ಆರ್ಟ್‌ ಥೀಫ್ ಧಾರಾವಹಿ -೪ ಸಣ್ಣಿಂದಲೂ ಆತನಿಗೆ ಕರಕುಶಲ, ಕುಂಬಾರಿಕೆಯ ಕುದುರೆ ಎಂದರೆ ಎಲ್ಲಿಲ್ಲದ ಪ್ರೀತಿ. ಕುಲುಮೆಯವರು ಗುಜರಿಗೆ ಹಾಕುವ ಕುಸುರಿ ಚೂರು, ಬಾಣದ ಮುಖಗಳನ್ನು ಆಯ್ದು ತರುತ್ತಿದ್ದಘಿ. ರಜಾ ದಿನದಲ್ಲಿ ತಾತನೊಂದಿಗೆ ಬೇಲೆ ಸುತ್ತುವುದು, ಮುರಿದ ಕೋಟೆಕೊತ್ತಲಗಳ ಚಾರಣಕ್ಕೆ ಹೋಗುವುದಿತ್ತುಘಿ. ಆಗರ್ಭ ಶ್ರೀಮಂತನಾಗಿದ್ದ ತಾತನು ಮನಸ್ಸು ಮಾಡಿದರೆ ತನ್ನ ಬೆಳ್ಳಿಯ ಬೆತ್ತದ ತುದಿಯಿಂದಲೇ ಬೆಲೆಬಾಳುವ ಒಡವೆಗಳನ್ನು ಎಗರಿಸಬಹುದಿತ್ತುಘಿ. ತಾತ, ಅಂದರೆ ತಾಯಿಯ ತಂದೆ. ಆತನೊಂದಿಗೆ ಹೋಗುವಾಗ ಬೇಲೆಯಲ್ಲಿ ಚಿಪ್ಪುಘಿ, ಶಂಖ ಸಂಗ್ರಹಿಸುತ್ತಿದ್ದರು. ಬೇಲೆಯ ಹೂತಿದ್ದ ಚಿಪ್ಪುಗಳನ್ನು ಬೆತ್ತದ ಮೊನೆಯಲ್ಲಿ ತಾತ ಕುಕ್ಕಿ ದಬ್ಬಿದರೆ, ಅದನ್ನು ಹೆರಕುವ ಮೊಮ್ಮಗ ಖುಷಿಯಿಂದ ಎದೆಗವಚಿಕೊಳ್ಳುತ್ತಿದ್ದಘಿ. ತಾತ, ಬ್ರಿಟ್‌ವೈಸರ್ ತಾಯಿಯ ತಂದೆ ಓರ್ವ ಆಗರ್ಭ ಶ್ರೀಮಂತ. ಬೀಚ್‌ಗೆ ಹೋಗುವಾಗಲೂ ದುಬಾರಿ ಬಟ್ಟೆಘಿ, ಟೆಲಿಸ್ಕೋಪ್ ಹಿಡಿದು ಜಾಲಿಯಾಗಿರುತ್ತದ್ದ ಮನುಷ್ಯಘಿ. ಪುಟ್ಟ ಬ್ರಿಟ್‌ವೈಸರ್‌ಗೆ ಅಜ್ಜನ ಕೋಲಿನಲ್ಲಿ ತುದಿಯಿಂದ ಎಗರುತ್ತಿದ್ದ ಚಿಪ್ಪುಗಳೆಂದರೆ ಅವ ಕೇವಲ ಚಿಪ್ಪುಗಳಲ್ಲಘಿ. ಮುತ್ತುಘಿ, ರತ್ನಘಿ, ಹವಳ ಇನ್ನೇನೋ ಆಗಿರುತ್ತಿದ್ದವು. ಕೆಲವೊಮ್ಮೆ ಇದನ್ನೆಲ್ಲ ಜೀಬು ತುಂಬಿಕೊಳ್ಳಲು ಹುಡುಗನಿಗೆ ಭಯವಾಗುತ್ತಿತ್ತುಘಿ, ಅಂತ ಸಂದರ್ಭದಲ್ಲಿ ಅಜ್ಜನೇ ನಿಶಾನೆ ಕೊಡುತ್ತಿದ್ದ ಕಾರಣ, ಧೈರ್ಯದಿಂದ ತುಂಬಿಕೊಂಡು ಅಜ್ಜನ ಮನೆಯ ಆಟದ ಕೋಣೆಯಲ್ಲಿ ತಂದು ತುಂಬಿಕೊಳ್ಳುತ್ತಿದ್ದಘಿ. ಅಜ್ಜನ ಮನೆ ಎಂದರೇ ಸ್ವರ್ಗ, ಅದರಲ್ಲೂ ನೆಲಮಾಳಿಗೆಯಲ್ಲಿ ತಾನು ಸಂಗ್ರಹಿಸಿದ ಕಪ್ಪೆಚಿಪ್ಪುಘಿ, ಕುಲುಮೆ ಗುಜರಿ, ಕುಂಬಾರಿಕೆಯ ತುಣುಕುಗಳ ನಡುವೆ ಕುಳಿತರೆ ಊಟ, ತಿಂಡಿಗಳೆ ಮರೆತುಹೋಗುತ್ತಿತ್ತುಘಿ. ‘‘ಅಲ್ಲಿರುವ ಪ್ರತೀ ವಸ್ತುವೂ ನನ್ನ ಜೀವದ ಕಣದಂತೆ ಇದ್ದವು’’ ಎಂದು ಬ್ರಿಟ್‌ವೈಸರ್ ಸ್ಮರಿಸುತ್ತಾನೆ. ಬ್ರಿಟ್‌ವೈಸರ್ ೧೯೭೧ರಲ್ಲಿ ಕಾಂದಾನಿ ಬೇರುಗಳು ಬಲವಾದ ಕು ಕುಟುಂಬದಲ್ಲಿ ಜನಿಸಿದ. ಕದ್ದು ದಕ್ಕಿಸಿಕೊಂಡ ಪ್ರದೇಶ ಎಂದೇ ಬಣ್ಣಿಸಲ್ಪಡು ಫ್ರಾನ್ಸ್ ದೇಶದ ಐಸಾಕ್ ಪ್ರಾಂತ್ಯದಲ್ಲಿ ಈತನ ಜನನ. ಕ್ರಿಶ್ಚಿಯನ್ ಹಿನ್ನೆಲೆಯ ಈತನಿಗೆ ಸಂಪ್ರದಾಯದಂತೆ ಪಾಲಕರು ಸ್ಟೀವನ್ ಗುಯಿಲಾಮ್ ಫ್ರೆಡ್ರಿಕ್ ಬ್ರಿಟ್‌ವೈಸರ್ ಎಂದು ನಾಮಕರಣ ಮಾಡಿದರು. ಅಪ್ಪ ಅಮ್ಮನ ಏಕೈಕ ಮಗುವಾಗಿದ್ದ ಈತನ ತಂದೆ ರೋನಾಲ್ಡ್ ಬ್ರಿಟ್‌ವೈಸರ್ ಡಿಪಾರ್ಟ್‌ಮೆಂಟಲ್ ಸ್ಟೋರ್ ಒಂದರಲ್ಲಿ ಮ್ಯಾನೇಜರ್ ಆಗಿದ್ದರು. ಈತನ ತಾಯಿ ಮಿರೇಲಿ ಸ್ಟೆಂಗಲ್ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಮಕ್ಕಳ ನರ್ಸ್ ಆಗಿದ್ದಳು. ಜರ್ಮನಿ, ಸ್ವಜರ್‌ಲ್ಯಾಂಡ್ ಗಡಿ ರೇಖೆಗಳ ನಡುವೆ ಸಿಕ್ಕಿಕೊಂಡಂತಿರುವ ಫ್ರಾನ್ಸ್‌ನ ಹಳ್ಳಯ ಶ್ರೀಮಂತ ಬಂಗಲೋ ಒಂದರಲ್ಲಿ ಡ್ಯಾಸ್‌ಹೌಂಡ್ ನಾಯಿಮರಿಯಂತೆ ಅಕ್ಕರೆಯಿಂದ ಈತನ ಬಾಲ್ಯ ಕಳೆಯಿತು. ಹಾಗಾಗಿ ಜರ್ಮನ್, ಫ್ರೆಂಚ್‌ನಲ್ಲಿ ಪಟಪಟ ಮಾತಾಡುತ್ತಿದ್ದರೆ, ಇಂಗ್ಲೀಷ್ ಕೂಡ ಬರುತ್ತಿತ್ತುಘಿ. ಜತೆಗೆ ಅಲ್ ಸೇಶಯನ್ ಮೂಲದ ಸಣ್ಣ ಪುಟ್ಟ ಭಾಷೆಯ ನುಡಿಗಟ್ಟೂ ತಿಳಿಯುತ್ತಿತ್ತುಘಿ. ಗಡಿ ಭಾಗದ ಶ್ರೀಮಂತ ಹಳ್ಳಿಯನ್ನು ಆಳಲು ಜರ್ಮನಿ, ಮತ್ತು ಫ್ರಾನ್ಸ್ ಯಾವತ್ತೂ ಕಚ್ಚಾಡುತ್ತಲೇ ಇರುತ್ತಿದ್ದ ಕಾರಣ, ಹಿಂದಿನ ೧೫೦ ವರ್ಷಗಳಲ್ಲಿ ಐದುಬಾರಿ ಅರಸೊತ್ತಿಗೆ ಬದಲಾಗುತ್ತಿತ್ತುಘಿ. ಮುಂದಿನ ಬಾರಿ ಫ್ರಾನ್ಸ್ ಅರಸರ ಪಾಳಿ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದರು. ಇಲ್ಲಿನ ಒಂದು ಶ್ರೀಮಂತ ಬಂಗಲೆಯಲ್ಲಿಘಿ, ರಂಗು ರಂಗಾದ ಬಂಗಲೆಯಲ್ಲಿ ಬ್ರಿಟ್‌ವೈಸರ್ ಇರುತ್ತಿದ್ದಘಿ. ೧೮ನೇ ಶತಮಾನದ ಕುಸುರಿಯ ಕೋಟು, ೧೭ನೇ ಶತಮಾನದ ದೊರೆ ಲೂಯಿಯ ಒರಗು ಕುರ್ಚಿ ಇವುಗಳಲ್ಲಿ ಹತ್ತು ಹೊರಬವುದು ಈತನ ಅಟಗಳಲ್ಲಿ ಒಂದಾಗಿತ್ತುಘಿ. ಹಿರಿಯರು ಹೊರಕ್ಕೆ ಹೋದಾಗ ಬಂಗಲೆಯ ಹಳೆಯ ಮಿಲಿಟರಿ ಪರಿಕರಗಳು, ನಿಲುವಂಗಿ, ಟೋಪಿಗಳನ್ನು ಹಾಕಿಕೊಂಡು ಕಾಲ್ಪನಿಕ ವೈರಿಗಳೊಂದಿಗೆ ಗೆಲುವಿನ ಡೈಲಾಗ್ ಹೊಡೆಯುತ್ತಿದ್ದ ದಿನಗಳು ಈಗಲೂ ಬ್ರಿಟ್‌ವೈಸರ್ ನೆನಪಿದೆ. ಬಡ್ಡಾಗಿ ಬಿದ್ದ ಖಡ್ಗಗಳನ್ನು ಚೀಲದಿಂದ ಹೊರ ತೆಗೆದು ಅಡ್ಡಾದಿಡ್ಡ ಝಳಪಿಸಿ ಕಾಲ್ಪನಿಕ ವೈರಿಯನ್ನು ಬಡಿಯುತ್ತಿದ್ದಘಿ. ಬಂಗಲೆಯ ಗೋಡೆಯು ಆ ಭಾಗದ ಖ್ಯಾತ ಕಲಾವಿದರ ಚಿತ್ರಗಳಿಂದ ತುಂಬಿರುತ್ತಿದ್ದವು. ಸಮೀಪದ ಗಲ್ಲಿಯೊಂದಕ್ಕೆ ನಾಮಕರಣ ಗೌರವ ಪಾತ್ರನಾಗಿದ್ದ ಅಲ್ ಸೇಶಿಯನ್ ಕಲಾವಿದ ರಾಬರ್ಟ್‌ ಬ್ರಿಟ್‌ವೈಸರ್ ನ ಅಭಿವ್ಯಕ್ತಿ ಕಾಲದ ಪೇಟಿಂಗ್ ಒಂದು ಅಲ್ಲಿ ಇತ್ತುಘಿ. ಆ ಕಲಾವಿದನು ಕುಟುಂಬದ ನಿಕಟ ಸದಸ್ಯನಾಗಿರಲಿಲ್ಲವಾದರೂ, ಈತನ ಮುತ್ತಜ್ಜನ ಸಹೋದರ. ಅಲ್ಲಿದ್ದ ದೊರೆ ಲೂಯಿಯ ಪೇಂಟಿಂಗ್‌ನ್ನು ೧೯೭೫ರಲ್ಲಿಘಿ, ಮುಕ್ತಾಯಗೊಳಿಸಿದ್ದುಘಿ, ಆಗಷ್ಟೇ ಬಾಲಕ ಬ್ರಿಟ್‌ವೈಸರ್ ಪ್ರಪಂಚದಲ್ಲಿ ಕಣ್ಣು ಬಿಡುತ್ತಿದ್ದಘಿ. ಪರಿಚಿತರಲ್ಲಿ , ತಾನು ಪ್ರಖ್ಯಾತ ಚಿತ್ರಕಲಾವಿದ ರಾಬರ್ಟ್‌ ಬ್ರಿಟ್‌ವೈಸರ್ ಮೊಮ್ಮಗ, ಆತನ ಕ್ಯಾನ್ವಾಸ್ ಭಾಗದಲ್ಲಿ ತಾನಿದ್ದೇನೆ ಎಂದು ಬ್ರಿಟ್‌ವೈಸರ್ ಜಂಬದಿಂದಲೇ ಹೇಳಿಕೊಳ್ಳುತ್ತಿದ್ದ. ಪ್ರಚಾರಕ್ಕಾಗಿ ಮಾತ್ರ ಇದೊಂದು ತೋರಿಕೆಯ ಮಾತಾಗಿತ್ತು ಬಿಟ್ಟರೆ, ತನ್ನ ತಂದೆಯ ಕುಟುಂಬದೊಂದಿಗೆ ಬ್ರಿಟ್‌ವೈಸರ್‌ಗೆ ಯಾವತ್ತೂ ಭಾವನಾತ್ಮಕ ಸಂಬಂಧವೇ ಇರಲಿಲ್ಲ. ಎಲ್ಲ ಮೊಮ್ಮಕ್ಕಳಂತೆ, ತಾಯಿ ಮೂಲದ ಶ್ರೀಮಂತ ತಾತ ಅಲೈನ್ ಫಿಲಿಪ್ ಹಾಗೂ ಅಜ್ಜಿ ಜೊಸೆಫ್ ಸ್ಟೆಂಜಿಲ್ ದಂಪತಿ ಎಂದರೆ ಬ್ರಿಟ್‌ವೈಸರ್ ಗೆ ಎಲ್ಲಿಲ್ಲದ ಗೌರವ. ತನಗೆ ತಿಳಿವಳಿಕೆ ಬರುವ ವಯಸ್ಸಿನ ಅತ್ಯುತ್ತಮ ದಿನಗಳು ಇವರೊಂದಿಗೆ ಕಳೆಯಿತು. ಆ ಹೊತ್ತಿನಲ್ಲೇ ಮತ್ತೊಮ್ಮೆ ನವೀಕರಿಸಿದ ತೋಟದ ಮನೆಯಲ್ಲಿ ನಡೆಯುತ್ತಿದ್ದ ವಾರಾಂತ್ಯದ ಬೆಳದಿಂಗಳೂಟ, ಕೆಲವೊಮ್ಮೆ ತಡ ರಾತ್ರಿಯ ತನಕವೂ ವಿಸ್ತರಿಸುತ್ತಿದ್ದ ಕ್ರಸ್ ಮಸ್ ಮಸ್ತಿಗಳು ಯಾವತ್ತೂ ಮರೆಯಲು ಸಾಧ್ಯವಿಲ್ಲಘಿ. ಒಂದನೇ ಶತಮಾನದಲ್ಲಿ ಜೀಸಸ್ ಸೈನ್ಯವು ಕೋಟೆ, ಕೊತ್ತಲ ನಿರ್ಮಿಸಿದ ಜಾಗವೆಂಬ ಐತಿಹ್ಯದ ಆರ್‌ಹೈನ್ ಕಣಿವೆಯಲ್ಲಿ ಅಜ್ಜನೊಂದಿಗೆ ನಡೆಸುತ್ತಿದ್ದ ಚಾರಣವಂತೂ ಬ್ರಿಟ್‌ವೈಸರ್ ಜೀವನದಲ್ಲಿ ಮರೆಯಲು ಸಾಧ್ಯವಿರಲಿಲ್ಲಘಿ. ಕೆಲವೊಮ್ಮೆ ಬೆಳೆಯುವ ಹುಡುಗರ ತುರ್ತು ಖರ್ಚಿನ ಹಣವನ್ನು ಪೂರೈಸುವ ಅಜ್ಜಂದಿರೂ ಮೊಮ್ಮಕ್ಕಳ ಸವಿನೆನಪಿನ ಭಾಗವಾಗಿರುತ್ತಾರೆ. ಒಬ್ಬನೇ ಒಬ್ಬ ಮೊಮ್ಮಗು ಎಂಬ ಕಾರಣಕ್ಕೆ ಏನೊಂದು ಕೊರತೆ ಆಗದಂತೆ ಹೇಳಿದ್ದನ್ನೆಲ್ಲ ಕೊಡಿಸುತ್ತಿದ್ದ ಎಂಬ ಕಾರಣಕ್ಕಾಗಿ ಕೂಡ ಅಮ್ಮಜ್ಜ ನೆನಪಿನಲ್ಲಿ ಉಳಿದರೂ, ಇದೇ ಕಾರಣದಿಂದ ಬ್ರಿಟ್‌ವೈಸರ್ ಒಂದಿಷ್ಟು ಹಾದಿ ತಪ್ಪುವುದಕ್ಕೂ ಮುಂದೆ ಕಾರಣವಾಗಿತ್ತುಘಿ. ಅಮ್ಮಜ್ಜ ಕೊಡುತ್ತಿದ್ದ ಕಾಸು ತುಂಬಿದ ಪಾಕೀಟನ್ನು ಜೇಬಿಗಿಳಿಸಿ ಅಲ್ಲಿ ಇಲ್ಲಿ ಸಂತೆಯಲ್ಲಿ ಮೋಜು ಮಾಡುವುದು, ಅದರೊಂದಿಗೆ ಹಳೆಯ ಕಾಲದ ನಾಣ್ಯಘಿ, ಬೆಲೆಬಾಳುವ ಹರಳು, ಕೆಲವೊಮ್ಮೆ ಬೀಟಿಯ ಪೀಠೋಪಕರಣಗಳನ್ನು ಕೊಂಡು ಕೊಳ್ಳುತ್ತಿದ್ದಘಿ. ಹಳೆಯ ಪೋಸ್ಟ್ ಕಾರ್ಡ್‌ಗಳು, ಒಳ್ಳೆಯ ಬೈಂಡ್ ಇರುವ ಪುಸ್ತಕ, ಗಿಳಿ ಮೂತಿಯ ಹಿಡಿಕೆಗಳು ಇಂಥವೆಲ್ಲ ಆಗಿನಿಂದಲೇ ಬ್ರಿಟ್‌ವೈಸರ್ ಸಂಗ್ರಹದಲ್ಲಿ ಸೇರತೊಡಗಿದವು. ಶಿಲಾಯುಗದ ಜನರು ಬಳಸುತ್ತಿದ್ದ ಆಯುಧಗಳು, ಕಂಚಿನ ಗುರಾಣಿ ತರದ ಮಿನಿಯೇಚರ್,ಲೋಹದ ಹೂವು, ಲೋಗೋಗಳು ಮೆಚ್ಚುಗೆಯಾದಲ್ಲಿ ಅದನ್ನು ಖರೀದಿಸುತ್ತಿದ್ದಘಿ. ಗ್ರೀಕ್, ರೋಮನ್ ಹಾಗೂ ಇಜಿಪ್ಶಿಯನ್ ಕಾಲದ ಪುರಾತನ ಕಲಾಕೃತಿಗಳೆಂದರೆ ಆತನಿಗೆ ಎಲ್ಲಿಲ್ಲದ ಪ್ರೀತಿ ಶುರುವಾಗಿದ್ದೂ ಈ ಹೊತ್ತಿನಲ್ಲೇ ಆಗಿತ್ತುಘಿ. ಅಮ್ಮಜ್ಜನ ಶ್ರೀಮಂತಿಕೆಯ ಹರಿವು ಸಾಮಾಜಿಕವಾಗಿ ಈತನಿಗೆ ಒಂದು ನಾಟಕೀಯ ಎತ್ತರವನ್ನು ತಂದಿದ್ದ ಕಾರಣ, ಒಳಗೊಳಗೆ ಏಕಾಂಗಿಯಾಗಿ ಒತ್ತಡವೂ ಈತನನ್ನು ಕಾಡುತ್ತಿತ್ತುಘಿ. ಆಗಿನ ಹೊತ್ತಿನಲ್ಲೇ ಹೊಳಪಿನ ಕಾಗದದಲ್ಲಿ ಮುದ್ರಣವಾಗುತ್ತಿದ್ದ ಕಟ್ಟಡ ಶಾಸ್ತ್ರ ಹಾಗೂ ಕಲೆಯ ದುಬಾರಿ ಮಾಸಿಕಗಳ ಚಂದಾದಾರನಾಗಿದ್ದಲ್ಲದೆ, ಕ್ಲಾಸಿಕಲ್ ಪುಸ್ತಕಗಳನ್ನೂ ತರಿಸಿ ಓದುವುದು ಈತನ ಹವ್ಯಾಸವಾಯಿತು. ಪುರಾತತ್ವ ಕುತೂಹಲಿಗಳ ಗುಂಪಿನಲ್ಲಿ ಗುರುತಿಸಿಕೊಂಡು ಒಂದಿಷ್ಟು ಸೇವಾ ಕಾರ್ಯದಲ್ಲೂ ತೊಡಗಿಕೊಳ್ಳಲು ಇದೇ ಕಾರಣವೂ ಆಗಿತ್ತುಘಿ. ಚಿಕ್ಕ ವಯಸ್ಸಿನಲ್ಲಿ ಇದೆಲ್ಲ ಮಾನಸಿಕ ಆಶ್ರಯವೇ ಆಗಿಹೋಯಿತು. ಎಲ್ಲೋ ಗಲ್ಲಿಯಲ್ಲಿ ಆಡಿಕೊಂಡು, ವೀಡಿಯೋಗೇಮ್, ಸಂಜೆಹೊತ್ತಿಗೆ ಪಾರ್ಟಿ ಎಂದು ಓಡಾಡಿಕೊಂಡಿದ್ದ ಈತನ ಹರಯದ ಇತರ ಹುಡುಗರಿಗೆ ಬ್ರಿಟ್‌ವೈಸರ್ ಅಭಿರುಚಿ ಮುಜುಗರ ಆಗುವಂತಿತ್ತುಘಿ. ಈ ವಯಸ್ಸಿನಲ್ಲೂ ಸಾಮಾಜಿಕ ಜಾಲ ತಾಣಗಳು, ಇನ್‌ಸ್ಟಾಗ್ರಾಮ್ ಪೋಸ್ಟ್ ಎಂದರೆ ಈತನಿಗೆ ಒಂದು