1986- ಒಂದಿಷ್ಟು ಸವಿ ಸವಿ ನೆನಪು !

ಕ್ಯಾಲೆಂಡರ್ನಲ್ಲಿ ಹಿಮ್ಮುಖವಾಗಿ ಚಲಿಸಿ 1986ನೇ ಇಸವಿಗೆ ಬನ್ನಿ. ಆಗ ನಾನು ನನ್ನ ಪ್ರೀತಿಯ  ಇಟಗಿ ಹೈಸ್ಕೂಲ್ನಲ್ಲಿ ಖಾಕಿ ಚೆಡ್ಡಿ, ಬಿಳಿ ಅಂಗಿ ಧರಿಸಿದ ಒಬ್ಬ ಎಸ್ಎಸ್ಎಲ್ಸಿ ವಿದ್ಯಾಥರ್ಿ. ಎಂಥ ಮಾಯವೊ ಗೊತ್ತಿಲ್ಲ, ಪ್ರಾಥಮಿಕ ಹಂತದಲ್ಲಿ ಶಾಲೆಗೆ ಹೋಗುವುದೆಂದರೇ ಬೇಜಾರು ಪಡುತ್ತಿದ್ದ ನಾನು ಹೈಸ್ಕೂಲ್ ಸೇರಿದ ನಂತರ ಇಲ್ಲಿನ ವಾತಾವರಣವನ್ನು ಎಷ್ಟೊಂದು ಖುಷಿಪಟ್ಟೆ ಅಂದರೆ, ರಜೆಯಲ್ಲೂ ಸ್ಪೆಶಲ್ ಕ್ಲಾಸ್ ಇರಲಿ ಎಂದು ಹಾರೈಸುತ್ತಿದ್ದೆ. ಹಾಗೆ ನೋಡಿದರೆ ಹೈಸ್ಕೂಲ್ನಲ್ಲೂ ಆಗ ಗಮ್ಮತ್ತು ಇರುತ್ತಿತ್ತು. ನಾನು ಹಾಗೂ ನನ್ನ ಬ್ಯಾಚಿನವರ ಅದೃಷ್ಟ ಎಂದರೆ ಹೈಸ್ಕೂಲ್ ಕಂಡ ಎರಡು ಬಗೆಯ ಕಟ್ಟಡ ವ್ಯವಸ್ಥೆಗೂ ನಾವು ಸಾಕ್ಷಿಯಾಗಿದ್ದೇವೆ.
ನನ್ನ ಅಣ್ಣ, ಅಕ್ಕ, ಚಿಕ್ಕಪ್ಪ ಊರಿನವರೆಲ್ಲ ಓದಿ ತಮ್ಮ ರೋಚಕ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದ "ನಮ್ಮ ಹೈಸ್ಕೂಲ್" ಒಂದು ಸ್ವಂತ ಕಟ್ಟಡ ಪಡೆದುಕೊಳ್ಳುತ್ತಿದೆ ಎಂಬುದು ನಮ್ಮೊಳಗಿನ ಪುಳಕದ ಒಂದು ಸೆಲೆಯಾಗಿತ್ತು. ಉಳಿದಂತೆ ನಾನು ವೈಯಕ್ತಿಕವಾಗಿ ಮಾಸ್ಟ್ರುಗಳ ಪ್ರಿಯ ಶಿಷ್ಯನಾಗಿ ಅಲ್ಲಿನ ವಾತಾವರಣವನ್ನು ಎಂಜಾಯ್ ಮಾಡಿದ್ದೇನೆ. ವಿದ್ಯಾಥರ್ಿಗಳ ಗುಂಪಿನಲ್ಲಿ ಮಾಸ್ಟರ್ ನನ್ನನ್ನೇ ಹೆಸರಿಡಿದು ಏನೋ ಒಂದು ಕೆಲಸ ಮಾಡಿಸುತ್ತಿದ್ದರು ಎಂಬುದೇ ನನ್ನ ಧನ್ಯತೆಯ ಕಾರಣವಾಗಿತ್ತು.
ಆ ತನಕ ಇಟಗಿ ರಥ ಬೀದಿಯ ಸುತ್ತಲೂ ಆವರಿಸಿದ ದೇವಸ್ಥಾನದ ಕಟ್ಟಡದ ಮಾಳಿಗೆಯಲ್ಲಿ ನಮಗೆ ಕ್ಲಾಸ್ಗಳು ನಡೆಯುತ್ತಿದ್ದವು. ಹೈಸ್ಕೂಲ್ ತನ್ನ ಆರಂಭಿಕ ಕಾಲು ಶತಮಾನವನ್ನು ದೇವಸ್ಥಾನದ ಮಾಳಿಗೆಯಲ್ಲೇ ನಿಭಾಯಿಸಿದ್ದು, ಅಲ್ಲಿ ಕಲಿತ ವಿದ್ಯಾಥರ್ಿಗಳಿಗೆ ನಿಜಕ್ಕೂ ಮರೆಯಲಾಗದ ಅನುಭವ. ಈ ಅವಧಿಯಲ್ಲಿ ಕಾಲ ಹಾಕಿದ ಪ್ರತಿಯೊಬ್ಬ ವಿದ್ಯಾಥರ್ಿಗೂ ಒಂದೊಂದು ಕತೆ ಇದ್ದೀತು.
ಆ ವ್ಯವಸ್ಥೆ ಒಂದರ್ಥದಲ್ಲಿ ಬಯಲು ಆಲಯ. ಬಯಲು ಆಲಯದೊಳಗೊ, ಆಲಯವು ಬಯಲೊಳಗೊ.. ಎಂಬ ದಾಸರ ಹಾಡನ್ನು ನೆನಪಿಸಿಕೊಳ್ಳಿ. ಯಾವು ಯಾವುದೋ ಹೊತ್ತಿಗೆ ಬಸ್ಸುಗಳು ಬಂದು ನಿಲ್ಲುವುದು. ವ್ಯಾನಿನ ಹಮಾಲಿಗಳು ಮೂಲೆ ಇಳಿಸುವಾಗಿನ ಬೊಬ್ಬೆ, ಆಗಾಗ ದೇವಸ್ಥಾನದ ಬಲಿ ಗಂಟೆಗಳು, ಬೀದಿಯಲ್ಲಿ ಗೂಳಿಗಳ ಕಾದಾಟ/ಸಗಣಿಯ ವಾಸನೆ ಎಲ್ಲವೂ ನಮ್ಮ ಪಾಠದ ಜತೆಗೇನೇ ನಮ್ಮನ್ನು ಆವರಿಸುತ್ತಿದ್ದವು. ಜತೆಗೆ ವೀರಭದ್ರ ಹೋಟೇಲ್ನಿಂದ ಕೆಲವೊಮ್ಮೆ ಉಳ್ಳಾಗಡ್ಡೆ ಭಜ್ಜಿಯೂ ನಮ್ಮ ಬಾಯಲ್ಲಿ ನೀರೂಸುತ್ತಿತ್ತು !
ಇಷ್ಟೇ ಅಲ್ಲ. ಕೆಲವೊಮ್ಮೆ ಆಟ/ಚುನಾವಣೆ ಪ್ರಚಾರದ ಜೀಪುಗಳು ನಮ್ಮ ಪಾಠಕ್ರಮಕ್ಕೆ ತಡೆ ಒಡ್ಡುತ್ತಿದ್ದವು. ನನಗೆ ಈಗಲೂ ಒಂದು ಘಟನೆ ನೆನಪಿದೆ. ಇದೀಗ ರಾಜ್ಯ ಸರಕಾರದ ಕ್ಯಾಬಿನೆಟ್ ಸಚಿವರಾಗಿರುವ ಶ್ರೀ ಆರ್.ವಿ.ದೇಶಪಾಂಡೆ ಇಟಗಿ ಬೀದಿಯಲ್ಲಿ ಚುನಾವಣೆ ಪ್ರಚಾರ ಮಾಡಿ ಹೋದ ಆ ದೃಶ್ಯ. ಆಗಿನ್ನು ಯುವ ವಕೀಲರಾಗಿದ್ದ ದೇಶಪಾಂಡೆ ಸಂಸತ್ ಚುನಾವಣೆಗೆ ನಿಂತು ಪ್ರಚಾರಕ್ಕೆ ಬಂದಿದ್ದರು. ಅದೊಂದು ತುತರ್ಾಗಿ ಸಜ್ಜಾದ ಪ್ರಚಾರ ಸಭೆ. ಗುಂಡು ಗುಂಡಾಗಿದ್ದ ದೇಶಪಾಂಡೆ ಏನು ಭಾಷಣ ಮಾಡಿದರು ಎಂಬ ಬಗ್ಗೆ ನನಗೀಗ ನೆನಪಿಲ್ಲ, ಆದರೆ ಪ್ರಚಾರ ಸಭೆಯ ಎರಡು ಚಿತ್ರಗಳು ನೆನಪಿದೆ. ಮೊದಲನೆಯದು ಎಂದರೆ ಸಭೆಯಲ್ಲಿ ಇದ್ದವರು ನನ್ನನ್ನೂ ಒಳಗೊಂಡಂತೆ ಎಂಟೇ ಎಂಟು ಜನ ಮಾತ್ರ ! ವೇದಿಕೆಯಲ್ಲಿ ದೇಶಪಾಂಡೆ ಪಕ್ಕದಲ್ಲಿ ಊರ ಹಿರಿಯರಾದ ದೊಡ್ ಸಾವ್ಕಾರ್ ಅವರು ತಮ್ಮ ವಿಶಿಷ್ಟ ಕಪ್ಪು ಟೊಪ್ಪಿಯನ್ನು ಧರಿಸಿ-ಸಬಾಧ್ಯಕ್ಷರಾಗಿದ್ದ ದೃಶ್ಯ. ದೊಡ್ಡ ಸಾವಕಾರ್ ಅವರು ಅಂದು ಸಭೆಯಲ್ಲಿ ಮಾತನಾಡಲಿಲ್ಲ. ಅಂದು ಅಂತಲೇ ಅಲ್ಲ, ಅವರು ಅದೇ ಬಂಗಿಯಲ್ಲಿ ಅಂಗಡಿಯ ಗಲ್ಲೆಯಲ್ಲಿ ಕೂಡ ಕುಳಿತಿರುತ್ತಿದ್ದ ದೃಶ್ಯವನ್ನು ಅದೆಷ್ಟೋ ಬಾರಿ ನೋಡಿದ್ದೇನೆ. ಅವರು ಯಾವಾಗಲೂ ಮಾತಾಡಿದ್ದನ್ನು ಮಾತ್ರ ನಾನು ನೋಡಿಯೇ ಇಲ್ಲ. ಆ ಭಾಗದ ವ್ಯಾಪಾರದ ಕೇಂದ್ರ ವ್ಯಕ್ತಿಯಾಗಿದ್ದ ತಿವಿಕ್ರಮ ವಾಮನ್ ಪೈಗಳು ಮಹಾ ವಾಚಾಳಿಗಳ ಇಟಗಿ ಪೇಟೆಯಲ್ಲಿ ಎದ್ದು ಕಾಣುವ ಮೌನಿ ಸಾಧಕ ಎಂದೇ ನನಗೆ ಇದೀಗ ಅನ್ನಿಸುತ್ತದೆ.
ಹೈಸ್ಕೂಲ್ಗೆ ಹೋಗುವಾಗ ಇಟಗಿ ರಾಮೇಶ್ವರ ದೇವಸ್ಥಾನಕ್ಕೆ ಹೋಗಿ, ಪೂಜೆಯ ತಯಾರಿಯಲ್ಲಿದ್ದ ಗಣಪತಿ ಹಾಗೂ ರಾಮೇಶ್ವರ ದೇವರಿಗೆ ಅಡ್ಡ ಬಿದ್ದು, ಕೊನೆಗೆ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಒಂದು ನಾಮ ಎಳೆದುಕೊಂಡು ಬರುವುದು ಹೆಚ್ಚಿನ ವಿದ್ಯಾಥರ್ಿಗಳ ಸಂಪ್ರದಾಯವಾಗಿತ್ತು. ನಾನು ಮನೆಯಿಂದ ಹೊರಡುವುದೇ ವಿಳಂಬವಾಗುತ್ತಿದ್ದರಿಂದ ಅಷ್ಟು ನಿಷ್ಟೆ ನನ್ನಿಂದ ಸಾಧ್ಯವೇ ಆಗುತ್ತಿರಲಿಲ್ಲ ಎಂಬುದು ಬೇರೆ ವಿಚಾರ. ಅಷ್ಟಾದರೂ ದೇವಸ್ಥಾನವು ನಮ್ಮ ಕಲಿಕೆಯ ಅವಿಭಾಜ್ಯ ಅಂಗವಾಗಿತ್ತು. ಆದರೆ ಇಟಗಿ ತೇರಿನ ಸಂದರ್ಭದಲ್ಲೇ ನಮ್ಮ ವಾಷರ್ಿಕ ಪರೀಕ್ಷೆ ಬರುತ್ತಿದ್ದುದು ಮಾತ್ರ ನಮಗೆಲ್ಲ ಒಂದು ರೀತಿಯ ಉಭಯ ಸಂಕಟ. ತೇರಿನ ಗದ್ದಲದಲ್ಲಿ ಕೆಲವೊಮ್ಮೆ ಪಾಠ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಮನಸ್ಸೂ ಕ್ಲಾಸಿನಲ್ಲಿ ಇರುತ್ತಿರಲಿಲ್ಲ. ಇದೇ ಸಂದರ್ಭ ಅಂದಿನ ಇಟಗಿ ತೇರಿನ ಸಂಭ್ರಮ ನನ್ನ ಮೈ ನವಿರೇಳಿಸುತ್ತದೆ. ಅಂದಿನ ಮಟ್ಟಿಗೆ ತೇರು ಎಂಬುದು ಆ ವರ್ಷದ ಅತ್ಯಂತ ಮಹತ್ವದ ಸಾರ್ವಜನಿಕ ಘಟನೆ. ಒಮ್ಮೆ ಇಟಗಿ ತೇರಿನ ಸಂದರ್ಭ ಹಿರಿಯ ರಾಜಕಾರಣಿ ಶ್ರೀ ಎಸ್. ಬಂಗಾರಪ್ಪನವರು ಅಲ್ಲಿ ಜನರೊಂದಿಗೆ ಅತ್ಯಂತ ಸಾಮಾನ್ಯ ವ್ಯಕ್ತಿಯಂತೆ ಬೆರೆತು ಡೊಳ್ಳು ಬಾರಿಸಿದ್ದರು. ಬಂಗಾರಪ್ಪ ನಮಗೆ ನಮ್ಮದೇ ಜನ ಎಂದು ಅನ್ನಿಸಲು ಅವರು ನಮ್ಮ ಹೆಡ್ ಮಾಸ್ಟರ್ ಅವರ ಸಡ್ಡಕ ಎಂಬ ವಿಷಯ ಕೂಡ ಕಾರಣ ಇರಬೇಕು. ಬಂಗಾರಪ್ಪ ದೊಡ್ಡ ರಾಜಕಾರಣಿ ಆಗಿದ್ದರೂ, ಆಗಾಗ ತಮ್ಮ ಪತ್ನಿ ಮಕ್ಕಳೊಂದಿಗೆ ಇಟಗಿಗೆ ಬಂದು ಸಾಮಾನ್ಯ ಜನರಂತೆ ಉಳಿದುಕೊಳ್ಳುತ್ತಿದ್ದರು. ರಾಜಕೀಯ ರಜಾ ಕಾಲದಲ್ಲಿ ಅವರು ಇಲ್ಲಿ ಬಂದು ಇರುತ್ತಿದ್ದರು ಅನಿಸುತ್ತದೆ.
ನಂತರ ಈ ರಾಜ್ಯದ ಮುಖ್ಯಮಂತ್ರಿ ಆದ ಶ್ರೀ ಬಂಗಾರಪ್ಪನವರನ್ನು ನಾವು ನೋಡಿದ್ದು, ನಮ್ಮ ಹೈಸ್ಕೂಲ್ ವಠಾರದಲ್ಲಿ. ಹಾಗೆ ನೋಡಿದರೆ ರಾಜ್ಯದ ಇಬ್ಬರು ಮುಖ್ಯಮಂತ್ರಿಗಳನ್ನು ನಾನು ಇದೇ ವಠಾರದಲ್ಲಿ ಮೊದಲಾಗಿ ಸಮೀಪದಿಂದ ನೋಡಿದ್ದೇನೆ. ಅಧಿಕಾರ ವಿಕೇಂದ್ರೀಕರಣದ ಮೂಲಕ ದೇಶದ ಗಮನ ಸೆಳೆದ ಮುತ್ಸದ್ದಿ ರಾಜಕಾರಣಿ ಶ್ರೀ ರಾಮಕೃಷ್ಣ ಹೆಗಡೆಯವರು, ಮುಖ್ಯಮಂತ್ರಿಯಾದ ಆರಂಭದಲ್ಲಿ ಇಟಗಿ ದೇವಸ್ಥಾನ ಸಂದಶರ್ಿಸಿದ್ದರು. ಹಿಂದಿರುಗುವಾಗ ಬೀದಿಯಲ್ಲಿನ ನಾವೆಲ್ಲ ಬಳಸುವ ಬಾವಿಯನ್ನು ಇಣಕಿ ನೋಡಿದ ಹೆಗಡೆಯವರು, "ಬಾವಿಯೊಳಗೆ ಬೆಳೆದ ಗಿಡಗಂಟಿಗಳನ್ನು ತೆಗಿಸಿ ಸ್ವಚ್ಛಗೊಳಿಸ್ರಪ್ಪ' ಎಂದು ಸಂಬಂಧಪಟ್ಟವರಿಗೆ ಹೇಳಿ ಹೋಗಿದ್ದರು. ಅಂದಹಾಗೆ ಈ ಬಾವಿ ಆಗ ನಾವು ವಿದ್ಯಾಥರ್ಿಗಳು ಸೇರಿದಂತೆ ಸುತ್ತಲಿನ ಕೆಲವು ಮನೆಯವರು ಬಳಸುವಂಥದ್ದಾಗಿತ್ತು. ಹೀಗೆ ನಮ್ಮ ಹೈಸ್ಕೂಲ್ ಬೀದಿ ರಾಜಕಾರಣಗಳು ಸೇರಿದಂತೆ ಬಣ್ಣ ಬಣ್ಣದ ವ್ಯಕ್ತಿಗಳಿಂದ ಕೂಡಿದ ಶ್ರೀಮಂತ ಸಾಮಾಜಿಕ ಅನುಭವದ ತಾಣವಾಗಿತ್ತು.  ಇಂಥವುಗಳಲ್ಲಿ ಒಳ್ಳೆಯದನ್ನು ಮಾತ್ರ ಬಳಸಿಕೊಳ್ಳುವುದು ಅವರವರ ಸಂಸ್ಕಾರಕ್ಕೆ ಬಿಟ್ಟಿದ್ದಾಗಿತ್ತು.
ಮತ್ತೆ ಹೈಸ್ಕೂಲ್ನ ಕ್ಲಾಸ್ ಒಳಕ್ಕೆ ಬರೋಣ. ಯಾವುದೇ ಕ್ಷಣದಲ್ಲೂ ಅಕಾಡಮಿಕ್ ವಾತಾವರಣದಿಂದ ಹೊರಕ್ಕೆ ಜಾರಲು ಪ್ರಲೋಭನಗಳು ಇರುತ್ತಿದ್ದ ದೇವಸ್ಥಾನದ ಬೀದಿಯ ನಮ್ಮ ಹೈಸ್ಕೂಲ್ನಲ್ಲಿ ಅಪ್ಪಟವಾದ ಕಲಿಕಾ ವಾತಾವರಣ ಖಂಡಿತ ಇತ್ತು. ಇಲ್ಲಿಯೇ ಕಲಿತ ವಿದ್ಯಾಥರ್ಿ ಒಬ್ಬರು ರಾಜ್ಯ ಮಟ್ಟಕ್ಕೆ ಒಂದು ರ್ಯಾಂಕ್ಗಳಿಸಿದ್ದೇ ಇದಕ್ಕೆ ಸಾಕ್ಷಿ. ಹೈಸ್ಕೂಲ್ ಬೇರೆ ಊರಿಗೆ ಸ್ಥಾನಪಲ್ಲಟ ಆಗುವ ಭಯ ಕೂಡ ವಿದ್ಯಾಥರ್ಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಒಂದು ಬಗೆಯ ಛಲವನ್ನು ಮೂಡಿಸಿತ್ತು ಎನಿಸುತ್ತದೆ. ಇಟಗಿ ಹೈಸ್ಕೂಲ್ ನಮ್ಮದು, ನಾವು ಉಳಿಸಿ ಬೆಳೆಸಬೇಕು ಎಂಬ ಭಾವನೆ ವಿದ್ಯಾಥರ್ಿಗಳು, ಶಿಕ್ಷಕರು ಮಾತ್ರವಲ್ಲ ಸುತ್ತಲಿನ ಸಮಾಜದಲ್ಲಿ ಎಷ್ಟೊಂದು ತೀವ್ರವಾಗಿತ್ತು ಎಂದರೆ ಹೈಸ್ಕೂಲ್ ಹೋಗದ ನಮ್ಮಪ್ಪ ನಂಥ ಅದೆಷ್ಟೋ ಪಾಲಕರು ಆಗೀಗ ಇದೇ ಭಾವನೆಯನ್ನು ನಮ್ಮೆದುರು ಹಂಚಿಕೊಳ್ಳುತ್ತಿದ್ದರು. ಇಟಗಿ ಕೇಂದ್ರಿತ ಸಾಮಾಜಿಕ ವ್ಯವಸ್ಥೆ ಹೈಸ್ಕೂಲನ್ನು ಭಾವನಾತ್ಮಕವಾಗಿ ಪೋಷಿಸಿದ ಬಗೆ ಇದಾಗಿತ್ತು. ಹೈಸ್ಕೂಲ್ ಹೊಸ ಕಟ್ಟಡಕ್ಕೆ ಅದೆಷ್ಟೋ ಹಿರಿಯರು ಸಹಾಯ ಮಾಡಿದ್ದಿರಬಹದು, ಆದರೆ ಅದೆಲ್ಲ ನಮ್ಮ ಬುದ್ಧಿಗೆ ನಿಲುಕುವ ಸಂಗತಿಯಾಗಿರಲಿಲ್ಲ.
ಆಗ ಈ ಭಾಗದಲ್ಲಿ ಬಿಳಗಿ ಬಿಟ್ಟರೆ ಬೇರೆಲ್ಲೂ ಹೈಸ್ಕೂಲ್ ಇರಲಿಲ್ಲ. ಕಾನಳ್ಳಿ, ಲಂಭಾಪುರ ಕ್ಯಾದಗಿಯಿಂದ ಇಲ್ಲಿಗೆ ಕಾಲ್ನೆಡಿಗೆಯಲ್ಲಿ ಬಂದು ನಿಷ್ಠೆಯಿಂದ ಹೈಸ್ಕೂಲ್ ಶಿಕ್ಷಣ ಪಡೆದು ಜೀವನ ಹಸನು ಮಾಡಿಕೊಂಡಿದ್ದಾರೆ. ಇಟಗಿಯಲ್ಲಿನ ವೇದ ಪಾಠಶಾಲೆಯ ಅನುಕೂಲ ಪಡೆಯಲು ಯಲ್ಲಾಪುರದ ಅದೆಷ್ಟೋ ವಿದ್ಯಾಥರ್ಿಗಳು ಇದೇ ಹೈಸ್ಕೂಲ್ನಲ್ಲಿ ಕಲಿತು, ತಮ್ಮ ಬೆಳಗು ಮತ್ತು ಸಂಜೆಯನ್ನು ಇನ್ನಷ್ಟು ಸದುಪಯೋಗ ಮಾಡಿಕೊಂಡಿದ್ದಾರೆ. ಸುತ್ತಲಿನ ಹರಗಿ, ಹೊನ್ನೆಮಡಿಕೆ, ಕೊಡ್ತಗಣಿಯಲ್ಲಿ ಉಳಿದುಕೊಂಡು ಬೇಗನೆ ತಮ್ಮ ಕೆಲಸ ಮುಗಿಸಿ ಪಾಠಶಾಲೆಯಲ್ಲಿ ಮಂತ್ರ ಕಲಿಯಲು ಬರುತ್ತಿದ್ದರು. ಅವರಲ್ಲ ಸೇರಿ ಪಾಠಶಾಲೆಯಲ್ಲಿ ಸಾಮೂಹಿಕವಾಗಿ ಮಾಡುತ್ತಿದ್ದ ಮಂತ್ರ ಪಠಣ ಹೈಸ್ಕೂಲ್ಗೆ ಹೋಗಿ ಬರುವ ನನ್ನ ಸ್ಮೃತಿ ಪಟಲದಲ್ಲಿ ಅತ್ಯಂತ ಮಧುರ ನೆನಪಾಗಿ, ಆಗೀಗ ಮಾರ್ಧನಿಸುತ್ತದೆ.
ಅಂದಹಾಗೆ ಹೈಸ್ಕೂಲ್ ಶೈಕ್ಷಣಿಕ ಪ್ರಗತಿಗೆ ಕಮಿಟ್ ಆದ ಶಿಕ್ಷಕ ವರ್ಗ ಮತ್ತು ಇವರಿಗೆಲ್ಲ ಉತ್ತಮ ನಾಯಕತ್ವ ನೀಡಿದ ವ್ಯಕ್ತಿ ಮತ್ತು ಸಂಸ್ಥೆಯನ್ನು ನಾನು ಸ್ಮರಿಸದಿದ್ದರೆ ನನ್ನ ಅನುಭವವನ್ನು ನಾನು ಪೂರ್ಣಗೊಳಿಸಿದಂತೇ ಆಗುವುದಿಲ್ಲ.
ಕಟ್ಟಡ ಕಟ್ಟಿಸುವುದು, ಏನೇನೋ ಓಡಾಟದ ಕಾರಣ ನಮ್ಮ ಹೆಡ್ ಮಾಸ್ಟರ್ ಶ್ರೀ ಬಿ. ಬಿ. ನಾಯ್ಕರು ಹೆಚ್ಚಿನ ಜವಾಬ್ದಾರಿಯ ಕಾರಣ ನನಗೆ ಪಾಠದ ದೃಷ್ಟಿಯಲ್ಲಿ ಹೆಚ್ಚು ಪರಚಿತರಲ್ಲ. ಅವರೊಬ್ಬ ಸಶಕ್ತ ಲೀಡರ್ ಎಂಬುದರಲ್ಲಿ ಎರಡು ಮಾತಿಲ್ಲ. ಎಸ್ಎಸ್ಎಲ್ಸಿಯಲ್ಲಿ ಜಾಮೆಟ್ರಿ ಪಾಠವನ್ನು ಮಾತ್ರ ಮಾಡಿದ್ದು ಬಿಟ್ಟರೆ ಅವರೊಡನೆ ಅಷ್ಟೊಂದು ಆಪ್ತಭಾವ ನನಗೆ ಇರಲಿಲ್ಲ. ನನ್ನ ಕೆಲವು ಕಿಲಾಡಿಯ ಕಾರಣ ಒಳಗೊಳಗೆ ಅವರ ಬಗ್ಗೆ ನನಗೆ ಭಯವೂ ಇತ್ತು. ಆದರೆ ಭಟ್ರಕೇರಿ ತಿಮ್ಮಣ್ಣ ಭಟ್ಟರು ಜಾಗವನ್ನು ದಾನ ಮಾಡಿದ ಕಾರಣ ಹೈಸ್ಕೂಲ್ ಕಟ್ಟಡ ಸ್ಥಾಪನೆಗೆ ಅನುಕೂಲ ಆಯಿತು ಎಂದು ಮನತುಂಬಿ ನಮ್ಮೆದುರು ಅವರು ಸ್ಮರಿಸುತ್ತಿದ್ದುದು ಮಾತ್ರ ನನಗೆ ಈಗಲೂ ಸ್ಪಷ್ಟವಾಗಿ ನೆನಪಿನಲ್ಲಿದೆ.
