ಆರ್ಟ್‌ ಥೀಫ್ ಧಾರಾವಾವಾಹಿ-9

ಆರ್ಟ್‌ ಥೀಫ್ ಧಾರಾವಾವಾಹಿ-9
ವಾರಾಂತ್ಯದ ಕಳವಿನ ಬಳಿಕ, ಸೋಮವಾರ ಬ್ರಿಟ್‌ವೈಸರ್ ಚರ್ಯೆ ಬದಲಾಗುತ್ತಿತ್ತುಘಿ. ಪ್ರವಾಸ ಮುಗಿಸಿ ಬಂದವರಂತೆ ಅನ್ನೆ- ಬೆಳಗ್ಗೆ ಎದ್ದು ಕಚೇರಿಗೆ ಹೋಗಿಬಿಡುತ್ತಿದ್ದಳು. ಈತ ಗ್ರಂಥಾಲಯದತ್ತ ಹೆಜ್ಜೆ ಹಾಕುತ್ತಿದ್ದಘಿ. ಮುಲ್‌ಹೌಸ್‌ನ ಸ್ಥಳೀಯ ಗ್ರಂತಾಲಯ, ಸ್ಟ್ರಾಸ್‌ಬರ್ಗ್ ಮ್ಯೂಸಿಯಂ ಗ್ರಂಥಾಲಯ, ಸ್ವಜರ್‌ಲ್ಯಾಂಡ್ ಬಾಸೆಲ್ ವಿಶ್ವವಿದ್ಯಾಲಯದ ಕಲಾ ಇತಿಹಾಸ ಸಂಗ್ರಹಾಲಯಕ್ಕೂ ಹೋಗಿಬರುತ್ತಿದ್ದಘಿ. ವಾರವಿಡೀ ಅನುಕೂಲವಾದಾಗ ಮೇಲಿನ ಎಲ್ಲ ಕೇಂದ್ರಕ್ಕೂ ಹೋಗಿಬರುತ್ತಿದ್ದಘಿ. ಅಕಾಡೆಮಿಕ್ ಗ್ರಂಥಾಲಯದಲ್ಲಿ ಕಳ್ಳನಿಗೇನು ಕೆಲಸ ಎಂದು ನೀವು ಕೇಳಬಹುದು. ಅಲ್ಲಘಿ, ಕಲಾವಿದರು, ಅವರ ಕಾಲಾವಧಿ, ಚಿತ್ರಣದ ಸ್ಟೈಲು, ಇಸಂ ಹಾಗೂ ಭೌಗೋಳಿಕವಾಗಿ ಅವರು ಯಾವ ಪ್ರದೇಶಕ್ಕೆ ಸಲ್ಲುತ್ತಾರೆ ಎಂಬ ಮಾಹಿತಿಯನ್ನು ಆತ ಸಂಗ್ರಹಿಸುತ್ತಿದ್ದಘಿ. ಇದಕ್ಕಾಗಿ ಕಲಾವಿದರ ಬೆನಜಿಟ್ ನಿಘಂಟಿನಲ್ಲಿ ದಾಖಲಾದ ಡಜನ್‌ಗಟ್ಟಲೆ ದಾಖಲೆಗಳನ್ನು ನೋಡಿ ಬರೆದುಕೊಳ್ಳುತ್ತಿದ್ದಘಿ. ಕಲಾವಿದರ ಬೆನಜಿಟ್ ನಿಘಂಟು ಎಂದರೆ, ್ರಾನ್ಸ್ ದೇಶದ ಅಪರೂಪದ ಸಂಗ್ರಹವಾಗಿದ್ದುಘಿ, ಹದಿನಾಲ್ಕು ಹೆಬ್ಬೊತ್ತಿಗೆಯಲ್ಲಿ ಅಡಕಗೊಂಡ ಇಪ್ಪತ್ತು ಸಾವಿರ ಪುಟಗಳಿವೆ. ನಿಘಂಟಿನ ಪರಿವಿಡಿಗೆ ಹೋಗಿ ಅಕ್ಷರ, ಅನುಕ್ರಮ ಸಂಖ್ಯೆಯನ್ನು ಹಿಡಿದು ಕಲಾವಿದರ ವಿವರ ಇರುವ ಪುಟವನ್ನು ತೆರೆದು, ಅಲ್ಲಿ ದಾಖಲಾದ ಕಲಾಕೃತಿಯ ಹೆಸರು, ಅದರ ಒಟ್ಟೂ ಅಂದವನ್ನು ತನ್ನದೇ ಆದ ರೀತಿಯಲ್ಲಿ ದಾಖಲಿಸಿಕೊಳ್ಳುತ್ತಿದ್ದಘಿ. ಅದರ ಜತೆಗೆ ಆ ಕಲಾಕೃತಿ ಇದೀಗ ಯಾರ ಸಂಗ್ರಹದಲ್ಲಿದೆ, ಈ ಮೊದಲು ಅದರ ಮಾಲೀಕರು ಯಾರು, ಮೊಟ್ಟಮೊದಲಿಗೆ ಅದನ್ನು ಪಡೆದುಕೊಂಡವರು ಎಲ್ಲವನ್ನುಘಿ, ಶಾಲಾ ಮಕ್ಕಳು ಬರೆದುಕೊಂಡಂತೆ, ಮದ್ಯ ಮಧ್ಯೆ ತನ್ನದೇ ಆದ ಓರೆ ಕೋರೆಯ ಗೆರೆಗಳೊಂದಿಗೆ ದಾಖಲಿಸಿಕೊಳ್ಳುತ್ತಿದ್ದಘಿ. ಮೂರು ದೇಶಗಳ ಸಂಗಮ ಪ್ರದೇಶದಲ್ಲಿ ಇದ್ದ ಕಾರಣ ಇಂಗ್ಲೀಷ್, ಜರ್ಮನ್ ್ರೆಂಚ್ ಎಲ್ಲ ಭಾಷೆಗಳಲ್ಲೂ ಓದಿ ತಿಳಿದುಕೊಳ್ಳುವ ಪರಿಶ್ರಮ ಆತನಿಗಿತ್ತುಘಿ. ಕಳವಿನ ಹೊಂಚು ಇಲ್ಲದ ಅಥಚಾ ಬೇರಾವುದೇ ಕೆಲಸ ಇಲ್ಲದ ದಿನದಂದು ಇಡೀ ದಿನ ಈ ದಾಖಲಾತಿ ಸಂಗ್ರಹದಲ್ಲೇ ತೊಡಗಿರುತ್ತಿದ್ದಘಿ. ತನ್ನದೇ ಆದ ನೋಟ್ ಪುಸ್ತಕದಲ್ಲಿ ತಾನು ಕಳವು ಮಾಡಿದ ಕಲಾಕೃತಿಗಳ ದಾಖಲೆಯನ್ನು ಪರಿವಿಡಿ ರೂಪದಲ್ಲಿ ದಾಖಲಿಸಿ, ಒಂದು ೈಲ್ ಮಾಡಿಕೊಂಡ ಮೆತ್ತಿನಲ್ಲಿ ಒಂದು ಪೆಟ್ಟಿಗೆಯಲ್ಲಿ ದಾಖಲೆಗಳನ್ನೆಲ್ಲ ಸಂಗ್ರಹಿಸಿ ಇಡುತ್ತಿದ್ದಘಿ. ೈಲ್‌ನಲ್ಲಿ ಕಲಾಕೃತಿಗಳ ನಿರ್ದಿಷ್ಟ ಮಾಹಿತಿ ಪುಟದಲ್ಲಿ ಜರಾಕ್ಸ್ ಪ್ರತಿ, ಅದರ ಬಗ್ಗೆ ಕೆಲವೊಂದಕ್ಕೆ ರೇಖಾಚಿತ್ರವನ್ನೂ ಮಾಡಿರುತ್ತಿದ್ದಘಿ. ಆ ಮಟ್ಟಿಗೆ ಹೇಳುವುದಾದರೆ, ಮೆತ್ತಿನ ಮೇಲೆ, ಇದೊಂದು ಖಾಸಗೀ ಗ್ರಂತಾಲಯವೇ ಆಗಿತ್ತುಘಿ, ಅಮ್ಮಜ್ಜ ಕೊಟ್ಟ ಒಂದು ಪೆಟ್ಟಿಗೆಯಲ್ಲಿ ಇದನ್ನೆಲ್ಲ ಜೋಡಿಸಿ ಇಟ್ಟಿದ್ದುಘಿ, ವಿವಿಧ ಕಡೆಯಲ್ಲಿ ತಾನು ಕದ್ದು ತಂದ ಎಲ್ಲ ಕಲಾಕೃತಿಗಳ ಸಂಪೂರ್ಣ ವಿವರವು ಇದರಲ್ಲಿ ಇತ್ತುಘಿ. ವಿಶೇ ಎಂದರೆ, ತತ್ಸಂಬಂಧಿ ಎಗರಿಸಿತಂದ ಮೆಗೆಜಿನ್‌ಗಳು, ಇತಿಹಾಸದ ಪುಸ್ತಗಳು ಸೇರಿ ಸುಮಾರು ಐದು ನೂರು ಪುಸ್ತಕಗಳ ಮಿನಿ ಗ್ರಂಥಾಲವೇ ಆತನಲ್ಲಿ ಇತ್ತುಘಿ. ಅದರಲ್ಲಿ ಆತ ಚಂದಾದಾರನಾಗಿದ್ದ ಕಲಾಮಾಸಿಕಗಳೂ ಇದ್ದವು. ಅಲ್ಲಿ ನೋಡಿದರೆ, ಸಿಲ್ವರ್‌ಸ್ಮಿತ್, ಈವರಿ ಕರ್ವರಸ್, ಎನಾಮಲಿಸ್ಟ್ ಮತ್ತು ಸ್ವರ್ಡ್ ಬಿಲ್ಡರ್ಸ್‌ ಗಳೆಲ್ಲ ಕಾಣುತ್ತಿದ್ದವು. ಅವುಗಳ ಆಧಾರದಲ್ಲಿ ಚಿತ್ರವೊಂದರ ಪ್ರತಿಮೆಗಳು, ಒಳಾರ್ಥ, ಸಂಕೇತ ಭಾಷೆಗಳನ್ನು ಕಲಿಯುತ್ತಿದ್ದಘಿ. ಉದಾಹರಣೆಗೆ ಸಜ್ಜುಬಿಲ್ಲಿನ ವಿಚಾರದಲ್ಲಿ ಆಎನೆಲ್ಲ ಅರ್ಥ ಸಾಧ್ಯತೆಗಳಿವೆ ಎಂಬುದನ್ನು ಕಂಡುಕೊಳ್ಳಬೇಕು, ಅದಕ್ಕಾಗಿ ಕಲಾ ಇತಿಹಾಸದ ಪುಸ್ತಕಗಳನ್ನೇ ಒಮ್ಮೆ ತಿರುವಿ ಹಾಕುವುದು, ಅದಕ್ಕಾಗಿ ಸ್ವಿಸ್-ಜರ್ಮನ್ ಗಡಿಯ ಅಲ್ಸೆಕ್‌ನ ಎಲ್ಲೆಡೆ ಸುತ್ತಿ ಕಲಾಗೆ ಸಂಬಂಧಿಸಿ ಐದು ನೂರು ಪುಟಕ್ಕೂ ಮಿಕ್ಕಿದ ಸಾಹಿತ್ಯವನ್ನು ತಿರುವಿ ಹಾಕಿರಬಹದು. ಅದೆಲ್ಲ ಹೇಗೆಂದರೆ, ಆತ ದಂತದ ಆಡಂ-ಈವ್ ಪ್ರತಿಮೆಯನ್ನು ಕದ್ದು ತಂದ ಬಳಿಕ, ಅದರ ಕತೆಯೇನು ಕಲಾವಿ ಯಾರು ಎಂಬೆಲ್ಲ ತಿಳಿದುಕೊಂಡ. ಕ್ರಿಶ್ಚಿಯನ್ ಥಿಯಾಲಜಿಯ ಮೂಲ ಪ್ರತಿಮೆಯಂತಿದ್ದ ಆ ಕಲಾಕೃತಿನ್ನು ಜಾರ್ಜ್ ಪೇಟಲ್ ಎಂಬ ಕಲಾವಿದ ಕೆತ್ತಿದ್ದಾಗಿತ್ತುಘಿ. ಹಾಗಾದರೆ ಜಾರ್ಜ್ ಪೆಟಲ್ ಯಾರೆಂಬ ಕುತೂಲ ಮನಸ್ಸಿಗೆ ಬರುತ್ತದೆ. ಪೇಟಲ್ ಓರ್ವ ಅಂಗವಿಕಲನಾಗಿದ್ದು, ಜರ್ಮನ್ ದೇಶದ ಬಾವರಿಯಾ ರಾಜ್ಯದ ಮೂಲದವನು. ಆತನೊಬ್ಬ ವರಕಲಾವಿದನಾಗಿದ್ದುಘಿ, ಮಣ್ಣಿನ ಕಲಾಕೃತಿಗಳನ್ನು ಮಿಛಿವ, ಬಳುಕುವ ರೀತಿಯಲ್ಲಿ ಸಿದ್ದಪಡಿಸುವಷ್ಟು ನಾಜೂಕಿನವ. ಆತನ ಕುಸುರಿ ಕೆಲಸವನ್ನು ಮೆಚ್ಚಿದ ಜರ್ಮನಿಯ ರಾಜಮನೆತನದವರು, ಅರಮನೆಗೆ ಬಂದು, ಅಲ್ಲಿಯ ಕೆಲಸಗಳನ್ನು ಮಾಡಿಕೊಂಡಿರು ಎಂದು ಉತ್ತಮ ಸಂಬಳದ ಮಾತನ್ನೂ ಆಡಿದ್ದರು. ರಾಜಧಾನಿಯಲ್ಲಿ ನಿಲಯದ ಕಲಾವಿದರಾಗಿರುವುದು ಎಂದರೆ, ರಾಜ ಹೇಳಿದ್ದನ್ನು ಮಾಡಿಕೊಂಡು, ಜೀವನ ಸೆಟಲ್ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ, ವಿಚಿತ್ರ ಮನಸ್ಥಿತಿ ಪೇಟಲ್ ಅದನ್ನು ಒಪ್ಪಿಕೊಳ್ಳಲೇ ಇಲ್ಲಘಿ. ಹೊರತಾಗಿ ತನ್ನಲ್ಲಿರುವ ಕಲೆಯ ಹೊಸ ಸಾಧ್ಯತೆಗಳನ್ನು ಅರಸುವ ಆಂತರಿಕ ಸಾಹಸಕ್ಕೆ ಮುಂದಾದ. ಸುಮ್ಮನೇ ತನ್ನ ಸಮಕಾಲೀನ ಕಲಾವಿದರು ಏನು ಮಾಡಿದ್ದಾರೆ, ಮಾಡುತ್ತಿದ್ದಾರೆ ಎಂಬುದನ್ನು ನೋಡಲು ದೇಶ ಸಂಚಾರ ಆರಂಭಿಸಿದ. ತಿರುಗಾಡಿ ಬಂದು ಬೆಲ್ಜಿಯಂ ದೇಶದ ಎಂಟ್ರಾಪ್ ನಗರಕ್ಕೆ ತಲುಪಿ, ಪೌಲ್ ರೂಬೆನ್‌ರನ್ನು ಭೇಟಿಯಾದ. ಪೇಟಲ್‌ಗಿಂತ ಕೇವಲ ವಯಸ್ಸಿನಲ್ಲಿ ಮಾತ್ರ ಹಿರಿಯನಲ್ಲದೆ, ಕಲಾ ಸಾಧ್ಯತೆಯಲ್ಲಿ ಜೀವಮಾನದಷ್ಟು ಮುಂದಿದ್ದ ರೂಬೆನ್ ಪೇಟಲ್‌ಗೆ ಆಶ್ರಯ ನೀಡಿದ್ದಲ್ಲದೆ, ಆತನ ಕಸುಬಿಗೆ ಹೊಸ ಸಾಧ್ಯತೆಯ ದಿಕ್ಕು ದೆಸೆಯನ್ನು ತೋರಿಸಿದ. ಜೀವನದ ಹೊಸ ದಿಕ್ಕು ತೋರಿದ ರೂಬೆನ್‌ಗಾಗಿ ಸಿದ್ದಪಡಿಸಿದ ಕಲಾಕೃತಿಯೇ - ಇದೀಗ ಬ್ರಿಟ್‌ವೈಸರ್ ತಂದಿಟ್ಟುಕೊಂಡ ಆಡಂ-ಈವ್ ಪ್ರತಿಮೆಯಾಗಿತ್ತುಘಿ. ಕೆಲವು ಪ್ರತಿಭಾವಂತರಿಗೆ ಆಯುಷ್ಯವು ಕಡಿಮೆ ಇರುತ್ತದೆ ಎನ್ನುತ್ತಾರೆ, ಅಂತೆಯೇ, ಇನ್ನಷ್ಟು ಕಲಾಕೃತಿಗಳನ್ನು ಸಿದ್ಧಪಡಿಸಿ ಜಗತ್ತಿಗೆ ಕೊಡಬಹುದಾಗಿದ್ದ ಪೇಟಲ್ 1635ರಲ್ಲಿ ಇನ್ನೂ 34 ವರ್ಷದವನಾಗಿದ್ದಾಗಲೇ ಪ್ಲೇಗ್ ಬಡಿದು ಸತ್ತುಹೋದ. ಓದುತ್ತ ಹೋದಂತೆ ಆತನಿಗೆ ಇನ್ನಷ್ಟು ಕುತೂಹಲವೂ ಉಂಟಾಗುತ್ತಿತ್ತುಘಿ. ಇದನ್ನೆಲ್ಲ ತಿಳಿದುಕೊಳ್ಳುತ್ತಲೇ ತನ್ನಲ್ಲಿದ್ದ ಆಡಂ-ಈವ್‌ಪ್ರತಿಮೆಯ ಐತಿಹ್ಯದ ಬಗ್ಗೆ ಆತನಿಗೆ ಹೆಮ್ಮೆ ಅನ್ನಿಸುತ್ತಿತ್ತುಘಿ. ಕಳವಿನ ಸಂದರ್ಭದಲ್ಲಿ ಉಂಟಾದ ಭಿನ್ನಮತದ ನಡುವೆಯೂ ಇದನ್ನೆಲೆ ತಿಳಿದ ಅನ್ನೆ ಕೂಡ, ಇನ್ನಷ್ಟು ಕಳವಿನಲ್ಲಿ ಆಸಕ್ತಳಾಗುತ್ತಿದ್ದಳು. 1995ರ ವಾರಾಂತ್ಯ ಒಂದರಲ್ಲಿ ಸಿಡ್ಜರ್‌ಲ್ಯಾಂಡ್ ಸರೋವರ ದಂಡೆಯ ಸ್ಪೈಸ್ ಕ್ಯಾಸೆಲ್‌ನಲ್ಲಿ ಇದೇ ಹುಮ್ಮಸ್ಸಿನಲ್ಲಿ ಹೋಗಿ ಒಂದೇ ದಿನ ಎರಡು ಕಲಾಕೃತಿಯನ್ನು ಕಳವು ಮಾಡಿದರು. ಅಲ್ಲಿ ತುಸು ಭದ್ರತೆಯಲ್ಲೇ ಇದ್ದಘಿ, ಸೈನಿಕರ ಲೋಹ ಶಿರಸಾಣ ಹಾಗೂ ಮರಳು ಗಡಿಯಾರವನ್ನು ಕದ್ದುಘಿ, ತನ್ನ ಬೆನ್ನು ಚೀಲಕ್ಕೆ ಸೇರಿಸಿಕೊಂಡು ಬಂದರು. ಅದಾದ ಬಳಿಕ ಇನ್ನೆರಡು ಮ್ಯೂಸಿಯಂಗೂ ನುಗ್ಗಿ ಮದ್ಯಾಹ್ನದ ಮೊದಲೇ ಇನ್ನಷ್ಟು ಬಾಚಿಕೊಂಡು ಬಂದರು. ಈಗೀಗ ಈ ಜೋಡಿಯು ಕಳವಿನ ಕಲೆಯಲ್ಲಿ ರಕ್ತಗತರಂತೆ ಕಾಣುತ್ತಿದ್ದರು. ಯಾವುದೇ ತೊಡಕು ಉಂಟಾದರೂ ನಿಭಾಯಿಸಿ ಕದ್ದು ತರುವಲ್ಲಿ ಈಗಿಗ ಅವರಿಗೆ ಮಾನಸಿಕ ಒತ್ತಡವೇ ಆಗುತ್ತಿರಲಿಲ್ಲಘಿ. ಏನೂ ಆಗಿಯೇ ಇಲ್ಲ ಎಂಬಷ್ಟು ಶಾಂತವಾಗಿ ಇರುತ್ತಿದ್ದರು. ಅವರ ಈ ಸಾಧನೆಯಲ್ಲಿ ಸಾರ್ವಜನಿಕ ಮ್ಯೂಸಿಯಂಗಳು ಭದ್ರಾತಾ ನಿರ್ಲಕ್ಷದ ಪಾತ್ರವೂ ಇತ್ತುಘಿ. ಕೆಲವೆಡೆ ಸಾರ್ವಜನಿಕ ಮ್ಯೂಸಿಯಂಗಳಲ್ಲಿ ಭದ್ರತೆಯೇ ಇಲ್ಲ ಎನ್ನುವ ಹಾಗಿರುತ್ತಿತ್ತುಘಿ. ರಸಿಕರಿಗಾಗಿಯೇ ಇರುವ ಸಾರ್ವಜನಿಕ ಮ್ಯೂಸಿಯಂನಲ್ಲಿ ಭದ್ರತೆಯ ಚಿಂತನೆಯೇ ಒಂದು ಗೊಂದಲದ ಎಳೆಯಲ್ಲಿ ಇರುತ್ತದೆ. ವಿಪರೀತ ಭದ್ರತೆಯು ಕೆಲವೊಮ್ಮೆ ಕಲಾ ರಸಿಕರಿಗೆ ಕಿರಿಕಿರಿಯಾಗಿ ಅಲ್ಲಿಗೆ ಬರುವುದನ್ನೇ ಕಡಿಮೆ ಮಾಡುತ್ತಾರೆ. ವಿಪರೀತ ಸಂದೇಹದಿಂದ ನೋಡುವ ಭದ್ರತಾ ಸಿಬ್ಬಂದಿಗಳು, ಕಲಾ ವಿಹಾರಿಗಳಿಗೆ ಯಾವತ್ತೂ ರಸಭಂಗವೇ. ಹಾಗಾಗಿ ಭದ್ರತೆಯ ಕಾರಣದಿಂದ ಕೆಲವೊಮ್ಮೆ ಮ್ಯೂಸಿಯಂಗಳು ಮ್ಯೂಸಿಯಂಗಳಾಗದೆ ಭದ್ರತಾ ಕೊಠಡಿಗಲಾಗಿಬಿಡುವುದಿದೆ. ಬ್ಯಾಂಕ್‌ಗಳಲ್ಲಿ ಒಟವೆಗಳನ್ನು ಇಡಲು ಮಾಡುವ ಭದ್ರತಾ ಕೊಠಡಿ. ಅದಕ್ಕೆ ಯಾರನ್ನೂ ಬಿಡುವುದೂ ಇಲ್ಲಘಿ. ಕೊನೆಗೆ ಇದನ್ನು ಮ್ಯೂಸಿಯಂ ಎಂದು ಕರೆಯುವುದಕ್ಕೂ ಸಾಧ್ಯವಿಲ್ಲಘಿ. ಮ್ಯುಸಿಯಂ ಎಂಬುದು ನಿಜ ಅರ್ಥದಲ್ಲಿ ಕಲೆಯನ್ನು ಹಂಚಿಕೊಳ್ಳುವ ತಾಣವಾಗಿರಬೇಕು ತಾನೆ. ಕಲೆಯನ್ನು ಹಂಚಿಕೊಳ್ಳುವ ಹೆಸರಿನಲ್ಲಿ ಸಡಿಲಗೊಳಿಸಿದರೆ, ಕಳ್ಳರು ಅದರ ಅನುಕೂಲ ಪಡೆದಯುತ್ತಾರೆ. ಇದೇ ಇಲ್ಲಿರುವ ಮೂಲ ಸಂಕಟ. ಸಾಮಾನ್ಯವಾಗಿ ಚಿತ್ರಗಳು ರಸಿಕರಿಗೆ ಹತ್ತಿರವಾಗಿರಲಿ, ಕಲಾಸ್ವಾದನೆಗೆ ಅನುಕೂಲವಾಗಿರಲಿ ಎಂದು ಮ್ಯೂಸಿಯಂಗಳು ಆಶಯ ಹೊಂದಿರುತ್ತವೆ. ಇದೇ ಆಶಯದ ಪರಿಣಾಮ ಬ್ರಿಟ್‌ವೈಸರ್ ಪ್ರತೀ ಕಾರ್ಯಾಚರಣೆಯಲ್ಲೂ ಯಶಸಸ್ಸನೇ ಪಡೆಯುವಂತಾಯಿತು. ಹೆಚ್ಚು ಹೆಚ್ಚು ಲ ಗಾರ್ಡ್‌ಗಳನ್ನು ನೇಮಿಸುವುದು, ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಘಿ, ಚಿತ್ರಗಳಿಗೆ ಗಾಜಿನ ಕಪಾಟು, ಸಿಸಿ ಟೀವಿ ಅಳವಡಿಕೆಯು ಮ್ಯುಸಿಯಂ ಒಂದರಲ್ಲಿ ಕಲಾಸ್ವಾದನೆ ಗುಣಮಟ್ಟವನ್ನೇ ಕಸಿಯುತ್ತವೆ. ಪ್ರೇಕ್ಷಕರ ಹಿತವನ್ನು ಗಮನದಲ್ಲಿ ಇಟ್ಟುಕೊಂಡ ಕಾರಣವೇ ಬ್ರಿಟ್‌ವೈಸರ್ ತರದವರಿಂದ ಬೆಲೆಬಾಳುವ ಕಲಾಕೃತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಯಿತು. ಇನ್ನೊಂದೆಡೆ, ಚಿಕ್ಕ ಮ್ಯೂಸಿಯಂಗಳಲ್ಲಿಘಿ, ಭದ್ರತಾ ವ್ಯವಸ್ಥೆಯ ಬಗ್ಗೆ ಹೆಚ್ಚಾಗಿ ಚರ್ಚೆ ರುವುದಿಲ್ಲಘಿ. ಹಣಕಾಸು ಸೌಲಭ್ಯವೂ ಹೆಚ್ಚಾಗಿ ಇಲ್ಲದ ಕಾರಣ, ಭದ್ರತಾ ವ್ಯವಸ್ಥೆಗೆ ಹಣ ಹಾಕುವ ಬದಲು ಹೊಸದಾದ ಕಲಾಕೃತಿಯನ್ನು ಖರೀದಿಸುವ ನಿಟ್ಟಿನಲ್ಲೇ ಅವು ಆಸಕ್ತಿ ತೋರುತ್ತವೆ. ಹೊಸ ಕಲಾಕೃತಿಗಳನ್ನು ಆಪ್ತವಾಗಿ ಪ್ರದರ್ಶನ ಮಾಡಿದ್ದಾರೆ ಎಂದಾದಲ್ಲಿ ರಸಿಕರನ್ನೂ ಹೆಚ್ಚಾಗಿ ಆಕರ್ಷಿಸಬಹದು ಎಂಬುದು ಅವರ ಲೆಕ್ಕಚಾರ. ಧಾರ್ಮಿಕ ಮ್ಯೂಸಿಯಂಗಳ ವಿಚಾರ ತುಸು ಭಿನ್ನಘಿ. ಪ್ರಾದೇಶಿಕವಾಗಿ ಕಾಣುವ ಇವುಗಳಲ್ಲಿಘಿ, ಬೆಲೆಬಾಳುವ ಕಲಾಕೃತಿಗಳ ಜತೆಗೆ ಒಂದಿಷ್ಟು ದೇವರು, ಧರ್ಮದ ಚಿತ್ರಗಳೂ ಇರುವ ಕಾರಣ ನೋಡಿಗರು ಕದ್ದೊಯ್ಯುವ ಅಷ್ಟೊಂದು ಭಯ ಇರುವುದಿಲ್ಲಘಿ. ಇಲ್ಲಿನ ಚಿತ್ರಗಳು ನೋಡುಗರಿಗೆ ಯಾವುದೇ ಹಂತದಲ್ಲಿ ಆಪ್ತಘಿ, ಸಾಮಿಪ್ಯವನ್ನು ಕೊಟ್ಟರೂ, ಜನರು ಅದನ್ನು ಮುಟ್ಟುವುದು, ಧಾರ್ಮಿಕ ಕಾರಣ, ಸ್ಥಳದ ಮಹತ್ವದಿಂದಾಗಿ ಕದ್ದೊಯ್ಯುವ ಹಂತಕ್ಕೆ ಹೋಗುವುದಿಲ್ಲಘಿ. ಆದರೆ ಬ್ರಿಟ್‌ವೈಸರ್ ಮತ್ತು ಸ್ನೇಹಿತೆ ಅನ್ನೆ ಕ್ಯಾಥರೀನ್ ತರದವರು, ಇಂಥ ರಸ ಸ್ವಾದದ ಸಾರ್ವಜನಿಕ ಆಶಯಕ್ಕೆ ಕ್ಯಾನ್ಸರ್ ರೀತಿಯಲ್ಲಿ ರುಗ್ಣ ಮೂಲವಾಗಿದ್ದಾರೆ. ಇಂಥವರು ತಮ್ಮ ಸ್ವಾರ್ಥಕ್ಕಾಗಿ ಕಲಾಪ್ರಿಯರ ಒಟ್ಟೂ ಹಿತಾಸಕ್ತಿಗೇ ಧಕ್ಕೆ ತರುತ್ತಾರೆ. ಹಾಗೆಂದು, ಭದ್ರತೆ ಎಷ್ಟೇ ಸರಿ ಇದ್ದರೂ, ಬ್ರಿಟ್‌ವೈಸರ್-ಅನ್ನೆ ಕ್ಯಾಥರೀನ ತರದ ಜೋಡಿಗಳು, ಕ್ಯಾರೇ ಅನ್ನುವುದಿಲ್ಲ ಎಂಬುದಕ್ಕೆ 1995ರ ಸೆಪ್ಟಂಬರ್‌ನಲ್ಲಿ ನಡೆದ ಘಟನೆಯೇ ಸಾಕ್ಷಿಘಿ. ಸ್ವಿಸ್ ಕಲಾ ಗ್ರಂಥಾಲಯ ಪಕ್ಕದ ಬಾಸೆಲ್ ವಿವಿಯ ಮ್ಯೂಸಿಯಂಗೆ ಭೇಟಿ ನೀಡುವ ಜೋಡಿ, ಅಲ್ಲಿಘಿ, ಎಲ್ಲ ಭದ್ರತೆಗಳ ನಡುವೆಯೂ ಕಲಾಕೃತಿಯನ್ನು ಹೇಗೆ ಎಗರಿಸಿ ತಂದರು ಎಂಬುದೊಂದು ರೋಚಕ ಘಟನೆಯೇ ಸರಿ. ಅದಕ್ಕೆ ಬಲವಾದ ಕಾರಣ, ಆಕರ್ಷಣೆಯೂ ಇತ್ತುಘಿ. ಆ ಮ್ಯೂಸಿಯಂನಲ್ಲಿ ಸುಮ್ಮನೇ ಕಣ್ಣಾಡಿಸುತ್ತಿದ್ದಾಗ, ಡಚ್ ಸುವರ್ಣಯುಗದ ಕಲಾವಿದ ವಿಲಿಯಂ ವೆನ್ ಮೆರಿಸ್ ಅವರ ಕಲಾಕೃತಿಯೊಂದು ಈತನ ಕಣ್ಣಿಗೆ ಬೀಳುತ್ತದೆ. ಒಂದಿಷ್ಟು ರಚನೆಯ ಬಳಿಕ ಕಲಾವಿದನ ಶಿಷ್ಯರು ಚಿತ್ರದ ಉಳಿದ ಭಾಗವನ್ನು ಪೂರ್ಣಗೊಳಿಸಿದ ಔಷಧಾಲಯ ( ಎಪೋತಕೇರಿ) ಹಿನ್ನೆಲೆಯ ಚಿತ್ರ ಅದು. ವಾಸ್ತವ ಹಾಗೂ ಅಮೂರ್ತ ಎರಡೂ ಸಾಧ್ಯತೆಯನ್ನು ದುಡಿಸಿಕೊಂಡ ಅಪರೂಪದ ಈ ಚಿತ್ರವು, ಒಂದು ಮಗು, ಎರಡು ದೇವತೆಗಳು, ಇನ್ನೊಂದು ಗಿಳಿ ಜತೆಗೆ ಮಂಗವನ್ನೂ ಯೋಗ್ಯ ಸ್ಥಳದಲ್ಲಿ ನೋಡುಗರ ಗಮನ ಸೆಳೆಯುತ್ತದೆ. ಚಿತ್ರವನ್ನು ನೋಡುತ್ತಲೇ ಬ್ರಿಟ್‌ವೈಸರ್ ಖುಷಿಗೆ ಪಾರವೇ ಇರಲಿಲ್ಲಘಿ. ಅದನ್ನು ನೋಡಿ, ಒಂದು ಕಳ್ಳ ನಗುವು ಆತನಿಗೆ ತಿಳಿಯದಂತೆ ಒತ್ತರಿಸಿ ಬಂದಿತು. ಕಲಾಕೃತಿಯ ವೌಲ್ಯವನ್ನು ಗಮನಿಸಿಯೇ ಮ್ಯೂಸಿಯಂನವರು, ಅದಕ್ಕೆ ನೇರವಾಗಿಯೇ ಸಿಸಿಟಿವಿ ಕ್ಯಾಮರಾ ಅಳವಡಿಸಿ ಕಣ್ಗಾವಲು ಹಾಕಿದ್ದರು. ವಾರಾಂತ್ಯದಲ್ಲಿ ೂಟೇಜ್ ಗಮನಿಸಿದರೆ ಆ ಪೇಂಟಿಂಗನ್ನು ಎಷ್ಟು ಜನರು ಹೇಗೆಲ್ಲ ನೋಡಿದರು ಎಂಬುದನ್ನು ಪರಿಶೀಲಿಸಬಹುದಿತ್ತುಘಿ. ಬ್ರಿಟ್ ವೈಸರ್‌ಗೆ ಅಲ್ಲಿಯೇ ಇದ್ದ ಖಾಲಿ ಕುರ್ಚಿಯೊಂದು ಕಳವಿನ ಕಲ್ಪನೆಯನ್ನು ಕಟ್ಟಿಕೊಡುತ್ತದೆ. ಯಾವತ್ತೂ ತೀರಾ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ್ದ ಅನ್ನೆ ಇದಕ್ಕೆ ಒಪ್ಪಿದರೆ ಮಾತ್ರ ಎಂಬ ಆಲೋಚನೆ ಕೂಡ ಆತನಿಗೆ ಬರುತ್ತದೆ. ಕಳವಿಗೆ ಅನುಕೂಲ ಆಗಬಲ್ಲ ಕುರ್ಚಿಯನ್ನು ತೋರಿಸಿ ಹೇಗೆ ಮುಂದುವರಿಯೋಣವೇ ಎಂದು ಕಣ್ಣಿನಲ್ಲೇ ಸನ್ನೆಯನ್ನು ಮಾಡಿದ. ಆ ಚಿತ್ರದ ಆಕರ್ಷಣೆಯನ್ನುಘಿ, ಬ್ರಿಟ್‌ವೈಸರ್ ಆಸೆಯನ್ನು ನೋಡಿ, ಆಯಿತು ಎಂದು ಆಕೆಯೂ ನಿಶಾನೆ ಕೊಟ್ಟಳು. ತಮ್ಮ ಹಾಸಿಗೆಯ ಎದುರು ಈ ಚಿತ್ರ ಇದ್ದರೆ, ಅಲ್ಲಿನ ವಾತಾವರಣವೇ ಬದಲಾಗುತ್ತದೆ ಎಂದು ಆಕೆಯೂ ಆಲೋಚಿಸಿದ್ದಿರಬೇಕು ಅನ್ನಿಸುತ್ತದೆ, ತನ್ನ ನಿಷ್ಠುರ ನಿಲುವನ್ನು ಆಕೆಯೂ ಕೊಂಚ ತಗ್ಗಿಸಿದ್ದಳು. ಅಂತೂ ಬ್ರಿಟ್‌ವೈಸರ್-ಅನ್ನೆ ಕ್ಯಾಥರೀನ್ ಸಿಸಿಟಿವಿ ಎಂಬ ರಂಗೋಲಿ ಕೆಳಗೆ ನುಸುಳುವ ಒಂದು ಯೋಜನೆ ರೂಪಸಿದರು. ಅದು ಹೇಗೆಂದರೆ, ಸಮೋಪ ಹೋಗಿ ಬ್ರಿಟ್‌ವೈಸರ್ ಚಿತ್ರದ ಎದುರು ಭಾಗ ಖುರ್ಚಿ ಇಟ್ಟು ಅದರ ಮೇಲೆ ಏರಿದಾಗ ಸರಿಯಾಗಿ ಆತನ ಬೆನ್ನಿಗೆ ಕ್ಯಾಮರಾ ೆಕಸ್ ಆಗುತ್ತದೆ. ಕುತ್ತಿಗೆಯನ್ನು ತಿರುಗಿಸದೆ, ಹುಶಾರಾಗಿ ನಿಂತು ಎದುರಿನ ಪೇಂಟಿಂಗ್‌ನ ಮೊಳೆ ಬಿಚ್ಚಿಘಿ, ಕೆಳಕ್ಕೆ ಇಳಿಸಬೇಕು. ಆ ಎಲ್ಲ ಚಟುವಟಿಕೆ ನಡೆಯುವಾಗಲೂ , ಆತನ ಬೆನ್ನು ಬಿಟ್ಟರೆ, ಸಿಸಿಟಿವಿಯಲ್ಲಿ ಬೇರಾವುದೇ ಚಲನವಲನ, ಮುಖ ಚರ್ಯೆ ಯಾವುದೂ ಕಾಣುವಂತಿಲ್ಲಘಿ. ಹಾಗೇ ಮಾಡಿದ ಕಳ್ಳಘಿ, ಒಂದೇ ಕೈಯ್ಯಲ್ಲಿ ಪೇಂಟಿಂಗ್‌ನ್ನು ಗೋಡೆಯಿಂದ ಹೊರಕ್ಕೆಳೆದ. ತನ್ನ ಬೆನ್ನಿನ ೆಟೊ ತೆಗೆಯುತ್ತಿದ್ದ ಕ್ಯಾಮೆರಾ ಕಲ್ಪನೆಯನ್ನು ಊಹಿಸಿಕೊಂಡು, ಪೇಂಟಿಂಗನ್ನು ಭೂಮಿಯ ಸಮತಲದಲ್ಲಿ ತನ್ನ ಮರೆಯಿಂದ ಆಚೆಗೆ ಜಾರಿಸಿ, ಕೆಮೆರಾ ಕಣ್ಣಿನಿಂದ ಆಚೆಗೆ ನಿಧಾನವಾಗಿ ಜರುಗುತ್ತಾನೆ. ಆಚೆಗೆ ಬಂದು, ಪೇಂಟ್ ಮಾಡಲಾದ ಮರದ ಹಲಗೆಯನ್ನು ಚೌಕಟ್ಟಿನಿಂದ ಬಿಚ್ಚಿ ತನ್ನ ಕೋಟ್ ಒಳಕ್ಕೆ ಅಡಗಿಸುವಾಗ ತಿಳಿಯುತ್ತದೆ. ಪೇಂಟಿಂಗ್ ಅಂದಾಜಿಗಿಂತ ತುಸು ದೊಡ್ಡದಿದ್ದ ಕಾರಣ ಒಂದಿಷ್ಟು ಭಾಗವನ್ನು ಮುಚ್ಚಿತ್ತುಘಿ. ಹಾಗಾಗಿ ಆತನ ಕೋಟ್ ಒಳಗೆ ಪೇಂಟ್‌ಂಗ್ ಅಡಗಿಸಲು ಸಾಧ್ಯವಾಗದ ಕಾರಣ, ಈ ಬಾರಿ ಅಥವಾ ಮೊದಲ ಬಾರಿ ಪೇಂಟಿಂಗಗನ್ನು ಸಾಗಿಸಲು ಅನ್ನೆ ಕ್ಯಾಥರೀನ್ ಚೀಲದ ಅಗತ್ಯ ಬಿತ್ತುಘಿ. ಆಕೆ ಬಟ್ಟೆ ಶಾಪಿಂಗ್‌ಗೆ ಅನುಕೂಲ ಆಗುತ್ತದೆ ಎಂದು ತಂದ ತುಸು ದೊಡ್ಡದಾದ ಚೀಲದಲ್ಲಿ ಈ ಬಾರಿ ಪೇಂಟಿಂಗ್ ತುಂಬಿಕೊಂಡಳು. ಆ ಚೀಲವನ್ನು ಹಿಡಿದುಕೊಂಡ ಬ್ರಿಟ್‌ವೈಸರ್, ಇಬ್ಬರೂ ದ್ವಾರದ ಸಮೀಪ ಧಾವಿಸಿದರು. ಅಂತೂ ಒಳಕ್ಕೆ ಪ್ರವೇಶಿಸಿದ ಹದಿನೈದು ನಿಮಿಷದಲ್ಲಿ ಪೇಂಟಿಂಗ್ ಸಹಿತ ಇಬ್ಬರೂ ಹೊರಕ್ಕೆ ಬಂದಿದ್ದರು. ಬಹುತೇಕ ಮ್ಯೂಸಿಯಂಗಳಲ್ಲಿ ಸ್ವಾಗತ ಕಾರರು ಕುಳಿತುಕೊಳ್ಳುವ ಪಕ್ಕದಲ್ಲೇ ಸಿಸಿಟೀವಿ ವೀಕ್ಷಣೆಯ ಡೆಸ್ಕ್ ಇರುವುದಿಲ್ಲಘಿ. ಅದಕ್ಕಾಗಿ ತುಸು ಹಿಂದೆ, ಖಾಸಗಿಯಾಗಿ ಅದಕ್ಕೊಂದು ಅವಕಾಶ ಮಾಡಿಕೊಡುತ್ತಾರೆ. ಯುನಿವರ್ಸಿಟಿ ಬಾಸೆಲ್ ಮ್ಯೂಸಿಯಂನಲ್ಲಿ ಟಿಕೆಟ್ ಪ್ರವೇಶದ ಮಾರ್ಗದಲ್ಲೇ ಸಿಸಿಟೀವಿ ದೃಶ್ಯಗಳು ಕಂಡಿದ್ದವಾದರೂ, ಊಟದ ಹೊತ್ತಾಗಿದ್ದರಿಂದ ಳಗೆ ಏನಾಗುತ್ತಿದೆ ಎಂಬುದನ್ನು ಇಲ್ಲಿ ಕುಳಿತು ನೋಡುವ ವ್ಯ್ತಿ ಅಲ್ಲಿರಲಿಲ್ಲಘಿ. ಒಂದರ ಪಕ್ಕ ಒಂದರಂತೆ ಹತ್ತಾರು ಪರದೆಯಲ್ಲಿ ಒಳಗಿನ ಚಲನವಲನವನ್ನು ತೋರಿಸುವ ಪರದೆಗಳು, ಮಧ್ಯದಲ್ಲಿ ಔಷಧಾಲಯದ ಚಿತ್ರದ ಎದುರಿನ ಚಲನವಲನವನ್ನೂ ತೋರಿಸುತ್ತಿತ್ತುಘಿ. ಈ ಹಿಂದೆಯೂ ಇಂಥ ಸಿಸಿಟೀವಿ ದೃಶ್ಯದ ಮ್ಯೂಸಿಯಂಗೆ ಹೋಗಿದ್ದರೂ, ಊಟದ ಹೊತ್ತಿನಲ್ಲಿ ಇಲ್ಲೊಂದು ಕಳವಿನ ಅವಕಾಶ ಇದೆ ಎಂಬುದು ಇಲ್ಲಿಗೆ ಬಂದಾಗಲೇ ಬ್ರಿಟ್‌ವೈಸರ್ ತಲೆಗೆ ಹೊಳೆದಿತ್ತುಘಿ. ಊಟದ ಹೊತ್ತಿಗೆ ಹೆಚ್ಚು ಭದ್ರತೆ ಯಾವತ್ತೂ ಇರುವುದಿಲ್ಲ ಎಂದು ಸ್ವತಃ ಮ್ಯೂಸಿಯಂ ಭದ್ರತಾ ಸಿಬ್ಬಂದಿಯಾಗಿಯೇ ಆತನಿಗೆ ಗೊತ್ತಿತ್ತುಘಿ. ಅದಕ್ಕಾಗಿ ಬಹುತೇಕ ಖಳವನ್ನು ಆ ಹೊತ್ತಿನಲ್ಲೇ ರೂಪಿಸುತ್ತಿದ್ದುಘಿ, ಇಲ್ಲಿನ ವ್ಯತ್ಯಾಸ ಎಂದರೆ, ಸಿಸಿ ಟೀವಿ ಕಣ್ಗಾವಲು. ಕೆಲವೊಮ್ಮೆ ವೀಡಿಯೋ ರೂಮಿನ ನಿರ್ವಹಣೆಗೆ ಒಬ್ಬರೇ ಇದ್ದುಘಿ, ಊಟದ ಹೊತ್ತಿಗೆ ಯಾರೂ ಬದಲಿ ಬರುವುದಿಲ್ಲಘಿ. ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಬ್ರಿಟ್‌ವೈಸರ್ ಹಾಗೂ ಅನ್ನೆ ಮ್ಯೂಸಿಯಂ ಒಳಕ್ಕೆ ಪ್ರವೇಶಿಸಿದಾಗ ವೀಡಿಯೋ ಕೊಠಡಿಯಲ್ಲಿ ಯಾವುದೇ ಸಿಬ್ಬಂದಿ ಇಲ್ಲದಿರುವುದು, ಅವರ ಯೋಜನೆ ರೂಪಿಸಲು ನೆರವಾಗಿತ್ತು. ಕೊಠಡಿಯಲ್ಲಿ ಯಾರೂ ಇಲ್ಲದಾಗ, ತನ್ನ ಬೆನ್ನಿನ ವೀಡಿಯೋ ಸಿಸಿಟೀವಿಯಲ್ಲಿ ಬಂದರೆ, ಆತನಿಗೆ ಭಯ ಇರಲಿಲ್ಲಘಿ. ಮ್ಯೂಸಿಯಂ ಉದ್ದಕ್ಕೂ ಹಾಕಲಾದ ಕ್ಯಾಮರಾದಲ್ಲಿ ಎಲ್ಲಿಯೂ ತನ್ನ ಮುಖದ ಭಾಗ ದಾಖಲಾಗದಂತೆ ಉದ್ದಕ್ಕೂ ಎಚ್ಚರ ವಹಿಸಿದ್ದರು. ಮಧ್ಯಾಹ್ನದ ಬಿಡುವು ಮುಗಿವ ಮೊದಲು ಅವರು ಮ್ಯೂಸಿಯಂ ಬಿಟ್ಟು ಆಚೆ ಬರಬೇಕಿತ್ತುಘಿ. ಯಾಕೆಂದರೆ ವೀಡಿಯೋ ಕೊಠಡಿಗೆ ಬಂದಾಗ, ಎಪೋತಕೇರಿ ಪೇಂಟಿಂಗ್ ತೋರುವ ವೀಡಿಯೋ, ಖಾಲಿ ಗೋಡೆಯನ್ನು ತೋರುವುದರಿಂದ, ಸಹಜವಾಗಿ ರಕ್ಷಣಾ ವ್ಯವಸ್ಥೆ ಎಚ್ಚೆತ್ತುಕೊಳ್ಳುವುದಕ್ಕಿತ್ತುಘಿ. ಮ್ಯೂಸಿಯಂ ಒಳಕ್ಕೆ ಇವರಿದ್ದ ಹೊತ್ತಿನಲ್ಲಿ ಒಂದು ಕ್ಯಾಮರಾ ಬಿಟ್ಟರೆ ಮತ್ತೆ ಎಲ್ಲಿಯೂ ಇವರ ಚಲನ ವಲನ ದಾಖಲಾಗಿಲ್ಲಘಿ. ಕಳವು ಗಮನಕ್ಕೆ ಬಂದು, ಸಿಸಿ ಟೀವಿ ೂಟೇಜ್ ನೋಡಿದಾಗ ಅಧಿಕಾರಿಗಳಿಗೆ ಕಾಣಬಹುದಾದ ಕಳ್ಳರ ಚಲನವಲನದಲ್ಲಿಘಿ, ಸರಾಸರಿ ಎತ್ತರದ ಓರ್ವ ಗಂಡಸಿನ ಬೆನ್ನು , ತುಸು ಕೂದಲಿನ ಅಂಚು ಕಾಣುವ ಕುತ್ತಿಗೆ ಮಾತ್ರ ಕೆಲವು ಕ್ಷಣ ದಾಖಲಾಗಿತ್ತುಘಿ. ಅದೇ ಕಂದು ಬಣ್ಣದ ಕೂದಲಿನ ಬೇಸಿಗೆಯ ಜಾಕೆಟ್ ಧರಿಸಿದ ಗುರುತು ಸಿಗದ ಶ್ರೀ ಸಾಮಾನ್ಯ ಕಳ್ಳಘಿ.
Read More

ಆರ್ಟ್‌ ಥೀಫ್ ಧಾರಾವಾವಾಹಿ -7

ಆರ್ಟ್‌ ಥೀಫ್ ಧಾರಾವಾವಾಹಿ -7
ಸಜ್ಜುಬಿಲ್ಲು ಕದ್ದು ದಕ್ಕಿಸಿಕೊಂಡ ಹವಾದಲ್ಲಿದ್ದ ಬ್ರೈಟ್‌ವೈಸರ್ ಹಾಗೂ ಪ್ರೇಯಸಿ ಅನ್ನೆ ಕಾಥರೀನ್ ಇನ್ನೊಂದು ಪ್ರವಾಸಕ್ಕೆ ಸಜ್ಜಾಗಿ ಕಾರಿನಲ್ಲಿ ಜಾರು ಬಂಡಿಯೊಂದಿಗೆ ಹೊರಟರು. ಅದು ೧೯೯೫ರ ಮಾರ್ಚ್ ಮಾಸಿಕ. ಆಗಲೂ ಕೂಡ ಸಿರಿವಂತ ಅಮ್ಮಜ್ಜನ ಬೆಚ್ಚನೆಯ ಪೋಷಣೆಯಲ್ಲಿದ್ದ ಬ್ರೈಟ್ ವೈಸರ್‌ನ, ಹನಿಮೂನ್‌ಗೆ ಹಣ ಜೋಡಿಸಿಕೊಂಡಿದ್ದುಘಿ, ಅದೇ ಮೂಲದಿಂದ ಆಗಿತ್ತುಘಿ. ಕಾರಿನ ಡಿಕ್ಕಿಯಲ್ಲಿ ಜಾರು ಕೋಲುಗಳನ್ನು ತುಂಬಿಕೊಂಡು, ಪ್ರೇಮಿಗಳು ಸ್ವಿಜರ್‌ಲ್ಯಾಂಡಿನ ಗ್ರೂಯೆರಸ್ ಕಾಸೆಲ್‌ನಲ್ಲಿರುವ ೧೩ನೇ ಶತಮಾನದ ಕೋಟೆ ಮ್ಯೂಸಿಯಂಗೆ ತಲುಪಿದರು. ಗುಡ್ಡ ಬೆಟ್ಟಗಳನ್ನು ಸಲೀಸಾಗಿ ಏರಬಲ್ಲ ಇವರ ರೆಡ್‌ಗೆಲೈನ್ ಕಾರಿನ ವಿಶೇಷ ಎಂದರೆ, ಹಿಂಭಾಗದಲ್ಲಿ ಜಾರು ಕೋಲು ಮತ್ತಿತರ ಸಲಕರಣೆಗಳನ್ನು ಸಲೀಸಾಗಿ ಇಟ್ಟುಕೊಳ್ಳಬಹುದಾಗಿತ್ತುಘಿ. ಪ್ರೇಮಿಗಳು ಎಲ್ಲೂ ನಿಲ್ಲಿಸದೆ ನೇರವಾಗಿ ಕಾಸಲ್‌ಗೆ ಬಂದರು. ಏನೊಂದು ದಾಖಲೆ ಸಿಗಬಾರದೆಂದು ಕೌಂಟರ್‌ನಲ್ಲಿ ನಗದು ನೀಡಿ ಟಿಕೆಟ್ ಪಡೆದು ಮ್ಯೂಸಿಯಂ ಒಳಕ್ಕೆ ಪ್ರವೇಶಿಸುತ್ತಾರೆ. ಬ್ರೈಟ್‌ವೈಸರ್ ಜೋಡಿ ಕಳವು ಮಾಡುವುದಕ್ಕಾಗಿಯೇ ಇಲ್ಲಿ ಬಂದಿರಬಹದು ಅನ್ನಿಸುತ್ತಿದೆ ಅಲ್ಲವೆ? ಕಳ್ಳನ ಮನಸ್ಸು ಬಹುದೊಡ್ಡ ಕಳ್ಳಘಿ. ಹಾಗೆಲ್ಲ ಯಾವತ್ತೂ ಇವರು ಅಂದುಕೊಳ್ಳುವುದಿಲ್ಲಘಿ! ಮ್ಯೂಸಿಯಂ ನೋಡಿ ಹೋಗೋಣ ಎಂದುಕೊಂಡು ಬಂದಿರಂತೆ. ಹೀಗಂದುಕೊಳ್ಳುವುದೂ ಒಂದು ಮೈಂಡ್ ಗೇಮ್ ! ಅದರ ಅನುಕೂಲ ಅಂದರೆ ಲೋಕಾಭಿರಾಮವಾಗಿ ಮ್ಯೂಸಿಯಂ ಒಳಕ್ಕೆ ಬರಬಹುದು, ಸಮಾಧಾನದಿಂದ ಯೋಜನೆ ರೂಪಿಸಿ, ಅನುಕೂಲ ಅನಿಸಿದಾಗ ಕದ್ದು ಓಡಬಹದು. ಹೀಗೆಂದು ಬ್ರೈಟ್ ವೈಸರ್ ಸ್ವತಃ ಒಪ್ಪಿಕೊಳಡಿದ್ದಾನೆ. ಮ್ಯೂಸಿಯಂ ವಿಚಾರದಲ್ಲಿ ಆತನಿಗೆ ಯಾವತ್ತಿನಿಂದಲೂ ಒಂದು ರೂಢಿ. ಎಲ್ಲೇ ಆ ಕುರಿತು ಒಂದು ಬ್ರೋಶರ್ ಸಿಕ್ಕಿತೆಂದರೆ ಅದನ್ನು ಎತ್ತಿಟ್ಟುಕೊಂಡು ಒಂದಕ್ಷರವನ್ನೂ ಬಿಡದೆ ಓದಿ ಅದರ ಬಗ್ಗೆ ತಿಳಿದುಕೊಳ್ಳುತ್ತಿದ್ದಘಿ. ವಿಶೇಷವಾಗಿ ಪ್ರವಾಸೀ ಬುಕ್ಕಿಂಗ್ ಕಚೇರಿಗಳು, ಹೊಟೇಲ್ ಲಾಬಿಗಳಲ್ಲಿ ಎಲ್ಲೆಲ್ಲಿ ಸಿಗುತ್ತದೊ ಅಲ್ಲೆಲ್ಲ ಬ್ರೋಶರ್ ಸಂಗ್ರಹಿಸಿ ಒಂದೆಡೆ ಸರಿಯಾಗಿ ಇಟ್ಟುಕೊಳ್ಳುತ್ತಿದ್ದಘಿ. ಗ್ರಂಥಾಲಯಗಳ ಭೇಟಿ ಇರಬಹದು, ನಗರದ ಸುದ್ದಿ ಪತ್ರಿಕೆ ಸ್ಟ್ಯಾಂಡ್‌ಗಳು ಎಲ್ಲೇ ಸಿಕ್ಕರೂ ಚಿತ್ರಕಲಾ ಬ್ರೋಶರ್‌ಗಳನ್ನು ಒಮ್ಮೆ ಕಣ್ಣಾಡಿಸದೇ ಬಿಡುತ್ತಿರಲಿಲ್ಲಘಿ. ಫ್ರೆಂಚ್ ಭಾಷೆಯ ಪ್ರಖ್ಯಾತ ಚಿತ್ರಕಲಾ ಪತ್ರಿಕೆ ಱಲಾ ಗಾಜೆಟ್ ಡ್ರೌಟ್‌ಗೆ ಚಂದಾದಾರನಾಗಿದ್ದಘಿ. ಹಾಗೆ ನೋಡುವಾಗ ಯಾವಾಗಲೋ ಒಮ್ಮೆ ಚಿತ್ರ ಒಂದು ಆತನ ಕಣ್ಣಿಗೆ ಬಿದ್ದಿರುತ್ತದೆ. ತನೊಳಗೂ ವ್ಯಾಪಿಸಿದ ಆ ಚಿತ್ರದ ಮೇಲೆ ಬೆರಳಾಡಿಸಿ ಅದರ ಕುರಿತಾದ ಇಡೀ ಬರಹವನ್ನು ಓದುತ್ತಾನೆ. ಅಷ್ಟೇ ಅಲ್ಲಘಿ, ಆ ಚಿತ್ರವಿರುವ ಮ್ಯೂಸಿಯಂ ಯಾವುದು, ಅದರ ವಿಳಾಸ ಏನು, ಬಾಗಿಲು ತೆರೆಯುವ ದಿನ, ಸಮಯ ಎಲ್ಲವನ್ನೂ ಎರಡು ಬಾರಿ ಓದಿಕೊಂಡು ತನ್ನೊಳಗೆ ಗಟ್ಟಿ ಮಾಡಿಕೊಳ್ಳುತ್ತಿದ್ದಘಿ. ತಾನು ಚಿಕ್ಕಂದಿನಲ್ಲಿ ನೋಡಿದ ಬಹುತೇಕ ಎಲ್ಲ ಮ್ಯೂಸಿಯಂಗಳು, ಅದರಲ್ಲಿ ತನಗೆ ಖುಷಿಕೊಟ್ಟ ನಿರ್ದಿಷ್ಟ ಚಿತ್ರಗಳ ಬಗ್ಗೆ ಆತನಿಗೆ ಸಣ್ಣ ವಿವರವೂ ನೆನಪಿನಲ್ಲಿ ಇರುತ್ತಿತ್ತುಘಿ. ಆತ ಹೊಂಚು ಹಾಕಿದ್ದ ಕಲಾಕೃತಿ ಪಟ್ಟಿಯಲ್ಲಿ ಅವು ಇರುತ್ತಿದ್ದವು. ಅವಕಾಶ ಇದ್ದಾಗ, ಇಬ್ಬರಿಗೂ ಸಮಯ ಹೊಂದಿದಾಗ ಬ್ರೈಟ್‌ವೈಸರ್ ಹಾಗೂ ಅನ್ನೆ ಕ್ಯಾಥರೀನ್ ಅವುಗಳ ಶಿಕಾರಿಗೆ ಪ್ರವಾಸ ರೂಪಿಸುತ್ತಿದ್ದರು. ವಿಶೇಷವಾಗಿ ಒಂದು ವಾರ ಕಾಲ ತನ್ನ ಆಸ್ಪತ್ರೆ ಡ್ಯೂಟಿಗೆ ರಜೆ ಹಾಕಬಹುದಾದ ಸಮಯ ನೋಡಿ ಹೇಳಿದರೆ, ಬ್ರೈಟ್‌ವೈಸರ್ ಮ್ಯೂಸಿಯಂ ಹೋಗುವ ಮಾರ್ಗ, ಸಮಯ ನಿಗದಿ ಮಾಡಿ, ರಸ್ತೆ ಮಾರ್ಗದಲ್ಲಿ ಹೋಗಿ ಬರುವಾಗ ತಪ್ಪಿಸಿಕೊಳ್ಳುವ ಅವಕಾಶ ಎಲ್ಲದರ ಬಗ್ಗೆಯೂ ಒಂದು ಅಂದಾಜು ಸಿದ್ದಮಾಡುವನು. ಯಾವತ್ತೂ ಇವರ ಯೋಜನೆ ಕರಾರುವಾಕ್ಕಾಗಿಯೇ ಇರುತ್ತಿತ್ತುಘಿ. ಕಾರ್ಯಾಚರಣೆ ಶುರುವಾಗುತ್ತಲೇ ಮಾರ್ಗದ ಸವಾಲುಗಳು, ಪ್ರವಾಸಿಗಳ ದಟ್ಟಣೆ, ಮ್ಯೂಸಿಯಂಗಳ ಭದ್ರತಾ ವ್ಯವಸ್ಥೆ ಕೆಲವೊಮ್ಮೆ ಆಯಾ ಸಂದರ್ಭಕ್ಕೆ ತಕ್ಕಂತೆ ಚಿಕ್ಕ ಬದಲಾವಣೆ ಆಗುತ್ತಿತ್ತುಘಿ.ಕೆಲವು ಮ್ಯೂಸಿಯಂಗಳಲ್ಲಿ ನಾಲ್ಕಾರು ಬಾರಿ ಹೋದರೂ, ಒಂದಲ್ಲ ಒಂದು ತೊಂದರೆ ಎದುರಾಗುತ್ತಿತ್ತುಘಿ. ಒಮ್ಮೆ ಭದ್ರತಾ ಸಿಬ್ಬಂದಿಗಳು, ಇನ್ನೊಮ್ಮೆ ಪ್ರವಾಸಿಗರ ಅಡಚಣೆ, ಹೊಸದಾಗಿ ಅಳವಡಿಸಿದ ಸಿಸಿ ಕ್ಯಾಮರಾ ಸಮಸ್ಯೆಯು ಇವರ ಕಳವಿನ ಯೋಜನೆಯನ್ನು ಬುಡಮೇಲು ಮಾಡುತ್ತಿದ್ದವು. ಕೆಲವೊಂದು ಕಡೆಯಲ್ಲಿ ಏನೋ ಅಂದುಕೊಂಡು ಹೋದರೆ, ಎರಡು ಸುತ್ತು ಹೊಡೆದರೂ ಕಲಾಕೃತಿಗಳು ಅಂಥ ಆಕರ್ಷಣೆ ಹುಟ್ಟಿಸದೆ ಬರಿಗೈಯ್ಯಲ್ಲಿ ಬಂದಿದ್ದೂ ಇದೆ. ಯಾವುದೇ ವಸ್ತುವನ್ನು ಕದ್ದು ತರಲೆಂದು ಹೋದಾಗ, ಮ್ಯೂಸಿಯಂ ನಿಂದ ಅದನ್ನು ಎತ್ತಿಕೊಂಡು ಆಚೆ ತರುವ ಹಾಗೂ ಅಲ್ಲಿಂದ ಮನೆ ತನಕ ಸಾಗಿಸುವ ಕರಾರುವಾಕ್ಕಾದ ಯೋಜನೆಯನ್ನು ಮೊದಲೇ ನಿರ್ಣಯಿಸಿ ಹೋಗುವ ಪದ್ದತಿ ಆತನಿಗಿರಲಿಲ್ಲಘಿ. ಹಲವು ಬಾರಿ ಅಂತ ಯೋಜನೆಗಳು ಯಥಾವತ್ತಾಗಿ ಜಾರಿಯೂ ಆಗುವುದು ಕಷ್ಟವಾಗಿದ್ದುಘಿ, ಆಯಾ ಸಮಯ ಸನ್ನಿವೇಶ ನೋಡಿ ಎಗರಿಸಿ ಓಡುವುದು ಅನಿವಾರ್ಯವೂ ಆಗಿರುತ್ತಿತ್ತುಘಿ. ಈ ವಿಚಾರದಲ್ಲಿ ಆತನಿಗೆ ಹೊಳೆದಂತೆ ಮುಂದುವರಿಯುತ್ತಿದ್ದಘಿ, ಕೆಲವೊಮ್ಮೆ ಎಲ್ಲೋ ಹೋಗಲು ಹೊರಟು, ಇನ್ನೊಂದು ಮ್ಯೂಸಿಯಂ ನುಗ್ಗಿ ಅಲ್ಲಿಂದ ಯಾವುದೋ ಬೇಟೆಯನ್ನು ಹಿಡಿದು ಬರುವುದೂ ಇತ್ತು ! ಇದು ತನಗೆ ಬೇಕು ಅನ್ನಿಸಿದಾಗ ಆತ ಅಲ್ಲಿಯೇ ಚುರುಕಾಗಿ ಕದ್ದೋಡುವ ಯೋಜನೆ ರೂಪಿಸಿ ಮಾಲು ಹಿಡಿದು ಮನೆ ತಲುಪುತ್ತಿದ್ದಘಿ. ಸ್ವಿಜರ್‌ಲ್ಯಾಂಡ್ ಸೈನಿಕರ ಶಾಲೆಯಲ್ಲಿ ತಯಾರಾದ ಸೇನಾ ಚೂರಿಯೊಂದು ಯಾವತ್ತೂ ಆತನ ಕಾರ್ಯಾಚರಣೆಯಲ್ಲಿ ಸಹಾಯಕ್ಕೆ ಇರುತ್ತಿತ್ತುಘಿ. ಮ್ಯೂಸಿಯಂ ಒಳಗೆ ಬಂದಾಗಿತ್ತುಘಿ. ಗ್ರೂಏರ್ಸ್‌ ಕ್ಯಾಸಲ್‌ನ ಮೇಲ್ಮಹಡಿ ಏರುವ ತಿರುವು ಏಣಿಯ ಎದುರಿನ ಕಲ್ಲಿನ ಗೋಡೆಯಲ್ಲಿ ಬಹುತೇಕ ವೀಕ್ಷಕರನ್ನು ಸೆಳೆಯುವ ವಸ್ತು ಇತ್ತುಘಿ. ಗೌರವಸ್ಥ ಹಿರಿಯ ಮಹಿಳೆಯ ಮಣಿ ಖಚಿತ ಆ ಮುಖ ಚಿತ್ರವು ಎಲ್ಲರ ಗಮನ ಸೆಳೆಯುವುದಕ್ಕೂ ಬ್ರೈಟ್‌ವೈಸರ್ ಕಣ್ಣಿಗೆ ಬೀಳುವುದಕ್ಕೂ ವ್ಯತ್ಯಾಸ ಇದೆ. ಕೊರಳಿಗೆ ಕುಸುರಿಯ ನೆಕ್‌ಲೇಸ್, ತಲೆಗೆ ಸೆರಗು ಮುಚ್ಚಿದ ಮಹಿಳೆಯ ಚಿಕ್ಕ ಕಲಾಕೃತಿ ಅದಾಗಿದ್ದರೂ ಗೌರವ ವರ್ಣದ ಮಹಿಳೆಯ ವಿಷಾದ ನೋಟದ ಕಾರಣ ಕಲಾಕೃತಿ ತುಂಬ ಆಕರ್ಷಕವಾಗಿತ್ತುಘಿ. ಚಿತ್ರದ ಕೆಳಗೆ ಬರೆಯಲಾದ ಮಾಹಿತಿಯ ಪ್ರಕಾರ ಅದು ೧೮ನೇ ಶತಮಾನದ ಜರ್ಮನ್ ರಿಯಾಲಿಸ್ಟಿಕ್ ಕಲಾವಿದ ಕ್ರಿಶ್ಚಿಯನ್ ವಿಲಿಯಂ ಅರ್ನೆಸ್ಟ್ ಡೆರಿಕ್ ರಚಿಸಿದ್ದಾಗಿತ್ತುಘಿ. ಚಿತ್ರವನ್ನು ಮರದ ಹಲಗೆಯಲ್ಲಿ ಕಲಾವಿದ ರಚಿಸಿ ಅದಕ್ಕೊಂದು ಚೌಕಟ್ಟು ಹೊಂದಿಸಿದ್ದಘಿ. ಮರದ ಹಲಗೆ ಯಾಕೆ ಎಂಬ ಕುರಿತು ಬ್ರೈಟ್‌ವೈಸರ್‌ಗೆ ಹೆಚ್ಚೇನೂ ತಿಳಿದಿರಲಿಲ್ಲಘಿ. ಆ ಕಾಲದಲ್ಲಿ ಕ್ಯಾನ್ವಾಸ್ ತುಸು ದುಬಾರಿಯಾದ ಕಾರಣ ಬಹುತೇಕ ಕಲಾವಿದರು