಎಚ್ಚೆತ್ತುಕೊಂಡು  ಕಾಲ, ಉದ್ದ, ಅಗಲ ಮತ್ತು ವಿಸ್ತಾರದಲ್ಲಿ ಹರಿಯಲು ಆರಂಭಿಸಿತು. ಹಾಗೆ ಎಲ್ಲೆಡೆ ಜನಜೀವನ ಆರಂಭವಾಯಿತು.
ಅಂದಿನ ಬೆಳಗು ಎಷ್ಟೊಂದು ಸುಂದರವಾಗಿತ್ತು. ಬೆಳಕಿನ ಶುಭ್ರತೆಯಾದರೂ ಏನು. ಜೀವ ಕಳೆಯ ನೀರಿನ ಮೇಲೆ ಸೂರ್ಯ ರಶ್ಮಿ ನಿರ್ಮಿಸಿದ ಚಿನ್ನದ ಮಾರ್ಗ ಎಷ್ಟೊಂದು ಸುಂದರವಾಗಿ ತೋರುತ್ತಿತ್ತು. ಆಗ ನೀನೆ ಜಗವಾಗಿ, ವಿಶ್ವವಾಗಿ, ಸಾವಿಲ್ಲದ ಸೌಂದರ್ಯದ ರೂಪದಲ್ಲಿ, ಆಳ ಪ್ರೀತಿಯ ಆನಂದದಲ್ಲಿದ್ದೆ. ಆದರೆ "ನೀನು' ಎಂಬುದು ಮಾತ್ರ ಅಲ್ಲಿ  ಇರಲಿಲ್ಲ. ನೀನು ಇದ್ದರೆ ಇದಾವುದೂ ಅಲ್ಲಿ ಸಾಕಾರವಾಗುತ್ತಿರಲಿಲ್ಲ. ಙ ಡಿಟಿ ಟಿ ಣ ಟಿಜಿಟಿಟಿ ಚಿಟಿಜ ಣ ಟಿಜಟಿ ಣ ಟಿ ಚಿಚಿಟಿ ಟಿ ಚಿಟಿ ಟಿಜಟ ಛಿಚಿಟಿ.
ಏನೋ ಒಂದು ಆಗುವುದರಲ್ಲಿ  ಅನಿರ್ದಿಷ್ಟತೆ ಮತ್ತು ಅಭದ್ರತೆ ಇರುತ್ತದೆ. ಏನೂ ಇಲ್ಲದ- ಶೂನ್ಯ ಸ್ಥಿತಿಯಲ್ಲಿ  ಆಗಾಧ ಭದ್ರತೆ ಮತ್ತು ಸ್ಪಷ್ಟತೆ ಇರುತ್ತದೆ. ಯಾವುದು ]ರ್ಣ ರೀತಿಯಲ್ಲಿ  ಭದ್ರವೋ ಅದೆಂದೂ ಸಾಯುವುದಿಲ್ಲ; ಆಗುವಿಕೆಯಲ್ಲಿ  ಭ್ರಷ್ಟತೆ ಇರುತ್ತದೆ. ಇದೀಗ ಜಗತ್ತು  ತಾನೇನೊ ಆಗಬೇಕೆಂಬ ಧಾವಂತದಲ್ಲಿದೆ. ಸಾಧನೆ, ಪಡೆದುಕೊಳ್ಳುವಿಕೆ ಹೀಗೆ.. ಇದರ ಪರಿಣಾಮವೆ ಕಳೆದುಕೊಳ್ಳುವ ಭಯ ಮತ್ತು ಸಾಯುವ ಭಯ. ಯಾವುದರ ಭದ್ರತೆ, ಆಗಾಧತೆಯನ್ನು ಅಳೆಯಲಾಗದೊ ಅಂಥ ಶೂನ್ಯ ಅಥವಾ ಏನೂ ಇಲ್ಲದ ಸ್ಥಿತಿಗೆ ತಲುಪುವಾಗ ಮನಸ್ಸು ಸ್ವ-ನಾನು ಎಂಬ ಕಿಷ್ಕಿಂದೆಯ ಇಕ್ಕಟ್ಟನ್ನು ದಾಟಿ ಬರಬೇಕಾದ ಸ್ಥಿತಿ ಇರುತ್ತದೆ. ಆ ನಡುವೆ ಆಲೋಚನೆಗೆ ಶೂನ್ಯತೆಯನ್ನು ಹಿಡಿದುಕೊಳ್ಳುವ ಆಸೆ. ತಾನು ಹಿಡಿದಿಟ್ಟ ಶೂನ್ಯತೆಯನ್ನೇ ಬಳಸಿ ಹೇಗಾದರೂ ಮಾರುವ ಹುನ್ನಾರ ಬೇರೆ. ಇದನ್ನೆ ಎಲ್ಲರೂ ಒಪ್ಪಿಕೊಳ್ಳುವಂತೆ, ಒಪ್ಪಿ ಗೌರವಿಸುವ, ಅದನ್ನೆ ಆರಾಧಿಸುವಂತಾಗಬೇಕು ಎಂಬ ಆಸೆ. ಆದರೆ ಆಲೋಚನೆಗೆ ಇದನ್ನು ಯಾವೊಂದು ವಿಭಾಗದಲ್ಲೂ ವರ್ಗೀಕರಿಸುವುದೆ ಸಾಧ್ಯವಾಗುವುದಿಲ್ಲ.
