ಆರ್ಟ್‌ ಥೀಫ್ ಧಾರಾವಾವಾಹಿ -೬

ಆರ್ಟ್‌ ಥೀಫ್ ಧಾರಾವಾವಾಹಿ -೬
ಪ್ರದರ್ಶನಕ್ಕಿಟ್ಟ ಫಲಕದ ಚಿಲಕ ಸರಿಸಿದ ಆತ ಪಿಸ್ತೂಲನ್ನು ನಿಧಾನವಾಗಿ ಕಿತ್ತು ತನ್ನ ಬೆನ್ನಿನ ಚೀಲಕ್ಕೆ ತುರುಕಿಕೊಂಡ. ಱಆ ಕ್ಷಣದಲ್ಲಿ ಭಯದಿಂದ ನಡುಗುತ್ತಿದ್ದೆೞೞಎಂದು ಬ್ರೈಟ್‌ವೈಸರ್ ಸ್ಮರಿಸಿಕೊಳ್ಳುತ್ತಾನೆ. ತಾವು ಎಸಗಿದ ಕೃತ್ಯದ ಪರಿಣಾಮೇನಾದೀತು ಎಂಬುದರ ಬಗೆ ಏನೊಂದು ಆಲೋಚಿಸದೆ, ಬ್ರೈಟ್‌ವೈಸರ್ ಹಾಗೂ ಅನ್ನೆ ಕ್ಯಾತರೀನ್ ಮ್ಯೂಸಿಯಂನಿಂದ ಚುರುಕಾಗಿ ಕಾಲಿಗೆ ಬುದ್ಧಿ ಹೇಳಿದರು. ಕಂಪೌಂಡಿನಿಂದ ನುಸುಳಿ, ಸುಡುಬಟ್ಟಿಯ ಘಟಕ ದಾಟಿ, ಹಾಗೆಯೇ ಗೋದಿ ಹೊಲವದ ಮೂಲಕ ದೌಡಾಯಿಸುತ್ತಿರುವಾಗ, ಎಲ್ಲಿ ಎಚ್ಚರಿಕೆ ಸೈರನ್ ಕಿರುಚೀತು ಎಂಬ ಭಯ ಅವರಲ್ಲಿ ಇತ್ತುಘಿ. ಱನನಗೆ ಒಂದೆಡೆ ಜೋರಾಗಿ ಎದೆ ಹೊಡೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಮನಸ್ಸು ಹಳ್ಳ-ಹುಳ್ಳಗೆ ಆಗುತ್ತಿತ್ತುೞೞ ಎನ್ನುವ ಆತ, ಅಡೆತಡೆ ಇಲ್ಲದೆ ಅಂದು ತಮ್ಮ ಅಪಾರ್ಟ್‌ಮೆಂಟ್‌ಗೆ ಬಂದು ತಲುಪಿದ್ದರು. ಕೊಠಡಿಗೆ ಬಂದವನೆ ಬೆನ್ನು ಚೀಲದಲ್ಲಿದ್ದ ಪಿಸ್ತೂಲ್ ಹೊರತೆಗೆದು ಒಮ್ಮೆ ಇಂಚು ಇಂಚನ್ನೂ ಪರಾಂಬರಿಸಿ ನೋಡಿದ. ಲಿಂಬೆ ಹುಳಿಯನ್ನು ಕೈ ಪಾತ್ರೆಯಲ್ಲಿ ತೆಗೆದುಕೊಂಡು, ಬಟ್ಟೆಯಿಂದ ಪಿಸ್ತೂಲಿನ ಲೋಹಭಾಗವನ್ನೆಲ್ಲ ನಿಧಾನವಾಗಿ ಒರೆಸಿದಾಗ, ಮತ್ತಷ್ಟು ಹೊಸ ಹೊಳಪಿನಿಂದ ಮಿಂಚುತ್ತಿತ್ತುಘಿ. ಇದನ್ನೆಲ್ಲ ತಾನು ಚಂದಾದಾರನಾದ ಕಲಾ ಪಾಕ್ಷಿಕವೊಂದರ ಅಂಕಣದಲ್ಲಿ ಕೊಟ್ಟ ಟಿಪ್ಟ್ ಓದಿ, ಇಲ್ಲಿ ಪ್ರಯೋಗ ಮಾಡಿದ್ದಾಗಿತ್ತುಘಿ. ಹೊಸದಾಗ ಸೇರ್ಪಡೆಯಾದ ಪಿಸ್ತೂಲ್, ಮಾಲಿಶ್‌ನಿಂದ ರೂಮಿನಲ್ಲಿ ಮತ್ತಷ್ಟು