keremane amruta sinchanake tiddupadi







(ಮೂರು ತಿಂಗಳ ಹಿಂದೆ ಮಾಡಿದ ಮೂಲ ಆಕ್ಷೇಪ ಹೀಗಿತ್ತು..
ಬ್ಲಾಗಿನ ಹಳೆಯ ಕಡತವನ್ನು ಇಲ್ಲಿ ಕಟ್ ಪೇಸ್ಟ್ ಮಾಡಿದೆ..
ಮಾಡಿದೆ..
-ಹರಗಿ )

29-2-2012
.........

ಕೆರೆಮನೆ- ಶ್ರೀಮಯ -  ಡಾ. ಜೋಶಿ -ಸಂಸ್ಮರಣೆ ಇತ್ಯಾದಿ..


ಯಕ್ಷಗಾನದಲ್ಲಿ ಹಲವು ಕಾರಣಕ್ಕೆ ಪ್ರಾಥಸ್ಮರಣೀಯವಾದ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ ಅಮೃತ ಮಹೋತ್ಸವ ನೆನಪಿನಲ್ಲಿ "ಶ್ರೀಮಯ ಅಮೃತ ಸಿಂಚನ" ಎಂಬ ಸ್ಮರಣ ಸಂಚಿಕೆ ಇತ್ತೀಚೆಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ  ಬಿಡುಗಡೆ ಆಗಿದೆ. ಅದರ ವಿಶೇಷ ಎಂದರೆ  ಯಕ್ಷಗಾನದಲ್ಲಿ ಶೇಣಿ, ಸಾಮಗರ ನಂತರದ ಸಾಲಿನಲ್ಲಿ  ಎಲ್ಲ ತಿಟ್ಟಿಗೂ ಸಲ್ಲುವ  ಅರ್ಥದಾರಿ ಎಂದು ಖ್ಯಾತಿ ಪಡೆದ ಡಾ. ಎಂ.ಪ್ರಭಾಕರ ಜೋಶಿ ಅವರು ಇದನ್ನು ಸಂಪಾದಿಸಿದ್ದಾರೆ. ಅಂದಹಾಗೆ ಈ ಹಿಂದೆ ಯಕ್ಷಗಾನದಲ್ಲಿ "ಜಾಗರ' ಸೇರಿದಂತೆ ಹತ್ತಾರು ಪುಸ್ತಕಗಳನ್ನು ಹೊರತಂದಿರುವುದು, ಹಿಂದೊಮ್ಮೆ ಯಕ್ಷಗಾನ ಡಾಟ್ ಕಾಮ್ ಎಂಬ ವೆಬ್ ಸೈಟ್ ಮಾಡಿದ್ದು, ಸೇರಿದಂತೆ ಅವರ ಬಯೊಡಾಟಾವನ್ನು ಎಷ್ಟು ಬೇಕಾದರೂ ಹಿಗ್ಗಿಸಬಹುದಾದಷ್ಟು ಇದೆ. ಇಷ್ಟೊಂದು ಹಿನ್ನೆಲೆ ಇರುವವರು ತಂದ "ಅಮೃತ ಸಿಂಚನ" ಕೇವಲ ನಕಲು ಹಾಗೂ ಕೆಟ್ಟ ಸಂಪಾದನೆಗೆ ನಿದರ್ಶನ ಎಂಬದು ಬೇಸರದ ಸಂಗತಿ. ಕಾಪಿ ರೈಟ್ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದೆ ಹೊರತರಲಾದ ಪುಸ್ತಕ ಇದು. ಇದೆಲ್ಲ ನನಗೆ ನೇರವಾಗಿ ಸಂಬಂಧಿಸಿದ ಕಾರಣ ಈ ಬಗ್ಗೆ ವಿವರವಾಗಿ ಬರೆಯಬೇಕಾಯಿತು.

******

ಓರ್ವ ಪತ್ರಕರ್ತನಾಗಿ ಅಲ್ಲದೆ ಯಕ್ಷಗಾನ ಅಭಿಮಾನಿಯಾಗಿ ಡಾ. ಜೋಶಿ ನನ್ನ ಪರಿಚಿತು. ತೀರಾ ಚಿಕ್ಕ ವಯಸ್ಸಿನಲ್ಲಿ, ಸುಮಾರು 30 ವರ್ಷ ಹಿಂದೆ ನಮ್ಮೂರ ದೇವಸ್ಥಾನದ ಚಂದ್ರಶಾಲೆಯಲ್ಲಿ(ಉ.ಕ. ಜಿಲ್ಲೆ ಸಿದ್ದಾಪುರ ತಾಲೂಕು ಇಟಗಿ ರಾಮೇಶ್ವರ ದೇವಸ್ಥಾನ) ವಾಲಿವಧೆಯ ಸುಗ್ರೀವನ ಪಾತ್ರಧಾರಿಯಾಗಿ ಜೋಶಿಯವರು ನನ್ನ ಬಿತ್ತಿಯನ್ನು ಪ್ರವೇಶಿಸದರು. ಹಾಗೆ ವೃತ್ತಿ ಕಾರಣ ಮಂಗಳೂರಿಗೆ ಬಂದ ನಂತರ ಶ್ರೀ ಬಿ.ವಿ. ಸೀತಾರಾಮರ ಕರಾವಳಿ ಅಲೆಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸುವ ಸಂದರ್ಭ ಮೂಲ ಜೋಶಿಯವರು ನನ್ನ ಬಿತ್ತಿಯಲ್ಲಿ ಮತ್ತಷ್ಟು ಅಚ್ಚಾದರು. ನಾನು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಆಧರದಿಂದಲೇ ಕಾಣುತ್ತ, ಅವಶ್ಯ ಎನಿಸಿದಾಗ ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ವಲಯದ ಹತ್ತು ಹಲವು ಗಾಸಿಪ್ ಗಳನ್ನು ವರದಿಗೆ ಗ್ರಾಸವಾಗಿ ನೀಡುತ್ತ ಜೋಶಿ ಮತ್ತಷ್ಟು ಹತ್ತಿರವಾದರು.

ನಂತರ ಎಲ್ಲೇ ಸಿಕ್ಕರೂ ಒಂದಿಷ್ಟು ಹೊತ್ತು ಮಾತಾಡುವುದು ರೂಢಿಯಾಯಿತು. ನಾನು ಮಾತಾಡುತ್ತಿದ್ದೆ ಎಂಬುದಕ್ಕಿಂತ ಅವರ ಮಾತು ಕೇಳಿಸಿಕೊಳ್ಳುವ ವ್ಯಕ್ತಿಯಾದೆ ಎನ್ನುವುದೇ ಹೆಚ್ಚು ಸೂಕ್ತ. ನಾವು ಕೆಲಸ ಮಾಡುವ ಪತ್ರಿಕೆ, ಅದರ ಪ್ರಸರಣಾ ವ್ಯವಸ್ಥೆ, ತನ್ನಂಥವರಿಗೂ ಉಚಿತವಾಗಿ ಮನೆಗೆ ಪತ್ರಿಕೆ ಹಾಕುತ್ತಿಲ್ಲ, ಯಾವುದೋ ಪತ್ರಿಕೆ ತಮ್ಮ ಅಂಕಣವನ್ನು ಹೇಳದೇ ಕೇಳದೆ ನಿಲ್ಲಿಸಿದ್ದಕ್ಕಾಗಿ ಮಾಲಕರು ಸ್ವಾರ್ಥಿಗಳು.. ಹೀಗೆ ಜನ್ಮ ಜಾಲಾಡುವುದು ಅವರ ಜಾಯಮಾನ.  ಹಲವು ವಿಚಾರಗಳು ಅಧಿಕಪ್ರಸಂಗ ವಾಗಿಯೇ ಇರುತ್ತಿದ್ದವು. ಮೋಜಾಗಿ ಕಾಣುವ ನಿದರ್ಶನವನ್ನು ಉದಾಹರಣೆ ಹೇಳುವುದಾದರೆ, ಪ್ರತಿಬಾರಿಯೂ ಸಿಕ್ಕಾಗ ಪತ್ರಕರ್ತರು ಕ್ರಿಕೆಟಿಗರ ಬಗ್ಗೆ ತಳೆಯುವ ಧೊರಣೆಯ ಬಗ್ಗೆ ಹೇಳದೆ ಜೋಶಿ ತಮ್ಮ ಮಾತಿಗೆ ಮಂಗಳ ಹೇಳುತ್ತಿರಲಿಲ್ಲ. "ಏನ್ರೀ ನೀವು ಪತ್ರಕರ್ತರು.. ಭಾರತ ಒಂದು ಮ್ಯಾಚ್ ಸೋತರೆ .. ಹೀನಾಯ ಸೋಲು ಅಂತ ಬರೀತೀರಿ.. ಪಾಪ ಹತ್ತಾರು ಮ್ಯಾಚ್ ಗೆಲ್ಲಿಸಿಕೊಟ್ಟ ಸಚಿನ್ ಒಮ್ಮೆ ರನ್ ಮಾಡದೆ ಹಿಂದಿರುಗಿದರೆ ಆತ ಸ್ವಾರ್ಥಿ ಅಂತ ಮುಲಾಜಿಲ್ಲದೆ  ಬರೀತೀರಲ್ಲ".. ಇತ್ಯಾದಿ.. ವಾಸ್ತವಿಕವಾಗಿ ನಾನು ಕ್ರೀಡಾ ಪತ್ರಕತನಲ್ಲ. ಜೋಶಿಯವರೂ ಕ್ರಕೆಟ್ ಮೂಲಕ ಸಾರ್ವಜನಿಕವಾಗಿ ಪರಿಚಿತರೂ ಅಲ್ಲ. ವಿಷಯ ಇಬ್ಬರಿಗೂ ಅಪ್ರಸ್ತುತ !

ಕಡೆಗೆ ನೋಡಲಾಗಿ ಮಂಗಳೂರಿನ ಹೆಚ್ಚಿನ ಪತ್ರಕರ್ತರು ನನ್ನ ಈ ಅನುಭವ ತಮಗೂ ಆಗಿದೆ ಎನ್ನತೊಡಗಿದರು. ಇನ್ನಷ್ಟು ಇಂಥ ಉದಾಹರಣೆ ನೀಡಿದಾಗ ತಮಾಶೆ ಎನಿಸಿತು. ಹಾಗೆಂದು ಜೋಶಿ ಬೊರ್ ಹೊಡೆಸುತ್ತಿರಲಿಲ್ಲ. ಒಂದು ಮನರಂಜನೆಯಾಗಿ ನಾನು ಇನ್ನು ಮುಂದೆಯೂ ಅವರ ಈ ವಾಚಾಳಿತನಕ್ಕೆ ಹಸಿರು ನಿಷಾನೆ ಕೊಡುತ್ತೇನೆ.

****

ಇಂಥ ಜೋಶಿಯವರು ಕೆರೆಮನೆ ಶಂಭು ಹೆಗಡೆಯವರ ನಿಕಟವರ್ತಿಯಾಗಿದ್ದರು. ಶಂಭು ಹೆಗಡೆ ಮೂರು ವರ್ಷ ಹಿಂದೆ ಅನಿರೀಕ್ಷಿತ ನಿಧನರಾದ ಸಂದರ್ಭ ನಾವೆಲ್ಲ ಮಂಗಳೂರಲ್ಲಿ ಅವರ ಸಂಸ್ಮರಣೆ ಹಮ್ಮಿಕೊಂಡೆವು. "ಕಲ್ಪದ ಕಲಾವಿದ" ಎಂಬ ಸ್ಮರಣ ಸಂಚಿಕೆಯನ್ನು ಹೊರ ತಂದೆವು. ಸಂಚಿಕೆಗೆ ನಾನೇ ಸಂಪಾದಕನಾಗಿದ್ದು, 300ಕ್ಕೂ ಹೆಚ್ಚು ಪುಟಗಳ, 80ಕ್ಕೂ ಹೆಚ್ಚು ಬರಹಗಳಿರುವ, ಬಹುವರ್ಣದ ಫೊಟೊಗಳ ದೊಡ್ಡ ಪುಸ್ತಕ  ಅದು. ಅಂತೂ ಶಂಭು ಹೆಗಡೆಯವರ ಮೇಲಿನ ಅಭಿಮಾನದಿಂದ ಅದಕ್ಕಾಗಿ ನಾನು ವ್ಯಯಿಸಿದ ತಿಂಗಳುಗಟ್ಟಲೆ ಸಮಯ ಹಾಗೂ ಒಂದಿಷ್ಟು ಖರ್ಚುಗಳು ನನ್ನ ವಯಕ್ತಿಕ ಶೃದ್ಧಾಂಜಲಿಯ ಕರ್ತವ್ಯ ಎಂದು ತಿಳಿದುಕೊಂಡೆ. ಅದರ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಡಾನ್ ಬಾಸ್ಕೊ ಹಾಲ್ ನಲ್ಲಿ ಆಗಿತ್ತು. ಸಮಿತಿಯವರ ತೀರ್ಮಾನದಂತೆ ಬಿಡುಗಡೆ ಸಮಾರಂಭದಲ್ಲಿ  ಡಾ. ಜೋಶಿ ಅತಿಥಿತಿಯಾಗಿ ವೇದಿಕೆಯಲ್ಲಿ ಬರಲಿಲ್ಲ. ಇದರಿಂದ ಕುಪಿತಗೊಂಡವರೊ ಎಂಬಂತೆ ಡಾ. ಜೋಶಿ ಕಾರ್ಯಕ್ರಮ ಸರಿ ಇಲ್ಲ, ಪುಸ್ತಕವಂತೂ "ಇಂಪ್ರೊಪೇಶನಲ್"  ಇನ್ನೊಂದಿಷ್ಟು ಕತೆ ಸೇರಿಸಿ ನನಗೆ ತಲುಪಿಸಬಹದಾದ ಹಲವರಲ್ಲಿ ಹೇಳಿದರು. ಮೇಲೆ ಹೇಳಿದ ಅಧಿಕಪ್ರಸಂಗದ ನಿದರ್ಶನವನ್ನು ಈ ವಿಷಯಕ್ಕೆ ಅನ್ವಯಿಸಿಕೊಳ್ಳಿ...

ನಾನು ಇನ್ನಷ್ಟು ಶ್ರಮ ವಹಿಸಿ ಕಚೇರಿಗೆ ಇನ್ನೂ ಒಂದೆರಡು ರಜೆ ಮಾಡಿಯಾದರೂ ಪುಸ್ತಕದ ಬಗ್ಗೆ ಕಮೆಂಟ್ ಇಲ್ಲದ ರೀತಿಯಲ್ಲಿ ಹೊರತರಬೇಕಿತ್ತು ಎಂದು ಅನ್ನಿಸಿತ್ತು.

ಶಂಭು ಹೆಗಡೆ ಕೌಟುಂಬಿಕ ಭಿನ್ನಾಭಿಪ್ರಾಯದ ಕಾರಣ ಶಿವಾನಂದ ಹೆಗಡೆ, ಅವರ ಸಹೋದರಿ ಮತ್ತು ತಾಯಿಯ ಪ್ರತ್ಯೇಕ ಮನವಿ ಮೇರೆಗೆ ಕೆಲವು ಲೇಖನಗಳನ್ನು ತೆಗೆದು ಉಳಿದ ಪುಸ್ತಕಗಳಿಗೆ ಬುಕ್ ಬೈಂಡ್ ಮಾಡಿಸಿ ನನ್ನ ಜವಾಬ್ದಾರಿ ಮುಗಿಸುವಷ್ಟರಲ್ಲಿ ಬೆವರಿಳಿದುಹೋಗಿತ್ತು. ಶಂಭು ಕುಟುಂಬದವರೂ ಅದು ಯಾಕಾಗಿ ಅಷ್ಟೊಂದು ಕಚ್ಚಾಡುತ್ತಾರೊ ದೇವರೇ ಬಲ್ಲ. ಟ್ಯಾಲೆಂಟ್ ಮತ್ತು ಜಗಳ ಒಟ್ಟೊಟ್ಟಿಗೆ ಇರುವ ವಂಶವಾಹಿ ಅದಿರಬೇಕು !


ಈ ವಿಚಾರದಲ್ಲಿ ಸಿದ್ಧಾಪುರದ ಎಂ.ಎ. ಹೆಗಡೆಯವರೂ ಕೂಡ ನನಗೆ ಕೆಲವು ಸೂಕ್ಷ್ಮಗಳನ್ನು ತಿಳಿಸಿ ಸಂಪಾದಕನಾಗಿ ಜಾಣತನದಿಂದ ಕೆಲಸ ನಿರ್ವ ಹಿಸುವುದಕ್ಕೆ ಸಹಕರಿಸಿದರು. ಪುಸ್ತಕದ ಹೆಸರಲ್ಲಿ ಶಂಭು ಹೆಗಡೆಯವರೊಟ್ಟಿಗೆ ಸಹಕಲಾವಿದರಾಗಿ ಆಟಗಳಲ್ಲಿ ಮುದ ನೀಡಿದ್ದ -ನಾನು ಗೌರವಿಸುತ್ತಿದ್ದ ಕುಂಜಾಲು ರಾಮಕೃಷ್ಣ ನಾಯಕ್ ಮತ್ತಿತರನ್ನು ಭೇಟಿಯಾಗುವ ಅವಕಾಶ ದೊರೆತಿದ್ದು ನನ್ನ ಸುಕೃತ ಎನಿಸಿತು. ಹಾಗೆ ಕೆಲವರ ಅನುಭವವನ್ನು ಅವರಲ್ಲಿಗೇ ಹೋಗಿ ಕೇಳಿಸಿಕೊಂಡು ಬಂದು ಅದಕ್ಕೆ ಬರಹರೂಪ ಕೊಟ್ಟೆ. ನನ್ನ ಹತ್ತು ಹಲವು ಕಾರ್ಯವನ್ನು ಪಕ್ಕಕ್ಕಿಟ್ಟು ಇದನ್ನೆಲ್ಲ ಮಾಡಬೇಕಾಯಿತು ಎಂದು ಪ್ರತ್ಯೇಕ ಹೇಳುವುದಿಲ್ಲ.  ನನ್ನ ಶ್ರಮ ಗುರುತಿಸಿದ ಸಹೃದಯಿ ಕೆರೆಮನೆ ಶಿವಾನಂದ ಹೆಗಡೆ ಪುಸ್ತಕವನ್ನು ಬೇರೆ ಬೇರೆ ಕಡೆಯಲ್ಲೆಲ್ಲ ಅದ್ದೂರಿಯಾಗಿ ಬಿಡುಗಡೆ ಮಾಡೋಣ ಎಂದು ಹೇಳಿದರು. ನಾನು ಅದನ್ನು ಅಪೇಕ್ಷೆಪಟ್ಟಿರಲಿಲ್ಲ. ಅವರಿಗೆ ಕೊನೆಗೆ ಸಾಧ್ಯವೂ ಆಗಲಿಲ್ಲ. ಕೊನೆಗೆ ಪರಿಸ್ಥಿತಿ ಹೇಗೆ ಬಂದಿತೆಂದರೆ ಸಂಸ್ಮರಣಾ ಸಮಿತಿಯು ಹೊರ ತಂದ ಆ ಸಂಚಿಕೆ ಕೊನೆಗೆ ಸಂಪಾದಕನಾದ ನನಗೂ ಸಿಕ್ಕಿದ್ದು  ಒಂದು ಗೌರವ ಪ್ರತಿ ಹಾಗೂ ಜೇಬು ತುಂಬ ಟೀಕೆ....!  ಸಂಸ್ಮರಣಾ ಸಮಿತಿಯ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಇದೇ ವಿಷಯ ತಿಳಿದು ತುಂಬ ಬೇಸರಪಟ್ಟುಕೊಂಡರು. ಅದೆಲ್ಲ ಇನ್ನೂ ಒಂದು ರಾಮಾಯಣ.

****

ಇಷ್ಟು ಹೇಳಿ ಇದೀಗ ಹೇಳ ಹೊರಟಿರುವ ಮುಖ್ಯ ವಿಷಯಕ್ಕೆ ಬರುತ್ತೇನೆ. ನನ್ನ ಬಗ್ಗೆ "ಇಂಪ್ರೊಫೇಶನಲ್' ಎಂದು ಜರಿದ ಜೋಶಿಯವರು ಕೆರೆಮನೆಯವರ ಇನ್ನೊಂದು ಪುಸ್ತಕ ತರುತ್ತಾರೆ ಎಂಬುದು ವಷಱದ ಹಿಂದೆಯೇ ತಿಳಿಯಿತು. ಪ್ರೊಫೆಶನಲಿಸಂ ಗೊತ್ತಿರುವಂಥ  ಜೋಶಿ ಹೊರ ತರುವ ಪುಸ್ತಕದ ಬಗ್ಗೆ ಸಹಜವಾಗಿ ನಾನು ಕುತೂಹಲಿಯಾಗಿದ್ದೆ. ಸುದೀರ್ಘ ಸಮಯದ ನಂತರ ಗಜಪ್ರಸವದಂತೆ ಇದೀಗ 100 ಪುಟದ ಶ್ರೀಮಯ ಅಮೃತ ಸಿಂಚನ ಹೊರ ಬಿದ್ದಿದೆ.. ಇದು ಇಡಗುಂಜಿ ಮೇಳದ "ಅಮೃತಮಹೋತ್ಸವ"ದ ಕುರಿತಾದ ಪುಸ್ತಕವಾಗಿದ್ದರೂ  ಶಂಭುಹೆಗಡೆ ಸಂಸ್ಮರಣೆಯ "ಕಲ್ಪದ ಕಲಾವಿದ" ಸಂಚಿಕೆಯ ಕೆಟ್ಟ ನಕಲಿನಂತೆ ಕಾಣುತ್ತಿದೆ. ಅದರಿಂದಲೇ ಹೆಚ್ಚಿನ ಬರಹವನ್ನು ಎತ್ತಿ ಹಾಕಿಕೊಳ್ಳಲಾಗಿದೆ. ವಿಜಯ ನಳಿನಿ ರಮೇಶ್, ಹೊಸತೋಟ ಭಾಗವತರು, ಎಂ.ಎ.ಹೆಗಡೆ ಇವೆಲ್ಲ ಶಂಭು ಅವರನ್ನು ನೆನಪಿಸಿ ಕಲ್ಪದ ಕಲಾವಿದಕ್ಕೆ ವಿಶೇಷವಾಗಿ ಬರೆದಿರುವಂಥದ್ದಾಗಿದೆ . ಸಂಸ್ಮರಣ ಸಂಚಿಕೆಯಲ್ಲಿ ಇರುವ ಗುರುರಾಜ್ ಬಾಪಟ್ ಶಂಭು ಅವರನ್ನು ಕೊನೆಯ ದಿನಗಳಲ್ಲಿ ಮಾಡಿದ ಅಪರೂಪದ ಸಂದರ್ಶನವನ್ನೂ ಇದರಲ್ಲಿ ಬಟ್ಟಿ ಇಳಿಸಲಾಗಿದೆ.

ಹೀಗೆ ಅಮೃತ ಸಿಂಚನದಲ್ಲಿರುವ ಇರುವ ಒಟ್ಟು 16 ಬರಹಗಳಲ್ಲಿ  ಸಂಪಾದಕೀಯ ಹೊರತುಪಡಿಸಿ ಮೂರುಕಡೆ ಜೋಶಿಯವರ ಫೋಟೊ ಯುಕ್ತ ಆರ್ಟಿಕಲ್ ಗಳು ಢಾಳಾಗಿ ಕಾಣುತ್ತಿವೆ. ಮತ್ತೂ ಒಂದಿಬ್ಬರು ಎರಡೆರಡು ಕಡೆ ಬರೆದಿದ್ದಾರೆ. ಬಹುತೇಕ 80 ಪ್ರತಿಶತ ಬರಹ ಇಲ್ಲಿ ಯಥಾಪ್ರಕಾರ ಕಲ್ಪದ ಕಾಪಿಯಾಗಿದೆ.

ಉಳಿದಂತೆ ಶಿವಾನಂದರು ತಮ್ಮ ಕಾಪಿ ರೈಟ್ ನಲ್ಲಿ ಇದ್ದ ಶ್ರೀಮಯ ಕಲಾಕೇಂದ್ರದ ಅದೇ ಫೋಟಗಳನ್ನು ಕಲ್ಪದ ಕಲಾವಿದಕ್ಕೆ ಕೊಟ್ಟಂತೆ ಇದಕ್ಕೂ ಕೊಟ್ಟಿದ್ದು, ಅವೂ ಇದೆ.

ಡಾ. ರಾಮಕೃಷ್ಣ ಜೋಶಿ ಅವರ ಇಡಗುಂಜಿ ಮೇಳ ಬರಹವೇ ಸಂಚಿಕೆಯಲ್ಲಿ ಎರಡು ಕಡೆ ಮುದ್ರಣವಾಗಿದ್ದೂ ಸಂಪಾದಕರ ಗಮನಕ್ಕೆ ಬರಲಿಲ್ಲ !

******

ನನಗೆ ಇದಾವುದರಿಂದಲೂ ಬೇಸರ ಆಗಲಿಲ್ಲ. ಆದರೆ  ಪುಸ್ತಕದ ಎಲ್ಲೂ ಕೂಡ ಕಲ್ಪದ ಕಲಾವಿದ ಸಂಚಿಕೆಯಿಂದ ಬರಹಗಳನ್ನು ಬಳಸಿಕೊಂಡಿದೆ ಎಂಬ ಬಗ್ಗೆ ಸಣ್ಣ ಉಲ್ಲೇಖವನ್ನೂ ಮಾಡಲಾಗಿಲ್ಲ.


 ********

ವಿಶೇಷ ಎಂದರೆ...

ಡಾ. ಜೋಶಿ ಸಂಪಾದಕತ್ವದ ಪುಸ್ತಕದ ಮೂರನೆ ಪುಟದಲ್ಲಿ ಕಾಪಿರೈಟ್ ಬಗ್ಗೆ ಬರೆದ ಒಕ್ಕಣೆ ಇಂತಿದೆ ; ಈ ಸಂಚಿಕೆಯಲ್ಲಿ ಬಳಸಲಾದ ಭಾವಚಿತ್ರ, ಲೇಖನ ಇತ್ಯಾದಿಯನ್ನು ಯಾವುದೇ ಉದ್ದೇಶಕ್ಕೆ ಬಳಸುವುದಿದ್ದಲ್ಲಿ ಮಂಡಳಿಯ ಪೂರ್ವಾನುಮತಿಯನ್ನು ಪಡೆಯುವುದ ಆವಶ್ಯ.!

*****

ನೀವೇ ಆಲೋಚನೆ ಮಾಡಿ... ಹೇಗಿದೆ ಜಗತ್ತು !!

ದೆವ್ವಗಳೂ ಭಗವದ್ಗೀತೆಯ ಕೋಟ್ ಮಾಡುತ್ತವೆ ಎಂಬ ವಾಕ್ಯ ನೆನಪಿಗೆ ಬರುವುದಿಲ್ಲವೇ ?


-ಸದಾನಂದ ಹೆಗಡೆ ಹರಗಿ



Related Posts
Previous
« Prev Post

9 ಕಾಮೆಂಟ್‌(ಗಳು)

ಫೆಬ್ರವರಿ 27, 2012 ರಂದು 11:33 ಅಪರಾಹ್ನ ಸಮಯಕ್ಕೆ

ಅಮೃತ ಸಿಂಚನ..
ಕೆಸರು ಸಿಂಚನ...
ಇತ್ಯಾದಿ.