ಪರಿಣಾಮವಾಗಿ ಕಾಲ್ಪನಿಕ ಶೂನ್ಯ ಎಂಬುದು  ಭ್ರಾಂತಿಯಂತೆ, ಉರುಳಂತೆ ಕಾಣುತ್ತದೆ. ಇದೆಲ್ಲ ಕೆಲವರಿಗೆ ಮಾತ್ರ ಸಾಧ್ಯ ಎಂದೆಲ್ಲ ಬಿಂಬಿಸುವ ಪ್ರಯತ್ನಗಳು ಬೇರೆ. ಇದೇ ಜಂಜಡ- ಆಲೋಚನೆಯು ಸಾಗುವ ಮಾರ್ಗವೆ ಅದು; ಕುಚೋದ್ಯ ರೀತಿಯಲ್ಲಿ ಭಯಭೀತವಾಗಿ, ಕ್ರೌರ್ಯದ ರೀತಿಯಲ್ಲಿ, ನರಮಂಡಲಕ್ಕೆ ಹಿಡಿದ ವ್ಯಾಧಿಯಾಗಿ, ಅಭದ್ರವಾಗಿ ಇದ್ದರೂ ತಾನು ಕಂಡುಕೊಂಡ ಶೂನ್ಯದಲ್ಲಿ ಒಂದು ಭದ್ರತೆ ಇದೆ. ತನ್ನ ಕ್ರಿಯೆಯಲ್ಲಿ  ಭದ್ರತೆ ಇದೆ. ತಾನು ಪಡೆದ ತಿಳಿವಳಿಕೆಯೇ ಶ್ರೇಷ್ಠ ಎಂದುಕೊಂಡು ಹೆಮ್ಮೆಯಿಂದ ಇರುತ್ತದೆ. ಅದೇ ಗ್ಯಾನದಲ್ಲಿರುವಾಗ  ಒಂದು ದಿನ ಕನಸು ಸತ್ಯವಾದಂತೆ ಗೋಚರಿಸಬಹುದು. ಆದರೆ ಆಲೋಚನೆ ಸತ್ಯವಾಗಿಸಿದ ಶೂನ್ಯ ವಾಸ್ತವ ಅಲ್ಲ. ನಿಜವಾದ ಶೂನ್ಯ ಎಂಬುದು ಇಲ್ಲಿ ಸತ್ಯವಾಗಿ ಕಂಡರೂ ವಾಸ್ತವ ಆಗಿರುವುದಿಲ್ಲ. ಸ್ವಯಂ ಎಂಬುದು ಆಲೋಚನೆಗಳ ಗೂಡಿನಿಂದಾದ ಸತ್ಯ ಸಂಗತಿ. ಅದೇ ಅಸ್ತಿವಾರದ ಮೇಲೆಯೇ ತನ್ನೆಲ್ಲ ಅಸ್ತಿತ್ವವನ್ನು ಕಟ್ಟಿಕೊಂಡಿರುತ್ತದೆ- ಅದರ ಪ್ರೇಮ, ವಿಷಾದ, ಪ್ರತ್ಯೇಕತೆ ಎಲ್ಲವನ್ನೂ ಸೇರಿ- ಇದು ಪ್ರತಿಪಾದಿಸುವ ದೇೀವೋಪಾಸನೆ ಅಥವಾ ಇಲ್ಲಿರುವುದು ಒಂದೆ ಒಂದು ದೈವತ್ವ ಎಂಬುದೂ ಆಲೋಚನೆಯೇ ನಿರ್ಮಿಸಿಕೊಂಡದ್ದು. ಅದರ ಪ್ರಾರ್ಥನೆ, ಅದರ ರಮಣೀಯ ಆರಾಧನೆಗಳು, ಎಲ್ಲವೂ ಆಲೋಚನೆಯ ಹಂದರವೇ. ವಾಸ್ತವದಲ್ಲಿ  ಭದ್ರತೆ ಅಥವಾ ಸ್ಪಟಿಕ ಸ್ಪಷ್ಟತೆ ಎಂಬುದು  ಯಾವುದೂ  ಇಲ್ಲ.
ಇಲ್ಲಿ  ಸ್ವಯಂ ಎಂಬುದರ ತಿಳಿವಳಿಕೆ ಕಾಲ, ಉದ್ದ, ಅಗಲ ಮತ್ತು  ವಿಸ್ತಾರ ಎಲ್ಲವೂ ಆಗಿರುತ್ತದೆ; ಅದನ್ನು ಹೊಂದಬಹುದು, ಏಣಿಯಂತೆ ಬಳಸಬಹುದು, ಸುಧಾರಿಸಬಹುದು, ಸಾಧಿಸಬಹುದು. ಈ ತೆರನಾದ ಸ್ವಯಂ ತಿಳಿವಳಿಕೆ ಎಂಬುದು ಮನಸ್ಸನ್ನು ಯಾವ ರೀತಿಯಿಂದಲೂ ಅದರ ತಿಳಿವಳಿಕೆಯ ಭಾರದಿಂದ ಮುಕ್ತಗೊಳಿಸುವುದಿಲ್ಲ. ನೀನೆ ಹೊರೆ; ಅದನ್ನು ಸರಿಯಾಗಿ ನೋಡುವುದರಲ್ಲಿಯೇ ಸತ್ಯದರ್ಶನವಾಗುತ್ತದೆ. ಮತ್ತು ಆಗ ಸಿಗುವ ಸ್ವತಂತ್ರ ಆಲೋಚನೆಯಿಂದಾಗಿರುವಂಥದಲ್ಲ. ನೋಡುವಿಕೆಯೇ ಮಾಡುವಿಕೆ. ಮಾಡುವಿಕೆ ಎಂಬುದು ಭದ್ರತೆ, ಸ್ಪಷ್ಟತೆ, ಶೂನ್ಯತೆಯಿಂದಲೆ ಉಂಟಾಗಿರುತ್ತದೆ.



ಎಪ್ರಿಲ್ 24, 1975ತ್ತಿನಲ್ಲಿರುವ ಪ್ರತಿಯೊಂದು ಜೀವರಾಶಿಗೂ ಅದರದ್ದೇ ಆದ ಸೂಕ್ಷ್ಮ  ಸಂವೇದನೆಗಳಿರುತ್ತವೆ; ಅದರದ್ದೇ ಆದ ಜೀವನದ ಗತಿ, ಪ್ರಜ್ಞೆ  ಇದ್ದಿರುತ್ತದೆ. ಆದರೆ ಮನುಷ್ಯ ಜೀವಿ ಮಾತ್ರ ತಾನೆ ಅತಿ ಬುದ್ಧಿವಂತ ಎಂಬ ಭ್ರಮೆಯಲ್ಲಿ ಸಂವೇದನಾರಹಿತನಾಗಿದ್ದಾನೆ. ಕ್ರೌರ್ಯ, ಹಾಳುಗೆಡಹುವಿಕೆಯಲ್ಲಿ  ತೊಡಗಿಕೊಂಡು ಆ ಮೂಲಕ ಪ್ರೀತಿಯನ್ನು, ಜೀವರಾಶಿಯ ಗೌರವನ್ನು ಕಳೆದುಕೊಳ್ಳುತ್ತಿದ್ದಾನೆ.
ಕಿತ್ತಳೆ ಮರಗಳ ಕಣಿವೆಯಲ್ಲಿ, ಮರಗಳಲ್ಲಿ  ಹೂವು ಮಿಡಿಗಾಯಿ ತುಂಬಿದ್ದರಿಂದ ಅದೊಂದು ಸುಂದರ ಹಾಗೂ ಶುಭ್ರ ಮುಂಜಾನೆಯಾಗಿತ್ತು. ದಕ್ಷಿಣದಲ್ಲಿ  ಚಾಚಿಕೊಂಡಿದ್ದ ಪರ್ವತಗಳ ಮೇಲೆ ಮಂಜು ಚಿಮುಕಿಸಿದಂತೆ ಬಿದ್ದಿತ್ತು. ಪರ್ವತಗಳು ಖಾಲಿಯಾಗಿ, ಕಠಿಣವಾಗಿ ಮತ್ತು ಏಕಾಂಗಿಯಾಗಿದ್ದವು. ಬೆಳಗಿನ ಮೃದುವಾದ ನೀಲಾಕಾಶದಲ್ಲಿ  ಪರ್ವತಗಳು ಅತ್ಯಂತ ನಿಕಟವಾಗಿ ಕಾಣುತ್ತಿದ್ದವು. ಸರಿ ಸುಮಾರು ಕೈಗೆ ನಿಲುಕುವಂತೆ ಕಾಣುತ್ತಿತ್ತು. ಅವುಗಳಲ್ಲಿ ವಯೋಮಾನದ ತೀವ್ರತೆ, ಹಾಳುಗೆಡಹಲಾರದಂಥ ಘನತೆ ಮತ್ತು ಕಾಲಾತೀತತೆಯಲ್ಲಿರುವ ಸೌಂದರ್ಯವೂ ಮೈಗುಡಿತ್ತು.
ಅದೊಂದು ಅತ್ಯಂತ ಸ್ತಬ್ಧವಾದ ಮುಂಜಾನೆಯಾಗಿತ್ತು. ಕಿತ್ತಳೆ ಮೊಗ್ಗಿನ ಪರಿಮಳ ಕಣಿವೆಯಲ್ಲೆಲ್ಲ ಪಸರಿಸಿತ್ತು. ಅಚ್ಚರಿಯ ಹೊಂಬೆಳಕು ಆವರಿಸಿತ್ತು. ಜಗತ್ತಿನ ಈ ಭಾಗದ ಬೆಳಕಿಗೆ ವಿಶಿಷ್ಟ ಗುಣವಿದೆ; ಕೋರೈಸುವ ಜೀವಂತಿಕೆ ಮತ್ತು  ಕಣ್ಣನ್ನು ತುಂಬಿಕೊಳ್ಳುವ ಈ ಬೆಳಕು ನಿಮ್ಮ ಇಡೀ ಪ್ರಜ್ಞಾವಲಯವನ್ನೆಲ್ಲ ಪಸರಿಸಿದಂತೆ ಅನುಭವವಾಗುತ್ತದೆ; ಪ್ರಜ್ಞೆಯ ಯಾವ ಮೂಲೆಯಲ್ಲೂ ಕತ್ತಲು ಇಲ್ಲವೇನೊ ಎಂಬಂತೆ. ಅದರಲ್ಲೊಂದು ಅಪರಿಮಿತ ಆನಂದವಿತ್ತು; ಪ್ರತಿ ಎಲೆ, ಹುಲ್ಲು  ಕಡ್ಡಿ ಕೂಡ ಇದರ ಖುಯಲ್ಲಿ ತಲ್ಲೀನವಾಗಿತ್ತು. ಬ್ಲೂಜೇ ಪಕ್ಷಿಯು ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿತ್ತು. ಅದರ ವರ್ತನೆಯಲ್ಲಿ  ಎಂದಿನ ಯಾವೊಂದು ಅಸಹನೆಯು ಇದ್ದಿರಲಿಲ್ಲ. ಆಗಾಧ ಆಳವಿರುವ ಸುಂದರ ಮುಂಜಾವು ಅದು.
