Art thief 13

Art thief 13
ಆ ತಿಂಗಳು ಕದ್ದು ತಂದಿದ್ದರಲ್ಲಿ ಕ್ರೆಂಚ್ ಕಲಾಕೃತಿ ಐದನೆಯದಾಗಿತ್ತುಘಿ. ಪ್ರತಿಬಾರಿ ಕಲಾಕೃತಿ ಕದ್ದು ಮೆತ್ತಿನ ಗೋಡೆಯ ಗ್ಯಾಲರಿಯಲ್ಲಿ ಇಡುವಾಗಲೂ, ಆತನಿಗೆ, ಅದಕ್ಕೊಂದು ಫ್ರೇಮ್ ಇಲ್ಲದಿರುವುದು ದೊಡ್ಡ ಕೊರತೆಯಾಘಿ ಎದ್ದು ಕಾಣುತ್ತಿತ್ತುಘಿ. ಸದ್ದಿಲ್ಲದೆ ಕದ್ದು ತರಲು ಆತ, ಕಲಾಕೃತಿಯ ಫ್ರೇಮ್‌ಗಳನ್ನು ಅದೇ ಜಾಗದಲ್ಲಿ ಬಿಟ್ಟು ಬರುವುದು ಆತನ ರೂಢಿಯಾಗಿತ್ತುಘಿ. ಆದರೆ ತೂಗಿ ಹಾಕುವಾಗ ಅದು ಅಪೂರ್ಣ ಅನ್ನಿಸುತ್ತಿತ್ತು. ಕಲಾರಾಧಕರಿಗೆ ಫ್ರೇಮ್ ಇಲ್ಲದ ಕಲಾಕೃತಿ ಯಾವತ್ತೂ ಬಣ ಬಣ ಎಂದೇ ಅನ್ನಿಸುತ್ತದೆ. ಎಲ್ಲಾದರೂ ಒಂದು ಫ್ರೇಮ್ ಹಾಕಿಸುವ ಅಂಗಡಿ ಇರಬಹುದೇ ಎಂಬ ತಲಾಶಯಲ್ಲಿದ್ದ ಬ್ರಿಟ್‌ವೈಸರ್, ಅದಕ್ಕಾಗಿ ಮನೆಯಿಂದ ಒಂದಷ್ಟು ದೂರ ಕಾರು ಚಲಾಯಿಸಿಕೊಂಡು ಹುಡುಕಿದ. ಮುಲ್ಹೌಸ್‌ನ ಬೀದಿಯನ್ನು ಸುತ್ತಾಡುತ್ತಿದ್ದಾಗ, ಮೂಲೆಯಲ್ಲೊಂದು ಅಂಗಡಿ ಕಾಣುತ್ತದೆ. ಅಷ್ಟೇನೂ, ಜೋರಾದ ವ್ಯವಹಾರ ಇಲ್ಲದ ಫ್ರೇಮ್ ಹಾಕಿಸುವ ಅಂಗಡಿ ಅದು. ಎಷ್ಟೋ ಕಾಲದಿಂದ ತಂದು ಪೇರಿಸಲಾಗಿದ್ದ ಒಂದಿಷ್ಟು ಪೇಂಟಿಂಗ್ ಹಿಂದು ಮುಂದಾಗಿ, ತಲೆಕೆಳಗಾಗಿ ಬಿದ್ದಿವೆ. ಒಂದಿಷ್ಟು ಫ್ರೇಮ್‌ಗಳನ್ನು, ರಿಪೇರಿ ಹತಿಯಾರಗಳನ್ನು ಅಲ್ಲಿಯೇ ಇಟ್ಟುಕೊಂಡಿದ್ದ. ಕಾರ್ಮಿಕ , ಮಾಲೀಕ ಎಲ್ಲವೂ ಆಗಿದ್ದ ಹಳಬ- ಬಾಚದೆ ಸಿಂಬೆಸುತ್ತಿದ ಕಪ್ಪು ಕೂದಲಿನ ವ್ಯಕ್ತಿಯನ್ನು ನೋಡಿ ಬ್ರಿಟ್ ವೈಸರ್ ಒಳಕ್ಕೆ ಹೋದ. ಕತ್ತೆತ್ತಿ ನೋಡಿದ ಕ್ರಿಸ್ಟೇನ್ ಮೈಖೆಲರ್ ಕೂಡ ಬನ್ನಿ ಒಳಗೆ ಎಂದು ಕರೆದುಕೊಂಡ. ‘ನಾನು ಬ್ರಿಟ್‌ವೈಸರ್’’ ಎಂದು ಉತ್ಸುಕನಾಗಿಯೇ ತನ್ನನ್ನು ಪರಿಚಯಿಸಿಕೊಂಡ. ಕುಟುಂಬದ ಹೆಸರು ಕೇಳುತ್ತಲೇ ಫ್ರೇಮ್ ವೃತ್ತಿಪರ ಮೈಖೆಲ್, ಈ ಹಿಂದೆ ರಾಬರ್ಟ್ ಬ್ರಿಟ್ವೈಸರ್ ಅವರ ಕೆಲವು ಪೇಂಟಿಂಗ್ ಗಳಿಗೆ ತಾನು ಫ್ರೇಮ್ ಕಟ್ಟಿಕೊಟ್ಟ ಹಳೆಯ ಕತೆಯನ್ನು ಬಿಚ್ಚುತ್ತಲೇ ಇಬ್ಬರ ನಡುವೆ ಆತ್ಮೀಯತೆ ಮೀಟಿತು. ಸಾಮಾನ್ಯವಾಗಿ ಬ್ರಿಟ್ ವೈಸರ್ ಸ್ನೇಹಭಾವದ ವ್ಯಕ್ತಿಯಲ್ಲ, ಅವನಿಗೆ ಸ್ನೇಹಿತರೇ ಇಲ್ಲವೆಂದರೂ ಸರಿ, ಆದರೆ ಮೈಖೆಲರ್ ಮಾತ್ರ ತದ್ವಿರುದ್ಧ. ಬ್ರಿಟ್‌ವೈಸರ್ ಗಿಂತ ಫೋಟೊಫ್ರೇಮರ್ ಆರು ವರ್ಷ ಹಿರಿಯನಾದರೂ, ಕಲಾಕೃತಿ ವಿಚಾರದಲ್ಲಿ ಮಾತ್ರ ಇಬ್ಬರೂ ವ್ಯಸನಿಗಳೇ ಆಗಿದ್ದರು. ಚಿತ್ರಗಳೆಂದರೆ, ನೆನಪಿನ ತಿಜೂರಿಯ ಕೀಲಿಗಳಿದ್ದಂತೆ, ಏನೆಲ್ಲ ರಮ್ಯ ಪ್ರಪಂಚವನ್ನು ಅನಾವರಣ ಮಾಡುತ್ತವೆ ಎನ್ನುವ ಆತ ಅಂದು ತಂದಿದ್ದು ಅದ್ಭುತ ಕಲಾಕೃತಿ ಆಗಿತ್ತು ಎಂದು ಪ್ರಕರಣ ವಿಚಾರಣೆಗೆ ಬರುವ ಅಕಾರಿಗಳೊಂದಿಗೆ ಹೇಳಿ ಸಹಕರಿಸುವುದಕ್ಕೂ ಒಪ್ಪಿದ್ದ ಹಾಗೆ ನೋಡಿದರೆ ಮೈಖೆಲರ್ ಕಳ್ಳನ ಒಳತೋಟಿಯ ಸಂಪರ್ಕ ಹೊಂದಿರುವ ಇನ್ನೊಬ್ಬ ವ್ಯಕ್ತಿ ಅನ್ನಬಹುದು. ಸೀಮಿತ ಬದುಕು ಕಟ್ಟಿಕೊಂಡ ಸ್ನೇಹಿತೆ ಅನ್ನೆ ಕ್ಯಾಥರೀನ್, ಮಗನ ಇನ್ನೊಂದು ಮುಖದ ಅರಿವಿಲ್ಲದ ತಾಯಿ, ಆತನ ಅಮ್ಮಜ್ಜನನ್ನು ಬಿಟ್ಟರೆ ಬ್ರಿಟ್ ವೈಸರ್ ಕುರಿತು ಹೊರ ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಆತ ಸಂವೇದನಾಶೀಲ ವ್ಯಕ್ತಿ ಮಾತ್ರವಲ್ಲದೆ ಕಲಾಕೃತಿಗಳ ನಿಜ ಅರ್ಥದ ಸಂಗ್ರಾಹಕನಾಗಿ ಆತನಿಗೆ ತನ್ನ ಉದ್ದೇಶ ಸ್ಪಷ್ಟವಾಗಿ ಇತ್ತು ಎಂದು ವಿಚಾರಣೆಗೆ ಬಂದವರಿಗೆ ಮೈಖೆಲರ್ ಹೇಳಿದ್ದಾನೆ. ಈ ವಿಚಾರದಲ್ಲಿ ಮನೋವೈದ್ಯ ಸ್ಕ್ಮಿಡ್ತ್ ಅಭಿಪ್ರಾಯ ಕೂಡ ಹೀಗೆಯೇ ಇತ್ತು. ವರದಿಯ ಉದ್ದಕ್ಕೂ ಬ್ರಿಟ್‌ವೈರ್ಸ ನನ್ನು ದುರುಗುಟ್ಟಿಯೇ ನೋಡುವ ಈ ಮನಶ್ಶಾಸಜ್ಞ, ಆತನ ಕಲಾಭಿರುಚಿ ವಿಚಾರದಲ್ಲಿ ಎರಡು ಮಾತಿಲ್ಲ ಅಂದಿದ್ದಾನೆ. ಸುಂದರ ವಸ್ತುಗಳನ್ನು, ಪರಿಪೂರ್ಣವಾಗಿ ಗೃಹಿಸಿ ಆನಂದಿಸಬಲ್ಲ ಅಭಿರುಚಿ ಆತನದ್ದು ಎಂದಿದ್ದಾನೆ. ೨೦೦೪ ರಲ್ಲಿ ಬ್ರಟ್ ವೈಸರ್ ವಿಚಾರಣೆಗೆ ನ್ಯಾಯಾಲಯದಿಂದ ನಿಯುಕ್ತರಾದರು ಫ್ರೆಂಚ್ ಮನಶ್ಶಾಸ್ತ್ರಜ್ಞ ಲೂಸಿನ್ನೇ ಸ್ನೇಡರ್ ‘‘ ಆತ್ಮರತಿ, ಖಯಾಲಿಯ ಬ್ರಿಟ್ ವೈಸರ್ ಕಲಾಕೃತಿ ಬಗ್ಗೆ ಸಂವೇದನೆ ಇದ್ದರೂ, ಅದನ್ನು ತನ್ನದಾಗಿಸಿಕೊಳ್ಳಬೇಕೆಂಬ ಹತಾಶೆಯನ್ನು ನಿಯಂತ್ರಣ ಮಾಡುವಲ್ಲಿ ವಿಫಲನಾಗುವ ವ್ಯಕ್ತಿ’’ ಎಂದು ವರದಿ ನೀಡಿದ್ದಾನೆ. ವಿಶೇಷವಾಗಿ ಆತನಿಗ ಬೇಕಾದ ವಸ್ತು ಕೈಗೆಟುಕುವಂತೆ ಇದ್ದರೆ ಮನಸ್ಸಿನ ಸ್ವಾಯ ಕಳೆದುಹೋಗುತ್ತಿತ್ತು. ಇದರ ಮೂಲ ಕಾರಣವು ಆತನ ತಂದೆ-ತಾಯಿಯ ವಿವಾಹ ವಿಚ್ಚೇದನ. ಆ ಹೊತ್ತಿನಲ್ಲಿ ಆತ ಹೀಗಾಗಿದ್ದು ಎಂದು ನ್ಯಾಯಾಲಯಕ್ಕೆ ವರದಿ ನೀಡಿದ್ದಾನೆ. ಇಕ್ಕಟ್ಟಿನ ಕಾಲದಲ್ಲಿ ನೋವನ್ನು ಮರೆಯಲು ಕಲೆಯಲ್ಲಿ ಮಾನಸಿಕ ಶಾಂತಿ ಅರಸಿದ. ಪರಿಣಾಮ ಹೀಗಾಗಿಹೋದ ಎಂದ. ತನ್ನ ಕುರಿತಾದ ಈ ಬಣ್ಣನೆಯನ್ನು ಸ್ವತಃ ಬ್ರಿಟ್‌ವೈಸರ್ ಕೂಡ ತಲೆದೂಗಿದ್ದಾನೆ. ಬಿಟ್ಟರೆ, ಬಹುತೇಕ ಮನಶ್ಶಾಸ್ತ್ರ ಜ್ಞರನ್ನು ಆತ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಫೋಟೊ ಫ್ರೇಮರ್ ಮೈಖೇಲರ್ ಮೆಚ್ಚುವ ಚಿತ್ರಗಳು, ಚಿತ್ರಣ ಶೈಲಿಯು ಬ್ರಿಟ್‌ವೈರ್ಸ ಅಭಿರುಚಿಯ ಹತ್ತಿರವಾಗಿತ್ತು. ಯೂರೋಪ್ ಚಿತ್ರಕಲಾ ಪರಂಪರೆಯಲ್ಲಿ ರಿನೇಸಾನ್ಸ್ ಮುಗಿದು ಬೆರೋಕ್ ಶೈಲಿಯ ಆರಂಭ. ಆಗ ಕನಸನ್ನು ಸೋಸಿ, ಕಾವ್ಯದ ಮೂಸೆಯಲ್ಲಿ ಅಭಿವ್ಯಕ್ತಿ ಯಾಗಿ ರಚನೆಗೊಂಡ ಚಿತ್ರಗಳು ಫ್ರೇಮರ್ ಮೈಖೆಲರ್‌ನ ಆಯ್ಕೆಯಾಗಿದ್ದವು. ಬ್ರಿಟ್‌ವೈರ್ಸ ಜತೆಗಿನ ಆರಂಭಿಕ ಸಂವಹನದಲ್ಲಿ ಆತ ಹೆಚ್ಚೇನೂ ಆಸಕ್ತಿಯಿಂದ ಇದನ್ನೆಲ್ಲ ಹೇಳುತ್ತಿರಲಿಲ್ಲ. ಆತ ಯಾವತ್ತೂ ಒಳಮುಚ್ಚುಗ ತಣ್ಣನೆಯ ವ್ಯಕ್ತಿ. ಒಮ್ಮೆ ಆತ್ಮೀಯನಾಗಿ ಮಾತಾಡಲು ಶುರು ಮಾಡಿದರೆ, ವರತೆಯ ಕಟ್ಟೆ ಒಡೆದ ಪ್ರವಾಹದಂತೆ. ಹಾಗೆಯೇ ಚಿತ್ರವೊಂದರ ಮಾರುಕಟ್ಟೆ ಬೆಲೆಯನ್ನು ಮೀರಿ ಅದರ ಸೌಂದರ್ಯವನ್ನು ಮೆಚ್ಚುವ ಜತೆಗೆ, ಆತನ ವಯಸ್ಸಿಗೆ ಆಘಾದ ಪರಿಶ್ರಮ ಹಾಗೂ ಗಂಭೀರ ಕಲಾಭಿಜ್ಞ ಎಂದು ಹೇಳಿದ್ದಾನೆ. ಆರಂಭಿಕ ದಿನದಲ್ಲಿ ಬ್ರಿಟ್‌ವೈಸರ್ ಕೆಲವು ಸುಳ್ಳನ್ನು ಹೇಳಿದ್ದ. ಕಲಾವಿದ ರಾಬರ್ಟ್ ಬ್ರಿಟ್‌ವೈಸರ್ ಈತನಿಗೆ ದೂರದ ಸಂಬಂ ಆಗಿದ್ದರೂ, ತಾನು ಆತನ ಖಾಸಾ ಮೊಮ್ಮಗ ಎಂದು ಬಿಟ್ಟಿದ್ದಘಿ. ಎರಡನೆಯದಾಗಿ ತನ್ನಲ್ಲಿರುವ ಕಲಾಕೃತಿಗಳ ಮೂಲದ ವಿಚಾರ. ತನ್ನ ಸಂಗ್ರಹಗಳೆಲ್ಲವನ್ನೂ ತಾನು ಹರಾಜಿನಲ್ಲಿ ಖರೀದಿ ವಮಾಡಿದ್ದೆಂದು ಆತ ಕೊಚ್ಚಿಕೊಂಡಿದ್ದ. ಇಷ್ಟನ್ನು ಬಿಟ್ಟರೆ, ಉಳಿದೆಲ್ಲ ಸಾಚಾ, ಅತ್ಯಂತ ಖಾಸಾ. ಆತನ ಮನದನ್ನೆ ಅನ್ನೆ ಕ್ಯಾಥರೀನ್ ರೀತಿಯಲ್ಲಿ ಇಟ್ಟುಕೊಂಡಿದ್ದ ಸ್ನೇಹ ಸಂಬಂಧ ತನ್ನಲ್ಲಿಯೂ ಇತ್ತೆಂದು ಫ್ರೇಮರ್ ಮೈಖೇಲರ್ ಹೇಳಿದ್ದಾನೆ. ಸಾಮಾನ್ಯವಾಗಿ ಕಲಾಕೃತಿ ಫ್ರೇಮರ್‌ಗಳು, ಗ್ರಾಹಕರು ಹಾಗೂ ಕಲಾಕೃತಿ ಮೂಲದ ಬಗ್ಗೆ ಹೆಚ್ಚಿನ ಬೇಹುಗಾರಿಕೆ ಮಾಡುವುದಿಲ್ಲ. ಆ ಭಾಗದ ಪ್ರಸಿದ್ದ ಮನೆತನದ ಬೆಲೆಬಾಳುವ ಕಲಾಕೃತಿಯ ಫ್ರೇಮ್ ಮತ್ತಿತರ ಕೆಲಸದಲ್ಲಿ ವೃತ್ತಿಪರನಾಗಿ, ಖಾಸಗಿ ವಿಚಾರಗಳನ್ನು ಹೆಚ್ಚು ಕೆದಕುವುದು ತರವಾಗಿಯೂ ಇರಲಿಲ್ಲ. ತನ್ನಷ್ಟಕ್ಕೆ ತನ್ನ ಕೆಲಸ ಎಂಬಂತೆ ಇರುವುದು ರೂಢಿ. ಬ್ರಿಟ್‌ವೈಸರ್ ಹೆಸರು ಕೇಳಿದರೆ, ಆ ಭಾಗದಲ್ಲಿ ಹಣವಂತ ಸಮುದಾಯ ಎಂದು ಮೇಲ್ನೋಟದ ಗೃಹಿಕೆ ಕೂಡ ಆಗುತ್ತಿತ್ತು. ಅಲ್ಲಿ ಕೆಲವು ಚಿತ್ರಗಳಿಗೆ ಹಾಕಿಸುವ ಸಾವಿರಾರು ಡಾಲರ್ ಬೆಲೆಯ ಫ್ರೇಮ್‌ಗಳು, ಬ್ರಿಟ್ ವೈಸರ್ ಹಾಗೂ ಅನ್ನೆಯ ಸಣ್ಣ ಆದಾಯಕ್ಕೆ ಹೋಲಿಸಿದರೆ, ಹೊರೆಯಾಗಿಯೇ ಇರುತ್ತಿತ್ತು. ಕೆಲವೊಮ್ಮೆ ಅಂಗಡಿಗೆ ಆತನೊಂದಿಗೆ ಬರುತ್ತಿದ್ದ ಅನ್ನೆ ಕ್ಯಾಥರೀನ್ ಫ್ರೇಮಿನ ಬೆಲೆಯೇ ಹೊರೆಯಾಗುತ್ತಿದೆ ಎಂದು ಮುಖ ಕಿವುಚುತ್ತಿದ್ದ ಕಾರಣ ಆಕೆಯ ಒಪ್ಪಿಗೆಯ ನಂತರವೇ ಚಿತ್ರದ ಫ್ರೇಮ್ ಆಯ್ಕೆಯನ್ನು ಅಂತಿಮವಾಗಿ ನಿರ್ಧಾರ ಮಾಡಲಾಗುತ್ತಿತ್ತು. ಹೀಗೆಯೇ ಕೆಲವು ಕಾಲದಿಂದ ನಡೆಯುತ್ತ ಬಂತು. ಅನ್ನೆ ಕ್ಯಾಥರೀನ್ ಮತ್ತು ಬ್ರಿಟ್ ವೈಸರ್ ಜತೆಯಾಗಿ ಕೈಗೊಂಡ ಕಾಲಕ್ಕೆ ಮೊದಲಾಗಿ ಕದ್ದು ತಂದಿದ್ದ ಹಿರಿಯ ಮಹಿಳೆಯ ಪೇಂಟಿಂಗ್ ಗೆ ಇದೇ ಮೈಖೇಲರ್ ಫ್ರೇಮ್ ಹಾಕಿದ್ದಾಗಿತ್ತು. ಅದರ ಕೆಲಸ ಇಬ್ಬರಿಗೂ ಒಪ್ಪಿಗೆಯಾದ ಕಾರಣ, ಮುಂದೆ ಹಾಗೆಯೇ ನಡೆದು ಬಂತು. ಎರಡನೆಯದಾಗಿ ಇತಿಹಾಸ ಪ್ರಸಿದ್ಧ ಸೇಂಟ್ ಜರೂಮ್ ಕಲಾಕೃತಿ. ಅದಕ್ಕೆ ಕಪ್ಪು ಮತ್ತು ಬಂಗಾರ ಬಣ್ಣದ ದಡಿಯ ಫ್ರೇಮ್ ಹಾಕಿಸಿ ಅಂಗಡಿಯಲ್ಲಿ ಇಟ್ಟಾಗ, ರಸ್ತೆಯಲ್ಕಿ ದಾಟಿ ಹೋಗುವವರೆಲ್ಲ ಆ ಚಿತ್ರವನ್ನು ಇಣುಕಿ ಹೋಗುತ್ತಿದ್ದರು. ಬ್ರಿಟ್ ವೈಸರ್ ಅದನ್ನು ಮನೆಗೆ ಒಯ್ಯುವ ಮೊದಲು ಮೂರು ದಿನ ಹೀಗೆ ಓಡಾಡುವವರ ಕಣ್ಣು ಕೋರೈಸುತ್ತಿತ್ತು. ಈ ಬಗೆಯ ಪ್ರದರ್ಶನವೇ ಕೆಲವೊಮ್ಮೆ ಸಮಸ್ಯೆ ಯ ಮೂಲವಾಗಿರುತ್ತದೆ. ಇಲ್ಲಿಯೂ ಹಾಗೆಯೇ ಆಯಿತು. ಇಂಥಹ ಪ್ರದರ್ಶನಕ್ಕೆ ಸ್ನೇಹದ ಕಾರಣ ಅವಕಾಶ ನೀಡಿದ ಬ್ರಿಟ್ ವೈಸರ್ಗೆ ಮುಂದೆ ದುಬಾರಿ ಬೆಲೆ ತೆರಬೇಕಾಯಿತು. ಹಾಗೆ ಜನರಿಗೆಲ್ಲ ಕಾಣುವಂತೆ ಸೇಂಟ್ ಜರೂಮ್ ಕಲಾಕೃತಿ ಇಟ್ಟಿದ್ದರ ಬಗ್ಗೆ, ಒಮ್ಮೆ ಬ್ರಿಟ್ ವೈರ್ಸ ಗೆ ತಣ್ಣಗೆ ಭಯ ಹುಟ್ಟಿತು. ಆದರೂ, ಅಷ್ಟರಲ್ಲಿ ಮೈಖೆರ್ಲ ಆತ್ಮೀಯ ನಾಗಿದ್ದರಿಂದ ಹೆಚ್ಚಾಗಿ ಏನನ್ನೂ ಮಾತಾಡಲಿಲ್ಲ. ಆ ಹೊತ್ತಿಗಾಗಲೇ, ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಫ್ರೇಮ್ ಅಂಗಡಿಯಲ್ಲಿ ಕುಳಿತು ಹರಟಿ ಬರುತ್ತಿದ್ದ ಕಾರಣ, ಮೈಖೆರ್ಲ ಜತೆಗೆ ತರಬೇತಿ ಕಾರ್ಯಕರ್ತನ ಮನಸ್ಥಿತಿಗೆ ಬ್ರಿಟ್ ವೈಸರ್ ತಲುಪಿದ್ದ. ಪೇಂಟಿಂಗ್ ಫ್ರೇಮುಗಳಿಗೆ ಎಲ್ಲೆಲ್ಲಿ ಮೊಳೆ ಹೊಡೆಯುತ್ತಾರೆ, ಅದನ್ನು ವೃತ್ತಿ ಪರ ಫ್ರೇಮರ್ ಹೇಗೆ ಸುಲಭವಾಗಿ ವೇಗವಾಗಿ ಬಿಚ್ಚುತ್ತಾನೆ ಎಂಬುದು ತಿಳಿದಿತ್ತು, ಕಳ್ಳನಿಗೆ ಇದೆಲ್ಲ ಒಂದು ರೀತಿಯಲ್ಲಿ ಕಸುಬಿಗೆ ಪೂರಕ ತರಬೇತಿಯೂ ಆಗುತ್ತಿತ್ತು. ಸೇಂಟ್ ಜರೂಮ್ ಕಲಾಕೃತಿ ಬೀದಿಯವ ಕಣ್ಣಿಗೆ ಬೀಳುವಂತಾಗುತ್ತಲೇ, ಬ್ರಿಟ್‌ವೈಸರ್ ಒಂದಿಷ್ಟು ಎಚ್ಚರಿಕೆಯಿಂದ ವರ್ತಿಸಬೇಕಾಯಿತು. ತನ್ನ ಮೂಲ ಕಸುಬನ್ನು ಮರೆಮಾಚಲು ಮೈಖೆಲರ್ ನಿಗೆ ‘‘ಈ ಸಾಗಾಟದ ಜಂಜಡವು ಕಲಾಕೃತಿಯ ಮತ್ತಷ್ಟು ಕೆಡಿಸಿಬಿಡುತ್ತವೆ, ಅದಕ್ಕಾಗಿ ಇನ್ನು ಕಲಾಕೃತಿಗಳನ್ನು ಇಲ್ಲಿ ತಂದು ಫ್ರೇಮ್ ಹಾಕಿಸುವ ಬದಲು, ಉದ್ದ ಅಗಲ, ಗಾತ್ರವನ್ನು ವಿವರಿಸಿ ಫ್ರೇಮ್ ಗಳನ್ನು ಆಡರರ್ ಮಾಡಿ, ಸಿದ್ದವಾಗುತ್ತಲೇ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗುವುದಾಗಿ, ಅಲ್ಲಿ ತಾನೇ ಅದಕ್ಕೆ ಹೊಂದಿಸಿಕೊಳ್ಳುವುದಾಗಿವುದಾಗಿ ಹೇಳಿದೆ. ಈ ಗ್ರಾಹಕ ಇಷ್ಟೊಂದು ಎಚ್ಚರಿಕೆ ವಹಿಸುತ್ತಿರುವುದು ಹೊಸ ರೀತಿಯಾಗಿ ಮೈಖೆಲರ್‌ಗೆ ಅನ್ನಿಸಿದರೂ, ಇಲ್ಲೇನೋ ಕಳ್ಳಾಟ ನಡೆಯುತ್ತಿದೆ ಎಂದು ಆತನ ತಲೆಗೆ ಹೊಳೆಯಲೇ ಇಲ್ಲ. ಇತಿಹಾಸದ ಬಹುದೊಡ್ಡ ಕಲಾಕೃತಿ ಕಳವಿನ ಕೈ ತನ್ನ ಮುಂದೆ ಫ್ರೇಮ್ ಹಾಕಿಸಿಕೊಡಿ ಎಂದು ಹೊಳೆಯಲೇ ಇಲ್ಲ . ಅದಕ್ಕೂ ಆಚೆಗೆ ಭೂತಕಾಲದ ಭವ್ಯತೆಯನ್ನು ತನ್ನಂತೆ ಆಲೋಚಿಸುವ ಮುಗ್ಧ ಸಣಕಲನನ್ನು ನೋಡುವ ಫ್ರೇಮರ್‌ಗೆ ತನ್ನಂತೆ ಆಲೋಚಿಸುವ ಸಹೋದರನಂಥ ಇನ್ನೊಬ್ಬ ವ್ಯಕ್ತಿಯಾಗಿ ಕಂಡನು. ಇಂಥವನೊಬ್ಬ ಪರಿಚಯವಾಗಿದ್ದೇ ನಿಜಕ್ಕೂ ತನಗೊಂದು ಮಾಣಿಕ್ಯ ಸಿಕ್ಕಂತೆ ಎಂದುಕೊಳ್ಳುತ್ತಾನೆ. ಆತನೊಂದಿಗೆ ಹೊತ್ತು ಕಳೆದುದೇ ತಿಳಿಯುತ್ತಿರಲಿಲ್ಲಘಿ. ‘ ನಾವು ನಮ್ಮ ಸಂಬಂಧದಿಂದ ಪರಸ್ಪರ ಸಂಬಂಧದಿಂದ ಕಲಿಯುತ್ತಿದ್ದೆವು.’’ ಎನ್ನುತ್ತಾನೆ ಮೈಖೆಲರ್. ಕಲಾಕೃತಿಯ ಹರಾಜುಗಳು, ಅವುಗಳ ಬೆಲೆ, ಪಟ್ಟಿ ನಮಗೆ ಬೇಕಾದ ಕನಸಿನ ಕಲಾಕೃತಿಯ ಪಡೆದುಕೊಳ್ಳುವ ಸಾಧ್ಯತೆ ಕುರಿತು ಚರ್ಚೆ ಮಾಡುತ್ತಿದ್ದೆವು’’ ಎನ್ನುತ್ತಾನೆ. ‘‘ಕಲಾಕೃತಿಯು ಅನುಭಾದ ಆಹಾರ.’’ ಎಂದು ಹೇಳುವ ಫ್ರೇಮರ್ ಅದನ್ನು ಆರ್ಥಿಕ ಉದ್ದೇಶದಿಂದ ವಶಪಡಿಸಿಕೊಳ್ಳುವುದು ಎಂದರೆ ಹೊಟ್ಟೆಬಾಕರ ಲಕ್ಷಣ ಎಂದೆಲ್ಲ ನಾವು ಚರ್ಚೆ ಮಾಡುತ್ತಿದ್ದೆವು ಎಂಬ ಮೈಖೆಲರ್ ಆ ಹೊತ್ತಿಗೆ, ತಾನೊಬ್ಬ ಕಳ್ಳನೊಂದಿಗಿದ್ದೇನೆ, ಮುಂದೊಂದು ದಿನ ಈತ ಜೈಲಿನ ಕಂಬಿಯನ್ನು ಎಣಸಲಿದ್ದಾನೆ ಎಂಬುದು ಊಹೆಯನ್ನೂ ಮಾಡುವಂತಿರಲಿಲ್ಲಘಿ. ‘ ಅಷ್ಟಾದರೂ ಆತನ ಕಲಾಕೃತಿ ಪ್ರೀತಿ ಎಂಬುದು ತರ್ಕಕ್ಕೆ ನಿಲುಕುವಂಥದ್ದೇ ಅಲ್ಲಘಿ. ಟ್ರಿಸ್ಟನ್ ಮತ್ತು ಐಸೋಡೆಯರ ಗಾಯಗೊಂಡ ಪ್ರೇಮಕತೆಯಂತೆ, ಅದಕ್ಕೆ ಯಾವುದೇ ಪರ್ಯಾಯವಾಗಲಿ ಅಥವಾ ಅಂತ್ಯ ಎಂಬುದಾಗಲಿ ಸಾಧ್ಯವೇ ಇಲ್ಲಘಿ.’’ ಎಂದು ಮೈಖೇಲರ್ ಹೇಳುತ್ತಾನೆ.
Read More