ಕೆರೆಮನೆಯವರ ಅಮೃತ ಸಿಂಚನವೊಂದು ಸಾಂಕೇತಿಕವಾಗಿ ಇತ್ತೀಚೆಗೆ ಯಕ್ಷಗಾನ ಕಲಾವಿದರ ನಡುವಿನ ಸಂಬಂಧ ಹೊಸ ಹೊಸ ಆಯಾಮದಲ್ಲಿ ಮುಂದುವರಿಯುತ್ತಿರುವ ಬಗ್ಗೆ ನನಗೆ ಥ್ರಿಲ್ ಇದೆ.
ನನ್ನ ಮಟ್ಟಿಗೆ ಕಲ್ಪದ ಕಲಾವಿದ ಪುಸ್ತಕ ಸಂಪಾದನೆ ಮಧ್ಯಂತರದ ಒಂದು ಸಣ್ಣ ವಿಷಯ. ಅದರ ವಿಷಯ ಆಗಲೇ ಬರೆದಿದ್ದೇನೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಆಗಾಗ ನಾನು ಬರೆಯುವ ಯಕ್ಷಗಾನದ ತರಹೇವಾರಿ ಲೇಖನ..ನಂತರ ಅನಿಕೇತನ-ಹರಗಿ ಬ್ಲಾಗ್ ನಲ್ಲಿ ಅವುಗಳನ್ನು ಪ್ರಕಟಿಸುವುದು.. ಕೆಲವು ಖಾಸಗೀ ನೋಟ್ ಗಳನ್ನೂ ಬರೆದು ಬ್ಲಾಗಿನಲ್ಲಿ ಹಾಕುತ್ತಿರುವುದು.. ಇದೆಲ್ಲ ಯಕ್ಷಗಾನ ಪ್ರಪಂಚಕ್ಕೆ ಸಂಬಂಧಿದ ಚಟುವಟಿಕೆಯ ರಾಶಿಗಳ ನಡುವೆ ಸಣ್ಣ ಪ್ರಮಾಣದ ಬರಹ ರೂಪಗಳು ಮಾತ್ರ.
ನಾವು ಬರೆಯುವುದು ಯಕ್ಷಗಾನದ ಸರಳ ಸಾರ್ವಜನಿಕ ರೂಪವಾಗಿದ್ದರೆ ಬ್ಲಾಗ್ ಸ್ವಲ್ಪ ಖಾಸಗಿ. ಬ್ಲಾಗ್ ನಲ್ಲೂ ಬರೆಯುವುದು ಬೇಡ ಎಂಬ ಕೆಲವು ಖಾಸಗಿ ಪತ್ರಗಳು ಇವೆ..
ಕೆಲವು ಕಟು ವಾಸ್ತವಗಳು ಸಹಜವಾಗಿ ವಯಕ್ತಿಕ ನೆಲೆಯಲ್ಲಿ ಮೇಲ್ ಪತ್ರದ ಮೂಲಕ ಸಂವಹನ ಆಗುತ್ತಿವೆ.
ಹಿರಿಯ ಅರ್ಥಧಾರಿ ಪ್ರಭಾಕರ ಜೋಶಿ, ಕೆರೆಮನೆ ಅಮೃತ ಸಿಂಚನ, ಕಾಪಿ ರೈಟ್ ಉಲ್ಲಂಘನೆ.. ನಂತರ ಪ್ರಾಂಜಲ ಮನಸ್ಸಿನಿಂದ ತಿದ್ದುಪಡಿ ಅಂಟಿಸಿ ಹೆಸರು ಬಿಟ್ಟ ಬಗ್ಗೆ ಅವರು ಕ್ಷಮೆ ಕೇಳಿದ್ದು. ತಿದ್ದುಪಡಿಯನ್ನು ಬ್ಲಾಗ್ ನಲ್ಲಿ ಹಾಕಿದ್ದು..ಎಲ್ಲ ಮುಗಿಯಿತು ಎಂದುಕೊಂಡಿದ್ದೆ. ಆದರೆ ಹಾಗೆ ಸುಲಭವಾಗಿ ವಾದದಲ್ಲಿ ಸೋಲದ ಅರ್ಥದಾರಿ ಪ್ರಭಾಕರ ಜೋಶಿ ನನಗೆ 'ಮೇಲ್ ಬಾಣ' ಪ್ರಯೋಗಿಸುತ್ತಿದ್ದಾರೆ.
ಬ್ಲಾಗ್ ನಲ್ಲಿ ಇನ್ನಷ್ಟು ಚರ್ಚೆಯಾಗಿಲಿ ಎಂಬುದು ಅವರ ಮೇಲ್ ಪತ್ರದ ಒಟ್ಟೂ ಸಾರಾಂಶ ಎಂದು ಅರ್ಥಮಾಡಿಕೊಂಡಿರುತ್ತೇನೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಕಾಪಿ ರೈಟ್ ಉಲ್ಲಂಘನೆಯಾಗಿ ನನಗೆ ಅನ್ಯಾಯ ಆಗಿದೆ ಎಂದು ಬರೆಯುವಾಗ ಪ್ರಭಾಕರ ಜೋಶಿಯವರ ಬಗ್ಗೆ ನನ್ನ ವಯಕ್ತಿಕ ಅನ್ನಿಸಿಕೆ ಬರೆದಿದ್ದೆ. ಅದು ಅವಾಸ್ತವ ಎಂದು ಈಗಲೂ ನನಗೆ ಅನ್ನಿಸುವುದಿಲ್ಲ. ಹೊಸನಗರ ಮೇಳ ಆರಂಭದ ಸಂದರ್ಭ ನನ್ನಲ್ಲಿ ಅವರು ವ್ಯಕ್ತಪಡಿಸಿದ ಒಂದಷ್ಟು ವಿಷಯಗಳು ಇನ್ನಷ್ಟು ಸ್ವಾರಸ್ಯವಾಗಿದ್ದು, ಆ ಸಂದರ್ಭ ಬರೆದ ಪತ್ರ ಎಲ್ಲ ನನ್ನ ಈಗ ನೆನಪಿಗೆ ಬರುತ್ತದೆ. ಎಲ್ಲವನ್ನೂ ಬರೆಯದೆ ಕೆಲವೇ ಟೀಕೆಯೊಂದಿಗೆ ನಾನು ಪ್ರಭಾಕರ ಜೋಶಿಯವರಲ್ಲಿ ಮೆಚ್ಚಿದ ಪ್ರತಿಭೆಯನ್ನೂ ಬ್ಲಾಗ್ನಲ್ಲಿ ಬರೆದಿದ್ದೆ. ಆದರೆ ನಾನು ಬರೆದ ಟೀಕೆಯನ್ನು ಮಾತ್ರ ಅವರು ಹೊತ್ತುಕೊಂಡಿದ್ದಾರೆ ಎಂಬುದು 'ಮೇಲ್ ಬಾಣ' ದ ಶ್ರುತಿಯಲ್ಲೇ ನನಗೆ ತಿಳಿಯುತ್ತಿದೆ. ಇನ್ನೊಮ್ಮೆ ಹೇಳುತ್ತೇನೆ..
ಅದೇನೆ ಇರಲಿ ಇಲ್ಲೊಂದು ನಿದರ್ಶನ ನನಗೆ ನೆನಪಾಗುತ್ತದೆ.
ಹೊಸದಾಗಿ ಕ್ಲಾಸು ತೆಗೆದುಕೊಂಡ ನಮ್ಮ ಮನಶ್ಯಾಸ್ತ್ರದ ಗುರುಗಳೊಬ್ಬರು ಬೋರ್ಡನಲ್ಲಿ ಒಂದು ಚುಕ್ಕೆ ಇಟ್ಟರು.
.. ನಿಮಗೆ ಏನು ಕಾಣುತ್ತಿದೆ ಎಂದು ನಮ್ಮನ್ನು ಕೇಳಿದರು.
ಸಹಜವಾಗಿ ಕ್ಲಾಸಿನಲ್ಲಿರುವ 30 ಮಕ್ಕಳಲ್ಲಿ 29 ಜನ ನಮಗೆ ಚುಕ್ಕೆ ಕಾಣುತ್ತಿದೆ ಸಾರ್ ಎಂದರೆ ಕೊನೆಯದಾಗಿ ಒಬ್ಬ ಹುಡುಗ ನನಗೆ ದೊಡ್ಡ ಬೋರ್ಡ್ ಹಾಗೂ ಚಿಕ್ಕದೊಂದು ಚುಕ್ಕೆ ಕಾಣುತ್ತದೆ ಸಾರ್ ಎಂದ.
ಇದೇ ನಿದರ್ಶನ ತೆಗೆದುಕೊಂಡು ನಮ್ಮ ನೋಡುವ ರೀತಿಯ ಬಗ್ಗೆ ಅವರು ಪಾಠ ಮುಂದುವರಿಸಿದರು. ಮಾನವ ಮನಸ್ಸಿನ ಸಮಸ್ಯೆ ಇರುವುದೇ ಇಲ್ಲಿ. ದೊಡ್ಡ ಸರೋವರ ನಮಗೆ ಕಾಣುವುದಿಲ್ಲ. ಆದರೆ ಅದರಲ್ಲಿ ಬಿದ್ದ ಸಣ್ಣದೊಂದು ಕಲ್ಲು ಉಂಟುಮಾಡುವ ಅಲೆಗಳು ಕಾಣುತ್ತವೆ. ನೂರು ಒಳ್ಳೆಯ ಮಾತನ್ನು ನಾವು ಗಮನಿಸುವುದಿಲ್ಲ. ಒಂದು ಟೀಕೆಯನ್ನು ತಲೆಯ ಮೇಲೆ ಹೊತ್ತುಕೊಳ್ಳುತ್ತೇವೆ. ಇಡೀ ಬೋರ್ಡ ನಮಗೆ ಕಾಣುವುದಿಲ್ಲ. ಅದರಲ್ಲಿನ ಒಂದು ಚುಕ್ಕೆ ಕಾಣುತ್ತದೆ.. ಹೀಗೆ ಸಾವಿರ ಉದಾಹರಣೆಯನ್ನು ನಾವು ಪೋಣಿಸಬಹದು.
ಜೋಶಿಗಳ ವಿಚಾರದಲ್ಲೂ ಹಾಗೆಯೇ ಆಯಿತು. ನಮ್ಮ ದೀರ್ಘ ಸಂಬಂಧದ ಬಾನಿ ನನಗೆ ಕಾಣಲೇ ಇಲ್ಲ. ನನ್ನನ್ನು ಅವರು ಪುಸ್ತಕ ಸಂಪಾದಿಸುವಾಗ ನಿರ್ಲಕ್ಷಿಸಿದರಲ್ಲ.. ಎಂಬುದೊದೇ ದೊಡ್ಡದಾಗಿ ಕಂಡಿತು. ಇದೇ ರೀತಿ ಜೋಶಿಗಳು ನನ್ನ ಒಂದು ಸಣ್ಣ ಟೀಕೆಯನ್ನು ಸ್ವೀಕರಿಸಿದ ರೀತಿಗೂ ಅನ್ವಯಿಸಬಹದು. ಅದೇನೇ ಇರಲಿ..
ಇಲ್ಲಿ ಸಮಸ್ಯೆ ಇರುವುದು ಬೇರೆಯದೇ ಎಂದು ನನಗೆ ಅನ್ನಿಸುತ್ತದೆ..
ಅದನ್ನು ಈ ಕೆಳಗಿನ ಕೆಲವು ಪ್ರಶ್ನೆಗಳ ಮೂಲಕ ವರ್ಗೀಕರಿಸಿ ವಿವರಿಸಬಹುದೇನೊ.
1 - ಪತ್ರಕರ್ತನೊಬ್ಬ ಯಕ್ಷಗಾನದಿಂದ ಏನನ್ನು ಬಯಸುತ್ತಾನೆ ?
2-ಯಕ್ಷಗಾನ ಮತ್ತು ಪತ್ರಕರ್ತರ ನಡುವಿನ ಅಂತರ್ ಸಂಬಂಧ ಹೇಗಿರುತ್ತದೆ.
3- ಪತ್ರಕರ್ತನನ್ನು ಜಗತ್ತು(ಯಕ್ಷಗಾನ)ನಿರ್ಲಕ್ಷಿಸಿದೆ.. ಎಂದು ಯಾಕಾಗಿ ಅನ್ನಿಸುತ್ತದೆ..
4- ಕೆರೆಮನೆ, ಯಕ್ಷಗಾನದ ಸಂಘಟನೆಗಳು, ಅಕಾಡೆಮಿಯ ಪಾತ್ರ ಏನು
5-ನನ್ನ ಹಾಗೂ ಪ್ರಭಾಕರ ಜೋಶಿ ನಡುವಿನ ಈ ತನಕದ ಒಡನಾಟದಲ್ಲಿ ಅವರು ನನ್ನ ಮೇಲೆ ಯಾವ್ಯಾವ ರೀತಿಯಲ್ಲಿ ಪ್ರಭಾವ ಬೀರಿದರು ? ಅವರು ಮಾಹಿತಿ ನೀಡಿ ನನ್ನಲ್ಲಿ ಸುದ್ದಿ ಬರೆಸಿದ್ದಷ್ಟೇ ಅಲ್ಲ.. ಉಷಾಕಿರಣದಲ್ಲಿ ಅವರಿಂದ ನಾನು ಅಂಕಣವನ್ನು ಬರೆಸಿದ್ದೂ ಸೇರಿದಂತೆ...ನನ್ನ ಖಾಸಗೀ ಕಡತದಲ್ಲಿ ಇರುವ ಇನ್ನಷ್ಟು ಸರಕನ್ನು ನಾನು ಬಹಿರಂಗ ಮಾಡಬೇಕೆ ?
6-ಇದೆಲ್ಲ ಸಂಗತಿ ಬೀದಿಯಿಂದ ಬ್ಲಾಗಿಗೆ .. ಜಗಳವಾಗಿ ಬರುವುದಕ್ಕೆ ಕೇವಲ ಒಂದು ಕಾಪಿ ರೈಟ್ ಉಲ್ಲಂಘನೆ ಮಾತ್ರ ಕಾರಣವೇ ..?