ಮರದ ಹಲಗೆಯಲ್ಲೇ ಚಿತ್ರವನ್ನು ರಚಿಸುತ್ತಿದ್ದರು ಎಂಬ ಅರಿವಿಲ್ಲದಿದ್ದರೂ, ಚಿತ್ರದ ಎದುರು ನಿಂತಾಗ ಒಮ್ಮೆ ಕಳೆದುಹೋದ. ಮಹಿಳೆಯ ಕತ್ತಿನಲ್ಲಿ ಬಳಸಲಾದ ದೊರಗಿನ ಬಣ್ಣಗಾರಿಕೆ, ಮಹಿಳೆಯ ಕಣ್ಣನ್ನು ನೋಡಿದಾಗ ಉಂಟಾದ ಆತ್ಮೀಯ ಅನುಭವ ತನ್ನನ್ನು ಇನ್ನಿಲ್ಲದಂತೆ ಆಕರ್ಷಿಸಿತ್ತು ಅನ್ನುತ್ತಾನೆ. ಚಿತ್ರಕಲಾ ಜಗತ್ತಿನಲ್ಲಿ ಸ್ಟೆಂಡಾಲ್ ಲಕ್ಷಣ ಎಂಬುದೊಂದು ಮನೋ ವಿಕಲ್ಪ ಇದೆ. ಈ ವಿಚಾರವನ್ನು ತಾನು ತರಿಸುತ್ತಿದ್ದ ಕಲಾ ನಿಯತಕಾಲಿಕ, ವಿಶೇಷವಾಗಿ ಗ್ರಂಥಾಲಯಗಳಿಂದ ತಂದು ಓದುತ್ತಿದ್ದ ಕಲಾ-ಚಂತನೆಯ ಪುಸ್ತಕಗಳಿಂದಲೇ ಬ್ರೈಟ್‌ವೈಸರ್ ತಿಳಿದುಕೊಂಡಿದ್ದಘಿ. ಹಾಗೆ ನೋಡಿದರೆ, ಚಿತ್ರಕಲೆಗೆ ಸಂಬಂಸಿದ ಬಹುತೇಕ ವಿಷಯಗಳಲ್ಲಿ ಪುಸ್ತಕಗಳನ್ನು ಎಲ್ಲಿದ್ದರೂ ಹುಡುಕಿ ತಂದು ಓದುವ ಹವ್ಯಾಸ ಆತನದಾಗಿತ್ತುಘಿ. ದಿನವಿಡೀ ತನ್ನ ಆಸ್ಪತ್ರೆಯ ಸೇವೆಯಲ್ಲಿ ತೊಡಗಿರುತ್ತಿದ್ದ ಅನ್ನೆ ಕ್ಯಾಥರೀನ್‌ಗೆ ಇತರ ಹವ್ಯಾಸ ಹಾಗೂ ಓದಿಗೆಲ್ಲ ಸಮಯವೇ ಇರಲಿಲ್ಲಘಿ. ಆಕೆ ಅಂಥ ಯಾವುದೇ ವಿಚಾರದಲ್ಲಿ ಆ ಪರಿಯ ಆಸಕ್ತಿ ಕೂಡ ಇಟ್ಟವಳಲ್ಲ ಎಂದು ಆಕೆಯನ್ನು ತಿಳಿದ ಜನ ಹೇಳುತ್ತಾರೆ. ಮ್ಯೂಸಿಯಂಗಳ ಬ್ರೋಷರ್ ಸಿಕ್ಕರೆ, ಅದನ್ನು ತಂದು ಬ್ರೈಟ್‌ವೈಸರ್‌ಗೆ ಓದು ಎಂದು ಕೊಡುತ್ತಿದ್ದಳು ಅಷ್ಟೆಘಿ. ಅಂದಹಾಗೆ ಸ್ಟೆಂಡಾಲ್ ಲಕ್ಷಣವು ಚಿತ್ರಕಲಾ ಜಗತ್ತಿನಲ್ಲಿ ಬಹು ಚರ್ಚಿತವಾದ ವಿಚಾರ. ಫ್ರೆಂಚ್ ಬರಹಗಾರ ಸ್ಟೆಂಡಾಲ್ ೧೮೧೭ರಲ್ಲಿ ರೋಮ್, ನೇಪಲ್ಸ್ ಮತ್ತು ಫ್ಲೋರೆನ್ಸ್ ಪ್ರವಾಸ ಮುಗಿಸಿ ಬರೆದ ಪ್ರವಾಸೀ ಕಥನದಲ್ಲಿ ಮೊದಲು ಇದನ್ನು ಉಲ್ಲೆಖಿಸಿದ್ದಾನೆ. ಫ್ಲೊರೆನ್ಸ್‌ನ ಸಾಂಟಾ ಕ್ಲಾಸ್ ಬೆಸಿಲಿಕದಲ್ಲಿ ನಡೆದ ಘಟನೆಯ ಮೂಲಕ ಜಗತ್ತಿಗೆ ಇದು ಪರಿಚಯ ಆಯಿತು. ಅಲ್ಲಿನ ಬೃಹದಾಕಾರದ ಚರ್ಚ್ ಒಳಗಿನ ಸಣ್ಣದೊಂದು ಗುಡಿಯ ಮೇಲ್ಚಾವಣಿಯ ಚಿತ್ರಗಳನ್ನು ನೋಡುತ್ತಿದ್ದಾಗ ಸ್ಟೆಂಡಾಲ್ ಗೆ ಈ ಅನುಭವ ಆಗುತ್ತದೆ. ಕಲಾವಿದ ಮೇಲ್ಛಾವಣಿಯಲ್ಲಿ ರಚಿಸಿದ ದೃಶ್ಯ ವೈಭವವನ್ನು ನೋಡಲು, ಕತ್ತೆತ್ತಿ ಕುತ್ತಿಗೆಯ ಮೇಲೆ ಭಾರ ಹಾಕಿದಾಗ ತನಗೆ ಬಹಿರೀಂದ್ರಿಯ ಅನುಭವ, ಪಂಚೇಂದ್ರಿಯಾನುಭವದಲ್ಲಿ ಮುಳುಗಿದಂತೆ, ಹೃದಯಾಂತಃಕರಣ ಸ್ಪೋಟಿಸಿತೆಂದು ಹೇಳಿದ. ಆ ಕ್ಷಣ ಅಲ್ಲಿಯೇ ಕುಸಿದು ಹೋದ ಸ್ಟೆಂಡಾಲ್, ಅಲ್ಲಿಂದ ಹೇಗೋ ಹೊರಕ್ಕೆ ಬಂದು ಆವರಣದ ಬೆಂಚ್ ಮೇಲೆ ತುಸುಕಾಲ ಒರಗಿಕೊಂಡು ವಾಪಸ್ ವಾಸ್ತವಕ್ಕೆ ಮರಳಿದೆ ಎಂದು ಉಲ್ಲೇಖಿಸುತ್ತಾನೆ. ಬಳಿಕ ಫ್ಲೊರೆನ್ಸ್ ಕೇಂದ್ರೀಯ ಆಸ್ಪತ್ರೆಯ ಮನಶ್ಯಾಸ್ತ್ರೀಯ ವಿಭಾಗ ಮುಖ್ಯಸ್ಥ ಗ್ರೆಸಿಲ್ಲಾ ಮಗೇರಿನಿ ೧೯೭೦ರಲ್ಲಿ ಒಂದಿಷ್ಟು ಕಲಾವೀಕ್ಷಕರ ಇಂಥದ್ದೇ ಅನುಭವವನ್ನು ದಾಖಲಿಸಿದ್ದಾನೆ. ಮಗೇರಿನಿ ಪ್ರಕಾರ ಚಿತ್ರಗಳನ್ನು ನೋಡಿದಾಗ ಹೃದಯದ ಕಸಿವಿಸಿ, ಪ್ರಜ್ಞೆ ತಪ್ಪಿದ ಅನುಭವ, ಒಮ್ಮೆಲೆ ಎಲ್ಲವೂ ಮರೆತಂತೆ ಆಗುವುದು ಸ್ಟೆಂಡಾಲ್ ಲಕ್ಷಣ. ಇಂಥ ಅನುಭವ ಹೇಳಿದವರಲ್ಲಿ ಓರ್ವ ವೀಕ್ಷಕಿ, ನೋಡುತ್ತಿದ್ದಂತೆ ತನ್ನ ಕಣ್ಣ ಗುಡ್ಡೆಗಳು ಮುಂದಕ್ಕೆ ಬೆರಳಿನಂತೆ ಚಾಚಿದ ಭಾಸವಾಯಿತು ಎಂದಿದ್ದಾಳೆ. ಮೈಖಲ್ ಎಂಜಿಲೋ ಅವರ ಪ್ರಖ್ಯಾತ ಡೇವಿಡ್ ಮೂರ್ತಿಯನ್ನು ನೋಡಿದಾಗ ಬಹಳಷ್ಟು ಜನರಿಗೆ ಸ್ಪೆಂಡಾಲ್ ಅನುಭವ ಆಗಿದ್ದಿದೆ. ನೋಡುತ್ತಲೇ ಆಘಾತದ ಅನುಭವ ಕೆಲವರಿಗೆ ಕ್ಷಣಿಕವಾಗಿದ್ದರೆ, ಇನ್ನೂ ಕೆಲವರಿಗೆ ಒಂದೆರಡು ತಾಸು ಅಮಲಿನಲ್ಲಿ ತೇಲಿ ಬಿದಿರುತ್ತಿದ್ದರು. ಮಗೇರಿನಿ ಕೆಲವರಿಗೆ ಬೆಡ್ ರೆಸ್ಟ್ ಸಲಹೆ ಮಾಡಿದರೆ, ಇನ್ನೂ ಕೆಲವರಿಗೆ ಶಾಮಕ ಔಷಧಗಳನ್ನು ಕೊಡುತ್ತಿದ್ದರು. ಒಂದಿಷ್ಟು ದಿನ ಕಲಾಕೃತಿಗಳ ಜಗತ್ತಿನಿಂದ ದೂರ ಉಳಿದರೆ, ರೋಗಿಗಳು ಸಹಜವಾಗಿಯೇ ಚೇತರಿಸಿಕೊಳ್ಳುತ್ತಿದ್ದರು. ಮಗೇರಿನಿ ಅವರು ೨೫ ರಿಂದ ೪೦ ವಯೋಮಾನದ ನೂರಕ್ಕೂ ಹೆಚ್ಚು ಜನರಿಗೆ ಈ ನಿಟ್ಟಿನಲ್ಲಿ ವಿಭಿನ್ನ ಹಂತದ ಚಿಕಿತ್ಸೆ ನೀಡಿ ದಾಖಲೀಕರಣ ಮಾಡಿದ್ದರು. ಅದರಲ್ಲೂ ಒಂದು ವಿಶಿಷ್ಟ ಲಕ್ಷಣ ಎಂದರೆ, ಕೆಲವರಿಗೆ ಚಿತ್ರಗಳನ್ನು ನೋಡಿದಾಗಲೆಲ್ಲ ಇದೇ ಅನುಭವ ಪುನರಾವರ್ತನೆ ಆಗುತ್ತಿತ್ತುಘಿ. ಈ ರೋಗದ ಕುರಿತಾಗಿ ನಂತರ ಮಗೇರಿನಿ ಒಂದು ಶೋಧನಾ ವರದಿಯನ್ನೇ ಪ್ರಕಟಿಸಿ ಅದಕ್ಕೆ ಸ್ಪೆಂಡಾಲ್ ಲಕ್ಷಣ ಎಂದು ಹೆಸರಿಟ್ಟರು. ನಂತರದ ದಿನದಲ್ಲಿ ಜರುಸಲೇಮ್ ಪ್ಯಾರಿಸ್‌ನಲ್ಲಿ ಈ ರೋಗ ಲಕ್ಷಣದ ಹಲವಾರು ಪ್ರಕರಣಗಳನ್ನು ಗುರುತಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಫ್ಲೊರೆನ್ಸ್ ನ ಹೊರಗಡೆ ಈ ಪ್ರಕರಣಗಳನ್ನು ಅಷ್ಟೇನೂ ನಿರ್ದಿಷ್ಟವಾಗಿ ಗರುರುತಿಸುತ್ತಿರಲಿಲ್ಲಘಿ, ವಿಶೇಷವಾಗಿ ಮಾನಸಿಕ ಅಸ್ವಾಸ್ತ್ಯದ ಪಾಕ್ಷಿಕದಲ್ಲಿ ಅಂಕಿಸಂಕಿಗಳಾಗಿಯೂ ದಾಖಲಾಗಲಿಲ್ಲಘಿ. ಸ್ಟೆಂಡಾಲ್ ಲಕ್ಷಣಗಳ ಬಗ್ಗೆ ಮೊದಲು ಓದಿದಾಗ ತನಗೊಂದಿಷ್ಟು ಕಸಿವಿಸಿ ಆಗಿತ್ತು ಎಂದು ಬ್ರೈಟ್‌ವೈಸರ್ ಹೇಳುತ್ತಾನೆ. ಅಲ್ಲಲ್ಲಿ ಸಂಭವಿಸುವ ಸಮಸ್ಯೆ ಇದಾಗಿದೆ ಎಂದು ರೋಗ ಲಕ್ಷಣವನ್ನು ತಿಳಿದಾಗ, ಇದು ಮಾನವ ಸಮುದಾಯದಲ್ಲಿ ತನಗೆ ಮಾತ್ರ ಉಂಟಾದುದಲ್ಲ ಎಂದು ಒಮ್ಮೆ ಸಮಾಧಾನ ಆಯಿತು ಎಂದೂ ಹೇಳುತ್ತಾನೆ. ಬ್ರೈಟ್ ವೈಸರ್ ವಿಶೇಷ ಎಂದರೆ, ಆತ ಎಲ್ಲ ಬಗೆಯ ಚಿತ್ರಗಳಿಗೂ, ಸ್ಟೆಂಡಾಲ್ ಲಕ್ಷಣಕ್ಕೆ ಒಳಗಾಗುತ್ತಿರಲಿಲ್ಲಘಿ, ಹೊರತಾಗಿ ಕೆಲವೆಡೆ ಆತನನ್ನು ಕರೆದುಕೊಂಡು ಹೋದಾಗ, ಮೂಡಿಯಾಗಿ ಕೆಲವೊಂದು ನಿರ್ದಿಷ್ಟ ಸ್ಥಳದಲ್ಲಿ ಹೀಗಾಗುತ್ತಿತ್ತು ಎನ್ನುತ್ತಾನೆ. ‘ ಚಿತ್ರಗಳು ನನಗೆ ಮಾದಕ ದ್ರವ್ಯ’ ಎಂದೇ ಆತ ಹೇಳಿಕೊಳ್ಳುವುದಿತ್ತುಘಿ. ಆತನಿಗೆ ಚಟಗಳೇನೂ ಇರಲಿಲ್ಲಘಿ. ಅಪರೂಪಕ್ಕೊಮ್ಮೆ ವೈನ್ ಹೀರುವುದಿತ್ತಾದರೂ ತಂಬಾಕು, ಕಫೇನ್, ಅಲ್ಕೊಹಾಲ್ ಮತ್ತಿತರ ಯಾವುದೇ ಮಾದಕ ವಸ್ತುಗಳ ಬಗ್ಗೆ ಬ್ರೈಟ್‌ವೈಸರ್ ವ್ಯಸನಿಯಲ್ಲಘಿ. ಅಂಥ ಯಾವುದೂ ಆತನನ್ನು ವಿಶೇಷವಾಗಿ ಆಕರ್ಷಿಸುತ್ತಿರಲಿಲ್ಲಘಿ, ಹಾಗೆಯೇ ಚಿತ್ರವೊಂದು ಆತನ ತಲೆಗೆ ಹಿಡಿಸುವ ಗುಂಗು ಅಥವಾ ಅಮಲನ್ನು ಅದಾವುದೂ ಕೂಡ ಉಂಟು ಮಾಡುತ್ತಲೂ ಇರಲಿಲ್ಲಘಿ. ಆದರೆ, ಇದನ್ನು ಬಹುತೇಕ ಪೊಲೀಸರು ನಂಬುವುದಿಲ್ಲಘಿ. ಬೇರಾವುದೇ ಅಮಲಿನ ವ್ಯಸನ ಇರಲಿಲ್ಲಘಿ. ಸ್ಟೆಂಡಾಲ್ ಲಕ್ಷಣಗಳು, ಕಲಾಕೃತಿ ಆಕರ್ಷಣೆ ಎಂಬ ವ್ಯಸನ, ಅವೇ ತನಗೆ ಅಮಲು ದೃವ್ಯ ಎಂದೆಲ್ಲ ಬ್ರೈಟ್‌ವೈಸರ್ ಹೇಳಿದರೆ, ಪೊಲೀಸರು, ತನಿಖಾಕಾರಿಗಳು ನೇರವಾಗಿ ನಕ್ಕು ತಿರಸ್ಕರಿಸುತ್ತಿದ್ದರು. ಆತ ಹಸೀ ಸುಳ್ಳ ಎಂದು ಪೊಲೀಸರು ಬಯ್ಯುತ್ತಿದ್ದರು. ಸ್ಟೆಂಡಾಲ್ ಲಕ್ಷಣವು ಜೆಟ್ ಲಾಗ್ ಥರ ಅಥವಾ ವಿಚಿತ್ರ ಹತಾಶ ಕ್ರೇಜ್ ಹೊರತಾಗಿ ಮತ್ತಿನ್ನೇನೂ ಅಲ್ಲ ಎಂದು ಕೆಲವರು ಹೇಳುತ್ತಿದ್ದರು. ಬ್ರೈಟ್‌ವೈಸರ್ ಕಟು ವಿಮರ್ಶಕರ ಪ್ರಕಾರ ಆತನೊಬ್ಬ ಅಂಗಡಿ ಬಾಗಿಲು ಮುರಿದು ಕಳವು ಮಾಡುವ ಹಸಿಕಳ್ಳನಂತೆ. ಆದರೆ, ಈತನ ನಿರ್ದಿಷ್ಟತೆ ಎಂದರೆ ಚಿತ್ರಗಳು, ದುಡ್ಡಿನ ವ್ಯಾಮೋಹ ಮೀರಿದ ಕಲಾ ವಸ್ತುಗಳ ಖದೀಮ ಎಂದು ಬಣ್ಣಿಸುತ್ತಿದ್ದರು. ಆದರೆ ಇವರೆಲ್ಲರ ಆರೋಪವನ್ನು ಬ್ರೈಟ್ ವೈಸರ ಸಾರಾಸಗಟಾಗಿ ನಿರಾಕರಿಸುತ್ತಾನೆ. ಕಲಾಕೃತಿಗಳು ತನಗೆ ಬೇಕಿರುವುದು ನಿಜವಾದರೂ, ಕಳವಿನ ಚಟಕ್ಕಾಗಿ, ಕೇವಲ ಕಳ್ಳ ಎಂಬ ಬಣ್ಣನೆಯನ್ನು ಬ್ರೈಟ್ ವೈಸರ್ ಯಾವತ್ತೂ ಒಪ್ಪುತ್ತಿರಲಿಲ್ಲಘಿ. ತನಗೆ ಕಳವು ಯಾವತ್ತೂ ಖುಷಿಕೊಟ್ಟಿಲ್ಲ ಎಂದೇ ಆತ ಹೇಳುತ್ತಾನೆ. ಆತನಿಗೇನಿತ್ತೂ ಕಲಾಕೃತಿ ಬೇಕು. ಚಿತ್ರಗಳು, ಕಲಾತ್ಮಕ ವಸ್ತುಗಳನ್ನು ಸಂಗ್ರಹ ಮಾಡುವುದೇ ತನ್ನ ಹವ್ಯಾಸ. ಬ್ರೈಟ್ ವೈಸರ್ ಹೇಳಿಕೊಳ್ಳುವುದನ್ನು ಸ್ವಿಡಿಶ್ ಮನೋಚಿಕಿತ್ಸಕ ಮಯಖೆಲ್ ಸ್ಕಿಡಮ್ತ್ ಕೂಡ ೨೦೦೨ರಲ್ಲಿ ತನ್ನ ೩೪ ಪುಟಗಳ ತನಿಖಾ ವರದಿಯಲ್ಲಿ ಸರಿ ಸುಮಾರು ಹೀಗೆಯೇ ಉಲ್ಲೇಕಿಸಿದ್ದಾನೆ. ಆದರೆ, ಬೈಟ್‌ವೈಸರ್ ಸಮಾಜಕ್ಕೊಂದು ಪೀಡೆ, ತನ್ನ ಅಪರಾಧಕ್ಕೆ ಸದುದ್ದೇಶದ ಹವ್ಯಾಸ ಎಂದು ನಂಬಿಸಿಕೊಳ್ಳುವ ಕಳ್ಳ ಎಂದೇ ಎಂದೇ ಸ್ಕಿಡಮ್ತ್ ಹೇಳಿದ್ದಾನೆ. ಆದರೆ, ಇದು ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಬೇಕಾದ ಕೇಸು ಕಳವಿನ ರೋಗವು ಈತನಿಗಿದೆ ಎಂದೇನೂ ಮನೋಚಿಕಿತ್ಸಕನ ವರದಿ ಉಲ್ಲೇಖಿಸಲಿಲ್ಲಘಿ. ಕಳವಿಗಾಗಿ ಕದಿಯುವ ವ್ಯಸನಿಗೆ ನಿರ್ದಿಷ್ಟವಾಗಿ ಚಿತ್ರವನ್ನೊಘಿ, ಕಲಾ ವಸ್ತುಗಳನ್ನಷ್ಟೇ ಕದಿಯುವ ಅನಿವಾರ್ಯತೆ ಇರುವುದಿಲ್ಲಘಿ. ಕೈಗೆ ಸಿಕ್ಕಿದ್ದನ್ನು ಕದಿಯುವುದು ಕಳವು ವ್ಯಸನಿಯ ಗುಣ. ಕಳವು ವ್ಯಸನಿಯ ಇನ್ನೊಂದು ಲಕ್ಷಣ ಎಂದರೆ, ಸಿಕ್ಕಿದ್ದನ್ನು ಕದ್ದಮೇಲೆ, ನಂತರ, ಇದೊಂದು ತಪ್ಪು ತನ್ನಿಂದ ಆಗುತ್ತಲೇ ಇದೆ, ತಡೆಯುವುದಕ್ಕೇ ಸಾಧ್ಯವಾಗುತ್ತಿಲ್ಲ ಎಂದು ಆಗಾಗ ಪಾಪ ಪ್ರಜ್ಞೆ ಇರುತ್ತದೆ. ಬ್ರೈಟ್ ವೈಸರ್ ಮಾತ್ರ ಹಾಗಲ್ಲಘಿ, ಆತ ಎಷ್ಟೊಂದು ಚಿತ್ರಗಳನ್ನು ಕದ್ದರೂ, ಆತನಿಗೆ ತಾನು ತಪ್ಪು ಮಾಡಿದೆ ಎಂದು ಅನ್ನಿಸುತ್ತಲೇ ಇರಲಿಲ್ಲಘಿ ! ತನ್ನ ಕಳವಿನ ಬಗ್ಗೆ ಈತನಿಗೆ ಒಂದು ರೀತಿಯಲ್ಲಿ ಹೆಮ್ಮೆ ಇರುತ್ತಿತ್ತುಘಿ. ಹಾಗಾಗಿ ಈತನೊಬ್ಬ ಕಳವು ವ್ಯಸನಿ ಎಂಬ ವ್ಯಾಪ್ತಿಗೆ ಒಳಪಡಲು ಸಾಧ್ಯವಿಲ್ಲ ಎಂದೂ ಮನೋಚಿಕಿತ್ಸಕ ವಿವರಿಸಿದ. ಬ್ರೈಟ್‌ವೈಸರ್ ಚಿತ್ರಗಳ ಮೇಲಿನ ವಿಶೇಷ ಪ್ರೀತಿ ಹಾಗೂ ಅವುಗಳ ಗುಣಾತ್ಮಕ ಕಾರಣಕ್ಕಾಗಿ ಮಾತ್ರ ಕಳವು ಮಾಡುತ್ತಾನೆ ಎಂದು ಸ್ಕಿಡಮ್ತ್ ಹೇಳಿದ್ದಾನೆ. ಸಾಮಾನ್ಯವಾಗಿ ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜನರು ಜಗತ್ತಿನ ನೋಟವೇ ಸರಿ ಇಲ್ಲ ಎಂದು ವಾದಿಸುತ್ತಾರೆ. ಇದೇ ಬ್ರೈಟ್‌ವೈಸರ್ ಸಮಸ್ಯೆ ಕೂಡ ಆಗಿತ್ತುಘಿ. ಆತನ ಪ್ರಕಾರ ಕಲಾತ್ಮಕವಾಗಿ ಮಹತ್ವದ್ದನ್ನು ಕದಿಯುತ್ತೇನೆ ಎಂಬ ಕಾರಣಕ್ಕಾಗಿ ಕಳ್ಳ ಎಂದು ಬಣ್ಣಿಸುವುದು ಬಿಟ್ಟರೆ, ಪೊಲೀಸರು, ಮನಶ್ಯಾಸ್ತ್ರಜ್ಞರಿಗೂ ಸ್ಟೆಂಡಾಲ್ ಲಕ್ಷಣಗಳಾಗಲಿ ಇನ್ನಿತರ ಯಾವೊಂದು ಗಂಭೀರ ವಿಚಾರ ತಿಳಿಯುವುದಿಲ್ಲಘಿ. ಇಂಥ ತಜ್ಞರು, ಸುತ್ತಲಿನ ಇದೇ ತೆರನಾಗಿ ಯೋಚಿಸುವ ಸಮಾಜ, ಜನರ ಬಗ್ಗೆ ತನಗೆ ಹತಾಶೆಯಿದೆ ಎಂದು ಆತ ಹೇಳುತ್ತಾನೆ. ತನಗೆ ಏನನ್ನಿಸುತ್ತದೆ ಎಂಬ ಬಗ್ಗೆ ಆತನಿಗೇನೋ ಒಂದು ನಂಬುಗೆ ಇತ್ತು ನಿಜ, ಆದರೆ, ಅದನ್ನು ದೇಶದ ಕಾನೂನಿನ ಎದುರು ಸತ್ಯ ಎಂದು ಸಾಬೀತು ಮಾಡುವುದು ಮಾತ್ರ ಸಾಧ್ಯವಾಗಲಿಲ್ಲಘಿ. ಹಾಗೇ ನೋಡುತ್ತ ಗ್ರೂಯಿಏರ್ಸ್‌ ಕಾಸಲ್‌ನಲ್ಲಿ ಗೋಡೆದಿಬ್ಬಕ್ಕೆ ಹಾಕಿದ್ದ ಕಲಾವಿದ ಡೇರಿಕ್ ರಚಿಸಿದ ಮಹಿಳೆಯ ಮುಖಚಿತ್ರದ ಸಮೀಪ ಬಂದರು. ಅದನ್ನು ನೋಡುತ್ತ ಹತ್ತು ನಿಮಿಷ ತನಗೇನಾಗಿದೆ ಎಂಬುದೇ ತಿಳಿಯದೆ ದಿಗ್ಮೂಢನಾದ. ಅಷ್ಟಾದ ಬಳಿಕ ತಾನೇನು ಮಾಡಬೇಕು ಎಂದು ಆತನಿಗೆ ಹೊಳೆಯತೊಡಗಿತು. ಸಾಮಾನ್ಯವಾಗಿ ಪ್ರಾದೇಶಿಕ ಮ್ಯೂಸಿಯಂನಲ್ಲಿ ಸಿಸಿ ಟೀವಿಯನ್ನು ಹಾಕುವುದಿಲ್ಲಘಿ. ಒಂದಲ್ಲ ಒಂದೆಡೆ ಭದ್ರತಾ ವೈಫಲ್ಯ ಇದ್ದೇ ಇರುತ್ತದೆ. ಸಮೀಪದಲ್ಲಿ ಗಾರ್ಡ್‌ಗಳು, ಪೊಲೀಸರು ಯಾರೂ ಇಲ್ಲ ಎಂದು ತಿಳಿಯುತ್ತಲೇ, ಪೇಂಟಿಂಗ್ ಮೇಲೆ ನೆಟ್ಟ ದೃಷ್ಟಿಯನ್ನು ಕ್ರಮೇಣ ಸಡಿಲಿಸಿ ಪ್ರೇಯಸಿ ಅನ್ನೆ ಕ್ಯಾಥರೀನ್ ಕಡೆಗೆ ನೋಡಿ ಆಕೆಯ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿಯಲು ಪ್ರಯತ್ನಿಸಿದ. ಬ್ರೈಟ್ ವೈಸರ್ ಬಣ್ಣಿಸಿಕೊಳ್ಳುವಂತೆ ಸ್ಟೆಂಡಾಲ್ ಲಕ್ಷಣದ ರೀತಿಯಲ್ಲಿ ಅಲ್ಲದಿದ್ದರೂ, ಆತ ಖುಷಿಪಡುವ ಚಿತ್ರವನ್ನು ಆಕೆಯೂ ಆರಾಸುತ್ತಿದ್ದಳು. ಹಾಗೆ ನೋಡಿದರೆ, ಚಿತ್ರಕ್ಕಿಂತ ತನ್ನ ಇನಿಯನ ಆಸೆ ಆಕಾಂಕ್ಷೆಗಳಿಗೆ ಆಕೆ ಹೆಚ್ಚು ಒಲವನ್ನು ಹೊಂದಿರುತ್ತಿದ್ದಳು. ಎಂದಿನಂತೆ ಅನ್ನೆ ಕ್ಯಾಥರೀನ್ ಕಣ್ಣಿನಲ್ಲೇ ಮುಂದುವರಿಯಲು ಬ್ರೈಟ್‌ವೈಸರ್‌ಗೆ ಸನ್ನೆ ಮಾಡಿದಳು. ಗೋಡೆದಿಬ್ಬದಲ್ಲಿದ್ದ ಕಲಾಕೃತಿಯ ಬೆನ್ನಿಗೆ ಜೋಡಿಸಿದ್ದ ನಾಲ್ಕು ಹುಕ್ಕುಗಳನ್ನು ನಿಧಾನವಾಗಿ ಗೋಡೆಯಿಂದ ಬೇರ್ಪಡಿಸಿದ. ಸಾಮಾನ್ಯವಾಗಿ ಇಂಥ ಕೆಲಸಕ್ಕೆ ಸ್ವಿಸ್ ಚಾಕು ಬಳಕೆಯಾಗುತ್ತಿದ್ದಾರೂ ಇಲ್ಲಿ ಮಾತ್ರ ತನ್ನ ಕೈಯಲ್ಲಿದ್ದ ಕಾರಿನ ಚಾವಿಯನ್ನೇ ಚುಚ್ಚಿ ಚಿತ್ರವನ್ನು ಆಚೆ ಎಳೆದುಕೊಂಡು ತನ್ನ ಜಾಕೆಟ್ ಒಳಕ್ಕೆ ಸೇರಿಸೊಕೊಂಡ. ಗೋಡೆ ದಿಬ್ಬದಲ್ಲಿ ಕಾಣತೊಡಗಿದ ಬಳ್ಳಿಯನ್ನು ಹರಿದು ತೆಗೆದರೂ ಆ ಭಾಗವು ಖಾಲಿ ಖಾಲಿಯಾಗಿ ಏನೋ ಕಳವಾಗಿದೆ ಎಂಬ ಅಚ್ಚನ್ನು ಮಾತ್ರ ಅಳಿಸಿ ಹಾಕುವುದು ಆತನಿಗೆ ಸಾಧ್ಯವಾಗಲಿಲ್ಲಘಿ. ಜಾಕೆಟ್ ಒಳಗೆ ಕಾಣದಂತೆ ಅಮುಕಿದ್ದ ಕಲಾಕೃತಿ ಹೊತ್ತು ಅನ್ನೆ ಮತ್ತು ಬ್ರೈಟ್‌ವೈಸರ್ ಅಲ್ಲಿಂದ ಕಾಲಿಗೆ ಬುದ್ದಿ ಹೇಳಿದರು. ಇದು ಪ್ರೇಮಿಗಳು ಜತೆಯಾಗಿ ಮಾಡಿದ ಮೂರನೆ ಕಳವಾಗಿದ್ದರೂ, ಮೊಟ್ಟ ಮೊದಲ ಬಾರಿಗೆ ಅವರೊಂದು ಪೇಂಟಿಂಗ್ ಕದ್ದು ಹೊರಟಿದ್ದರು. ಮಧ್ಯಯುಗೀನ ಕಟ್ಟಡಗಳ ಗ್ರೂಯಿಏರ್ಸ್‌ ಹಳ್ಳಿಯ ಗಲ್ಲಿಗಳನ್ನು ದಾಟಿ, ತಾವು ಕಾರು ನಿಲ್ಲಿಸಿದ್ದ ಜಾಗಕ್ಕೆ ಪ್ರೇಮಿಗಳು ಬಂದರು. ಕಾರಿನಲ್ಲಿ ಇಟ್ಟಿದ್ದ ಸೂಟ್ ಕೇಸ್‌ನಲ್ಲಿ ಪೇಂಟಿಂಗ್ ಅಡಗಿಸಿದರು. ತಕ್ಷಣ ಚಿತ್ರವನ್ನು ನೋಡಿ ಕೊಂಡಾಡುವ ಬದಲು, ಒಮ್ಮೆ ಸುರಕ್ಷಿತ ಸ್ಥಳಕ್ಕೆ ಹೋಗಬೇಕಿತ್ತುಘಿ. ಅದಕ್ಕೂ ಮೊದಲು ಜಾರು ಕೋಲಿನ ಆಟವನ್ನು ಆಡಿ, ಊರಿಗೆ ಹೋದ ಮೇಲೆಯೇ ಪೇಂಇಂಗ್ ತೆರೆದು ನೋಡೋಣ ಎಂದು ಕಾರಿನ ಚಲನೆಯಲ್ಲಿ ಪ್ರೇಮಿಗಳು ಲೀನವಾದರು.