ರೀತಿಯ ಅಸಡ್ಡೆಯೇ. ಅದೆಲ್ಲ ವ್ಯರ್ಥ, ಅಭಿರುಚಿ ಇಲ್ಲದವರ ಕಾಲ ಹರಣ, ಕೊಳಕು ಗೀಳು ಎಂದೇ ನಂಬುವ ವ್ಯಕ್ತಿತ್ವಘಿ. ಯಾರು ನಮಗೆ ಲೈಕ್ ಒತ್ತುತ್ತಾರೆ, ಯಾರೇನೋ ಅಂದುಕೊಳ್ಳಬಹದು ಎಂದು ನಾವೇಕೆ ತಲೆ ಬಿಸಿ ಮಾಡಿಕೊಳ್ಳಬೇಕು ಎಂದು ಹೇಳುವ ಜಾಯಮಾನ. ಬ್ರಿಟ್‌ವೈಸರ್‌ನ ತಂದೆ ತಾಯಿಯ ಆಶಯ ಬೇರೆಯದೇ ಆಗಿತ್ತು. ಮಗನು ತರಗತಿಯಲ್ಲಿ ಒಳ್ಳೆಯ ಅಂಕ ಪಡೆಯಬೇಕು, ಚೆನ್ನಾಗಿ ಕಲಿತು ವೃತ್ತಪರ ನ್ಯಾಯವಾದಿಯಾಗಬೇಕು ಎಂದೆಲ್ಲ ಕನಸು ಕಾಣುತ್ತಿದ್ದರೆ, ಹುಡುಗನಿಗೆ ಮಾತ್ರ ಶಾಲಾ ಕೊಠಡಿಗೆ ಸೀಮಿತನಾಗಿ ಕಲಿಯುವುದೆಂದರೆ, ಆಗುತ್ತಿರಲಿಲ್ಲಘಿ. ಇನ್ನೊಂದೆಡೆ ಸಹಪಾಠಿಗಳೆಲ್ಲ ಒಂದು ರೀತಿಯಲ್ಲಿ ಆಲೋಚಿಸುತ್ತಿದ್ದರೆ, ಈತನಿಗೆ ಹೊಳೆಯುವ ವಿಚಾರಗಳೆಲ್ಲ ತದ್ವಿರುದ್ಧವೇ ಆಗಿರುತ್ತಿತ್ತುಘಿ. ತುಸು ನರಪೇತಲನಂತೆ ಇದ್ದ ಈತನನ್ನು ಇತರ ವಿದ್ಯಾರ್ಥಿಗಳು ಗೇಲಿ ಮಾಡುತ್ತಿದ್ದರು. ಸಹಪಾಠಿಗಳೆದುರು ನಗೆಪಾಠಲಿಗೀಡಾಗುವ ಕೆಲವು ಸನ್ನಿವೇಶದಿಂದ ವಾರಗಟ್ಟಲೆ ಕುಗ್ಗಿ ಮನೆಯಲ್ಲಿಯೇ ಕುಳಿತುಬಿಡುತ್ತಿದ್ದಘಿ.ಇದರಿಂದ ಹೊರ ಬರಲು ಆಪ್ತ ಸಮಾಲೋಚಕರಲ್ಲಿ ಕೆಲವು ಬಾರಿ ಹೋಗಿ ಬರುತ್ತಿದ್ದನಾದರೂ, ತನ್ನ ಸಮಸ್ಯೆಗಳಿಗೆ ಪರಿಹಾರವೇ ಇಲ್ಲಘಿ, ತಪ್ಪು ಜಾಗದಲ್ಲಿಘಿ, ವಿಚಿತ್ರ ದೇಶದಲ್ಲಿ ತಾನು ಹುಟ್ಟಿ ಸಿಕ್ಕಿಹಾಕಿಕೊಂಡೆ ಎಂದೆಲ್ಲ ಆತನಿಗೆ ಅನ್ನಿಸುತ್ತಿತ್ತುಘಿ. ಚಿಕ್ಕ ಪುಟ್ಟ ಘಟನೆಗಳಿಂದ ಕುಗ್ಗಿ ಹೋಗುತ್ತಿದ್ದ ಬ್ರಿಟ್‌ವೈಸರ್‌ನ ವರ್ತನೆ ಆತನ ತಂದೆಗೆ ಹಲವು ಬಾರಿ ಆತಂಕ, ಕೋಪಕ್ಕೆ ಕಾರಣವಾಗುತ್ತಿತ್ತುಘಿ. ತಂದೆ ಒಂದು ರೀತಿಯಲ್ಲಿ ಕಟ್ಟು ನಿಟ್ಟಿನ ಅಕಾರಿಯಂತೆ ಮಗನಿಗೆ ಅದು ಇದು ಎಳೆದಾಡುವುದಿತ್ತುಘಿ. ಸುಮ್ಮನೇ ಕುಳಿತಿರುವ ಬದಲು ಏನಾದರೂ ಒಂದು ಕೆಲಸ ಕಾಣು ಎನ್ನುವುದಿತ್ತುಘಿ. ಆದರೆ ಹುಡುಗ ಸುಧಾರಿಸುವ ಲಕ್ಷಣ ಕಾಣದೇ ಹೋದಾಗ, ಒಂದು ಬೇಸಿಗೆಯಲ್ಲಿ ಕರೆದು, ಪ್ಯೂಗಟ್ ಪ್ರದೇಶದ ಅಟೋ ಉದ್ಯಮದ ಚಾಳವೊಂದರಲ್ಲಿ ಕೆಲಸಕ್ಕೆ ಸೇರಿಸಿ, ದಿನದ ಹೆಚ್ಚು ಕಾಲದ ಮೈ ಬಗ್ಗಿಸಿ ದುಡಿಯುವುದರಿಂದಾದರೂ, ಬಾಲಕ ಸುಧಾರಿಸಬಹುದು ಎಂದುಕೊಂಡಿದ್ದಘಿ. ತಂದೆ ಅಂದಾಜಿಸಿದಂತೆ ಆಶ್ಚರ್ಯವೇನೂ ಘಟಿಸಲಿಲ್ಲಘಿ, ಹೊರತಾಗಿ ಒಂದೇ ವಾರದಲ್ಲಿ ಅಲ್ಲಿನ ಕೆಲಸ ಬಿಟ್ಟಘಿ. ‘ ಆ ಘಟನೆಯಿಂದ ನನ್ನ ಬಗ್ಗೆ ಈ ಹುಡುಗ ಎಲ್ಲಿಯೂ ಸಲ್ಲದ ನಿಷ್ಪ್ರಯೋಜಕ’’ ಎಂದುಕೊಂಡಿರಬೇಕು. ಇನ್ನೊಂದೆಡೆ, ಮಗನ ವರ್ತನೆಯನ್ನು ನೋಡಿ ತಾಯಿ ಕರುಳಿನ ಸ್ಪಂದನೆಯೇ ಬೇರೆ ರೀತಿ ಆಗಿತ್ತುಘಿ. ಮಗನನ್ನು ದಾರಿಗೆ ತರಲು ಒಮ್ಮೊಮ್ಮೆ ತಾಯಿ ಸಟ್ಟೆದ್ದು ಎಗರಾಡುತ್ತಿದ್ದಳು, ಮತ್ತೊಮ್ಮೆ ಏನೂ ಆಗಿಲ್ಲ ಎಂಬಂತೆ ‘‘ಏನಾದರೂ ಹಾಳಾಗು’’ ಎಂದು ಆಚೆ ಹೋಗಿಬಿಡುತ್ತಿದ್ದಳು. ಮನೆಯಲ್ಲಿ ತಂದೆ ಹಾಗೂ ಮಗನ ನಡುವೆ ಆಗಾಗ ನಡೆಯುತ್ತಿದ್ದ ಜಗಳ, ದೊಂಬಿಯಲ್ಲಿ ಕೆಲವೊಮ್ಮೆ ಮಗನ ಪಕ್ಷವನ್ನೂ ವಹಿಸಿಕೊಂಡರೂ, ಹೆಚ್ಚು