ಈ ಎಲ್ಲ ಪ್ರಶ್ನೆಗಳಿಗೆ ನಾನೇ ಉತ್ತರ ಕೊಡಬಹದು.. ಆದರೆ ಅದಕ್ಕೆ ಬೇರೆಯವರು ಏನಾದರೂ ಹೇಳುವುದಕ್ಕಿದ್ದರೆ ಹೇಳಬಹದುದು.. ನಾನು ಮತ್ತು ಪ್ರಭಾಕರ ಜೋಶಿ ಇಲ್ಲಿ ಸಾಂಕೇತಿಕ. ವಿಷಯವು ಸಾಮಾಜಿಕವಾಗಿದೆ. ಇದಕ್ಕೆ ಪ್ರಭಾಕರ ಜೋಶಿಗಳು ಸೇರಿದಂತೆ ಯಾರಾದರೂ.. ಉತ್ತರ ಕೊಟ್ಟರೆ ಖುಷಿ. ಇಂಗ್ಲೀಷಿನಲ್ಲಾದರೂ ಸರಿ. ಮೇಲ್ ಬಾಣದ ಬದಲು.. ಬ್ಲಾಗಿನಲ್ಲೇ ಉತ್ತರಿಸಬೇಕು(ಕಮೆಂಟ್ ಮಾಡಬೇಕು) ಎಂಬುದು ನನ್ನ ಬಯಕೆ. .
***
ಉತ್ತರ ಕೊಡುವುದು ಅಪ್ರಸ್ತುತ ಎನ್ನಿಸಿದರೆ ಚರ್ಚೆ ಇಲ್ಲಿಗೆ ಮುಗಿಯುತ್ತದೆ.
***

-ಸದಾನಂದ ಹೆಗಡೆ ಹರಗಿ
ಮಂಗಳೂರು : 28-2-2012

Reply
avatar
ಫೆಬ್ರವರಿ 28, 2012 ರಂದು 10:25 ಅಪರಾಹ್ನ ಸಮಯಕ್ಕೆ

Nanna apekshe iddaddu ishte--
----Kalpada kalavidadinda-Srimaya amritha sinchanakke lekhana balasuvaaga aada alakshyada ,avasarada tappininda untada sanniveshakke naavu maadida yathaasadhya tiddupadi kurithu naanu ondu nera spandana nireeksisidde,ashte. idakke patrakartha -kalavida sambandhada ayaamavilla.Eradu sankalanagala sampadakara vishaya idu.
neevu. nanna bagge bareda olleya mathugalige ,prasamsege naanu(purna arhanalla),abhari.nanu nimminda upakrithane horathu neevalla.Teekegala bagge besaravilla ,adara pramana matthu vivarada bagge irabahudu..
Kalpada kalavida ondu olleya grantha .sinchana ondu souvenir sanchike maathra.
Yakshaganada bagge neevu bareda halavu utthama lekhanagala bagge nanu vyaktishaha nimmali helidduntu.adenuu upakara alla . nimage sallabekada mecchuge.
Vayaktika mattada vichara vinimayada balake hege, eshtu eembudu avaravara vivechanage bitta vishaya . aa bagge naanu enu helidaruu adu tappaguttade.
Mail bana , vaadadalli soluva gelluva vichara alla.Arthagarikeyalle vadada geluvige nanu vishesha prashatya koduvudilla.
nanna nilume spastagolisiddenendu bhavisutthene.
Vanadanegalondige-- M prabhakara joshy.