Read More

ಆರ್ಟ್‌ ಥೀಫ್ ಧಾರಾವಾವಾಹಿ -೬

ಆರ್ಟ್‌ ಥೀಫ್ ಧಾರಾವಾವಾಹಿ -೬
ಪ್ರದರ್ಶನಕ್ಕಿಟ್ಟ ಫಲಕದ ಚಿಲಕ ಸರಿಸಿದ ಆತ ಪಿಸ್ತೂಲನ್ನು ನಿಧಾನವಾಗಿ ಕಿತ್ತು ತನ್ನ ಬೆನ್ನಿನ ಚೀಲಕ್ಕೆ ತುರುಕಿಕೊಂಡ. ಱಆ ಕ್ಷಣದಲ್ಲಿ ಭಯದಿಂದ ನಡುಗುತ್ತಿದ್ದೆೞೞಎಂದು ಬ್ರೈಟ್‌ವೈಸರ್ ಸ್ಮರಿಸಿಕೊಳ್ಳುತ್ತಾನೆ. ತಾವು ಎಸಗಿದ ಕೃತ್ಯದ ಪರಿಣಾಮೇನಾದೀತು ಎಂಬುದರ ಬಗೆ ಏನೊಂದು ಆಲೋಚಿಸದೆ, ಬ್ರೈಟ್‌ವೈಸರ್ ಹಾಗೂ ಅನ್ನೆ ಕ್ಯಾತರೀನ್ ಮ್ಯೂಸಿಯಂನಿಂದ ಚುರುಕಾಗಿ ಕಾಲಿಗೆ ಬುದ್ಧಿ ಹೇಳಿದರು. ಕಂಪೌಂಡಿನಿಂದ ನುಸುಳಿ, ಸುಡುಬಟ್ಟಿಯ ಘಟಕ ದಾಟಿ, ಹಾಗೆಯೇ ಗೋದಿ ಹೊಲವದ ಮೂಲಕ ದೌಡಾಯಿಸುತ್ತಿರುವಾಗ, ಎಲ್ಲಿ ಎಚ್ಚರಿಕೆ ಸೈರನ್ ಕಿರುಚೀತು ಎಂಬ ಭಯ ಅವರಲ್ಲಿ ಇತ್ತುಘಿ. ಱನನಗೆ ಒಂದೆಡೆ ಜೋರಾಗಿ ಎದೆ ಹೊಡೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಮನಸ್ಸು ಹಳ್ಳ-ಹುಳ್ಳಗೆ ಆಗುತ್ತಿತ್ತುೞೞ ಎನ್ನುವ ಆತ, ಅಡೆತಡೆ ಇಲ್ಲದೆ ಅಂದು ತಮ್ಮ ಅಪಾರ್ಟ್‌ಮೆಂಟ್‌ಗೆ ಬಂದು ತಲುಪಿದ್ದರು. ಕೊಠಡಿಗೆ ಬಂದವನೆ ಬೆನ್ನು ಚೀಲದಲ್ಲಿದ್ದ ಪಿಸ್ತೂಲ್ ಹೊರತೆಗೆದು ಒಮ್ಮೆ ಇಂಚು ಇಂಚನ್ನೂ ಪರಾಂಬರಿಸಿ ನೋಡಿದ. ಲಿಂಬೆ ಹುಳಿಯನ್ನು ಕೈ ಪಾತ್ರೆಯಲ್ಲಿ ತೆಗೆದುಕೊಂಡು, ಬಟ್ಟೆಯಿಂದ ಪಿಸ್ತೂಲಿನ ಲೋಹಭಾಗವನ್ನೆಲ್ಲ ನಿಧಾನವಾಗಿ ಒರೆಸಿದಾಗ, ಮತ್ತಷ್ಟು ಹೊಸ ಹೊಳಪಿನಿಂದ ಮಿಂಚುತ್ತಿತ್ತುಘಿ. ಇದನ್ನೆಲ್ಲ ತಾನು ಚಂದಾದಾರನಾದ ಕಲಾ ಪಾಕ್ಷಿಕವೊಂದರ ಅಂಕಣದಲ್ಲಿ ಕೊಟ್ಟ ಟಿಪ್ಟ್ ಓದಿ, ಇಲ್ಲಿ ಪ್ರಯೋಗ ಮಾಡಿದ್ದಾಗಿತ್ತುಘಿ. ಹೊಸದಾಗ ಸೇರ್ಪಡೆಯಾದ ಪಿಸ್ತೂಲ್, ಮಾಲಿಶ್‌ನಿಂದ ರೂಮಿನಲ್ಲಿ ಮತ್ತಷ್ಟು ಎದ್ದು ಕಾಣತೊಡಗಿತು. ಆಗಷ್ಟೇ ಐಕಿಯಾ ಬ್ರ್ಯಾಂಡಿನಿಂದ ವಿನ್ಯಾಸಗೊಂಡ ಕೊಠಡಿಯ ಒಳಾಂಗಣವೂ ಪಿಸ್ತೂಲಿನ ಹೊಳಪಿನಲ್ಲಿ ಸದರಾಗಿ ಕಾಣತೊಡಗಿತು. ಮ್ಯೂಸಿಯಂ ಆಗಿದ್ದರೆ, ಅಲ್ಲಿ ಪಿಸ್ತೂಲನ್ನು ಕದ್ದು ಮುಚ್ಚುವ ಪ್ರಶ್ನೆ ಬರುತ್ತಲೇ ಇರಲಿಲ್ಲಘಿ. ಒಂದು ರೀತಿಯಲ್ಲಿ ಗುದ್ದೋಡು ಪ್ರಕರಣದ ರೀತಿಯಲ್ಲಿ, ಪಿಸ್ತೂಲ್ ಎಗರಿಸಿದ್ದೂ ಕೂಡ ಎಲ್ಲೊ ಒಂದು ಪ್ರಚೋದನೆಗೆ ಹೇತುವಾಗಬಹುದು. ಕದ್ದುಘಿ, ತರುವಾಗ ಏನೆಲ್ಲ ಸಾಕ್ಷಿಯ ಎಳೆಯನ್ನು ಅಲ್ಲಿ ಬಿಟ್ಟಿರಬಹುದು. ಯಾವುದೊ ಒಂದು ಎಳೆಯು ಪೊಲೀಸರನ್ನು ಎಳೆದು ತನ್ನ ಮನೆಯ ಬಾಗಿಲಿಗೆ ತಂದು ನಿಲ್ಲಿಸಿದರೆ...ಅದೆಲ್ಲ ಉಸಾಬರಿಯೇ ಬೇಡ ಎಂದು ಒಮ್ಮೆ ಇಬ್ಬರೂ, ವಾಪಸ್ ಇದ್ದ ಜಾಗದಲ್ಲೇ ಇಟ್ಟು ಬಂದು ಬಿಡೋಣ ಎಂದುಕೊಳ್ಳುವಷ್ಟು ಭಯಪಟ್ಟರು. ಮರು ಕ್ಷಣವೇ ಅವಸರ ಬೇಡ ಎಂದು ಕಿಮ್ ಕರ್ತವ್ಯ ಮೂಢರಾದರು. ಆ ಇಡೀ ವಾರವೂ, ಪತ್ರಿಕೆಗಳ ಅಪರಾಧ ಅಂಕಣದಲ್ಲಿ ಎಲ್ಲಾದರೂ, ಪಿಸ್ತೂಲ್ ಕಳವು ಸುದ್ದಿ ಬಂದಿದೆಯೆ ಎಂದು ಆರೆಂಟು ದಿನ ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರು. ಒಮ್ಮೊಮ್ಮೆ ಬಾಗಿಲು ಬಡಿದ ಶಬ್ದವಾದಂತೆ ಕೇಳಿ ಒಳಗೊಳಗೆ ಮುಖ ಮುಖ ನೋಡಿಕೊಳ್ಳುತ್ತಿದ್ದರು. ದಿನ ಕಳೆದಂತೆ ಭಯವು, ಒತ್ತಡ ರೂಪ ತಳೆದು, ನಿಧಾನವಾಗಿ ಸರಿಹೋಯಿತು. ಕ್ರಮೇಣ ಯುದ್ಧ ಗೆದ್ದ ಅನುಭವವಾಗಿ ಮನಸ್ಸಿಗೆ ಸಮಾಧಾನ ಆಯಿತು. ಕದ್ದ ಪಿಸ್ತೂಲ್ ಎಷ್ಟೊಂದು ಆಕರ್ಷಕವಾಗಿತ್ತು ಎಂದರೆ, ಹೆಚ್ಚು ದಿನ ಅದನ್ನು ಟ್ರಂಕಿನ ಒಳಕ್ಕೆ ಹುದುಗಿಸಿ ಇಡುವುದಕ್ಕೆ ಮನಸ್ಸೇ ಬರಲಿಲ್ಲಘಿ. ಪಿಸ್ತೂಲ್ ಕದ್ದ ಬಳಿಕ, ಅಪ್ಪನೊಂದಿಗೆ ಯದ್ಧ ಗೆದ್ದ ಹೆಮ್ಮೆಯಲ್ಲಿದ್ದ ಬ್ರೈಟ್‌ವೈಸರ್ ಅದನ್ನು ತಲೆ ದಿಂಬಿನಲ್ಲೇ ಇಟ್ಟು ಮಲಗುತ್ತಿದ್ದಘಿ. ಕೆಲವೊಮ್ಮೆ ರಾತ್ರಿ ಕತ್ತಲಿನಲ್ಲಿ ಹೊರ ತೆಗೆದು ಅದನ್ನು ಮುದ್ದಿಸಿಬಿಡುವಷ್ಟು ಹುಚ್ಚನಾಗಿದ್ದಘಿ. ಮನೆಬಿಟ್ಟು ಹೋಗುವಾಗ, ಅಲ್ಲಿದ್ದ ಪಿಸ್ತೂಲನ್ನೂ ಹಿಡಿದು ಹೋಗಿದ್ದ ತಂದೆ ಪ್ರತ್ಯಕ್ಷವಾದರೆ, ಆತನ ಎದುರು ಪಿಸ್ತೂಲ್ ಹಿಡಿದು ಕುಣಿದಾಡುವಷ್ಟು ಹುಚ್ಚು ಅತನಲ್ಲಿ ಒತ್ತರಿಸುತ್ತಿತ್ತುಘಿ. ಇತ್ತ ಅನ್ನೆ ಕ್ಯಾತರೀನ್‌ಗೆ ಒಲವು ಹಾಗೂ ಕಳವು ಎರಡಕ್ಕೂ ಸಲ್ಲುವ ಸಂಗಾತಿಯೊಬ್ಬ ಸಿಕ್ಕ ಹೆಮ್ಮೆಯಾಗಿದ್ದರೆ, ಇಬ್ಬರಿಗೂ ಪರಸ್ಪರರ ಆತ್ಮ ಬಂದುವಿನ ಜತೆಯಾದ ಖುಷಿ ಆಗಿತ್ತುಘಿ. ಪಿಸ್ತೂಲ್ ಕಳವಿನ ಕಾರ್ಮೋಡದ ದಿನಗಳು ಕಳೆದು ಕೆಟ್ಟ ಗಾಳಿಯು ಹೊರಟು ಹೋದ ಬಳಿಕ, ಒಂದು ಬಗೆಯ ಸ್ವಾತಂತ್ರ್ಯದ ಹಮ್ಮು ಅವರಲ್ಲಿ ಮೂಡತೊಡಗಿತು. ಕೆಲವೊಮ್ಮೆ ಯಬಡಾಸ್ ವರ್ತನೆಗಳು ಕಂಡರೂ, ಬ್ರೈಟ್‌ವೈಸರ್‌ಗೆ ಪಿಸ್ತೂಲ್ ಕಳವಿನ ಘಟನೆಯನ್ನು ದಕ್ಕಿಸಿಕೊಳ್ಳುವ ವಿಶ್ವಾಸ ಹುಟ್ಟಿತು. ಹರಾಜಿನಲ್ಲಿ ಪಿಸ್ತೂಲ್ ಪಡೆಯುವ ವಿಚಾರವನ್ನು ಕಸದ ಬುಟ್ಟಿಗೆ ಎಸೆದ ಬ್ರೈಟ್‌ವೈಸರ್, ಮತ್ತೆ ತನ್ನ ದೈನಂದಿನ ಆಲೋಚನಾ ಲಹರಿಗೆ ಮರಳಿದ. ಇದಾದ ಒಂಭತ್ತು ತಿಂಗಳು ಕಳೆದ ನಂತರ, ೧೯೯೫ರ ಫೆಬ್ರವರಿಯಲ್ಲಿ ವಾತಾವರಣದಲ್ಲಿ ತುಸು ಚಳಿ ಏರುತ್ತಲೇ, ಇನ್ನೊಂದು ಘಟನೆ. ಆಲ್ ಸೇಶನ್ ಬೆಟ್ಟ ಸಾಲಿನ ಕಣಿವೆ ಮಾರ್ಗದಲ್ಲಿ ಪ್ರೇಮಿಗಳು ಒಂದು ಪ್ರವಾಸವನ್ನು ಏರ್ಪಡಿಸಿದರು. ಆ ಪ್ರದೇಶದಲ್ಲಿ ಇಪ್ಪತ್ತನೇ ಶತಮಾನದಲ್ಲಿ ನಿರ್ಮಿಸಲಾದ ಮುರಾಕಲ್ಲಿನ ಕೊಟೆಯಂಥ ಕ್ಯಾಸಲ್ ಇರುವುದನ್ನು ತಿಳಿದ ಪ್ರೇಮಿಗಳು, ಅಲ್ಲಿಗೆ ಹೊರಟರು. ಹಿಂದೆ ಆ ಮಾರ್ಗದಲ್ಲಿ ಉಪಖಂಡದ ವ್ಯಾಪಾರಿಗಳು ಗೋದಿ, ಉಪ್ಪುಘಿ, ಚಿನ್ನ-ಬೆಳ್ಳಿಯನ್ನೂ ಸಗಟಾಗಿ ಸಾಗಿಸುತ್ತಿದ್ದ ಕಾರಣ, ಅವರ ವಾಸ್ತವ್ಯಕ್ಕಾಗಿ ನಿರ್ಮಾಣವಾದ ಹೊಟೇಲ್, ದಶಕಗಳ ಹಿಂದೆ ಅದನ್ನು ಮ್ಯೂಸಿಯಂ ರೂಪದಲ್ಲ ಪರಿವರ್ತಿಸಿದ್ದರು. ಆ ಭಾಗದಲ್ಲಿ ಈ ಹಿಂದೆ ಪ್ರವಾಸಕ್ಕೆ ಹೋಗಿದ್ದಾಗ, ಹಲವುಬಾರಿ ಮ್ಯೂಸಿಯಂ ಸಂದರ್ಶಿಸಿದ್ದ ಬ್ರೈಟ್‌ವೈಸರ್‌ಗೆ ಅಲ್ಲಿದ್ದ ಕೆಲವು ವಸ್ತುಗಳ ಮೇಲೆ ಕಣ್ಣು ಹಾಕಿದ್ದಘಿ. ಒಂದೆಡೆ ವಾತಾವರಣದ ಚಳಿಯು ಫ್ರಿಜ್‌ನಲ್ಲಿಟ್ಟ ಅನುಭವ ಕೊಡುತ್ತಿದ್ದರೆ, ಚಳಿಗಾಲವಾಗಿರುವುದರಿಂದ ಕ್ಯಾಸಲಿನೋ ಚಿಮಣಿಗೆ ಎಷ್ಟು ಬೆಂಕಿ ಹೆಟ್ಟಿದರೂ ಕಾಯುವುದಿಲ್ಲ ಎಂದು ಗೊಣಗುತ್ತ ಱನೀವು ತುಂಬ ಯೋಜಿಸಿ ಬಂದಂತಿದೆ ೞ ಎಂದು ಟಿಕೆಟ್ ಕೌಂಟರ್‌ನಲ್ಲಿ ಕ್ಯಾಶಿಯರ್ ಹೇಳಿದಳು. ಈ ಭಾಗದಲ್ಲಿ ಛಳಿ ಹೆಚ್ಚಾಗಿರುವುದರಿಂದ ಪ್ರವಾಸಿಗರು ಹೆಚ್ಚಾಗಿ ಇರುವುದಿಲ್ಲ ಎಂಬ ಕಾರಣದಿಂದಲೇ ತಾವು ಜೋಡಿಯಾಗಿ ಬಂದಿದ್ದು ಮಾರಾಯ ಎಂದು ಬ್ರೈಟ್‌ವೈಸರ್ ತನ್ನೊಳಗೇ ಉತ್ತರಿಸಿಕೊಂಡ. ಒಂದೆಡೆ ವಿಷಾಲವಾದ ಮ್ಯೂಸಿಯಂ, ವಿಶೇಷವಾಗಿ ಪ್ರವಾಸಿಗರ ಒತ್ತಡವೂ ಇಲ್ಲದ ಅವಯಲ್ಲಿ ಕಳವು ಮಾಡಲು ಪ್ರಶಸ್ತವಾಗಿರುತ್ತದೆ ಎಂಬುದು ಬ್ರೈಟ್‌ವೈಸರ್ ಲೆಕ್ಕಾಚಾರ. ಅಂದು ಪಿಸ್ತೂಲ್ ಕದಿಯುವಾಗ ನೇರಿಸಿಕೊಂಡಿದ್ದ ಬೆನ್ನು ಚೀಲವನ್ನೇ ಬ್ರೈಟ್ ವೈಸರ್ ಹಾಕಿಕೊಂಡಿದ್ದರೆ, ಅನ್ನೆ ಕ್ಯಾತರೀನ್ ಒಂದು ದೊಡ್ಡ ಬಗಲಿ ಚೀಲವನ್ನು ಹಾಕಿಕೊಂಡಿದ್ದಳು. ಏನೋ ಹುಡುಕುತ್ತಿದ್ದ ಬ್ರೈಟ್‌ವೈಸರ್‌ಗೆ ಮ್ಯೂಸಿಯಂ ಒಳಾಂಗಣದಲ್ಲಿದ್ದಾಗಲೇ ತಾನು ಚಿಕ್ಕವನಿದ್ದಾಗಲೇ ಗುರುತಿಸಿದ್ದ ಸಜ್ಜು ಬಿಲ್ಲು ಕಣ್ಣಿಗೆ ಬಿತ್ತುಘಿ. ಬಿಲ್ಲು ಬಾಣಗಳಿಂದ ಯುದ್ಧ ಎಂಬುದು ಈಗಿನ ದಿನಗಳಲ್ಲಿ ಪುರಾಣದ ಕತೆಯೇ ಆಗಿದ್ದರೂ, ಹಳೆಯದಾದ ಯುದ್ಧಗಳನ್ನು ನೋಡಿದರೆ ಪ್ರತಿಯೊಬ್ಬರಿಗೂ ರೋಮಾಂಛನ ಆಗುತ್ತದೆ. ಈ ಹಿಂದೆ ಅಮ್ಮಜ್ಜನ ಪ್ರಾಚ್ಯ ಸಂಶೋಧನೆಯ ಸಂಗ್ರಹಗಳಿಗೆ ಭೇಟಿ ನೀಡಿದ್ದಾಗ, ಒಂದೆರಡು ಕಡೆ ಮುರುಕಲು ಸಜ್ಜುಬಿಲ್ಲುಗಳು ಕಂಡಿದ್ದಿದೆ. ಚೂರೂ ಮುಕ್ಕಾಗದ ಸಜ್ಜುಬಿಲ್ಲನ್ನು ಕಂಡಾಗಲೆಲ್ಲ ಆತನಿಗೆ ಭಾವ ಉಕ್ಕಿ ಬರುತ್ತಿತ್ತುಘಿ. ಇಲ್ಲಿನ ಮ್ಯೂಸಿಯಂನಲ್ಲಿ ಸಜ್ಜು ಬಿಲ್ಲನ್ನು ಸೀಲಿಂಗ್‌ನಿಂದ ಇಳಿಬಿಟ್ಟ ದಾರಕ್ಕೆ ತೂಗಿ ಜೋಡಿಸಿ ಇಡಲಾಗಿತ್ತುಘಿ. ವಾಲ್ನಟ್ ಮರ ಮತ್ತು ಮೂಳೆಯಿಂದ ಮಾಡಿ, ಅದರ ಮೇಲೆ ಗರುಢದ ಕುಸುರಿ. ಬಿಲ್ಲಿಗೆ ಗಟ್ಟುಮುಟ್ಟಾದ ಚರ್ಮದ ಹುರಿಯಿಂದ ಎಳೆದು ಹೆದೆಯೇರಿಸಿದ್ದರು. ಕಣ್ಣಿಗೆ ಕುಕ್ಕುತ್ತಿದ್ದರೂ, ಬಿಲ್ಲು ಮಾತ್ರ ಹತ್ತು ವರ್ಷ ಹಿಂದೆ ಕಂಡಂತೆ ಈಗಲೂ ಕೈಗೆಟುಕುವುದು ಮಾತ್ರ ದುಸ್ತರ. ಬ್ರೈಟ್‌ವೈಸರ್ ಆ ನಿಟ್ಟಿನಲ್ಲಿ ಚಾಲಾಕಿ ಐಡಿಯಾಗಳ ಕಳ್ಳಘಿ.ಈತನ ಕಸುಬು ಮುಂದೆ ಜೈಲಿಗೆ ನೂಕಿದರೂ, ಕಳವಿನ ಸಂದರ್ಭ ಮಾತ್ರ ಈತನಿಗೆ ಅದೆಲ್ಲಿಯ ಯೋಜನೆ ಬರುತ್ತದೊ ಗೊತ್ತಿಲ್ಲಘಿ. ಪ್ರವಾಸಿಗರು, ಗಾರ್ಡ್‌ಗಳು ಯಾರೂ ಇಲ್ಲವೆಂದು ಕಣ್ಣಿನಲ್ಲೇ ಅಳೆಯುತ್ತಘಿ, ತಡ ಮಾಡದೆ ಅಲ್ಲಿಯೇ ಇದ್ದ ಒಂದು ಕುರ್ಚಿಯನ್ನು ಎಳೆದು ತಂದುಸಜ್ಜು ಬಿಲ್ಲಿನ ಕೆಳಕ್ಕೆ ಇಟ್ಟುಕೊಂಡ. ಅನ್ನೆ ಕ್ಯಾಥರೀನ್ ಬಾಗಲನ ಹತ್ತಿರ ನಿಂತು, ಗಾರ್ಡ್‌ಗಳಾಗಲಿ ಅಥವಾ ಇತರ ಟೂರಿಸ್ಟ್‌ಗಳ ಸುಳಿವನ್ನೆ ನೋಡುತ್ತಿದ್ದಳು. ತಡ ಮಾಡದೆ, ಕುರ್ಚಿಯ ಮೇಲೆ ನಿಂತು, ತೂಗುತ್ತಿದ್ದ ಬಿಲ್ಲನ್ನು ಜೋರಾಗಿ ಎಳೆದು ಕಿತ್ತುಕೊಂಡ. ಬಿಲ್ಲು ಕೈಗೆ ಬೀಳುತ್ತಿದ್ದಂತೆ, ಅದರಘನತೆಯ ಅನುಭವ ಗೊತ್ತಾಗತೊಡಗಿತು. ಮೈ ಹುರಿಗೊಳಿಸಿದ ಬಿಲ್ಗಾರ ಮಾತ್ರ ಬಳಸಬಹುದಾದ ಪುರಾತನ ಯುದ್ಧ ಪರಿರವನ್ನು ತಕ್ಷಣ ಬೆನ್ನು ಚೀಲ ಅಥವಾ ವೆನಿಟಿ ಚೀಲದಲ್ಲಿ ತುರುಕುವಂತೆ ಇರಲಿಲ್ಲಘಿ. ಹರಿದು ಹಿಡಿದಿದ್ದಾನೆ, ಇದೀಗ ತಿಳಿಯದಂತೆ ಹೊರಕ್ಕೆ ಸಾಗಿಸುವುದು ಹೇಗೆಂದು ಇನ್ನೊಂದು ಯೋಜನೆ ರೂಪಿಸಬೇಕದೆ. ಮ್ಯೂಸಿಯಂಗೆ ಬೃಹತ್ ಕದಗಳಿರುವ ಕಿಟಕಿಗಳಿರುವುದನ್ನು ಗೃಹಿಸಿ ಅಲ್ಲಿಂದ ಜಿಗಿಯಬಹುದು ಎಂದು ಕದ ದೂಡಿ ಹೊರಕ್ಕೆ ಇಣುಕಿದ. ಆಚೆ ಎರಡು ಮಹಡಿಯ ಆಳದಲ್ಲಿ ಕಲ್ಲಿನ ಹಾಸು ಇದ್ದ ಕಾರಣ, ಜಿಗಿದರೆ ಕಾಲು ಮುರಿಯುತ್ತದೆ. ಇದು ಸರಿ ಹೋಗಲಿಕ್ಕಿಲ್ಲ ಎಂದು ಬಿಲ್ಲನ್ನು ಹಿಡಿದು ಪಕ್ಕದ ಕೊಠಡಿಎ ಹೋಗಿ ಹೊರಕ್ಕೆ ಜಿಗಿಯಬಹುದಾದಾದ ಇನ್ನೊಂದು ಕಿಟಕಿಯಲ್ಲಿ ಇಣುಕಿ ಕೆಳಕ್ಕೆ ನೋಡಿದ. ನೆಲದಲ್ಲಿ ಕುರುಚಲು ಸಸ್ಯ -ಹುಲ್ಲು ಹಾಸು, ಉದ್ಯಾನ ಇರುವ ಕಾರಣ, ಹಿಂದೆ ಮುಂದೆ ನೋಡದೆ, ಬಿಲ್ಲು ಹಿಡುದು ಮಹಡಿಯಿಂದ ಕೆಳಕ್ಕೆ ಹಾರಿಯೇ ಬಿಟ್ಟಘಿ. ಆತನೊಟ್ಟಿಗೇ ಧೈರ್ಯ ಮಾಡಿ ಅನ್ನೆ ಕ್ಯಾಥರೀನ್ ಕೂಡ ಲೀಲಾಜಾಲವಾಗಿ ಜಿಗಿದಳು. ಅಲ್ಲಿನ ದೃಶ್ಯ ನೋಡಿದರೆ, ಇಬ್ಬರು ಯೋಧರು ಬಿಲ್ಲು ಹಿಡಿದು ಯುದ್ಧಕ್ಕೆ ಹೊರಟಂತೆ ಕಾಣುತ್ತಿತ್ತು ! ಉದ್ಯಾನದಲ್ಲಿ ಕಾವಲಿದ್ದ ಗಾರ್ಡ್‌ಗಳ ಭಯ ಹಾಗೇ, ಒಳಗೆ ಕೊಠಡಿಯಲ್ಲಿ ಹರಿದು ಜೋತು ಬಿದ್ದ ವಯರ್ ಎರಡೂ ಕಾರಣಕ್ಕೆ ಅವರು ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಬೇಕಿತ್ತುಘಿ. ಕಾಲ ಹರಣ ಮಾಡದೆ, ಹಿಂಬದಿಯ ಬೆಟ್ಟದ ಮೂಲಕ ಬ್ರೈಟ್ ವೈಸರ್ ಸಿಕ್ಕ ಮಾರ್ಗದಲ್ಲಿ ಕ್ಯಾಸಲ್ ಆವರಣದಿಂದ ಹೊರಕ್ಕೆ ಬಂದರೆ, ಅನ್ನೆ ಕ್ಯಾಥರೀನ್ ಬಂದ ಹಾದಿಯಲ್ಲೇ ಹಿಂದಿರುಗಿ ಕಾರಿನಲ್ಲಿ ಕಾಯುತ್ತಿದ್ದಳು. ಬೆಟ್ಟ ಗುಡ್ಡಗಳನ್ನು ಸುತ್ತಿ ಚಾರಣ ಮಾಡಿ ಅರಿವಿರುವ ಬ್ರೈಟ್‌ವೈಸರ್, ಬಿಲ್ಲಿಗೆ ಒಂದಿಷ್ಟು ಮುಕ್ಕಾಗದ ರೀತಿಯಲ್ಲಿ ಸಾಗಿಸಿ ಕಾರ ಇದ್ದ ಜಾಗಕ್ಕೆ ತಂದ. ಮತ್ತೆಲ್ಲೂ ಇಳಿಯದೆ ಮನೆ ತಲುಪಿದ ಪ್ರೇಮಿಗಳು ಒಮ್ಮೆ ನಿರಾಳ ಅನುಭವಿಸಿದರೂ, ವಾರದ ಕಾಲ ಈ ಹಿಂದಿನ ಪಿಸ್ತೂಲ್ ಘಟನೆಯಂತೆ ಒಳಗೊಳಗೆ ಹೆದರಿಕೆ ಇದ್ದೇ ಇತ್ತುಘಿ. ಈ ಬಾರಿ ಮಾತ್ರ ಸಜ್ಜಾ ಬಿಲ್ಲು ಕಳವಾಗಿದ್ದ ಸ್ಥಳೀಯ ಲಾಲ್ಸೇಕ್ ಪತ್ರಿಕೆಯಲ್ಲಿ ಫೋಟೊ ಸಹಿತ ಸುದ್ದಿಯಾಗಿ ಪ್ರಕಟವೂ ಆಯಿತು. ತಾವು ಕಳವು ಮಾಡಿದ ದಿನ ಘಟನೆಯು ಅರಿವಿಗೆ ಬಂದಿಲ್ಲಘಿ, ಹಾಗೆಯೇ ಪೊಲೀಸರಿಗೆ ನಿದಿಷ್ಠ ವ್ಯಕ್ತಿಗಳ ಬಗ್ಗೆ ಸಂದೇಹದ ಎಳೆಯೂ ಸಿಕ್ಕಿರಲಿಲ್ಲ ಎಂಬುದು ಸುದ್ದಿ ಪತ್ರಿಕೆಯ ವರದಿಯಿಂದಲೇ ಬ್ರೈಟ್‌ವೈಸರ್‌ಗೆ ತಿಳಿಯುತ್ತದೆ. ಅಪರಾಧ ವರದಿಯಲ್ಲಿ ಕಳ್ಳನ ಬಗ್ಗೆ ಏನೊಂದು ಸುಳಿವು ಕಾಣದಿರುವುದು ತುಸು ನಿರಾಳವಾಗಿ, ಪತ್ರಿಕಾ ತುಣುಕನ್ನು ಹಳೆಯ ಪುಸ್ತಕವೊಂದರಲ್ಲಿ ಹುದುಗಿಸಿ ಆಚೆ ಇಟ್ಟಘಿ. ನಾಲ್ಕಾರು ದಿನದಲ್ಲೇ ಮತ್ತೊಂದು ಯುದ್ಧ ಗೆದ್ದ ಅನುಭವ ಪಡೆದ ಕಳ್ಳ ಪ್ರೇಮಿಗಳು, ಈ ಬಾರಿ ಒತ್ತಡದಿಂದ ಖುಷಿಯ ನಿರಾಳತೆಗೆ ಮರಳಲು ಹಿಂದಿನಷ್ಟು ದೀರ್ಘ ಸಮಯ ಹಿಡಿಯಲಿಲ್ಲಘಿ. ಆ ಹೊತ್ತಿಗಾಗಲೇ ಬ್ರೈಟ್‌ವೈಸರ್‌ನ ಪಾಲಕರ ವಿವಾಹ ವಿಚ್ಚೇದನವೂ ಇತ್ಯರ್ಥವಾಗಿತ್ತುಘಿ. ವಿಚ್ಚೇದನದಿಂದ ತನಗೆ ಸಿಕ್ಕ ಹಣದಿಂದ ನಗರದ ಹೊರ ವಲಯದಲ್ಲಿ ಒಂದು ಮನೆಯನ್ನು ಖರೀದಿಸಿದ ಆತನ ತಾಯಿ, ಹೊಸ ಮನೆಯಲ್ಲಿ ಮಗ ಮತ್ತವನ ಪ್ರೇಯಸಿಗೆ ಇರಲು ಪ್ರತೇಕ ಕೊಠಡಿಯಲ್ಲಿಯೇ ಅವಕಾಶ ನೀಡಿದಳು. ಅಷ್ಟೇ ಅಲ್ಲಘಿ, ಜೋಡಿಗೆ ಆಗಾಗ ಅಡುಗೆಯನ್ನೂ ಮಾಡಿ ಬಡಿಸುತ್ತಿದ್ದಳು. ಆತನ ತಾಯಿ ಕೆಲವೊಮ್ಮೆ ಸಿಡಿಮಿಡಿಗೊಳ್ಳುತ್ತಿದ್ದರೂ, ವೃತ್ತಿಪರವಾಗಿ ಶಿಶು ಆರೈಕೆ ಮಾಡುವ ಆಯಾ ಆಗಿದ್ದರಿಂದ ಲಾಲನೆಯ ಗುಣವು ಆಕೆಗೆ ಸಹಜವೇ ಅಗಿತ್ತುಘಿ. ಹಾಗಾಗಿ ಯಾವೊಂದು ವಿಚಾರದಲ್ಲೂ ಮಗನಿಗೆ ಖಡಕ್ ಆಗಿ ಹೇಳುತ್ತಿರಲಿಲ್ಲಘಿ. ‘‘ ಊಟದ ಹೊತ್ತು ಬಿಟ್ಟರೆ, ನಾನು ಮತ್ತು ತಾಯಿ ಪ್ರತ್ಯೇಕವಾಗಿಯೇ ಬದುಕುತ್ತಿದ್ದೆವು’’ ಎನ್ನುವ ಬ್ರೈಟ್‌ವೈಸರ್ ಬಿಡುವಿನ ಸಮಯದಲ್ಲಿ ತನ್ನ ಚಲನವಲನದ ಬಗ್ಗೆ ಆಕೆ ಎಂದೂ ವಿಚಾರಿಸಿದ್ದೇ ಇಲ್ಲ ಎನ್ನುತ್ತಾನೆ. ಹೊಸ ಮನೆಯ ಪ್ರವೇಶದ ಖುಷಿಯಲ್ಲಿ ಬ್ರೈಟ್‌ವೈಸರ್‌ಗೆ ಅಮ್ಮಜ್ಜನಿಂದ ಒಂದು ದುಬಾರಿ ಪಲ್ಲಂಗದ ಉಡುಗೊರೆಯೂ ಬಂದಿತ್ತುಘಿ. ಅದಕ್ಕೆ ಬ್ರೈಟ್‌ವೈಸರ್ ಮತ್ತು ಅನ್ನೆ ಆಲೋಚಿಸಿ ಅದಕ್ಕೆ ಸರಿಹೊಂದುವ ವೆಲ್ವೆಟ್ ಮತ್ತು ಸಿಲ್ಕ್‌ನ ಒಂದು ಪರದೆಯನ್ನು ತಂದು ಮತ್ತಷ್ಟು ಆಕರ್ಷಕಗೊಳಿಸಿದರು. ಈ ಹಂತದಲ್ಲಿ ಸಿನಿಮಾ ಪ್ರೇಮಿಗಳ ಪೋಸ್ಟರ್, ಇಕಿಯಾ ಕಂಪೆನಿಯ ಸಾದಾ ಮಂಚವೆಲ್ಲ ಸ್ಥಳಾಂತರಗೊಂಡು ಆ ಜಾಗಗಳಲ್ಲಿ ಅವರ ಇತ್ತೀಚನ ಸೇರ್ಪಡೆಗಳನ್ನು ಅಲಂಕರಿಸಿಕೊಂಡರು. ಫ್ಲಂಟಾಕ್ ಪಿಸ್ತೂಲು ಹಾಗೂ ಸಜ್ಜುಬಿಲ್ಲನ್ನು ಪಲ್ಲಂಗದ ಪಕ್ಕದಲ್ಲೇ ಜೋಡಿಸಿದರು. ಖಾಲಿ ಇರುವ ಕೊಠಡಿಯ ಗೋಡೆಗೆ ಏನೇನು ಇರಬೇಕು ಎಂಬ ಅವರ ಕನಸು ಪೂರ್ಣ ಸಾಕಾರಗೊಳ್ಳಲು ಇನ್ನೂ ಸಾಕಷ್ಟು ಆರ್ಟಿಕಲ್‌ಗಳು ಬೇಕಿವೆ ನಿಜ. ತನಗೆ ಪ್ಯಾರಿಸಿನ ಲಾರ್ರ‌್ವ ಮ್ಯೂಸಿಯಂನ ವಾತಾವರಣ ಅಲ್ಲೆಲ್ಲ ನೆನಪಿಗೆಬರತೊಡಗಿತು ಎನ್ನುತ್ತಿದ್ದಘಿ.
Read More

ಆರ್ಟ್‌ ಥೀಫ್ ಧಾರಾವಹಿ -೫

ಆರ್ಟ್‌ ಥೀಫ್ ಧಾರಾವಹಿ -೫
ಅದು ಅನ್ನೆ ಕ್ಯಾಥರಿನ್‌ಳ ಲಂಕೃತ ತುಪ್ಪಟ ಹಾಸಿಗೆಯ ಮಂಚ. ಕೊಂಕಿಸಿದ ಕುತ್ತಿಗೆ, ತುಸು ತಿರುಗಿಸಿದ ಭುಜ, ನಗ್ನ ತೋಳುಗಳ ತನ್ನ ರಾತ್ರಿ ಪಾರ್ಟಿಯ ಉಡುಪಿನಲ್ಲಿದ್ದಾಳೆ ಚೆಲುವೆ. ಆಕೆ ಪೂಸಿದ ಸುಂಗಂಧವು ಗಾಳಿಯಲ್ಲಿ ಪಸರಿಸಿತ್ತುಘಿ. ಚೆರ್ರಿ ಕೆಂಪಿನ ಇಳಿ ಪರದೆಯ ಮಂಚದ ಮರೆಯಿಂದ ‘ ಇದು ನನ್ನದೇ ಸಾಮ್ರಾಜ್ಯ’ ಎಂದು ಗಾಳಿಯಲ್ಲಿ ಮುತ್ತು ಹಾರಿತ್ತಿದ್ದಾಳೆ. ಆ ಮುತ್ತನ್ನು ಹಿಡಿದುಕೊಳ್ಳುವ ಸ್ಥಳದಲ್ಲಿ ನಿಂತು ವೀಡಿಯೋ ಮಾಡುತ್ತಿದ್ದಾನೆ ಪ್ರಿಯತಮ ಬ್ರೈಟ್‌ವೈಸರ್. ಆ ಪ್ರೇಮಿಗಳು ದುಬಾರಿ ಶಯ್ಯಾಗೃಹದಲ್ಲಿ ಇಬ್ಬರೇ ಇದ್ದರು. ಆಡಂ-ಈವ್ ಪ್ರತಿಮೆಯನ್ನು ರೂಬೆನ್ ಮ್ಯೂಸಿಯಂನಿಂದ ಎಗರಸಿ ತಂದ ಕಾಲ ಅದು. ಜತೆಯಾಗಿದ್ದ ಆ ಐದು ವರ್ಷ ಇವರುಗಳ ಇಂಥ ಪ್ರಣಯ ಸನ್ನಿವೇಶ ಸಾಮಾನ್ಯವಾಗಿತ್ತು. ಐದಡಿ ಮೂರು ಇಂಚು ಎತ್ತರದ ವಯ್ಯಾರದ ಅನ್ನೆ ಕ್ಯಾಥರಿನ್ ನಕ್ಕಾಗ ಗುಳಿ ಬೀಳುವ ಕೆನ್ನೆ, ದೋಣಿ ಗಲ್ಲದ ನುಣುಪು ಆಕೆಯ ಅನನ್ಯತೆ. ಮುಂಗುರುಳು ಹುಬ್ಬಿನಿಂದ ಇಳಿದು ಓಲಾಡುತ್ತಿತ್ತು. ಖಾಸಗೀ ಸನ್ನಿವೇಶದಲ್ಲಿ ಆಕೆಯನ್ನು ‘ನೇನಾ’ ಎಂದು ‘ಸ್ಟೆಪ್’ ಆತನನ್ನು ಮುದ್ದಿನಿಂದ ಪರಸ್ಪರ ಕರೆದುಕೊಳ್ಳುತ್ತಿದ್ದರೂ, ಸಾರ್ವಜನಿಕವಾಗಿ ಮಾತ್ರ ಅನ್ನೆಕ್ಯಾತರೀನ್, ಬ್ರೈಟ್‌ವೈಸರ್ ಎಂದೇ ಪರಸ್ಪರ ಪರಿಚಯಿಸುತ್ತಿದ್ದರು. ಹಾಗೆ ಕರೆದುಕೊಳ್ಳುವಲ್ಲಿ ಒಂದು ಬಗೆಯ ಪ್ರಣಯದ ಖುಷಿ ಬಿಟ್ಟರೆ ಬೇರೇನೂ ತರ್ಕ ಇರಲಿಲ್ಲ ಎಂದು ಆತನೆ ಒಮ್ಮೆ ಹೇಳಿದ್ದಾನೆ. ‘ಫೋಟೊ ಹೇಗೆ ಬಂತು, ವೀಡಿಯೊ ಚೆನ್ನಾಗಿಲ್ವ ಸ್ಟೆಪ್..’ ಎಂದು ಆತನ ಭುಜದ ಮೇಲೆ ಭಾರ ಹಾಕಿ ವೀಡಿಯೋ ನೋಡಿದ ಅನ್ನೆ, ‘‘ಇದಕ್ಕೆ ಕನಿಷ್ಠ ನೂರು ಫ್ರಾನ್ಸ್ ರೊಕ್ಕ ಖಾತೆಗೆ ಬೀಳುತ್ತ ನೋಡು’’ ಎಂದಳು. ನಮ್ಮ ಖಾಸಗೀ ಶಯ್ಯಾಗ್ರಹ ಪ್ರವೇಶದ ವೀಡಿಯೋಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ೨೦ ಡಾಲರ್ಸ್‌ ದಕ್ಕುತ್ತದೆ ಅಲ್ಲವೇ ಎಂದು, ‘ಈಗಲೇ ಕೊಡು’ ಎಂದು ಆತನ ಎದುರು ಕೈ ಚಾಚಿ ತಮಾಶೆ ಮಾಡಿದಳು. ‘‘ ಖಂಡಿತ. ಈ ಸನ್ನಿವೇಶವು ಯಾರಿಗಾದರೂ ದುಬಾರಿಯೇ’ ಎಂದು ವೀಡಿಯೋ ಮಾಡುತ್ತಲೇ ಬ್ರೈಟ್‌ವೈಸರ್ ಹೇಳಿದ. ಹಾಗೆಯೇ ಕ್ಯಾಮೆರಾದ ದಿಕ್ಕನ್ನು ಬೇರೆ ದಿಕಿಗೆ ಫೋಕಸ್ ಮಾಡಿ, ಹಾಸಿಗೆಯ ಇನ್ನೊಂದು ಗೋಡೆಯಲ್ಲಿರುವ ೧೭ನೇ ಶತಮಾನದ ಫ್ಲಾಮಿಶ್ ಲ್ಯಾಂಡ್ ಸ್ಕೇಪಿಗೆ ಎದುರಾಗಿ ನಿಲ್ಲಲು ಆಕೆಗೆ ಹೇಳಿದ. ಕೈ ಹಿಡಿದು ಸೆಳೆದುಕೊಂಡು ನಿಲ್ಲಿಸಿ ಶೂಟಿಂಗ್ ಮುಂದುವರಿಸುತ್ತಾನೆ. ‘‘ಹಾಗೆ ಮುಂದಕ್ಕೆ ಬಾಗು, ಗಾಳಿಯಲ್ಲೇಕೆ, ನಿನಗೆ, ನಿಜ ಮುತ್ತು ಕೊಡುವೆ’’ಎನ್ನುತ್ತಾಳೆ ಅನ್ನೆಘಿ. ಆಗ ಗೋಡೆಯ ಮೇಲಿನ ಚಿತ್ತಾರಗಳು, ಅವರಿಬ್ಬರ ನಡುವವಿನ ಪ್ರಣಯ ಪ್ರಕ್ರಿಯೆ ಒಂದಕ್ಕೊಂದು ಕನ್ನಡಿಯಾಗುತ್ತವೆ. ಆತ ಕ್ಯಾಮೆರಾವನ್ನು ಪಕ್ಕದಲ್ಲಿ ಇಟ್ಟು ಮುಖವನ್ನು ಮುಂದ ಚಾಚಿ ಆಕೆಯ ತುಟಿಯ ಹತ್ತಿರ ತರುತ್ತಾನೆ. ಹಾಗೆ ನೋಡಿದರೆ, ಆರಂಭದಿಂದಲೂ ಬ್ರೈಟ್‌ವೈಸರ್‌ಗೆ ಸುಂದರ ಚಿತ್ರದ ಮೇಲಿನ ಮೋಹ ಅಥವಾ ಅನ್ನೆಯೊಡನೆ ಇದ್ದ ವ್ಯಾಮೋಹದಲ್ಲಿ ಹೆಚ್ಚೇನೂ ವ್ಯತ್ಯಾಸ ಇರಲಿಲ್ಲಘಿ. ಯಾವತ್ತಿಗೂ ಒಂದು ಸುಂದರ ಚಿತ್ರವನ್ನು ನೋಡಿದಾಗ, ಅದರೊಳಗಿನ ಬಣ್ಣಘಿ, ಓರೆ ಕೋರೆಗಳು ಒಂದಾಗಿ ಒಳಕೆ ಪ್ರವಹಿಸಿ ಸಂವೇದನೆಯಾಗಿ ಇಡೀ ನರ ನಾಡಿಯ ವ್ಯಾಪಿಸಿ ಕೊನೆಗೆ ಚರ್ಮದ ರಂದ್ರದ ತನಕ ಜಾಗೃತಗೊಳಿಸುತ್ತಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಚಿತ್ರವು ಲಘುವಾದ ವಿದ್ಯುತ್ ರೂಪದಲ್ಲಿ ಆತನಲ್ಲಿ ಸಂಚರಿಸಿ, ಒಳಗಿನ ಲಹರಿಯನ್ನು ಬಡಿದೆಬ್ಬಿಸಿದಂತೆ. ಅದೆಲ್ಲ ಹೇಗೆಂದರೆ.. ಫ್ರೆಂಚ್ ಪ್ರೇಮ ಕಾವ್ಯದಲ್ಲಿ ‘ಕಪ್ ಡೇ ಕ್ವಾಯರ್’ ಎಂದು ಬಣ್ಣಿಸಿದಂತೆ. ಅಕ್ಷರ ಶಃ ಹೃದಯ ಹುಚ್ಚೆದ್ದು ಕುಣಿದು ಅದೇ ಹುಚ್ಚು ಆತನಿಗೆ,‘ ಯಾವುದೇ ಬೆಲೆ ತೆತ್ತಾದರೂ ಈ ಚಿತ್ರ ನಿನ್ನದಾಗಬೇಕು’’ ಎಂಬ ನಿರ್ಧಾರಕ್ಕೆ ಪ್ರೇರೇಪಿಸಿತು. ಇದೆಲ್ಲ ಸಂವೇದನೆಗಳ ಹಿನ್ನೆಲೆಯಲ್ಲಿ ಆತನ ಹೈಸ್ಕೂಲ್ ದಿನಗಳು, ಆಗ ಆತನಿಗಿದ್ದ ಸೀಮಿತ ಸ್ನೇಹಿತ ವಲಯದ ಪ್ರಾಚ್ಚಯ ವ್ಯಾಮೋಹಿ ಸಹಪಾಠಿಗಳು ಕಾರಣರಾಗಿದ್ದರು. ೧೯೯೧ರಲ್ಲಿ ಅಂಥ ಶ್ರೀಮಂತ ಸ್ನೇಹಿತನೊಬ್ಬ ಕರೆದುಕೊಂಡು ಹೋಗಿದ್ದ ಚಳಿಗಾಲದ ಬರ್ತ್ ಡೇ ಪಾರ್ಟಿಯಲ್ಲಿ ಅನ್ನೆ- ಕ್ಯಾಥರೀನ್ ಎಂಬ ಸುಂದರಿಯ ಮೊದಲ ದರ್ಶನವಾಯಿತು. ಈತನಂತೆ ಆಲ್‌ಸೇಶನ್ ಕುಟುಂಬಿಕ ಹಿನ್ನೆಲೆಯಲ್ಲಿ ಜನಿಸಿದ್ದ ಆಕೆ ಈತನಿಗಿಂತ ನಾಲ್ಕಾರು ತಿಂಗಳಿಗಷ್ಟೇ ಕಿರಿಯಳಾಗಿದ್ದಳು. ಆತನ ಕಣ್ಣಿಗೆ ಮೊದಲ ನೋಟದಲ್ಲೇ ಆಕೆಯು ಪರಮ ಸುಂದರಿಯಾಗಿ ಕಂಡು, ಜೀವನದಲ್ಲಿ ಮೊದಲ ಬಾರಿ ಹೃದಯ ವೀಣೆ ಜೋರಾಗಿ ಮಿಡಿಯಿತು. ಆ ಮೊದಲು ಆತನಿಗೆ ಹೇಳಿಕೊಳ್ಳುವಂತ ಯಾವುದೇ ಸ್ನೇಹಿತೆಯೂ ಇರಲಿಲ್ಲಘಿ, ‘ಆ ಕ್ಷಣದಲ್ಲೇ ಆಕೆ ನನ್ನವಳು ಎಂದು ಅನ್ನಿಸ ತೊಡಗಿತು’’ ಎಂದು ಹೇಳಿಕೊಂಡಿದ್ದಾನೆ. ಅನ್ನೆ ಕೂಡ ಬ್ರೈಟ್‌ವೈಸರ್‌ನ ಪ್ರೇಮಿಸತೊಡಗಿದಳು. ಆಕೆಯನ್ನು ಆ ಹೊತ್ತಿನಲ್ಲಿ ಬಲ್ಲ ಎಲ್ಲರೂ, ‘ಇದೇನಿದು ಹುಚ್ಚು, ಇವಳಿಗೆ ಬೇಕಿತ್ತಘಿಈ ಬೇಕಾಬಿಟ್ಟಿ ಸಂಬಂದ’ ಎನ್ನುತ್ತಾರೆ. ಆದರೆ, ‘‘ಆಕೆ ಕೂಡ ಆಗಲೇ ಆತನ ಪ್ರೇಮ ಪಾಶದಲ್ಲಿ ಸಂಪೂರ್ಣ ಬಿದ್ದುಘಿ, ಆತನಿಗೆ ಒಲಿದುಹೋದಳು’’ ಎಂದು ಅವರ ಆಪ್ತನೊಬ್ಬ ಹೇಳುತ್ತಾನೆ. ಮುಂದೆ ಆಕೆಯ ಅಟೋರ್ನಿಯಾಗಿ ಆಕೆಯನ್ನುಘಿ, ಆಕೆಯ ತುಮುಲ ಒಳತೋಟಿಗಳನ್ನುಘಿ, ಭಾಗಿಯಾದ ಪ್ರಕರಣದ ಆಳ ವಿಸ್ತಾರ ಅರಿತ ಎರಿಕ್ ಬ್ರೌನ್ ‘‘ ಹಾಗೆ ನೋಡಿದರೆ, ಆಕೆ ಯಾವತ್ತೂಘಿ, ಯಾವುದನ್ನೂ ಅರೆ ಮನಸ್ಸಿನಿಂದ ಮಾಡಿದವಳೇ ಅಲ್ಲ’’ ಅನ್ನುತ್ತಾನೆ. ತನಗೆ ಸರಿ ಅನ್ನಿಸಿದ ಅಂದರೆ, ಹಿಂದೆ ಮುಂದಿನ ಯಾವುದೇ ಯೋಚನೆಯೂ ಇಲ್ಲದೆ, ಆತನೊಂದಿಗೆ ಪ್ರಣಯದಲ್ಲಿ ತೊಡಗುವ ಹುಚ್ಚು ಹುಡುಗಿಯಾಗಿದ್ದ ಆಕೆ, ಬ್ರೈಟ್‌ವೈಸರ್ ಜತೆ ಸಂಪೂರ್ಣ ಕರಗಿದಳು ಎಂದು ಇಬ್ಬರನ್ನೂ ಬಲ್ಲ ಬ್ರೌನ್ ಹೇಳುತ್ತಾನೆ. ಇಬ್ಬರ ಮೊದಲ ಬೇಟಿ ಹೊತ್ತಲ್ಲಿಘಿ, ಆಗಿನ್ನೂ ಬ್ರೈಟ್‌ವೈಸರ್ ತನ್ನ ತಾಯಿ ತಂದೆಯೊಂದಿಗೆ ಚಿಕ್ಕಂದಿನ ಬಂಗಲೆಯಲ್ಲೇ ವಾಸಿಸುತ್ತಿದ್ದಘಿ. ‘ಮೇಲ್ಮಧ್ಯಮ ವರ್ಗದ ಆ ಮನೆ, ಸುಸಜ್ಜಿತವಾಗಿಯೇ ಇತ್ತು’ ಎಂದು ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಅನ್ನೇ ಕ್ಯಾಥರೀನ್‌ಳೆ ಹೇಳಿದ್ದಾಳೆ. ಹಾಗೆ ನೋಡಿದರೆ ಆಕೆಯದು ಅತ್ಯಂತ ಸಾಧಾರಣ ಹಿನ್ನೆಲೆ. ಅನ್ನೇ ಕ್ಯಾಥರೀನ್ ತಂದೆ ಜೊಸೆಫ್ ಕ್ಲೈನ್‌ಕ್ಲಾಸ್ ವೃತ್ತಿಪರ ಬಾಣಸಿಗನಾಗಿದ್ದರೆ, ತಾಯಿ ಜಿನೆಟ್ ಮುರಿಂಗರ್ ಓರ್ವ ಆಯಾ. ದಂಪತಿಯ ಮೂವರು ಮಕ್ಕಳಲ್ಲಿ ಅನ್ನೇ ಕ್ಯಾಥರೀನ್ ಹಿರಿಯಳಾಗಿದ್ದಳು. ಇವರಿಗೆ ಹೋಲಿಸಿದರೆ, ಬ್ರೈಟ್‌ವೈಸರ್ ಕುಟುಂಬ ಆಗ, ಕೆಳಮಹಡಿಯಲ್ಲಿ ಕಾಲುಚಾಚಿ ಮಲಗುವಷ್ಟು ವಿಶಾಲ ಬೋಟ್ ಒಂದರ ಮಾಲೀಕರು. ಸ್ವಜರ್‌ಲ್ಯಾಂಡ್ ಹಾಗು ಫ್ರಾನ್ಸ್ ನಡುವಿನಲ್ಲಿ ಗಮನ ಸೆಳೆಯುವ ಸ್ವಾ ಬ್ಲೇಡ್ ಪರ್ವತ ಶ್ರೇಣಿಯನ್ನು ಆವರಿಸಿರುವ ಜಿನೇವಾ ಸರೋವರದಲ್ಲಿ ಇಡೀ ಕುಟಂಬ ಬೇಸಿಗೆ ರಜೆಯ ವಿಹಾರ ನಡೆಸುವಷ್ಟು ಶ್ರೀಮಂತ ಹಿನ್ನೆಲೆ. ಅಷ್ಟೇ ಅಲ್ಲ ಬ್ರೈಟ್‌ವೈಸರ್ ಕುಟುಂಬ ಪಕ್ಕದ ಅಲ್ಪಾ ಪರ್ವತ ಶ್ರೇಣಿಯಲ್ಲಿ ಜಾರು ಬಂಡಿಯ ಆಟದಲ್ಲೂ ತೊಡಗುತ್ತಿತ್ತುಘಿ. ಚಳಿಗಾಲ ಬಂತೆಂದರೆ, ವರ್ಷಕ್ಕೆ ಒಂದೆರಡು ಬಾರಿಯಾದರೂ ಅಲ್‌ಸೇಶಿಯನ್ ಗುಡ್ಡದಲ್ಲಿ ಚಾರಣ ಕೈಗೊಂಡು ಅಲ್ಲಿನ ಸಾಂಪ್ರದಾಯಿಕ ಹೊಟೇಲುಗಳಲ್ಲಿ ಕುಟುಂಬ ಸಮೇತ ಉಂಡು, ಖುಷಯಾಗಿ ಬರುವುದಿತ್ತುಘಿ. ಆ ದಿನಗಳ್ಲಲಿ ಬ್ರೈಟ್ ವೈಸರ್ ಟೆನ್ನಿಸ್ ಹಾಗೂ ಸ್ಕೂಬಾ ಡ್ರೈವಿಂಗ್ ಕ್ಲಾಸುಗಳಿಗೆ ಹೋಗಿ, ಒಂದಿಷ್ಟು ಕಲಿತಿದ್ದಾನೆ. ಅದರ ಒಂದೆರಡು ಸರ್ಟಿಫಿಕೆಟ್ ಕೂಡ ಆತನಲ್ಲಿ ಇದೆ. ಇದಾವುದೂ ಅನ್ನೆ ಕ್ಯಾಥರೀನ್ ಜೀವನದಲ್ಲಿ ಸಾಧ್ಯವೇ ಇರಲಿಲ್ಲಘಿ. ಅದೇ ಕಾರಣಕ್ಕೆ ಬ್ರೈಟ್‌ವೈಸರ್ ಸಾಂಗತ್ಯ ಅಂದರೆ, ಆಕೆಗೆ ಎಲ್ಲಿಲ್ಲದ ಉನ್ನತಾನುಭವ. ಈ ವ್ಯಕ್ತಿಯ ಪರಿಚಯಕ್ಕೆ ಮುನ್ನ ಅನ್ನೆಯ ಜೀವನ ಎಂದರೆ, ಸಂಪೂರ್ಣ ನೀರಸ ಎಂದು ಬ್ರೌನ್ ಹೇಳುತ್ತಾನೆ. ಅನ್ನೆ ಕ್ಯಾಥರೀನ್ ಕುಟುಂಬ ಒಂದಾದ ನಂತರ ಇನ್ನೊಂದು ಸಾಲದ ಸುಳಿಯಲ್ಲಿ ಸಿಲುಕಿರುತ್ತಿತ್ತುಘಿ. ಆಗ ಅವರ ಮನೆಯಲ್ಲಿ ಒಂದು ಕಾರು ಕೂಡ ಇಲ್ಲದ ಕಾರಣ, ಆಕೆಗೆ ಡ್ರೈವಿಂಗ್ ಗೊತ್ತಿರಲಿಲ್ಲಘಿ. ಆಕೆಗೆ ಜೀವನದಲ್ಲಿ ಯಾವುದೇ ವಿಚಾರದಲ್ಲೂ ಆಳವಾದ ಪ್ರೀತಿಯೇ ಇರಲಿಲ್ಲಘಿ. ಆ ಹೊತ್ತಿಗೆ ಪರಿಚಿತನಾದ ಬ್ರೈಟ್‌ವೈಸರ್ ಅದೆಲ್ಲ ಗ್ಲಾಮರ್‌ನ್ನುಘಿ, ಜೀವಂತಿಕೆಯನ್ನೂ ಅನ್ನೆಯಲ್ಲಿ ಹರಿಸಿದ. ಅನ್ನೆಯ ಹಳ್ಳಿಗಾಡಿನ ಮುಗ್ಧತೆಯು, ಆತನಲ್ಲಿ ಹೊಸ ಬಗೆಯ ಸಂಸ್ಕೃತಿ ಸಂಸ್ಕಾರದತ್ತ ಕಣ್ಣು ತೆರೆಸಿತು. ಕಲೆ, ಕುಸುರಿಯ ಬಗ್ಗೆ ಬ್ರೈಟ್‌ವೈಸರ್‌ಗೆ ಸಹಜವಾಗಿ ಆಸಕ್ತಿ ಒಂದೆಡೆಯಾದರೆ, ಅನ್ನೆ ಕ್ಯಾಥರೀನ್ ಆಗಮನವು ಕ್ರೈಸ್ತ ಸಾರಸ್ವತ ದೇವತೆ ಮ್ಯೂಸ್ ಪ್ರತ್ಯಕ್ಷಳಾದಂತೆ ಆಯಿತು. ಮುನ್ನಡೆಸುವ ದೇವತೆಯಾಗಿ ಆಕೆ ಸೇರಿಕೊಂಡಳು ಎಂದು ಬ್ರೈಟ್‌ವೈಸರ್ ಒಂದೆಡೆ ಒಪ್ಪಿಕೊಳ್ಳುತ್ತಾನೆ. ಬುಟಿಕ್ ಇರಬಹದು, ಆ್ಯಂಟಿಕ್ ಅಥವಾ ಕುಸುರಿ, ಮಾಟದ ಮಂಚಗಳಿರಬಹದು, ದಾಗಿನಿ ಅಥವಾ ದಿನಬಳಕೆಯ ಮಾಟದ ಸಲಕರಣೆಯಲ್ಲೂ ಆಕೆಗೆ ನಿರ್ದಿಷ್ಟ ಆಯ್ಕೆ ಇತ್ತು. ಆಗೀಗ ಒಟ್ಟಾಗಿ ಚಿಕ್ಕ ಪುಟ್ಟ ನಗರಗಳಿಗೆ ಹೋಗಿ ಅಲ್ಲಿನ ಕರಕುಶಲರು, ಅಕ್ಕಸಾಲಿಗರ ಕುಲುಮೆಗೆ, ಕಾಷ್ಟ ಶಿಲ್ಪದ ಮಳಿಗೆಗೆ ಭೇಟಿ ನೀಡಿ, ಗ್ಯಾರೇಜಿನ ಲೋಹ ಪತ್ರಿಗಳನ್ನು ಹುಡುಕಿ ತರುತ್ತಿದ್ದೆವು ಎನ್ನುತ್ತಾನೆ ಬ್ರೈಟ್‌ವೈಸರ್. ಕುಲುಮೆಗೆ ಹೋದಾಗ, ನೇಕಾರರ ಮಳಿಗೆ ಹೊಕ್ಕಾಗ ಹೆಚ್ಚು ಮಾತಾಡದೆ ಸುತ್ತುವ ಜೋಡಿಗೆ ಅಲ್ಲಿ ಏನೋ ಒಂದು ಖುಷಿ ಆಯಿತು ಎಂದರೆ, ಚೌಕಾಶಿ ಮಾಡುತ್ತಿರಲಿಲ್ಲಘಿ. ‘ಆಕೆ ಜತೆಯಲ್ಲಿದ್ದಾಗ, ಅದೇಕೋ ವಿಚಿತ್ರ ಅನುಭವ. ಖುಷಿ. ಹೆಚ್ಚು ಮಾತಾಡಬೇಕು ಎಂದು ನನಗೆ ಅನ್ನಿಸುತ್ತಲೇ ಇರಲಿಲ್ಲಘಿ. ಮಾತಿನ ಅಗತ್ಯವೇ ಇರವುದಿಲ್ಲಘಿ.’ ಈತನ ತಂದೆ ಮನೆ ಬಿಟ್ಟು ಹೋದರು, ಏನೆಲ್ಲ ಆಗಿಹೋದರೂ, ಆಕೆ ಮಾತ್ರ ಎಲ್ಲ ಸಂದರ್ಭದಲ್ಲೂ ಜತೆಗೆ ಬೆಂಬಲವಾಗಿ ನಿಲ್ಲುತ್ತಿದ್ದಳು. ಜೋಡಿಯು ಡೇಟಿಂಗ್ ಶುರು ಮಾಡಿದ ನಾಲ್ಕಾರು ತಿಂಗಳಲ್ಲಿ ತಂದೆ ತಾಯಿ ಪ್ರತ್ಯೇಕವಾಗಿ,ತಾಯಿಯೊಂದಿಗೆ ಚಿಕ್ಕದಾದ ಇಕಾ ಬಾಡಿಗೆ ಫ್ಲಾಟಿಗೆ ಬಂದ. ಆತ ಸಮಸ್ಯೆಗೆ ಸಿಲುಕಿದಾಗಲೆಲ್ಲಘಿ, ಶ್ರೀಮಂತ ಹುಡುಗ ಮತ್ತಷ್ಟು ಹತ್ತಿರವಾಗಿ ಅನ್ನೆಗೆ ಹಿತಾನುಭವವೇ ಆಗಿತ್ತುಘಿ. ಆತನಿಗೆ ಭಾವನಾತ್ಮಕ ಬೆಂಬಲ ನೀಡುವ ಭಾಗವಾಗಿ ಆಕೆ ಆಗಾಗ ಆತನ ಅಪಾರ್ಟ್‌ಮೆಂಟ್‌ನಲ್ಲಿಯೇ ರಾತ್ರಿ ಕಳೆಯತೊಡಗಿದಳು. ಆಗ ಅವರ ಕೊಠಡಿಯಲ್ಲಿ ಇದ್ದಘಿ, ನೀಲಿ ಪ್ಲೈಉಡ್ ಮಂಚದ ಚಿಕ್ಕ ಗಾದಿಯಲ್ಲಿಯೇ ಇಬ್ಬರೂ ರಾತ್ರಿ ಕಳೆಯುತ್ತಿದ್ದರು. ಇದೆಲ್ಲಘಿ, ಅವರು, ವ್ಯವಸ್ಥಿತ ಶಯ್ಯಾಗ್ರಹಕ್ಕೆ ಸ್ಥಳಾಂತರಗೊಳ್ಳುವ ಮೊದಲಿನ ಕತೆ. ಆಗ ಇವರ ಮಂಚ ಹೊಂದಿಕೊಂಡಿದ್ದ ಗೋಡೆಗೆ ಪ್ರೀತಿ ಪ್ರಣಯದ ಸಿನಿಮಾಗಳಾದ ದುಸ್ತಾನ್ ಹಾಫ್‌ಮನ್ ನಟಿಸಿದ ‘ರೈನ್ ಮ್ಯಾನ್’’ ಸಿನಿಮಾ ಪೋಸ್ಟರ್‌ಗಳು ಅಂಟಿಸುತ್ತಿದ್ದರು ಎಂದು ಒಂದೆರಡು ಸನ್ನಿವೇಶವನ್ನು ಆತ ಸ್ಮರಿಸಿಕೊಂಡಿದ್ದಾನೆ. ‘ಆ ದಿನಗಳಲ್ಲಿ ನನ್ನ ಜೀವನದಲ್ಲಿ ಏನೆಲ್ಲ ಕುಸಿದು ಬೀಳುತ್ತಿದ್ದರೆ, ಆಕೆ ಮಾತ್ರ ‘ಎಲ್ಲ ಸರಿಹೋಗುತ್ತದೆ. ಹೆದರಬೇಡ’ ಎಂದು ಸಮಾಧಾನ ಹೇಳುವ ದೇವತೆಯಾಗಿದ್ದಳು. ವೃತ್ತಿ ವಿಚಾರದಲ್ಲಿ ಇಬ್ಬರೂ ಒಂದಿಷ್ಟು ಕಷ್ಟ ಎದುರಿಸಿದ್ದಾರೆ. ಅನ್ನೆ ಕ್ಯಾಥರೀನ್ ತನ್ನ ನರ್ಸಿಂಗ್ ಸರ್ಟಿಫಿಕೆಟ್‌ಗಾಗಿ ನೋಂದಣಿಯಾಗಿದ್ದರೆ, ಬ್ರೈಟ್‌ವೈಸರ್ ಕಾನೂನು ಕಲಿಯಲು ಸ್ಟ್ಯಾನ್ಸ್‌ಬರ್ಗ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡಿದ್ದಘಿ. ಓದಿನತ್ತ ಗಮನ ಹರಿಸಿದೆ ಏನೆಲ್ಲ ಮಾಡಿ ಬ್ರೈಟ್‌ವೈಸರ್ ಕಾನೂನು ಅಧ್ಯಯನ ಅರ್ಧದಲ್ಲೇ ಕೈ ಬಿಟ್ಟರೆ, ಅನ್ನೆ ಕ್ಯಾಥರೀನ್‌ಗೆ ನರ್ಸಿಂಗ್ ಸರ್ಟಿಫಿಕೆಟ್ ಪಡೆಯಲಾಗದೆ, ಆಸ್ಪತ್ರೆಯೊಂದರೆಲ್ಲ ಹಾಸಿಗೆ ಜೋಡಿಸುವ, ಕಸಗಳನ್ನು ಸ್ವಚ್ಛಗೊಳಿಸಿ ಕೊಠಡಿ ಸಿದ್ದಪಡಿಸುವ ನೌಕರಿಗೆ ಹೊಂದಿಕೊಳ್ಳಬೇಕಾಯಿತು. ಹೀಗಿರುತ್ತ ೧೯೯೪ರ ಚಳಿಗಾಲದ ಒಂದು ವಾರಾಂತ್ಯದಲ್ಲಿ ಇಬ್ಬರೂ ಆಲ್‌ಸೇಶಯನ್ ಕೃಷಿಕರ ಹಳ್ಳಿಗೆ ಭೇಟಿ ನೀಡುತ್ತಾರೆ. ಅಲ್ಲಲ್ಲಿ ಜೋಡಿ ಮನೆಗಳು, ಮಾಸಿದ ಕಲ್ಲುಕಂಬಗಳ ಹಳೆಯ ಗೋತಿಕ್ ಚರ್ಚ್ ಇರುವ ಆ ಹಳ್ಳಿಯಲ್ಲಿ ೧೬ನೇ ಶತಮಾನದಲ್ಲಿ ನವೀಕರಿಸಿದ ಮ್ಯೂಸಿಯಂ ಒಂದು ಗಮನ ಸೆಳೆಯುತ್ತಿತ್ತುಘಿ. ಜನ ವಿರಳತೆಯ ಆ ಮ್ಯೂಸಿಯಂನ ಎರಡನೆ ಮಹಡಿಗೆ ಹೋಗುತ್ತಲೇ ಬ್ರೈಟ್‌ವೈಸರ್‌ನ ಕಣ್ಣಿಗೆ ಮಿಂಚಿನ ಒಂದು ವಸ್ತುವು ಹೊಳೆಯುತ್ತದೆ. ಆಕೆಯನ್ನು ನೋಡಿ ‘ಇದು ಹೇಗಿದೆ ಅಲ್ಲವಾ’ ಎಂದು ತನಗಿದು ಬೇಕು ಎಂದು ಕಣ್ಣಿನಲ್ಲಿ ಸನ್ನೆ ಮಾಡಿದ. ಅಕ್ರೋಟ್ ಕಾಂಡದಿಂದ ಕೆತ್ತಿದ ಹಿಡಿಕೆ, ಬೆಳ್ಳಿಯ ಲೋಗೋ ಸಹಿತ ಟ್ರಿಗರ್‌ನ ಪ್ಲಿಂಟ್ ಲಾಕ್ ಪಿಸ್ತೂಲ್. ಹದಿನೆಂಟನೇ ಶತಮಾನದ ಆರಂಭದಲ್ಲಿ ಬಳಸಲಾಗುತ್ತಿದ್ದ ಆ ಪಿಸ್ತೂಲ್ ನೋಡಿದಾಗ, ಇದನ್ನು ತಾನು ಏಲ್ಲೋ ನೋಡಿದಂತೆ ಅನ್ನಿಸಿತು. ಆತನ ತಂದೆ ಸಂಗ್ರಹಿಸಿದ್ದ ಹಲವು ಪಿಸ್ತೂಲ್‌ಗಳು ಬಾಲಕ ಬ್ರೈಟ್‌ವೈಸರ್‌ನ ಆಪ್ತ ಆಟಿಗೆಯಾಗಿದ್ದವು. ಒಂದು ದಿನ ಮನೆಯ ಬಹುತೇಕ ಆ್ಯಂಟಿಕ್‌ಗಳನ್ನೆಲ್ಲ ಪ್ಯಾಕ್ ಮಾಡಿಕೊಂಡು ತಂದೆ, ಹೊರಟು ಹೋದ ನಂತರ ಅಂಥ ಯಾವುದೇ ಪಿಸ್ತೂಲ್‌ನ್ನು ಬ್ರೈಟ್‌ವೈಸರ್ ನೋಡಿಯೇ ಇರಲಿಲ್ಲಘಿ. ತರುವಾಯ ಕುಟುಂಬದ ಕಪಾಟಿನಲ್ಲಿ ಪ್ರದರ್ಶನಕ್ಕಿಟ್ಟ ಕೆಲವು ಪಿಸ್ತೂಲ್‌ಗಳ ಮಾದರಿ ಸಹಿತ ಆರ್ಟಿಕಲ್‌ಗಳನ್ನು ಮನೆಗೆ ತರಲು ಬ್ರೈಟ್‌ವೈಸರ್ ಪ್ರಯತ್ನಿಸಿದರೂ, ಹರಾಜಿನಲ್ಲಿ ಕೈಗೆಟುಕುತ್ತಿರಲಿಲ್ಲಘಿ. ಹರಾಜು ಪಡೆದುಕೊಂಡವರು ಹಳೆಯ ಆ್ಯಂಟಿಕ್‌ಗಳನ್ನು ಹತ್ತು ಪಟ್ಟು ದರ ಏರಿಸಿ ಮಳಿಗೆಯಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದರು. ಇದೊಂದು ಹೇಸಿಗೆಯ ಕೆಲಸ ಎಂದು ಬ್ರೈಟ್‌ವೈಸರ್ ಹೇಳುತ್ತಿದ್ದಘಿ. ಈ ಎಲ್ಲ ಕಾರಣಕ್ಕೆ ಬ್ರೈಟ್‌ವೈಸರ್ ಫ್ಲಿಂಟ್ ಲಾಕ್ ಪಿಸ್ತೂಲನ್ನು ಗುರಾಯಸಿಯೇ ನೋಡಿದ. ಇದನ್ನು ಎತ್ತಿ ಮನೆಗೆ ಒಯ್ಯಬೇಕು ಎಂಬುದು ಬಿಟ್ಟರೆ, ಬೇರೇನೂ ಆಲೋಚನೆ ಆತನಲ್ಲಿ ಹೊಳೆಯಲಿಲ್ಲಘಿ. ‘ನನ್ನ ತಂದೆಯ ಸಂಗ್ರಹದಲ್ಲಿದ್ದ ಪಿಸ್ತೂಲ್‌ಗಳಿಗೆ ಹೋಲಿಸಿದರೆ, ಒಂಭತ್ತು ವರ್ಷ ಹಳೆಯದಾಗಿರುವ ಇದು, ಆತನಿಗೆ ಹೊಟ್ಟೆ ಉರಿಸಲಿದೆ. ಹಾಗಾಗಿ ಇದು ನನ್ನದಾಗಬೇಕು ’’ಎಂದು ಅನ್ನೆ ಕ್ಯಾಥರೀನ್‌ಗೆ ಹೇಳಿದ. ತನ್ನ ಪಾಲಕರೊಂದಿಗೆ ಅನ್ನೆಯ ಸಂಬಂಧ ಚೆನ್ನಾಗಿಯೇ ಇತ್ತಾದರೂ, ಬ್ರೈಟ್‌ವೈಸರ್ ಆತನ ತಂದೆಯನ್ನು ದ್ವೇಷಿಸಿದಾಗ ಸಂತೈಸುತ್ತಿದ್ದಳು. ಒಂದೆರಡು ಬಾರಿ ಬ್ರೈಟ್‌ವೈಸರ್ ತಂದೆಯನ್ನು ಆಕೆ ಭೇಟಿಯಾಗಿದ್ದರೂ, ಅವರಲ್ಲಿ ಗೌರವವೇನೂ ಉಂಟಾಗರಲಿಲ್ಲಘಿ. ಆಕೆಯ ಬಡತನದ ಕಾರಣ ತಂದೆಯು ನಿಕೃಷ್ಟವಾಗಿ ನೋಡಿದ್ದ ಎಂದು ಬ್ರೈಟ್‌ವೈಸರ್ ನಂತರ ಆಕೆಗೆ ಹೇಳಿದ್ದಘಿ. ಪಿಸ್ತೂಲನ್ನು ಪ್ರದರ್ಶಿಸಿದ್ದ ಗಾಜಿನ ಪೆನಲ್ ಬೋರ್ಡ್‌ಗೆ ಬೀಗ ಹಾಕದೇ ಇರುವುದನ್ನು ಬ್ರೈಟ್‌ವೈಸರ್ ಅನ್ನಿ ಕ್ಯಾಥರೀನ್‌ಗೆ ತೋರಿಸಿದ. ಹೈಸ್ಕೂಲ್ ಮುಗಿಸಿ ಮ್ಯೂಸಿಯಂ ಭದ್ರತಾ ಸಿಬ್ಬಂದಿಯಾಗಿ ಬ್ರೈಟ್‌ವೈಸರ್ ಕಾರ್ಯನಿರ್ವಹಿಸಿ, ಆಗಲೆ ಮೂರು ವರ್ಷಗಳು ಕಳೆದಿದ್ದರೂ, ಅಲ್ಲಿನ ಭದ್ರತಾ ಸೂಕ್ಷ್ಮಗಳ ವಿಚಾರದಲ್ಲಿ ಆತನಿಗೆ ಚೂರೂ ಮರೆವಾಗಿರಲಿಲ್ಲಘಿ. ಆ ಹೊತ್ತಿಗೆ ಬೇರಾವುದೇ ಸಂದರ್ಶಕರು, ಭದ್ರತಾ ಸಿಬ್ಬಂದಿ, ಸಿಸಿ ಟಿವಿ ಅಥವಾ ಕ್ಯಾಮರಾ ಯಾವುದೂ ಇರಲಿಲ್ಲಘಿ. ಬೇಸಿಗೆ ರಜೆಯಲ್ಲಿ ಅರೆಕಾಲಿಕ ಭದ್ರತಾ ಕೆಲಸಕ್ಕೆ ಬಂದಿದ್ದ ವಿದ್ಯಾರ್ಥಿಕೂಡ ಕೆಳಗಿನ ಮಹಡಿಯಲ್ಲಿ ಊಟಕ್ಕೆ ಹೋಗದ್ದಘಿ. ಬ್ರೈಟ್‌ವೈಸರ್ ತಾನು ಬರುವಾಗಲೇ ಅಂದು ಚಿಕ್ಕ ಡಕ್ ಬ್ಯಾಗನ್ನು ಹಾಕಿಕೊಂಡು ಬಂದಿದ್ದುಘಿ, ಇದು ಕಾರ್ರಾಚರಣೆಗೆ ಅನುಕೂಲ ಎಂದೇ ಅನ್ನಿಸಿತು. ಆ ಹೊತ್ತಿಗೆ ಅನ್ನೆ ಕ್ಯಾಥರೀನ್ ಕೊಟ್ಟ ಹಸಿರು ನಿಶಾನೆ ಕೂಡ, ಹಿಂದೆ ಮುಂದೆ ಯೋಚನೆ ಅನಗತ್ಯ ಎಂದು ಅನ್ನಿಸಿತು. ಆಗಿನ್ನೂ ಜೋಡಿ ೨೨ರ ಹರಯದವರು, ಮೊದಲಿಗೆ ಅನ್ನೆ ಬ್ರೈಟ್‌ವೈಸರ್ ಭೇಟಿಯಾಗಿದ್ದ ಹೊತ್ತಿನಲ್ಲಿಘಿ, ಆತನ ಮೇಲೆ ಅಂಗಡಿ ಕಳವು, ಗಮನ ಬೇರೆಡೆ ಸೆಳೆದು ಅಪಹರಣ ಮತ್ತಿತರ ಪ್ರಕರಣದಲ್ಲಿ ಠಾಣೆಗೆ ಹೋಗಿ ಬರುತ್ತಿದ್ದ ದಿನಗಳು. ಅನ್ನೆ ಕ್ಯಾಥರೀನ್‌ಗೆ ಮಾತ್ರ ಚಿಕ್ಕದಾದ ಅಪರಾ ಹಿನ್ನೆಲೆ, ಸಿಕ್ಕಿಬಿದ್ದ ಪ್ರಕರಣದ ಉರುಳು ಇರಲಿಲ್ಲಘಿ. ಆದರೂ ಆತನ ಚಟುವಟಿಕೆಗೆ ಆಕ್ಷೇಪ ವ್ಯಕ್ತಮಾಡಿರಲಿಲ್ಲಘಿ. ‘ಕೆಲವೊಮ್ಮೆ ಆತನ ಕಿಡಿಗೇಡಿ ಗುಣಗಳು ಕೂಡ ಆಕೆಯನ್ನು ಕರ್ಷಿಸಿದ್ದು ಇರಬಹುದೇ’ ಎಂದು ಆಕೆಯ ಆಪ್ತ ಅಟಾರ್ನಿ ಬ್ರೌನ್ ಹೇಳುತ್ತಾರೆ. ಇದೀಗ, ಅವರು ನಿಂತಿದ್ದ ಫಿಂಟ್‌ಲಾಕ್ ಪಿಸ್ತೂಲ್ ಎದುರು ಅವರ ಪ್ರೇಮಿ ಗಟ್ಟಿಗೊಳಿಸುವ ಸಾಹಸದ ಅವಕಾಶ ತೆರೆದುಕೊಂಡಿತು. ತಮ್ಮ ಹದಿಹರಯದ ಸಾಹಸದ ಮೂಲಕ ಹುಚ್ಚು ಹಿಡಿಸಿದ್ದ‘ಬೊನ್ನಿ ಮತ್ತು ಕ್ಲೈಡ್’ ಪತ್ತೆದಾರಿ ಸಾಹಸದ ನೆನಪಾಗಿ, ತನ್ನ ಬಂಡಾಯಗಾರ ಸ್ನೇಹಿತನನ್ನು ಹುರಿದುಂಬಿಸಲು ‘ ಹೋಗು ಪ್ರಿಯಾ,. ಎತ್ತಿಕೋ, ಎಗರಿಸು ’ ಎಂದು ಕುಮ್ಮಕ್ಕು ನೀಡಿದಳು.
Read More
ಆರ್ಟ್‌ ಥೀಫ್ ಧಾರಾವಹಿ -೪ ಸಣ್ಣಿಂದಲೂ ಆತನಿಗೆ ಕರಕುಶಲ, ಕುಂಬಾರಿಕೆಯ ಕುದುರೆ ಎಂದರೆ ಎಲ್ಲಿಲ್ಲದ ಪ್ರೀತಿ. ಕುಲುಮೆಯವರು ಗುಜರಿಗೆ ಹಾಕುವ ಕುಸುರಿ ಚೂರು, ಬಾಣದ ಮುಖಗಳನ್ನು ಆಯ್ದು ತರುತ್ತಿದ್ದಘಿ. ರಜಾ ದಿನದಲ್ಲಿ ತಾತನೊಂದಿಗೆ ಬೇಲೆ ಸುತ್ತುವುದು, ಮುರಿದ ಕೋಟೆಕೊತ್ತಲಗಳ ಚಾರಣಕ್ಕೆ ಹೋಗುವುದಿತ್ತುಘಿ. ಆಗರ್ಭ ಶ್ರೀಮಂತನಾಗಿದ್ದ ತಾತನು ಮನಸ್ಸು ಮಾಡಿದರೆ ತನ್ನ ಬೆಳ್ಳಿಯ ಬೆತ್ತದ ತುದಿಯಿಂದಲೇ ಬೆಲೆಬಾಳುವ ಒಡವೆಗಳನ್ನು ಎಗರಿಸಬಹುದಿತ್ತುಘಿ. ತಾತ, ಅಂದರೆ ತಾಯಿಯ ತಂದೆ. ಆತನೊಂದಿಗೆ ಹೋಗುವಾಗ ಬೇಲೆಯಲ್ಲಿ ಚಿಪ್ಪುಘಿ, ಶಂಖ ಸಂಗ್ರಹಿಸುತ್ತಿದ್ದರು. ಬೇಲೆಯ ಹೂತಿದ್ದ ಚಿಪ್ಪುಗಳನ್ನು ಬೆತ್ತದ ಮೊನೆಯಲ್ಲಿ ತಾತ ಕುಕ್ಕಿ ದಬ್ಬಿದರೆ, ಅದನ್ನು ಹೆರಕುವ ಮೊಮ್ಮಗ ಖುಷಿಯಿಂದ ಎದೆಗವಚಿಕೊಳ್ಳುತ್ತಿದ್ದಘಿ. ತಾತ, ಬ್ರಿಟ್‌ವೈಸರ್ ತಾಯಿಯ ತಂದೆ ಓರ್ವ ಆಗರ್ಭ ಶ್ರೀಮಂತ. ಬೀಚ್‌ಗೆ ಹೋಗುವಾಗಲೂ ದುಬಾರಿ ಬಟ್ಟೆಘಿ, ಟೆಲಿಸ್ಕೋಪ್ ಹಿಡಿದು ಜಾಲಿಯಾಗಿರುತ್ತದ್ದ ಮನುಷ್ಯಘಿ. ಪುಟ್ಟ ಬ್ರಿಟ್‌ವೈಸರ್‌ಗೆ ಅಜ್ಜನ ಕೋಲಿನಲ್ಲಿ ತುದಿಯಿಂದ ಎಗರುತ್ತಿದ್ದ ಚಿಪ್ಪುಗಳೆಂದರೆ ಅವ ಕೇವಲ ಚಿಪ್ಪುಗಳಲ್ಲಘಿ. ಮುತ್ತುಘಿ, ರತ್ನಘಿ, ಹವಳ ಇನ್ನೇನೋ ಆಗಿರುತ್ತಿದ್ದವು. ಕೆಲವೊಮ್ಮೆ ಇದನ್ನೆಲ್ಲ ಜೀಬು ತುಂಬಿಕೊಳ್ಳಲು ಹುಡುಗನಿಗೆ ಭಯವಾಗುತ್ತಿತ್ತುಘಿ, ಅಂತ ಸಂದರ್ಭದಲ್ಲಿ ಅಜ್ಜನೇ ನಿಶಾನೆ ಕೊಡುತ್ತಿದ್ದ ಕಾರಣ, ಧೈರ್ಯದಿಂದ ತುಂಬಿಕೊಂಡು ಅಜ್ಜನ ಮನೆಯ ಆಟದ ಕೋಣೆಯಲ್ಲಿ ತಂದು ತುಂಬಿಕೊಳ್ಳುತ್ತಿದ್ದಘಿ. ಅಜ್ಜನ ಮನೆ ಎಂದರೇ ಸ್ವರ್ಗ, ಅದರಲ್ಲೂ ನೆಲಮಾಳಿಗೆಯಲ್ಲಿ ತಾನು ಸಂಗ್ರಹಿಸಿದ ಕಪ್ಪೆಚಿಪ್ಪುಘಿ, ಕುಲುಮೆ ಗುಜರಿ, ಕುಂಬಾರಿಕೆಯ ತುಣುಕುಗಳ ನಡುವೆ ಕುಳಿತರೆ ಊಟ, ತಿಂಡಿಗಳೆ ಮರೆತುಹೋಗುತ್ತಿತ್ತುಘಿ. ‘‘ಅಲ್ಲಿರುವ ಪ್ರತೀ ವಸ್ತುವೂ ನನ್ನ ಜೀವದ ಕಣದಂತೆ ಇದ್ದವು’’ ಎಂದು ಬ್ರಿಟ್‌ವೈಸರ್ ಸ್ಮರಿಸುತ್ತಾನೆ. ಬ್ರಿಟ್‌ವೈಸರ್ ೧೯೭೧ರಲ್ಲಿ ಕಾಂದಾನಿ ಬೇರುಗಳು ಬಲವಾದ ಕು ಕುಟುಂಬದಲ್ಲಿ ಜನಿಸಿದ. ಕದ್ದು ದಕ್ಕಿಸಿಕೊಂಡ ಪ್ರದೇಶ ಎಂದೇ ಬಣ್ಣಿಸಲ್ಪಡು ಫ್ರಾನ್ಸ್ ದೇಶದ ಐಸಾಕ್ ಪ್ರಾಂತ್ಯದಲ್ಲಿ ಈತನ ಜನನ. ಕ್ರಿಶ್ಚಿಯನ್ ಹಿನ್ನೆಲೆಯ ಈತನಿಗೆ ಸಂಪ್ರದಾಯದಂತೆ ಪಾಲಕರು ಸ್ಟೀವನ್ ಗುಯಿಲಾಮ್ ಫ್ರೆಡ್ರಿಕ್ ಬ್ರಿಟ್‌ವೈಸರ್ ಎಂದು ನಾಮಕರಣ ಮಾಡಿದರು. ಅಪ್ಪ ಅಮ್ಮನ ಏಕೈಕ ಮಗುವಾಗಿದ್ದ ಈತನ ತಂದೆ ರೋನಾಲ್ಡ್ ಬ್ರಿಟ್‌ವೈಸರ್ ಡಿಪಾರ್ಟ್‌ಮೆಂಟಲ್ ಸ್ಟೋರ್ ಒಂದರಲ್ಲಿ ಮ್ಯಾನೇಜರ್ ಆಗಿದ್ದರು. ಈತನ ತಾಯಿ ಮಿರೇಲಿ ಸ್ಟೆಂಗಲ್ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಮಕ್ಕಳ ನರ್ಸ್ ಆಗಿದ್ದಳು. ಜರ್ಮನಿ, ಸ್ವಜರ್‌ಲ್ಯಾಂಡ್ ಗಡಿ ರೇಖೆಗಳ ನಡುವೆ ಸಿಕ್ಕಿಕೊಂಡಂತಿರುವ ಫ್ರಾನ್ಸ್‌ನ ಹಳ್ಳಯ ಶ್ರೀಮಂತ ಬಂಗಲೋ ಒಂದರಲ್ಲಿ ಡ್ಯಾಸ್‌ಹೌಂಡ್ ನಾಯಿಮರಿಯಂತೆ ಅಕ್ಕರೆಯಿಂದ ಈತನ ಬಾಲ್ಯ ಕಳೆಯಿತು. ಹಾಗಾಗಿ ಜರ್ಮನ್, ಫ್ರೆಂಚ್‌ನಲ್ಲಿ ಪಟಪಟ ಮಾತಾಡುತ್ತಿದ್ದರೆ, ಇಂಗ್ಲೀಷ್ ಕೂಡ ಬರುತ್ತಿತ್ತುಘಿ. ಜತೆಗೆ ಅಲ್ ಸೇಶಯನ್ ಮೂಲದ ಸಣ್ಣ ಪುಟ್ಟ ಭಾಷೆಯ ನುಡಿಗಟ್ಟೂ ತಿಳಿಯುತ್ತಿತ್ತುಘಿ. ಗಡಿ ಭಾಗದ ಶ್ರೀಮಂತ ಹಳ್ಳಿಯನ್ನು ಆಳಲು ಜರ್ಮನಿ, ಮತ್ತು ಫ್ರಾನ್ಸ್ ಯಾವತ್ತೂ ಕಚ್ಚಾಡುತ್ತಲೇ ಇರುತ್ತಿದ್ದ ಕಾರಣ, ಹಿಂದಿನ ೧೫೦ ವರ್ಷಗಳಲ್ಲಿ ಐದುಬಾರಿ ಅರಸೊತ್ತಿಗೆ ಬದಲಾಗುತ್ತಿತ್ತುಘಿ. ಮುಂದಿನ ಬಾರಿ ಫ್ರಾನ್ಸ್ ಅರಸರ ಪಾಳಿ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದರು. ಇಲ್ಲಿನ ಒಂದು ಶ್ರೀಮಂತ ಬಂಗಲೆಯಲ್ಲಿಘಿ, ರಂಗು ರಂಗಾದ ಬಂಗಲೆಯಲ್ಲಿ ಬ್ರಿಟ್‌ವೈಸರ್ ಇರುತ್ತಿದ್ದಘಿ. ೧೮ನೇ ಶತಮಾನದ ಕುಸುರಿಯ ಕೋಟು, ೧೭ನೇ ಶತಮಾನದ ದೊರೆ ಲೂಯಿಯ ಒರಗು ಕುರ್ಚಿ ಇವುಗಳಲ್ಲಿ ಹತ್ತು ಹೊರಬವುದು ಈತನ ಅಟಗಳಲ್ಲಿ ಒಂದಾಗಿತ್ತುಘಿ. ಹಿರಿಯರು ಹೊರಕ್ಕೆ ಹೋದಾಗ ಬಂಗಲೆಯ ಹಳೆಯ ಮಿಲಿಟರಿ ಪರಿಕರಗಳು, ನಿಲುವಂಗಿ, ಟೋಪಿಗಳನ್ನು ಹಾಕಿಕೊಂಡು ಕಾಲ್ಪನಿಕ ವೈರಿಗಳೊಂದಿಗೆ ಗೆಲುವಿನ ಡೈಲಾಗ್ ಹೊಡೆಯುತ್ತಿದ್ದ ದಿನಗಳು ಈಗಲೂ ಬ್ರಿಟ್‌ವೈಸರ್ ನೆನಪಿದೆ. ಬಡ್ಡಾಗಿ ಬಿದ್ದ ಖಡ್ಗಗಳನ್ನು ಚೀಲದಿಂದ ಹೊರ ತೆಗೆದು ಅಡ್ಡಾದಿಡ್ಡ ಝಳಪಿಸಿ ಕಾಲ್ಪನಿಕ ವೈರಿಯನ್ನು ಬಡಿಯುತ್ತಿದ್ದಘಿ. ಬಂಗಲೆಯ ಗೋಡೆಯು ಆ ಭಾಗದ ಖ್ಯಾತ ಕಲಾವಿದರ ಚಿತ್ರಗಳಿಂದ ತುಂಬಿರುತ್ತಿದ್ದವು. ಸಮೀಪದ ಗಲ್ಲಿಯೊಂದಕ್ಕೆ ನಾಮಕರಣ ಗೌರವ ಪಾತ್ರನಾಗಿದ್ದ ಅಲ್ ಸೇಶಿಯನ್ ಕಲಾವಿದ ರಾಬರ್ಟ್‌ ಬ್ರಿಟ್‌ವೈಸರ್ ನ ಅಭಿವ್ಯಕ್ತಿ ಕಾಲದ ಪೇಟಿಂಗ್ ಒಂದು ಅಲ್ಲಿ ಇತ್ತುಘಿ. ಆ ಕಲಾವಿದನು ಕುಟುಂಬದ ನಿಕಟ ಸದಸ್ಯನಾಗಿರಲಿಲ್ಲವಾದರೂ, ಈತನ ಮುತ್ತಜ್ಜನ ಸಹೋದರ. ಅಲ್ಲಿದ್ದ ದೊರೆ ಲೂಯಿಯ ಪೇಂಟಿಂಗ್‌ನ್ನು ೧೯೭೫ರಲ್ಲಿಘಿ, ಮುಕ್ತಾಯಗೊಳಿಸಿದ್ದುಘಿ, ಆಗಷ್ಟೇ ಬಾಲಕ ಬ್ರಿಟ್‌ವೈಸರ್ ಪ್ರಪಂಚದಲ್ಲಿ ಕಣ್ಣು ಬಿಡುತ್ತಿದ್ದಘಿ. ಪರಿಚಿತರಲ್ಲಿ , ತಾನು ಪ್ರಖ್ಯಾತ ಚಿತ್ರಕಲಾವಿದ ರಾಬರ್ಟ್‌ ಬ್ರಿಟ್‌ವೈಸರ್ ಮೊಮ್ಮಗ, ಆತನ ಕ್ಯಾನ್ವಾಸ್ ಭಾಗದಲ್ಲಿ ತಾನಿದ್ದೇನೆ ಎಂದು ಬ್ರಿಟ್‌ವೈಸರ್ ಜಂಬದಿಂದಲೇ ಹೇಳಿಕೊಳ್ಳುತ್ತಿದ್ದ. ಪ್ರಚಾರಕ್ಕಾಗಿ ಮಾತ್ರ ಇದೊಂದು ತೋರಿಕೆಯ ಮಾತಾಗಿತ್ತು ಬಿಟ್ಟರೆ, ತನ್ನ ತಂದೆಯ ಕುಟುಂಬದೊಂದಿಗೆ ಬ್ರಿಟ್‌ವೈಸರ್‌ಗೆ ಯಾವತ್ತೂ ಭಾವನಾತ್ಮಕ ಸಂಬಂಧವೇ ಇರಲಿಲ್ಲ. ಎಲ್ಲ ಮೊಮ್ಮಕ್ಕಳಂತೆ, ತಾಯಿ ಮೂಲದ ಶ್ರೀಮಂತ ತಾತ ಅಲೈನ್ ಫಿಲಿಪ್ ಹಾಗೂ ಅಜ್ಜಿ ಜೊಸೆಫ್ ಸ್ಟೆಂಜಿಲ್ ದಂಪತಿ ಎಂದರೆ ಬ್ರಿಟ್‌ವೈಸರ್ ಗೆ ಎಲ್ಲಿಲ್ಲದ ಗೌರವ. ತನಗೆ ತಿಳಿವಳಿಕೆ ಬರುವ ವಯಸ್ಸಿನ ಅತ್ಯುತ್ತಮ ದಿನಗಳು ಇವರೊಂದಿಗೆ ಕಳೆಯಿತು. ಆ ಹೊತ್ತಿನಲ್ಲೇ ಮತ್ತೊಮ್ಮೆ ನವೀಕರಿಸಿದ ತೋಟದ ಮನೆಯಲ್ಲಿ ನಡೆಯುತ್ತಿದ್ದ ವಾರಾಂತ್ಯದ ಬೆಳದಿಂಗಳೂಟ, ಕೆಲವೊಮ್ಮೆ ತಡ ರಾತ್ರಿಯ ತನಕವೂ ವಿಸ್ತರಿಸುತ್ತಿದ್ದ ಕ್ರಸ್ ಮಸ್ ಮಸ್ತಿಗಳು ಯಾವತ್ತೂ ಮರೆಯಲು ಸಾಧ್ಯವಿಲ್ಲಘಿ. ಒಂದನೇ ಶತಮಾನದಲ್ಲಿ ಜೀಸಸ್ ಸೈನ್ಯವು ಕೋಟೆ, ಕೊತ್ತಲ ನಿರ್ಮಿಸಿದ ಜಾಗವೆಂಬ ಐತಿಹ್ಯದ ಆರ್‌ಹೈನ್ ಕಣಿವೆಯಲ್ಲಿ ಅಜ್ಜನೊಂದಿಗೆ ನಡೆಸುತ್ತಿದ್ದ ಚಾರಣವಂತೂ ಬ್ರಿಟ್‌ವೈಸರ್ ಜೀವನದಲ್ಲಿ ಮರೆಯಲು ಸಾಧ್ಯವಿರಲಿಲ್ಲಘಿ. ಕೆಲವೊಮ್ಮೆ ಬೆಳೆಯುವ ಹುಡುಗರ ತುರ್ತು ಖರ್ಚಿನ ಹಣವನ್ನು ಪೂರೈಸುವ ಅಜ್ಜಂದಿರೂ ಮೊಮ್ಮಕ್ಕಳ ಸವಿನೆನಪಿನ ಭಾಗವಾಗಿರುತ್ತಾರೆ. ಒಬ್ಬನೇ ಒಬ್ಬ ಮೊಮ್ಮಗು ಎಂಬ ಕಾರಣಕ್ಕೆ ಏನೊಂದು ಕೊರತೆ ಆಗದಂತೆ ಹೇಳಿದ್ದನ್ನೆಲ್ಲ ಕೊಡಿಸುತ್ತಿದ್ದ ಎಂಬ ಕಾರಣಕ್ಕಾಗಿ ಕೂಡ ಅಮ್ಮಜ್ಜ ನೆನಪಿನಲ್ಲಿ ಉಳಿದರೂ, ಇದೇ ಕಾರಣದಿಂದ ಬ್ರಿಟ್‌ವೈಸರ್ ಒಂದಿಷ್ಟು ಹಾದಿ ತಪ್ಪುವುದಕ್ಕೂ ಮುಂದೆ ಕಾರಣವಾಗಿತ್ತುಘಿ. ಅಮ್ಮಜ್ಜ ಕೊಡುತ್ತಿದ್ದ ಕಾಸು ತುಂಬಿದ ಪಾಕೀಟನ್ನು ಜೇಬಿಗಿಳಿಸಿ ಅಲ್ಲಿ ಇಲ್ಲಿ ಸಂತೆಯಲ್ಲಿ ಮೋಜು ಮಾಡುವುದು, ಅದರೊಂದಿಗೆ ಹಳೆಯ ಕಾಲದ ನಾಣ್ಯಘಿ, ಬೆಲೆಬಾಳುವ ಹರಳು, ಕೆಲವೊಮ್ಮೆ ಬೀಟಿಯ ಪೀಠೋಪಕರಣಗಳನ್ನು ಕೊಂಡು ಕೊಳ್ಳುತ್ತಿದ್ದಘಿ. ಹಳೆಯ ಪೋಸ್ಟ್ ಕಾರ್ಡ್‌ಗಳು, ಒಳ್ಳೆಯ ಬೈಂಡ್ ಇರುವ ಪುಸ್ತಕ, ಗಿಳಿ ಮೂತಿಯ ಹಿಡಿಕೆಗಳು ಇಂಥವೆಲ್ಲ ಆಗಿನಿಂದಲೇ ಬ್ರಿಟ್‌ವೈಸರ್ ಸಂಗ್ರಹದಲ್ಲಿ ಸೇರತೊಡಗಿದವು. ಶಿಲಾಯುಗದ ಜನರು ಬಳಸುತ್ತಿದ್ದ ಆಯುಧಗಳು, ಕಂಚಿನ ಗುರಾಣಿ ತರದ ಮಿನಿಯೇಚರ್,ಲೋಹದ ಹೂವು, ಲೋಗೋಗಳು ಮೆಚ್ಚುಗೆಯಾದಲ್ಲಿ ಅದನ್ನು ಖರೀದಿಸುತ್ತಿದ್ದಘಿ. ಗ್ರೀಕ್, ರೋಮನ್ ಹಾಗೂ ಇಜಿಪ್ಶಿಯನ್ ಕಾಲದ ಪುರಾತನ ಕಲಾಕೃತಿಗಳೆಂದರೆ ಆತನಿಗೆ ಎಲ್ಲಿಲ್ಲದ ಪ್ರೀತಿ ಶುರುವಾಗಿದ್ದೂ ಈ ಹೊತ್ತಿನಲ್ಲೇ ಆಗಿತ್ತುಘಿ. ಅಮ್ಮಜ್ಜನ ಶ್ರೀಮಂತಿಕೆಯ ಹರಿವು ಸಾಮಾಜಿಕವಾಗಿ ಈತನಿಗೆ ಒಂದು ನಾಟಕೀಯ ಎತ್ತರವನ್ನು ತಂದಿದ್ದ ಕಾರಣ, ಒಳಗೊಳಗೆ ಏಕಾಂಗಿಯಾಗಿ ಒತ್ತಡವೂ ಈತನನ್ನು ಕಾಡುತ್ತಿತ್ತುಘಿ. ಆಗಿನ ಹೊತ್ತಿನಲ್ಲೇ ಹೊಳಪಿನ ಕಾಗದದಲ್ಲಿ ಮುದ್ರಣವಾಗುತ್ತಿದ್ದ ಕಟ್ಟಡ ಶಾಸ್ತ್ರ ಹಾಗೂ ಕಲೆಯ ದುಬಾರಿ ಮಾಸಿಕಗಳ ಚಂದಾದಾರನಾಗಿದ್ದಲ್ಲದೆ, ಕ್ಲಾಸಿಕಲ್ ಪುಸ್ತಕಗಳನ್ನೂ ತರಿಸಿ ಓದುವುದು ಈತನ ಹವ್ಯಾಸವಾಯಿತು. ಪುರಾತತ್ವ ಕುತೂಹಲಿಗಳ ಗುಂಪಿನಲ್ಲಿ ಗುರುತಿಸಿಕೊಂಡು ಒಂದಿಷ್ಟು ಸೇವಾ ಕಾರ್ಯದಲ್ಲೂ ತೊಡಗಿಕೊಳ್ಳಲು ಇದೇ ಕಾರಣವೂ ಆಗಿತ್ತುಘಿ. ಚಿಕ್ಕ ವಯಸ್ಸಿನಲ್ಲಿ ಇದೆಲ್ಲ ಮಾನಸಿಕ ಆಶ್ರಯವೇ ಆಗಿಹೋಯಿತು. ಎಲ್ಲೋ ಗಲ್ಲಿಯಲ್ಲಿ ಆಡಿಕೊಂಡು, ವೀಡಿಯೋಗೇಮ್, ಸಂಜೆಹೊತ್ತಿಗೆ ಪಾರ್ಟಿ ಎಂದು ಓಡಾಡಿಕೊಂಡಿದ್ದ ಈತನ ಹರಯದ ಇತರ ಹುಡುಗರಿಗೆ ಬ್ರಿಟ್‌ವೈಸರ್ ಅಭಿರುಚಿ ಮುಜುಗರ ಆಗುವಂತಿತ್ತುಘಿ. ಈ ವಯಸ್ಸಿನಲ್ಲೂ ಸಾಮಾಜಿಕ ಜಾಲ ತಾಣಗಳು, ಇನ್‌ಸ್ಟಾಗ್ರಾಮ್ ಪೋಸ್ಟ್ ಎಂದರೆ ಈತನಿಗೆ ಒಂದು ರೀತಿಯ ಅಸಡ್ಡೆಯೇ. ಅದೆಲ್ಲ ವ್ಯರ್ಥ, ಅಭಿರುಚಿ ಇಲ್ಲದವರ ಕಾಲ ಹರಣ, ಕೊಳಕು ಗೀಳು ಎಂದೇ ನಂಬುವ ವ್ಯಕ್ತಿತ್ವಘಿ. ಯಾರು ನಮಗೆ ಲೈಕ್ ಒತ್ತುತ್ತಾರೆ, ಯಾರೇನೋ ಅಂದುಕೊಳ್ಳಬಹದು ಎಂದು ನಾವೇಕೆ ತಲೆ ಬಿಸಿ ಮಾಡಿಕೊಳ್ಳಬೇಕು ಎಂದು ಹೇಳುವ ಜಾಯಮಾನ. ಬ್ರಿಟ್‌ವೈಸರ್‌ನ ತಂದೆ ತಾಯಿಯ ಆಶಯ ಬೇರೆಯದೇ ಆಗಿತ್ತು. ಮಗನು ತರಗತಿಯಲ್ಲಿ ಒಳ್ಳೆಯ ಅಂಕ ಪಡೆಯಬೇಕು, ಚೆನ್ನಾಗಿ ಕಲಿತು ವೃತ್ತಪರ ನ್ಯಾಯವಾದಿಯಾಗಬೇಕು ಎಂದೆಲ್ಲ ಕನಸು ಕಾಣುತ್ತಿದ್ದರೆ, ಹುಡುಗನಿಗೆ ಮಾತ್ರ ಶಾಲಾ ಕೊಠಡಿಗೆ ಸೀಮಿತನಾಗಿ ಕಲಿಯುವುದೆಂದರೆ, ಆಗುತ್ತಿರಲಿಲ್ಲಘಿ. ಇನ್ನೊಂದೆಡೆ ಸಹಪಾಠಿಗಳೆಲ್ಲ ಒಂದು ರೀತಿಯಲ್ಲಿ ಆಲೋಚಿಸುತ್ತಿದ್ದರೆ, ಈತನಿಗೆ ಹೊಳೆಯುವ ವಿಚಾರಗಳೆಲ್ಲ ತದ್ವಿರುದ್ಧವೇ ಆಗಿರುತ್ತಿತ್ತುಘಿ. ತುಸು ನರಪೇತಲನಂತೆ ಇದ್ದ ಈತನನ್ನು ಇತರ ವಿದ್ಯಾರ್ಥಿಗಳು ಗೇಲಿ ಮಾಡುತ್ತಿದ್ದರು. ಸಹಪಾಠಿಗಳೆದುರು ನಗೆಪಾಠಲಿಗೀಡಾಗುವ ಕೆಲವು ಸನ್ನಿವೇಶದಿಂದ ವಾರಗಟ್ಟಲೆ ಕುಗ್ಗಿ ಮನೆಯಲ್ಲಿಯೇ ಕುಳಿತುಬಿಡುತ್ತಿದ್ದಘಿ.ಇದರಿಂದ ಹೊರ ಬರಲು ಆಪ್ತ ಸಮಾಲೋಚಕರಲ್ಲಿ ಕೆಲವು ಬಾರಿ ಹೋಗಿ ಬರುತ್ತಿದ್ದನಾದರೂ, ತನ್ನ ಸಮಸ್ಯೆಗಳಿಗೆ ಪರಿಹಾರವೇ ಇಲ್ಲಘಿ, ತಪ್ಪು ಜಾಗದಲ್ಲಿಘಿ, ವಿಚಿತ್ರ ದೇಶದಲ್ಲಿ ತಾನು ಹುಟ್ಟಿ ಸಿಕ್ಕಿಹಾಕಿಕೊಂಡೆ ಎಂದೆಲ್ಲ ಆತನಿಗೆ ಅನ್ನಿಸುತ್ತಿತ್ತುಘಿ. ಚಿಕ್ಕ ಪುಟ್ಟ ಘಟನೆಗಳಿಂದ ಕುಗ್ಗಿ ಹೋಗುತ್ತಿದ್ದ ಬ್ರಿಟ್‌ವೈಸರ್‌ನ ವರ್ತನೆ ಆತನ ತಂದೆಗೆ ಹಲವು ಬಾರಿ ಆತಂಕ, ಕೋಪಕ್ಕೆ ಕಾರಣವಾಗುತ್ತಿತ್ತುಘಿ. ತಂದೆ ಒಂದು ರೀತಿಯಲ್ಲಿ ಕಟ್ಟು ನಿಟ್ಟಿನ ಅಕಾರಿಯಂತೆ ಮಗನಿಗೆ ಅದು ಇದು ಎಳೆದಾಡುವುದಿತ್ತುಘಿ. ಸುಮ್ಮನೇ ಕುಳಿತಿರುವ ಬದಲು ಏನಾದರೂ ಒಂದು ಕೆಲಸ ಕಾಣು ಎನ್ನುವುದಿತ್ತುಘಿ. ಆದರೆ ಹುಡುಗ ಸುಧಾರಿಸುವ ಲಕ್ಷಣ ಕಾಣದೇ ಹೋದಾಗ, ಒಂದು ಬೇಸಿಗೆಯಲ್ಲಿ ಕರೆದು, ಪ್ಯೂಗಟ್ ಪ್ರದೇಶದ ಅಟೋ ಉದ್ಯಮದ ಚಾಳವೊಂದರಲ್ಲಿ ಕೆಲಸಕ್ಕೆ ಸೇರಿಸಿ, ದಿನದ ಹೆಚ್ಚು ಕಾಲದ ಮೈ ಬಗ್ಗಿಸಿ ದುಡಿಯುವುದರಿಂದಾದರೂ, ಬಾಲಕ ಸುಧಾರಿಸಬಹುದು ಎಂದುಕೊಂಡಿದ್ದಘಿ. ತಂದೆ ಅಂದಾಜಿಸಿದಂತೆ ಆಶ್ಚರ್ಯವೇನೂ ಘಟಿಸಲಿಲ್ಲಘಿ, ಹೊರತಾಗಿ ಒಂದೇ ವಾರದಲ್ಲಿ ಅಲ್ಲಿನ ಕೆಲಸ ಬಿಟ್ಟಘಿ. ‘ ಆ ಘಟನೆಯಿಂದ ನನ್ನ ಬಗ್ಗೆ ಈ ಹುಡುಗ ಎಲ್ಲಿಯೂ ಸಲ್ಲದ ನಿಷ್ಪ್ರಯೋಜಕ’’ ಎಂದುಕೊಂಡಿರಬೇಕು. ಇನ್ನೊಂದೆಡೆ, ಮಗನ ವರ್ತನೆಯನ್ನು ನೋಡಿ ತಾಯಿ ಕರುಳಿನ ಸ್ಪಂದನೆಯೇ ಬೇರೆ ರೀತಿ ಆಗಿತ್ತುಘಿ. ಮಗನನ್ನು ದಾರಿಗೆ ತರಲು ಒಮ್ಮೊಮ್ಮೆ ತಾಯಿ ಸಟ್ಟೆದ್ದು ಎಗರಾಡುತ್ತಿದ್ದಳು, ಮತ್ತೊಮ್ಮೆ ಏನೂ ಆಗಿಲ್ಲ ಎಂಬಂತೆ ‘‘ಏನಾದರೂ ಹಾಳಾಗು’’ ಎಂದು ಆಚೆ ಹೋಗಿಬಿಡುತ್ತಿದ್ದಳು. ಮನೆಯಲ್ಲಿ ತಂದೆ ಹಾಗೂ ಮಗನ ನಡುವೆ ಆಗಾಗ ನಡೆಯುತ್ತಿದ್ದ ಜಗಳ, ದೊಂಬಿಯಲ್ಲಿ ಕೆಲವೊಮ್ಮೆ ಮಗನ ಪಕ್ಷವನ್ನೂ ವಹಿಸಿಕೊಂಡರೂ, ಹೆಚ್ಚು ಮಾತಾಡದೇ ಸುಮ್ಮನೇ ಇರುತ್ತಿದ್ದಳು. ವ್ಯರ್ಥ ಕಾಲ ಹರಣ ಮಾಡುತ್ತಿದ್ದ ಮಗನಿಗೆ, ಅದರಲ್ಲೂ ಒಮ್ಮೆ ಗಣಿತದಲ್ಲಿ ಸಿಂಗಲ್ ಡಿಜಿಟ್‌ನ ಅಂಕಪತ್ರಿಕೆಯನ್ನು ಮನೆಗೆ ತಂದಾಗ ‘‘ಇದನ್ನೆಲ್ಲ ನಿಮ್ಮ ತಂದೆ ನೋಡಿದರೆ ಸಿಟ್ಟು ಮಾಡುತ್ತಾರೆ ಕಣೊ’’ ಎಂದು ಎಚ್ಚರಿಸುತ್ತಿದ್ದಳು. ಆದರೆ, ಅಂಕಪತ್ರದಲ್ಲಿ ಗಣಿತದ ಅಂಕವನ್ನು ತಿದ್ದಿ ಡಬಲ್ ಡಿಜಿಟ್ ಮಾಡಿಕೊಂಡ ಮಗನ ತಪ್ಪು ತಿಳಿದರೂ, ತಾಯಿ ಏನೂ ಮಾತಾಡದೆ, ಮೌನ ಸಮ್ಮತಿಯನ್ನೂ ತೋರಿದ್ದಳು. ಆತ ಏನು ಹೇಳಿದರೂ ಗೋಣು ಅಲ್ಲಾಡಿಸುವುದು, ಆತನ ತಪ್ಪನ್ನು ಸಮ್ಮತಿಸುವುದು ಕ್ರಮೇಣ ಅವರ ಸಂಬಂಧದ ಸ್ಥಾಯಿಭಾವವೇ ಆಯಿತು. ತುಂಬ ಮಂಕು ಕವಿದಂತೆ ಕುಳಿತುಕೊಂಡಾಗ ಬ್ರಿಟ್‌ವೈಸರ್ ನನ್ನು ಯಾವುದಾದರೂ ಮ್ಯೂಸಿಯಂ ಗೆ ಕರೆದೊಯ್ದರೆ ಜೀವಕಳೆ ಬರುತ್ತದೆ ಎಂದು ತಿಳಿಯುತ್ತಲೇ ಆತನ ತಂದೆ ತಾಯಿಗಳು, ಅನಿವಾರ್ಯವಾಗಿ ಅದಕ್ಕೂ ಹೊಂದಿಕೊಂಡರು. ಸಮೀಪದ ಸಣ್ಣಪುಟ್ಟ ಮ್ಯೂಸಿಂಗಳಲ್ಲಿ ಒಂದಕ್ಕೆ ಆತನನ್ನು ಕಳುಹಿಸಿ, ಸುಮ್ಮನೇ ಸುತ್ತಾಡಲು ಅವಕಾಶಮಾಡಿಕೊಡುತ್ತಿದ್ದರು. ಮ್ಯೂಸಿಯಂನಲ್ಲಿ ಯಾವುದಾದರೂ ಒಂದು ಜಾಗದಲ್ಲಿ ಕುಳಿತು ಚಿತ್ರಕಲೆ, ಮ್ಯೂರಲ್‌ಗಳನ್ನು ನೋಡುತ್ತಘಿ, ಅವುಗಳನ್ನು ಮುಟ್ಟಿ ಹಿತಾನುಭವ ಪಡೆಯುವುದಲ್ಲದೆ, ಪ್ರಸಿದ್ಧ ಲಾಕೃತಿಗಳಲ್ಲಿಘಿ, ಅಲ್ಲಲ್ಲಿ ಸಿಗುವ ಸಣ್ಣಪುಟ್ಟ ವಕ್ರವನ್ನು ಕಂಡು ಹಿಡಿಯುವುದರಲ್ಲಿ ಖುಷಿಪಡುತ್ತ ಕಾಲ ಹರಣ ಮಾಡುತ್ತಿದ್ದಘಿ. ವಾಸ್ತವದಲ್ಲಿ ಯಾವುದೇ ಕಲಾವಿದನೂ ಪರಿಪೂರ್ಣನಲ್ಲಘಿ, ಯಾವುದೇ ಒಂದು ಗೆರೆಯೂ ಇನ್ನೊಂದರಂತೆ ಇರುವುದಿಲ್ಲ ಎಂಬುದು ಕಲಾ ವಲಯದಲ್ಲಿ ಸರ್ವಸಮ್ಮತವಾದ ವಿಚಾರ ತಾನೆ, ಇದನ್ನು ಬ್ರಿಟ್‌ವೈಸರ್ ಬೇರೆಯದೇ ರೀತಿಯಲ್ಲಿ ತೆಗೆದುಕೊಳ್ಳುತ್ತಿದ್ದಘಿ. ಅಂತೂ ಹಾಗೂ ಹೀಗೂ ಮಾಡಿ ಈತನ ಮೂಡು ಒಂದು ಸುಸ್ಥಿತಿಗೆ ಬರುತ್ತಲೇ ಪಾಲಕರು ಹೋಗಿ ಈತನನ್ನು ಕರೆತರುತ್ತಿದ್ದರು. ಇಂಥ ಸನ್ನಿವೇಶದಲ್ಲೂ ಕೆಲವೊಮ್ಮೆ ಅಪಘಾತಗಳು ಆಗುವುದಿದೆ. ಸ್ಟ್ರಾಂಗ್‌ಬರ್ಗ್‌ನ ಮ್ಯೂಸಿಯಂ ಒಂದರಲ್ಲಿ ಹೀಗೆ ಲೋಹದ ಶಿಪ್ಪದ ಮೇಲೆ ಬೆರಳಾಡಿಸಿ ಖುಷಿಯ ಲಹರಿಯಲ್ಲಿದ್ದ ಬ್ರಿಟ್‌ವೈಸರ್ ಬೆರಳು, ರೋಮನ್ ಶವಪೆಟ್ಟಿಗೆಯ ಬಿಚ್ಚಿಕೊಡ ದಬ್ಬೆಯೊಳಗೆ ಸಿಲುಕಿಕೊಂಡಿತು. ಕೈ ಬೆರಳನ್ನು ಆಚೆ ಸೆಳೆಯುವ ಬರದಲ್ಲಿ ಒಂದು ನಾಣ್ಯದ ಗಾತ್ರದ ಗಾಜಿನ ಕೆತ್ತೆಯೊಂದು ಬ್ರಿಟ್‌ವೈಸರ್ ಕೈಯ್ಯಲ್ಲಿ ಕಿತ್ತುಕೊಂಡು ಬಂದಿತು. ಅದೊಂದು ವಿಚಿತ್ರ ಉಭಯ ಸಂಕಟವಾಗಿ ಆಚೆ ಈಚೆ ನೋಡುತ್ತಘಿ, ಕಿತ್ತು ಬಂದ ಸುಂದರ ಕೆತ್ತೆಯನ್ನು ಅಮುಕಿ ಜೇಬಿಗೆ ಹಾಕಿಕೊಂಡ. ತಾನು ನಂಬುತ್ತಿದ್ದ ಪುರಾತತ್ವ ದೈವವೇ ತನಗೆ ಇದೊಂದು ಪ್ರಸಾದ ರೂಪದಲ್ಲಿ ಕೊಟ್ಟ ಕೊಡುಗೆ ಎಂದು ಒಮ್ಮೆ ರೋಮಾಂಚಿತನೂ ಆದ. ತಾತನೊಂದಿಗೆ ಕೋಟೆ ಕೊತ್ತಲ ಸುತ್ತುವಾಗ, ಅಲ್ಲಿ ಇಲ್ಲಿ ಸಿಗುತ್ತಿದ್ದ ಕಲಾ ತುಣಿಕುಗಳು, ಬೇರೊಂದು ಸ್ಥಳದಲ್ಲಿ ತನಗೆ ಈ ಬಾರಿ ದಕ್ಕಿತು ಎಂದುಕೊಂಡು ಒಳಗೊಳಗೇ ಪುಳಕಿತನೂ ಆದ. ಹಾಗೆ ನೋಡಿದರೆ, ಇದೊಂದು ಚಿಕ್ಕ ಅವಘಡ. ಎಕ್ಸಿಡೆಂಟ್ ಎಂದು ಕಂಡರೂ, ಆತ ಮುಂದೆ ಬೃಹತ್ ಮಾಸ್ಟರ್ ಪೀಸ್‌ಗಳನ್ನು ಎಗಿರಿಸಲು ಜೀವನದ ಮೊದಲ ಯಶಸ್ವೀ ಅಡ್ಡದಾರಿಯೂ ಆಯಿತು. ಮನೆಗೆ ಬಂದು ಈ ತುಣುಕನ್ನು ತನ್ನ ಕೆಳಮನೆಯ ಕೋಣೆಯಲ್ಲಿಘಿ, ಚಾರಣದಲ್ಲಿ ಸಿಕ್ಕ ತುಣುಕು, ಮಿಣುಕುಗಳ ಜತೆಯಲ್ಲೇ ಇದನ್ನೂ ಇಟ್ಟುಕೊಂಡ, ಆಗ ನೋಡಿದರೂ, ಹತ್ತಾರು ಶತಮಾನಗಳ ಹಿಂದೆ ಯಾವುದೋ ಶಿಲ್ಪಿ ತಯಾರಿಸಿದ ಆ ತುಣುಕ ಜೋಪಾನವಾಗಿಯೇ ಇದೆ. ಅದರ ಪಕ್ಕದಲ್ಲಿ ಈ ಹಿಂದೆ ತಾನು ಖರೀದಿಸಿ ತಂದ ಬೆಲೆ ಬಾಳುವ ಮಣಿಗಳು, ಗೋರಿಲ್ಲಾ ತರ ಕಾಣುವ ಕಾಫಿ ಬೊಡ್ಡೆಗಳು ಎಲ್ಲವೂ ಒಂದಕ್ಕೊಂದು ತಾಗಿಕೊಂಡು ಕುಖಿತಿವೆ. ಆಗಲೇ ಹೇಳಿದಂತೆ ಕೆಳಮನೆಯ ಈ ಪ್ರಪಂಚಕ್ಕೆ ಹೋದರೆ, ಮತ್ತೆ ಕಳೆದುಹೋಗುವಷ್ಟು ಕತೆಯಲ್ಲಿ ತಲ್ಲೀನನಾಗುತ್ತಿದ್ದ ಬ್ರಿಟ್‌ವೈಸರ್. ಹದಿಹರಯದಲ್ಲಿ ಸಂಗೀತದ ಪರಿಕರಗಳು ಹಾಗೂ ವೈದ್ಯಕೀಯ ಸ್ಟೆತಾಸ್ಕೋಪ್ ಮತ್ತಿತರ ಸಾಧನಗಳ ಬಗ್ಗೆ ಈತನಿಗೆ ಎಲ್ಲಿಲ್ಲದ ಕುತೂಹಲ ಇತ್ತುಘಿ. ಪಾನೀಯ ಲಾಳಿಕೆಗಳು, ಔನ್ಸ್‌ಗಳ ಕೊಕ್ಕುಘಿ, ದಾಗಿನಿಗಳನ್ನು ಇಡುತ್ತಿದ್ದ ಸುಂದರ ಪೆಟ್ಟಿಗೆ, ಅಲಾದಿ ದೀಪಗಳು, ಬಂದೂಕಿನ ಹೊದಿಕೆ, ಖಡ್ಗದ ವರೆ, ಚರ್ಮದ ಶಿರಸ್ತ್ರಾಣ, ಬತ್ತಳಿಕೆ, ಮನೆಯಲ್ಲಿ ತಂದೆ ಬಳಸುತ್ತಿದ್ದ ಪೀಠೋಪಕರಣ, ವಾಚುಗಳ ಪೆಟ್ಟಿಗೆ ಆಗೀಗ ಎತ್ತಿ ನೋಡಿ ಖುಷಿಪಡುತ್ತಿದ್ದಘಿ. ದಂತದಿಂದ ಸಿದ್ಧಪಡಿಸಿದ ತಂಬಾಕಿನ ಪೆಟ್ಟಿಗೆ, ಆ್ಯಂಟಿಕ್ ಪುಸ್ತಕಗಳು, ಹುಕ್ಕಾಗಳು ಹೀಗೆ ಐಶಾರಾಮಿ ಸಂದರ್ಭ ಬಳಸುವ ಹಳೆಯ ಪರಿಕರಗಳನ್ನು ಯಾವತ್ತೂ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಆತನ ಹವ್ಯಾಸವೇ ಆಗಿತ್ತುಘಿ. ಹೀಗೆ ಇಂಥದ್ದರಲ್ಲೇ ಲೋಕ ಮರೆಯುತ್ತಿದ್ದ ಮಗನ ಬಗ್ಗೆ ಒಂದೆರಡು ಬಾರಿ ಮೃದು ಮಾತಿನಲ್ಲಿ ಎಚ್ಚರಸಿದರು, ಕ್ರಮೇಣ ಬಯ್ದು ಆತನನ್ನು ಹದ್ದುಬಸ್ಥಿನಲ್ಲಿಡಲು ತಂದೆಯೂ ಪ್ರಯತ್ನಿಸಿದರು. ಹಾಗೇ ನಡೆಯುತ್ತಲೇ ಇದ್ದಾಗ, ೧೯೯೧ ರಲ್ಲಿ ಬ್ರಿಟ್‌ವೈಸರ್ ಪ್ರೌಢ ಶಿಕ್ಷಣವನ್ನೂ ಪಡೆದು ಹೊರಬಂದ. ಈಹೊತ್ತಿನಲ್ಲಿ ಮನೆಯಲ್ಲಿ ಆಗೀಗ ನಡೆಯುತ್ತಲೇ ಇದ್ದ ಗದ್ದಲದಿಂದ ಬೇಸತ್ತ ನೆರೆ ಕೆರೆಯವರು ಕೆಲವು ಬಾರಿ ಪೊಲೀಸರಿಗೂ ದೂರು ನೀಡಿದರು. ಇದೇ ಹಂತದಲ್ಲಿ ಮನೆಯಲ್ಲಿ ಬಿರುಕು ಮತ್ತಷ್ಟು ವಿಸ್ತಾರವಾಗಿ, ತಂದೆ, ಮನೆಯನ್ನು ಬಿಟ್ಟು ಹೋದರು. ಹೋಗುವಾಗ ಬ್ರಿಟ್‌ವೈಸರ್ ತುಂಬ ಹಚ್ಚಿಕೊಂಡ ಪೀಠೋಪಕರಣ, ಕೆಲವು ಮಿಲಿಟರಿ ಗುರಾಣಿತರದ ಎಂಟಿಂಕ್, ಚಿಕ್ಕವನಿರುವಾಗ ರಚಿಸಿಕೊಟ್ಟ ಸುಂದರವಾದ ಪೇಂಟಿಂಗ್, ವಾಚುಗಳ ಪೆಟ್ಟಿಗೆ ಸಹಿತ, ಬ್ರಿಟ್‌ವೈಸರ್ ಪ್ರಾಣ ಇಟ್ಟುಕೊಂಡ ಯಾವೊಂದು ವಸ್ತುವನ್ನೂ ಬಿಡದೆ, ಇದು ತನಗೆ ತಲೆಮಾರುಗಳಿಂದ ಬಂದ ಸ್ವಂತದ ಆಸ್ತಿ ಎಂದು ತಂದೆ, ಪ್ಯಾಕ್ ಮಾಡಿಕೊಂಡೇ ಮನೆಯಿಂದ ಆಚೆ ಹೋದಾಗ, ನಿಜ ಅರ್ಥದಲ್ಲಿಘಿ, ತಾಯಿ ಮಗ ಪರದೇಸಿಯೇ ಆದರು. ಜೀವಂತ ಅಪ್ಪ ಹಾಗೂ ಜೀವ ಇಟ್ಟುಕೊಂಡಿದ್ದ ಕಲಾಕೃತಿ, ದಾಗಿನಿಗಳೆರಡನ್ನೂ ಬ್ರಿಟ್‌ವೈಸರ್ ತನ್ನ ಹತ್ತೊಂಬತ್ತನೇ ವಯಸ್ಸಿನಲ್ಲಿ ಸಂಪೂರ್ಣ ಕಳೆದುಕೊಂಡು ಮಾನಸಿಕವಾಗಿ ಪರಿತ್ಯಕ್ತ ಭಾವನೆಯಲ್ಲಿ ಮುಳುಗಿದ. ನಂತರ ದಿನಗಳಲ್ಲಿ ತಾಯಿ ಮಾತ್ರ ಈತನ ಜತೆಯಲ್ಲಿದ್ದುದು ಬಿಟ್ಟರೆ, ತಂದೆಸಂಪರ್ಕವೇ ಕಡಿದುಹೋಯಿತು. ಜೀವನಾಧಾರ ಅಲುಗಾಡುತ್ತಲೇ ತಾಯಿ ಮಗನಿಗೆ ದೊಡ್ಡ ಮನೆಯಲ್ಲಿ ಇರುವುದು ಸಾಧ್ಯವಾಗದೆ, ಒಂದು ಅಪಾರ್ಟ್‌ಮೆಂಟ್ ಬಾಡಿಗೆ ಮನೆಗೆ ಸ್ಥಳಾಂತರ ಹೊಂದಬೇಕಾಯಿತು. ‘‘ ಹೊಸ ಮನೆಗೆ, ದೃತಿಗೆಟ್ಟ ನನ್ನನ್ನು ಹಾಗೂ ಇಕಿಯಾ ಕಂಪೆನಿಯ ಒಂದಿಷ್ಟು ಹೊಸ ಪೀಠೋಪಕರಣಗಳನ್ನು ತಂದು ಹಾಕಿದಳು.’’ ಎಂದು ತಾಯಿಯ ಅಂದಿನ ದಿನಗಳನ್ನು ಬ್ರಿಟ್‌ವೈಸರ್ ಸ್ಮರಿಸುತ್ತಾನೆ. ಅಪ್ಪನಿದ್ದ ಕಾಲದಲ್ಲಿ ಒಂದು ಸ್ವಂತ ನಾವೆಯನ್ನು ಹಾಗೂ ಮರಸಿಡೀಸ್ ಕಾರನ್ನು ಹೊಂದಿದ್ದ ಈ ಕುಟುಂಬ ಸಾಮಾಜಿಕವಾಗಿ ಸಂಪೂರ್ಣ ಕೆಳಕ್ಕೆ ಬಂದು, ಸರಕಾರಿ ಸಾರಿಗೆ ಬಸ್ಸುಗಳಲ್ಲಿ ಅಬ್ಬೇಪಾರಿಗಳಂತೆ ಸಂಚರಿಸುವ ಸ್ಥಿತಿಗೆ ತಲುಪಿತು. ಬದಲಾದ ತನ್ನ ಸಾಮಾಜಿಕ ಸ್ಥಿತಿಗತಿಯು, ಕೆಲವು ಬೇಜವಾಬ್ದಾರಿಗೂ ಹೇತುವಾಗ, ಕೆಲವೊಮ್ಮೆ ಅಂಗಡಿಗೆ ನುಗ್ಗಿ ಬಅಎಬರೆ, ದಿನಸಿ, ಕೆಲವೊಂದು ಬೆಲೆ ಬಳುವ ಗ್ಹೋಪಕರಣಗಳನ್ನೂ ಕದ್ದು ಮನೆಗೆ ತುಂಬಉವ ಮೂಲಕ, ಬ್ರಿಟ್‌ವೈಸರ್ ಮಾನಸಿಕವಾದ ಅಸಮಾನತೆಯನ್ನು ತುಂಬಿಕೊಳ್ಳಲು ಹೇಸಲಿಲ್ಲಘಿ. ಇದೆಲ್ಲದರ ಪರಿಣಾಮವಾಗಿ ಪೋಲೀಸು, ಕೋರ್ಟು, ಲಾಟಿ ಏಟುಗಳ ಅನುಭವ ಆಗತೊಡಗಿತು. ಇದರಿಂದೆಲ್ಲ ಬ್ರಿಟ್‌ವೈಸರ್, ‘‘ಏನೇ ಮಾಡಿದರೂ ಈ ಪೊಳಿಸರು ಹಾಗೂ ಕಾನೂನು ಕಟ್ಟಳೆ, ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಳ್ಳಬಾರದು’’ ಎಂದು ಎಚ್ಚರಿಕೆಯ ಪಾಠ ಕಲಿತ. ಮಗಳು ಹಾಗೂ ಮೊಮ್ಮಗನ ಬದಲಾದ ಸ್ಥಿತಿಯ ಬಗ್ಗೆ ಅಮ್ಮಜ್ಜ ಮರುಗಿ, ಒಂದಿಷ್ಟು ಸಹಾಯ ಮಾಡಿ ಒಂದು ಕಾರನ್ನೂ ಕೊಡಿಸಿ ಒಂದಿಷ್ಟು ಬೆಂಬಲಕ್ಕೆ ನಿಂತರು ನಿಜ. ಆದರೆ, ಈ ಬೆಂಬಲವು, ಬ್ರಿಟ್‌ವೈಸರ್‌ನಲ್ಲಿದ್ದ ಕಳ್ಳನನ್ನೇ ಇನ್ನಷ್ಟು ಪುಸಲಾಯಿಸಿದಂತೆ ಆಯಿತು. ಅಜ್ಜ ಕೊಟ್ಟ ಕಾರನ್ನು ಹೆಮ್ಮೆಯಿಂದ ಓಡಿಸುವಾಗ ಒಮ್ಮೆ ಪಾರ್ಕಿಂಗ್ ಗಲಾಟೆಯಲ್ಲಿ ಮತ್ತೆ ಪೊಲೀಸ್ ಠಾಣೆಯನ್ನು ಸೇರುವಂತಾಯಿತು. ಇನ್ನೊಂದು ಅಂಗಡಿ ನುಗ್ಗಿದ ಘಟನೆಯಲ್ಲಂತೂ ಪೊಲೀಸರು ಹೊಡೆಯುವಾಗ ತಿರುಗಿ ಬಿದ್ದುಘಿ, ಪೊಲೀಸ್ ಅಕಾರಿಯ ಬೆರಳನ್ನೇ ತಿರುಪಿದ ಕಾರಣ, ಪ್ರಕರಣ ಇನ್ನಷ್ಟು ಸಂಕೀರ್ಣವಾಗಿ ಸ್ಥಳೀಯ ಕೋರ್ಟ್ ಒಂದು ಈತನನ್ನು ಎರಡು ವಾರಗಳ ಕಾಲ ವರ್ತನಾ ಚಿಕಿತ್ಸೆಯ ಜೈಲಿಗೆ ಹಾಕಿದರು. ಚಿತ್ರ ವಿಚಿತ್ರ ಒದ್ದಾಟ, ಜಗ್ಗಾಟ, ಜಂಜಡದಲ್ಲಿ ಸಿಲುಕಿದ ಬ್ರಿಟ್‌ವೈಸರ್ ತನ್ನ ವರ್ತನೆಗಳನ್ನು ದಕ್ಕಿಸಿಕೊಳ್ಳಲಾಗದೆ, ಮಾನಸಿಕ ಒತ್ತಡಕ್ಕೊಳಗಾಗಿ ಒಂದೆರಡು ಬಾರಿ ಆತ್ಮ ಹತ್ಯೆಯ ಆಲೋಚನೆಗಳೂ ಬಂದವು. ಇದರಿಂದ ಹೊರಕ್ಕೆ ಬರಲು, ಮಾನಸಿಕ ನೋವು ನಿವಾರಕ ರೊಲೊಫ್ಟ್ ಮಾತ್ರೆಗೀಗೆ ಮೊರೆ ಹೋದ. ಆ ಮಾತ್ರೆಗಳು ತನಗೆ ಸಂಪೂರ್ಣ ಪರಿಹಾರವಾಗದಿದ್ದರೂ, ಅಲ್ಲಿಂದಲ್ಲಿಗೆ ನಿರ್ವಹಣೆಯ ಅವಕಾಶ ಮಾಡಿತಲ್ಲದೆ, ತನ್ನ ಇಪ್ಪತ್ತನೇ ವಯಸ್ಸಿನ ಹೊತ್ತಿಗೆ ಪ್ರಸಿದ್ಧ ಮುಲ್‌ಹೌಸ್ ಮ್ಯೂಸಿಯಂನಲ್ಲಿ ಒಂದು ಚಿಕ್ಕ ಉದ್ಯೋಗ ದಕ್ಕಿಸಿಕೊಳ್ಳುವ ಮಟ್ಟಿಗೆ ಈತನಿಗೆ ಸಹಾಯವಾಯಿತು. ಆ ದಿನಗಲ್ಲಿ ಓರ್ವ ಗಾರ್ಡ್ ಆಗಿ ಮ್ಯೂಸಿಯಂನಲ್ಲಿ ನಲ್ಲಿ ಪ್ರಸಿದ್ಧ ಕಲಾವಿದರ ಚಿತ್ರಗಳನ್ನು ಇನ್ನಷ್ಟು ನಿಕಟವಾಗಿ ನೋಡುವುದು, ಇಂಥ ಸ್ಥಳಗಳಲ್ಲಿ ಭದ್ರತೆಯ ಕೆಲವು ಹುಳುಕುಗಳನ್ನು ತಿಳಿಯುತ್ತ ಮನೋ ಕ್ಷೇಬೆಯಿಂದ ಹೊರ ಬರಲು ನೌಕರಿಯೇ ಸಹಾಯ ವಾಯಿತು. ಆದರೂ ದೀರ್ಘ ಕಾಲ ಒಂದೆಡೆ ನಿಲ್ಲಬೇಕಾದ ಗಾರ್ಡ್ ಕೆಲಸದ ನಿಜವಾದ ಬೇಸರ ಅರಿವಾಗತೊಡಗಿತು. ಮ್ಯೂಸಿಯಂ ಸೆಕ್ಯುರಿಟಿ ನೌಕರಿಯಿಂದ ಹೊರ ಬರುವ ಹೊತ್ತಿಗೆ ಆತನಿಗೆ ದಕ್ಕಿದ ಎರಡು ಪ್ರಾಪ್ತಿಯಲ್ಲಿ ಮೊದಲನೆಯದು ಇಲ್ಲಿನ ಭಧ್ರಾ ಒಳನೋಟಗಳು, ಇನ್ನೊಂದು ಮುಲ್‌ಹೌಸ್ ಮ್ಯೂಸಿಯಂನ ಮೇಲ್ಮಹಡಿಯಲ್ಲಿ ಇಡಲಾಗಿದ್ದ ಐದನೇ ಶತಮಾನದ ಒಂದು ಬೆಲೆಬಾಳುವ ಬೆಲ್ಟ್‌ಘಿ. ಮ್ಯೂಸಿಯಂನ ಮೇಲ್ಮಹಡಿಯಲ್ಲಿ ಇಡಲಾಗಿದ್ದ ಫ್ರೆಂಚ್ ಮೊರ್ವಿಯನ್ ದೊರೆಗಳ ಸೊಂಟದ ಪಟ್ಟಿಯ ಲೋಹದ ಹುಕ್‌ಘಿ, ಆ ಜಾಗದಲ್ಲಿ ಕಳವಾಗಿದೆ ಎಂಬ ಯಾವೊಂದು ಗುರುತೂ ಬಿಡದ ರೀತಿಯಲ್ಲಿ ಎಗರಿಸಿಕೊಂಡು ಬ್ರಿಟ್‌ವೈಸರ್ ಮ್ಯೂಸಿಯಂ ನೌರಿಗೆ ವಿದಾಯ ಹೇಳಿ ಬಂದ. ಅಪ್ಪನ ವಿದಾಯದ ಜೊತೆಗೆ, ಆ ಮನೆಯ ಬೇಸ್ಮೆಂಟ್‌ನಲ್ಲಿ ಈತ ಇಟ್ಟಿದ್ದ ಈಗನ ಆಂಟಿಕ್ ಗಳಿಕೆಯ ಪೆಟ್ಟಿಗೆಯೂ, ಈತನೊಂದಿಗೆ ತಾಯಿ ಹಿಡಿದ ಅಪಾರ್ಟ್‌ಮೆಂಟ್‌ನ ಎಕೆಬಾ ಕಪಾಟಿಗೆ ಸ್ಥಳಾಂತರ ಆಯಿತು. ಅದಾದ ನಂತರ ಇತ್ತೀಚೆಗೆ ಮ್ಯೂಸಿಯಂನಲ್ಲಿ ಎಗರಿಸಿದ ಸೊಂಟದ ಪಟ್ಟಿಯ ಲೋಹದ ಹುಕ್‌ಘಿಸಹಿತ ಇನ್ನೂ ಇತರ ಗಳಿಗೆ, ಪ್ರಾಪ್ತಿಗಳು ಒಂದೊಂದಾಗ ಈ ಮನೆಯಲ್ಲಿ ಬಂದು ಕುಳಿತವು. ಹಾಗೆ ನೊಡಿದರೆ, ಇವೆಲ್ಲ ಈತನ ಸ್ವಂತದ್ದಾಗಿರುವುದರಿಂದ ಯಾರೂ ಅದು ತನ್ನದು, ಮನೆತನದ ಆಸ್ತಿ ಎಂದೆಲ್ಲ ಹೇಳುವಂತೆ ಇರಲಿಲ್ಲಘಿ. ಆತನಿಂದ ಇನ್ನೆಂದೂ ಬಿಟ್ಟು ಹೋಗುವ ಪ್ರಶ್ನೆಯೇ ಇರಲಿಲ್ಲಘಿ. ಅಪ್ಪ ಬಿಟ್ಟುಹೋದ ನಂತರ ಆ ಕಪಾಟನ್ನು ಕ್ರಮೇಣ ತುಂಬುವುದ, ಅದೂ ಏಕಾಂಗಿ ಹೋರಾಟದಲ್ಲಿ ಎಷ್ಟೊಂದು ಕಷ್ಟ ಎಂಬುದನ್ನು ಆತ ಯಾರಿಗೂ ಹೇಳಿಕೊಳ್ಳುವಂತೆ ಇರಲಿಲ್ಲಘಿ. ಕ್ರಮೇಣ ಆತನ ಸ್ವರ್ಗದ ಪ್ರಪಂಚ ಇಲ್ಲಿಗೆ ಇಲ್ಲಿನ ನೀಲಿ ಪೆಟ್ಟಿಗೆಗಳಿಗೆ ಬಂದು ಅಮರಿಕೊಳ್ಳತೊಡಗಿತು. ಇನರಿಗೆ ಇಲ್ಲಿನ ಬ್ರಿಟ್‌ವೈಸರ್‌ನ ಖುಷಿಯ ಪಾರವೆಲ್ಲ ಅರ್ಥವಾಗುವಂತೆ ಇರಲಿಲ್ಲಘಿ. ಇದೇ ಹೊತ್ತಿಗೆ ಆತನ ಜೀವನಕ್ಕೆ ಓರ್ವ ಸುಂದರಿಯ ಹಿತಾನುಭವ ಸೇರಿತು.