ಕಾಲದಲ್ಲಿ  ಹೊಟ್ಟೆಪಾಡಿನ ಪ್ರಜ್ಞೆ  ತಿರುಳಿನ ರೂಪದಲ್ಲಿ  ಹುದುಗಿರುತ್ತದೆ. ಕಾಲದ ಸಂಸ್ಕೃತಿಯೇ ಅದು. ಕಾಲನ ತಿರುಳಿನಲ್ಲಿಯೇ ಪ್ರಜ್ಞೆ ಅರಿವು; ತಿರುಳಿಲ್ಲದಿದ್ದರೆ ನಾವು ತಿಳಿದ ಪ್ರಜ್ಞೆ ಇರುವುದಿಲ್ಲ. ಆದರೆ ನಾವು ತಿಳಿದಿರುವಂಥ ಪ್ರಜ್ಞೆ ಎಂಬುದು ಪ್ರಜ್ಞೆಯಲ್ಲ. ಹಾಗಾದಾಗ ಅಲ್ಲಿ ಏನೂ ಇರುವುದಿಲ್ಲ. ನಾವು ಇದೇ ಪ್ರಜ್ಞಾ  ತುಣುಕುಗಳನ್ನು ಕಾರಣಗಳು, ಪರಿಸ್ಥಿತಿಗಳ ಒತ್ತಡಕ್ಕನುಸಾರ ಒಂದು ಕಡೆಯಿಂದ ಇನ್ನೊಂದೆಡೆ ಹೊರಡಿಸುತ್ತಿರುತ್ತೇವೆ. ಈ ಹೊರಳಾಟ ಎಂಬುದು ನೋವು, ವಿಷಾದ, ತಿಳಿವಳಿಕೆಗಳ ಅಂಗಳದಲ್ಲೇ ಇರುತ್ತದೆ. ಈ ಚಲನೆಯೇ ಕಾಲ- ಆಲೋಚನೆ ಮತ್ತು ಅಳತೆಯಾಗಿರುತ್ತದೆ. ಇದು ನಮ್ಮೊಳಗೆ ನಡೆಯುವ ಮೌಡ್ಯದ ಕಣ್ಣುಮುಚ್ಚಾಲೆ ಆಟ- ಆಲೋಚನೆಯ ನೆರಳು ಹಾಗೂ ವಸ್ತು, ಆಲೋಚನೆಯ  ಭೂತ ಹಾಗೂ ಭವಿಷ್ಯ ಎಲ್ಲವೂ ಅಲ್ಲಿ ಒಳಗೊಂಡಿರುತ್ತದೆ. ಆದರೆ ಈ ಕ್ಷಣವನ್ನು ಹಿಡಿದಿಟ್ಟುಕೊಳ್ಳುವುದು ಆಲೋಚನೆಗೆ ಸಾದ್ಯವಿಲ್ಲ. ಈ ಕ್ಷಣ ಎಂಬುದು ಕಾಲವಲ್ಲ. ಈ ಕ್ಷಣ ಎಂಬುದು ಕಾಲನ ಅಂತ್ಯವಾಗಿರುತ್ತದೆ; ಆಗ ಕಾಲ ನಿಂತುಹೋಗುತ್ತದೆ. ಈ ಕ್ಷಣದಲ್ಲಿ  ಚಲನೆ ಇದ್ದಿರುವುದಿಲ್ಲ. ಅದಕ್ಕಾಗಿ ಇದು ಇನ್ನೊಂದು ಕ್ಷಣದೊಂದಿಗೆ ತಳಕು ಹಾಕಿಕೊಂಡಿರುವುದಿಲ್ಲ. ಅದಕ್ಕೊಂದು ಕಾರಣ ಇದ್ದಿರುವುದಿಲ್ಲ. ಅದಕ್ಕಾಗಿ ಆರಂಭ ಎಂಬುದು ಇರುವುದಿಲ್ಲ. ಅಂತ್ಯವೂ ಇರುವುದಿಲ್ಲ. ಆದ್ದರಿಂದಾಗಿ ಪ್ರಜ್ಞೆ ಎಂಬುದಕ್ಕೆ ಈ ಕ್ಷಣವನ್ನು ತನ್ನೊಳಗೆ ಧರಿಸುವುದು ಸಾಧ್ಯವಿಲ್ಲ. ಏನೂ ಇಲ್ಲದ ಈ ಕ್ಷಣದಲ್ಲಿಯೇ ಎಲ್ಲವೂ ಇದೆ. ಧ್ಯಾನ ಎಂಬುದು ಪ್ರಜ್ಞೆಯೊಳಗಿನ ತಿರುಳನ್ನು ಖಾಲಿಯಾಗಿಸುವ ಪ್ರಕ್ರಿಯೆಯಾಗಿರುತ್ತದೆ.




ಅನುವಾದದ ಇತಿ-ಮಿತಿ
ಜ್ಞಾನೋದಯ ಹೊಂದಿದ ವ್ಯಕ್ತಿಯ ಬರಹವನ್ನುಯಥಾವತ್ತಾಗಿ ಅರ್ಥವಿಸಿಕೊಳ್ಳುವುದು, ಅದನ್ನು ಅನುವಾದ ಮಾಡುವುದು ಡೈರಿಯಲ್ಲಿನ ಕೆಲವು ಸನ್ನಿವೇಶದಲ್ಲಿ ಕಷ್ಟವಾಗಿ ಕಂಡಿತು. ಕೆಲವೆಡೆ ನಿಸರ್ಗದ ಸನ್ನಿವೇಶದೊಂದಿಗೆ ವಿಲೀನವಾಗುವ ಅವರ ಪ್ರಜ್ಞಾವಸ್ಥೆಯ ಸ್ಥಿತಿಯನ್ನು ಊಹಿಸಿಯೇ ಅನುವಾದಿಸಬೇಕಷ್ಟೆ. ಅನುವಾದದ ಸಂದರ್ಭದಲ್ಲಿ ಮೂಲ ಭಾಎಯೂ ಒಂದು ಏಣಿ ಎಂಬುದು ನಿಜ ; ಆದರೆ ಕೃಷ್ಣ ಮೂರ್ತಿಯವರು ಆಗಾಗ ಹೇಳುವಂತೆ ಶಬ್ಧಜಗತ್ತಿಗೆ ತೀರಾ ಮಿತಿಗಳಿವೆ. ಶಬ್ಧ ಎಂಬುದು ಅದು ಪ್ರತಿನಿಧಿಸುವ ನಿಜವಾದ ವಸ್ತುವಲ್ಲ. ಅಂಥದ್ದೇ ಇತಿ ಮಿತಿಯಲ್ಲಿ ಕೃಷ್ಣಮೂರ್ತಿಯವರ ಅನುವಾದವನ್ನು ಇಲ್ಲಿ ಮಾಡಲಾಗಿದೆ.