Reply
avatar
ಫೆಬ್ರವರಿ 28, 2012 ರಂದು 10:27 ಅಪರಾಹ್ನ ಸಮಯಕ್ಕೆ

it is shame on the part of Sreemaya & Mr. Joshi that such mistakes can be easily forgotten and they can commit the same in future also. It is the responsibility of the editors & publishers wherein both have failed in discharging their duty sincerely.

Regards
Anath Hegde

Reply
avatar
ಫೆಬ್ರವರಿ 28, 2012 ರಂದು 10:43 ಅಪರಾಹ್ನ ಸಮಯಕ್ಕೆ

ಬ್ಲಾಗಿಗಳ ಗಮನಕ್ಕೆ..
ಮಾನ್ಯರೆ..
ಕಮೆಂಟ್ ಮಾಡುವವರು
ಪ್ರತ್ಯುತ್ತರ ಕ್ಲಿಕ್ ಮಾಡಿರಿ..
ಕಂಪೋಸ್ ಮಾಡಿದ ನಂತರ
ಇದರಂತೆ ಕಮೆಂಟ್ ಮಾಡಿ ಎಂಬು ದಾಗಿ ಕಾಣುವಲ್ಲಿ

ಗೂಗಲ್ ಕ್ಲಿಕ್ ಮಾಡಬೇಕು.
ಒಪ್ಶನಲ್ಲಿ ಕೋರಲಾಗುವ ಸೂಕ್ತ ಮಾಹಿತಿಯನ್ನು ಕೊಟ್ಟಲ್ಲಿ
ಪ್ರಕಟವಾಗುತ್ತದೆ.
ಜಿ ಮೇಲ್ ಹೊಂದಿಲ್ಲದಿದ್ದರೆ..
hargi33@gmail.com ಗೆ ಪೊಸ್ಟ್ ಮಾಡಿರಿ.
ಪ್ರತಿಕ್ರಿಯೆಗೆ ಕೃತಜ್ಞತೆಗಳು

- ಹರಗಿ
29-2-2012

Reply
avatar
ಫೆಬ್ರವರಿ 29, 2012 ರಂದು 11:01 ಅಪರಾಹ್ನ ಸಮಯಕ್ಕೆ

Namasthe.
Thank you for publishing my resposnse.
In response to one of the comments--I would only say, the commission and ommission need not be forgotten . That is why we have owned it and amended , to the extent possible.
Once again I would like to say-this issue dsnt have the -journalist Vs artist dimension. It is only an error committed in not acknowledging the articles borrowed by the editor, and subsequent repurcussions.
Thaanks to the responding reader,for advising not to repeat such thing ,which I will try to follow.
I once again expres my gratitude to Sri Hargi for the articles, for the high appreciation about me(a bit undeserving) and also for the kind forgiveness he has shown.
At the same time my humble feeling that some comments in the article of 24 couldhave been avoided.

M Prabhakara joshy.

Reply
avatar
ಮಾರ್ಚ್ 1, 2012 ರಂದು 12:15 ಪೂರ್ವಾಹ್ನ ಸಮಯಕ್ಕೆ

ಶ್ರೀ ಪ್ರಭಾಕರ ಜೋಶಿಯವರ ಬರಹಗಳೆಲ್ಲ ನೇರವಾಗಿದ್ದು ಖುಷಿ ಆಗಿದೆ.
ಆದರೆ ಮತ್ತೆ ಮತ್ತೆ ಇದೊಂದು ಖಾಸಗಿ ವಿಷಯ ಎಂದು ಅವರು ಚರ್ಚೆಯನ್ನು ಮೊಟಕುಗೊಳಿಸುವ ಧಾವಂತದಲ್ಲಿ ಇರುವಂತೆ ಕಾಣುತ್ತದೆಯಲ್ಲ. ಓರ್ವ ಕಲಾವಿದ ಸಮಾಜದ ಆಸ್ತಿ. ಹಾಗೇ ಸಮಾಜ ಇಲ್ಲದಿದ್ದರೆ ಅದರ ಕನ್ನಡಿಯಂತಿರಬೇಕಾದ ಪತ್ರಕರ್ತರೂ ಇರಲು ಸಾಧ್ಯವಿಲ್ಲ. ಇದನ್ನು ಬಹುಶಃ ಜೋಶಿಯವರು ಅಲ್ಲಗಳೆಯುವುದಿಲ್ಲ.
ಹೀಗಿರುವಾಗ ಅವರ ಬರಹದಲ್ಲಿ ಈ ಕೆಳಗಿನ ವಾಕ್ಯಗಳ ಉದ್ದೇಶ ಏನು ಎಂದು ಅರ್ಥವಾಗಿಲ್ಲ.
# dakke patrakartha -kalavida sambandhada ayaamavilla.

# Once again I would like to say-this issue dsnt have the -journalist Vs artist dimension. It is only an error committed in not acknowledging the articles borrowed by the editor, and subsequent repurcussion.

***
ಅಷ್ಟಕ್ಕೂ ಕಾಪಿ ರೈಟ್ ಉಲ್ಲಂಘನೆ ಒಂದು ಸಾಮಾಜಿಕ ಪಿಡುಗಾಗಿ ಬೆಳೆಯುತ್ತಿದೆ. ಈ ಬಗ್ಗೆ ಕೆರೆಮನೆ ಶಿವಾನಂದ ಹೆಗಡೆಯವರು ನನ್ನಲ್ಲಿ ಕೆಲವು ಬಾರಿ ಪುಕಾರು ಹೇಳಿದ್ದ ನೆನಪು. ಹಾಗಾಗಿ ಇದು ಕೇವಲ ಖಾಸಗಿ ವಿಷಯ ಅಲ್ಲ.
ಪತ್ರಕರ್ತ ಹಾಗೂ ಕಲಾವಿದರ ನಡುವಿನ ಅಂತರ್ ಸಂಬಂಧದವನ್ನು ಕಂಡುಕೊಳ್ಳಲು ಇದೊಂದು ವಿವಾದ ನಾಂದಿಯಾದರೆ, ಸಮಸ್ಯೆಯನ್ನು ಹೊಸ ಸಂಶೋಧೆನಯ ಟೂಲ್ ಆಗಿ ಬಳಸಿದ ಸಾರ್ಥಕತೆ ಇರುತ್ತದೆ ಎಂದು ನನಗೆ ಬಲವಾಗಿ ಅನ್ನಿಸುತ್ತಿದೆ.
ಹಾಗಾಗಿ ಪತ್ರಕರ್ತ ಕಲಾವಿದರ ನಡುವಿನ ಸಂಬಂಧದ ಬಗ್ಗೆಯೂ ಚಚೆಯಾದರೆ ತಪ್ಪೇನು ? ಶಿವಾನಂದ ಹೆಗಡೆಯವರು ಯಾಕೆ ಏನೂ ಮಾತಾಡುತ್ತಿಲ್ಲ ?