ಎದ್ದು ಕಾಣತೊಡಗಿತು. ಆಗಷ್ಟೇ ಐಕಿಯಾ ಬ್ರ್ಯಾಂಡಿನಿಂದ ವಿನ್ಯಾಸಗೊಂಡ ಕೊಠಡಿಯ ಒಳಾಂಗಣವೂ ಪಿಸ್ತೂಲಿನ ಹೊಳಪಿನಲ್ಲಿ ಸದರಾಗಿ ಕಾಣತೊಡಗಿತು. ಮ್ಯೂಸಿಯಂ ಆಗಿದ್ದರೆ, ಅಲ್ಲಿ ಪಿಸ್ತೂಲನ್ನು ಕದ್ದು ಮುಚ್ಚುವ ಪ್ರಶ್ನೆ ಬರುತ್ತಲೇ ಇರಲಿಲ್ಲಘಿ. ಒಂದು ರೀತಿಯಲ್ಲಿ ಗುದ್ದೋಡು ಪ್ರಕರಣದ ರೀತಿಯಲ್ಲಿ, ಪಿಸ್ತೂಲ್ ಎಗರಿಸಿದ್ದೂ ಕೂಡ ಎಲ್ಲೊ ಒಂದು ಪ್ರಚೋದನೆಗೆ ಹೇತುವಾಗಬಹುದು. ಕದ್ದುಘಿ, ತರುವಾಗ ಏನೆಲ್ಲ ಸಾಕ್ಷಿಯ ಎಳೆಯನ್ನು ಅಲ್ಲಿ ಬಿಟ್ಟಿರಬಹುದು. ಯಾವುದೊ ಒಂದು ಎಳೆಯು ಪೊಲೀಸರನ್ನು ಎಳೆದು ತನ್ನ ಮನೆಯ ಬಾಗಿಲಿಗೆ ತಂದು ನಿಲ್ಲಿಸಿದರೆ...ಅದೆಲ್ಲ ಉಸಾಬರಿಯೇ ಬೇಡ ಎಂದು ಒಮ್ಮೆ ಇಬ್ಬರೂ, ವಾಪಸ್ ಇದ್ದ ಜಾಗದಲ್ಲೇ ಇಟ್ಟು ಬಂದು ಬಿಡೋಣ ಎಂದುಕೊಳ್ಳುವಷ್ಟು ಭಯಪಟ್ಟರು. ಮರು ಕ್ಷಣವೇ ಅವಸರ ಬೇಡ ಎಂದು ಕಿಮ್ ಕರ್ತವ್ಯ ಮೂಢರಾದರು. ಆ ಇಡೀ ವಾರವೂ, ಪತ್ರಿಕೆಗಳ ಅಪರಾಧ ಅಂಕಣದಲ್ಲಿ ಎಲ್ಲಾದರೂ, ಪಿಸ್ತೂಲ್ ಕಳವು ಸುದ್ದಿ ಬಂದಿದೆಯೆ ಎಂದು ಆರೆಂಟು ದಿನ ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರು. ಒಮ್ಮೊಮ್ಮೆ ಬಾಗಿಲು ಬಡಿದ ಶಬ್ದವಾದಂತೆ ಕೇಳಿ ಒಳಗೊಳಗೆ ಮುಖ ಮುಖ ನೋಡಿಕೊಳ್ಳುತ್ತಿದ್ದರು. ದಿನ ಕಳೆದಂತೆ ಭಯವು, ಒತ್ತಡ ರೂಪ ತಳೆದು, ನಿಧಾನವಾಗಿ ಸರಿಹೋಯಿತು. ಕ್ರಮೇಣ ಯುದ್ಧ ಗೆದ್ದ ಅನುಭವವಾಗಿ ಮನಸ್ಸಿಗೆ ಸಮಾಧಾನ ಆಯಿತು. ಕದ್ದ ಪಿಸ್ತೂಲ್ ಎಷ್ಟೊಂದು ಆಕರ್ಷಕವಾಗಿತ್ತು ಎಂದರೆ, ಹೆಚ್ಚು ದಿನ ಅದನ್ನು ಟ್ರಂಕಿನ ಒಳಕ್ಕೆ ಹುದುಗಿಸಿ ಇಡುವುದಕ್ಕೆ ಮನಸ್ಸೇ ಬರಲಿಲ್ಲಘಿ. ಪಿಸ್ತೂಲ್ ಕದ್ದ ಬಳಿಕ, ಅಪ್ಪನೊಂದಿಗೆ ಯದ್ಧ ಗೆದ್ದ ಹೆಮ್ಮೆಯಲ್ಲಿದ್ದ ಬ್ರೈಟ್‌ವೈಸರ್ ಅದನ್ನು ತಲೆ ದಿಂಬಿನಲ್ಲೇ ಇಟ್ಟು ಮಲಗುತ್ತಿದ್ದಘಿ. ಕೆಲವೊಮ್ಮೆ ರಾತ್ರಿ ಕತ್ತಲಿನಲ್ಲಿ ಹೊರ ತೆಗೆದು ಅದನ್ನು ಮುದ್ದಿಸಿಬಿಡುವಷ್ಟು ಹುಚ್ಚನಾಗಿದ್ದಘಿ. ಮನೆಬಿಟ್ಟು ಹೋಗುವಾಗ, ಅಲ್ಲಿದ್ದ ಪಿಸ್ತೂಲನ್ನೂ ಹಿಡಿದು ಹೋಗಿದ್ದ ತಂದೆ ಪ್ರತ್ಯಕ್ಷವಾದರೆ, ಆತನ ಎದುರು ಪಿಸ್ತೂಲ್ ಹಿಡಿದು ಕುಣಿದಾಡುವಷ್ಟು ಹುಚ್ಚು ಅತನಲ್ಲಿ ಒತ್ತರಿಸುತ್ತಿತ್ತುಘಿ. ಇತ್ತ ಅನ್ನೆ ಕ್ಯಾತರೀನ್‌ಗೆ ಒಲವು ಹಾಗೂ ಕಳವು ಎರಡಕ್ಕೂ ಸಲ್ಲುವ ಸಂಗಾತಿಯೊಬ್ಬ ಸಿಕ್ಕ ಹೆಮ್ಮೆಯಾಗಿದ್ದರೆ, ಇಬ್ಬರಿಗೂ ಪರಸ್ಪರರ ಆತ್ಮ ಬಂದುವಿನ ಜತೆಯಾದ ಖುಷಿ ಆಗಿತ್ತುಘಿ. ಪಿಸ್ತೂಲ್ ಕಳವಿನ ಕಾರ್ಮೋಡದ ದಿನಗಳು ಕಳೆದು ಕೆಟ್ಟ ಗಾಳಿಯು ಹೊರಟು ಹೋದ ಬಳಿಕ, ಒಂದು ಬಗೆಯ ಸ್ವಾತಂತ್ರ್ಯದ ಹಮ್ಮು ಅವರಲ್ಲಿ ಮೂಡತೊಡಗಿತು. ಕೆಲವೊಮ್ಮೆ ಯಬಡಾಸ್ ವರ್ತನೆಗಳು ಕಂಡರೂ, ಬ್ರೈಟ್‌ವೈಸರ್‌ಗೆ ಪಿಸ್ತೂಲ್ ಕಳವಿನ ಘಟನೆಯನ್ನು ದಕ್ಕಿಸಿಕೊಳ್ಳುವ ವಿಶ್ವಾಸ ಹುಟ್ಟಿತು. ಹರಾಜಿನಲ್ಲಿ ಪಿಸ್ತೂಲ್ ಪಡೆಯುವ ವಿಚಾರವನ್ನು ಕಸದ ಬುಟ್ಟಿಗೆ ಎಸೆದ ಬ್ರೈಟ್‌ವೈಸರ್, ಮತ್ತೆ ತನ್ನ ದೈನಂದಿನ ಆಲೋಚನಾ ಲಹರಿಗೆ ಮರಳಿದ. ಇದಾದ ಒಂಭತ್ತು ತಿಂಗಳು ಕಳೆದ ನಂತರ, ೧೯೯೫ರ ಫೆಬ್ರವರಿಯಲ್ಲಿ ವಾತಾವರಣದಲ್ಲಿ ತುಸು ಚಳಿ ಏರುತ್ತಲೇ, ಇನ್ನೊಂದು ಘಟನೆ. ಆಲ್ ಸೇಶನ್ ಬೆಟ್ಟ ಸಾಲಿನ ಕಣಿವೆ ಮಾರ್ಗದಲ್ಲಿ ಪ್ರೇಮಿಗಳು ಒಂದು ಪ್ರವಾಸವನ್ನು ಏರ್ಪಡಿಸಿದರು. ಆ ಪ್ರದೇಶದಲ್ಲಿ ಇಪ್ಪತ್ತನೇ ಶತಮಾನದಲ್ಲಿ ನಿರ್ಮಿಸಲಾದ ಮುರಾಕಲ್ಲಿನ ಕೊಟೆಯಂಥ ಕ್ಯಾಸಲ್ ಇರುವುದನ್ನು ತಿಳಿದ ಪ್ರೇಮಿಗಳು, ಅಲ್ಲಿಗೆ ಹೊರಟರು. ಹಿಂದೆ ಆ ಮಾರ್ಗದಲ್ಲಿ ಉಪಖಂಡದ ವ್ಯಾಪಾರಿಗಳು ಗೋದಿ, ಉಪ್ಪುಘಿ, ಚಿನ್ನ-ಬೆಳ್ಳಿಯನ್ನೂ ಸಗಟಾಗಿ ಸಾಗಿಸುತ್ತಿದ್ದ ಕಾರಣ, ಅವರ ವಾಸ್ತವ್ಯಕ್ಕಾಗಿ ನಿರ್ಮಾಣವಾದ ಹೊಟೇಲ್, ದಶಕಗಳ ಹಿಂದೆ ಅದನ್ನು ಮ್ಯೂಸಿಯಂ ರೂಪದಲ್ಲ ಪರಿವರ್ತಿಸಿದ್ದರು. ಆ ಭಾಗದಲ್ಲಿ ಈ ಹಿಂದೆ ಪ್ರವಾಸಕ್ಕೆ ಹೋಗಿದ್ದಾಗ, ಹಲವುಬಾರಿ ಮ್ಯೂಸಿಯಂ ಸಂದರ್ಶಿಸಿದ್ದ ಬ್ರೈಟ್‌ವೈಸರ್‌ಗೆ ಅಲ್ಲಿದ್ದ ಕೆಲವು ವಸ್ತುಗಳ ಮೇಲೆ ಕಣ್ಣು ಹಾಕಿದ್ದಘಿ. ಒಂದೆಡೆ ವಾತಾವರಣದ ಚಳಿಯು ಫ್ರಿಜ್‌ನಲ್ಲಿಟ್ಟ ಅನುಭವ ಕೊಡುತ್ತಿದ್ದರೆ, ಚಳಿಗಾಲವಾಗಿರುವುದರಿಂದ ಕ್ಯಾಸಲಿನೋ ಚಿಮಣಿಗೆ ಎಷ್ಟು ಬೆಂಕಿ ಹೆಟ್ಟಿದರೂ ಕಾಯುವುದಿಲ್ಲ ಎಂದು ಗೊಣಗುತ್ತ ಱನೀವು ತುಂಬ ಯೋಜಿಸಿ ಬಂದಂತಿದೆ ೞ ಎಂದು ಟಿಕೆಟ್ ಕೌಂಟರ್‌ನಲ್ಲಿ ಕ್ಯಾಶಿಯರ್ ಹೇಳಿದಳು. ಈ ಭಾಗದಲ್ಲಿ ಛಳಿ ಹೆಚ್ಚಾಗಿರುವುದರಿಂದ ಪ್ರವಾಸಿಗರು ಹೆಚ್ಚಾಗಿ ಇರುವುದಿಲ್ಲ ಎಂಬ ಕಾರಣದಿಂದಲೇ ತಾವು ಜೋಡಿಯಾಗಿ ಬಂದಿದ್ದು ಮಾರಾಯ ಎಂದು ಬ್ರೈಟ್‌ವೈಸರ್ ತನ್ನೊಳಗೇ ಉತ್ತರಿಸಿಕೊಂಡ. ಒಂದೆಡೆ ವಿಷಾಲವಾದ ಮ್ಯೂಸಿಯಂ, ವಿಶೇಷವಾಗಿ ಪ್ರವಾಸಿಗರ ಒತ್ತಡವೂ ಇಲ್ಲದ ಅವಯಲ್ಲಿ ಕಳವು ಮಾಡಲು ಪ್ರಶಸ್ತವಾಗಿರುತ್ತದೆ ಎಂಬುದು ಬ್ರೈಟ್‌ವೈಸರ್ ಲೆಕ್ಕಾಚಾರ. ಅಂದು ಪಿಸ್ತೂಲ್ ಕದಿಯುವಾಗ ನೇರಿಸಿಕೊಂಡಿದ್ದ ಬೆನ್ನು ಚೀಲವನ್ನೇ ಬ್ರೈಟ್ ವೈಸರ್ ಹಾಕಿಕೊಂಡಿದ್ದರೆ, ಅನ್ನೆ ಕ್ಯಾತರೀನ್ ಒಂದು ದೊಡ್ಡ ಬಗಲಿ ಚೀಲವನ್ನು ಹಾಕಿಕೊಂಡಿದ್ದಳು. ಏನೋ ಹುಡುಕುತ್ತಿದ್ದ ಬ್ರೈಟ್‌ವೈಸರ್‌ಗೆ ಮ್ಯೂಸಿಯಂ ಒಳಾಂಗಣದಲ್ಲಿದ್ದಾಗಲೇ ತಾನು ಚಿಕ್ಕವನಿದ್ದಾಗಲೇ ಗುರುತಿಸಿದ್ದ ಸಜ್ಜು ಬಿಲ್ಲು ಕಣ್ಣಿಗೆ ಬಿತ್ತುಘಿ. ಬಿಲ್ಲು ಬಾಣಗಳಿಂದ ಯುದ್ಧ ಎಂಬುದು ಈಗಿನ ದಿನಗಳಲ್ಲಿ ಪುರಾಣದ ಕತೆಯೇ ಆಗಿದ್ದರೂ, ಹಳೆಯದಾದ ಯುದ್ಧಗಳನ್ನು ನೋಡಿದರೆ ಪ್ರತಿಯೊಬ್ಬರಿಗೂ ರೋಮಾಂಛನ ಆಗುತ್ತದೆ. ಈ ಹಿಂದೆ ಅಮ್ಮಜ್ಜನ ಪ್ರಾಚ್ಯ ಸಂಶೋಧನೆಯ ಸಂಗ್ರಹಗಳಿಗೆ ಭೇಟಿ ನೀಡಿದ್ದಾಗ, ಒಂದೆರಡು ಕಡೆ ಮುರುಕಲು ಸಜ್ಜುಬಿಲ್ಲುಗಳು ಕಂಡಿದ್ದಿದೆ. ಚೂರೂ ಮುಕ್ಕಾಗದ ಸಜ್ಜುಬಿಲ್ಲನ್ನು ಕಂಡಾಗಲೆಲ್ಲ ಆತನಿಗೆ ಭಾವ ಉಕ್ಕಿ ಬರುತ್ತಿತ್ತುಘಿ. ಇಲ್ಲಿನ ಮ್ಯೂಸಿಯಂನಲ್ಲಿ ಸಜ್ಜು ಬಿಲ್ಲನ್ನು ಸೀಲಿಂಗ್‌ನಿಂದ ಇಳಿಬಿಟ್ಟ ದಾರಕ್ಕೆ ತೂಗಿ ಜೋಡಿಸಿ ಇಡಲಾಗಿತ್ತುಘಿ. ವಾಲ್ನಟ್ ಮರ ಮತ್ತು ಮೂಳೆಯಿಂದ ಮಾಡಿ, ಅದರ ಮೇಲೆ ಗರುಢದ ಕುಸುರಿ. ಬಿಲ್ಲಿಗೆ ಗಟ್ಟುಮುಟ್ಟಾದ ಚರ್ಮದ ಹುರಿಯಿಂದ ಎಳೆದು ಹೆದೆಯೇರಿಸಿದ್ದರು. ಕಣ್ಣಿಗೆ ಕುಕ್ಕುತ್ತಿದ್ದರೂ, ಬಿಲ್ಲು ಮಾತ್ರ ಹತ್ತು ವರ್ಷ ಹಿಂದೆ ಕಂಡಂತೆ ಈಗಲೂ ಕೈಗೆಟುಕುವುದು ಮಾತ್ರ ದುಸ್ತರ. ಬ್ರೈಟ್‌ವೈಸರ್ ಆ ನಿಟ್ಟಿನಲ್ಲಿ ಚಾಲಾಕಿ ಐಡಿಯಾಗಳ ಕಳ್ಳಘಿ.ಈತನ ಕಸುಬು ಮುಂದೆ ಜೈಲಿಗೆ ನೂಕಿದರೂ, ಕಳವಿನ ಸಂದರ್ಭ ಮಾತ್ರ ಈತನಿಗೆ ಅದೆಲ್ಲಿಯ ಯೋಜನೆ ಬರುತ್ತದೊ ಗೊತ್ತಿಲ್ಲಘಿ. ಪ್ರವಾಸಿಗರು, ಗಾರ್ಡ್‌ಗಳು ಯಾರೂ ಇಲ್ಲವೆಂದು ಕಣ್ಣಿನಲ್ಲೇ ಅಳೆಯುತ್ತಘಿ, ತಡ ಮಾಡದೆ ಅಲ್ಲಿಯೇ ಇದ್ದ ಒಂದು ಕುರ್ಚಿಯನ್ನು ಎಳೆದು ತಂದುಸಜ್ಜು ಬಿಲ್ಲಿನ ಕೆಳಕ್ಕೆ ಇಟ್ಟುಕೊಂಡ. ಅನ್ನೆ ಕ್ಯಾಥರೀನ್ ಬಾಗಲನ ಹತ್ತಿರ ನಿಂತು, ಗಾರ್ಡ್‌ಗಳಾಗಲಿ ಅಥವಾ ಇತರ ಟೂರಿಸ್ಟ್‌ಗಳ ಸುಳಿವನ್ನೆ ನೋಡುತ್ತಿದ್ದಳು. ತಡ ಮಾಡದೆ, ಕುರ್ಚಿಯ ಮೇಲೆ ನಿಂತು, ತೂಗುತ್ತಿದ್ದ ಬಿಲ್ಲನ್ನು ಜೋರಾಗಿ ಎಳೆದು