ಯಾಕೋ ಏನೋ ನನ್ನ ಮೇಲೆ ವಿಶೇಷ ಹೋಪ್ಸ್ ಇಟ್ಟುಕೊಂಡವರು ಕೆ.ಐ.ಹೆಗಡೆಯವರು. ವಿಜ್ಞಾನದ ಬಗ್ಗೆ ನನ್ಮಲ್ಲಿ ಪ್ರೀತಿ ಹುಟ್ಟಿಸಿದ್ದೇ ಈ ಮನುಷ್ಯ. ಜತೆಗೆ ನಾವೆಲ್ಲ ಮಧ್ಯಾಹ್ನ ಏನಾದರೂ ಹೊಟ್ಟೆಗೆ ಹಾಕಿಕೊಳ್ಳುತ್ತೇವೋ ಅಥವಾ ಉಪವಾಸ ಇರುತ್ತೇವೋ ಎಂಬ ಬಗ್ಗೆ ಕ್ಲಾಸಿನಲ್ಲಿ ಪ್ರತಿಯೊಬ್ಬರನ್ನೂ ಕರಾರುವಾಕ್ಕಾಗಿ ಅವರು ವಿಚಾರಿಸುವುದಿತ್ತು. ಹೊಟ್ಟೆ ತಂಪಾಗಿಲ್ಲದಿದ್ದರೆ ವಿದ್ಯಾಥರ್ಿಗಳಿಗೆ ಸಂಜೆಯ ಕ್ಲಾಸ್ಗಳು ತಲೆಗೆ ಹೋಗುವುದಿಲ್ಲ, ಅಲ್ಲದೆ ಬೆಳೆಯುವ ಮಕ್ಕಳಿಗೆ ಮಧ್ಯಾಹ್ನದ ಊಟವು ಬಹು ಮುಖ್ಯ, "ಸಮೀಪದಲ್ಲಿ ಇರುವ ಸಂಬಂಧಿಕರ ಮನೆಯಲ್ಲಿ ಹೋಗಿ ಕೇಳಿ, ಅವರು ಒಂದು ಊಟಕ್ಕೆ ಇಲ್ಲ ಎನ್ನುವುದಿಲ್ಲ" ಎಂದು ಹೇಳುತ್ತಿದ್ದರು. ಅವರ ಮಾತು ನನಗೆ ಈಗ ನನ್ನ ಮಕ್ಕಳು ದೊಡ್ಡವರಾಗುತ್ತಿರುವ ಹೊತ್ತಿಗೆ ಸರಿಯಾಗಿ ಅರ್ಥವಾಗುತ್ತಿದೆ.
ಇದೇ ರೀತಿ, ಒಮ್ಮೆ ಆಥರ್ಿಕ ಅಡಚಣೆ ಸಂದರ್ಭ ನನ್ನ ಫೀಸನ್ನು ತಾವೇ ಕಟ್ಟಿದ್ದ ಗಣಿತದ ಮಾಸ್ಟರ್ ವಿ.ಜಿ.ಪೈ ಆಗೀಗ ನೆನಪಾಗುತ್ತಾರೆ. ಕಲಿಸುವಾಗ ತೀರಾ ತಲ್ಲೀನರಾಗುತ್ತಿದ್ದ ಪೈಗಳು, ಅವರಿಗೆ ಗೊತ್ತಿಲ್ಲದೇ ನಮ್ಮನ್ನೆಲ್ಲ ನಗಿಸುತ್ತಿದ್ದರು. ಅಂಕ ಗಣಿತದಲ್ಲಿ ಉತ್ತರ ಬರೆಯುವಾಗ ನಾವು ಕೊನೆಯಲ್ಲಿ ಯುನಿಟ್ ಬರೆಯಲು ಮರೆತರೆ, "ಮೂರು ಎಂಥದು ಮಾರಾಯಾ ?.. ದ್ವಾಶೆ ?"  ಎಂದು ನಮ್ಮನ್ನು ತಮಾಶೆಯಲ್ಲಿ ಗೇಲಿ ಮಾಡುತ್ತಿದ್ದ ರೀತಿ ಈಗಲೂ ನೆನಪಾಗಿ ಅವರು ನನ್ನಲ್ಲಿ ಅಮರರಾಗಿದ್ದಾರೆ ಎನಿಸುತ್ತದೆ.
ನನ್ನ ಮೇಲೆ ಗಾಢ ಪ್ರಭಾವ ಬೀರಿದ ಇನ್ನೊಬ್ಬ ಮಾಸ್ಟರ್ ಎಂದರೆ ಶ್ರೀ ಎನ್.ವಿ.ಹೆಗಡೆಯವರು. ಅಮೆರಿಕನ್ ಎಸೆಂಟ್ ಇಂಗ್ಲೀಷ್ ಹೇಗಿರುತ್ತೆ ಎಂಬ ಬಗ್ಗೆ ಇದೀಗ ಬೆಂಗಳೂರಿನಂತ ನಗರದಲ್ಲಿ ಬಿಪಿಒದಲ್ಲಿ ದುಡಿಯುವ ಉದ್ಯೋಗಿಗಳಿಗೆ ವಿಶೇಷ ತರಗತಿಗಳನ್ನು ನೀಡಲಾಗುತ್ತದೆ ಎಂದು ಕೇಳಿದ್ದೇನೆ. ಅಂದರೆ ಇಂಗ್ಲೀಷನ್ನು ಇಂಗ್ಲೀಷರ ರೀತಿಯಲ್ಲೇ ಹೇಗೆ ಉಚ್ಚರಿಸಬೇಕು ಎಂಬ ತರಬೇತಿ ಅದು. ಅದನ್ನು ನಾನು ನನ್ನ ಹಳ್ಳಿಯ ಹೈಸ್ಕೂಲ್ ದಿನಗಳಲ್ಲೇ ಗಮನಿಸಿದ್ದರೆ ಅದು ಎನ್.ವಿ.