ಆರ್ಟ್‌ ಥೀಫ್ ಧಾರಾವಾವಾಹಿ -7

ಆರ್ಟ್‌ ಥೀಫ್ ಧಾರಾವಾವಾಹಿ -7
ಸಜ್ಜುಬಿಲ್ಲು ಕದ್ದು ದಕ್ಕಿಸಿಕೊಂಡ ಹವಾದಲ್ಲಿದ್ದ ಬ್ರೈಟ್‌ವೈಸರ್ ಹಾಗೂ ಪ್ರೇಯಸಿ ಅನ್ನೆ ಕಾಥರೀನ್ ಇನ್ನೊಂದು ಪ್ರವಾಸಕ್ಕೆ ಸಜ್ಜಾಗಿ ಕಾರಿನಲ್ಲಿ ಜಾರು ಬಂಡಿಯೊಂದಿಗೆ ಹೊರಟರು. ಅದು ೧೯೯೫ರ ಮಾರ್ಚ್ ಮಾಸಿಕ. ಆಗಲೂ ಕೂಡ ಸಿರಿವಂತ ಅಮ್ಮಜ್ಜನ ಬೆಚ್ಚನೆಯ ಪೋಷಣೆಯಲ್ಲಿದ್ದ ಬ್ರೈಟ್ ವೈಸರ್‌ನ, ಹನಿಮೂನ್‌ಗೆ ಹಣ ಜೋಡಿಸಿಕೊಂಡಿದ್ದುಘಿ, ಅದೇ ಮೂಲದಿಂದ ಆಗಿತ್ತುಘಿ. ಕಾರಿನ ಡಿಕ್ಕಿಯಲ್ಲಿ ಜಾರು ಕೋಲುಗಳನ್ನು ತುಂಬಿಕೊಂಡು, ಪ್ರೇಮಿಗಳು ಸ್ವಿಜರ್‌ಲ್ಯಾಂಡಿನ ಗ್ರೂಯೆರಸ್ ಕಾಸೆಲ್‌ನಲ್ಲಿರುವ ೧೩ನೇ ಶತಮಾನದ ಕೋಟೆ ಮ್ಯೂಸಿಯಂಗೆ ತಲುಪಿದರು. ಗುಡ್ಡ ಬೆಟ್ಟಗಳನ್ನು ಸಲೀಸಾಗಿ ಏರಬಲ್ಲ ಇವರ ರೆಡ್‌ಗೆಲೈನ್ ಕಾರಿನ ವಿಶೇಷ ಎಂದರೆ, ಹಿಂಭಾಗದಲ್ಲಿ ಜಾರು ಕೋಲು ಮತ್ತಿತರ ಸಲಕರಣೆಗಳನ್ನು ಸಲೀಸಾಗಿ ಇಟ್ಟುಕೊಳ್ಳಬಹುದಾಗಿತ್ತುಘಿ. ಪ್ರೇಮಿಗಳು ಎಲ್ಲೂ ನಿಲ್ಲಿಸದೆ ನೇರವಾಗಿ ಕಾಸಲ್‌ಗೆ ಬಂದರು. ಏನೊಂದು ದಾಖಲೆ ಸಿಗಬಾರದೆಂದು ಕೌಂಟರ್‌ನಲ್ಲಿ ನಗದು ನೀಡಿ ಟಿಕೆಟ್ ಪಡೆದು ಮ್ಯೂಸಿಯಂ ಒಳಕ್ಕೆ ಪ್ರವೇಶಿಸುತ್ತಾರೆ. ಬ್ರೈಟ್‌ವೈಸರ್ ಜೋಡಿ ಕಳವು ಮಾಡುವುದಕ್ಕಾಗಿಯೇ ಇಲ್ಲಿ ಬಂದಿರಬಹದು ಅನ್ನಿಸುತ್ತಿದೆ ಅಲ್ಲವೆ? ಕಳ್ಳನ ಮನಸ್ಸು ಬಹುದೊಡ್ಡ ಕಳ್ಳಘಿ. ಹಾಗೆಲ್ಲ ಯಾವತ್ತೂ ಇವರು ಅಂದುಕೊಳ್ಳುವುದಿಲ್ಲಘಿ! ಮ್ಯೂಸಿಯಂ ನೋಡಿ ಹೋಗೋಣ ಎಂದುಕೊಂಡು ಬಂದಿರಂತೆ. ಹೀಗಂದುಕೊಳ್ಳುವುದೂ ಒಂದು ಮೈಂಡ್ ಗೇಮ್ ! ಅದರ ಅನುಕೂಲ ಅಂದರೆ ಲೋಕಾಭಿರಾಮವಾಗಿ ಮ್ಯೂಸಿಯಂ ಒಳಕ್ಕೆ ಬರಬಹುದು, ಸಮಾಧಾನದಿಂದ ಯೋಜನೆ ರೂಪಿಸಿ, ಅನುಕೂಲ ಅನಿಸಿದಾಗ ಕದ್ದು ಓಡಬಹದು. ಹೀಗೆಂದು ಬ್ರೈಟ್ ವೈಸರ್ ಸ್ವತಃ ಒಪ್ಪಿಕೊಳಡಿದ್ದಾನೆ. ಮ್ಯೂಸಿಯಂ ವಿಚಾರದಲ್ಲಿ ಆತನಿಗೆ ಯಾವತ್ತಿನಿಂದಲೂ ಒಂದು ರೂಢಿ. ಎಲ್ಲೇ ಆ ಕುರಿತು ಒಂದು ಬ್ರೋಶರ್ ಸಿಕ್ಕಿತೆಂದರೆ ಅದನ್ನು ಎತ್ತಿಟ್ಟುಕೊಂಡು ಒಂದಕ್ಷರವನ್ನೂ ಬಿಡದೆ ಓದಿ ಅದರ ಬಗ್ಗೆ ತಿಳಿದುಕೊಳ್ಳುತ್ತಿದ್ದಘಿ. ವಿಶೇಷವಾಗಿ ಪ್ರವಾಸೀ ಬುಕ್ಕಿಂಗ್ ಕಚೇರಿಗಳು, ಹೊಟೇಲ್ ಲಾಬಿಗಳಲ್ಲಿ ಎಲ್ಲೆಲ್ಲಿ ಸಿಗುತ್ತದೊ ಅಲ್ಲೆಲ್ಲ ಬ್ರೋಶರ್ ಸಂಗ್ರಹಿಸಿ ಒಂದೆಡೆ ಸರಿಯಾಗಿ ಇಟ್ಟುಕೊಳ್ಳುತ್ತಿದ್ದಘಿ. ಗ್ರಂಥಾಲಯಗಳ ಭೇಟಿ ಇರಬಹದು, ನಗರದ ಸುದ್ದಿ ಪತ್ರಿಕೆ ಸ್ಟ್ಯಾಂಡ್‌ಗಳು ಎಲ್ಲೇ ಸಿಕ್ಕರೂ ಚಿತ್ರಕಲಾ ಬ್ರೋಶರ್‌ಗಳನ್ನು ಒಮ್ಮೆ ಕಣ್ಣಾಡಿಸದೇ ಬಿಡುತ್ತಿರಲಿಲ್ಲಘಿ. ಫ್ರೆಂಚ್ ಭಾಷೆಯ ಪ್ರಖ್ಯಾತ ಚಿತ್ರಕಲಾ ಪತ್ರಿಕೆ ಱಲಾ ಗಾಜೆಟ್ ಡ್ರೌಟ್‌ಗೆ ಚಂದಾದಾರನಾಗಿದ್ದಘಿ. ಹಾಗೆ ನೋಡುವಾಗ ಯಾವಾಗಲೋ ಒಮ್ಮೆ ಚಿತ್ರ ಒಂದು ಆತನ ಕಣ್ಣಿಗೆ ಬಿದ್ದಿರುತ್ತದೆ. ತನೊಳಗೂ ವ್ಯಾಪಿಸಿದ ಆ ಚಿತ್ರದ ಮೇಲೆ ಬೆರಳಾಡಿಸಿ ಅದರ ಕುರಿತಾದ ಇಡೀ ಬರಹವನ್ನು ಓದುತ್ತಾನೆ. ಅಷ್ಟೇ ಅಲ್ಲಘಿ, ಆ ಚಿತ್ರವಿರುವ ಮ್ಯೂಸಿಯಂ ಯಾವುದು, ಅದರ ವಿಳಾಸ ಏನು, ಬಾಗಿಲು ತೆರೆಯುವ ದಿನ, ಸಮಯ ಎಲ್ಲವನ್ನೂ ಎರಡು ಬಾರಿ ಓದಿಕೊಂಡು ತನ್ನೊಳಗೆ ಗಟ್ಟಿ ಮಾಡಿಕೊಳ್ಳುತ್ತಿದ್ದಘಿ. ತಾನು ಚಿಕ್ಕಂದಿನಲ್ಲಿ ನೋಡಿದ ಬಹುತೇಕ ಎಲ್ಲ ಮ್ಯೂಸಿಯಂಗಳು, ಅದರಲ್ಲಿ ತನಗೆ ಖುಷಿಕೊಟ್ಟ ನಿರ್ದಿಷ್ಟ ಚಿತ್ರಗಳ ಬಗ್ಗೆ ಆತನಿಗೆ ಸಣ್ಣ ವಿವರವೂ ನೆನಪಿನಲ್ಲಿ ಇರುತ್ತಿತ್ತುಘಿ. ಆತ ಹೊಂಚು ಹಾಕಿದ್ದ ಕಲಾಕೃತಿ ಪಟ್ಟಿಯಲ್ಲಿ ಅವು ಇರುತ್ತಿದ್ದವು. ಅವಕಾಶ ಇದ್ದಾಗ, ಇಬ್ಬರಿಗೂ ಸಮಯ ಹೊಂದಿದಾಗ ಬ್ರೈಟ್‌ವೈಸರ್ ಹಾಗೂ ಅನ್ನೆ ಕ್ಯಾಥರೀನ್ ಅವುಗಳ ಶಿಕಾರಿಗೆ ಪ್ರವಾಸ ರೂಪಿಸುತ್ತಿದ್ದರು. ವಿಶೇಷವಾಗಿ ಒಂದು ವಾರ ಕಾಲ ತನ್ನ ಆಸ್ಪತ್ರೆ ಡ್ಯೂಟಿಗೆ ರಜೆ ಹಾಕಬಹುದಾದ ಸಮಯ ನೋಡಿ ಹೇಳಿದರೆ, ಬ್ರೈಟ್‌ವೈಸರ್ ಮ್ಯೂಸಿಯಂ ಹೋಗುವ ಮಾರ್ಗ, ಸಮಯ ನಿಗದಿ ಮಾಡಿ, ರಸ್ತೆ ಮಾರ್ಗದಲ್ಲಿ ಹೋಗಿ ಬರುವಾಗ ತಪ್ಪಿಸಿಕೊಳ್ಳುವ ಅವಕಾಶ ಎಲ್ಲದರ ಬಗ್ಗೆಯೂ ಒಂದು ಅಂದಾಜು ಸಿದ್ದಮಾಡುವನು. ಯಾವತ್ತೂ ಇವರ ಯೋಜನೆ ಕರಾರುವಾಕ್ಕಾಗಿಯೇ ಇರುತ್ತಿತ್ತುಘಿ. ಕಾರ್ಯಾಚರಣೆ ಶುರುವಾಗುತ್ತಲೇ ಮಾರ್ಗದ ಸವಾಲುಗಳು, ಪ್ರವಾಸಿಗಳ ದಟ್ಟಣೆ, ಮ್ಯೂಸಿಯಂಗಳ ಭದ್ರತಾ ವ್ಯವಸ್ಥೆ ಕೆಲವೊಮ್ಮೆ ಆಯಾ ಸಂದರ್ಭಕ್ಕೆ ತಕ್ಕಂತೆ ಚಿಕ್ಕ ಬದಲಾವಣೆ ಆಗುತ್ತಿತ್ತುಘಿ.ಕೆಲವು ಮ್ಯೂಸಿಯಂಗಳಲ್ಲಿ ನಾಲ್ಕಾರು ಬಾರಿ ಹೋದರೂ, ಒಂದಲ್ಲ ಒಂದು ತೊಂದರೆ ಎದುರಾಗುತ್ತಿತ್ತುಘಿ. ಒಮ್ಮೆ ಭದ್ರತಾ ಸಿಬ್ಬಂದಿಗಳು, ಇನ್ನೊಮ್ಮೆ ಪ್ರವಾಸಿಗರ ಅಡಚಣೆ, ಹೊಸದಾಗಿ ಅಳವಡಿಸಿದ ಸಿಸಿ ಕ್ಯಾಮರಾ ಸಮಸ್ಯೆಯು ಇವರ ಕಳವಿನ ಯೋಜನೆಯನ್ನು ಬುಡಮೇಲು ಮಾಡುತ್ತಿದ್ದವು. ಕೆಲವೊಂದು ಕಡೆಯಲ್ಲಿ ಏನೋ ಅಂದುಕೊಂಡು ಹೋದರೆ, ಎರಡು ಸುತ್ತು ಹೊಡೆದರೂ ಕಲಾಕೃತಿಗಳು ಅಂಥ ಆಕರ್ಷಣೆ ಹುಟ್ಟಿಸದೆ ಬರಿಗೈಯ್ಯಲ್ಲಿ ಬಂದಿದ್ದೂ ಇದೆ. ಯಾವುದೇ ವಸ್ತುವನ್ನು ಕದ್ದು ತರಲೆಂದು ಹೋದಾಗ, ಮ್ಯೂಸಿಯಂ ನಿಂದ ಅದನ್ನು ಎತ್ತಿಕೊಂಡು ಆಚೆ ತರುವ ಹಾಗೂ ಅಲ್ಲಿಂದ ಮನೆ ತನಕ ಸಾಗಿಸುವ ಕರಾರುವಾಕ್ಕಾದ ಯೋಜನೆಯನ್ನು ಮೊದಲೇ ನಿರ್ಣಯಿಸಿ ಹೋಗುವ ಪದ್ದತಿ ಆತನಿಗಿರಲಿಲ್ಲಘಿ. ಹಲವು ಬಾರಿ ಅಂತ ಯೋಜನೆಗಳು ಯಥಾವತ್ತಾಗಿ ಜಾರಿಯೂ ಆಗುವುದು ಕಷ್ಟವಾಗಿದ್ದುಘಿ, ಆಯಾ ಸಮಯ ಸನ್ನಿವೇಶ ನೋಡಿ ಎಗರಿಸಿ ಓಡುವುದು ಅನಿವಾರ್ಯವೂ ಆಗಿರುತ್ತಿತ್ತುಘಿ. ಈ ವಿಚಾರದಲ್ಲಿ ಆತನಿಗೆ ಹೊಳೆದಂತೆ ಮುಂದುವರಿಯುತ್ತಿದ್ದಘಿ, ಕೆಲವೊಮ್ಮೆ ಎಲ್ಲೋ ಹೋಗಲು ಹೊರಟು, ಇನ್ನೊಂದು ಮ್ಯೂಸಿಯಂ ನುಗ್ಗಿ ಅಲ್ಲಿಂದ ಯಾವುದೋ ಬೇಟೆಯನ್ನು ಹಿಡಿದು ಬರುವುದೂ ಇತ್ತು ! ಇದು ತನಗೆ ಬೇಕು ಅನ್ನಿಸಿದಾಗ ಆತ ಅಲ್ಲಿಯೇ ಚುರುಕಾಗಿ ಕದ್ದೋಡುವ ಯೋಜನೆ ರೂಪಿಸಿ ಮಾಲು ಹಿಡಿದು ಮನೆ ತಲುಪುತ್ತಿದ್ದಘಿ. ಸ್ವಿಜರ್‌ಲ್ಯಾಂಡ್ ಸೈನಿಕರ ಶಾಲೆಯಲ್ಲಿ ತಯಾರಾದ ಸೇನಾ ಚೂರಿಯೊಂದು ಯಾವತ್ತೂ ಆತನ ಕಾರ್ಯಾಚರಣೆಯಲ್ಲಿ ಸಹಾಯಕ್ಕೆ ಇರುತ್ತಿತ್ತುಘಿ. ಮ್ಯೂಸಿಯಂ ಒಳಗೆ ಬಂದಾಗಿತ್ತುಘಿ. ಗ್ರೂಏರ್ಸ್‌ ಕ್ಯಾಸಲ್‌ನ ಮೇಲ್ಮಹಡಿ ಏರುವ ತಿರುವು ಏಣಿಯ ಎದುರಿನ ಕಲ್ಲಿನ ಗೋಡೆಯಲ್ಲಿ ಬಹುತೇಕ ವೀಕ್ಷಕರನ್ನು ಸೆಳೆಯುವ ವಸ್ತು ಇತ್ತುಘಿ. ಗೌರವಸ್ಥ ಹಿರಿಯ ಮಹಿಳೆಯ ಮಣಿ ಖಚಿತ ಆ ಮುಖ ಚಿತ್ರವು ಎಲ್ಲರ ಗಮನ ಸೆಳೆಯುವುದಕ್ಕೂ ಬ್ರೈಟ್‌ವೈಸರ್ ಕಣ್ಣಿಗೆ ಬೀಳುವುದಕ್ಕೂ ವ್ಯತ್ಯಾಸ ಇದೆ. ಕೊರಳಿಗೆ ಕುಸುರಿಯ ನೆಕ್‌ಲೇಸ್, ತಲೆಗೆ ಸೆರಗು ಮುಚ್ಚಿದ ಮಹಿಳೆಯ ಚಿಕ್ಕ ಕಲಾಕೃತಿ ಅದಾಗಿದ್ದರೂ ಗೌರವ ವರ್ಣದ ಮಹಿಳೆಯ ವಿಷಾದ ನೋಟದ ಕಾರಣ ಕಲಾಕೃತಿ ತುಂಬ ಆಕರ್ಷಕವಾಗಿತ್ತುಘಿ. ಚಿತ್ರದ ಕೆಳಗೆ ಬರೆಯಲಾದ ಮಾಹಿತಿಯ ಪ್ರಕಾರ ಅದು ೧೮ನೇ ಶತಮಾನದ ಜರ್ಮನ್ ರಿಯಾಲಿಸ್ಟಿಕ್ ಕಲಾವಿದ ಕ್ರಿಶ್ಚಿಯನ್ ವಿಲಿಯಂ ಅರ್ನೆಸ್ಟ್ ಡೆರಿಕ್ ರಚಿಸಿದ್ದಾಗಿತ್ತುಘಿ. ಚಿತ್ರವನ್ನು ಮರದ ಹಲಗೆಯಲ್ಲಿ ಕಲಾವಿದ ರಚಿಸಿ ಅದಕ್ಕೊಂದು ಚೌಕಟ್ಟು ಹೊಂದಿಸಿದ್ದಘಿ. ಮರದ ಹಲಗೆ ಯಾಕೆ ಎಂಬ ಕುರಿತು ಬ್ರೈಟ್‌ವೈಸರ್‌ಗೆ ಹೆಚ್ಚೇನೂ ತಿಳಿದಿರಲಿಲ್ಲಘಿ. ಆ ಕಾಲದಲ್ಲಿ ಕ್ಯಾನ್ವಾಸ್ ತುಸು ದುಬಾರಿಯಾದ ಕಾರಣ ಬಹುತೇಕ ಕಲಾವಿದರು ಮರದ ಹಲಗೆಯಲ್ಲೇ ಚಿತ್ರವನ್ನು ರಚಿಸುತ್ತಿದ್ದರು ಎಂಬ ಅರಿವಿಲ್ಲದಿದ್ದರೂ, ಚಿತ್ರದ ಎದುರು ನಿಂತಾಗ ಒಮ್ಮೆ ಕಳೆದುಹೋದ. ಮಹಿಳೆಯ ಕತ್ತಿನಲ್ಲಿ ಬಳಸಲಾದ ದೊರಗಿನ ಬಣ್ಣಗಾರಿಕೆ, ಮಹಿಳೆಯ ಕಣ್ಣನ್ನು ನೋಡಿದಾಗ ಉಂಟಾದ ಆತ್ಮೀಯ ಅನುಭವ ತನ್ನನ್ನು ಇನ್ನಿಲ್ಲದಂತೆ ಆಕರ್ಷಿಸಿತ್ತು ಅನ್ನುತ್ತಾನೆ. ಚಿತ್ರಕಲಾ ಜಗತ್ತಿನಲ್ಲಿ ಸ್ಟೆಂಡಾಲ್ ಲಕ್ಷಣ ಎಂಬುದೊಂದು ಮನೋ ವಿಕಲ್ಪ ಇದೆ. ಈ ವಿಚಾರವನ್ನು ತಾನು ತರಿಸುತ್ತಿದ್ದ ಕಲಾ ನಿಯತಕಾಲಿಕ, ವಿಶೇಷವಾಗಿ ಗ್ರಂಥಾಲಯಗಳಿಂದ ತಂದು ಓದುತ್ತಿದ್ದ ಕಲಾ-ಚಂತನೆಯ ಪುಸ್ತಕಗಳಿಂದಲೇ ಬ್ರೈಟ್‌ವೈಸರ್ ತಿಳಿದುಕೊಂಡಿದ್ದಘಿ. ಹಾಗೆ ನೋಡಿದರೆ, ಚಿತ್ರಕಲೆಗೆ ಸಂಬಂಸಿದ ಬಹುತೇಕ ವಿಷಯಗಳಲ್ಲಿ ಪುಸ್ತಕಗಳನ್ನು ಎಲ್ಲಿದ್ದರೂ ಹುಡುಕಿ ತಂದು ಓದುವ ಹವ್ಯಾಸ ಆತನದಾಗಿತ್ತುಘಿ. ದಿನವಿಡೀ ತನ್ನ ಆಸ್ಪತ್ರೆಯ ಸೇವೆಯಲ್ಲಿ ತೊಡಗಿರುತ್ತಿದ್ದ ಅನ್ನೆ ಕ್ಯಾಥರೀನ್‌ಗೆ ಇತರ ಹವ್ಯಾಸ ಹಾಗೂ ಓದಿಗೆಲ್ಲ ಸಮಯವೇ ಇರಲಿಲ್ಲಘಿ. ಆಕೆ ಅಂಥ ಯಾವುದೇ ವಿಚಾರದಲ್ಲಿ ಆ ಪರಿಯ ಆಸಕ್ತಿ ಕೂಡ ಇಟ್ಟವಳಲ್ಲ ಎಂದು ಆಕೆಯನ್ನು ತಿಳಿದ ಜನ ಹೇಳುತ್ತಾರೆ. ಮ್ಯೂಸಿಯಂಗಳ ಬ್ರೋಷರ್ ಸಿಕ್ಕರೆ, ಅದನ್ನು ತಂದು ಬ್ರೈಟ್‌ವೈಸರ್‌ಗೆ ಓದು ಎಂದು ಕೊಡುತ್ತಿದ್ದಳು ಅಷ್ಟೆಘಿ. ಅಂದಹಾಗೆ ಸ್ಟೆಂಡಾಲ್ ಲಕ್ಷಣವು ಚಿತ್ರಕಲಾ ಜಗತ್ತಿನಲ್ಲಿ ಬಹು ಚರ್ಚಿತವಾದ ವಿಚಾರ. ಫ್ರೆಂಚ್ ಬರಹಗಾರ ಸ್ಟೆಂಡಾಲ್ ೧೮೧೭ರಲ್ಲಿ ರೋಮ್, ನೇಪಲ್ಸ್ ಮತ್ತು ಫ್ಲೋರೆನ್ಸ್ ಪ್ರವಾಸ ಮುಗಿಸಿ ಬರೆದ ಪ್ರವಾಸೀ ಕಥನದಲ್ಲಿ ಮೊದಲು ಇದನ್ನು ಉಲ್ಲೆಖಿಸಿದ್ದಾನೆ. ಫ್ಲೊರೆನ್ಸ್‌ನ ಸಾಂಟಾ ಕ್ಲಾಸ್ ಬೆಸಿಲಿಕದಲ್ಲಿ ನಡೆದ ಘಟನೆಯ ಮೂಲಕ ಜಗತ್ತಿಗೆ ಇದು ಪರಿಚಯ ಆಯಿತು. ಅಲ್ಲಿನ ಬೃಹದಾಕಾರದ ಚರ್ಚ್ ಒಳಗಿನ ಸಣ್ಣದೊಂದು ಗುಡಿಯ ಮೇಲ್ಚಾವಣಿಯ ಚಿತ್ರಗಳನ್ನು ನೋಡುತ್ತಿದ್ದಾಗ ಸ್ಟೆಂಡಾಲ್ ಗೆ ಈ ಅನುಭವ ಆಗುತ್ತದೆ. ಕಲಾವಿದ ಮೇಲ್ಛಾವಣಿಯಲ್ಲಿ ರಚಿಸಿದ ದೃಶ್ಯ ವೈಭವವನ್ನು ನೋಡಲು, ಕತ್ತೆತ್ತಿ ಕುತ್ತಿಗೆಯ ಮೇಲೆ ಭಾರ ಹಾಕಿದಾಗ ತನಗೆ ಬಹಿರೀಂದ್ರಿಯ ಅನುಭವ, ಪಂಚೇಂದ್ರಿಯಾನುಭವದಲ್ಲಿ ಮುಳುಗಿದಂತೆ, ಹೃದಯಾಂತಃಕರಣ ಸ್ಪೋಟಿಸಿತೆಂದು ಹೇಳಿದ. ಆ ಕ್ಷಣ ಅಲ್ಲಿಯೇ ಕುಸಿದು ಹೋದ ಸ್ಟೆಂಡಾಲ್, ಅಲ್ಲಿಂದ ಹೇಗೋ ಹೊರಕ್ಕೆ ಬಂದು ಆವರಣದ ಬೆಂಚ್ ಮೇಲೆ ತುಸುಕಾಲ ಒರಗಿಕೊಂಡು ವಾಪಸ್ ವಾಸ್ತವಕ್ಕೆ ಮರಳಿದೆ ಎಂದು ಉಲ್ಲೇಖಿಸುತ್ತಾನೆ. ಬಳಿಕ ಫ್ಲೊರೆನ್ಸ್ ಕೇಂದ್ರೀಯ ಆಸ್ಪತ್ರೆಯ ಮನಶ್ಯಾಸ್ತ್ರೀಯ ವಿಭಾಗ ಮುಖ್ಯಸ್ಥ ಗ್ರೆಸಿಲ್ಲಾ ಮಗೇರಿನಿ ೧೯೭೦ರಲ್ಲಿ ಒಂದಿಷ್ಟು ಕಲಾವೀಕ್ಷಕರ ಇಂಥದ್ದೇ ಅನುಭವವನ್ನು ದಾಖಲಿಸಿದ್ದಾನೆ. ಮಗೇರಿನಿ ಪ್ರಕಾರ ಚಿತ್ರಗಳನ್ನು ನೋಡಿದಾಗ ಹೃದಯದ ಕಸಿವಿಸಿ, ಪ್ರಜ್ಞೆ ತಪ್ಪಿದ ಅನುಭವ, ಒಮ್ಮೆಲೆ ಎಲ್ಲವೂ ಮರೆತಂತೆ ಆಗುವುದು ಸ್ಟೆಂಡಾಲ್ ಲಕ್ಷಣ. ಇಂಥ ಅನುಭವ ಹೇಳಿದವರಲ್ಲಿ ಓರ್ವ ವೀಕ್ಷಕಿ, ನೋಡುತ್ತಿದ್ದಂತೆ ತನ್ನ ಕಣ್ಣ ಗುಡ್ಡೆಗಳು ಮುಂದಕ್ಕೆ ಬೆರಳಿನಂತೆ ಚಾಚಿದ ಭಾಸವಾಯಿತು ಎಂದಿದ್ದಾಳೆ. ಮೈಖಲ್ ಎಂಜಿಲೋ ಅವರ ಪ್ರಖ್ಯಾತ ಡೇವಿಡ್ ಮೂರ್ತಿಯನ್ನು ನೋಡಿದಾಗ ಬಹಳಷ್ಟು ಜನರಿಗೆ ಸ್ಪೆಂಡಾಲ್ ಅನುಭವ ಆಗಿದ್ದಿದೆ. ನೋಡುತ್ತಲೇ ಆಘಾತದ ಅನುಭವ ಕೆಲವರಿಗೆ ಕ್ಷಣಿಕವಾಗಿದ್ದರೆ, ಇನ್ನೂ ಕೆಲವರಿಗೆ ಒಂದೆರಡು ತಾಸು ಅಮಲಿನಲ್ಲಿ ತೇಲಿ ಬಿದಿರುತ್ತಿದ್ದರು. ಮಗೇರಿನಿ ಕೆಲವರಿಗೆ ಬೆಡ್ ರೆಸ್ಟ್ ಸಲಹೆ ಮಾಡಿದರೆ, ಇನ್ನೂ ಕೆಲವರಿಗೆ ಶಾಮಕ ಔಷಧಗಳನ್ನು ಕೊಡುತ್ತಿದ್ದರು. ಒಂದಿಷ್ಟು ದಿನ ಕಲಾಕೃತಿಗಳ ಜಗತ್ತಿನಿಂದ ದೂರ ಉಳಿದರೆ, ರೋಗಿಗಳು ಸಹಜವಾಗಿಯೇ ಚೇತರಿಸಿಕೊಳ್ಳುತ್ತಿದ್ದರು. ಮಗೇರಿನಿ ಅವರು ೨೫ ರಿಂದ ೪೦ ವಯೋಮಾನದ ನೂರಕ್ಕೂ ಹೆಚ್ಚು ಜನರಿಗೆ ಈ ನಿಟ್ಟಿನಲ್ಲಿ ವಿಭಿನ್ನ ಹಂತದ ಚಿಕಿತ್ಸೆ ನೀಡಿ ದಾಖಲೀಕರಣ ಮಾಡಿದ್ದರು. ಅದರಲ್ಲೂ ಒಂದು ವಿಶಿಷ್ಟ ಲಕ್ಷಣ ಎಂದರೆ, ಕೆಲವರಿಗೆ ಚಿತ್ರಗಳನ್ನು ನೋಡಿದಾಗಲೆಲ್ಲ ಇದೇ ಅನುಭವ ಪುನರಾವರ್ತನೆ ಆಗುತ್ತಿತ್ತುಘಿ. ಈ ರೋಗದ ಕುರಿತಾಗಿ ನಂತರ ಮಗೇರಿನಿ ಒಂದು ಶೋಧನಾ ವರದಿಯನ್ನೇ ಪ್ರಕಟಿಸಿ ಅದಕ್ಕೆ ಸ್ಪೆಂಡಾಲ್ ಲಕ್ಷಣ ಎಂದು ಹೆಸರಿಟ್ಟರು. ನಂತರದ ದಿನದಲ್ಲಿ ಜರುಸಲೇಮ್ ಪ್ಯಾರಿಸ್‌ನಲ್ಲಿ ಈ ರೋಗ ಲಕ್ಷಣದ ಹಲವಾರು ಪ್ರಕರಣಗಳನ್ನು ಗುರುತಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಫ್ಲೊರೆನ್ಸ್ ನ ಹೊರಗಡೆ ಈ ಪ್ರಕರಣಗಳನ್ನು ಅಷ್ಟೇನೂ ನಿರ್ದಿಷ್ಟವಾಗಿ ಗರುರುತಿಸುತ್ತಿರಲಿಲ್ಲಘಿ, ವಿಶೇಷವಾಗಿ ಮಾನಸಿಕ ಅಸ್ವಾಸ್ತ್ಯದ ಪಾಕ್ಷಿಕದಲ್ಲಿ ಅಂಕಿಸಂಕಿಗಳಾಗಿಯೂ ದಾಖಲಾಗಲಿಲ್ಲಘಿ. ಸ್ಟೆಂಡಾಲ್ ಲಕ್ಷಣಗಳ ಬಗ್ಗೆ ಮೊದಲು ಓದಿದಾಗ ತನಗೊಂದಿಷ್ಟು ಕಸಿವಿಸಿ ಆಗಿತ್ತು ಎಂದು ಬ್ರೈಟ್‌ವೈಸರ್ ಹೇಳುತ್ತಾನೆ. ಅಲ್ಲಲ್ಲಿ ಸಂಭವಿಸುವ ಸಮಸ್ಯೆ ಇದಾಗಿದೆ ಎಂದು ರೋಗ ಲಕ್ಷಣವನ್ನು ತಿಳಿದಾಗ, ಇದು ಮಾನವ ಸಮುದಾಯದಲ್ಲಿ ತನಗೆ ಮಾತ್ರ ಉಂಟಾದುದಲ್ಲ ಎಂದು ಒಮ್ಮೆ ಸಮಾಧಾನ ಆಯಿತು ಎಂದೂ ಹೇಳುತ್ತಾನೆ. ಬ್ರೈಟ್ ವೈಸರ್ ವಿಶೇಷ ಎಂದರೆ, ಆತ ಎಲ್ಲ ಬಗೆಯ ಚಿತ್ರಗಳಿಗೂ, ಸ್ಟೆಂಡಾಲ್ ಲಕ್ಷಣಕ್ಕೆ ಒಳಗಾಗುತ್ತಿರಲಿಲ್ಲಘಿ, ಹೊರತಾಗಿ ಕೆಲವೆಡೆ ಆತನನ್ನು ಕರೆದುಕೊಂಡು ಹೋದಾಗ, ಮೂಡಿಯಾಗಿ ಕೆಲವೊಂದು ನಿರ್ದಿಷ್ಟ ಸ್ಥಳದಲ್ಲಿ ಹೀಗಾಗುತ್ತಿತ್ತು ಎನ್ನುತ್ತಾನೆ. ‘ ಚಿತ್ರಗಳು ನನಗೆ ಮಾದಕ ದ್ರವ್ಯ’ ಎಂದೇ ಆತ ಹೇಳಿಕೊಳ್ಳುವುದಿತ್ತುಘಿ. ಆತನಿಗೆ ಚಟಗಳೇನೂ ಇರಲಿಲ್ಲಘಿ. ಅಪರೂಪಕ್ಕೊಮ್ಮೆ ವೈನ್ ಹೀರುವುದಿತ್ತಾದರೂ ತಂಬಾಕು, ಕಫೇನ್, ಅಲ್ಕೊಹಾಲ್ ಮತ್ತಿತರ ಯಾವುದೇ ಮಾದಕ ವಸ್ತುಗಳ ಬಗ್ಗೆ ಬ್ರೈಟ್‌ವೈಸರ್ ವ್ಯಸನಿಯಲ್ಲಘಿ. ಅಂಥ ಯಾವುದೂ ಆತನನ್ನು ವಿಶೇಷವಾಗಿ ಆಕರ್ಷಿಸುತ್ತಿರಲಿಲ್ಲಘಿ, ಹಾಗೆಯೇ ಚಿತ್ರವೊಂದು ಆತನ ತಲೆಗೆ ಹಿಡಿಸುವ ಗುಂಗು ಅಥವಾ ಅಮಲನ್ನು ಅದಾವುದೂ ಕೂಡ ಉಂಟು ಮಾಡುತ್ತಲೂ ಇರಲಿಲ್ಲಘಿ. ಆದರೆ, ಇದನ್ನು ಬಹುತೇಕ ಪೊಲೀಸರು ನಂಬುವುದಿಲ್ಲಘಿ. ಬೇರಾವುದೇ ಅಮಲಿನ ವ್ಯಸನ ಇರಲಿಲ್ಲಘಿ. ಸ್ಟೆಂಡಾಲ್ ಲಕ್ಷಣಗಳು, ಕಲಾಕೃತಿ ಆಕರ್ಷಣೆ ಎಂಬ ವ್ಯಸನ, ಅವೇ ತನಗೆ ಅಮಲು ದೃವ್ಯ ಎಂದೆಲ್ಲ ಬ್ರೈಟ್‌ವೈಸರ್ ಹೇಳಿದರೆ, ಪೊಲೀಸರು, ತನಿಖಾಕಾರಿಗಳು ನೇರವಾಗಿ ನಕ್ಕು ತಿರಸ್ಕರಿಸುತ್ತಿದ್ದರು. ಆತ ಹಸೀ ಸುಳ್ಳ ಎಂದು ಪೊಲೀಸರು ಬಯ್ಯುತ್ತಿದ್ದರು. ಸ್ಟೆಂಡಾಲ್ ಲಕ್ಷಣವು ಜೆಟ್ ಲಾಗ್ ಥರ ಅಥವಾ ವಿಚಿತ್ರ ಹತಾಶ ಕ್ರೇಜ್ ಹೊರತಾಗಿ ಮತ್ತಿನ್ನೇನೂ ಅಲ್ಲ ಎಂದು ಕೆಲವರು ಹೇಳುತ್ತಿದ್ದರು. ಬ್ರೈಟ್‌ವೈಸರ್ ಕಟು ವಿಮರ್ಶಕರ ಪ್ರಕಾರ ಆತನೊಬ್ಬ ಅಂಗಡಿ ಬಾಗಿಲು ಮುರಿದು ಕಳವು ಮಾಡುವ ಹಸಿಕಳ್ಳನಂತೆ. ಆದರೆ, ಈತನ ನಿರ್ದಿಷ್ಟತೆ ಎಂದರೆ ಚಿತ್ರಗಳು, ದುಡ್ಡಿನ ವ್ಯಾಮೋಹ ಮೀರಿದ ಕಲಾ ವಸ್ತುಗಳ ಖದೀಮ ಎಂದು ಬಣ್ಣಿಸುತ್ತಿದ್ದರು. ಆದರೆ ಇವರೆಲ್ಲರ ಆರೋಪವನ್ನು ಬ್ರೈಟ್ ವೈಸರ ಸಾರಾಸಗಟಾಗಿ ನಿರಾಕರಿಸುತ್ತಾನೆ. ಕಲಾಕೃತಿಗಳು ತನಗೆ ಬೇಕಿರುವುದು ನಿಜವಾದರೂ, ಕಳವಿನ ಚಟಕ್ಕಾಗಿ, ಕೇವಲ ಕಳ್ಳ ಎಂಬ ಬಣ್ಣನೆಯನ್ನು ಬ್ರೈಟ್ ವೈಸರ್ ಯಾವತ್ತೂ ಒಪ್ಪುತ್ತಿರಲಿಲ್ಲಘಿ. ತನಗೆ ಕಳವು ಯಾವತ್ತೂ ಖುಷಿಕೊಟ್ಟಿಲ್ಲ ಎಂದೇ ಆತ ಹೇಳುತ್ತಾನೆ. ಆತನಿಗೇನಿತ್ತೂ ಕಲಾಕೃತಿ ಬೇಕು. ಚಿತ್ರಗಳು, ಕಲಾತ್ಮಕ ವಸ್ತುಗಳನ್ನು ಸಂಗ್ರಹ ಮಾಡುವುದೇ ತನ್ನ ಹವ್ಯಾಸ. ಬ್ರೈಟ್ ವೈಸರ್ ಹೇಳಿಕೊಳ್ಳುವುದನ್ನು ಸ್ವಿಡಿಶ್ ಮನೋಚಿಕಿತ್ಸಕ ಮಯಖೆಲ್ ಸ್ಕಿಡಮ್ತ್ ಕೂಡ ೨೦೦೨ರಲ್ಲಿ ತನ್ನ ೩೪ ಪುಟಗಳ ತನಿಖಾ ವರದಿಯಲ್ಲಿ ಸರಿ ಸುಮಾರು ಹೀಗೆಯೇ ಉಲ್ಲೇಕಿಸಿದ್ದಾನೆ. ಆದರೆ, ಬೈಟ್‌ವೈಸರ್ ಸಮಾಜಕ್ಕೊಂದು ಪೀಡೆ, ತನ್ನ ಅಪರಾಧಕ್ಕೆ ಸದುದ್ದೇಶದ ಹವ್ಯಾಸ ಎಂದು ನಂಬಿಸಿಕೊಳ್ಳುವ ಕಳ್ಳ ಎಂದೇ ಎಂದೇ ಸ್ಕಿಡಮ್ತ್ ಹೇಳಿದ್ದಾನೆ. ಆದರೆ, ಇದು ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಬೇಕಾದ ಕೇಸು ಕಳವಿನ ರೋಗವು ಈತನಿಗಿದೆ ಎಂದೇನೂ ಮನೋಚಿಕಿತ್ಸಕನ ವರದಿ ಉಲ್ಲೇಖಿಸಲಿಲ್ಲಘಿ. ಕಳವಿಗಾಗಿ ಕದಿಯುವ ವ್ಯಸನಿಗೆ ನಿರ್ದಿಷ್ಟವಾಗಿ ಚಿತ್ರವನ್ನೊಘಿ, ಕಲಾ ವಸ್ತುಗಳನ್ನಷ್ಟೇ ಕದಿಯುವ ಅನಿವಾರ್ಯತೆ ಇರುವುದಿಲ್ಲಘಿ. ಕೈಗೆ ಸಿಕ್ಕಿದ್ದನ್ನು ಕದಿಯುವುದು ಕಳವು ವ್ಯಸನಿಯ ಗುಣ. ಕಳವು ವ್ಯಸನಿಯ ಇನ್ನೊಂದು ಲಕ್ಷಣ ಎಂದರೆ, ಸಿಕ್ಕಿದ್ದನ್ನು ಕದ್ದಮೇಲೆ, ನಂತರ, ಇದೊಂದು ತಪ್ಪು ತನ್ನಿಂದ ಆಗುತ್ತಲೇ ಇದೆ, ತಡೆಯುವುದಕ್ಕೇ ಸಾಧ್ಯವಾಗುತ್ತಿಲ್ಲ ಎಂದು ಆಗಾಗ ಪಾಪ ಪ್ರಜ್ಞೆ ಇರುತ್ತದೆ. ಬ್ರೈಟ್ ವೈಸರ್ ಮಾತ್ರ ಹಾಗಲ್ಲಘಿ, ಆತ ಎಷ್ಟೊಂದು ಚಿತ್ರಗಳನ್ನು ಕದ್ದರೂ, ಆತನಿಗೆ ತಾನು ತಪ್ಪು ಮಾಡಿದೆ ಎಂದು ಅನ್ನಿಸುತ್ತಲೇ ಇರಲಿಲ್ಲಘಿ ! ತನ್ನ ಕಳವಿನ ಬಗ್ಗೆ ಈತನಿಗೆ ಒಂದು ರೀತಿಯಲ್ಲಿ ಹೆಮ್ಮೆ ಇರುತ್ತಿತ್ತುಘಿ. ಹಾಗಾಗಿ ಈತನೊಬ್ಬ ಕಳವು ವ್ಯಸನಿ ಎಂಬ ವ್ಯಾಪ್ತಿಗೆ ಒಳಪಡಲು ಸಾಧ್ಯವಿಲ್ಲ ಎಂದೂ ಮನೋಚಿಕಿತ್ಸಕ ವಿವರಿಸಿದ. ಬ್ರೈಟ್‌ವೈಸರ್ ಚಿತ್ರಗಳ ಮೇಲಿನ ವಿಶೇಷ ಪ್ರೀತಿ ಹಾಗೂ ಅವುಗಳ ಗುಣಾತ್ಮಕ ಕಾರಣಕ್ಕಾಗಿ ಮಾತ್ರ ಕಳವು ಮಾಡುತ್ತಾನೆ ಎಂದು ಸ್ಕಿಡಮ್ತ್ ಹೇಳಿದ್ದಾನೆ. ಸಾಮಾನ್ಯವಾಗಿ ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜನರು ಜಗತ್ತಿನ ನೋಟವೇ ಸರಿ ಇಲ್ಲ ಎಂದು ವಾದಿಸುತ್ತಾರೆ. ಇದೇ ಬ್ರೈಟ್‌ವೈಸರ್ ಸಮಸ್ಯೆ ಕೂಡ ಆಗಿತ್ತುಘಿ. ಆತನ ಪ್ರಕಾರ ಕಲಾತ್ಮಕವಾಗಿ ಮಹತ್ವದ್ದನ್ನು ಕದಿಯುತ್ತೇನೆ ಎಂಬ ಕಾರಣಕ್ಕಾಗಿ ಕಳ್ಳ ಎಂದು ಬಣ್ಣಿಸುವುದು ಬಿಟ್ಟರೆ, ಪೊಲೀಸರು, ಮನಶ್ಯಾಸ್ತ್ರಜ್ಞರಿಗೂ ಸ್ಟೆಂಡಾಲ್ ಲಕ್ಷಣಗಳಾಗಲಿ ಇನ್ನಿತರ ಯಾವೊಂದು ಗಂಭೀರ ವಿಚಾರ ತಿಳಿಯುವುದಿಲ್ಲಘಿ. ಇಂಥ ತಜ್ಞರು, ಸುತ್ತಲಿನ ಇದೇ ತೆರನಾಗಿ ಯೋಚಿಸುವ ಸಮಾಜ, ಜನರ ಬಗ್ಗೆ ತನಗೆ ಹತಾಶೆಯಿದೆ ಎಂದು ಆತ ಹೇಳುತ್ತಾನೆ. ತನಗೆ ಏನನ್ನಿಸುತ್ತದೆ ಎಂಬ ಬಗ್ಗೆ ಆತನಿಗೇನೋ ಒಂದು ನಂಬುಗೆ ಇತ್ತು ನಿಜ, ಆದರೆ, ಅದನ್ನು ದೇಶದ ಕಾನೂನಿನ ಎದುರು ಸತ್ಯ ಎಂದು ಸಾಬೀತು ಮಾಡುವುದು ಮಾತ್ರ ಸಾಧ್ಯವಾಗಲಿಲ್ಲಘಿ. ಹಾಗೇ ನೋಡುತ್ತ ಗ್ರೂಯಿಏರ್ಸ್‌ ಕಾಸಲ್‌ನಲ್ಲಿ ಗೋಡೆದಿಬ್ಬಕ್ಕೆ ಹಾಕಿದ್ದ ಕಲಾವಿದ ಡೇರಿಕ್ ರಚಿಸಿದ ಮಹಿಳೆಯ ಮುಖಚಿತ್ರದ ಸಮೀಪ ಬಂದರು. ಅದನ್ನು ನೋಡುತ್ತ ಹತ್ತು ನಿಮಿಷ ತನಗೇನಾಗಿದೆ ಎಂಬುದೇ ತಿಳಿಯದೆ ದಿಗ್ಮೂಢನಾದ. ಅಷ್ಟಾದ ಬಳಿಕ ತಾನೇನು ಮಾಡಬೇಕು ಎಂದು ಆತನಿಗೆ ಹೊಳೆಯತೊಡಗಿತು. ಸಾಮಾನ್ಯವಾಗಿ ಪ್ರಾದೇಶಿಕ ಮ್ಯೂಸಿಯಂನಲ್ಲಿ ಸಿಸಿ ಟೀವಿಯನ್ನು ಹಾಕುವುದಿಲ್ಲಘಿ. ಒಂದಲ್ಲ ಒಂದೆಡೆ ಭದ್ರತಾ ವೈಫಲ್ಯ ಇದ್ದೇ ಇರುತ್ತದೆ. ಸಮೀಪದಲ್ಲಿ ಗಾರ್ಡ್‌ಗಳು, ಪೊಲೀಸರು ಯಾರೂ ಇಲ್ಲ ಎಂದು ತಿಳಿಯುತ್ತಲೇ, ಪೇಂಟಿಂಗ್ ಮೇಲೆ ನೆಟ್ಟ ದೃಷ್ಟಿಯನ್ನು ಕ್ರಮೇಣ ಸಡಿಲಿಸಿ ಪ್ರೇಯಸಿ ಅನ್ನೆ ಕ್ಯಾಥರೀನ್ ಕಡೆಗೆ ನೋಡಿ ಆಕೆಯ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿಯಲು ಪ್ರಯತ್ನಿಸಿದ. ಬ್ರೈಟ್ ವೈಸರ್ ಬಣ್ಣಿಸಿಕೊಳ್ಳುವಂತೆ ಸ್ಟೆಂಡಾಲ್ ಲಕ್ಷಣದ ರೀತಿಯಲ್ಲಿ ಅಲ್ಲದಿದ್ದರೂ, ಆತ ಖುಷಿಪಡುವ ಚಿತ್ರವನ್ನು ಆಕೆಯೂ ಆರಾಸುತ್ತಿದ್ದಳು. ಹಾಗೆ ನೋಡಿದರೆ, ಚಿತ್ರಕ್ಕಿಂತ ತನ್ನ ಇನಿಯನ ಆಸೆ ಆಕಾಂಕ್ಷೆಗಳಿಗೆ ಆಕೆ ಹೆಚ್ಚು ಒಲವನ್ನು ಹೊಂದಿರುತ್ತಿದ್ದಳು. ಎಂದಿನಂತೆ ಅನ್ನೆ ಕ್ಯಾಥರೀನ್ ಕಣ್ಣಿನಲ್ಲೇ ಮುಂದುವರಿಯಲು ಬ್ರೈಟ್‌ವೈಸರ್‌ಗೆ ಸನ್ನೆ ಮಾಡಿದಳು. ಗೋಡೆದಿಬ್ಬದಲ್ಲಿದ್ದ ಕಲಾಕೃತಿಯ ಬೆನ್ನಿಗೆ ಜೋಡಿಸಿದ್ದ ನಾಲ್ಕು ಹುಕ್ಕುಗಳನ್ನು ನಿಧಾನವಾಗಿ ಗೋಡೆಯಿಂದ ಬೇರ್ಪಡಿಸಿದ. ಸಾಮಾನ್ಯವಾಗಿ ಇಂಥ ಕೆಲಸಕ್ಕೆ ಸ್ವಿಸ್ ಚಾಕು ಬಳಕೆಯಾಗುತ್ತಿದ್ದಾರೂ ಇಲ್ಲಿ ಮಾತ್ರ ತನ್ನ ಕೈಯಲ್ಲಿದ್ದ ಕಾರಿನ ಚಾವಿಯನ್ನೇ ಚುಚ್ಚಿ ಚಿತ್ರವನ್ನು ಆಚೆ ಎಳೆದುಕೊಂಡು ತನ್ನ ಜಾಕೆಟ್ ಒಳಕ್ಕೆ ಸೇರಿಸೊಕೊಂಡ. ಗೋಡೆ ದಿಬ್ಬದಲ್ಲಿ ಕಾಣತೊಡಗಿದ ಬಳ್ಳಿಯನ್ನು ಹರಿದು ತೆಗೆದರೂ ಆ ಭಾಗವು ಖಾಲಿ ಖಾಲಿಯಾಗಿ ಏನೋ ಕಳವಾಗಿದೆ ಎಂಬ ಅಚ್ಚನ್ನು ಮಾತ್ರ ಅಳಿಸಿ ಹಾಕುವುದು ಆತನಿಗೆ ಸಾಧ್ಯವಾಗಲಿಲ್ಲಘಿ. ಜಾಕೆಟ್ ಒಳಗೆ ಕಾಣದಂತೆ ಅಮುಕಿದ್ದ ಕಲಾಕೃತಿ ಹೊತ್ತು ಅನ್ನೆ ಮತ್ತು ಬ್ರೈಟ್‌ವೈಸರ್ ಅಲ್ಲಿಂದ ಕಾಲಿಗೆ ಬುದ್ದಿ ಹೇಳಿದರು. ಇದು ಪ್ರೇಮಿಗಳು ಜತೆಯಾಗಿ ಮಾಡಿದ ಮೂರನೆ ಕಳವಾಗಿದ್ದರೂ, ಮೊಟ್ಟ ಮೊದಲ ಬಾರಿಗೆ ಅವರೊಂದು ಪೇಂಟಿಂಗ್ ಕದ್ದು ಹೊರಟಿದ್ದರು. ಮಧ್ಯಯುಗೀನ ಕಟ್ಟಡಗಳ ಗ್ರೂಯಿಏರ್ಸ್‌ ಹಳ್ಳಿಯ ಗಲ್ಲಿಗಳನ್ನು ದಾಟಿ, ತಾವು ಕಾರು ನಿಲ್ಲಿಸಿದ್ದ ಜಾಗಕ್ಕೆ ಪ್ರೇಮಿಗಳು ಬಂದರು. ಕಾರಿನಲ್ಲಿ ಇಟ್ಟಿದ್ದ ಸೂಟ್ ಕೇಸ್‌ನಲ್ಲಿ ಪೇಂಟಿಂಗ್ ಅಡಗಿಸಿದರು. ತಕ್ಷಣ ಚಿತ್ರವನ್ನು ನೋಡಿ ಕೊಂಡಾಡುವ ಬದಲು, ಒಮ್ಮೆ ಸುರಕ್ಷಿತ ಸ್ಥಳಕ್ಕೆ ಹೋಗಬೇಕಿತ್ತುಘಿ. ಅದಕ್ಕೂ ಮೊದಲು ಜಾರು ಕೋಲಿನ ಆಟವನ್ನು ಆಡಿ, ಊರಿಗೆ ಹೋದ ಮೇಲೆಯೇ ಪೇಂಇಂಗ್ ತೆರೆದು ನೋಡೋಣ ಎಂದು ಕಾರಿನ ಚಲನೆಯಲ್ಲಿ ಪ್ರೇಮಿಗಳು ಲೀನವಾದರು.
Read More