ಕೃಷ್ಣ ಮೂರ್ತಿಯವರ ಬೋಧನೆ ಅರಗಿಸಿಕೊಳ್ಳುವುದು ಕಷ್ಟ ಎಂಬ ಮಾತಿದೆ. ಮನುಷ್ಯ- ಮನಶ್ಯಾಸ್ತ್ರೀಯ ವಿಚಾರಗಳನ್ನು ಕರಾರುವಾಕ್ಕಾಗಿ ವಿವರಿಸುವುದು ಮೊದಲೇ ಗೊಂದಲದ ಕೆಲಸ. ಸಾಮಾನ್ಯವಾಗಿ ಕೆಲವೆಲ್ಲ ಶಬ್ಧಗಳನ್ನುಅಸ್ಪಷ್ಟ ರೀತಿಯಲ್ಲಿ ಬಳಸುವ ಭಾಷಾ ಪ್ರಯೋಗ ಕನ್ನಡದಲ್ಲಿದೆ. ಅದಕ್ಕಾಗಿ ನಿರ್ದಿಷ್ಟತೆ ಎಂಬುದು ಕಷ್ಟಸಾಧ್ಯವಾಗಿಯೂ ಕಂಡಿತು.
ಸ್ಕೀಜೊಫ್ರಿನಿಕ್, ನ್ಯುರಾಟಿಕ್, ವೇನ್, ಪರ್ವರ್‌ಟೆಡ್, ಸೈಕಿಕ್‌ಗಳಂಥದ್ದೇ ಇತರ ಶಬ್ಧಗಳಲ್ಲಿ ಭಿನ್ನತೆಗಳಿದ್ದರೂ ಕನ್ನಡೆದಲ್ಲಿ ಅವುಗಳನ್ನೆಲ್ಲ ಮನೋರೋಗ ಎಂದೇ ಗುರತಿಸಲಾಗುತ್ತದೆ. ಕೆಲವು ಶಬ್ಧಗಳು ಭಿನ್ನವಾಗಿ ಇದ್ದರೂ ಕನ್ನಡದಲ್ಲಿ ಅವುಗಳನ್ನು ಬಳಸಿದ ಸನ್ನಿವೇಶಗಳಿಂದಾಗಿ ಅವುಗಳಿಗೆ ಬೇರೆಯದೇ ಆದ ಅರ್ಥಗಳು ಬಂದುಬಿಡುತ್ತವೆ. ಉದಾರಣೆಗೆ ಎಡವಟ್ಟು, ಲೂಸು, ಫಿರ್ಕಿ.. ಇತ್ಯಾದಿ. ಯಾವುದೇ ಒಂದು ಶಬ್ಧದ ಧ್ವನ್ಯಾರ್ಥಗಳು ಬೇರೆಯದೇ ಆಗಿದ್ದರೆ ಅನುವಾದದಲ್ಲಿ ಅವುಗಳನ್ನು ಬಳಸಿದಾಗ ವಿಪರೀತವಾಗುವ ಸಾಧ್ಯತೆ ಹೆಚ್ಚು. ಕೃಷ್ಣಮೂರ್ತಿಯವರ ಬೊಧನೆಯ ಭಾಷಾಂತರದಲ್ಲಿ ಕನ್ನಡ ಭಾಷೆಯ ಸಾಂಸ್ಕೃತಿಕ ಸೊಗಡನ್ನುಹೆಚ್ಚಾಗಿ ಸೇರಿಸುವುದು ಅಪಾರ್ಥವಾಗಿಬಿಡುವ ಅಪಾಯ ಕಂಡಿತು. ಸತ್ಯವನ್ನು ವಿಜ್ರಂಭಿಸಿ ಹೇಳಿದರೆ ಅಪಾರ್ಥವಾಗುವುದು ಎಂಬುದು ಜಿಡ್ಡು ಅವರ ಬೊಧನೆಯ ತಿರುಳಿಲ್ಲಿಒಂದು. ಅದಕ್ಕಾಗಿ ಮೂಲಕ್ಕಿಂತ ತೀರಾ ಸರಳ ಅಥವಾ ರಂಜಕವಾಗಿ ಅನುವಾದಿಸಿಲ್ಲ ಎಂದುಕೊಂಡಿದ್ದೇನೆ.
ಒಂದು ಕಡೆ ಹೊರತುಪಡಿಸಿದರೆ ಎಲ್ಲಿಯೂ ಅವರು ತಮ್ಮನ್ನು ಪ್ರಥಮ ಪುರುಷನನ್ನಾಗಿ ಸಂಭೋಧಿಸುವುದಿಲ್ಲ. ಅದೇ ರೀತಿಯಲ್ಲಿ ಯಾವುದೇ ಧರ್ಮ, ವ್ಯಕ್ತಿ, ಸ್ಥಳ ಸೇರಿದಂತೆ ಯಾವೊಂದನ್ನೂ ಸಮಾಜ ಗುರುತಿಸುವ ರೀತಿಯಲ್ಲಿ ಕೃಷ್ಣಮೂರ್ತಿ ಹೆಸರಿಸುವುದಿಲ್ಲ. ಆದರೆ ಅವರು ಇಲ್ಲಿನ ತಮ್ಮಬರಹಗಳಲ್ಲಿ ಅವುಗಳನ್ನು ಸೂಚ್ಯವಾಗಿ ಹೇಳುತ್ತಾರೆ. ಇದೆಲ್ಲ ಒಂದು ರೀತಿಯ ಭಾಷಾ ಕಸರತ್ತಾಗಿಯೂ ಕೆಲ ಸಂದರ್ಭದಲ್ಲಿ ಕಾಣುವುದಿದೆ.