ಹೆಗಡೆಯವರ ಇಂಗ್ಲೀಷ್ ಬೋಧನೆಯಿಂದಾಗಿ. ಪಾಠದಲ್ಲಿ ಬರುವ ಕ್ಲಿಷ್ಟವಾದ ಶಬ್ಧದ ಅರ್ಥ, ಸ್ಪೆಲ್ಲಿಂಗ್, ಉಚ್ಚಾರದ ಬಗ್ಗೆ ಮೊದಲಿಗೆ ಹೇಳಿ ಪಾಠ ಆರಂಭಿಸುವುದು ಅವರ ರೂಢಿ. ನಿಧರ್ಿಷ್ಟ ಶಬ್ಧವನ್ನು ಹೇಗೆ ಉಚ್ಚಾರ ಮಾಡಬೇಕು/ಅದಕ್ಕೆ ನಾಲಗೆಯನ್ನು ಹೇಗೆ ಫೋಲ್ಡ್ ಮಾಡಬೇಕು ಎಂಬುದಾಗಿಯೂ ಅವರು ತೋರಿಸಿಕೊಡುತ್ತಿದ್ದರು, ಅಲ್ಲದೆ, ನಾವೂ ಅದನ್ನು ಹಾಗೇಯೇ ಪುನರಾವರ್ತನೆ ಮಾಡಬೇಕಿತ್ತು. ನನಗೆ ತಿಳಿದಂತೆ ಇವರಿಗೆ ಡ್ರಾಯಿಂಗ್ನಲ್ಲೂ ಪರಿಶ್ರಮ ಇತ್ತು. ಹಾಗೆ ತನ್ನೆಲ್ಲ ಪ್ರತಿಭೆಯನ್ನೂ ಬಳಸಿ ಇವರು ಪಾಠ ಮಾಡುತ್ತಿದ್ದರು. ಇವರು ಪೋಯಂ ಕಲಿಸುವ ರೀತಿಯೇ ಚೆಂದ, ಈಗಲೂ ಅವರ ಕೆಲವು ಪಾಠದ ತುಣುಕು ನನಗೆ ಇಂಗ್ಲೀಷ್ ಕಾವ್ಯ ಪರಂಪರೆಯ ಶ್ರೀಮಂತಿಕೆಯತ್ತ ಸೆಳೆಯುತ್ತವೆ. ಹೈಸ್ಕೂಲ್ನಲ್ಲಿ ನಾನು ಫುಲ್ ಕೋಸರ್್ ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡಿದ್ದೆ. ಯಾಕೆಂದರೆ ನನ್ನ ಅಣ್ಣನ ಮೂಲಕ ಬುಚ್ಚನ್ ಶಾಸ್ತ್ರಿಗಳ ಬಗ್ಗೆ ನನಗೆ ಮೊದಲೇ ಪರಿಚಯ ಆಗಿತ್ತು. ಶಾಸ್ತ್ರಿಗಳ ಬಗ್ಗೆ ಹೇಳುತ್ತ ಹೋದರೆ ಕೆಲವು ರೋಚಕ ಕತೆಗಳು ಇವೆ. "ಗ್ಯಾದರಿಂಗ್ನಲ್ಲಿ ಯಕ್ಷಗಾನ ಮಾಡಿಸಿ ನಿನ್ನಿಂದ ಕೃಷ್ಣನ ಪಾತ್ರವನ್ನು ಮಾಡಿಸಬೇಕು ಎಂದು ಆಸೆ ಇತ್ತು, ಆದರೆ ಈ ಬಾರಿ ಹೊಸ ಕಟ್ಟಡ, ಅದು ಇದು ಎಂದು ಗ್ಯಾದರಿಂಗ್ ರದ್ದಾಗಿಹೋಯಿತು ಮಾರಾಯ" ಎಂದು ನನ್ನಲ್ಲಿ ಅಲವತ್ತು ಕೊಂಡಿದ್ದನ್ನು ನೋಡಿದಾಗ, ನಾನೂ ಅವರ ಕನಸಿನ ಭಾಗವಾಗಿದ್ದೇ ಎಂಬದು ಈಗಲೂ ನನಗೆ ಹೆಮ್ಮಯ ವಿಚಾರ. ನಾನು ಕಲಿಯುವಾಗ ಕನ್ನಡ ಪಾಠಕ್ಕೆ ಇದ್ದ ಜೋಷಿ ಮೇಡಂ ಜತೆಯಲ್ಲಿ ಮಾತನಾಡುವ ಅವಕಾಶವೇ ನನಗೆ ಸಿಗಲಿಲ್ಲ, ಆದರೆ ಅವರ ರಿಸವರ್್ ಗುಣವೇ ನನಗೆ ಅವರ ಬಗ್ಗೆ ವಿಶೇಷ ಗೌರವಕ್ಕೆ ಕಾರಣವಾಗಿತ್ತು. ಹಾಗೆಯೇ ಜೋಕ್ ಮಾಡುತ್ತ "ಹುಬ್ಬಳ್ಳಿ ಮುದುಕ ಕ್ಯಾಂಪಿಗೆ ಬಂದ.." ಹಾಡನ್ನು ಹೇಳಿಕೊಟ್ಟ ಪಿ.ಇ. ಮಾಸ್ಟರ್ ಪಿ.ಎಂ. ಹೆಗಡೆ, ಕೆರೆ ಕೊಪ್ಪಲಿನಲ್ಲಿ ನಮ್ಮಿಂದ ಇಷ್ಟಿಷ್ಟು ದೊಡ್ಡ ಗಾತ್ರದ ನೌಲ್ಕೋಲ್, ಮೂಲಂಗಿಯನ್ನು ಬೆಳೆಸುತ್ತಿದ್ದ ರೀತಿ ಕೆಲವು ಬಾರಿ ತರಕಾರಿ ಮಾರುಕಟ್ಟೆಗೆ ಹೋದಾಗ ಈಗಲೂ ನೆನಪಿಗೆ ಬರುತ್ತದೆ.