ಮಾತಾಡದೇ ಸುಮ್ಮನೇ ಇರುತ್ತಿದ್ದಳು. ವ್ಯರ್ಥ ಕಾಲ ಹರಣ ಮಾಡುತ್ತಿದ್ದ ಮಗನಿಗೆ, ಅದರಲ್ಲೂ ಒಮ್ಮೆ ಗಣಿತದಲ್ಲಿ ಸಿಂಗಲ್ ಡಿಜಿಟ್‌ನ ಅಂಕಪತ್ರಿಕೆಯನ್ನು ಮನೆಗೆ ತಂದಾಗ ‘‘ಇದನ್ನೆಲ್ಲ ನಿಮ್ಮ ತಂದೆ ನೋಡಿದರೆ ಸಿಟ್ಟು ಮಾಡುತ್ತಾರೆ ಕಣೊ’’ ಎಂದು ಎಚ್ಚರಿಸುತ್ತಿದ್ದಳು. ಆದರೆ, ಅಂಕಪತ್ರದಲ್ಲಿ ಗಣಿತದ ಅಂಕವನ್ನು ತಿದ್ದಿ ಡಬಲ್ ಡಿಜಿಟ್ ಮಾಡಿಕೊಂಡ ಮಗನ ತಪ್ಪು ತಿಳಿದರೂ, ತಾಯಿ ಏನೂ ಮಾತಾಡದೆ, ಮೌನ ಸಮ್ಮತಿಯನ್ನೂ ತೋರಿದ್ದಳು. ಆತ ಏನು ಹೇಳಿದರೂ ಗೋಣು ಅಲ್ಲಾಡಿಸುವುದು, ಆತನ ತಪ್ಪನ್ನು ಸಮ್ಮತಿಸುವುದು ಕ್ರಮೇಣ ಅವರ ಸಂಬಂಧದ ಸ್ಥಾಯಿಭಾವವೇ ಆಯಿತು. ತುಂಬ ಮಂಕು ಕವಿದಂತೆ ಕುಳಿತುಕೊಂಡಾಗ ಬ್ರಿಟ್‌ವೈಸರ್ ನನ್ನು ಯಾವುದಾದರೂ ಮ್ಯೂಸಿಯಂ ಗೆ ಕರೆದೊಯ್ದರೆ ಜೀವಕಳೆ ಬರುತ್ತದೆ ಎಂದು ತಿಳಿಯುತ್ತಲೇ ಆತನ ತಂದೆ ತಾಯಿಗಳು, ಅನಿವಾರ್ಯವಾಗಿ ಅದಕ್ಕೂ ಹೊಂದಿಕೊಂಡರು. ಸಮೀಪದ ಸಣ್ಣಪುಟ್ಟ ಮ್ಯೂಸಿಂಗಳಲ್ಲಿ ಒಂದಕ್ಕೆ ಆತನನ್ನು ಕಳುಹಿಸಿ, ಸುಮ್ಮನೇ ಸುತ್ತಾಡಲು ಅವಕಾಶಮಾಡಿಕೊಡುತ್ತಿದ್ದರು. ಮ್ಯೂಸಿಯಂನಲ್ಲಿ ಯಾವುದಾದರೂ ಒಂದು ಜಾಗದಲ್ಲಿ ಕುಳಿತು ಚಿತ್ರಕಲೆ, ಮ್ಯೂರಲ್‌ಗಳನ್ನು ನೋಡುತ್ತಘಿ, ಅವುಗಳನ್ನು ಮುಟ್ಟಿ ಹಿತಾನುಭವ ಪಡೆಯುವುದಲ್ಲದೆ, ಪ್ರಸಿದ್ಧ ಲಾಕೃತಿಗಳಲ್ಲಿಘಿ, ಅಲ್ಲಲ್ಲಿ ಸಿಗುವ ಸಣ್ಣಪುಟ್ಟ ವಕ್ರವನ್ನು ಕಂಡು ಹಿಡಿಯುವುದರಲ್ಲಿ ಖುಷಿಪಡುತ್ತ ಕಾಲ ಹರಣ ಮಾಡುತ್ತಿದ್ದಘಿ. ವಾಸ್ತವದಲ್ಲಿ ಯಾವುದೇ ಕಲಾವಿದನೂ ಪರಿಪೂರ್ಣನಲ್ಲಘಿ, ಯಾವುದೇ ಒಂದು ಗೆರೆಯೂ ಇನ್ನೊಂದರಂತೆ ಇರುವುದಿಲ್ಲ ಎಂಬುದು ಕಲಾ ವಲಯದಲ್ಲಿ ಸರ್ವಸಮ್ಮತವಾದ ವಿಚಾರ ತಾನೆ, ಇದನ್ನು ಬ್ರಿಟ್‌ವೈಸರ್ ಬೇರೆಯದೇ ರೀತಿಯಲ್ಲಿ ತೆಗೆದುಕೊಳ್ಳುತ್ತಿದ್ದಘಿ. ಅಂತೂ ಹಾಗೂ ಹೀಗೂ ಮಾಡಿ ಈತನ ಮೂಡು ಒಂದು ಸುಸ್ಥಿತಿಗೆ ಬರುತ್ತಲೇ ಪಾಲಕರು ಹೋಗಿ ಈತನನ್ನು ಕರೆತರುತ್ತಿದ್ದರು. ಇಂಥ ಸನ್ನಿವೇಶದಲ್ಲೂ ಕೆಲವೊಮ್ಮೆ ಅಪಘಾತಗಳು ಆಗುವುದಿದೆ. ಸ್ಟ್ರಾಂಗ್‌ಬರ್ಗ್‌ನ ಮ್ಯೂಸಿಯಂ ಒಂದರಲ್ಲಿ ಹೀಗೆ ಲೋಹದ ಶಿಪ್ಪದ ಮೇಲೆ ಬೆರಳಾಡಿಸಿ ಖುಷಿಯ ಲಹರಿಯಲ್ಲಿದ್ದ ಬ್ರಿಟ್‌ವೈಸರ್ ಬೆರಳು, ರೋಮನ್ ಶವಪೆಟ್ಟಿಗೆಯ ಬಿಚ್ಚಿಕೊಡ ದಬ್ಬೆಯೊಳಗೆ ಸಿಲುಕಿಕೊಂಡಿತು. ಕೈ ಬೆರಳನ್ನು ಆಚೆ ಸೆಳೆಯುವ ಬರದಲ್ಲಿ ಒಂದು ನಾಣ್ಯದ ಗಾತ್ರದ ಗಾಜಿನ ಕೆತ್ತೆಯೊಂದು ಬ್ರಿಟ್‌ವೈಸರ್ ಕೈಯ್ಯಲ್ಲಿ ಕಿತ್ತುಕೊಂಡು ಬಂದಿತು. ಅದೊಂದು ವಿಚಿತ್ರ ಉಭಯ ಸಂಕಟವಾಗಿ ಆಚೆ ಈಚೆ ನೋಡುತ್ತಘಿ, ಕಿತ್ತು ಬಂದ ಸುಂದರ ಕೆತ್ತೆಯನ್ನು ಅಮುಕಿ ಜೇಬಿಗೆ ಹಾಕಿಕೊಂಡ. ತಾನು ನಂಬುತ್ತಿದ್ದ ಪುರಾತತ್ವ ದೈವವೇ ತನಗೆ ಇದೊಂದು ಪ್ರಸಾದ ರೂಪದಲ್ಲಿ ಕೊಟ್ಟ ಕೊಡುಗೆ ಎಂದು ಒಮ್ಮೆ ರೋಮಾಂಚಿತನೂ ಆದ. ತಾತನೊಂದಿಗೆ ಕೋಟೆ ಕೊತ್ತಲ ಸುತ್ತುವಾಗ, ಅಲ್ಲಿ ಇಲ್ಲಿ ಸಿಗುತ್ತಿದ್ದ ಕಲಾ ತುಣಿಕುಗಳು, ಬೇರೊಂದು