ಕಿತ್ತುಕೊಂಡ. ಬಿಲ್ಲು ಕೈಗೆ ಬೀಳುತ್ತಿದ್ದಂತೆ, ಅದರಘನತೆಯ ಅನುಭವ ಗೊತ್ತಾಗತೊಡಗಿತು. ಮೈ ಹುರಿಗೊಳಿಸಿದ ಬಿಲ್ಗಾರ ಮಾತ್ರ ಬಳಸಬಹುದಾದ ಪುರಾತನ ಯುದ್ಧ ಪರಿರವನ್ನು ತಕ್ಷಣ ಬೆನ್ನು ಚೀಲ ಅಥವಾ ವೆನಿಟಿ ಚೀಲದಲ್ಲಿ ತುರುಕುವಂತೆ ಇರಲಿಲ್ಲಘಿ. ಹರಿದು ಹಿಡಿದಿದ್ದಾನೆ, ಇದೀಗ ತಿಳಿಯದಂತೆ ಹೊರಕ್ಕೆ ಸಾಗಿಸುವುದು ಹೇಗೆಂದು ಇನ್ನೊಂದು ಯೋಜನೆ ರೂಪಿಸಬೇಕದೆ. ಮ್ಯೂಸಿಯಂಗೆ ಬೃಹತ್ ಕದಗಳಿರುವ ಕಿಟಕಿಗಳಿರುವುದನ್ನು ಗೃಹಿಸಿ ಅಲ್ಲಿಂದ ಜಿಗಿಯಬಹುದು ಎಂದು ಕದ ದೂಡಿ ಹೊರಕ್ಕೆ ಇಣುಕಿದ. ಆಚೆ ಎರಡು ಮಹಡಿಯ ಆಳದಲ್ಲಿ ಕಲ್ಲಿನ ಹಾಸು ಇದ್ದ ಕಾರಣ, ಜಿಗಿದರೆ ಕಾಲು ಮುರಿಯುತ್ತದೆ. ಇದು ಸರಿ ಹೋಗಲಿಕ್ಕಿಲ್ಲ ಎಂದು ಬಿಲ್ಲನ್ನು ಹಿಡಿದು ಪಕ್ಕದ ಕೊಠಡಿಎ ಹೋಗಿ ಹೊರಕ್ಕೆ ಜಿಗಿಯಬಹುದಾದಾದ ಇನ್ನೊಂದು ಕಿಟಕಿಯಲ್ಲಿ ಇಣುಕಿ ಕೆಳಕ್ಕೆ ನೋಡಿದ. ನೆಲದಲ್ಲಿ ಕುರುಚಲು ಸಸ್ಯ -ಹುಲ್ಲು ಹಾಸು, ಉದ್ಯಾನ ಇರುವ ಕಾರಣ, ಹಿಂದೆ ಮುಂದೆ ನೋಡದೆ, ಬಿಲ್ಲು ಹಿಡುದು ಮಹಡಿಯಿಂದ ಕೆಳಕ್ಕೆ ಹಾರಿಯೇ ಬಿಟ್ಟಘಿ. ಆತನೊಟ್ಟಿಗೇ ಧೈರ್ಯ ಮಾಡಿ ಅನ್ನೆ ಕ್ಯಾಥರೀನ್ ಕೂಡ ಲೀಲಾಜಾಲವಾಗಿ ಜಿಗಿದಳು. ಅಲ್ಲಿನ ದೃಶ್ಯ ನೋಡಿದರೆ, ಇಬ್ಬರು ಯೋಧರು ಬಿಲ್ಲು ಹಿಡಿದು ಯುದ್ಧಕ್ಕೆ ಹೊರಟಂತೆ ಕಾಣುತ್ತಿತ್ತು ! ಉದ್ಯಾನದಲ್ಲಿ ಕಾವಲಿದ್ದ ಗಾರ್ಡ್‌ಗಳ ಭಯ ಹಾಗೇ, ಒಳಗೆ ಕೊಠಡಿಯಲ್ಲಿ ಹರಿದು ಜೋತು ಬಿದ್ದ ವಯರ್ ಎರಡೂ ಕಾರಣಕ್ಕೆ ಅವರು ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಬೇಕಿತ್ತುಘಿ. ಕಾಲ ಹರಣ ಮಾಡದೆ, ಹಿಂಬದಿಯ ಬೆಟ್ಟದ ಮೂಲಕ ಬ್ರೈಟ್ ವೈಸರ್ ಸಿಕ್ಕ ಮಾರ್ಗದಲ್ಲಿ ಕ್ಯಾಸಲ್ ಆವರಣದಿಂದ ಹೊರಕ್ಕೆ ಬಂದರೆ, ಅನ್ನೆ ಕ್ಯಾಥರೀನ್ ಬಂದ ಹಾದಿಯಲ್ಲೇ ಹಿಂದಿರುಗಿ ಕಾರಿನಲ್ಲಿ ಕಾಯುತ್ತಿದ್ದಳು. ಬೆಟ್ಟ ಗುಡ್ಡಗಳನ್ನು ಸುತ್ತಿ ಚಾರಣ ಮಾಡಿ ಅರಿವಿರುವ ಬ್ರೈಟ್‌ವೈಸರ್, ಬಿಲ್ಲಿಗೆ ಒಂದಿಷ್ಟು ಮುಕ್ಕಾಗದ ರೀತಿಯಲ್ಲಿ ಸಾಗಿಸಿ ಕಾರ ಇದ್ದ ಜಾಗಕ್ಕೆ ತಂದ. ಮತ್ತೆಲ್ಲೂ ಇಳಿಯದೆ ಮನೆ ತಲುಪಿದ ಪ್ರೇಮಿಗಳು ಒಮ್ಮೆ ನಿರಾಳ ಅನುಭವಿಸಿದರೂ, ವಾರದ ಕಾಲ ಈ ಹಿಂದಿನ ಪಿಸ್ತೂಲ್ ಘಟನೆಯಂತೆ ಒಳಗೊಳಗೆ ಹೆದರಿಕೆ ಇದ್ದೇ ಇತ್ತುಘಿ. ಈ ಬಾರಿ ಮಾತ್ರ ಸಜ್ಜಾ ಬಿಲ್ಲು ಕಳವಾಗಿದ್ದ ಸ್ಥಳೀಯ ಲಾಲ್ಸೇಕ್ ಪತ್ರಿಕೆಯಲ್ಲಿ ಫೋಟೊ ಸಹಿತ ಸುದ್ದಿಯಾಗಿ ಪ್ರಕಟವೂ ಆಯಿತು. ತಾವು ಕಳವು ಮಾಡಿದ ದಿನ ಘಟನೆಯು ಅರಿವಿಗೆ ಬಂದಿಲ್ಲಘಿ, ಹಾಗೆಯೇ ಪೊಲೀಸರಿಗೆ ನಿದಿಷ್ಠ ವ್ಯಕ್ತಿಗಳ ಬಗ್ಗೆ ಸಂದೇಹದ ಎಳೆಯೂ ಸಿಕ್ಕಿರಲಿಲ್ಲ ಎಂಬುದು ಸುದ್ದಿ ಪತ್ರಿಕೆಯ ವರದಿಯಿಂದಲೇ ಬ್ರೈಟ್‌ವೈಸರ್‌ಗೆ ತಿಳಿಯುತ್ತದೆ. ಅಪರಾಧ ವರದಿಯಲ್ಲಿ ಕಳ್ಳನ ಬಗ್ಗೆ ಏನೊಂದು ಸುಳಿವು ಕಾಣದಿರುವುದು ತುಸು ನಿರಾಳವಾಗಿ, ಪತ್ರಿಕಾ ತುಣುಕನ್ನು ಹಳೆಯ ಪುಸ್ತಕವೊಂದರಲ್ಲಿ ಹುದುಗಿಸಿ ಆಚೆ ಇಟ್ಟಘಿ. ನಾಲ್ಕಾರು ದಿನದಲ್ಲೇ ಮತ್ತೊಂದು ಯುದ್ಧ ಗೆದ್ದ ಅನುಭವ ಪಡೆದ ಕಳ್ಳ ಪ್ರೇಮಿಗಳು, ಈ ಬಾರಿ ಒತ್ತಡದಿಂದ ಖುಷಿಯ ನಿರಾಳತೆಗೆ ಮರಳಲು ಹಿಂದಿನಷ್ಟು ದೀರ್ಘ ಸಮಯ ಹಿಡಿಯಲಿಲ್ಲಘಿ. ಆ ಹೊತ್ತಿಗಾಗಲೇ ಬ್ರೈಟ್‌ವೈಸರ್‌ನ ಪಾಲಕರ ವಿವಾಹ ವಿಚ್ಚೇದನವೂ ಇತ್ಯರ್ಥವಾಗಿತ್ತುಘಿ. ವಿಚ್ಚೇದನದಿಂದ ತನಗೆ ಸಿಕ್ಕ ಹಣದಿಂದ ನಗರದ ಹೊರ ವಲಯದಲ್ಲಿ ಒಂದು ಮನೆಯನ್ನು ಖರೀದಿಸಿದ ಆತನ ತಾಯಿ, ಹೊಸ ಮನೆಯಲ್ಲಿ ಮಗ ಮತ್ತವನ ಪ್ರೇಯಸಿಗೆ ಇರಲು ಪ್ರತೇಕ ಕೊಠಡಿಯಲ್ಲಿಯೇ ಅವಕಾಶ ನೀಡಿದಳು. ಅಷ್ಟೇ ಅಲ್ಲಘಿ, ಜೋಡಿಗೆ ಆಗಾಗ ಅಡುಗೆಯನ್ನೂ ಮಾಡಿ ಬಡಿಸುತ್ತಿದ್ದಳು. ಆತನ ತಾಯಿ ಕೆಲವೊಮ್ಮೆ ಸಿಡಿಮಿಡಿಗೊಳ್ಳುತ್ತಿದ್ದರೂ, ವೃತ್ತಿಪರವಾಗಿ ಶಿಶು ಆರೈಕೆ ಮಾಡುವ ಆಯಾ ಆಗಿದ್ದರಿಂದ ಲಾಲನೆಯ ಗುಣವು ಆಕೆಗೆ ಸಹಜವೇ ಅಗಿತ್ತುಘಿ. ಹಾಗಾಗಿ ಯಾವೊಂದು ವಿಚಾರದಲ್ಲೂ ಮಗನಿಗೆ ಖಡಕ್ ಆಗಿ ಹೇಳುತ್ತಿರಲಿಲ್ಲಘಿ. ‘‘ ಊಟದ ಹೊತ್ತು ಬಿಟ್ಟರೆ, ನಾನು ಮತ್ತು ತಾಯಿ ಪ್ರತ್ಯೇಕವಾಗಿಯೇ ಬದುಕುತ್ತಿದ್ದೆವು’’ ಎನ್ನುವ ಬ್ರೈಟ್‌ವೈಸರ್ ಬಿಡುವಿನ ಸಮಯದಲ್ಲಿ ತನ್ನ ಚಲನವಲನದ ಬಗ್ಗೆ ಆಕೆ ಎಂದೂ ವಿಚಾರಿಸಿದ್ದೇ ಇಲ್ಲ ಎನ್ನುತ್ತಾನೆ. ಹೊಸ ಮನೆಯ ಪ್ರವೇಶದ ಖುಷಿಯಲ್ಲಿ ಬ್ರೈಟ್‌ವೈಸರ್‌ಗೆ ಅಮ್ಮಜ್ಜನಿಂದ ಒಂದು ದುಬಾರಿ ಪಲ್ಲಂಗದ ಉಡುಗೊರೆಯೂ ಬಂದಿತ್ತುಘಿ. ಅದಕ್ಕೆ ಬ್ರೈಟ್‌ವೈಸರ್ ಮತ್ತು ಅನ್ನೆ ಆಲೋಚಿಸಿ ಅದಕ್ಕೆ ಸರಿಹೊಂದುವ ವೆಲ್ವೆಟ್ ಮತ್ತು ಸಿಲ್ಕ್‌ನ ಒಂದು ಪರದೆಯನ್ನು ತಂದು ಮತ್ತಷ್ಟು ಆಕರ್ಷಕಗೊಳಿಸಿದರು. ಈ ಹಂತದಲ್ಲಿ ಸಿನಿಮಾ ಪ್ರೇಮಿಗಳ ಪೋಸ್ಟರ್, ಇಕಿಯಾ ಕಂಪೆನಿಯ ಸಾದಾ ಮಂಚವೆಲ್ಲ ಸ್ಥಳಾಂತರಗೊಂಡು ಆ ಜಾಗಗಳಲ್ಲಿ ಅವರ ಇತ್ತೀಚನ ಸೇರ್ಪಡೆಗಳನ್ನು ಅಲಂಕರಿಸಿಕೊಂಡರು. ಫ್ಲಂಟಾಕ್ ಪಿಸ್ತೂಲು ಹಾಗೂ ಸಜ್ಜುಬಿಲ್ಲನ್ನು ಪಲ್ಲಂಗದ ಪಕ್ಕದಲ್ಲೇ ಜೋಡಿಸಿದರು. ಖಾಲಿ ಇರುವ ಕೊಠಡಿಯ ಗೋಡೆಗೆ ಏನೇನು ಇರಬೇಕು ಎಂಬ ಅವರ ಕನಸು ಪೂರ್ಣ ಸಾಕಾರಗೊಳ್ಳಲು ಇನ್ನೂ ಸಾಕಷ್ಟು ಆರ್ಟಿಕಲ್‌ಗಳು ಬೇಕಿವೆ ನಿಜ. ತನಗೆ ಪ್ಯಾರಿಸಿನ ಲಾರ್ರ‌್ವ ಮ್ಯೂಸಿಯಂನ ವಾತಾವರಣ ಅಲ್ಲೆಲ್ಲ ನೆನಪಿಗೆಬರತೊಡಗಿತು ಎನ್ನುತ್ತಿದ್ದಘಿ.
Read More