ಕ್ಯಾಲಿಫೋರ್ನಿಯ, ಸ್ವಡ್ಜರ್‌ಲ್ಯಾಂಡ್, ನ್ಯುಹೆಮಿಸ್ಪಿಯರ್, ಉತ್ತರ ಅಮೆರಿಕಾದಲ್ಲಿ ಕಾಣುವ ಕೆಲವು ಅಪರೂಪದ ಪ್ರಾಣಿ ಪಕ್ಷಿಗಳು ಕನ್ನಡ ಮನಸ್ಸಿಗೆ ಕಲ್ಪಿಸಿಕೊಳ್ಳುವುದಕ್ಕಾಗುವುದಿಲ್ಲ. ಉದಾಹರಣೆಗೆ ಡೈರಿಯಲ್ಲಿ ಆಗಾಗ ಬರುವ ಬ್ಲೂಜೇ ಎಂಬ ಹಕ್ಕಿ. ಕಾಗೆಯ ಕುಲದ್ದೆಂದು ವರ್ಗೀಕರಿಸಲಾದ ಈ ಪಕ್ಷಿ ತಲೆಯ ಮೇಲೆ ಜುಟ್ಟು ಹೊಂದಿರುತ್ತದೆ, ತೆಳು ನೀಲಿ ಬಣ್ಣದಲ್ಲಿ ಗಮನಸೆಳೆಯುತ್ತದೆ- ಅದೇ ರೀತಿಯಲ್ಲಿ ಪೈನ್, ರೆಡ್‌ಉಡ್ ಮರಗಳು ತಕ್ಷಣಕ್ಕೆ ಊಹಿಸುವುದಕ್ಕಾಗುವಂಥದ್ದಲ್ಲ. ಇವುಗಳನ್ನೆಲ್ಲ ವೆಬ್‌ಸೈಟ್‌ಗಳಲ್ಲಿ ಹುಡುಕಿ ಅವುಗಳ ಚಿತ್ರಣಗಳನ್ನು ಕಲ್ಪಿಸಿಕೊಂಡೆ.
ಡೈರಿಯಲ್ಲಿ ಕೆಲವು ಪ್ರಕೃತಿ ಚಿತ್ರಗಳು ಬೇರೆ ಬೇರೆ ಕೋನದಲ್ಲಿ ಪುನರಾವರ್ತನೆಗೊಂಡಿವೆ. ಹಾಗೆ ನೋಡಿದರೆ ಮೇಲ್ನೋಟಕ್ಕೆ ಪ್ರತ್ಯೇಕವಾದಂತೆ ಇಲ್ಲಿನ ಡೈರಿಗಳು ಕಂಡರೂ ಧ್ಯಾನಿಸಿ ನೋಡಿದಾಗ- ಹಲವು ಬಾರಿಯ ಓದಿನ ನಂತರ ಇವುಗಳಲ್ಲಿನ ಅಖಂಡತೆ ಹೊಳೆಯುತ್ತದೆ. ಕೃಷ್ಣ ಮೂರ್ತಿ ಡೈರಿಯನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಲೇಖಕನಿಗೆ ಇದರ ಗಂಭೀರ ಓದು ಸಾಧ್ಯವಾಯಿತು ಎಂಬುದು ಅತ್ಯಂತ ಖುಷಿಯ ಸಂಗತಿ.
ಅಷ್ಟಾದರೂ ಡೈರಿಯ 46ನೇ ಅಧ್ಯಾಯದಲ್ಲಿ ಒಂದು ಸಾಲನ್ನು ಕನ್ನಡಕ್ಕೆ ಅನುವಾದಿಸುವುದು ಸಾಧ್ಯವೇ ಆಗಿಲ್ಲ. ಅದಕ್ಕಾಗಿ ಯಥಾವತ್ತಾಗಿಯೇ ಕೊಟ್ಟಿದೆ.
ಇಲ್ಲಿನ ಬರಹಗಳಲ್ಲಿ ಬೊಧನೆ ಹಾಗೂ ನಿಸರ್ಗದ ಚಿತ್ರಗಳು ಪರಸ್ಪರ ಅವಿನಾಭಾವವಾಗಿ ಹೊಂದಿಕೊಂಡಿವೆ. ಪ್ರತಿಯೊಂದು ಬರಹವೂ ಒಂದೇ ನಿಸರ್ಗದ ಘಟನೆಯಿಂದ ಆರಂಭವಾಗಿ ಅದು ಹೊಳೆಸುವ ಬೊಧನೆಯತ್ತ ಮುಂದುವರಿಯುತ್ತದೆ. ಇಲ್ಲವೇ ಬೊಧನೆಯಿಂದ ಆರಂಭವಾಗಿ ಅದಕ್ಕೆ ನಿಸರ್ಗದಲ್ಲಿರುವ ಮೂಲವನ್ನುಹೇಳುತ್ತಾರೆ. ಒಂದೇ ಬರಹದಲ್ಲಿ ಅಲ್ಲಲ್ಲಿ ನಿಸರ್ಗದ ಬಗ್ಗೆ ಬರುವುದೂ ಇದ್ದು ಮೂಲದಲ್ಲಿ ಇಲ್ಲದಿದ್ದರೂ ಅನುವಾದದಲ್ಲಿ ಅವುಗಳನ್ನೆಲ್ಲ ಪ್ರತ್ಯೇಕ ಪ್ಯಾರಾ ಮಾಡಲಾಗಿದೆ. ಅದೇ ರೀತಿ ಮೂಲ ಡೈರಿಯಲ್ಲಿ ಇಲ್ಲದಿದ್ದರೂ ಅನುವಾದದಲ್ಲಿ ಅವನು ಎಂದು ಬಂದಲ್ಲೆಲ್ಲ ಭಾಷೆಯ ಅನುಕೂಲಕ್ಕಾಗಿ ಇನ್‌ವರ್ಟೆಡ್ ಕಾಮಾ ಹಾಕಿದೆ.

ಸದಾನಂದ ಹೆಗಡೆ, ಹರಗಿ
4-8, ಸುಬ್ಬಣ್ಣಯ್ಯ ಕಂಪೌಂಡ್,
ಹೊನ್ನಕಟ್ಟೆ, ಕುಳಾಯಿ
ಮಂಗಳೂರು-575019
ದೂರವಾಣಿ : 9986085966


ಬೆನ್ನುಡಿ
ಕೃಷ್ಣಮೂರ್ತಿ ಡೈರಿ ಎಂಬುದು ಕೃಷ್ಣಮೂರ್ತಿ ಸ್ವತಃ ಬರೆದ ಕೆಲವೆ [ಸ್ತಕದಲ್ಲಿ ಒಂದಾಗಿದೆ. ತಮ್ಮದೇ ಶಬ್ದದಲ್ಲಿ ಅವರು ಇಲ್ಲಿ  ಹೇಳುವ ಸಂಗತಿಗಳಿಗೆ ಒಂದು ರೀತಿಯ ದಿವ್ಯ ತಾಜಾತನ ಇದೆ.