ಸ್ಥಳದಲ್ಲಿ ತನಗೆ ಈ ಬಾರಿ ದಕ್ಕಿತು ಎಂದುಕೊಂಡು ಒಳಗೊಳಗೇ ಪುಳಕಿತನೂ ಆದ. ಹಾಗೆ ನೋಡಿದರೆ, ಇದೊಂದು ಚಿಕ್ಕ ಅವಘಡ. ಎಕ್ಸಿಡೆಂಟ್ ಎಂದು ಕಂಡರೂ, ಆತ ಮುಂದೆ ಬೃಹತ್ ಮಾಸ್ಟರ್ ಪೀಸ್‌ಗಳನ್ನು ಎಗಿರಿಸಲು ಜೀವನದ ಮೊದಲ ಯಶಸ್ವೀ ಅಡ್ಡದಾರಿಯೂ ಆಯಿತು. ಮನೆಗೆ ಬಂದು ಈ ತುಣುಕನ್ನು ತನ್ನ ಕೆಳಮನೆಯ ಕೋಣೆಯಲ್ಲಿಘಿ, ಚಾರಣದಲ್ಲಿ ಸಿಕ್ಕ ತುಣುಕು, ಮಿಣುಕುಗಳ ಜತೆಯಲ್ಲೇ ಇದನ್ನೂ ಇಟ್ಟುಕೊಂಡ, ಆಗ ನೋಡಿದರೂ, ಹತ್ತಾರು ಶತಮಾನಗಳ ಹಿಂದೆ ಯಾವುದೋ ಶಿಲ್ಪಿ ತಯಾರಿಸಿದ ಆ ತುಣುಕ ಜೋಪಾನವಾಗಿಯೇ ಇದೆ. ಅದರ ಪಕ್ಕದಲ್ಲಿ ಈ ಹಿಂದೆ ತಾನು ಖರೀದಿಸಿ ತಂದ ಬೆಲೆ ಬಾಳುವ ಮಣಿಗಳು, ಗೋರಿಲ್ಲಾ ತರ ಕಾಣುವ ಕಾಫಿ ಬೊಡ್ಡೆಗಳು ಎಲ್ಲವೂ ಒಂದಕ್ಕೊಂದು ತಾಗಿಕೊಂಡು ಕುಖಿತಿವೆ. ಆಗಲೇ ಹೇಳಿದಂತೆ ಕೆಳಮನೆಯ ಈ ಪ್ರಪಂಚಕ್ಕೆ ಹೋದರೆ, ಮತ್ತೆ ಕಳೆದುಹೋಗುವಷ್ಟು ಕತೆಯಲ್ಲಿ ತಲ್ಲೀನನಾಗುತ್ತಿದ್ದ ಬ್ರಿಟ್‌ವೈಸರ್. ಹದಿಹರಯದಲ್ಲಿ ಸಂಗೀತದ ಪರಿಕರಗಳು ಹಾಗೂ ವೈದ್ಯಕೀಯ ಸ್ಟೆತಾಸ್ಕೋಪ್ ಮತ್ತಿತರ ಸಾಧನಗಳ ಬಗ್ಗೆ ಈತನಿಗೆ ಎಲ್ಲಿಲ್ಲದ ಕುತೂಹಲ ಇತ್ತುಘಿ. ಪಾನೀಯ ಲಾಳಿಕೆಗಳು, ಔನ್ಸ್‌ಗಳ ಕೊಕ್ಕುಘಿ, ದಾಗಿನಿಗಳನ್ನು ಇಡುತ್ತಿದ್ದ ಸುಂದರ ಪೆಟ್ಟಿಗೆ, ಅಲಾದಿ ದೀಪಗಳು, ಬಂದೂಕಿನ ಹೊದಿಕೆ, ಖಡ್ಗದ ವರೆ, ಚರ್ಮದ ಶಿರಸ್ತ್ರಾಣ, ಬತ್ತಳಿಕೆ, ಮನೆಯಲ್ಲಿ ತಂದೆ ಬಳಸುತ್ತಿದ್ದ ಪೀಠೋಪಕರಣ, ವಾಚುಗಳ ಪೆಟ್ಟಿಗೆ ಆಗೀಗ ಎತ್ತಿ ನೋಡಿ ಖುಷಿಪಡುತ್ತಿದ್ದಘಿ. ದಂತದಿಂದ ಸಿದ್ಧಪಡಿಸಿದ ತಂಬಾಕಿನ ಪೆಟ್ಟಿಗೆ, ಆ್ಯಂಟಿಕ್ ಪುಸ್ತಕಗಳು, ಹುಕ್ಕಾಗಳು ಹೀಗೆ ಐಶಾರಾಮಿ ಸಂದರ್ಭ ಬಳಸುವ ಹಳೆಯ ಪರಿಕರಗಳನ್ನು ಯಾವತ್ತೂ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಆತನ ಹವ್ಯಾಸವೇ ಆಗಿತ್ತುಘಿ. ಹೀಗೆ ಇಂಥದ್ದರಲ್ಲೇ ಲೋಕ ಮರೆಯುತ್ತಿದ್ದ ಮಗನ ಬಗ್ಗೆ ಒಂದೆರಡು ಬಾರಿ ಮೃದು ಮಾತಿನಲ್ಲಿ ಎಚ್ಚರಸಿದರು, ಕ್ರಮೇಣ ಬಯ್ದು ಆತನನ್ನು ಹದ್ದುಬಸ್ಥಿನಲ್ಲಿಡಲು ತಂದೆಯೂ ಪ್ರಯತ್ನಿಸಿದರು. ಹಾಗೇ ನಡೆಯುತ್ತಲೇ ಇದ್ದಾಗ, ೧೯೯೧ ರಲ್ಲಿ ಬ್ರಿಟ್‌ವೈಸರ್ ಪ್ರೌಢ ಶಿಕ್ಷಣವನ್ನೂ ಪಡೆದು ಹೊರಬಂದ. ಈಹೊತ್ತಿನಲ್ಲಿ ಮನೆಯಲ್ಲಿ ಆಗೀಗ ನಡೆಯುತ್ತಲೇ ಇದ್ದ ಗದ್ದಲದಿಂದ ಬೇಸತ್ತ ನೆರೆ ಕೆರೆಯವರು ಕೆಲವು ಬಾರಿ ಪೊಲೀಸರಿಗೂ ದೂರು ನೀಡಿದರು. ಇದೇ ಹಂತದಲ್ಲಿ ಮನೆಯಲ್ಲಿ ಬಿರುಕು ಮತ್ತಷ್ಟು ವಿಸ್ತಾರವಾಗಿ, ತಂದೆ, ಮನೆಯನ್ನು ಬಿಟ್ಟು ಹೋದರು. ಹೋಗುವಾಗ ಬ್ರಿಟ್‌ವೈಸರ್ ತುಂಬ ಹಚ್ಚಿಕೊಂಡ ಪೀಠೋಪಕರಣ, ಕೆಲವು ಮಿಲಿಟರಿ ಗುರಾಣಿತರದ ಎಂಟಿಂಕ್, ಚಿಕ್ಕವನಿರುವಾಗ ರಚಿಸಿಕೊಟ್ಟ ಸುಂದರವಾದ ಪೇಂಟಿಂಗ್, ವಾಚುಗಳ ಪೆಟ್ಟಿಗೆ ಸಹಿತ, ಬ್ರಿಟ್‌ವೈಸರ್ ಪ್ರಾಣ ಇಟ್ಟುಕೊಂಡ ಯಾವೊಂದು ವಸ್ತುವನ್ನೂ ಬಿಡದೆ, ಇದು ತನಗೆ ತಲೆಮಾರುಗಳಿಂದ ಬಂದ ಸ್ವಂತದ ಆಸ್ತಿ ಎಂದು ತಂದೆ, ಪ್ಯಾಕ್ ಮಾಡಿಕೊಂಡೇ ಮನೆಯಿಂದ ಆಚೆ ಹೋದಾಗ, ನಿಜ ಅರ್ಥದಲ್ಲಿಘಿ, ತಾಯಿ ಮಗ ಪರದೇಸಿಯೇ ಆದರು. ಜೀವಂತ ಅಪ್ಪ ಹಾಗೂ ಜೀವ ಇಟ್ಟುಕೊಂಡಿದ್ದ ಕಲಾಕೃತಿ, ದಾಗಿನಿಗಳೆರಡನ್ನೂ ಬ್ರಿಟ್‌ವೈಸರ್ ತನ್ನ ಹತ್ತೊಂಬತ್ತನೇ ವಯಸ್ಸಿನಲ್ಲಿ ಸಂಪೂರ್ಣ ಕಳೆದುಕೊಂಡು ಮಾನಸಿಕವಾಗಿ ಪರಿತ್ಯಕ್ತ ಭಾವನೆಯಲ್ಲಿ ಮುಳುಗಿದ. ನಂತರ ದಿನಗಳಲ್ಲಿ ತಾಯಿ ಮಾತ್ರ ಈತನ ಜತೆಯಲ್ಲಿದ್ದುದು ಬಿಟ್ಟರೆ, ತಂದೆಸಂಪರ್ಕವೇ ಕಡಿದುಹೋಯಿತು. ಜೀವನಾಧಾರ ಅಲುಗಾಡುತ್ತಲೇ ತಾಯಿ ಮಗನಿಗೆ ದೊಡ್ಡ ಮನೆಯಲ್ಲಿ ಇರುವುದು ಸಾಧ್ಯವಾಗದೆ, ಒಂದು ಅಪಾರ್ಟ್‌ಮೆಂಟ್ ಬಾಡಿಗೆ ಮನೆಗೆ ಸ್ಥಳಾಂತರ ಹೊಂದಬೇಕಾಯಿತು. ‘‘ ಹೊಸ ಮನೆಗೆ, ದೃತಿಗೆಟ್ಟ ನನ್ನನ್ನು ಹಾಗೂ ಇಕಿಯಾ ಕಂಪೆನಿಯ ಒಂದಿಷ್ಟು ಹೊಸ ಪೀಠೋಪಕರಣಗಳನ್ನು ತಂದು ಹಾಕಿದಳು.’’ ಎಂದು ತಾಯಿಯ ಅಂದಿನ ದಿನಗಳನ್ನು ಬ್ರಿಟ್‌ವೈಸರ್ ಸ್ಮರಿಸುತ್ತಾನೆ. ಅಪ್ಪನಿದ್ದ ಕಾಲದಲ್ಲಿ ಒಂದು ಸ್ವಂತ ನಾವೆಯನ್ನು ಹಾಗೂ ಮರಸಿಡೀಸ್ ಕಾರನ್ನು ಹೊಂದಿದ್ದ ಈ ಕುಟುಂಬ ಸಾಮಾಜಿಕವಾಗಿ ಸಂಪೂರ್ಣ ಕೆಳಕ್ಕೆ ಬಂದು, ಸರಕಾರಿ ಸಾರಿಗೆ ಬಸ್ಸುಗಳಲ್ಲಿ ಅಬ್ಬೇಪಾರಿಗಳಂತೆ ಸಂಚರಿಸುವ ಸ್ಥಿತಿಗೆ ತಲುಪಿತು. ಬದಲಾದ ತನ್ನ ಸಾಮಾಜಿಕ ಸ್ಥಿತಿಗತಿಯು, ಕೆಲವು ಬೇಜವಾಬ್ದಾರಿಗೂ ಹೇತುವಾಗ, ಕೆಲವೊಮ್ಮೆ ಅಂಗಡಿಗೆ ನುಗ್ಗಿ ಬಅಎಬರೆ, ದಿನಸಿ, ಕೆಲವೊಂದು ಬೆಲೆ ಬಳುವ ಗ್ಹೋಪಕರಣಗಳನ್ನೂ ಕದ್ದು ಮನೆಗೆ ತುಂಬಉವ ಮೂಲಕ, ಬ್ರಿಟ್‌ವೈಸರ್ ಮಾನಸಿಕವಾದ ಅಸಮಾನತೆಯನ್ನು ತುಂಬಿಕೊಳ್ಳಲು ಹೇಸಲಿಲ್ಲಘಿ. ಇದೆಲ್ಲದರ ಪರಿಣಾಮವಾಗಿ ಪೋಲೀಸು, ಕೋರ್ಟು, ಲಾಟಿ ಏಟುಗಳ ಅನುಭವ ಆಗತೊಡಗಿತು. ಇದರಿಂದೆಲ್ಲ ಬ್ರಿಟ್‌ವೈಸರ್, ‘‘ಏನೇ ಮಾಡಿದರೂ ಈ ಪೊಳಿಸರು ಹಾಗೂ ಕಾನೂನು ಕಟ್ಟಳೆ, ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಳ್ಳಬಾರದು’’ ಎಂದು ಎಚ್ಚರಿಕೆಯ ಪಾಠ ಕಲಿತ. ಮಗಳು ಹಾಗೂ ಮೊಮ್ಮಗನ ಬದಲಾದ ಸ್ಥಿತಿಯ ಬಗ್ಗೆ ಅಮ್ಮಜ್ಜ ಮರುಗಿ, ಒಂದಿಷ್ಟು ಸಹಾಯ ಮಾಡಿ ಒಂದು ಕಾರನ್ನೂ ಕೊಡಿಸಿ ಒಂದಿಷ್ಟು ಬೆಂಬಲಕ್ಕೆ ನಿಂತರು ನಿಜ. ಆದರೆ, ಈ ಬೆಂಬಲವು, ಬ್ರಿಟ್‌ವೈಸರ್‌ನಲ್ಲಿದ್ದ ಕಳ್ಳನನ್ನೇ ಇನ್ನಷ್ಟು ಪುಸಲಾಯಿಸಿದಂತೆ ಆಯಿತು. ಅಜ್ಜ ಕೊಟ್ಟ ಕಾರನ್ನು ಹೆಮ್ಮೆಯಿಂದ ಓಡಿಸುವಾಗ ಒಮ್ಮೆ ಪಾರ್ಕಿಂಗ್ ಗಲಾಟೆಯಲ್ಲಿ ಮತ್ತೆ ಪೊಲೀಸ್ ಠಾಣೆಯನ್ನು ಸೇರುವಂತಾಯಿತು. ಇನ್ನೊಂದು ಅಂಗಡಿ ನುಗ್ಗಿದ ಘಟನೆಯಲ್ಲಂತೂ ಪೊಲೀಸರು ಹೊಡೆಯುವಾಗ ತಿರುಗಿ ಬಿದ್ದುಘಿ, ಪೊಲೀಸ್ ಅಕಾರಿಯ ಬೆರಳನ್ನೇ ತಿರುಪಿದ ಕಾರಣ, ಪ್ರಕರಣ ಇನ್ನಷ್ಟು ಸಂಕೀರ್ಣವಾಗಿ ಸ್ಥಳೀಯ ಕೋರ್ಟ್ ಒಂದು ಈತನನ್ನು ಎರಡು ವಾರಗಳ ಕಾಲ ವರ್ತನಾ ಚಿಕಿತ್ಸೆಯ ಜೈಲಿಗೆ ಹಾಕಿದರು. ಚಿತ್ರ ವಿಚಿತ್ರ ಒದ್ದಾಟ, ಜಗ್ಗಾಟ, ಜಂಜಡದಲ್ಲಿ ಸಿಲುಕಿದ ಬ್ರಿಟ್‌ವೈಸರ್ ತನ್ನ ವರ್ತನೆಗಳನ್ನು ದಕ್ಕಿಸಿಕೊಳ್ಳಲಾಗದೆ, ಮಾನಸಿಕ ಒತ್ತಡಕ್ಕೊಳಗಾಗಿ ಒಂದೆರಡು ಬಾರಿ ಆತ್ಮ ಹತ್ಯೆಯ ಆಲೋಚನೆಗಳೂ ಬಂದವು. ಇದರಿಂದ ಹೊರಕ್ಕೆ ಬರಲು, ಮಾನಸಿಕ ನೋವು ನಿವಾರಕ ರೊಲೊಫ್ಟ್ ಮಾತ್ರೆಗೀಗೆ ಮೊರೆ ಹೋದ. ಆ ಮಾತ್ರೆಗಳು ತನಗೆ ಸಂಪೂರ್ಣ ಪರಿಹಾರವಾಗದಿದ್ದರೂ, ಅಲ್ಲಿಂದಲ್ಲಿಗೆ ನಿರ್ವಹಣೆಯ ಅವಕಾಶ ಮಾಡಿತಲ್ಲದೆ, ತನ್ನ ಇಪ್ಪತ್ತನೇ ವಯಸ್ಸಿನ ಹೊತ್ತಿಗೆ ಪ್ರಸಿದ್ಧ ಮುಲ್‌ಹೌಸ್ ಮ್ಯೂಸಿಯಂನಲ್ಲಿ ಒಂದು ಚಿಕ್ಕ ಉದ್ಯೋಗ ದಕ್ಕಿಸಿಕೊಳ್ಳುವ ಮಟ್ಟಿಗೆ ಈತನಿಗೆ ಸಹಾಯವಾಯಿತು. ಆ ದಿನಗಲ್ಲಿ ಓರ್ವ ಗಾರ್ಡ್ ಆಗಿ ಮ್ಯೂಸಿಯಂನಲ್ಲಿ ನಲ್ಲಿ ಪ್ರಸಿದ್ಧ ಕಲಾವಿದರ ಚಿತ್ರಗಳನ್ನು ಇನ್ನಷ್ಟು ನಿಕಟವಾಗಿ ನೋಡುವುದು, ಇಂಥ ಸ್ಥಳಗಳಲ್ಲಿ ಭದ್ರತೆಯ ಕೆಲವು ಹುಳುಕುಗಳನ್ನು ತಿಳಿಯುತ್ತ ಮನೋ ಕ್ಷೇಬೆಯಿಂದ ಹೊರ ಬರಲು ನೌಕರಿಯೇ ಸಹಾಯ ವಾಯಿತು. ಆದರೂ ದೀರ್ಘ ಕಾಲ ಒಂದೆಡೆ ನಿಲ್ಲಬೇಕಾದ ಗಾರ್ಡ್ ಕೆಲಸದ ನಿಜವಾದ ಬೇಸರ ಅರಿವಾಗತೊಡಗಿತು. ಮ್ಯೂಸಿಯಂ ಸೆಕ್ಯುರಿಟಿ ನೌಕರಿಯಿಂದ ಹೊರ ಬರುವ ಹೊತ್ತಿಗೆ ಆತನಿಗೆ ದಕ್ಕಿದ ಎರಡು ಪ್ರಾಪ್ತಿಯಲ್ಲಿ ಮೊದಲನೆಯದು ಇಲ್ಲಿನ ಭಧ್ರಾ ಒಳನೋಟಗಳು, ಇನ್ನೊಂದು ಮುಲ್‌ಹೌಸ್ ಮ್ಯೂಸಿಯಂನ ಮೇಲ್ಮಹಡಿಯಲ್ಲಿ ಇಡಲಾಗಿದ್ದ ಐದನೇ ಶತಮಾನದ ಒಂದು ಬೆಲೆಬಾಳುವ ಬೆಲ್ಟ್‌ಘಿ. ಮ್ಯೂಸಿಯಂನ ಮೇಲ್ಮಹಡಿಯಲ್ಲಿ ಇಡಲಾಗಿದ್ದ ಫ್ರೆಂಚ್ ಮೊರ್ವಿಯನ್ ದೊರೆಗಳ ಸೊಂಟದ ಪಟ್ಟಿಯ ಲೋಹದ ಹುಕ್‌ಘಿ, ಆ ಜಾಗದಲ್ಲಿ ಕಳವಾಗಿದೆ ಎಂಬ ಯಾವೊಂದು ಗುರುತೂ ಬಿಡದ ರೀತಿಯಲ್ಲಿ ಎಗರಿಸಿಕೊಂಡು ಬ್ರಿಟ್‌ವೈಸರ್ ಮ್ಯೂಸಿಯಂ ನೌರಿಗೆ ವಿದಾಯ ಹೇಳಿ ಬಂದ. ಅಪ್ಪನ ವಿದಾಯದ ಜೊತೆಗೆ, ಆ ಮನೆಯ ಬೇಸ್ಮೆಂಟ್‌ನಲ್ಲಿ ಈತ ಇಟ್ಟಿದ್ದ ಈಗನ ಆಂಟಿಕ್ ಗಳಿಕೆಯ ಪೆಟ್ಟಿಗೆಯೂ, ಈತನೊಂದಿಗೆ ತಾಯಿ ಹಿಡಿದ ಅಪಾರ್ಟ್‌ಮೆಂಟ್‌ನ ಎಕೆಬಾ ಕಪಾಟಿಗೆ ಸ್ಥಳಾಂತರ ಆಯಿತು. ಅದಾದ ನಂತರ ಇತ್ತೀಚೆಗೆ ಮ್ಯೂಸಿಯಂನಲ್ಲಿ ಎಗರಿಸಿದ ಸೊಂಟದ ಪಟ್ಟಿಯ ಲೋಹದ ಹುಕ್‌ಘಿಸಹಿತ ಇನ್ನೂ ಇತರ ಗಳಿಗೆ, ಪ್ರಾಪ್ತಿಗಳು ಒಂದೊಂದಾಗ ಈ ಮನೆಯಲ್ಲಿ ಬಂದು ಕುಳಿತವು. ಹಾಗೆ ನೊಡಿದರೆ, ಇವೆಲ್ಲ ಈತನ ಸ್ವಂತದ್ದಾಗಿರುವುದರಿಂದ ಯಾರೂ ಅದು ತನ್ನದು, ಮನೆತನದ ಆಸ್ತಿ ಎಂದೆಲ್ಲ ಹೇಳುವಂತೆ ಇರಲಿಲ್ಲಘಿ. ಆತನಿಂದ ಇನ್ನೆಂದೂ ಬಿಟ್ಟು ಹೋಗುವ ಪ್ರಶ್ನೆಯೇ ಇರಲಿಲ್ಲಘಿ. ಅಪ್ಪ ಬಿಟ್ಟುಹೋದ ನಂತರ ಆ ಕಪಾಟನ್ನು ಕ್ರಮೇಣ ತುಂಬುವುದ, ಅದೂ ಏಕಾಂಗಿ ಹೋರಾಟದಲ್ಲಿ ಎಷ್ಟೊಂದು ಕಷ್ಟ ಎಂಬುದನ್ನು ಆತ ಯಾರಿಗೂ ಹೇಳಿಕೊಳ್ಳುವಂತೆ ಇರಲಿಲ್ಲಘಿ. ಕ್ರಮೇಣ ಆತನ ಸ್ವರ್ಗದ ಪ್ರಪಂಚ ಇಲ್ಲಿಗೆ ಇಲ್ಲಿನ ನೀಲಿ ಪೆಟ್ಟಿಗೆಗಳಿಗೆ ಬಂದು ಅಮರಿಕೊಳ್ಳತೊಡಗಿತು. ಇನರಿಗೆ ಇಲ್ಲಿನ ಬ್ರಿಟ್‌ವೈಸರ್‌ನ ಖುಷಿಯ ಪಾರವೆಲ್ಲ ಅರ್ಥವಾಗುವಂತೆ ಇರಲಿಲ್ಲಘಿ. ಇದೇ ಹೊತ್ತಿಗೆ ಆತನ ಜೀವನಕ್ಕೆ ಓರ್ವ ಸುಂದರಿಯ ಹಿತಾನುಭವ ಸೇರಿತು.

Related Posts
Previous
« Prev Post