-ಹರಗಿ
1-3-2012

Reply
avatar
ಮಾರ್ಚ್ 5, 2012 ರಂದು 04:12 ಪೂರ್ವಾಹ್ನ ಸಮಯಕ್ಕೆ

namaste
Nimma blognalli prakatita abhipraya odide.. Intha anubahava istu sanna vayassinalle nangoo agide..! hagagi samana manaskaru navu. Nimma sharama, rangasakthi mattu kalaji abhinandaneeya. palige bandaddannu nistheyinda madikoondu hoguttiruva sir
Vishavasi
Yogish g

Reply
avatar
ಮಾರ್ಚ್ 8, 2012 ರಂದು 01:17 ಪೂರ್ವಾಹ್ನ ಸಮಯಕ್ಕೆ

ಮಾನ್ಯರೆ..
ಇಲ್ಲಿ ನಡೆಯುತ್ತಿರುವ ಚರ್ಚೆ ನನಗೆ ತಡವಾಗಿ ಗಮನಕ್ಕೆ ಬಂದಿತು.
ನನ್ನ ಪ್ರೀತಿ ಗುರುಗಳಾದ ದಿ. ಕೆರೆಮನೆ ಶಂಭು ಹೆಗಡೆಯವರನ್ನು ಸಂಸ್ಮರಿಸುವ ನಿಟ್ಟಿನಲ್ಲಿ ತರಲಾದ ಕಲ್ಪದಕಲಾವಿದ ಪುಸ್ತಕವು ಸುಂದರವಾಗಿದೆ. ಅಲ್ಲದೆ ಸಂಗ್ರಹ ಯೋಗ್ಯವಾಗಿದೆ. ಇದನ್ನು ನನ್ನ ಬಾಲ್ಯ ಸ್ನೇಹಿತ ಹರಗಿಯ ಸದಾನಂದ ಸಂಪಾದಿಸಿದ್ದು ಎಂಬುದು ಹೆಮ್ಮೆಯ ಸಂಗತಿ. ಸ್ನೇಹಿತ ಸದಾನಂದನನ್ನು ಮೊದಲು ಈ ಕಾರ್ಯಕ್ಕಾಗಿ ಅಭಿನಂದಿಸುತ್ತೇನೆ.
ಈ ನಡುವೆ ಈ ಪುಸ್ತವನ್ನು ನಕಲು ಮಾಡಿದ ವಿಚಾರದ ಬಗ್ಗೆಯೂ ಒಂದೆರಡು ಮಾತನ್ನು ಹೇಳಬೇಕು. ಹೀಗೆ ನಕಲು ಮಾಡಿರುವುದು ಸರಿಯಲ್ಲ. ಅಷ್ಟಾದರೂ ಸ್ಪಷ್ಟೀಕರಣ ಹಾಕಿರುವುದು ಒಳ್ಳೆಯದೇ. ಹಾಗೆಂದು ಸ್ಪಷ್ಟೀಕರಣದಲ್ಲಿ ಹಾಕಿದಂತೆ ಮೂಲ ಕೃತಿಯ ಉಲ್ಲೇಖ ಬಿಟ್ಟು ಹೋಗಿರುವುದಕ್ಕೆ ವಿಷಾದ ವ್ಯಕ್ತಪಡಿಸಲಾಗಿದೆ. ಇದು ನಿಜವಾಗಿ ಬಿಟ್ಟು ಹೋಗಿದದ್ದೋ.. ಅಥವಾ ಬಿಟ್ಟಿದ್ದೋ..? ಎಂಬುದಾಗಿಯೂ ಒಮ್ಮೆ ನನ್ನ ಮನಸ್ಸಿಗೆ ಪ್ರಶ್ನೆ ಎದ್ದಿತ್ತು.
ಅದಿರಲಿ..
ಇದೇ ಸಂಸರ್ಭ ಶಂಭು ಅವರ ಬಗ್ಗೆ ನಾನು ಮತ್ತು ಸಮಾನ ಮನಸ್ಕರು ಕೈಗೊಂಡ ವಿಚಾರದ ಬಗ್ಗೆಯೂ ಒಂದೆರಡು ಮಾತು ಇಲ್ಲಿ ಹೇಳುತ್ತೇನೆ.
ಶಂಭು ಅವರ ಪ್ರೀತಿ ಶಿಷ್ಯನಾಗಿ.. ಅವರಿಗೆ ಕೃತಜ್ಞತೆ ಹೇಳುವ ಸಣ್ಣ ಪ್ರಯತ್ನವನ್ನು ನಾನು ಮತ್ತು ಸಮಾನ ಮನಸ್ಕರು ಮಾಡುತ್ತಿದ್ದೇವೆ. ಅದಕ್ಕಾಗಿ ಶಂಭು ಶಿಷ್ಯ ಪ್ರತಿಷ್ಠಾನ ಸ್ಥಾಪಿಸಿ ಪ್ರದಶಱನ ನೀಡುತ್ತಿದ್ದೇವೆ. ಇದೇ 28 ರಂದು ಬೆಂಗಳೂರಿನಲ್ಲೂ ನಮ್ಮ ಪ್ರದಶಱನ ಇದ್ದು, ನಮ್ಮದೇನಿತ್ತೂ ಶಂಭು ಅವರಿಗಿದ್ದ ಸದಭಿರುಚಿಯ ಯಕ್ಷಗಾನವನ್ನು ಜನರಿಗೆ ತಲುಪಿಸುವ ಪ್ರಯತ್ನ. ಇದಕ್ಕೆ ಶಂಭು ಪ್ರೀತಿಯ ಬಳಗ ನಮ್ಮನ್ನು ಬೆನ್ನು ತಟ್ಟುತ್ತದೆ ಎಂದು ನಂಬುತ್ತೇನೆ..
ಇತಿ..

ವಿನಾಯಕ ಹೆಗಡೆ ಕಲಗದ್ದೆ
ಸಂಚಾಲಕ.ಶಂಭು ಶಿಷ್ಯ ಪ್ರತಿಷ್ಠಾನ.ಕಲಗದ್ದೆ. ಸಿದ್ದಾಪುರ.ಉ.ಕ.
ಫೋನ್ :9448756262
ದಿನಾಂಕ : 7-3-2012

Reply
avatar
ಮಾರ್ಚ್ 8, 2012 ರಂದು 11:41 ಅಪರಾಹ್ನ ಸಮಯಕ್ಕೆ

Namsthe.
I am definitely not in a hurry to close the debate as private. Who am I to do that? it has bcome public and it is public.I am neither running away from any discussion.
Unfortunately, my point that -the debate dsnt have an artist VS journalist debate, has been misread, or rather I,may be, have been unble to say it properly.The controversy or debate or whatever we call it is--BETWWEN TWO EDITORS OF THE TWO PUBLICATIONS CONCERNED.one commemoration volume and one souvenir.
I am definitely for all kinds of discussions including one of journalist--artist relation, but this is not that , i meant.
One reader has seen too ,much in the ommission aspect and subsequent amendment.What shall I say about it? I wd only say I refuse to be provoked.

m p joshy

Mangalore
09-03-2012

Reply
avatar