1973ರಲ್ಲಿ  ಆರು ವಾರ ಹಾಗೂ 1975ರಲ್ಲಿ  ಒಂದು ತಿಂಗಳು ಅವರು ಡೈರಿಯ [ಟಗಳಲ್ಲಿ  ಬರೆದಿದ್ದಾರೆ. ಇಲ್ಲ ಹೆಚ್ಚಿನ ಬರಹಗಳು ಪ್ರಕೃತಿ ಚಿತ್ರದೊಂದಿಗೆ ಆರಂಭವಾಗುತ್ತವೆ. ನಂತರ ಅವರ ವಿಚಾರಧಾರೆ ಪ್ರಜ್ಞಾವಲಯವನ್ನು ಅನನ್ಯ ರೀತಿಯಲ್ಲಿ ಅದಕ್ಕೆ ಪೋಣಿಸಿದ್ದಾರೆ.
ಉದ್ದಕ್ಕೂ ಇಲ್ಲಿ  ತಮ್ಮನ್ನು ಮೂರನೆ ವ್ಯಕ್ತಿಯಂತೆ "ಅವನು' ಎಂಬುದಾಗಿ ಸಂಬೋಧಿಸಿದ್ದಾರೆ. ಅವರು ತಮ್ಮ ಬಾಲ್ಯದ ಕೆಲವು ಘಟನೆಗಳನ್ನು ಇಲ್ಲಿ ಸ್ಮರಿಸುವುದನ್ನು ಗಮನಿಸಬಹುದು. ಅವರ ಬೋಧನೆಗಳು ನಿಸರ್ಗಕ್ಕೆ ಎಷ್ಟೊಂದು ಹತ್ತಿರವಾಗಿದೆ ಎಂಬುದನ್ನು ಡೈರಿಯಲ್ಲಿ ಗಮನಿಸಬಹುದು. ಅಲ್ಲದೆ ವೀಕ್ಷಣೆಯಲ್ಲಿದ್ದ ತೀವ್ರತೆ ಕೂಡು ಅಚ್ಚರಿ ಹುಟ್ಟಿಸುತ್ತದೆ.









Related Posts
Previous
« Prev Post

2 ಕಾಮೆಂಟ್‌(ಗಳು)

ನವೆಂಬರ್ 28, 2019 ರಂದು 04:19 ಪೂರ್ವಾಹ್ನ ಸಮಯಕ್ಕೆ

ದತ್ತಾತ್ರೇಯ ಎನ್.ಭಟ್,ದಾವಣಗೆರೆ ಪ್ರತಿಕ್ರಿಯೆ:-


ಇಲ್ಲಿ ಹಾಕಿದ ಜೆ.ಕೆ.ಯವರ ಬರಹದ-ತಾವೇ ಮಾಡಿದ ಅನುವಾದ &ಜೆ.ಕೆ ಯವರ ಚಿಂತನೆ ಕುರಿತು ನನ್ನ ಅನಿಸಿಕೆ---ಅನುವಾದ ದ ಜೊತೆಗೆ ಮೂಲ ಬರಹವನ್ನೂ ಇಟ್ಟಿದ್ದರೆ ಚೆನ್ನಾಗಿತ್ತು.ತಮ್ಮ ಅನುವಾದ ಬರಹ ತುಂಬಾ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ,ಸರಳ&ಸುಲಲಿತವಾಗಿದೆ.
ಇಲ್ಲಿ ತಾವು ಜೆ.ಕೆ ಯವರ ಚಿಂತನೆಯ ಒಟ್ಟಾರೆ ಧಾಟಿಯನ್ನು ಪ್ರತಿನಿಧಿಸಬಲ್ಲ ,ಅವರೇ ಡೈರಿಯಲ್ಲಿ ತಮ್ಮ ದಿನಚರಿ(ಕೆಲವು ದಿನಗಳ)ದಾಖಲಿಸಿದ್ದನ್ನು ಅನುವಾದಿ ಸಿರುವಿರಷ್ಟೇ.ಜೆ.ಕೆ 20 ನೇ ಶತಮಾನದಲ್ಲಿ ಆಗಿ ಹೋದ ಖ್ಯಾತ ನವ್ಯ ಚಿಂತಕರುಗಳಲ್ಲಿ ಒಬ್ಬರು.ಪೂರ್ವದ್ದನ್ನು ಸಾಕಷ್ಟು ಪ್ರಶ್ನಿಸುವ,ನಿರ್ಭೀತಿ,ಸರ್ವತಂತ್ರ ಸ್ವತಂತ್ರತೆಯನ್ನು ಪ್ರತಿಪಾದಿಸುವ ಚಿಂತನೆಗಳು ಅವರವು.ಅವರ ದೃಷ್ಟಿಯಲ್ಲಿ ನಿಸರ್ಗ/ಭೂಮಿ,ವ್ಯೋಮಾಕಾಶಗಳೇ ದೈವೀ ರೂಪಗಳು.ಅವುಗಳ ಅಸ್ತಿತ್ವಕ್ಕೆ ಧಕ್ಕೆ ಬಾರದಂತೆ,ಅವುಗಳ ಜೊತೆ ಸಮರಸಪೂರ್ಣ ಬದುಕು ಸಾಗಿಸುವಿಕೆಯೇ ,ಆ ಎಲ್ಲವುಗಳ ಅಸ್ತಿತ್ವ ಅರ್ಥೈಸಿಕೊಂಡು ಸೌಜನ್ಯಪೂರ್ವಕವಾಗಿ ಬದುಕುವಿಕೆಯೇ ಆದರ್ಶವಾದುದು,ಅರ್ಥಪೂರ್ಣವಾದುದು.