Read More

ದಂಗು ಬಡಿಸುವ ಕಲಾ ಅಂತಃಪುರ

ದಂಗು ಬಡಿಸುವ ಕಲಾ ಅಂತಃಪುರ
ದಿ ಆರ್ಟ ಥೀಫ್
ಶತಮಾನಗಳಿಂದ, ಪ್ರಪಂಚದಾದ್ಯಂತದ ಕಲಾಕೃತಿಗಳನ್ನು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಕದಿಯಲಾಗಿದೆ. ಆದರೆ ಖದೀಮ ಕಳ್ಳ ಸ್ಟೀವನ್ ಬ್ರೀಟ್ವೀಸರ್ ತರ ಯಾರೂ ಅದರಲ್ಲಿ ದೀರ್ಘ ಕಾಲ ಯಶಸ್ವಿಯಾಗಲಿಲ್ಲ. ಸುಮಾರು ಎಂಟು ವರ್ಷಗಳ ಕಾಲ ಇನ್ನೂರಕ್ಕೂ ಹೆಚ್ಚು ದರೋಡೆಗಳನ್ನು ನಡೆಸುತ್ತಾ-ಯುರೋಪಿನಾದ್ಯಂತ ವಸ್ತುಸಂಗ್ರಹಾಲಯಗಳು ಮತ್ತು ಕ್ಯಾಥೆಡ್ರಲ್ಗಳಲ್ಲಿ- ಬ್ರೀಟ್ವೀಸರ್, ಈತನ ಎಲ್ಲ ಅಪರಾಧಗಳಿಗೆ ಬೆಂಗಾವಲಾಗಿ ನಿಲ್ಲುವ ಗೆಳತಿ ಅನ್ನೆ ಕ್ಯಾಥರಿನ್‌ಳೊಂದಿಗೆ, ಮುನ್ನೂರಕ್ಕೂ ಹೆಚ್ಚು ಕಲಾಕೃತಿ ಕಳವು ಮಾಡುತ್ತಾನೆ. ಅಂತಿಮವಾಗಿ ಎಲ್ಲವಕ್ಕೂ ಒಂದು ಅಂತ್ಯ ಎಂಬುದು ಇರುತ್ತದೆ. ದಿ ಆರ್ಟ್ ಥೀಫ್‌ನಲ್ಲಿ ಲೇಖಕ ಮೈಕೆಲ್ ಫಿಂಕೆಲ್ ಬ್ರೀಟ್ವೀಸರ್‌ನ ವಿಚಿತ್ರ ಮತ್ತು ಆಕರ್ಷಕ ಜಗತ್ತನ್ನು ನಮ್ಮೆದುರು ತೆರೆದಿಡುತ್ತಾನೆ. ಬ್ರೀಟ್ವೀಸರ್ ಹೆಚ್ಚಿನ ಕಳ್ಳರಂತಲ್ಲ, ಎಂದಿಗೂ ಹಣಕ್ಕಾಗಿ ಕದ್ದಿಯುವುದಿಲ್ಲ. ಬದಲಾಗಿ, ಅವನಿಗೆ ಉತ್ತಮ ಕಲಾಕೃತಿಗಳ ಬಗ್ಗೆ ಇನ್ನಿಲ್ಲದ ವ್ಯಾಮೋಹವೂ ಇತ್ತು. ಚಿತ್ರಗಳ ಆಸ್ವಾದನೆಯ ಪರಿಶ್ರಮವೂ ಇತ್ತು. ತಾನು ಕಳವು ಮಾಡಿದ ಸಂಪತ್ತನ್ನು ಒಂದು ಜೋಡಿ ರಹಸ್ಯ ಕೊಠಡಿಗಳಲ್ಲಿ ಪ್ರದರ್ಶಿಸಿದ್ದ. ಅಲ್ಲಿ ಅವನು ಕಲಾಕೃತಿಗಳನ್ನು, ಶಿಲ್ಪಗಳನ್ನು ಮನಃಪೂರ್ವಕವಾಗಿ ಮೆಚ್ಚಿ ಹೆಮ್ಮೆಪಡುತ್ತಿದ್ದ. ಕದ್ದು ತಪ್ಪಿಸಿಕೊಳ್ಳಲು ಯಾವ ವೇಗದಲ್ಲಾದರೂ ಓಟ ಕೀಳುವ ನಿಪುಣ, ದೇಹ ಸೌಷ್ಟವವೂ ಆತನಿಗಿತ್ತು. ಯಾವುದೇ ಭದ್ರತಾ ವ್ಯವಸ್ಥೆಯನ್ನು ಬೇಸಿ ನುಸುಳುವ, ಎಗರಿಸಿಕೊಂಡು ಬರುವ ಸಹಜ ಸಾಮರ್ಥ್ಯವನ್ನು ಹೊಂದಿದ್ದ. ಅಷ್ಟೇ ಅಲ್ಲ, ಉಸಿರುಕಟ್ಟುವಷ್ಟು ಭಯಾನಕ ಕಳವನ್ನೂ ಅಳುಕೇ ಇಲ್ಲದೆ ನಿಭಾಯಿಸುತ್ತಿದ್ದ. ಆದರೂ ಈ ವಿಚಿತ್ರ ಪ್ರತಿಭೆ -ಸೈಕೋ ದೊಡ್ಡ ದೊಡ್ಡ ಕಳವುಗಳನ್ನು ದಕ್ಕಿಸಿಕೊಂಡು ವ್ಯಸನಿಯಾಗಿ ಬೆಳೆದುಬಿಟ್ಟ. ಕೊನೇ ಕ್ಷಣದಲ್ಲಿ ಎಚ್ಚೆತ್ತ ಗೆಳತಿ ಕೆನ್ ತನ್ನ ಇನಿಯನಿಗೆ ಎಷ್ಟೇ ಹೇಳಿದರೂ ಕಿವಿಗೊಡದೆ ಹೋದ. ಒಂದು ಅಂತಿಮ ದರೋಡೆಯು ಈತ ಕಟ್ಟಿಕೊಂಡ ಕಳವಿನ ಬೃಹತ್ ಸಾಮ್ರಾಜ್ಯವನ್ನೇ ಉರುಳಿಸಿ ಹಾಕಿತು. ಇದು ಕಲೆ, ಅಪರಾಧ, ಪ್ರೀತಿ ಮತ್ತು ಯಾವುದೇ ವೆಚ್ಚದಲ್ಲಿಯಾದರೂ ಸರಿ, ಸೌಂದರ್ಯವನ್ನು ಹೊಂದುವ ಹಪಾಪಿ ಹಸಿವಿನ ಕಥೆಯಾಗಿದೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಶಿಫಾರಸು ಮಾಡಿದ ಬೆಸ್ಟ್ ಸೆಲ್ಲರ್ ಬರಹಗಾರ ಮೈಕೆಲ್ ಫಿಂಕೆಲ್ ಅವರ, ದಿ ಆರ್ಟ್‌ ಥೀಫ್ ಕಾದಂಬರಿಯನ್ನು ಕನ್ನಡಿಗರಿಗೆದಾರಾವಾಹಿ ರೀತಿಯಲ್ಲಿ ಇಲ್ಲಿದೆ..... . . . . ಅಧ್ಯಾಯ- 2 ಯಾವುದೇ ನಗರದಲ್ಲೂ ಕೆಲವಷ್ಟು ವಸತಿಪ್ರದೇಶಗಳು ಅಕ್ಕಪಕ್ಕದ ವಾತಾವರಣದ ಪ್ರಭಾವದಿಂದ ಮುಕ್ತವಾಗಿರುವುದು ಸಾಧ್ಯವಿಲ್ಲ. ಜಗತ್ತಿನ ಸುಂದರ ದೇಶಗಳ ಪಟ್ಟಿಯಲ್ಲಿ ಇರುವ ಫ್ರಾನ್ಸ್‌ನ ಪೂರ್ವದಲ್ಲಿರುವ ಮಲ್‌ಹೌಸ್ ನಗರದ ವಿಚಾರವನ್ನೇ ತೆಗೆದುಕೊಳ್ಳಿ. ಒಂದಿಷ್ಟು ಗ್ಯಾರೇಜ್‌ಗಳು, ಹಗಲಿಡೀ ಗದ್ದಲ ಹಾಕುವ ಲೇತ್ ಯಂತ್ರಗಳು, ಸಾಬೂನು ಘಟಕ ತರದ ಔದ್ಯಮಿಕ ವಲಯ ಇದೆ. ಮದ್ಯದಲ್ಲಿ ಅಲ್ಲಲ್ಲಿ ಒಂದಿಷ್ಟು ವಸತಿಯೂ ಇರುವ ಪ್ರದೇಶವನ್ನು ಊಹಿಸಿಕೊಳ್ಳಿ. ಗಾರೆ ಕಾಂಕ್ರೀಟ್ನ ಮಸುಕಾದ ತುಸು ಹಳೆಯ ಕಾಲದ ಚೌಕಾಕಾರದ ಒಂದಿಷ್ಟು ಸಣ್ಣ ಕಿಟಕಿ, ಕಡಿದಾದ, ಕೆಂಪು ಹೆಂಚಿನ ಛಾವಣಿಯಿಂದ ಆವೃತವಾದ ಅದೊಂದು ಮನೆ ಇದೆ. ಇಲ್ಲಿ ಇರುವಿಕೆಯ ತಾವು ಬಹುಪಾಲು ನೆಲ ಮಹಡಿಯಲ್ಲಿದ್ದರೆ, ಕಿರಿದಾದ ಮೆಟ್ಟಿಲುಗಳು ಎರಡು ಬೃಹತ್ ಕೋಣೆಗಳಿರುವ ಮಹಡಿಗೆ ದಾರಿ ಮಾಡಿಕೊಡುತ್ತವೆ. ಮನೆಯ ವಾಸಿಸುವ ಪ್ರದೇಶ ಮತ್ತು ಮಲಗುವ ಕೋಣೆ, ತಗ್ಗಿ ಹೋಗಬೇಕಾದ ಕಡಿಮೆ ಎತ್ತರದ ಸೀಲಿಂಗ್ ಮತ್ತು ಇಕ್ಕಟ್ಟಾದ ಸೊಟ್ಟ ಮಹಡಿ ಅದು. ಈ ಕೋಣೆಗಳ ಬಾಗಿಲಿಗೆ ಯಾವಾಗಲೂ ಬೀಗ ಇರುತ್ತದೆ. ಇಲ್ಲಿನ ಕಿಟಕಿ ಕವಾಟುಗಳು ಶಾಶ್ವತವಾಗಿ ಮುಚ್ಚಿರುತ್ತವೆ. ಅಲ್ಲಿರುವ ಕೋಣೆಯ ಒಂದು ಗೋಡೆಗೆ ತಾಗಿದಂತೆ ಹೊಂದಿಸಿರುವ ಮಂಚದ ಕುರಿತು ತುಸು ಹೇಳಬೇಕು. ಆ ಯುವ ಜೋಡಿ ಮಲಗುವುದು, ಸುಂದರ ಕೆತ್ತನೆಯ ಮಂಚದ ತುಪ್ಪಟ ಮೃದುವಿನ ಹಾಸಿಗೆಯಲ್ಲಿ. ಅಲ್ಲಿರುವ ಕುಸುರಿಯ ದಿಂಬುಗಳಿರಬಹದು, ಪಕ್ಕದಲ್ಲಿ ಹಾಕಲಾದ ನೇರಳೆ ಪರದೆ, ಅದನ್ನು ಸರಿಸಲು ಹಾಕಿರುವ ಜರಿಯ ರಿಬ್ಬನ್ ಕೂಡ ರಾಜರ ಕಾಲದ ಒಂದು ಅಂತಃಪುರವನ್ನು ನೆನಪಿಗೆ ತರುತ್ತಿತ್ತು. ಇಲ್ಲಿ ಮಲಗಿದರೆ ಬ್ರೀಟ್ವೀಸರ್ ತನ್ನ ಕಣ್ಣುಗಳನ್ನು ತೆರೆದಾಗ, ಅವನು ನೋಡುವ ಮೊದಲ ದೃಶ್ಯವೇ ದಂತದ ಆಡಮ್ ಮತ್ತು ಈವ್. ತಾನು ಕದ್ದು ತಂದ ಅಪೂರ್ವ ಕಲಾ ಕುಸುರಿಯನ್ನು ಇಡುವುದಕ್ಕಾಗಿ ಮಂಚದ ಪಕ್ಕದಲ್ಲಿ ಒಂದು ಮೇಜನ್ನು ಜೋಡಿಸಿದ್ದ. ನಯವಾದ ಶಿಲ್ಪದ ಬಗ್ಗೆ ಎಷ್ಟೊಂದು ವ್ಯಾಮೋಹ ಎಂದರೆ, ಕೆಲವೊಮ್ಮೆ ಅದರ ಕೆತ್ತನೆಯ ಮೇಲೆ ತನ್ನ ಬೆರಳ ತುದಿಗಳನ್ನು ನೇವರಿಸುತ್ತಿದ್ದ. ಈವ್ ಮೂರ್ತಿಯ ಕೈಗಳು, ಅದರ ಅಲೆಯಾದ ಕೂದಲು ಅಥವಾ ದೇಹದ ಸುತ್ತಿದ ಹಾವು, ಜತೆಯಲ್ಲಿರುವ ಕುಳ್ಳ ಮರದ ಕಾಂಡದ ಮೇಲೆ ಗಾಗ ಹರಿದಾಡುವುದು ಹೇಗೆಂದರೆ, ಇದನ್ನು ಕೆತ್ತಿದ ಶಿಲ್ಪಿಯು ಮೇಲ್ಮೈ ನುಣುಪನ್ನು ಖಾತ್ರಿಪಡಿಸಲು ಬೆರಳು ಜಾರಿಸಿದಂತೆ. ಇದು ಆತನ ಮಟ್ಟಿಗೆ ಜೀವನದಲ್ಲೇ ಸಿಕ್ಕ ಅತ್ಯಂತ ಬೆಲೆಬಾಳುವ ವಸ್ತುವಾಗಿದ್ದರೆ, ಅದರ ಬೆಲೆಯಂತೂ, ಆ ಸಾಲಿನಲ್ಲಿರುವ ಮನೆಗಳನ್ನೆಲ್ಲ ಒಟ್ಟೂ ಸೇರಿಸಿ ಮಾರಿದರೂ, ಇದರ ಬೆಲೆಯ ಅರ್ಧ ಮೊತ್ತ ಸಿಗುವುದಿಲ್ಲ. ಇದು ಅವನ ಹಾಸಿಗೆ ಪಕ್ಕದ ಮೇಜಿನ ಮೇಲಿಟ್ಟ ಎರಡನೇ ದಂತದ ಕೆತ್ತನೆ. ಅಲ್ಲೇ ಪಕ್ಕದಲ್ಲಿ ರೋಮನ್ನರ ಬೇಟೆ ಹಾಗೂ ಸಂತಾನ ಪ್ರಾಪ್ತಿಸುವ ದೇವತೆ ಡಯನಾಳ ಮೂರ್ತಿ ಇತ್ತುಘಿ. ಡಯಾನಾ ಪ್ರತಿಮೆಯ ವಿಶೇಷ ಎಂದರೆ, ಅವಳ ಬಲಗೈ ಮೇಲಕ್ಕೆತ್ತಿದ ಸ್ಥಿತಿಯಲ್ಲಿ ಚಿನ್ನದ ಬಾಣಗಳನ್ನು ಎತ್ತಿ ಹಿಡಿದಿದ್ದಾಳೆ. ಅದಾದ ನಂತರ ಮೂರನೆಯದು ಕೂಡ ಮಹತ್ವದ್ದೇ. ಕ್ರಿಶ್ಚಿಯನ್ನರ ಆರಂಭಿಕ ಸಂತರಲ್ಲೊಬ್ಬರಾದ ಅಲೆಕ್ಸಾಂಡ್ರಿಯಾದ ಕ್ಯಾಥರೀನ್ ಅವರ ಪ್ರತಿಮೆ. ಮುಂದೆ ತನ್ನ ಪಾದವನ್ನು ತಲೆಬುರುಡೆಯ ಮೇಲೆ ಇಟ್ಟು ವಿಶ್ರಾಂತಿ ಪಡೆಯುತ್ತಿರುವ ಗುಂಗುರು ಕೂದಲಿನ ಕ್ಯುಪಿಡ್. ಹೀಗೆ ಬ್ರೀಟ್ವೀಸರ್‌ನ ದಂತದ ಬೊಂಬೆಗಳ ಸಂಗ್ರಹದ ಅಲೌಕಿಕ ಲೋಕ, ಅವುಗಳ ಹಾಲಿನ ಹೊಳಪಿನ ಪ್ರಪಂಚವು ನೀಡುವ ಸ್ಪೂರ್ತಿ ಬೇರೆಲ್ಲೂ ಸಿಗುವದು ಕಷ್ಟ ಎಂಬ ದಿವ್ಯತೆ ಅಲ್ಲಿತ್ತು. ಅದೆಲ್ಲಕ್ಕಿಂತ ಇಲ್ಲಿ ನೆಪೋಲಿಯನ್ ಬಳಸಿದ ಚಿನ್ನ ಹಾಗೂ ದಂತದ ತಂಬಾಕು ಪೆಟ್ಟಿಗೆ ಮನೋಹರವಾಗಿದೆ. ಪ್ರಕಾಶಮಾನವಾದ ನೀಲಿ ದಂತಕವಚದ ಪೆಟ್ಟಿಗೆಯನ್ನು ನಿಮ್ಮ ಅಂಗೈಯಲ್ಲಿ ಹಿಡಿದಿಟ್ಟುಕೊಳ್ಳುವುದು ಎಂದರೆ, ನೆನಪಿನ ಲೋಕಕ್ಕೆ ಜಾರಿದಂತೆ. ಅದರ ಪಕ್ಕದಲ್ಲಿ ೧೮ನೇ ಶತಮಾನದ ಉತ್ತರಾರ್ಧದಲ್ಲಿ ಫ್ರೆಂಚ್‌ನ ಪ್ರಸಿದ್ಧ ಕುಪ್ಪಿ ಕಲಾವಿದ ಎಮಿಲ್ ಗ್ಯಾಲೆ ತಯಾರಿಸಿದ ಪ್ರಿಸಂ ಪಾರದರ್ಶಕದಲ್ಲಿ ರಮ್ಯ ಬಣ್ಣಗಳ ಹೂ ಹೂದಾನಿಯಿದೆ. ನಂತರ ಹಳೆಯ ಐಟಂ, ಹೂಮಾಲೆಗಳು ಮತ್ತು ಸುರುಳಿಗಳಿಂದ ಕೆತ್ತಿದ ದೊಡ್ಡ ಬೆಳ್ಳಿಯ ಭೂಗೋಳ ಇದನ್ನೆಲ್ಲ ನೋಡಿದರೆ, ಬ್ರೀಟ್ವೀಸರ್ ಸಂಗ್ರಹದಲ್ಲಿ ಬೆಲೆಕಟ್ಟಲಾದ, ಯಾವುದೇ ಶ್ರೀಮಂತನಿಗೂ ದುಬಾರಿ ಎನಿಸುವಷ್ಟು ಶತಶತಮಾನದ ಪುರಾತನ ಚಿತ್ರ ವಿಚಿತ್ರ ಕಲೆಗಳಿವೆ. ರಾಜರು, ಸೇನಾಕಾರಿಗಳು ಬಳಸುತ್ತಿದ್ದ ಹುಕ್ಕಾಗಳು, ಎಲಡಿಕೆ ಪೆಟ್ಟಿಗೆ, ಅವುಗಳ ಸುಂದರ ಆಕಾರ, ತುಂಡಾದ ಕಂಚಿನ ಕಂಬಗಳು, ಚೀನಿ ಮೂಲದ ಹಳೆಯ ಪಿಂಗಾಣಿ ಪ್ರತಿಮೆ.. ಒಂದೆರಡೇ ಅಲ್ಲಘಿ, ಅದೊಂದು ಸುಂದರ ಕನಸುಗಳ ದ್ವೀಪದಂತೆ, ಪೋಣಿಸಿದ ಮ್ಯೂಸಿಯಂ ರೀತಿಯಲ್ಲಿದೆ ಆ ಕೋಣೆ. ಮಂಚದ ಇನ್ನೊಂದು ಪಕ್ಕ ಅಂದರೆ, ಅನ್ನೆ -ಕ್ಯಾಥರೀನ್ ಅವರ ಹಾಸಿಗೆಯ ಬದಿಯಲ್ಲಿ ರಾತ್ರಿಯ ಪರಿಕರಗಳನ್ನೊಳಗೊಂಡ ಒಂದು ಟೇಬಲ್. ಅದಕ್ಕೆ ಗಾಜಿನ ಬಾಗಿಲುಗಳಿಂದ ಆವೃತವಾದ ಮಾಟದ ದೊಡ್ಡ ಆಲಮೇರಾ ಜೋಡಿಸಿದೆ. ಅದರೊಳಗೆ ಒಂದು ರಾಶಿ ವೈವಿಧ್ಯಮಯ ಡ್ರೆಸ್. ಕೋಣೆಯ ಮೇಲ್ಮಂಟಪಕ್ಕೆ ತಾಗಿದ ನಾಗಂದಿಗೆಯಲ್ಲಿ ಬೆಳ್ಳಿಯ ತಟ್ಟೆಗಳು, ಬೆಳ್ಳಿಯ ಬಟ್ಟಲುಗಳು, ಬೆಳ್ಳಿಯ ಹೂದಾನಿಗಳು, ಚಹ ಕಪ್ಪುಗಳ ಸಹಿತ ಟ್ರೇಘಿ, ಮರದ ಗೊಂಬೆ ಚಿಕಣಿಗಳು ಜೋಡಿಸಲಾಗಿತ್ತು. ಅದೇ ಸಾಲಿನಲ್ಲಿ ಒಂದು ಲೋಹದ ಬಿಲ್ಲು, ಒಂದು ಸೇಬರ್ ಡಾಲ್, ಒಂದು ಹಳೆಯ ಭರ್ಚಿ, ಒಂದು ಗದೆ ಇದೆ. ಅಮೃತಶಿಲೆ ಮತ್ತು ಸ್ಪಟಿಕ, ಮರದ ಮುತ್ತಿಮ ತುಣುಕುಗಳು. ಚಿನ್ನದ ಪಾಕೆಟ್ ವಾಚು, ಚಿನ್ನದ ಅತ್ತರ್ ಕಲಶ, ಚಿನ್ನದ ಚೊಂಬು, ಚಿನ್ನದ ಲಾಕೆಟ್. ದಂಪತಿಗಳ ನಿಜ ಅಡಗುತಾಣವಾದ ಇದರ ಮುಂದಿನ ಕೊಠಡಿಯು ಇನ್ನಷ್ಟು ತುಂಬಿಕೊಂಡಿದೆ. ಮರದ ಬಲಿಪೀಠ, ತಾಮ್ರದ ತಟ್ಟೆ, ಕಬ್ಬಿಣದ ಭಿಕ್ಷಾ ಪೆಟ್ಟಿಗೆ, ಬಣ್ಣದ ಗಾಜಿನ ಕಿಟಕಿ, ದುಬಾರಿ ಮದ್ಯದ ಮಾಟದ ಬಾಟಲಿಗಳು, ಮತ್ತು ಪುರಾತನ ಕಾಲದ ಲೋಹದ ಚೆಸ್ ಬೋರ್ಡ್‌ಗಳು, ದಂತದ ಕೆತ್ತನೆಗಳ ಮತ್ತೊಂದಷ್ಟು ಮೂರ್ತಿ, ಪಿಟೀಲು, ಶ್ರುತಿಮೋರೆ, ಕೊಳಲು, ಕಹಳೆ. ಮತ್ತಷ್ಟು ತುಣುಕುಗಳನ್ನು ಕೆಲವು ವಿರಾಮಾಸನದ ಮೇಲೆ ಜೋಡಿಸಲಾಗಿದೆ. ಗೋಡೆಗಳಿಗೆ ಒಂದಿಷ್ಟು ಬೇಟೆ ಪರಿಕರಗಳನ್ನು ಸಾಚಿ ಆಸರೆ ಮಾಡಲಾಗಿತ್ತುಘಿ. ಕಿಟಕಿಗಳ ಮೇಲೆ ಜೋತು ಬಿಟ್ಟಿರುವ ಇನ್ನಷ್ಟು ಸರದ ತುಣುಕು. ತೊಳೆಯಲು ಹಾಕಿದ ಬಟ್ಟೆಗಳ ಮೇಲೆ ರಾಶಿಯಾಗಿ ಬಿದ್ದ ಸಮುದ್ರದ ಚಿಪ್ಪಿನ ಒಡವೆಗಳು, ಹಾಸಿಗೆಯ ಕೆಳಗೆ ಜಾರಿ ಬಿಡಲಾದ ಶಂಕದ ಹಾರಗಳು. ಕೈಗಡಿಯಾರಗಳು, ಕೈ ಗಡಗ, ಬಿಯರ್ ಮಗ್ಗುಗಳು, ಫ್ಲಿಂಟ್ಲಾಕ್ ಪಿಸ್ತೂಲ್ಗಳು, ಕೈಯಿಂದ ಬರೆದ ಪುರಾತನ ಪುಸ್ತಕಗಳು ಮತ್ತು ಒಂದಿಷ್ಟು ಬಿಡಿ ದಂತಗಳು ರಾಶಿಯಾಗಿ ಬಿದ್ದಿವೆ. ಮಧ್ಯಕಾಲೀನ ಕಮಾಂಡರ್‌ಗಳ ಶಿರಸ್ತ್ರಾಣ, ವರ್ಜಿನ್ ಮೇರಿಯ ಮರದ ಪ್ರತಿಮೆ, ವಜೃ ಖಚಿತ ಟೇಬಲ್ ಗಡಿಯಾರ, ಮಧ್ಯ ಯುಗದ ಸಚಿತ್ರ ಪ್ರರ್ಥನಾ ಹೊತ್ತಿಗೆ. ಬೆಲೆಬಾಳುವ ಕಲಾಕೃತಿಗಳಲ್ಲದೆ ಇದೆಲ್ಲವೂ ಕೊಠಡಿಯ ವೈಭವಕ್ಕೆ ಪೂರಕವಾಗಿದೆ. ಭವ್ಯವಾದ, ಅತ್ಯಮೂಲ್ಯವಾದ ವಸ್ತುಗಳು, ಗೋಡೆಗಳ ಗೂಟಕ್ಕೆ ತೂಗಾಡುತ್ತಿವೆ. ಅವುಗಳಲ್ಲಿ ಒಂದಿಷ್ಟು ತೈಲ ವರ್ಣಚಿತ್ರಗಳು, ಹದಿನಾರು ಮತ್ತು ಹದಿನೇಳನೇ ಶತಮಾನಗಳಿಂದ ಆರಂಭವಾಗಿ ನವೋದಯ ಮತ್ತು ಆರಂಭಿಕ ಬರೊಕ್ ಶೈಲಿಗಳ ದುಬಾರಿ ಪೇಂಟಿಂಗ್ ಕಲಾವಿದರ ವಿವರ ಸಹಿತ ವರ್ಣರಂಜಿತವಾಗಿವೆ. ಭಾವಚಿತ್ರಗಳು, ಭೂದೃಶ್ಯಗಳು, ಕಡಲತೀರಗಳು, ಸ್ಥಿರ ಚಿತ್ರಗಳು, ಸಾಂಕೇತಿಕ ಕಥೆಗಳು, ರೈತರು, ಹಳ್ಳಿಗರ ನಡಿಗೆಯ ದೃಶ್ಯಗಳು, ಪ್ಯಾಸ್ಟೋರಲ್ ಗಳು ಕೆಲವಷ್ಟು ಇಲ್ಲಿವೆ. ನೆಲದಿಂದ ಸೀಲಿಂಗ್ ತನಕ, ಎಡದಿಂದ ಬಲದ ತುದಿ, ಒಂದು ಕೋಣೆಯಿಂದ ಇನ್ನೊಂದು ಕೋಣೆಯ ಉದ್ದಕ್ಕೂ ಪ್ರದರ್ಶಿಸಲಾಗಿದೆ. ಅವುಗಳಲ್ಲಿ ಒಂದಿಷ್ಟು ವಿಷಯಾಧಾರಿತ ಅಥವಾ ಭೌಗೋಳಿಕವಾಗಿ ಅಥವಾ ವಿಷಮ ಆಕರ್ಷಣೆಯಲ್ಲಿ ಜೋಡಿಸಲಾಗಿದೆ. ಇಲ್ಲಿ ಹತ್ತಾರು ಕಾಲ, ಶತಮಾನದ ಶ್ರೇಷ್ಠರ ಕಲಾಕೃತಿಗಳಿವೆ. ಕ್ರಾಂಚ್, ಬ್ರೂಗಲ್, ಬ್ರೋಷರ್, ವ್ಯಾಟ್ಟೂ, ಗೊಯೆನ್, ಡ್ಯೂರರ್, - ಹೀಗೆ ಅನೇಕ ಮಾಸ್ಟರ್‌ಗಳ ಕಲಾಕೃತಿಗಳು, ಮುಖಚಿತ್ರಗಳು ಕೋಣೆಯ ಎಲ್ಲೆಡೆ ತುಂಬಿವೆ. ದಂತದ ಕಾಂತಿಯಿಂದ ಆವರಿಸಲ್ಪಟ್ಟ ಕೆಲವು, ಬೆಳ್ಳಿಯ ಹೊಳಪಿಗೆ, ಮಿರಿ ಮಿರಿ ಮಿನುಗಿಗೆ ನೂರ್ಮಡಿಯ ಚಿನ್ನದ ವಸುತಗಳಿವೆ. ಎಲ್ಲವನ್ನೂ, ಒಟ್ಟಾರೆಯಾಗಿ ಸಮೀಕರಿಸಿ ಕಲಾ ಪತ್ರಕರ್ತರು ಮಾಡಿದ ಅಂದಾಜಿನಂತೆ ಇಲ್ಲಿನ ಮೌಲ್ಯವು ಎರಡು ಶತಕೋಟಿ ಡಾಲರ್‌ಗಳಾಗಬಹುದು ಎಂದು ಅಂದಾಜಿಸಿದ್ದಾರೆ. ಇಷ್ಟೊಂದು ಬೆಲೆ ಬಾಳುವ, ಹಣ ಕೊಟ್ಟರೂ ಸಿಗದ ಕಲಾ ಬಂಡಾರವನ್ನು ಮುಲ್ ಹೌಸ್ ಉಪನಗರದ ಹಳೆಯ ಕಟ್ಟಡವೊಂದರ ಅಸಂಬದ್ದ ಎನ್ನಬಹುದಾದ ಮನೆಯಲ್ಲಿ ಇರಿಸಲಾಗಿದೆ. ಯುವ ದಂಪತಿಗಳು ಇಲ್ಲೊಂದು ವಾಸ್ತವದ ವಾಸ್ತವ್ಯವನ್ನು ಸೃಷ್ಟಿಸಿಕೊಂಡಿದ್ದು, ಅದು ಏನೆಲ್ಲ ಕಲ್ಪನೆಯನ್ನೂ ಮೀರಿಸುವ ಆಗರ್ಭ ಶ್ರೀಮಂತಿಕೆಯ ಲೋಕವಾಗಿದೆ. ಹಾಗೆ ನೋಡಿದರೆ, ಅವರು ನಿ ಪೆಟ್ಟಿಗೆಯೊಳಗೆ ವಾಸಿಸುತ್ತಾರೆ ಎಂದು ಬಣ್ಣಿಸಿದರೇ ಸರಿ.
Read More