ಪ್ರತಿಯೊಬ್ಬ ವಿದ್ಯಾಥರ್ಿಗೂ ಅವರ ಬ್ಯಾಚಿನ ವಿದ್ಯಾಥರ್ಿಗಳ ಬಗ್ಗೆ ವಿಶೇಷ ಅಭಿಮಾನ ಇರುವಂತೆ ನನಗೂ ಇರಬೇಕಾದದ್ದೇ. ಇದೀಗ ಸಿದ್ದಾಪುರದಲ್ಲಿ ವೈದ್ಯನಾಗಿರುವ ವಿ.ಟಿ.ನಾಯ್ಕ್ ನಾಲ್ಕಾರು ಕಿಲೋಮೀಟರ್ ನಡೆದು ಬಂದು ಕಷ್ಟದಲ್ಲಿ ಶಿಕ್ಷಣ ಮುಗಿಸಿದ ಅತ್ಯಂತ ಪ್ರತಿಭಾವಂತ. ಇನ್ನೊಬ್ಬ ಬಹುಮುಖಿ ಆಸಕ್ತಿಯ ಹೆಮಗಾರಿನ ಕೇಶವ ಹೆಗಡೆ ಅಲ್ಪಾಯುವಾಗಿ ನಮ್ಮನ್ನು ಮೊದಲೇ ಬಿಟ್ಟು ಹೋಗಿಬಿಟ್ಟ. ಗ್ಯಾಪ್ ಸಿಕ್ಕಾಗಲೆಲ್ಲ ಕ್ಲಾಸಿನಿಂದ ಆಚೆ ಬಂದು ಯಕ್ಷಗಾನ ಕುಣಿಯುತ್ತಿದ್ದ ಕಲಗದ್ದೆ ವಿನಾಯಕ, ಕಟ್ಟಾಳು ಕಾನಳ್ಳಿಯ ಕೆ.ಡಿ.ನಾಯ್ಕ್, ಕ್ಯಾದಗಿಯ ರಾಜೇಂದ್ರ ಶಿವರಾಮ ಭಟ್ ನನ್ನ ಸ್ನೇಹಿತರಲ್ಲಿ ಕೆಲವರು ಈಗಲೂ ಸಿಗುತ್ತಾರೆ. ನಮ್ಮ ಕ್ಲಾಸಿನಲ್ಲಿ ಉತ್ತಮ/ಪ್ರತಿಭಾವಂತ ಹುಡುಗಿಯರೂ ಇದ್ದು, ಅವರೊಂದಿಗೆ ಹೆಚ್ಚು ಬೆರೆಯಲು ನಾನು ಮುಜುಗರಪಟ್ಟುಕೊಳ್ಳುತ್ತಿದ್ದೆ. ಅವರೆಲ್ಲ ಎಲ್ಲೆಲ್ಲಿ ಇದ್ದಾರೊ ಎಂಬ ಬಗ್ಗೆ ಆಗೀಗ ಕುತೂಹಲ ಉಂಟಾಗುತ್ತದೆ.
ಶಿಕ್ಷಕೇತರರಲ್ಲಿ ಗಂಟೆ ಬಾರಿಸುತ್ತಿದ್ದ ಪ್ರೀತಿಯ ಅಂಟಣ್ಣ(ವೆಂಕಟ್ರಮಣ ಬಂಢಾರಿ) ನಮಗೆಲ್ಲರಿಗೂ ಖುಷಿ ಕೊಟ್ಟ ವ್ಯಕ್ತಿ. ಇದೀಗ ಸುವರ್ಣ ಮಹೋತ್ಸವ ಸಮಿತಿಯ ಕಾಯರ್ಾಧ್ಯಕ್ಷರಾಗಿರುವ ಶ್ರೀ ವಿ.ಎಸ್.ಹೆಗಡೆ ಮೊದಲಿನಿಂದಲೂ ಅತ್ಯಂತ ಶಿಸ್ತಾದ ಲೆಕ್ಕ ನಿರ್ವಹಣೆಗೆ ಹೆಸರಾದ ವ್ಯಕ್ತಿ ಎಂದು ಕೇಳಿದ್ದೇನೆ. ಆಗೀಗ ನಾನು ನೋಡಿದಾಗಲೆಲ್ಲ ಕಡತದಲ್ಲಿ ಮಗ್ನರಾಗಿ ಏನೋ ಬರೆಯುತ್ತಲೇ ಇರುತ್ತಿದ್ದರು. ತೀರಾ ಲೆಕ್ಕದಷ್ಟೇ ಮಾತಿನ ಇವರು, ಊರವರು ಎಂದು ನನ್ನಲ್ಲಿ ಹೆಚ್ಚಾಗಿ ಮಾತಾಡಿದ್ದು ನೆನಪಿಲ್ಲ. ಆದರೆ ನಾನು ಎಸ್ಎಸ್ಎಲ್ಸಿ ರಿಸಲ್ಟ್ ಕೇಳಲು ಹೋದಾಗ ನನ್ನನ್ನು ಮೊಟ್ಟ ಮೊದಲಿಗೆ ಅಭಿನಂದಿಸಿ ನನ್ನ ಸಾಧನೆಯ ಬಗ್ಗೆ ಬೆನ್ನುತಟ್ಟಿ " ನೀನು ಮುಂದೆ ಒಳ್ಳೆ ಓದವು, ಅಪ್ಪನ ಹತ್ರ ನಾನೇ ಹೇಳ್ತಿ" ಎಂದು ಹುರಿದುಂಬಿಸಿದರು. ವಿಶೇಷ ಎಂದರೆ ಅಲ್ಲಿಯ ತನಕವೂ ನಾನು ಮುಂದೆ ಓದುವ ಪ್ರಸ್ತಾಪ ನನಗಾಗಲಿ, ನನ್ನ ಮನೆಯವರ ಮುಂದಾಗಲಿ ಇರಲೇ ಇಲ್ಲ.
***



(ಶ್ರೀಯುತ ಎನ್.ವಿ.ಹೆಗಡೆಯವರಿಗೆ ನಮಸ್ಕಾರ.
ಡೆಡ್ ಲೈನ್ಗೆ ಎರಡು ದಿನ ತಡವಾಗಿ ಬರೆಹವನ್ನು ಕಳುಹಿಸಿಕೊಡುತ್ತಿದ್ದೇನೆ. ಸ್ವಚ್ಛಂದ ಮನಸ್ಸಿನಿಂದ ನಾನು ಬರೆದ ಲೇಖನ ಇದಾಗಿದ್ದು, ಎಲ್ಲಿಯೂ ಯಾರಿಗೂ ನೋವು ಉಂಟುಮಾಡಿಲ್ಲ ಎಂದುಕೊಂಡಿದ್ದೇನೆ. ಒಮ್ಮೆ ನೀವು ಓದಿ, ಯಾರಿಗಾದರೂ ನೋವಾಗುವುದೆಂದು ಕಂಡರೆ ದಯವಿಟ್ಟು ತಿಳಿಸಿ. ಇತೀ ನಿಮ್ಮ ಪ್ರೀತಿಯ ವಿದ್ಯಾಥರ್ಿ.

-ಸದಾನಂದ ಹೆಗಡೆ, ಮಂಗಳೂರು
9343402497)

 

Related Posts
Previous
« Prev Post