ನನ್ನ ದೃಷ್ಟಿಯಲ್ಲಿ-ಜೆ.ಕೆ ಯವರಿಗೆ ಬೌದ್ಧ ದರ್ಶನ ಹೆಚ್ಚು ಆಕರ್ಷಿಸಿದೆ,ಪ್ರಭಾವಿಸಿದೆ.ಬುದ್ಧನ ಶಾಂತಿ ಸಂದೇಶವನ್ನು ತುಂಬಾ ವ್ಯಾಪಕಾರ್ಥದಲ್ಲಿ ಗ್ರಹಿಸಿಕೊಂಡು-ಅದರ ಅನುಷ್ಠಾನ ವಿಧಿಯನ್ನು ಹೆಚ್ಚು ಕಡಿಮೆ ತಮ್ಮೆಲ್ಲ ಚಿಂತನೆಗಳಲ್ಲೂ ಪರೋಕ್ಷವಾಗಿ ಬೋಧಿಸುತ್ತಾರೆ.ಆಂಶಿಕವಾಗಿ ವೇದಾಂತ ಬೋಧಿಸುವ "ನೀವೆಲ್ಲರೂ ಅಮೃತ ಪುತ್ರರು"ಎಂಬುದನ್ನು ಅವರು ಪರೋಕ್ಷವಾಗಿ ಹೇಳುವರಾದರೂ ವೇದಾಂತವನ್ನು ಉಲ್ಲೇಖಿಸುವುದಿಲ್ಲ(ಬೌದ್ಧ ಮತವನ್ನೂ ಉಲ್ಲೇಖಿಸಿಲ್ಲ,ಆ ಮಾತು ಬೇರೆ).ಚೀನಾದ -ನೈಸರ್ಗಿಕ ಬದುಕಿನ ಪ್ರತಿಪಾದಕ ಲಾವೋತ್ಸೆಯ ಚಿಂತನೆಗೂ ,ಜೆ.ಕೆ ಚಿಂತನೆಗೂ ಹತ್ತಿರದ ಸಾಮ್ಯತೆ ಕಂಡುಬರುತ್ತದೆ.ಲಾವೋತ್ಸೆ -"ಮಾನವ ನಿಸರ್ಗಕ್ಕೆ ಶರಣಾಗಿ,ಅದರಲ್ಲಿ ಹೊಂದಿಕೊಂಡು ಬದುಕಬೇಕು.ಕಾಡು-ಮೇಡುಗಳಲ್ಲಿ,ಪಶು-ಪಕ್ಷಿಗಳೊಂದಿಗೆ ಒಂದಾಗಿ ಬದುಕುವುದೇ ನಿಜವಾದ ಜೀವನ"ಎನ್ನುತ್ತಾನೆ.ಬಹುಶಃ ಜೆ.ಕೆ.ಆತನ ಚಿಂತನೆಗೆ ಹತ್ತಿರವಾವುತ್ತಾರೆ.ಜೆ. ಕೆ ಯವರ ಚಿಂತನಾ ಧಾಟಿ -"ಏನನ್ನೇ ಸ್ವೀಕರಿಸಬೇಕಾದರೂ ಅದರ ಎಲ್ಲ ಮಗ್ಗಲುಗಳಿಂದಲೂ ಚೆನ್ನಾಗಿ ಪರೀಕ್ಷಿಸಿ ಸ್ವೀಕರಿಸು"ಎಂಬುದು.ನಿನ್ನಂತರಂಗಕ್ಕೆ ದ್ರೋಹ ಮಾಡಬೇಡ.ಏನೇ ಮಾಡಿದರೂ ನಿನ್ನಂತರಂಗ ಹಾರ್ದಿಕವಾಗಿ ಒಪ್ಪಿಕೊಂಡಿತೋ, ಅದನ್ನು ಯಾವ ಅಳುಕಿಲ್ಲದೆ ನೆರವೇರಿಸು ,ಎಂದು.ತಮ್ಮ ಚಿಂತನೆಯನ್ನು ಸಹ ಎಲ್ಲೂ ಹೇರುವುದಿಲ್ಲ.ಯಾವುದೇ ವಿಷಯದ ಬಗ್ಗೆ ಚರ್ಚಿಸಿದರೂ ಅದರ ಎಲ್ಲ ಆಯಾಮಗಳಲ್ಲಿಯೂ ಚಿಂತಿಸಿ ,ಓದುಗರ/ಕೇಳುಗರ ಮುಂದೆ ಮಂಡಿಸುತ್ತಾರೆ.ಅವರ ತರ್ಕ ಒಣ ತರ್ಕ ಎನಿಸುವುದಿಲ್ಲ,ಹಿತೈಷಿಯೊಬ್ಬನ ಕಿವಿಮಾತಂತೆ ಅನಿಸುತ್ತದೆ...ನೀವು ಬರಹದ ಕೊನೆಯಲ್ಲಿ ಮೇಧಾವಿ ಚಿಂತಕನ/ತಾತ್ವಿಕನ ಚಿಂತನೆಯನ್ನು ಅನುವಾದಿಸಬೇಕಾದರೆ -ಒಬ್ಬ ಶ್ರೀ ಸಾಮಾನ್ಯನಿಗೆ(ಪ್ರಾಮಾಣಿಕ)ಎದುರಾಗುವ ನೈತಿಕ ಸವಾಲನ್ನು/ಮಿತಿಯನ್ನು ಒಪ್ಪಿಕೊಂಡಿರುವಿರಿ.ಅದೂ ಸತ್ಯ....ವಂದನೆಗಳು.....ದತ್ತಾತ್ರೇಯ ಎನ್.ಭಟ್,ದಾವಣಗೆರೆ

Reply
avatar